ಬಂಗಾಳದಲ್ಲಿ ಭರ್ಜರಿ ಗೆಲುವಿನ ಬಳಿಕವೂ 'ಚುನಾವಣಾ ತಂತ್ರಗಾರಿಕೆ'ಗೆ ನಿವೃತ್ತಿ ಘೋಷಿಸಿದ ಪ್ರಶಾಂತ್‌ ಕಿಶೋರ್‌!

ಹೊಸದಿಲ್ಲಿ: ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಸಿಎಂ ಮಮತಾ ಬ್ಯಾನರ್ಜಿಯ ಜತೆಗೆ ಹೆಚ್ಚು ಸುದ್ದಿಗೆ ಗ್ರಾಸವಾದವರು ಚುನಾವಣಾ ರಣತಂತ್ರಗಾರ (ಪಿಕೆ). ಹಲವು ಯಶಸ್ವೀ ಚುನಾವಣಾ ತಂತ್ರಗಾರಿಕೆಗಳನ್ನು ಹೆಣೆದ ಇತಿಹಾಸ ಹೊಂದಿರುವ ಪಿಕೆ, ಬಂಗಾಳದಲ್ಲಿ ಬಿಜೆಪಿ 100 ಸೀಟುಗಳನ್ನು ದಾಟುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದರು. ಜತೆಗೆ ಒಂದೊಮ್ಮೆ ಬಿಜೆಪಿ ಮೂರಂಕಿ ಸೀಟುಗಳನ್ನು ಗಳಿಸಿದಲ್ಲಿ ನನ್ನ ಈಗಿನ ವೃತ್ತಿಯನ್ನೇ ತೊರೆಯುವುದಾಗಿ ಹೇಳಿದ್ದರು. ಪ್ರಶಾಂತ್‌ ಕಿಶೋರ್ ಹೇಳಿದಂತೆಯೇ ಪಶ್ಚಿಮ ಬಂಗಾಳದಲ್ಲಿ ಮೂರಂಕಿ ದಾಟಲು ಬಿಜೆಪಿ ಒದ್ದಾಡುತ್ತಿದೆ. ಹೀಗಿದ್ದೂ ಚುನಾವಣಾ ರಣತಂತ್ರಗಾರ ವೃತ್ತಿಯನ್ನು ತೊರೆಯುತ್ತಿರುವುದಾಗಿ ಪಿಕೆ ಘೋಷಿಸಿದ್ದಾರೆ. ಇದು ಹಲವರನ್ನು ಅಚ್ಚರಿಗೆ ತಳ್ಳಿದೆ. ಖಾಸಗಿ ಆಂಗ್ಲ ವಾಹಿನಿ ಜತೆ ಮಾತನಾಡಿರುವ ಪ್ರಶಾಂತ್‌ ಕಿಶೋರ್‌, "ನಾನು ಇದನ್ನು (ಚುನಾವಣಾ ತಂತ್ರಗಾರಿಕೆ) ತೊರೆಯುತ್ತಿದ್ದೇನೆ. ನಾನು ಈಗ ಏನು ಮಾಡುತ್ತಿದ್ದೇನೋ ಅದನ್ನು ನಿಲ್ಲಿಸುತ್ತಿದ್ದೇನೆ. ಜಯದ ನಂತರ ಇದನ್ನು ತೊರೆಯುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ," ಎಂದಿದ್ದಾರೆ. ರಾಜಕೀಯ ರಣತಂತ್ರಗಾರ, ಸಹಾಯಕ, ಸಲಹೆಗಾರ ಏನೆಲ್ಲ ಕರೆಯುತ್ತಿದ್ದರೋ ಅದ್ಯಾವ ರೂಪದಲ್ಲಿಯೂ ನಾನು ಇನ್ನು ಮುಂದೆ ಇರುವುದಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ಸ್ಪಷ್ಟಪಡಿಸಿದ್ದಾರೆ. 'ಕಾರಣ ನೀವು ತುಂಬಾ ಆಯಸಗೊಂಡಿದ್ದೀರಾ?' ಎಂಬ ಪ್ರಶ್ನೆಗೆ 'ಇಲ್ಲ' ಎಂದು ಉತ್ತರಿಸಿರುವ ಪ್ರಶಾಂತ್‌ ಕಿಶೋರ್‌, ನಾನು ಅಂದು ಬಿಜೆಪಿ 100 ಸೀಟು ದಾಟಲ್ಲ ಅಂದಾಗ ಯಾರೂ ನಂಬಿರಲಿಲ್ಲ. ಆದರೆ ನಾನು ಹೇಳಿದ್ದು ಸತ್ಯವಾದ ಮೇಲೂ ನಾನು ಇದನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ. 'ಇಷ್ಟೊಂದು ದೊಡ್ಡ ಗೆಲುವಿನ ಬಳಿಕವೂ ಯಾಕೆ ತೊರೆಯುತ್ತಿದ್ದೀರಿ?' ಎಂದು ಕೇಳಿದ್ದಕ್ಕೆ, "ನಾನು ನನ್ನ ಜೀವಮಾನವಿಡೀ ಇದನ್ನೇ ಮಾಡಬೇಕು ಎಂದುಕೊಂಡಿಲ್ಲ. ಐ-ಪ್ಯಾಕ್‌ನಲ್ಲಿರುವ ನನ್ನ ಸಹೋದ್ಯೋಗಿಗಳು ನನಗಿಂತಲೂ ಹೆಚ್ಚು ಸಮರ್ಥರಿದ್ದಾರೆ. ಅವರು ನನಗಿಂತ ಒಳ್ಳೆ ಕಲಸ ಮಾಡುತ್ತಾರೆ ಎಂಬ ಭರವಸೆ ನನಗಿದೆ. ಹೀಗಾಗಿ ಒಂದು ವಿರಾಮ ತೆಗೆದುಕೊಂಡು ಬೇರೆ ಕೆಲಸ ಮಾಡಲು ಯೋಚಿಸಿದ್ದೇನೆ," ಎಂದು ತಿಳಿಸಿದ್ದಾರೆ. 'ಇದನ್ನು ಬಿಟ್ಟು ಬೇರೇನು ಮಾಡಿತ್ತೀರಿ?' ಎಂದು ಕೇಳಿದ್ದಕ್ಕೆ, 'ಆ ಬಗ್ಗೆ ಯೋಚಿಬೇಕಾಗಿದೆ' ಎಂದು ಹೇಳಿದ್ದಾರೆ. "ನಾನು ಇದನ್ನು ತೊರೆಯಬೇಕು ಎಂದು ತುಂಬಾ ಸಮಯದಿಂದ ಅಂದುಕೊಳ್ಳುತ್ತಿದ್ದೆ. ಆದರೆ ಅದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ," ಎಂದು ವಿವರಿಸಿದ್ದಾರೆ. 'ಬಿಹಾರಕ್ಕೆ ಹೋಗಿ ಯಶಸ್ವೀ ರಾಜಕಾರಣಿಯಾಗುವುದು ನಿಮ್ಮ ಇಚ್ಚೆಯೇ?' ಎಂದು ಕೇಳಿದ್ದಕ್ಕೆ, "ರಾಜಕಾರಣಿಯಾಗುವುದು ನನ್ನ ಆಯ್ಕೆಯಲ್ಲಿದೆ. ಈ ಹಿಂದೆ ರಾಜಕಾರಣಕ್ಕಿಳಿದು ವಿಫಲವಾಗಿದ್ದೆ. ಹೀಗಾಗಿ ಮತ್ತೆ ಸೇರಬೇಕೆಂದರೂ ಹಿಂದೆ ಏನು ತಪ್ಪು ಮಾಡಿದ್ದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಂಡು ಮುಂದೆ ಹೋಗಬೇಕಿದೆ. ಇದಾದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಈಗ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ನನ್ನ ಜತೆ ಕಳೆದ ಐದಾರು ವರ್ಷದಿಂದ ಕೆಲಸ ಮಾಡಿದವರಿಗೆ ನನ್ನ ಬ್ಯಾಟನ್‌ ಹಸ್ತಾಂತರಿಸುತ್ತಿದ್ದೇನೆ," ಎಂದು ಮಾಜಿತಿ ನೀಡಿದ್ದಾರೆ. ನಾನು ಕ್ಯಾಮೆರಾ ಮುಂದೆ ಬರುತ್ತಿದ್ದೆ, ಜನರು 'ಪಿಕೆ ಹಾಗೆ ಮಾಡಿದ', 'ಹೀಗೆ ಮಾಡಿದ' ಎನ್ನುತ್ತಿದ್ರು. ಆದರೆ ನಿಜವಾಗಿ ಕೆಲಸ ಮಾಡಿದವರು ನನ್ನ ಸಹೋದ್ಯೋಗಿಗಳು. ಬೇರೊಬ್ಬರಿಗೆ ನನ್ನ ಸಂಸ್ಥೆಯನ್ನು ಹಸ್ತಾಂತರಿಸಲು ಇದಕ್ಕಿಂತ ಸುಸಂದರ್ಭ ಬೇರೊಂದಿಲ್ಲ ಎಂದಿದ್ದಾರೆ. 'ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಪರ ಕೆಲಸ ಮಾಡಲಿದ್ದೀರಾ?' ಎಂಬ ಪ್ರಶ್ನೆಗೂ ಪ್ರತಿಕ್ರಿಯಿಸಿದ ಪಿಕೆ, ಇನ್ನು ಮುಂದೆ ಯಾರಿಗೂ ಈ ತರಹದ ಕೆಲಸ ಮಾಡಲ್ಲ ಎಂದು ಖಂಡಾ ತುಂಡವಾಗಿ ಹೇಳಿದ್ದಾರೆ.


from India & World News in Kannada | VK Polls https://ift.tt/3e72s53

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...