ಬಿಜೆಪಿ ಪ್ರಚಾರ ತಂತ್ರಕ್ಕೆ ಸಿಲುಕದ ಬಂಗಾಳ ಜನತೆಗೆ ಲಾಲು ಪ್ರಸಾದ್ ಯಾದವ್ ಧನ್ಯವಾದ!

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖರ ಸತತ ಪ್ರಚಾರದ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಅವರ ದಿಗ್ವಿಜಯವನ್ನು ತಡೆಯಲು ಎನ್‌ಡಿಎಗೆ ಸಾಧ್ಯವಾಗಿಲ್ಲ. ಕಳೆದ ಬಾರಿ ಪ್ರಬಲ ವಿರೋಧ ಪಕ್ಷವೇ ಇಲ್ಲದಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಮಮತಾ ಸರ್ಕಾರಕ್ಕೆ, ಈ ಬಾರಿ ಗಮನಾರ್ಹ ಸಂಖ್ಯೆಯ ಸದಸ್ಯರ ಬಲದೊಂದಿಗೆ ವಿರೋಧಪಕ್ಷದ ಸ್ಥಾನದಲ್ಲಿ ಕೂರುವ ಮಟ್ಟಕ್ಕೆ ಬೆಳೆದಿರುವುದೇ ಬಿಜೆಪಿಯ ಸಾಧನೆ. ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ. ನೆರೆಯ ಬಿಹಾರದಲ್ಲಿ ಮಗನ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಭಗ್ನ ಕನಸು ಕಂಡಿದ್ದ ಆರ್‌ಜೆಡಿ ನಾಯಕ , ದೀದಿಯ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. 'ಎಲ್ಲ ಅಡೆತಡೆಗಳ ವಿರುದ್ಧ ಈ ಐತಿಹಾಸಿಕ ವಿಜಯ ಕಳಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮಗೆ ಉತ್ತಮ ಆರೋಗ್ಯ ಸಿಗಲಿ ಎಂದು ಆಶಿಸುತ್ತೇನೆ' ಎಂದು ಲಾಲು ಪ್ರಸಾದ್ ಟ್ವೀಟ್ ಮಾಡಿದ್ದಾರೆ. 'ಹೃತ್ಪೂರ್ವಕವಾಗಿ ದೀದಿಯ ಪರ ಮತ ಚಲಾಯಿಸಿದ ಮತ್ತು ಬಿಜೆಪಿಯ ಹಿಂಸಾತ್ಮಕ ಹಾಗೂ ವಿಭಜನೆಯ ಪ್ರಚಾರ ತಂತ್ರಕ್ಕೆ ಬೀಳದ ಬಂಗಾಳದ ಜನತೆಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ' ಎಂದು ಲಾಲು ಹೇಳಿದ್ದಾರೆ. 'ಪಶ್ಚಿಮ ಬಂಗಾಳದ ಮಮತಾಮಾಯಿ ಜನರಿಗೆ ಅಭಿನಂದನೆಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳು. ಇಂದು ಇಡೀ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿ ಪರದಾಡುತ್ತಿದೆ. ಪಶ್ಚಿಮ ಬಂಗಾಳವು ಮತ್ತೊಮ್ಮೆ ತನ್ನ ಪ್ರೀತಿ ಹಾಗೂ ನಂಬಿಕೆಯನ್ನು ತನ್ನ ಸಹೋದರಿಯ ಮೇಲೆ ಪ್ರದರ್ಶಿಸಿದೆ. ಇದು ಜನರ ಒಲವು ಮತ್ತು ವಿಶ್ವಾಸದ ಗೆಲುವು. ಮಮತಾ ಬ್ಯಾನರ್ಜಿ ಅವರ ದೃಢ ಹಾಗೂ ದಕ್ಷ ನಾಯಕತ್ವದ ಗೆಲುವು' ಎಂದು ಆರ್‌ಜೆಡಿ ಮುಖ್ಯಸ್ಥ ಹೇಳಿದ್ದಾರೆ.


from India & World News in Kannada | VK Polls https://ift.tt/3nDPO0F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...