ಅಂತ್ಯಕ್ರಿಯೆ ಫ್ಲೆಕ್ಸ್ ವಿವಾದ: ಬಿಜೆಪಿ ನಾಯಕರ ಪರಮ ಅಸಹ್ಯತನದ ಪರಮಾವಧಿ ಎಂದ ದಿನೇಶ್ ಗುಂಡೂರಾವ್

ಬೆಂಗಳೂರು: ಕೋವಿಡ್‌ ನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿದರು ಸ್ಥಳದಲ್ಲಿ ಬಿಜೆಪಿ ನಾಯಕರ ನಗುಮುಖದ ಫ್ಲೆಕ್ಸ್ ವಿವಾದಕ್ಕೆ ಕಾರಣವಾಗಿದ್ದು ಮುಖಂಡ ಕಿಡಿಕಾರಿದ್ದಾರೆ. ಇದು ಬಿಜೆಪಿ ನಾಯಕರ ಪರಮ ಅಸಹ್ಯತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಚಿತೆಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಹೀನ ಬುದ್ಧಿಯೇ ತೋರಿಸುತ್ತಿದೆ ಈ ಬಿಜೆಪಿ ಸರ್ಕಾರದ ಬಂಡವಾಳವನ್ನು.ಜನರ ಸಾವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವ ಈ ಬಿಜೆಪಿ ನಾಯಕರಿಗೆ ಮನುಷತ್ವ ನಿಜಕ್ಕೂ ಸತ್ತು ಹೋಗಿದೆಯೆ? ಎಂದು ಅವರು ಪ್ರಶ್ನಿಸಿದ್ದಾರೆ. ನಗರದ ಹೊರವಲಯದಲ್ಲಿ ಕೋವಿಡ್ ಶವಗಳಿಗೆ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು ಇಲ್ಲಿಗೆ ಬರುವವರಿಗೆ ಕಾಫಿ, ತಿಂಡಿಯ ವ್ಯವಸ್ಥೆ ಮಾಡಿದ್ದನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದರು. ಫ್ಲೆಕ್ಸ್‌ ಹಾಕಿ ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿಎಸ್‌ ಯಡಿಯೂರಪ್ಪ, ಸಚಿವ ಆರ್. ಅಶೋಕ್, ಯಲಹಂಕ ಶಾಸಕ ಎಸ್‌.ಆರ್ ವಿಶ್ವನಾಥ್ ಭಾವಚಿತ್ರವನ್ನು ಬಳಸಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಾವಿನ ಮನೆಯಲ್ಲೂ ಪ್ರಚಾರ ಬೇಕಾ ಎಂದು ಜನರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೂಡಾ ಈ ನಡೆಯನ್ನು ಖಂಡಿಸಿದೆ. ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಎಸ್‌ಆರ್‌ ವಿಶ್ವನಾಥ್ ಇದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/3nJcjBc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...