ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಬಿಲ್ ಗೇಟ್ಸ್ ದಂಪತಿ ತಮ್ಮ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಸುಮಾರು 27 ವರ್ಷಗಳ ಕಾಲದ ದಾಂಪತ್ಯ ಜೀವನಕ್ಕೆ ಬಿಲ್ ಗೇಟ್ಸ್ ಮತ್ತು ಪರಸ್ಪರ ಸಮ್ಮತಿಯೊಂದಿಗೆ ದೂರವಾಗಲು ನಿರ್ಧರಿಸಿದ್ದು, ಈ ವಿಚಾರವನ್ನು ಸ್ವತಃ ಬಿಲ್‌ಗೇಟ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಬಹಿರಂಗಗೊಳಿಸಿದ್ದಾರೆ. 67 ವರ್ಷ ವಯಸ್ಸಿನ ಬಿಲ್‌ಗೇಟ್ಸ್ ಅವರು ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆಯುವ ನಿರ್ಧಾರ ಮಾಡಿರೋದು ಸಾಕಷ್ಟು ಅಚ್ಚರಿ ಮೂಡಿಸಿದ್ದು, ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಸುದೀರ್ಘವಾಗಿ ತಮ್ಮ ಅಭಿಪ್ರಾಯವನ್ನು ಬಿಲ್‌ಗೇಟ್ಸ್ ಹಂಚಿಕೊಂಡಿದ್ದಾರೆ. ಬಿಲ್‌ಗೇಟ್ಸ್ ಟ್ವಿಟ್ಟರ್‌ನಲ್ಲಿ ಹೇಳಿದ್ದೇನು? ‘ಸುದೀರ್ಘವಾಗಿ ಯೋಚಿಸಿದ ಬಳಿಕ ನಾವು ನಮ್ಮ ದಾಂಪತ್ಯ ಜೀವನದ ಕುರಿತು ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಪರಸ್ಪರ ಮಾತನಾಡಿ ಇಬ್ಬರೂ ವೈವಾಹಿಕ ಜೀವನವನ್ನು ಕೊನೆಗೊಳಿಸಿ ದೂರವಾಗುತ್ತಿದ್ದೇವೆ. ಕಳೆದ ಇಪ್ಪತ್ತೇಳು ವರ್ಷಗಳಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ. ನಾವು ವಿಶ್ವದ ಜನರು ಒಳಿತಿಗಾಗಿ, ಉತ್ತಮ ಆರೋಗ್ಯಕ್ಕಾಗಿ ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ಆ ಮೂಲಕ ನಾವು ಆ ಕಾರ್ಯದಲ್ಲಿ ತೊಡಗಿಸಿಕೊಂಡು ಜಗತ್ತಿನ ಜನರನ್ನು ತಲುಪುತ್ತೇವೆ. ನಾವು ನಮ್ಮ ಮುಂದಿನ ಜೀವನದಲ್ಲಿ ದಂಪತಿಯಾಗಿ ಜೊತೆಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬುವುದನ್ನು ಅರಿತು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಹೊಸ ಜೀವನವನ್ನು ಆರಂಭಿಸುತ್ತಿರುವುದರಿಂದ ನಮ್ಮ ಕುಟುಂಬದ ಜೊತೆ ಖಾಸಗಿ ಜೀವನವನ್ನು ಕಳೆಯಲು ಬಯಸುತ್ತೇವೆ’ ಎಂದು ಬಿಲ್ ಗೇಟ್ಸ್ ಮತ್ತು ಮಿಲಿಂಡಾ ಗೇಟ್ಸ್ ಒಂದೇ ಹೇಳಿಕೆಯ ಮೂಲಕ ತಿಳಿಸಿದ್ದಾರೆ. ಬಿಲ್ ಗೇಟ್ಸ್ ದಂಪತಿಯ ವಿಚ್ಛೇದನದಿಂದಾಗಿ ಮುಂದೇನು ಎಂಬ ಪ್ರಶ್ನೆ ಎದುರಾಗಿದ್ದು, ಇಬ್ಬರು ಸೇರಿ ಫೌಂಡೇಶನ್ ಒಂದನ್ನು ಸ್ಥಾಪಿಸಿ ಸಾಮಾಜಿಕ ಕಾರ್ಯಗಳನ್ನು ಶುರು ಮಾಡಿದ್ದರು. ಈ ಫೌಂಡೇಶನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಯೂ ಎಲ್ಲರ ಮುಂದಿದ್ದು. ಇದಕ್ಕೆ ಇಬ್ಬರೂ ಉತ್ತರ ನೀಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಎರಡು ವರ್ಷಗಳ ಹಿಂದೆ ಅಮೆಜಾನ್ ಸಂಸ್ಥಾಕ ಸಿಇಒ ಜೆಫ್ ಬಿಜೋಸ್ ಕೂಡ ತಮ್ಮ 26 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಪತ್ನಿ ಮ್ಯಾಕ್‌ಕೆಂಜಿ ಅವರಿಂದ ವಿಚ್ಛೇದನ ಪಡೆದಿದ್ದರು.
from India & World News in Kannada | VK Polls https://ift.tt/3xKlq9u