
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹಿಂದೆಂದು ಕಂಡರಿಯದ ರೀತಿ ಸತತ ನಾಲ್ಕು ಜಯದೊಂದಿಗೆ ಅಭಿಯಾನ ಆರಂಭಿಸಿರುವ ತಂಡ, ಈಗ ಟೂರ್ನಿಯಲ್ಲಿ ತಂಡಕ್ಕೆ ಸೋಲುಣಿಸಿ ಸತತ ಐದನೇ ಗೆಲುವನ್ನು ಎದುರು ನೋಡುತ್ತಿದೆ. ಆದರೆ, ಅಂಕಪಟ್ಟಿಯ ಅಗ್ರಸ್ಥಾನ ಪಡೆಯಲು ಭಾರಿ ಲೆಕ್ಕಾಚಾರ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗತ್ಯದ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರವನ್ನೂ ಮಾಡಿದೆ. ಚೆನ್ನೈ ತಂಡ ಮೊಯೀನ್ ಅಲಿ ಮತ್ತು ಲುಂಗಿ ಎನ್ಗಿಡಿಗೆ ವಿಶ್ರಾಂತಿ ನೀಡಿ ಇಮ್ರಾನ್ ತಾಹಿರ್ ಮತ್ತು ಡ್ವೇನ್ ಬ್ರಾವ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಕರೆತಂದಿದೆ. ಮತ್ತೊಂದೆಡೆ ಆರ್‌ಸಿಬಿ ಕೂಡ ಎರಡು ಬದಲಾವಣೆ ತಂದಿದ್ದು, ಕೇನ್ ರಿಚರ್ಡ್ಸನ್ ಮತ್ತು ಶಹಬಾಝ್ ಅಹ್ಮದ್‌ಗೆ ವಿಶ್ರಾಂತಿ ನೀಡಿ ಫಿನಿಷರ್ ಡ್ಯಾನ್ ಕ್ರಿಸ್ಟಿಯನ್ ಮತ್ತು ನವದೀಪ್ ಸೈನಿ ಅವರನ್ನು ಆಡಿಸಿದೆ. ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ'ವಿಲಿಯರ್ಸ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಡೇನಿಯೆಲ್ ಕ್ರಿಸ್ಟಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್. ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್ಋತುರಾಜ್ ಗಾಯಕ್ವಾಡ್, ಫಾಫ್ ಡು'ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್. ಧೋನಿ (ನಾಯಕ/ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಇಮ್ರಾನ್ ತಾಹಿರ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3esHQDf