
ಕುವೈತ್: ದೇಶವನ್ನು ಪ್ರವೇಶಿಸಲು ಬಯಸುವವರು ಇನ್ಮುಂದೆ ನಿರೋಧಕ ಹಾಕಿಸಿಕೊಳ್ಳಬೇಕಾದ್ದು . ಈ ಸಂಬಂಧ ಕುವೈತ್ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಪ್ರಕಟಿಸಿದ ಕುವೈತ್ ಆರೋಗ್ಯ ಸಚಿವ ಡಾ. ಮುಸ್ತಫಾ ರಿಡಾ ಅವರು, ವಿದೇಶಗಳಿಂದ ಕುವೈತ್ ಪ್ರವೇಶ ಮಾಡುವವರಿಗೆ ಕೊರೊನಾ ಲಸಿಕೆ ಕಡ್ಡಾಯ ಎಂದು ಹೇಳಿದರು. ಲಸಿಕೆ ಪಡೆದವರಿಗೆ ಸಾಂಸ್ಥಿಕ ಕ್ವಾರಂಟೈನ್ ಕೂಡಾ ಇರೋದಿಲ್ಲ. ಅವರು ಹೋಂ ಕ್ವಾರಂಟೈನ್ ಆದರೆ ಸಾಕು ಎಂದು ಸಚಿವರು ಹೇಳಿದ್ದಾರೆ. ಫೈಜರ್ ಬಯೋನಿಕ್, ಆಸ್ಟ್ರಾಜೆನಿಕಾ ಆಕ್ಸ್‌ಫರ್ಡ್, ಮೊಡೆರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳ ಲಸಿಕೆ ಪಡೆದವರಿಗೆ ಮಾತ್ರ ಈ ವಿನಾಯ್ತಿ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ. ಕುವೈತ್ ಸರ್ಕಾರ ಅನುಮೋದನೆ ನೀಡಿರುವ ಈ ಮೇಲ್ಕಂಡ ಲಸಿಕೆ ಪಡೆದವರಿಗೆ ಮಾತ್ರ ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದ್ದು, ಈ ಲಸಿಕೆಗಳನ್ನು ಪಡೆದು 5 ವಾರ ಕಳೆದ ಬಳಿಕ ಕುವೈತ್‌ಗೆ ಭೇಟಿ ನೀಡಬಹುದಾಗಿದೆ. ಇನ್ನು ಮೊದಲ ಡೋಸ್ ಹಾಗೂ ಎರಡನೇ ಡೋಸ್ ಪಡೆಯಲು ವಿರಾಮ ಇರುವ ಕಾರಣ, ಎರಡನೇ ಡೋಸ್ ಪಡೆದ 2 ವಾರಗಳ ಬಳಿಕವೂ ಕುವೈತ್ ಪ್ರವೇಶಕ್ಕೆ ಮನವಿ ಸಲ್ಲಿಸಬಹುದಾಗಿದೆ. ಇನ್ನೊಂದು ಹೊಸ ಅವಕಾಶವನ್ನೂ ಕುವೈತ್ ಸರ್ಕಾರ ನೀಡಿದೆ. ಕೊರೊನಾ ಸೋಂಕಿತರಾಗಿ ಚೇತರಿಕೆ ಕಂಡ ಬಳಿಕ ಲಸಿಕೆ ಪಡೆದಿದ್ದರೆ, ಅಂಥವರು ಲಸಿಕೆ ಪಡೆದ 2 ವಾರಗಳಲ್ಲೇ ಕುವೈತ್ ಪ್ರವೇಶ ಮಾಡಬಹುದಾಗಿದೆ. ಕುವೈತ್ ಪ್ರವೇಶಕ್ಕೆ ಮುನ್ನ ಲಸಿಕೆ ಪಡೆದ ಪ್ರಮಾಣಪತ್ರ ತೋರಿಸೋದು ಕಡ್ಡಾಯವಾಗಿದೆ. ಅಷ್ಟೇ ಅಲ್ಲ, 72 ಗಂಟೆಗಳ ಹಿಂದೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡ ವರದಿಯೂ ಕಡ್ಢಾಯವಾಗಿದೆ.
from India & World News in Kannada | VK Polls https://ift.tt/3gDiGVs