‘ಬಿಜೆಪಿ ಸರ್ಕಾರದ ಅನ್ನಭಾಗ್ಯವನ್ನು ಸಿದ್ದರಾಮಯ್ಯ ನಾವು ಕೊಟ್ಟೆವು ಎಂದು ಹೇಳ್ತಿದ್ದಾರೆ’; ರೇಣುಕಾಚಾರ್ಯ

ದಾವಣಗೆರೆ: ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದ್ದಕ್ಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದ ವಿಪಕ್ಷ ನಾಯಕ ಅವರಿಗೆ ಬಿಜೆಪಿ ಶಾಸಕ ಎಂಪಿ ತಿರುಗೇಟು ನೀಡಿದ್ದಾರೆ. ಈ ಸಂಬಂಧ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರೇಣುಕಾಚಾರ್ಯ, ಇಲ್ಲಿ ಯಾರೂ ಅಕ್ಕಿಯನ್ನು ಅವರ ಅಪ್ಪನ‌ ಮನೆಯಿಂದ ಕೊಡ್ತಾ ಇಲ್ಲ. ಅನ್ಯಭಾಗ್ಯ ಬಿಜೆಪಿ ಸರ್ಕಾರದ ಕೊಡುಗೆ. ಬಿಜೆಪಿ ಸರ್ಕಾರದ ಅನ್ನಭಾಗ್ಯವನ್ನು ಸಿದ್ದರಾಮಯ್ಯ ನಾವು ಕೊಟ್ವಿ ಎಂದು ಹೇಳುತ್ತಾರೆ. ಇದು ಯಾವ ನ್ಯಾಯ, ನಮ್ಮ ಯೋಜನೆಯ ಲಾಭ ಪಡೆದು ನಮ್ಮ ಬಗ್ಗೆಯೇ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಅಕ್ಕಿಯನ್ನು ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಸರ್ಕಾರ ಅಲ್ಲ ಎಂದ ರೇಣುಕಾಚಾರ್ಯ, ಕೋವಿಡ್ ಸಂದರ್ಭದಲ್ಲೂ ಸಿಎಂ, ಖಜಾನೆಗೆ ಹಣ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಕೋವಿಡ್‌ನಲ್ಲೂ ಸಂಕಷ್ಟದಲ್ಲಿರುವ ರೈತರು,ಅಸಂಘಟಿತ ಕಾರ್ಮಿಕರ ಕಷ್ಟಕ್ಕೆ ಸಿಎಂ ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದು ಬರೀ ಟೀಕೆ ಮಾಡಲಿ ಆದರೆ ಸುಳ್ಳು ಟೀಕೆ ಮಾಡುವುದನ್ನು ಯಾರು ಒಪ್ಪುವುದಿಲ್ಲ ಎಂದರು.


from India & World News in Kannada | VK Polls https://ift.tt/3rPFhzK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...