
ವಿಜಯಪುರ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಮಧ್ಯೆ ಸಿ.ಡಿ. ಯುವತಿಯ ಅಜ್ಜಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಯುವತಿಯ ಪೋಷಕರು ಬೆಳಗಾವಿಯಿಂದ ವಿಜಯಪುರ ಜಿಲ್ಲೆಯ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿಯ ತಂದೆ, ಈಗಾಲಲೇ ನಾವು ಸಾಕಷ್ಟು ಕುಗ್ಗಿ ಹೋಗಿದ್ದೇವೆ. ನಮ್ಮ ಅತ್ತೆಯವರ ಅನಾರೋಗ್ಯ ವಿಚಾರವಾಗಿ ಮತ್ತಷ್ಟು ನೊಂದಿದ್ದೇವೆ. ನಾವು ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸಲು ಸಿದ್ದರಿಲ್ಲ, ಮನಸ್ಸು ಸರಿಯಿಲ್ಲ. ನಾವು ಇಲ್ಲಿ ನೆಮ್ಮದಿಯಿಂದ ಇರಲು ಅನಕೂಲ ಮಾಡಿಕೊಡಬೇಕೆಂದು ಜನರಿಗೆ ಹಾಗೂ ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ. ನಮ್ಮ ಅತ್ತೆ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯುವತಿಯ ತಂದೆ ಹೇಳಿಕೆ ನೀಡಿದ್ದಾರೆ. ಸದ್ಯ ನಾವೆಲ್ಲ ಇಲ್ಲಿಯೇ ಉಳಿದುಕೊಂಡು ನಮ್ಮ ಅತ್ತೆಯವರನ್ನು ನೋಡಿಕೊಳ್ಳುತ್ತೇವೆ. ಇಲ್ಲಿ ನಾವು ಯಾವುದೇ ಒತ್ತಡದಿಂದ ಬಂದಿಲ್ಲ. ಘಟನೆಯ ಕುರಿತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಹೆಚ್ಚಿಗೆ ಹೇಳಲು ಇಷ್ಟ ಪಡಲ್ಲ. ಸದ್ಯ ತನಿಖೆ ನಡೆಯುತ್ತಿದೆ. ಮುಂದೆ ದೇವರು ಏನೇನು ಬುದ್ದಿ ಕೊಡುತ್ತಾನೋ, ಏನೇನು ದಾರಿ ತೋರಿಸುತ್ತಾನೋ ನೋಡೋಣವೆಂದು ಯುವತಿ ತಂದೆ ಹೇಳಿದ್ದಾರೆ. ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದೆಡಿಕೆಶಿ ವಿರುದ್ಧ ಮಾಡಿರುವ ಆರೋಪದ ಕುರಿತು ಎಸ್ಐಟಿ ತನಿಖಾಧಿಕಾರಿಗಳಿಗೆ ರೆಕಾರ್ಡಿಂಗ್ ಹಾಗೂ ಇತರೆ ಮಾಹಿತಿ ನೀಡಿದ್ದೇವೆ. ಮುಂದೆ ಏನಾಗುತ್ತೋ ಎಂದು ನೋಡೋಣ. ನಮ್ಮ ಮಗಳಿಗೆ ಈಗಾಗಲೇ ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮಗಳ ಭೇಟಿಗೆ ಅವಕಾಶ ನೀಡಬೇಕೆಂದು ಪತ್ರ ನೀಡಿದ್ದೇವೆ. ತನಿಖೆಗಾಗಿ ಅಧಿಕಾರಿಗಳು ಮಗಳ ಭೇಟಿಗೆ ಅವಕಾಶ ನೀಡಿ ಯಾವಾಗ ಕರೆಯುತ್ತಾರೋ ಆಗ ಹೋಗುತ್ತೇವೆ ಎಂದು ಯುವತಿ ತಂದೆ ಹೇಳಿದರು. ಸದ್ಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿ.ಡಿ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವಾಗಿದ್ದಾರೆ. ಅವರ ವಿರುದ್ಧ ದೂರು ಕೂಡ ನೀಡಿದ್ದಾರೆ. ಇನ್ನೊಂದು ಕಡೆ ಆಕೆಯ ಕುಟುಂಬಸ್ಥರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಮಗಳನ್ನು ಒತ್ತಡದಿಂದ ಹೇಳಿಕೆ ನೀಡಲಾಗುತ್ತಿದೆ. ಡಿಕೆಶಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಮಧ್ಯೆ ತನಿಖೆ ನಡೆಯುತ್ತಿದೆ. ಇನ್ನು ಬೆಳಗಾವಿ ಪೊಲೀಸರು ಕೂಡ ಕುಟುಂಬಕ್ಕೆ ವಿಜಪುರದಲ್ಲಿ ಬಿಗಿ ಭದ್ರತೆ ನೀಡಿದೆ.
from India & World News in Kannada | VK Polls https://ift.tt/3fynzOS