ಕೆಕೆಆರ್‌ ತಂಡ ಸೇರಿದ ಆರ್‌ಸಿಬಿ ತಂಡದ ಫ್ಲಾಪ್‌ ಆಟಗಾರ, ರಿಂಕು ಸಿಂಗ್‌ ಔಟ್‌!

ಕೋಲ್ಕತಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮತ್ತು ಸಾಂದರ್ಭಿಕ ಸ್ಪಿನ್ನರ್‌ ರಿಂಕು ಸಿಂಗ್‌ ಮಂಡಿ ನೋವಿನ ಗಾಯದ ಸಮಸ್ಯೆ ಕಾರಣ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಸಂಪೂರ್ಣ ಹೊರಬಿದಿದ್ದಾರೆ. ಇದರ ಬೆನ್ನಲ್ಲೇ ತಂಡ ಪಂಜಾಬ್ ಮೂಲದ ಬ್ಯಾಟ್ಸ್‌ಮನ್‌ ಗುರುಕೀರತ್ ಸಿಂಗ್ ಮಾನ್‌ ಅವರನ್ನು ಬದಲಿ ಆಟಗಾರನಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೊರೊನಾ ವೈರಸ್‌ ಭೀತಿ ಹಿನ್ನೆಲಯಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆತಿಥ್ಯದಲ್ಲಿ ನಡೆದ ಐಪಿಎಲ್ 2020 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದ ಬಲಗೈ ಬ್ಯಾಟ್ಸ್‌ಮನ್‌ ಗುರುಕೀರತ್‌ ಸಿಂಗ್‌ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲದೆ ತಮ್ಮ ಮಂದಗತಿಯ ಬ್ಯಾಟಿಂಗ್‌ ಸಲುವಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ ಟೂರ್ನಿ ಸಲುವಾಗಿ ಫೆ.18ರಂದು ಚೆನ್ನೈನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ತಂಡದ ಮಾಜಿ ಆಟಗಾರನ ಖರೀದಿಗೆ ಯಾವ ತಂಡಗಳು ಕೂಡ ಮನಸ್ಸು ಮಾಡಿರಲಿಲ್ಲ. ಮಾರಾಟವಾಗದೇ ಉಳಿದಿದ್ದ ಗುರುಕೀರತ್‌ಗೆ ಇದೀಗ ದಿಢೀರನೆ ಅದೃಷ್ಟದ ಬಾಗಿಲು ತೆರೆದಿದ್ದು, ಕೆಕೆಆರ್‌ ತಂಡ ಮತ್ತೊಂದು ಅವಕಾಶ ಕೊಟ್ಟಿದೆ. "ರಿಂಕು ಸಿಂಗ್‌ ಅವರಿಗೆ ಬದಲಿ ಆಟಗಾರನಾಗಿ ಗುರುಕೀರತ್‌ ಸಿಂಗ್ ಮಾನ್‌ ಅವರೊಟ್ಟಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ಒಪ್ಪಂದಕ್ಕೆ ಸಹಿ ಹಾಕಿದೆ. ರಿಂಕು ಸಿಂಗ್‌ ಮಂಡಿ ಗಾಯದ ಕಾರಣ ಐಪಿಎಲ್ 2021 ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ," ಎಂದು ಕೆಕೆಆರ್‌ ತಂಡ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 2017ರಲ್ಲಿ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ ರಿಂಕು ಸಿಂಗ್‌ ಈವರೆಗೆ 11 ಪಂದ್ಯಗಳನ್ನು ಆಡಿದ್ದಾರೆ. ಅವರ ಸ್ಥಾನದಲ್ಲಿ ತಂಡ ಸೇರಿರುವ ಗುರುಕೀರತ್‌ ಸಿಂಗ್ ಕಳೆದ ಬಾರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದ್ದರು. ಐಪಿಎಲ್ 2020 ನಂತರ ಗುರುಕೀರತ್ ಅವರನ್ನು ಆರ್‌ಸಿಬಿ ಹರಾಜು ಪ್ರಕ್ರಿಯೆಗೂ ಮುನ್ನ ಬಿಡುಗಡೆ ಮಾಡಿತ್ತು. "ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮೂಲ ಬೆಲೆ 50 ಲಕ್ಷ ರೂ. ನೀಡಿ ಗುರುಕೀರತ್‌ ಸಿಂಗ್‌ ಅವರನ್ನು ತೆಗೆದುಕೊಂಡಿದೆ. ಐಪಿಎಲ್‌ 2021 ಟೂರ್ನಿ ಗುರುಕೀರತ್‌ ಪಾಲಿಗೆ 8ನೇ ಟೂರ್ನಿ ಆಗಲಿದೆ," ಎಂದು ಕೆಕೆಆರ್‌ ತಂಡ ಹೇಳಿದೆ. ಉತ್ತರ ಪ್ರದೇಶ ಮೂಲದ ಕ್ರಿಕೆಟಿಗ ರಿಂಕು ಸಿಂಗ್‌ ಐಪಿಎಲ್ 2020 ಟೂರ್ನಿಯಲ್ಲಿ ಕೆಕೆಆರ್‌ ಪರ 1 ಪಂದ್ಯವನ್ನಾಡಿ, ಸಿಎಸ್‌ಕೆ ಎದುರು 11 ರನ್‌ ಗಳಿಸಿದ್ದರು. 2012ರಲ್ಲಿ ಐಪಿಎಲ್‌ ವೃತ್ತಿಬದುಕು ಆರಂಭಿಸಿದ ಗುರುಕೀರತ್‌ ಸಿಂಗ್‌ ಈವರೆಗೆ 41 ಪಂದ್ಯಗಳನ್ನು ಆಡಿದ್ದಾರೆ. ಕಿಂಗ್ಸ್‌ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್‌), ಡೆಲ್ಲಿ ಡೇರ್‌ಡೆವಿಲ್ಸ್‌ (ಈಗ ಡೆಲ್ಲಿ ಕ್ಯಾಪಿಟಲ್ಸ್‌) ಮತ್ತು ಆರ್‌ಸಿಬಿ ತಂಡಗಳ ಪರ ಆಡಿದ ಅನುಭವ ಹೊಂದಿದ್ದಾರೆ. 2018ರ ಬಳಿಕ ಹೆಚ್ಚು ಅವಕಾಶ ಪಡೆಯದ ಗುರುಕೀರತ್ ಒಟ್ಟು 511 ರನ್‌ ಮಾತ್ರ ಗಳಿಸಿದ್ದು, ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಕೆಕೆಆರ್‌ ತಂಡ ಐಪಿಎಲ್ 2021 ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಏಪ್ರಿಲ್ 11ರಂದು ಕಣಕ್ಕಿಳಿಯಲಿದೆ. ಕೆಕೆಆರ್‌ ಪಂದ್ಯಗಳ ವೇಳಾಪಟ್ಟಿ ಹೀಗಿದೆ ಏಪ್ರಿಲ್ 11, ಭಾನುವಾರ ರಾತ್ರಿ 7.30 (ಚೆನ್ನೈ): ಸನ್‌ರೈಸರ್ಸ್ ಹೈದರಾಬಾದ್ vs ಕೋಲ್ಕತಾ ನೈಟ್ ರೈಡರ್ಸ್ ಏಪ್ರಿಲ್ 13, ಮಂಗಳವಾರ ರಾತ್ರಿ 7.30 (ಚೆನ್ನೈ): ಕೋಲ್ಕತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ ಏಪ್ರಿಲ್ 18, ಭಾನುವಾರ ಮಧ್ಯಾಹ್ನ 3.30 (ಚೆನ್ನೈ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್ ಏಪ್ರಿಲ್ 21, ಬುಧವಾರ ರಾತ್ರಿ 7.30 (ಮುಂಬೈ): ಕೋಲ್ಕತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಏಪ್ರಿಲ್ 24, ಶನಿವಾರ ರಾತ್ರಿ 7.30 (ಮುಂಬೈ): ರಾಜಸ್ಥಾನ್ ರಾಯಲ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಏಪ್ರಿಲ್ 26, ಸೋಮವಾರ ರಾತ್ರಿ 7.30 (ಅಹಮದಾಬಾದ್): ಪಂಜಾಬ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಏಪ್ರಿಲ್ 29, ಗುರುವಾರ ರಾತ್ರಿ 7.30 (ಅಹಮದಾಬಾದ್): ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಮೇ 3, ಸೋಮವಾರ ರಾತ್ರಿ 7.30 (ಅಹಮದಾಬಾದ್): ಕೋಲ್ಕತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇ 8, ಶನಿವಾರ ಮಧ್ಯಾಹ್ನ 3.30 (ಅಹಮದಾಬಾದ್): ಕೋಲ್ಕತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್‌ ಮೇ 10, ಸೋಮವಾರ ರಾತ್ರಿ 7.30 (ಬೆಂಗಳೂರು): ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಮೇ 12, ಬುಧವಾರ ರಾತ್ರಿ 7.30 (ಬೆಂಗಳೂರು): ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಮೇ 15, ಶನಿವಾರ ರಾತ್ರಿ 7.30 (ಬೆಂಗಳೂರು): ಕೋಲ್ಕತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ ಮೇ 18, ಮಂಗಳವಾರ ಮಧ್ಯಾಹ್ನ 3.30 (ಬೆಂಗಳೂರು): ಕೋಲ್ಕತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್ ಮೇ 21, ಶುಕ್ರವಾರ ಮಧ್ಯಾಹ್ನ 3.30 (ಬೆಂಗಳೂರು): ಕೋಲ್ಕತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PPFdCV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...