ಆಹಾರದ ಬಿಲ್‌ ಪಾವತಿಸಿ ಡಿಎಂಕೆಗೆ ಟಾಂಗ್‌ ಕೊಟ್ಟ ತೇಜಸ್ವಿ ಸೂರ್ಯ, ಮುಜುಗರ ತಂದಿಡ್ತು ಹೋಟೆಲ್‌ ಮಾಲೀಕನ ಉತ್ತರ!

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅವರು ಕೊಯಮರಿನ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ್ದಕ್ಕೆ ಬಿಲ್‌ ಪಾವತಿಸಿ ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಡಿಎಂಕೆಗೆ ಟಾಂಗ್‌ ಕೊಟ್ಟಿದ್ದರು. ಆದರೆ ಹೀಗೆ ಮಾಡಿದ್ದ ತೇಜಸ್ವಿ ಸೂರ್ಯ ಅವರು ಕೊನೆಗೆ ಹೋಟೆಲ್‌ ಮಾಲೀಕರಿಂದಲೇ ಮುಜುಗರ ಅನುಭವಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥರೂ ಆಗಿರುವ ತೇಜಸ್ವಿ ಸೂರ್ಯ ಅವರು ಚುನಾವಣಾ ಪ್ರಚಾರ ವೇಳೆ ಕೊಯಮತ್ತೂರಿನ ಶ್ರೀ ಅನ್ನಪೂರ್ಣ ಶ್ರೀ ಗೌರಿಶಂಕರ ರೆಸ್ಟೋರೆಂಟ್‌ನಲ್ಲಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ ಸೇವಿಸಿ ಬಿಲ್‌ ಪಾವತಿಸಲು ಮುಂದಾದಾಗ ಕ್ಯಾಶಿಯರ್‌ ಹಣ ತೆಗೆದುಕೊಳ್ಳಲು ಹಿಂಜರಿಕೆ ತೋರಿದ್ದರು. ನಂತರ ಒತ್ತಾಯಿಸಿ ಹಣ ಪಾವತಿಸಿದ್ದರು. ಹೀಗೆ ಹಣ ನೀಡುವಾಗ ಅವರು, ''ಸಣ್ಣ ಉದ್ಯಮಿಗಳಿಂದಲೂ ಹಣ ವಸೂಲಿ ಮಾಡುವ ಪಕ್ಷ ನಮ್ಮದಲ್ಲ. ನಮ್ಮದು ಬಿಜೆಪಿ ಪಕ್ಷ. ಎಲ್ಲರನ್ನೂ ಸಮಾನ ರೀತಿಯಿಂದ ನೋಡುವ ಪಕ್ಷ,'' ಎಂದು ಹೇಳಿದ್ದರು. ಈ ವಿಚಾರವನ್ನು ಸ್ವತಃ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ವೈರಲ್‌ ಆಗುತ್ತಿದ್ದಂತೆಯೇ ಹೋಟೆಲ್‌ ಮಾಲೀಕ ಫೇಸ್‌ಬುಕ್‌ನಲ್ಲಿ, ''ತೇಜಸ್ವಿ ಸೂರ್ಯ ಅವರೇ ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ನೀಡಿದ್ದಕ್ಕೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರಿಗೂ ಒಂದೇ ರೀತಿಯಲ್ಲಿ ಸೇವೆ ನೀಡುತ್ತೇವೆ. ಇಲ್ಲಿಆಹಾರ ಸೇವಿಸಿದ ಪ್ರತಿಯೊಬ್ಬರೂ ಬಿಲ್‌ ಪೇ ಮಾಡುತ್ತಾರೆ. ಯಾರೂ ಇಲ್ಲಿಉಚಿತವಾಗಿ ಊಟ ಕೊಡಿ ಎಂದು ಕೇಳುವುದಿಲ್ಲ. ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡಿದವರಿಂದ ನಾವೇ ಕೆಲವೊಮ್ಮೆ ಹಣ ತೆಗೆದುಕೊಳ್ಳುವುದಿಲ್ಲ,'' ಎಂದು ಬರೆದುಕೊಂಡು ಪ್ರತ್ಯುತ್ತರ ಕೊಟ್ಟಿದ್ದಾರೆ.


from India & World News in Kannada | VK Polls https://ift.tt/3fHDcU8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...