ನ್ಯೂ ತೆಹ್ರಿ: ಬೇಟೆಗಾಗಿ ಕಾಡಿಗೆ ಹೋದ ನಾಲ್ವರು ಸ್ನೇಹಿತರು, ತಮ್ಮದೇ ಎಡವಟ್ಟಿನಿಂದ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಾಖಂಡ್‌ನಲ್ಲಿ ನಡೆದಿದೆ. ಇಲ್ಲಿನ ತೆಹ್ರಿ ಜಿಲ್ಲೆಯ ಕುಂಡಿ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಬೇಟೆಯ ಸಂದರ್ಭದಲ್ಲಿ ಅಚಾತುರ್ಯದಿಂದ ಸ್ನೇಹಿತರ ಬಂದೂಕಿನಿಂದ ಹಾರಿನಿಂದ ಗುಂಡು ತಗುಲಿ ಓರ್ವ ಮೃತಪಟ್ಟಿದ್ದಾನೆ. ಇದರಿಂದ ನೊಂದ ಇತರ ಮೂವರು ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಟೆಗಾಗಿ ಒಟ್ಟು ಏಳು ಜನ ಕಾಡಿಗೆ ಹೋಗಿದ್ದರು. ಈ ಪೈಕಿ ಗುಂಪಿನ ನೇತೃತ್ವವಹಿಸಿದ್ದ ರಾಜೀವ್ ಎಂಬಾತ ಬಂದೂಕನ್ನು ಹೊತ್ತುಯ ಮುನ್ನಡೆಯುತ್ತಿದ್ದ. ಆದರೆ ಮಾರ್ಗ ಮಧ್ಯೆ ಜಾರಿ ಬಿದ್ದ ಪರಿಣಾಮ ಆತನ ಬಂದೂಕಿನಿಂದ ಹಾರಿದ ಗುಂಡು, ಮತ್ತೋರ್ವ ಸ್ನೇಹಿತ ಸಂತೋಷ್‌ನಿಗೆ ಬಡಿದು ಆತರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಾಜೀವ್, ತನ್ನ ಬಂದೂಕಿನ ಸಮೇತ ಕಾಡಿನಿಂದ ಪರಾರಿಯಾಗಿದ್ದಾನೆ. ಇದೇ ವೇಳೆ ಸ್ನೇಹಿತ ಸಂತೋಷ್‌ನ ಸಾವಿನಿಂದ ತೀವ್ರವಾಆಗಿ ನೊಂದುಕೊಂಡ ಸೋಬನ್, ಪಂಕಜ್ ಮತ್ತು ಅರ್ಜುನ್ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನುಳಿದ ಇಬ್ಬರು ಸ್ನೇಹಿತರಾದ ರಾಹು;ಲ್ ಮತ್ತು ಸುಮೀತ್ ಕಾಡಿನಿಂದ ಮರಳಿ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಕಾಡಿಗೆ ಓಡಿದ ಗ್ರಾಮಸ್ಥರು ಮೂವರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂವರೂ ಸ್ನೇಹಿತರು ಅಸುನೀಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ತೆಹ್ರಿ ಪೊಲೀಸರು, ನಾಪತ್ತೆಯಾಗಿರುವ ರಾಜೀವ್‌ಗಾಗಿ ಹುಟುಕಾಟ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
from India & World News in Kannada | VK Polls https://ift.tt/3ujfguv