ನಾನು ಜಾರಿಗೆ ತಂದ ಬಡವರ ಯೋಜನೆಗಳನ್ನು ಬಿಎಸ್‌ವೈ ಕಸಿದಿದ್ದಾರೆ: ಸಿದ್ದರಾಮಯ್ಯ

: ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿನ ಬಡವರ ಕಲ್ಯಾಣಕ್ಕಾಗಿ ತಂದ ಯೋಜನೆಗಳನ್ನು ಮುಚ್ಚುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಆರೋಪಿಸಿದರು. ನಗರದ ತ್ರಿಶೂಲ್‌ ಕಲಾ ಭವನದಲ್ಲಿ ಶುಕ್ರವಾರ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ದಿ.ಕೆ.ಮಲ್ಲಪ್ಪನವರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಸಮ ಸಮಾಜದ ಉದ್ದೇಶಕ್ಕಾಗಿ ನಾನಾ ಯೋಜನೆಗಳನ್ನೂ ತಂದರೂ, ಬಡವರ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ಬಡವರ ಹಸಿವು ನೀಗಿಸಲು ಅನ್ನಭಾಗ್ಯ, ಕೆಳವರ್ಗದ ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂ.ನೀಡುವ ವಿದ್ಯಾಸಿರಿ, ಪ್ರತಿಯೊಬ್ಬ ಬಡವ ಊಟ ಮಾಡಲು ಇಂದಿರಾ ಕ್ಯಾಂಟಿನ್‌ ತೆರೆದಿದ್ದೆ. ಆದರೆ, ಬಿ.ಎಸ್‌.ಯಡಿಯೂರಪ್ಪರಿಗೆ ಬಡವರು ಉದ್ಧಾರ ಆಗೋದು ಇಷ್ಟವಿಲ್ಲದ ಕಾರಣ ಅನ್ನಭಾಗ್ಯ ಕಡಿತ, ವಿದ್ಯಾಸಿರಿ ಯೋಜನೆ ಸ್ಥಗಿತ, ಇಂದಿರಾ ಕ್ಯಾಂಟಿನ್‌ ಮುಚ್ಚಿದ್ದಾರೆ’ ಎಂದು ಕಿಡಿಕಾರಿದರು. ಕುರುಬ ಸಮಾಜದ ವಸತಿ ನಿಲಯದಲ್ಲಿ ಎಲ್ಲ ಸಮಾಜದವರು ಓದಿದ್ದು, ಹಲವರು ಈಗಲೂ ನೆನಸಿಕೊಳ್ಳುತ್ತಾರೆ. ಎಚ್‌.ಸಿ. ಮಹದೇವಪ್ಪ ಈ ವಸತಿ ನಿಲಯದಲ್ಲಿ ಓದಿದ್ದು, ಅವರು ಆಗಾಗ ಮೆಲುಕು ಹಾಕುತ್ತಾರೆ. ವಸತಿ ನಿಲಯ ನಡೆಸುವುದು ಕಷ್ಟವಾಗಿದ್ದರೂ, ಕುರುಬರ ವಸತಿ ನಿಲಯದಲ್ಲಿ ಉಚಿತ ದಾಸೋಹ ನೀಡಲಾಗುತ್ತಿದೆ ಎಂದರು. ತಿಂಥಣಿ ಕನಕ ಶಾಖಾಮಠದ ಸಿದ್ದರಾಮನಂದಪುರಿ ಸ್ವಾಮೀಜಿ ಮಾತನಾಡಿದರು. ಈ ವೇಳೆ ಗ್ರಾಪಂನಲ್ಲಿ ಗೆದ್ದ 260 ಜನ ಕುರುಬ ಸಮಾಜದವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ, ಎಚ್‌.ಎಂ.ರೇವಣ್ಣ, ಎಚ್‌.ಆಂಜನೇಯ, ಶಾಸಕ ಎಸ್‌.ರಾಮಪ್ಪಇನ್ನಿತರರು ಇದ್ದರು.


from India & World News in Kannada | VK Polls https://ift.tt/31HCo9B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...