ಶಶಿಧರ್ ಎಸ್. ದೋಣಿಹಕ್ಲುತುಮಕೂರು ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜಕಾರಣಕ್ಕೆ ಎಂಟ್ರಿ ಕೊಡುವುದು ಬಹುತೇಕ ನಿಶ್ಚಿತವಾಗಿದೆ. ಇದರಿಂದ ತುಮಕೂರು ಮತ್ತು ಚಿತ್ರದುರ್ಗದಲ್ಲಿ ಕಾಂಗ್ರೆಸ್‌ಗೆ ಬಲ ದೊರೆಯಲಿದೆ ಎಂಬ ಅಭಿಪ್ರಾಯವಿದೆ. ಜೆಡಿಎಸ್ ಭದ್ರಕೋಟೆ ಎಂದು ಬಿಂಬಿತವಾಗಿದ್ದ ತುಮಕೂರಿನಲ್ಲಿ ಈಗ ಬಿಜೆಪಿಯೂ ಬಲಗೊಳ್ಳುತ್ತಿದೆ. ಈ ಹಂತದಲ್ಲಿ ಸಿದ್ದರಾಮಯ್ಯ ಅವರು ಪ್ರವೇಶಿಸಿದರೆ ಎರಡೂ ಪಕ್ಷಗಳಿಗೆ ಹೊಡೆತ ಬೀಳಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಮತ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಅವರು ಹಾಲಿ ಸಚಿವ ಕೆ.ಸಿ. ಮಾಧುಸ್ವಾಮಿ ಪ್ರತಿನಿಧಿಸುತ್ತಿರುವ ಚಿಕ್ಕನಾಯಕನ ಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ತಯಾರಿ ನಡೆದಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕೆಂಬ ಒತ್ತಡ ಜಿಲ್ಲಾ ಕಾಂಗ್ರೆಸ್‌ನಿಂದಲೇ ವ್ಯಕ್ತವಾಗಿದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಂತೂ ಚಿಕ್ಕನಾಯಕನಹಳ್ಳಿಯ ಸ್ಪರ್ಧೆಯನ್ನು ಬಹಿರಂಗ ಸಭೆಯಲ್ಲೇ ಘೋಷಿಸಿದ್ದಾರೆ. ಆದರೆ, ಈ ಹಂತದಲ್ಲೇ ಚರ್ಚೆ ಬೇಡ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡುತ್ತಿಲ್ಲಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ನಾನಾ ಮುಖಂಡರು ಸಿದ್ದರಾಮಯ್ಯ ಅವರ ಸ್ಪರ್ಧೆಯನ್ನು ಎದುರು ನೋಡುತ್ತಿದ್ದರು. ಜಿಟಿಡಿ ಮರಳಿ ಕಾಂಗ್ರೆಸ್‌ಗೆ? ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಮಾಜಿ ಸಚಿವ ಜಿ.ಟಿ.ದೇವೇಗೌಡ ಮರಳಿ ಕಾಂಗ್ರೆಸ್ ಸೇರುವುದೂ ಬಹುತೇಕ ಖಚಿತ ಎನ್ನಲಾಗಿದೆ. ಅವರಿಗೆ ಚಾಮುಂಡೇಶ್ವರಿ ಕ್ಷೇತ್ರವೇ ದೊರೆಯಬಹುದು. ವರುಣಾದಲ್ಲಿ ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಅವರೇ ಅಭ್ಯರ್ಥಿಯಾಗಬಹುದು ಎನ್ನಲಾಗಿದೆ. ಚಿಕ್ಕನಾಯಕನಹಳ್ಳಿ ಜೆಡಿಎಸ್ ಮಾಜಿ ಶಾಸಕ ಬಿ.ಸುರೇಶ್‌ಬಾಬು ಕಾಂಗ್ರೆಸ್‌ಗೆ ಸೇರಿದ್ದರೂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದು ಸದ್ಯದ ರಾಜಕೀಯ ಚರ್ಚೆ. ಜಿಲ್ಲೆಯಲ್ಲಿ'ಕೈ' ಬಲಒಂದೊಮ್ಮೆ ಸಿದ್ದರಾಮಯ್ಯ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕಿಳಿಯುವುದು ಖಚಿತವಾದರೆ ಈಗಾಗಲೇ ಜೆಡಿಎಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಎಂಎಲ್‌ಸಿ ಬೆಮೆಲ್ ಕಾಂತರಾಜು ಕೂಡಾ ಕೈಯತ್ತ ಬರುವ ಸಾಧ್ಯತೆ ಇದೆ. ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಜತೆಗೂ ಕಾಂಗ್ರೆಸ್ ಮಾತುಕತೆ ನಡೆಸಿದೆ. ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರನ್ನೂ ಕಾಂಗ್ರೆಸ್‌ಗೆ ಸೆಳೆಯುವ ತಂತ್ರಗಾರಿಕೆ ಪ್ರಗತಿಯಲ್ಲಿದೆ.
from India & World News in Kannada | VK Polls https://ift.tt/3ubY8GS