ಕೊಡಗು: ಪಾನಮತ್ತ ವ್ಯಕ್ತಿಯ ದುಷ್ಕೃತ್ಯಕ್ಕೆ 6 ಮಂದಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ. ಬೋಜ ಎಂಬಾತ ಕಿಡಿಗೇಡಿ ಮದ್ಯ ಸೇವಿಸಿ ಬಂದು ಎರವರ ಮಂಜು ಎನ್ನುವವರ ಮನೆ ಬಾಗಿಲಿಗೆ ಹಾಕಿ ಹಚ್ಚಿದ್ದಾನೆ. ಇದರಿಂದಾಗಿ ಮನೆಯೊಳಗೆ ನಿದ್ರಿಸುತ್ತಿದ್ದವರು ಬೆಂಕಿಗೆ ಸಜೀವ ದಹನವಾಗಿ ಹೋಗಿದ್ದಾರೆ. ಒಟ್ಟು ಎಂಟು ಜನರ ಪೈಕಿ ಮೂವರು ಸಜೀವ ದಹನವಾಗಿದ್ದು, ಮೂವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನುಳಿದ ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಠಪೂರ್ತಿ ಕುಡಿದುಬಂದ ಬೋಜ ಮನೆಯ ಹೊರಗಿನಿಂದ ಬೆಂಕಿ ಹಚ್ಚಿದ ವೇಳೆ ಮನೆಯೊಳಗಿದ್ದವರು ನಿದ್ರಿಸುತ್ತಿದ್ದರು. ಆತ ಹೊರಗಿನಿಂದ ಬಾಗಿಲು ಹಾಕಿ ಬೆಂಕಿ ಹಚ್ಚಿದ ಪರಿಣಾಮ ಬೇಬಿ(45), ಸೀತಾ(40), ಪ್ರಾರ್ಥನಾ(6) ಸಜೀವ ದಹನವಾಗಿದ್ದು, ವಿಶ್ವಾಸ್(3), ವಿಶ್ವಾಸ್(6), ಪ್ರಕಾಶ್(7) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾಗ್ಯ (40) ಪಾಚೆ (60) ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3wwur5B