'ಮೂವರ ಆಶಿರ್ವಾದ ಸಿಕ್ಕಿದೆ' ಕೊಹ್ಲಿ, ಮ್ಯಾಕ್ಸ್‌ವೆಲ್‌, ಎಬಿಡಿ ವಿಕೆಟ್‌ ಕಿತ್ತಿದ್ದೇಗೆಂದು ತಿಳಿಸಿದ ಹರ್ಪೀತ್!

ಅಹ್ಮದಾಬಾದ್‌: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯರ್ಸ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ 'ಆಶಿರ್ವಾದ' ಲಭಿಸಿದೆ ಎಂದು ತಂಡದ ಆಲ್‌ರೌಂಡರ್‌ ಹರ್ಪೀತ್‌ ಬ್ರಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ 34 ರನ್‌ಗಳ ಪಂಜಾಬ್‌ ಕಿಂಗ್ಸ್ ಗೆಲುವಿನಲ್ಲಿ ಹಾಗೂ ಕ್ರಿಸ್‌ ಗೇಲ್‌ ಬ್ಯಾಟಿಂಗ್‌ನಲ್ಲಿ ನೆರವಾದರೆ, ಹಾಗೂ ರವಿ ಬಿಷ್ಣೋಯ್‌ ಬೌಲಿಂಗ್‌ನಲ್ಲಿ ನೆರವಾಗಿದ್ದರು. ಆ ಮೂಲಕ ಪಂಜಾಬ್‌ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ5ನೇ ಸ್ಥಾನಕ್ಕೇರಿತು. ಡೆತ್‌ ಓವರ್‌ಗಳಲ್ಲಿ ಕೆ.ಎಲ್‌ ರಾಹುಲ್ ಜೊತೆ ಸ್ಪೋಟಕ ಬ್ಯಾಟಿಂಗ್‌ ಮಾಡಿದ್ದ ಹರ್ಪೀತ್‌ ಬ್ರಾರ್‌ ಬೌಲಿಂಗ್‌ನಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದರು. ಆರ್‌ಸಿಬಿ ತಂಡದ ಆಧಾರ ಸ್ಥಂಭಗಳಾದ ನಾಯಕ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯರ್ಸ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಪೀತ್‌ ಬ್ರಾರ್‌, "ಬ್ಯಾಟ್ಸ್‌ಮನ್‌ಗಳಿಗೆ ಸ್ವಲ್ಪ ಅಗಲವಾಗಿ ಬೌಲಿಂಗ್‌ ಮಾಡಿ ಅವರನ್ನು ಆಡುವಂತೆ ಪ್ರೇರೇಪಿಸುವುದು ನನ್ನ ಯೋಜನೆಯಾಗಿತ್ತು. ಈ ಕಾರಣದಿಂದಾಗಿಯೇ ಒಂದು ಸ್ಲಿಪ್‌ ಒಂದು ಕವರ್‌ ಫೀಲ್ಡರ್‌ ಅನ್ನು ನಿಲ್ಲಿಸಿಕೊಂಡಿದ್ದೆ. ನನ್ನ ಉದ್ದೇಶ ಡಾಟ್ ಬಾಲ್‌ಗಳನ್ನು ಹಾಕುವುದಾಗಿತ್ತು. ಆದರೆ, ಇಲ್ಲಿ ವಿಕೆಟ್‌ಗಳನ್ನು ಪಡೆದಿರುವುದು ಆಶಿರ್ವಾದ," ಎಂದು ಸಂತಸ ವ್ಯಕ್ತಪಡಿಸಿದರು. 2021ರ ಆವೃತ್ತಿಯ ಟೂರ್ನಿಯಲ್ಲಿ ಹರ್ಪೀತ್‌ ಬ್ರಾರ್‌ಗೆ ಪಾಲಿಗೆ ಶುಕ್ರವಾರ ಮೊದಲನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ನಾನು ಸ್ವತಂತ್ರವಾಗಿ ಆಡಲು ಬಯಸಿದ್ದೆ ಎಂದು ಹೇಳಿದ ಬ್ರಾರ್‌, ಆರಂಭಿಕ ಪಂದ್ಯಗಳಲ್ಲಿ ಬೆಂಚ್‌ ಕಾಯುತ್ತಿದ್ದರಿಂದ ಯಾವುದೇ ಬೇಸರವಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದರು. "ಒತ್ತಡ ಸದಾ ಇತ್ತು. ಆದರೆ ಅದಕ್ಕೆ ತಕ್ಕಂತೆ ನಾನು ತಯಾರಿ ನಡೆಸಿದ್ದೆ. ಇದಕ್ಕೂ ಮುನ್ನ ಈ ತರಹದ ಒತ್ತಡಗಳಲ್ಲಿ ಆಡಿದ್ದೇನೆ. ನೀವು ಉತ್ತಮ ಪ್ರದರ್ಶನ ತೋರದೇ ಇದ್ದಲ್ಲಿ ಒತ್ತಡ ಇದ್ದೇ ಇರುತ್ತದೆ. ಈ ವೇಳೆ ನಾನು ಮುಕ್ತವಾಗಿ ಆಡಿ ತಂಡದ ಗೆಲುವಿಗೆ ನೆರವಾಗಬೇಕೆಂದು ಅಂದುಕೊಂಡಿದ್ದೆ. ಇದನ್ನು ಬಿಟ್ಟು ಬೇರೆ ಯಾವುದರ ಬಗ್ಗೆ ನಾನು ಯೋಚನೆ ಮಾಡಲಿಲ್ಲ. ಉತ್ತಮ ಪ್ರದರ್ಶನ ತೋರಬೇಕೆಂಬುದು ಮಾತ್ರ ನನ್ನ ತಲೆಯಲ್ಲಿತ್ತು," ಎಂದು ಹಪ್ರೀತ್‌ ಬ್ರಾರ್ ಹೇಳಿದರು. "ತವರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಆದರೆ, ಬೆಂಚ್‌ ಕಾಯುತ್ತಿದ್ದ ವೇಳೆ ಅವಕಾಶ ಸಿಕ್ಕಾಗ ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದೆ," ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬ್ರಾರ್ ತಿಳಿಸಿದರು. ಆರ್‌ಸಿಬಿ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲ ಐದನೇ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ಸೋಮವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aTqej1

‘ಕಾರ್ಮಿಕರಿದ್ದರೆ ಮಾಲೀಕರಾಗೋದು, ಕಾರ್ಮಿಕರ ಶೋಷಣೆ ಕೊನೆಗೊಳ್ಳಲಿ’; ಕಾರ್ಮಿಕರ ದಿನಾಚರಣೆಯ ಶುಭಕೋರಿದ ಎಚ್‌ಡಿಕೆ

ಬೆಂಗಳೂರು: ಇಂದು ದೇಶದೆಲ್ಲೆಡೆ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗ್ತಿದೆ. ವಿವಿಧ ಸ್ತರಗಳಲ್ಲಿ ದುಡಿದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಮಿಕ ವರ್ಗಕ್ಕೆ ಮಾಜಿ ಮುಖ್ಯಮಂತ್ರಿ ಶುಭಾಶಯ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಉಣ್ಣುವ ಕೈಗಳಿಗೆ, ಮನೆಗಳ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯುವ ಕೈಗಳೇ ಆಧಾರ. ಅಂತಹ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ. ಅಲ್ಲದೇ, ಕಾರ್ಮಿಕರಿದ್ದರೆ ಮಾಲೀಕರಾಗೋದು, ಮಾಲೀಕ ಕಾರ್ಮಿಕ ಇಬ್ಬರೂ ಪರಸ್ಪರ ಪೂರಕವಾಗಿರಬೇಕು ಹಾಗಾಗಿ ಕೊನೆಗೊಳ್ಳಲಿ. ಕೊರೊನಾ ಕಗ್ಗತ್ತಲು ಕಳೆದು ಕಾರ್ಮಿಕರ ಬಾಳಲ್ಲಿ ಹೊಸಬೆಳಕು ಮೂಡಲಿ. ಎಲ್ಲರ ಬದುಕು ಹಸನಾಗಲಿ. ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


from India & World News in Kannada | VK Polls https://ift.tt/3t91j1l

ಗುಜರಾತ್​ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 18 ಕೊರೊನಾ ರೋಗಿಗಳು ದುರ್ಮರಣ!

ಗುಜರಾತ್: ದೇಶದಲ್ಲಿ ಕೊರೊನಾ ವೈರಸ್‌ಗೆ ಜನರು ಬಲಿಯಾಗುತ್ತಿರುವ ಮಧ್ಯೆಯೇ ಇತರೆ ಅವಘಡಗಳಿಂದಲೂ ಸಾವು-ನೋವು ಸಂಭವಿಸುತ್ತಿರುವ ಘಟನೆ ದೇಶದಲ್ಲಿ ಮರುಕಳಿಸುತ್ತಿದೆ. ಭಾರತದಲ್ಲಿ ಬೆಂಕಿ ಅವಘಡದ ಘಟನೆಗಳು ಮುಂದುವರಿದಿದ್ದು, ಇದೀಗ ಗುಜರಾತ್‌ನ ಭರೂಚ್ ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿ 18 ಮಂದಿ ಕೊರೊನಾ ರೋಗಿಗಳು ಸಾವನಪ್ಪಿದ್ದಾರೆ. ಗುಜರಾತ್‌ನ ಬರೂಚ್ ನಗರದಲ್ಲಿರುವ ವೆಲ್ಫೇರ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ನಾಲ್ಕು ಮಹಡಿಯ ವೆಲ್ಫೇರ್ ಆಸ್ಪತ್ರೆಯಲ್ಲಿ ಶನಿವಾರ ನಸುಕಿನ ಜಾವ ಸುಮಾರು 1 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹಬ್ಬಿದೆ. ಈ ವೇಳೆ ಒಟ್ಟು 50 ಮಂದಿ ಕೊರೊನಾ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ 12 ಮಂದಿ ಕೆಲವರು ಉಸಿರುಗಟ್ಟಿ ಸತ್ತರೆ, ಕೆಲವರು ಸ್ಥಳದಲ್ಲೇ ಸಜೀವದಹವನಾಗಿದ್ದಾರೆ. ಇನ್ನು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಬಂದು ಇತರ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಕಾಪಾಡಿದ್ದಾರೆ. ಕೆಲವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬೆಂಕಿಯಿಂದ ಗಾಯಗೊಂಡಿದ್ದ ಕೆಲವರ ಪೈಕಿ ಆರು ಮಂದಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ಮೂಲಕ ಬೆಂಕಿ ಅವಘಡದಲ್ಲಿ ಒಟ್ಟು 18 ಮಂದಿ ಕೊರೊನಾ ರೋಗಿಗಳು ದುರ್ಮರಣ ಹೊಂದಿದಂತೆ ಆಗಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೆಲ್ಫೇರ್ ಆಸ್ಪತ್ರೆ ಬರೂಚ್-ಜಂಬುಸರ್ ಹೆದ್ದಾರಿಯಲ್ಲಿದ್ದು ರಾಜ್ಯದ ರಾಜಧಾನಿ ಅಹಮದಾಬಾದ್ ನಿಂದ 190 ಕಿಲೋ ಮೀಟರ್ ದೂರದಲ್ಲಿದೆ. ಇನ್ನು ಜಿಲ್ಲಾಡಳಿತ ಈ ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದೆ. ಕಳೆದ ಒಂದು ವರ್ಷದಿಂದ ಈ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿತ್ತು. ಐಸಿಯುನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಉಂಟಾಗಿದೆ ಎಂದು ಭಾವಿಸಲಾಗಿದೆ. ಸುಮಾರು 40 ಆಂಬ್ಯುಲೆನ್ಸ್ಗಳು ಕೂಡಲೇ ಸ್ಥಳಕ್ಕೆ ತೆರಳಿ ಜನರನ್ನು ರಕ್ಷಿಸಲು ಮತ್ತು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸಹಕರಿಸಿದವು. ಸುಮಾರು ಒಂದು ಗಂಟೆಯ ಸತತ ಪ್ರಯತ್ನದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬೆಂಕಿ ಅವಘಡ ಸಂಭವಿಸಿ 13 ಮಂದಿ ಸಾವನಪ್ಪಿದ್ದರು.


from India & World News in Kannada | VK Polls https://ift.tt/3uaXc5V

ಮಂಗಳೂರು ಏರ್‌ಪೋರ್ಟ್‌ ಪಾರ್ಕಿಂಗ್ ಶುಲ್ಕ ಎರಡು ಪಟ್ಟು ಹೆಚ್ಚಳ! ಅದಾನಿ ಸಂಸ್ಥೆ ವಿರುದ್ಧ ವಾಹನ ಮಾಲೀಕರ ಆಕ್ರೋಶ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ಆವರಣದಲ್ಲಿ ವಾಹನ ಪಾರ್ಕಿಂಗ್‌ಗೆ ವಿಧಿಸುತ್ತಿದ್ದ ಶುಲ್ಕವನ್ನು ವಿಮಾನ ನಿಲ್ದಾಣ ಗುತ್ತಿಗೆ ವಹಿಸಿಕೊಂಡಿರುವ ಪರಿಷ್ಕರಿಸಿದ್ದು, ವಾಹನ ಮಾಲೀಕರಿಗೆ ದುಬಾರಿಯಾಗಿ ಪರಿಣಮಿಸಲಿದೆ. ಮೇ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ಪಾರ್ಕಿಂಗ್‌ ಶುಲ್ಕ ಜಾರಿಗೆ ಬರಲಿದ್ದು, ಈ ಬಗ್ಗೆ ಏರ್‌ಪೋರ್ಟ್‌ ಪಾರ್ಕಿಂಗ್‌ ಜಾಗದಲ್ಲಿ ಪರಿಷ್ಕರಿಸಲಾದ ಶುಲ್ಕದ ಬೋರ್ಡ್‌ ಅಳವಡಿಸಲಾಗಿದೆ. ಕೋವಿಡ್‌ 19 ಸಂಕಷ್ಟದ ಕಾಲದಲ್ಲಿ ವಿಮಾನ ನಿಲ್ದಾಣದಲ್ಲಿ ದಿಢೀರ್‌ ಪಾರ್ಕಿಂಗ್‌ ಶುಲ್ಕ ಏರಿಸಿರುವುದಕ್ಕೆ ಟ್ಯಾಕ್ಸಿ ಸಹಿತ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಕೋಚ್‌ ಬಸ್‌, ಟ್ರಕ್‌ ಗಳಿಗೆ 30 ನಿಮಿಷಗಳ ವರೆಗೆ ವಿಧಿಸಲಾಗುತ್ತಿದ್ದ ಪಾರ್ಕಿಂಗ್‌ ಶುಲ್ಕವನ್ನು 300 ರೂ.ಗಳಿಗೆ ಮತ್ತು ಎರಡು ಗಂಟೆವರೆಗೆ ಪಾರ್ಕಿಂಗ್‌ಗೆ 500 ರೂ.ಗಳಿಗೂ ಏರಿಸಲಾಗಿದೆ. ಈ ಹಿಂದೆ ಇದು ಕೇವಲ 70 ರೂ. ಆಗಿತ್ತು. ಇನ್ನು ಮಿನಿ ಬಸ್‌, ಟೆಂಪೊಗಳಿಗೆ 200 ರೂ . ಗಳಿಗೆ ಏರಿಸಲಾಗಿದೆ. ಎರಡು ಗಂಟೆಯವರೆಗೆ ವಾಹನ ಪಾರ್ಕ್ ಮಾಡಿದರೆ 350 ರೂ . ಪಾವತಿಸಬೇಕು. ಈ ಮೊದಲು ಮಿನಿ ಬಸ್‌, ಟೆಂಪೊಗಳಿಗೆ ಕನಿಷ್ಠ ಶುಲ್ಕ 60 ರೂ. ಇತ್ತು. ಕಾರುಗಳಿಗೆ ಈ ಮೊದಲು ಅರ್ಧ ಗಂಟೆ ಅವಧಿಗೆ 20 ರೂ. ಶುಲ್ಕ ನಿಗದಿಪಡಿಸಲಾಗಿತ್ತು. ಆದರೆ ಈಗ 60 ರೂ. ನಿಗದಿಪಡಿಸಲಾಗಿದೆ. ಎರಡು ಗಂಟೆವರೆಗೆ ಆದರೆ 90 ರೂ. ಶುಲ್ಕ ಆಗುತ್ತದೆ. ಟ್ಯಾಕ್ಸಿ ಕಾರುಗಳಿಗೆ ಅರ್ಧ ಗಂಟೆ ವರೆಗೆ 90 ರೂ. ಹಾಗೂ ಎರಡು ಗಂಟೆ ವರೆಗೆ 150 ರೂ. ಶುಲ್ಕ ವಸೂಲಿ ಮಾಡಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಹಿಂದಿನ ದರ 15 ರೂ . ಗಳಿಂದ 20 ರೂ.ಗಳಿಗೆ ಏರಿಸಲಾಗಿದೆ. ಅದೇ ರೀತಿ 24 ಗಂಟೆಗಳ ವಾಹನ ನಿಲುಗಡೆಗೆ ಗರಿಷ್ಠ ಪ್ರಮಾಣದ ಶುಲ್ಕ ಏರಿಕೆ ಮಾಡಲಾಗಿದೆ. ವಿಮಾನದ ಆಹಾರ ಪೂರೈಸುವ ಹೋಟೆಲ್‌ ವಾಹನಗಳಿಗೆ, ವಿಮಾನಯಾನ ಸಂಸ್ಥೆಗಳ ವಾಹನಗಳಿಗೆ ಹಾಗೂ ಏರ್‌ಪೋರ್ಟ್‌ನಲ್ಲಿ ಖಾಸಗಿ ಮಳಿಗೆಗಳಲ್ಲಿ ಉದ್ಯೋಗ ಮಾಡುವವರಿಗೆ ತಿಂಗಳ ಶುಲ್ಕದ ನಿಗದಿಪಡಿಸಲಾಗಿದೆ. ವಾಹನ ನಿಲುಗಡೆ ನಿಯಮಗಳ ಉಲ್ಲಂಘನೆಗೆ ಪ್ರತ್ಯೇಕವಾದ ದಂಡ ವಸೂಲಾತಿಯ ಬಗ್ಗೆಯೂ ಸೂಚನಾ ಫಲಕದಲ್ಲಿ ತಿಳಿಸಲಾಗಿದೆ. ಈ ದಂಡ ಕೋಚ್‌ ಬಸ್‌ , ಟೆಂಪೊ, ಕಾರುಗಳಿಗೆ 500 ರೂ., ದ್ವಿಚಕ್ರ ವಾಹನಗಳಿಗೆ 250 ರೂ .ಎಂದು ನಿಗದಿಪಡಿಸಲಾಗಿದೆ.


from India & World News in Kannada | VK Polls https://ift.tt/3eO4OVw

RCB vs PBKS: ಪಂಜಾಬ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಮೂರು ಕಾರಣಗಳು ಇಲ್ಲಿವೆ!

ಅಹ್ಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಖಾಮುಖಿ ದಾಖಲೆಯಲ್ಲಿ ಪಂಜಾಬ್ ಕಿಂಗ್ಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಶುಕ್ರವಾರ ಆರ್‌ಸಿಬಿ ವಿರುದ್ಧ ಗೆದ್ದ ಪಂಜಾಬ್‌ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನಕ್ಕೆರಿದೆ. ಇನ್ನು ಕೊಹ್ಲಿ ಪಡೆ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು.ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವಂತಾದ ಪಂಜಾಬ್‌ ಕಿಂಗ್ಸ ತಂಡ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡರೂ ಕ್ರೀಸ್‌ ಗೇಲ್‌ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಕೈಲ್‌ ಜೇಮಿಸನ್‌ ಓವರ್‌ನಲ್ಲಿ ಐದು ಬೌಂಡರಿಗಳನ್ನು ಸಿಡಿಸುವ ಮೂಲಕ ಯೂನಿವರ್ಸ್ ಬಾಸ್‌ ಎಲ್ಲರ ಗಮನ ಸೆಳೆದರು. ಇನ್ನು ಕೊನೆಯವರೆಗೂ ಕ್ರಿಸ್‌ನಲ್ಲಿ ಅಂಟಿಕೊಂಡು ಬ್ಯಾಟಿಂಗ್‌ ಮಾಡಿದ ಕೆ.ಎಲ್‌ ರಾಹುಲ್‌, ತಂಡ 179 ರನ್‌ ಕಲೆ ಹಾಕುವಲ್ಲಿ ಮಹತ್ವದ ಪಾತ್ರವಹಿಸಿದರು. ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪವರ್‌ಪ್ಲೇನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಪಂಜಾಬ್‌ ತಂಡದ ಯುವ ಸ್ಪಿನ್ನರ್‌ಗಳಾದ ಹರ್ಪೀತ್‌ ಬ್ರಾರ್‌ ಹಾಗೂ ರವಿ ಬಿಷ್ನೋಯ್ ಅವರು ಆರ್‌ಸಿಬಿ ತಂಡದ ಕೀ ಬ್ಯಾಟ್ಸ್‌ಮನ್‌ಗಳನ್ನು ಬಹುಬೇಗ ಔಟ್‌ ಮಾಡುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಒಟ್ಟಾರೆ, ಪಂಜಾಬ್‌ ಕಿಂಗ್ಸ್ ವಿರುದ್ಧ ಆರ್‌ಸಿಬಿ ಹೀನಾಯ ಸೋಲು ಅನುಭವಿಸಲು ಮೂರು ಕಾರಣಗಳನ್ನು ಇಲ್ಲಿ ನೋಡಬಹುದು.

ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 34 ರನ್‌ಗಳಿಂದ ಹೀನಾಯ ಸೋಲು ಅನುಭವಿಸಲು ಪ್ರಮುಖ ಮೂರು ಕಾರಣಗಳು ಇಲ್ಲಿವೆ.


RCB vs PBKS: ಪಂಜಾಬ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಮೂರು ಕಾರಣಗಳು ಇಲ್ಲಿವೆ!

ಅಹ್ಮದಾಬಾದ್‌:

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಖಾಮುಖಿ ದಾಖಲೆಯಲ್ಲಿ ಪಂಜಾಬ್ ಕಿಂಗ್ಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಶುಕ್ರವಾರ ಆರ್‌ಸಿಬಿ ವಿರುದ್ಧ ಗೆದ್ದ ಪಂಜಾಬ್‌ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನಕ್ಕೆರಿದೆ. ಇನ್ನು ಕೊಹ್ಲಿ ಪಡೆ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವಂತಾದ ಪಂಜಾಬ್‌ ಕಿಂಗ್ಸ ತಂಡ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡರೂ ಕ್ರೀಸ್‌ ಗೇಲ್‌ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಕೈಲ್‌ ಜೇಮಿಸನ್‌ ಓವರ್‌ನಲ್ಲಿ ಐದು ಬೌಂಡರಿಗಳನ್ನು ಸಿಡಿಸುವ ಮೂಲಕ ಯೂನಿವರ್ಸ್ ಬಾಸ್‌ ಎಲ್ಲರ ಗಮನ ಸೆಳೆದರು. ಇನ್ನು ಕೊನೆಯವರೆಗೂ ಕ್ರಿಸ್‌ನಲ್ಲಿ ಅಂಟಿಕೊಂಡು ಬ್ಯಾಟಿಂಗ್‌ ಮಾಡಿದ ಕೆ.ಎಲ್‌ ರಾಹುಲ್‌, ತಂಡ 179 ರನ್‌ ಕಲೆ ಹಾಕುವಲ್ಲಿ ಮಹತ್ವದ ಪಾತ್ರವಹಿಸಿದರು.

ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪವರ್‌ಪ್ಲೇನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಪಂಜಾಬ್‌ ತಂಡದ ಯುವ ಸ್ಪಿನ್ನರ್‌ಗಳಾದ ಹರ್ಪೀತ್‌ ಬ್ರಾರ್‌ ಹಾಗೂ ರವಿ ಬಿಷ್ನೋಯ್ ಅವರು ಆರ್‌ಸಿಬಿ ತಂಡದ ಕೀ ಬ್ಯಾಟ್ಸ್‌ಮನ್‌ಗಳನ್ನು ಬಹುಬೇಗ ಔಟ್‌ ಮಾಡುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಒಟ್ಟಾರೆ, ಪಂಜಾಬ್‌ ಕಿಂಗ್ಸ್ ವಿರುದ್ಧ ಆರ್‌ಸಿಬಿ ಹೀನಾಯ ಸೋಲು ಅನುಭವಿಸಲು ಮೂರು ಕಾರಣಗಳನ್ನು ಇಲ್ಲಿ ನೋಡಬಹುದು.



​ಫಾರ್ಮ್‌ ಕಳೆದುಕೊಳ್ಳುವ ಸೂಚನೆ ನೀಡುತ್ತಿರುವ ಪಟೇಲ್‌!
​ಫಾರ್ಮ್‌ ಕಳೆದುಕೊಳ್ಳುವ ಸೂಚನೆ ನೀಡುತ್ತಿರುವ ಪಟೇಲ್‌!

ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯ ಆರಂಭದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಲು ಬಹುದೊಡ್ಡ ಕಾರಣ ಎಂದರೆ, ಹರ್ಷಲ್ ಪಟೇಲ್‌ ಅವರ ಬೌಲಿಂಗ್ ಫಾರ್ಮ್‌. ಚೆನ್ನೈ ಪಂದ್ಯಗಳ ಡೆತ್‌ ಓವರ್‌ಗಳಲ್ಲಿನ ನಾಯಕ ವಿರಾಟ್ ಕೊಹ್ಲಿ ಯೋಜನೆಗಳನ್ನು ಹರ್ಷಲ್‌ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಅಲ್ಲದೆ, ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಪರ್ಪಲ್‌ ಕ್ಯಾಪ್‌ ಅನ್ನು ತನ್ನಲ್ಲಿ ಇರಿಸಿಕೊಂಡಿದ್ದಾರೆ.

ಆದರೆ, ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಎದುರು ಹರ್ಷಲ್‌ ಪಟೇಲ್‌ ಬೌಲಿಂಗ್‌ ಏನೂ ನಡೆಯಲಿಲ್ಲ. ಅಂದಿನ ಪಂದ್ಯದ ಕೊನೆಯ ಓವರ್‌ನಲ್ಲಿ ಅವರು 37 ರನ್‌ ಬಿಟ್ಟುಕೊಟ್ಟಿದ್ದರು. ಅದರಂತೆ ಶುಕ್ರವಾರ ಪಂಜಾಬ್‌ ಕಿಂಗ್ಸ್ ವಿರುದ್ಧ ಕೂಡ 4 ಓವರ್‌ಗಳಿಗೆ 53 ರನ್ ಬಿಟ್ಟುಕೊಟ್ಟಿದ್ದಾರೆ. ಆದರೆ, ಒಂದೇ ವಿಕೆಟ್‌ ಪಡೆಯದ ಹರ್ಷಲ್ ಆರ್‌ಸಿಬಿಗೆ ಭಾರಿ ನಿರಾಸೆ ಉಂಟುಮಾಡಿದರು.

ಪಂಜಾಬ್ Vs ಬೆಂಗಳೂರು ಸ್ಕೋರ್‌ಕಾರ್ಡ್



​ಮುಂದುವರಿದ ಆರ್‌ಸಿಬಿ ಅಗ್ರ ಕ್ರಮಾಂಕದ ವೈಫಲ್ಯ
​ಮುಂದುವರಿದ ಆರ್‌ಸಿಬಿ ಅಗ್ರ ಕ್ರಮಾಂಕದ ವೈಫಲ್ಯ

ರಾಜಸ್ಥಾನ್‌ ರಾಯಲ್ಸ್ ವಿರುದ್ಧ 10 ವಿಕೆಟ್‌ಗಳ ಗೆಲುವಿನಲ್ಲಿ ಅದ್ಭುತವಾಗಿ ಕಂಡಿದ್ದ ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿಯಿಂದ ಒಟ್ಟಾರೆ ಟೂರ್ನಿಯಲ್ಲಿ ಇನ್ನೂ ಸ್ಪರ್ಧಾತ್ಮಕ ಓಪನಿಂಗ್‌ ಜೊತೆಯಾಟ ಇನ್ನೂ ಮೂಡಿಬಂದಿಲ್ಲ. ವಿರಾಟ್‌ ಕೊಹ್ಲಿ ಓಪನಿಂಗ್‌ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಕ್ರಮಾಂಕದ ಸಮಸ್ಯೆ ಇನ್ನು ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ಶುಕ್ರವಾರದ ಪಂದ್ಯದಲ್ಲಿ ಪಡಿಕ್ಕಲ್‌ ಬಹುಬೇಗ ವಿಕೆಟ್‌ ಒಪ್ಪಿಸಿದ ಬಳಿಕ ನಾಯಕ ವಿರಾಟ್‌ ಕೊಹ್ಲಿ ಹಾಗೂ ರಜತ್ ಪಾಟಿದರ್‌ ಹೆಚ್ಚು-ಕಡಿಮೆ ತಂಡವನ್ನು ಗೆಲುವಿನ ಹಾದಿಗೆ ತಂದಿದ್ದರು. ಆದರೆ, ವಿರಾಟ್‌ ವಿಕೆಟ್‌ ಒಪ್ಪಿಸಿದ ಬಳಿಕ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅದರ ಮುಂದಿನ ಎಸೆತದಲ್ಲಿಯೇ ಕ್ಲೀನ್‌ ಬೌಲ್ಡ್ ಆದರು. ಎಬಿ ಡಿವಿಲಿಯರ್ಸ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಈ ಮೂರೂ ಪ್ರಮುಖ ವಿಕೆಟ್‌ಗಳನ್ನು ಹರ್ಪೀತ್‌ ಬ್ರಾರ್‌ ಉರುಳಿಸಿದರು.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಜತ್‌ ಪಾಟಿದರ್‌ ಮೂರನೇ ಕ್ರಮಾಂಕದಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನ ತೋರಬೇಕಾದರೆ, ವಿರಾಟ್‌ ಕೊಹ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಬ್ಯಾಟಿಂಗ್‌ ಮಾಡಬೇಕು.

ಪಂಜಾಬ್‌ ವಿರುದ್ಧ 34 ರನ್‌ಗಳ ಹೀನಾಯ ಸೋಲನುಭವಿಸಿದ ಆರ್‌ಸಿಬಿ!



ಹರ್ಪೀತ್ ಬ್ರಾರ್‌-ರವಿ ಬಿಷ್ಣೋಯ್‌ ಸ್ಪಿನ್‌ ದಾಳಿ
ಹರ್ಪೀತ್ ಬ್ರಾರ್‌-ರವಿ ಬಿಷ್ಣೋಯ್‌ ಸ್ಪಿನ್‌ ದಾಳಿ

ಪಂಜಾಬ್‌ ಕಿಂಗ್ಸ್ ಹಲವು ಮಹತ್ವದ ಬದಲಾವಣೆಯೊಂದಿಗೆ ಶುಕ್ರವಾರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕೆ ಇಳಿದಿತ್ತು. ಅದರಂತೆ ಹರ್ಪೀತ್‌ ಬ್ರಾರ್‌ ಅವರನ್ನು ಕರೆ ತಂದಿದ್ದು ರಾಹುಲ್‌ ಅವರ ಅತ್ಯುತ್ತಮ ನಿರ್ಧಾರ ಎಂದೇ ಹೇಳಬಹುದು. ಅದರಂತೆ ಹರ್ಪೀತ್‌ ಬ್ರಾರ್‌ ಬ್ಯಾಟಿಂಗ್‌ನಲ್ಲಿ ಮಿಂಚಿದರು. 17 ಎಸೆತಗಳಲ್ಲಿ 25 ರನ್‌ ಗಳಿಸಿ ಡೆತ್‌ ಓವರ್‌ಗಳಲ್ಲಿ ನಾಯಕನಿಗೆ ಅತ್ಯುತ್ತಮ ಬೆಂಬಲ ನೀಡಿದರು.

ಅದೇ ರೀತಿ ಬೌಲಿಂಗ್‌ನಲ್ಲಿಯೂ ಹರ್ಪೀತ್‌ ಬ್ರಾರ್‌ ಗುರುತರ ಪ್ರದರ್ಶನ ತೋರಿದರು. ರವಿ ಬಿಷ್ಣೋಯ್‌ ಹಾಗೂ ಹರ್ಪೀತ್‌ ಬ್ರಾರ್‌ ಸ್ಪಿನ್‌ ಜೋಡಿ 8 ಓವರ್‌ಗಳಿಗೆ 36 ರನ್‌ ನೀಡಿ ವಿರಾಟ್‌ ಸೇರಿದಂತೆ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಉರುಳಿಸಿತು. ಬ್ರಾರ್‌ ಮೂರು ವಿಕೆಟ್‌ ಕಬಳಿಸಿದರೆ, ಬಿಷ್ಣೋಯ್‌ ಎರಡು ವಿಕೆಟ್‌ಗಳನ್ನು ತಮ್ಮ ತೆಕ್ಕಗೆ ಹಾಕಿಕೊಂಡರು. ಈ ಜೋಡಿಯ ಸ್ಪಿನ್ ಮೋಡಿ ಕೂಡ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದು.

2021ರ ಐಪಿಎಲ್‌ ಅಂಕಪಟ್ಟಿ



​ಸಂಕ್ಷಿಪ್ತ ಸ್ಕೋರ್‌
​ಸಂಕ್ಷಿಪ್ತ ಸ್ಕೋರ್‌

ಪಂಜಾಬ್‌ ಕಿಂಗ್ಸ್‌:

20 ಓವರ್‌ಗಳಲ್ಲಿ 5 ವಿಕೆಟ್‌ಗೆ 179 ರನ್‌ (ಕೆಎಲ್‌ ರಾಹುಲ್ 91, ಕ್ರಿಸ್‌ ಗೇಲ್ 46, ಹರಪ್ರೀತ್‌ ಬ್ರಾರ್‌ 25*; ಕೈಲ್‌ ಜೇಮಿಸನ್ 32ಕ್ಕೆ 2, ಡೇನಿಯೆಲ್ ಸ್ಯಾಮ್ಸ್‌ 24ಕ್ಕೆ 1, ಯುಜ್ವೇಂದ್ರ ಚಹಲ್ 34ಕ್ಕೆ 1, ಶಹಬಾಝ್ ಅಹ್ಮದ್ 11ಕ್ಕೆ 1).

ರಾಯಲ್ ಚಾಲೆಂಜರ್ಸ್‌ ಬೆಂಗಳೂರು:

20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್‌ (ವಿರಾಟ್ ಕೊಹ್ಲಿ 35, ರಜತ್ ಪಾಟಿದಾರ್ 31, ಕೈಲ್ ಜೇಮಿಸನ್ 16, ಹರ್ಷಲ್ ಪಟೇಲ್ 31; ಹರಪ್ರೀತ್‌ ಬ್ರಾರ್ 19ಕ್ಕೆ 3, ರವಿ ಬಿಷ್ಣೋಯ್ 17ಕ್ಕೆ 2).

ಆರ್‌ಸಿಬಿ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲ ಐದನೇ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ಸೋಮವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿವೆ.

ಪಂಜಾಬ್‌ ವಿರುದ್ಧದ ಸೋಲಿಗೆ ಬೌಲರ್‌ಗಳ ತಪ್ಪೇ ಕಾರಣ ಎಂದ ಕೊಹ್ಲಿ!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/334GLwe

ಸರಕಾರಕ್ಕೆ ಶೇ.50ರಷ್ಟು ಬೆಡ್‌ ಕೊಡದೆ ಸುಳ್ಳು ಮಾಹಿತಿ ನೀಡಿದ ಬೆಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಎಫ್‌ಐಆರ್

ಬೆಂಗಳೂರು: ಆದೇಶದ ಅನುಸಾರ ಸರಕಾರಕ್ಕೆ ಶೇ.50ರಷ್ಟು ಬೆಡ್‌ ನೀಡದೆ ಹಾಗೂ ಬೆಡ್‌ ಕುರಿತು ಸುಳ್ಳು ಮಾಹಿತಿ ನೀಡಿದ ಕಸ್ತೂರಿನಗರದಲ್ಲಿರುವ ಆಡಳಿತ ಮಂಡಳಿ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಶೇ.50ರಷ್ಟು ಬೆಡ್‌ ನೀಡದ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಮತ್ತು ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪಿಪಿಇ ಕಿಟ್‌ ಧರಿಸಿ ಒಳಗೆ ಹೋಗಿ ದಾಖಲೆಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ42 ಬೆಡ್‌ ಇದ್ದರೂ, ಕಂಪ್ಯೂಟರ್‌ನಲ್ಲಿ36 ಬೆಡ್‌ ಇವೆ ಎಂದು ನಮೂದಿಸಲಾಗಿತ್ತು. ಈ ಮೂಲಕ ಆರು ಬೆಡ್‌ ಕುರಿತು ಮಾಹಿತಿ ಮರೆಮಾಚಲಾಗಿತ್ತು. ಒಟ್ಟು 42 ಬೆಡ್‌ ಪೈಕಿ ಶೇ.50 ಅಂದರೆ 21 ಬೆಡ್‌ ಬಿಬಿಎಂಪಿಗೆ ನೀಡಬೇಕಾಗಿತ್ತು. ಆದರೆ, ಕೇವಲ ನಾಲ್ವರು ರೋಗಿಗಳಿಗೆ ಮಾತ್ರ ಬೆಡ್‌ ನೀಡಲಾಗಿದೆ. ನಾಲ್ಕನೇ ಮಹಡಿಯಲ್ಲಿ ಕ್ಯಾಂಟೀನ್‌ ಇದೆ ಎಂದು ಆಸ್ಪತ್ರೆ ಸಿಇಒ ಗಂಗಾಧರ್‌ ಮಲ್ಲಪ್ಪ ತಿಳಿಸಿದ್ದಾರೆ. ಪರಿಶೀಲಿಸಿದಾಗ ಅಲ್ಲಿಯೂ ನಾಲ್ಕು ಬೆಡ್‌ ಹಾಕಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿಆಸ್ಪತ್ರೆ ಸಿಇಒ ಮತ್ತು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಬಿಎಂಪಿಯಿಂದ ಶಿಫಾರಸು ಮಾಡುವ ರೋಗಿಗಳಿಗೆ ಪ್ರವೇಶ ನೀಡುವವರೆಗೆ ಖಾಸಗಿ ರೋಗಿಗಳು ದಾಖಲಾಗಲು ಅವಕಾಶ ನೀಡುವುದಿಲ್ಲಎಂದು ನೋಡಲ್‌ ಅಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.


from India & World News in Kannada | VK Polls https://ift.tt/3vzaUA8

ಜೂನ್‌ನಲ್ಲಿ ಸೋಂಕು ಕಡಿಮೆಯಾಗುವ ಸಾಧ್ಯತೆ, 2ನೇ ಅಲೆಯಲ್ಲಿ ಹರಡುವಿಕೆ ಪ್ರಮಾಣ ನಾಲ್ಕು ಪಟ್ಟು ಹೆಚ್ಚು: ಡಾ. ಮಂಜುನಾಥ್‌

ಬೆಂಗಳೂರು: ಜೂನ್‌ ವೇಳೆಗೆ ಕೊರೊನಾ ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಮಾಸ್ಕ್‌ ಧರಿಸುವುದು, ವೈಯಕ್ತಿಕವಾಗಿ ಅಂತರ ಕಾಪಾಡಿಕೊಳ್ಳುವದನ್ನು ಮರೆಯಬಾರದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ವರ್ಚುವಲ್‌ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ''ಸೋಂಕು, ಜೂನ್‌ ನಂತರ ಕಡಿಮೆಯದರೂ ಡಿಸೆಂಬರ್‌ ತನಕ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಕೆಲವು ದೇಶಗಳಲ್ಲಿ ಸೋಂಕು ಕಡಿಮೆಯಾಗಿ ನಾಲ್ಕು ತಿಂಗಳ ನಂತರ ಮತ್ತೆ ಉಲ್ಬಣಗೊಂಡ ಉದಾಹರಣೆ ಇದೆ,'' ಎಂದರು. 2ನೇ ಅಲೆ ತೀವ್ರತೆ ಜಾಸ್ತಿ''ಅಮೆರಿಕ, ಬ್ರೆಜಿಲ್‌ ದೇಶವನ್ನು ಹಿಂದಿಕ್ಕಿ ಸೋಂಕಿತರ ಸಂಖ್ಯೆಯಲ್ಲಿ ಭಾರತ ದೇಶ ಮುಂದಿದೆ. ವೈದ್ಯರೇ ರೋಗಿಗಳಾಗುತ್ತಿದ್ದು, ಸೆಕ್ಯೂರಿಟಿಗಳೇ ನಮ್ಮ ಟೆಂಪರೇಚರ್‌ ಟೆಸ್ಟ್‌ ಮಾಡುವ ಪರಿಸ್ಥಿತಿಗೆ ಬದಲಾಗಿದೆ. ಕೋವಿಡ್‌ ಮೊದಲ ಅಲೆಗೂ ಹಾಗೂ 2ನೇ ಅಲೆಗೂ ಬಹಳಷ್ಟು ವ್ಯತ್ಯಾಸವಿದೆ. 2ನೇ ಅಲೆಯಲ್ಲಿ ಹರಡುವಿಕೆ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಇಷ್ಟು ಮಾತ್ರವಲ್ಲದೇ ಕಾಯಿಲೆ ತೀವ್ರತೆ ಕೂಡ ಜಾಸ್ತಿ ಇದೆ. ಹೀಗಾಗಿ ಮುನ್ನೆಚ್ಚರಿಕೆ ಅತ್ಯಗತ್ಯ,'' ಎಂದು ಹೇಳಿದರು. ಎನ್‌-95 ಮಾಸ್ಕ್‌ ಉತ್ತಮ! ''ಬಟ್ಟೆ ಮಾಸ್ಕ್‌ ಬದಲಿಗೆ ಎನ್‌95 ಮಾಸ್ಕ್‌ ಬಳಸುವುದು ಉತ್ತಮ. ಮಾಸ್ಕ್‌ ಹಾಕಿಕೊಳ್ಳುವುದರಿಂದ ಯಾವುದೇ ಆಕ್ಸಿಜನ್‌ ಲೆವಲ್‌ ಕಡಿಮೆಯಾಗುವುದಿಲ್ಲ. ಪತ್ರಕರ್ತರು ಕಡ್ಡಾಯವಾಗಿ ಎನ್‌-95 ಮಾಸ್ಕ್‌ ಅನ್ನೇ ಹಾಕಿ. ಬಟ್ಟೆ ಮಾಸ್ಕ್‌ ಬಳಸಿದರೂ ಪ್ರತಿ ದಿನ ರಾತ್ರಿ ಸ್ವಚ್ಛಗೊಳಿಸಿ, ಐರನ್‌ ಮಾಡಿ ಹಾಕಿಕೊಳ್ಳಿ ಆಗ ಸೋಂಕು ಬಿಸಿಗೆ ಸಾಯಬಹುದು,'' ಎಂದು ಅವರು ಹೇಳಿದರು. ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ''ಲಸಿಕೆ ನಂತರ ಕೊರೊನಾ ಬಂದರೆ ಎರಡು ಮೂರು ವಾರಗಳ ಕಾಲ ಲಸಿಕೆ ತೆಗೆದುಕೊಳ್ಳಬಾರದು. ಲಸಿಕೆ ತೆಗೆದುಕೊಂಡ ಮೇಲೂ ಕೊರೊನಾ ಬರಬಹುದು. ಲಸಿಕೆ ಹಾಕಿಸಿಕೊಂಡಾಗ ಗುಂಪು ಸೇರುವುದು, ನಿರ್ಲಕ್ಷ್ಯ ವಹಿಸಬಾರದು. ಮೊದಲ ಡೋಸ್‌ ನಂತರ ಸೋಂಕು ಬಂದರೆ ಎರಡು ಮೂರು ವಾರ ಕಳೆದ ನಂತರ ಲಸಿಕೆ ಹಾಕಿಸಿಕೊಳ್ಳಬಹುದು,'' ಎಂದು ಮಾಹಿತಿ ನೀಡಿದರು.


from India & World News in Kannada | VK Polls https://ift.tt/3h05xFM

ಆರ್‌ಸಿಬಿಗೆ ಆಘಾತ ನೀಡಲು ಈ ಆಟಗಾರನನ್ನು ಕರೆ ತರಲಾಯಿತೆಂದ ರಾಹುಲ್‌!

ಅಹ್ಮದಾಬಾದ್‌: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 34 ರನ್‌ಗಳ ಗೆಲುವು ಗಳಿಸಿದ ಬಳಿಕ ನಾಯಕ , ಸಹ ಆಟಗಾರ ಅವರನ್ನು ಶ್ಲಾಘಿಸಿದರು ಹಾಗೂ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ ಈ ವಯಸ್ಸಿನಲ್ಲಿಯೂ ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆಂದು ಹೇಳಿದರು. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕೆಎಲ್‌ ರಾಹುಲ್‌ ಹಾಗೂ ಕ್ರಿಸ್‌ ಗೇಲ್‌ ಬ್ಯಾಟಿಂಗ್‌ ಹಾಗೂ ಹರ್ಪೀತ್‌ ಬ್ರಾರ್‌ ಮತ್ತು ರವಿ ಬಿಷ್ಣೋಯ್‌ ಅವರ ಸ್ಪಿನ್‌ ಮೋಡಿಯಿಂದ ಪಂಜಾಬ್‌ ಕಿಂಗ್ಸ್ 2021ರ ಆವೃತ್ತಿಯ ಟೂರ್ನಿಯಲ್ಲಿ ಮೂರನೇ ಗೆಲುವು ಪಡೆಯಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಂಜಾಬ್‌ ಕಿಂಗ್ಸ್ ತಂಡ ಕ್ರಿಸ್‌ ಗೇಲ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಪವರ್‌ಪ್ಲೇನಲ್ಲಿ 49 ರನ್‌ ಗಳಿಸಿ ಉತ್ತಮ ಆರಂಭವನ್ನು ಕಂಡಿತು. ಅದರಲ್ಲೂ ಕೈಲ್ ಜೇಮಿಸನ್‌ ಓವರ್‌ಗೆ ಗೇಲ್‌ 5 ಬೌಂಡರಿ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು. "ಕ್ರಿಸ್‌ ಗೇಲ್‌ ಬಗ್ಗೆ ಸಾಕಷ್ಟು ಬರೆಯುವುದಿದೆ, ವಯಸ್ಸು ಎಷ್ಟೇ ಆಗಿದ್ದರೂ ಅವರು ಇನ್ನೂ ಕ್ರಿಕೆಟ್‌ ಆಡುತ್ತಿದ್ದಾರೆ. ಆದರೆ, ಕ್ರಿಸ್‌ ಗೇಲ್‌ ಕ್ರೀಸ್‌ಗೆ ಬಂದಾಗ ಎಷ್ಟೊಂದು ಅಂಶಗಳು ಪ್ರಭಾವ ಬೀರುತ್ತವೆ ಎಂಬುದನ್ನು ಒಬ್ಬ ನಾಯಕನಾಗಿ ನಾನು ಅರಿತುಕೊಂಡಿದ್ದೇನೆ," ಎಂದು ರಾಹುಲ್‌ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಹೇಳಿದರು. "ಅವರ(ಗೇಲ್‌) ಜೊತೆ 6 ರಿಂದ 7 ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದೇನೆ ಹಾಗೂ ಅತ್ಯುತ್ತಮವಾಗಿ ಆಡುವುದನ್ನು ಮುಂದುವರಿಸುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರು ತಮ್ಮ ವೃತ್ತಿ ಜೀವನದಲ್ಲಿ ಎಂದೂ ಆಡಿಲ್ಲ. ಆದರೆ, ಈಗ ತಂಡಕ್ಕೋಸ್ಕರ ಅವರು ಖಂಡಿತಾ ಉತ್ತಮ ಪ್ರದರ್ಶನ ತೋರುತ್ತಾರೆ. ಆ ರೀತಿಯ ವ್ಯಕ್ತಿ ಕ್ರಿಸ್‌ ಗೇಲ್‌. ಅಗ್ರ ಕ್ರಮಾಂಕದಲ್ಲಿ ನನ್ನ ಮೇಲಿನ ಒತ್ತಡವನ್ನು ಅವರು ಪಡೆದುಕೊಳ್ಳುತ್ತಾರೆ," ಎಂದು ತಿಳಿಸಿದರು. ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 145 ರನ್‌ಗಳಿಗೆ ಸೀಮಿತವಾಯಿತು. ಪಂಜಾಬ್‌ ಕಿಂಗ್ಸ್ ಪರ ಹರ್ಪೀತ್‌ ಬ್ರಾರ್‌ ಹಾಗೂ ರವಿ ಬಿಷ್ಣೋಯ್‌ ಅತ್ಯುತ್ತಮ ಸ್ಪಿನ್‌ ಬೌಲಿಂಗ್‌ ಮಾಡಿ ತಂಡದ ಗೆಲುವಿಗೆ ನೆರವಾದರು. ಹರ್ಪೀತ್‌ ಬ್ರಾರ್‌ ನಾಯಕ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿವಿಲಿಯರ್ಸ್ ಸೇರಿ ಪ್ರಮುಖ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಇದು ಪಂದ್ಯದ ದಿಕ್ಕು ಸಂಪೂರ್ಣವಾಗಿ ಪಂಜಾಬ್‌ ಕಿಂಗ್ಸ್ ಪರ ತಿರುಗಿತು. "ನಾವು ಹರ್ಪೀತ್‌ ಬ್ರಾರ್‌ ಅವರನ್ನು ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ತಯಾರಿ ಮಾಡಿದ್ದೆವು. ಇಲ್ಲಿನ ಪಿಚ್‌ ಅದೇ ರೀತಿ ಇತ್ತು. ಹಾರ್ಡ್‌ ಲೆನ್ತ್‌ಗಳನ್ನು ಹಾಕುವ ಫಿಂಗರ್‌ ಸ್ಪಿನ್ನರ್‌ಗಳು ನಮಗೆ ಅಗತ್ಯವಿತ್ತು. ಅದರಂತೆ ಬ್ರಾರ್‌ ಅದ್ಭುತವಾಗಿ ಬೌಲಿಂಗ್‌ ಮಾಡಿದರು ಹಾಗೂ ಬ್ಯಾಟಿಂಗ್‌ ಕೂಡ ಡೆತ್‌ ಓವರ್‌ಗಳಲ್ಲಿ ಅತ್ಯುತ್ತಮವಾಗಿ ಮಾಡಿದ್ದಾರೆ," ಎಂದು ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಹರ್ಪೀತ್‌ ಬ್ರಾರ್‌ ಅವರನ್ನು ಗುಣಗಾನ ಮಾಡಿದರು. "ನಾನಿನ್ನೂ ಯುವ ಆಟಗಾರ. ಆದರೂ ಇಷ್ಟು ವರ್ಷಗಳ ಕಾಲ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಅನುಭವವನ್ನು ಎಲ್ಲಾ ಹುಡುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸನ್ನಿವೇಶ ಹಾಗೂ ಪರಿಸ್ಥಿತಿಗಳಿಗೆ ತಕ್ಕಂತೆ ನಮ್ಮಲ್ಲಿರುವ ಪ್ರತಿಭಾವಂತ ಆಟಗಾರರನ್ನು ತಯಾರಿ ಮಾಡಿಕೊಳ್ಳುತ್ತೇವೆ. ಮಧ್ಯಮ ಓವರ್‌ಗಳ ಒತ್ತಡದಲ್ಲಿ ಅವರು ಆಡಿದ ರೀತಿ, ನಾಯಕ ಹಾಗೂ ಸಹಾಯಕ ಸಿಬ್ಬಂದಿಗೆ ತುಂಬಾ ಖುಷಿಯಾಗಿದೆ," ಎಂದು ಹೇಳಿದರು. ಇನ್ನು ಪಂದ್ಯದಲ್ಲಿ 57 ಎಸೆತಗಳಲ್ಲಿ ಅಜೇಯ 91 ರನ್‌ ಸಿಡಿಸಿದ ಕೆ.ಎಲ್‌ ರಾಹುಲ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊನೆಯ ಮೂರು ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. "ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಆರ್‌ಸಿಬಿ ವಿರುದ್ಧ ಆಡಿದಾಗಲೆಲ್ಲಾ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ನಮಗಿರುತ್ತದೆ. ಆದ್ದರಿಂದ ಅದೇ ಮನಸ್ಸಿಲ್ಲಿ ಕಣಕ್ಕೆ ಇಳಿಯುತ್ತೇವೆ," ಎಂದರು. "ಮುಂಚೂಣಿಯಲ್ಲಿ ನಿಂತುಕೊಂಡು ತಂಡವನ್ನು ಮುನ್ನಡೆಸುವುದು ನನ್ನ ಪಾಲಿಗೆ ತುಂಬಾ ಮುಖ್ಯವಾಗಿದೆ. ಹಾಗಾಗಿ ಪ್ರತಿಯೊಂದು ಪಂದ್ಯ ನನಗೆ ಮಹತ್ವದಾಗಿದೆ. ನನಗೆ ಅವಕಾಶ ಸಿಕ್ಕಾಗ ಬೌಲರ್‌ಗಳ ಒತ್ತಡ ಹೇರಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಒಂದು ಉತ್ತಮ ಗುರಿಯನ್ನು ನೀಡಲು ಪ್ರಯತ್ನಿಸುತ್ತೇನೆ. ಅದೇ ರೀತಿ ಇವತ್ತು(ಶುಕ್ರವಾರ) ಮಾಡಿದ್ದೇನೆ," ಎಂದು ಕೆ.ಎಲ್‌ ರಾಹುಲ್‌ ಹೇಳಿದರು. ಆರ್‌ಸಿಬಿ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3t6EgnF

ಎಸ್ಕೇಪ್ ಆಗಿರೋ ಕೊರೊನಾ ಸೋಂಕಿತರೇ ಎಚ್ಚರ, ಪೊಲೀಸರೇ ನಿಮ್ಮನ್ನು ಹುಡ್ಕೊಂಡು ಬರ್ತಾರೆ!

ಬೆಂಗಳೂರು: ಕೋವಿಡ್‌ ಸೋಂಕು ಪರೀಕ್ಷೆಯ ವರದಿ ಪಾಸಿಟಿವ್‌ ಬಂದ ಬಳಿಕ ಫೋನ್‌ ಸ್ವಿಚ್‌ಆಫ್‌ ಮಾಡಿಕೊಂಡು ನಾಪತ್ತೆಯಾಗಿರುವವರನ್ನು ಪತ್ತೆ ಮಾಡಿ, ವಿಪತ್ತು ನಿರ್ವಹಣೆ ಕಾಯಿದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಎಚ್ಚರಿಸಿದ್ದಾರೆ. ಸೋಂಕಿತರಿಗೆ ಲಕ್ಷಣಗಳು ಇಲ್ಲದೇ ಇರಬಹುದು. ಆದರೆ, ಅವರು ಸೋಂಕನ್ನು ಮತ್ತೊಬ್ಬರಿಗೆ ಹರಡಿಸುವ ಸಾಧ್ಯತೆ ಇರುತ್ತದೆ. ಜವಾಬ್ದಾರಿಯುತವಾಗಿರಿ. ಸಹಕರಿಸಿ, ಮನೆಯಲ್ಲಿರಿ ಎಂದು ಡಿಜಿಪಿ ಪ್ರವೀಣ್‌ ಸೂದ್‌ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ. ಪತ್ತೆ ಹೇಗೆ? ಸೋಂಕಿತರು ನೀಡಿರುವ ವಿಳಾಸಗಳಿಗೆ ಭೇಟಿ, ನೆರೆ-ಹೊರೆಯವರ ವಿಚಾರಣೆ, ಮೊಬೈಲ್‌ ನಂಬರ್‌ಗಳಿಗೆ ಬಂದು ಹೋಗಿರುವ ಕರೆಗಳ ಆಧರಿಸಿ ಅವರ ಪರಿಚಿತರು, ಸ್ನೇಹಿತರು, ಸಂಬಂಧಿಕರನ್ನು ಸಂಪರ್ಕಿಸಿ ಸೋಂಕಿತರನ್ನು ಪತ್ತೆ ಮಾಡುವ ಪ್ರಯತ್ನಗಳು ಆರಂಭವಾಗಿವೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ. ಮೊದಲ ಅಲೆ ಸಂದರ್ಭದಲ್ಲಿ ಸೋಂಕಿತರ ಫೋನ್‌ ನಂಬರ್‌ ಟವರ್‌ ಲೊಕೇಶನ್‌ ಆಧರಿಸಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಪ್ರಯತ್ನಗಳು ನಡೆದಿದ್ದವು.


from India & World News in Kannada | VK Polls https://ift.tt/3gT5lbG

ದೇಶದಲ್ಲಿ ಕೋವಿಡ್‌ ಮಟ್ಟ ಹಾಕಲು ಮೂರು ಸೇನಾ ಪಡೆಗಳಿಗೆ ವಿಶೇಷ ಅಧಿಕಾರ ನೀಡಿದ ರಾಜನಾಥ್ ಸಿಂಗ್‌, ಏನು ಮಾಡಲಿದೆ?

ಹೊಸದಿಲ್ಲಿ: ಕೊರೊನಾ ಎರಡನೇ ಅಲೆಗೆ ದೇಶವೇ ತತ್ತರಿಸುತ್ತಿರುವ ಸಮಯದಲ್ಲಿ ಸೋಂಕಿತರ ಅಗತ್ಯಕ್ಕೆ ತಕ್ಕಂತೆ ಆಸ್ಪತ್ರೆಗಳ ನಿರ್ಮಾಣ, ಕ್ವಾರಂಟೈನ್‌ ಕೇಂದ್ರಗಳ ಸ್ಥಾಪನೆ, ವೈದ್ಯಕೀಯ ಸಾಧನಗಳ ಖರೀದಿಗಾಗಿ ಕೇಂದ್ರ ಸಶಸ್ತ್ರ ಪಡೆಗಳಿಗೆ ತುರ್ತು ಹಣಕಾಸು ಬಳಕೆಗೆ ವಿಶೇಷ ಅಧಿಕಾರವನ್ನು ಶುಕ್ರವಾರ ನೀಡಿದ್ದಾರೆ. ಟ್ವೀಟ್‌ ಮೂಲಕ ಇದನ್ನು ತಿಳಿಸಿದ ಅವರು, ವಿಶೇಷ ಅಧಿಕಾರ ನೀಡುವ ಅವಕಾಶ ಕಾನೂನಿನಲ್ಲಿ ಇದ್ದು, ಕೊರೊನಾ ಸಮರದಲ್ಲಿ ಭಾರತೀಯ ಸೇನಾ ಪಡೆಗಳು ದೇಶದ ಜನರಿಗೆ ಅಗತ್ಯ ನೆರವು ನೀಡಲು ಇದು ಸಹಾಯಕವಾಗಲಿದೆ. 50 ಲಕ್ಷ ರೂ.ವರೆಗೆ ಕೋರ್‌ ಕಮಾಂಡರ್‌ಗಳು ವೆಚ್ಚ ಮಾಡಬಹುದಾಗಿದೆ. ಇನ್ನು ವಿಭಾಗೀಯ ಕಮಾಂಡರ್‌ಗಳು ಮತ್ತು ತತ್ಸಮಾನ ಹುದ್ದೆಗಳವರು ಕೊರೊನಾ ನೆರವಿಗಾಗಿ ಪ್ರತಿ ಪ್ರಕರಣಕ್ಕೆ ಅಥವಾ ಯೋಜನೆಗೆ 20 ಲಕ್ಷ ರೂ.ವರೆಗೆ ವೆಚ್ಚ ಮಾಡುವ ಅಧಿಕಾರ ನೀಡಿದ್ದೇವೆ ಎಂದು ಸಿಂಗ್‌ ತಿಳಿಸಿದ್ದಾರೆ. 2021ರ ಜುಲೈವರೆಗೆ ಮಾತ್ರ ಈ ವಿಶೇಷ ಅಧಿಕಾರ ಜಾರಿಯಲ್ಲಿರಲಿದೆ. ನಂತರ ಪರಿಸ್ಥಿತಿಯನ್ನು ಗಮನಿಸಿ ಮುಂದುವರಿಸುವ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ. ಕಳೆದ ವಾರ ಸೇನಾಪಡೆಗಳ ವೈದ್ಯಾಧಿಕಾರಿಗಳಿಗೆ ಕೊರೊನಾ ಸೋಂಕಿತರಿಗೆ ತುರ್ತು ಸೇವೆ ಒದಗಿಸುವ ಅಧಿಕಾರ ನೀಡಲಾಗಿತ್ತು. ಕಳೆದ ಎರಡು ವರ್ಷಗಳ ಮುನ್ನ ಸಶಸ್ತ್ರ ಪಡೆಗಳಿಂದ ನಿವೃತ್ತಿ ಪಡೆದ ಎಲ್ಲ ವೈದ್ಯಕೀಯ ಸಿಬ್ಬಂದಿಯನ್ನು ಪಡೆಗೆ ವಾಪಸ್‌ ಕರೆಸಿಕೊಂಡು ಅಗತ್ಯ ವೈದ್ಯಕೀಯ ಸೇವೆಯ ಬೇಡಿಕೆ ಇರುವ ಕಡೆಗಳಿಗೆ ಹಾಗೂ ಅವರ ಸಿಬ್ಬಂದಿಯ ವಾಸದ ಹತ್ತಿರದಲ್ಲಿರುವ ಆಸ್ಪತ್ರೆಗಳಿಗೆ ಕಳುಹಿಸಿಕೊಡಲು ಕೂಡ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಈಗಾಗಲೇ ಮುಂದಾಗಿದ್ದಾರೆ.


from India & World News in Kannada | VK Polls https://ift.tt/3u4Alci

ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಸೋಂಕು: ಮತ್ತೆ ಶುರುವಾಯಿತು ಕಷಾಯ ಪ್ರೇಮ, ಗಿಡ ಮೂಲಿಕೆಗಳ ಮೊರೆ ಹೋದ ಜನ!

ಪುತ್ತೂರು: ಜ್ವರ, ಮೈಕೈ ನೋವು ಮುಂತಾದ ವ್ಯಾಧಿಗಳನ್ನು ಶಮನ ಮಾಡುವ ಶಕ್ತಿ ಹೊಂದಿರುವುದಲ್ಲದೆ ದೇಹ ಮತ್ತು ಮನಸ್ಸುಗಳಿಗೆ ಸಶಕ್ತ ಸ್ಥಿತಿ ಒದಗಿಸುವ ಶಕ್ತಿ ಇರುವ ಅಮೃತಬಳ್ಳಿಗೆ ಮತ್ತೆ ಬೇಡಿಕೆ ಕುದುರಿದೆ. ಕಳೆದ ವರ್ಷ ಕೊರೊನಾ ಕಾಣಿಸಿಕೊಂಡು, ಲಾಕ್‌ಡೌನ್‌ನೊಳಗೆ ಜನ ಬಂಧಿಯಾಗಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅಮೃತಬಳ್ಳಿ ಕುಡಿಯುವ ಪ್ರಕ್ರಿಯೆ ಆರಂಭಗೊಂಡಿತ್ತು. ಜ್ವರ ಬಂದಾಗ ಕೊರೊನಾ ಭಯದಿಂದಾಗಿ ಜನ ವೈದ್ಯರ ಬಳಿಗೆ ಹೋಗಲೂ ಭಯ ಪಡುತ್ತಿದ್ದ ಸಂದರ್ಭ ಮತ್ತು ಮೆಡಿಕಲ್‌ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಜ್ವರ, ಶೀತ, ಕೆಮ್ಮಿಗೆ ಔಷಧ ಕೊಡಬಾರದೆಂದು ಆದೇಶವಿದ್ದ ಸಂದರ್ಭ ಜನ ಪ್ರಕೃತಿದತ್ತ ಔಷಧದ ಕಡೆಗೆ ಗಮನ ಹರಿಸಿದ್ದರು. ಹಿಂದಿನ ಕಾಲದಲ್ಲಿ ಜ್ವರ, ಶೀತ, ಮೈಕೈ ನೋವು ಇತ್ಯಾದಿ ಬಾಧೆಗಳಿಗೆ ಜನ ಅಮೃತಬಳ್ಳಿಯ ದಂಟಿನ ಕಷಾಯ ಮಾಡಿ ಕುಡಿಯುತ್ತಿದ್ದುದು ಸರ್ವೇ ಸಾಮಾನ್ಯವಾಗಿದ್ದರೆ, ಆಧುನಿಕ ವೈದ್ಯಕೀಯ ಪದ್ಧತಿ ಬಲಗೊಳ್ಳುತ್ತಿದ್ದಂತೆ ಬಳ್ಳಿ, ಬೇರು ಮುಂತಾದ ಗಿಡ ಮೂಲಿಕೆಗಳ ಆಕರ್ಷಣೆ ಕಡಿಮೆಯಾಗಿತ್ತು. ಬಹುತೇಕ ಜನ ಕಷಾಯ ಮದ್ದನ್ನು ಮರೆತೇ ಬಿಟ್ಟಿದ್ದರು. ಕೊರೊನಾ ಇದನ್ನೆಲ್ಲಮತ್ತೆ ನೆನಪಿಸಿತ್ತು. ಪರಿಣಾಮವಾಗಿ, ಜಿಲ್ಲೆಯ ಸಾವಿರಾರು ಮನೆಗಳಲ್ಲಿ ಈ ಪ್ರಯೋಗ ನಡೆದಿತ್ತಲ್ಲದೆ, ಯಶಸ್ವಿಯೂ ಆಗಿತ್ತು. ಇನ್ನೇನು ಕೊರೊನಾ ಕಣ್ಮರೆಯಾಯಿತು ಎಂಬ ಸ್ಥಿತಿ ಗೋಚರಿಸುತ್ತಲೇ ಜನ ಕಷಾಯ ಮರೆತು ಮತ್ತೆ ಕ್ಲಿನಿಕ್‌ಗಳ ಮುಂದೆ ಕ್ಯೂ ನಿಲ್ಲುವ ಪರಿಪಾಠಕ್ಕೆ ಶರಣಾಗಿದ್ದರು. ಇದೀಗ ಮತ್ತೆ ಕೊರೊನಾ ಅಬ್ಬರಿಸುತ್ತಿದ್ದು, ಕಫ್ರ್ಯೂವಿನಿಂದಾಗಿ ಜನ ಮನೆಗಳಲ್ಲೇ ಬಂಧಿಯಾಗಿದ್ದಾರೆ. ಕೋವಿಡ್‌ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಮತ್ತೊಮ್ಮೆ ಜನ ಕಷಾಯಗಳತ್ತ ಮುಖ ಮಾಡಿದ್ದಾರೆ. ಮೂರ್ನಾಲ್ಕು ದಿನಗಳಿಂದ ಗ್ರಾಮಾಂತರ ಜನರು ನಾಟಿ ವೈದ್ಯಕೀಯದತ್ತ ಆಕರ್ಷಿತರಾಗುತ್ತಿದ್ದಾರೆ. ಕಳೆದ ವರ್ಷದ ಪ್ರಯೋಗ ಮತ್ತೆ ಜಾರಿಗೆ ಬಂದಿದೆ. ಮನೆ ಮನೆಗಳಲ್ಲೂಕಷಾಯ ಸದ್ದು ಮಾಡುತ್ತಿದೆ. ಯಾವೆಲ್ಲ ವಸ್ತುಗಳು ಸಾಮಾನ್ಯವಾಗಿ ಬಹುತೇಕ ಜನ ಅಮೃತಬಳ್ಳಿಯ ದಂಟನ್ನು ನೀರಲ್ಲಿ ಕುದಿಸಿ ಕುಡಿಯುತ್ತಿದ್ದಾರೆ. ಕೆಲವರು ನೆಲನೆಲ್ಲಿಯನ್ನೂ ಬಳಸುತ್ತಿದ್ದಾರೆ. ಈ ಕಷಾಯಕ್ಕೆ ತುಳಸಿ, ವೀಳ್ಯ, ಅರಿಶಿಣ, ಕಾಳುಮೆಣಸು, ನೀರುಳ್ಳಿ, ಜೀರಿಗೆ, ಕೊತ್ತಂಬರಿ, ಲಿಂಬೆ ಇತ್ಯಾದಿಗಳನ್ನು ಅಲ್ಪ ಪ್ರಮಾಣದಲ್ಲಿ ಸೇರಿಸಿ ಕಷಾಯ ತಯಾರಿಸುವ ಪರಿಪಾಠವೂ ಇದೆ. ಅತಿಯಾದರೆ ಅಮೃತವೂ ವಿಷಗಿಡಮೂಲಿಕೆಗಳ ಕಷಾಯ ಮಾಡುವಾಗ ನಿರ್ದಿಷ್ಟ ಪ್ರಮಾಣದಲ್ಲೇ ಸೇರಿಸಬೇಕು. ಪ್ರಕೃತಿದತ್ತ ವಸ್ತುಗಳು ಉತ್ತಮ ಎಂಬ ಕಾರಣಕ್ಕೆ ಅತಿಯಾಗಿ ಸೇರಿಸಿಕೊಳ್ಳಬಾರದು. ಅತಿಯಾಗಿ ಸೇವಿಸಲೂ ಬಾರದು. ಕಳೆದ ವರ್ಷ ಕಷಾಯ ಪ್ರೇಮ ಉಕ್ಕಿ ಹರಿದ ಕಾರಣ ದಿನನಿತ್ಯ ಧಾರಾಳವಾಗಿ ಕುಡಿದು ಅನೇಕರು ಸೊಂಟ ನೋವು, ಅತಿಯಾದ ಉಷ್ಣತೆ, ಬಾಯಿ ಹುಣ್ಣು, ಕಣ್ಣುರಿ, ಮಲಬದ್ಧತೆ ಸಮಸ್ಯೆಗಳಿಗೆ ತುತ್ತಾಗಿದ್ದರು. ಮಹಿಳೆಯರ ಋುತುಚಕ್ರದ ಮೇಲೂ ಅಡ್ಡ ಪರಿಣಾಮ ಬೀರಿದ್ದ ಬಗ್ಗೆ ವೈದ್ಯಕೀಯ ಜಗತ್ತಿಗೆ ಅರಿವಾಗಿತ್ತು. ಕಷಾಯ ಸೇವನೆ ತಪ್ಪಲ್ಲ. ಆದರೆ ಹಿತ, ಮಿತವಾಗಿ ಬಳಸಿ. ದಿನಗಟ್ಟಲೆ ನಿರಂತರ ಸೇವಿಸಬೇಡಿ, ಪ್ರಮಾಣದಲ್ಲೂನಿಯಮವಿರಲಿ. ಮಕ್ಕಳಿಗೆ ಕೊಡುವಾಗ ಇನ್ನಷ್ಟು ಎಚ್ಚರವಿರಲಿ ಎಂದು ಆರ್ಯುರ್ವೇದ ವೈದ್ಯರು ಎಚ್ಚರಿಸಿದ್ದರು.


from India & World News in Kannada | VK Polls https://ift.tt/3gXiErp

ಅಮ್ಮನ ಶವದ ಪಕ್ಕ 2 ದಿನ ಆಹಾರವಿಲ್ಲದೆ ಅನಾಥವಾಗಿದ್ದ 1.5 ವರ್ಷದ ಕಂದನಿಗೆ ಹಾಲುಣಿಸಿದ ಪೇದೆ

ಪುಣೆ: ಕೊರೊನಾ ಸಾಂಕ್ರಾಮಿಕ ಶತಮಾನದ ದುರಂತವೇ ಸರಿ. ಅದು ತಂದಿಟ್ಟ ಬಿಕ್ಕಟ್ಟು, ಯಾತನೆಗಳು ನೂರಾರು. ಎಲ್ಲಿ ತಮಗೆ ಸೋಂಕು ಅಂಟಿ ಬಿಡುತ್ತದೆಯೋ ಎಂಬ ಭಯ ಮಾನವೀಯತೆಯನ್ನೂ ಕೊಂದುಹಾಕಿಬಿಟ್ಟಿದೆ. ಹಾಗಂತ ಆಶಾವಾದ ಕಳೆದುಕೊಳ್ಳಬೇಕಿಲ್ಲ. ಏಕೆಂದರೆ ತಾಯಿಯ ಶವದ ಪಕ್ಕ ಎರಡು ದಿನ ಅನ್ನ, ಆಹಾರವಿಲ್ಲದೇ ಬಿದ್ದಿದ್ದ ಮಗುವನ್ನು ಯಾರೂ ಎತ್ತಿಕೊಳ್ಳಲು ಮುಂದೆ ಬರದ ಸಂದರ್ಭದಲ್ಲೂ ಅದನ್ನು ಎತ್ತಿಕೊಂಡು ಹಾಲು ಕುಡಿಸಿ, ಸಂತೈಸಿದ ಮಹಿಳಾ ಪೇದೆ ಸುಶೀಲಾ ಅವರಂಥ ಕರುಣಾಮಯಿಗಳು ಇನ್ನೂ ಇದ್ದಾರೆ ಎಂಬುದೇ ಸಮಾಧಾನ. ಕೆಲವು ದಿನಗಳ ಹಿಂದೆ ಪುಣೆಯ ಪಿಂಪ್ರಿ-ಚಿಂಚ್‌ವಾಡ ಪ್ರದೇಶದ ಮನೆಯೊಂದರಿಂದ ದುರ್ವಾಸನೆ ಬರುತ್ತಿತ್ತು. ಬಾಗಿಲು ಬಡಿದರೂ ಸದ್ದು ಕೇಳುತ್ತಿರಲಿಲ್ಲ. ಮನೆಯನ್ನು ಬಾಡಿಗೆಗೆ ನೀಡಿದ್ದ ಮಾಲೀಕ ಕೊನೆಗೆ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ಪೊಲೀಸರು ಬಂದು ನೋಡಿದಾಗ, ತಾಯಿಯ ಶವ ಪತ್ತೆಯಾಗಿತ್ತು. ಇದರ ಅರಿವಿಲ್ಲದಂತೆ 18 ತಿಂಗಳ ಮಗು ಎರಡು ದಿನಗಳಿಂದ ಅನ್ನ ಆಹಾರವಿಲ್ಲದೇ ಸುಸ್ತಾಗಿ ಮಲಗಿತ್ತು. ಅದು ಬದುಕಿದ್ದೇ ಅಚ್ಚರಿ. ದುರಂತವೆಂದರೆ ಮಗುವನ್ನು ಎತ್ತಿಕೊಳ್ಳಲು ನೆರೆಹೊರೆಯವರು ಒಬ್ಬರೂ ಬರಲಿಲ್ಲ. ಕೊರೊನಾ ಭಯ ಅಷ್ಟರಮಟ್ಟಿಗೆ ಅವರನ್ನು ಆವರಿಸಿಕೊಂಡುಬಿಟ್ಟಿದೆ. ಆದರೆ ಮಹಿಳಾ ಪೇದೆ ಸುಶೀಲಾ ಗಬಾಲೆ ಅವರಿಗೆ ಮನಸ್ಸು ತಡೆಯಲಿಲ್ಲ. ಕೂಡಲೇ ಮಗುವನ್ನು ಎತ್ತಿಕೊಂಡು ಹಾಲು ಕುಡಿಸಿದರು. ಬಿಸ್ಕತ್‌ ತಿನ್ನಿಸಿದರು. ನೀರು ಕುಡಿಸಿದರು. ಅವರ ಮಾನವೀಯತೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ನಾನೂ ಎರಡು ಮಕ್ಕಳ ತಾಯಿ. ನೋವು ಅರ್ಥವಾಗುತ್ತದೆ. ಹೀಗಾಗಿಯೇ ಸ್ಪಂದಿಸಿದೆ ಎನ್ನುತ್ತಾರೆ ಸುಶೀಲಾ. ಸದ್ಯ ಮಗುವಿಗೆ ಜ್ವರ ಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ. ಆರೋಗ್ಯವಾಗಿದೆ. ಕೊರೊನಾ ನೆಗೆಟಿವ್‌ ಬಂದಿದೆ. ಆದರೆ ಮಗುವಿನ ತಾಯಿ ಯಾವ ಕಾರಣಕ್ಕೆ ಮೃತಪಟ್ಟಿದ್ದಾಳೆ ಎಂಬುದು ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿಗೆ ಎದುರು ನೋಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮೃತಳ ಪತಿ ಉತ್ತರ ಪ್ರದೇಶಕ್ಕೆ ತೆರಳಿದ್ದು, ಅವರು ಬಂದ ಬಳಿಕವೇ ತನಿಖೆ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದರು.


from India & World News in Kannada | VK Polls https://ift.tt/2QKXl1B

ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಹಣದ ಅಬ್ಬರದ ನಡುವೆಯೂ ಗೌರವಯುತ ತೀರ್ಪು, ಎಚ್‌ಡಿಕೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಣದ ಅಬ್ಬರದ ನಡುವೆಯೂ ಗೌರವಯುತ ತೀರ್ಪು ನೀಡಿದ್ದೀರಿ ಎಂದು ಮತದಾರರಿಗೆ ಮಾಜಿ ಸಿಎಂ ಧನ್ಯವಾದ ಸಲ್ಲಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಣದ ಅಬ್ಬರ,ಜೆಡಿಎಸ್ ಪಕ್ಷದ ವಿರುದ್ಧ ಮಾಡಿದ ಅಪಪ್ರಚಾರಗಳ ನಡುವೆಯೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಕೈ ಹಿಡಿದ ಜನತೆ ಗೌರವಯುತ ತೀರ್ಪು ನೀಡಿರುವುದನ್ನು ಗೌರವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ, ಪುರಸಭೆ-ನಗರಸಭೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ ರಾಜ್ಯದ ಜನತೆಗೆ ನನ್ನ ಮನದಾಳದ ಕೃತಜ್ಞತೆಗಳು.ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ನಾಯಕರು, ಮುಖಂಡರು ಎಲ್ಲಕ್ಕೂ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೀದರ್ ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿಕಾಂಗ್ರೆಸ್- 14, ಬಿಜೆಪಿ- 8, ಜೆಡಿಎಸ್- 7, ಎಐಎಂಐಎಂ-2 ಹಾಗೂ ಆಮ್ ಆದ್ಮಿ ಪಾರ್ಟಿ- 01 ಸ್ಥಾನ ಗಳಿಸಿದೆ. ಚನ್ನಪಟ್ಟಣ. ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ 16, ಕಾಂಗ್ರೆಸ್ 7, ಬಿಜೆಪಿ 7, ಸ್ವತಂತ್ರ 1 ಸ್ಥಾನ ಗಳಿಸಿದ್ದಾರೆ. ಇನ್ನು ಮಡಿಕೇರಿ ನಗರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿ ಗೆಲುವು - 16, ಎಸ್.ಡಿ.ಪಿ.ಐ - 5, ಕಾಂಗ್ರೆಸ್ - 1 ಹಾಗೂ ಜೆಡಿಎಸ್ - 1 ಸ್ಥಾನಗಳನ್ನು ಗಳಿಸಿಕೊಂಡಿದೆ. ಗುಡಿಬಂಡೆ ಪ.ಪಂ ಚುನಾವಣೆ ಫಲಿತಾಂಶ ಕಾಂಗ್ರೆಸ್ 6, ಜೆಡಿಎಸ್ 2 ಹಾಗೂ ಪಕ್ಷೇತರ 3 ಸ್ಥಾನಗಳನ್ನು ಗಳಿಸಿಕೊಂಡಿದೆ. ಭದ್ರಾವತಿ ನಗರಸಭೆ ಚುನಾವಣೆ 34 ವಾರ್ಡ್ ಗಳಲ್ಲಿ ಕಾಂಗ್ರೆಸ್ - 18, ಜೆಡಿಎಸ್ - 11 ಹಾಗೂ ಬಿಜೆಪಿ - 4 ರಲ್ಲಿ ಜಯಭೇರಿ ಗಳಿಸಿದೆ.


from India & World News in Kannada | VK Polls https://ift.tt/3u6qGSp

'ನನ್ನ ವೃತ್ತಿ ಜೀವನದಲ್ಲಿಯೇ 6 ಬೌಂಡರಿ ಸಿಡಿಸಿಲ್ಲ' : ಹ್ಯಾಟ್ಸ್ ಆಫ್‌ ಪೃಥ್ವಿ ಶಾ ಎಂದ ವೀರು!

ಅಹ್ಮದಾಬಾದ್‌: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸತತ ಎರಡು ಪಂದ್ಯಗಳಲ್ಲಿ ಮೊಟ್ಟ ಮೊದಲ ಎಸೆತದಲ್ಲಿ ಫೋರ್‌ ಬಾರಿಸಿ ಇನಿಂಗ್ಸ್ ಆರಂಭಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಭಾರತ ತಂಡದ ಮಾಜಿ ಓಪನಿಂಗ್‌ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಅವರನ್ನು ನೆನಪಿಸಿದರು. ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಕಳೆದ ಪಂದ್ಯದಲ್ಲಿಯೂ ಪೃಥ್ವಿ ಶಾ ಸತತ ಮೂರು ಬೌಂಡರಿಗಳೊಂದಿಗೆ ತಮ್ಮ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಗುರುವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಶಿವಂ ಮಾವಿಗೆ ಆರು ಎಸೆತಗಳಿಗೆ ಸತತ ಆರು ಬೌಂಡರಿಗಳನ್ನು ಸಿಡಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿಯೇ ಅಜಿಂಕ್ಯ ರಹಾನೆ ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಭಾಜನರಾದರು. ಇನಿಂಗ್ಸ್ ಉದ್ದಕ್ಕೂ ಅದೇ ಲಯವನ್ನು ಮುಂದುವರಿಸಿದ ಪೃಥ್ವಿ ಶಾ ಕೇವಲ 18 ಎಸೆತಗಳಲ್ಲಿ ಪ್ರಸಕ್ತ ಆವೃತ್ತಿಯ ಅತ್ಯಂತ ವೇಗದ ಅರ್ಧಶತಕ ಪೂರೈಸಿದರು. ಅಂತಿಮವಾಗಿ 41 ಎಸೆತಗಳಲ್ಲಿ 82 ರನ್‌ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ 7 ವಿಕೆಟ್‌ಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು ಹಾಗೂ ಮ್ಯಾನ್ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದರು. ಪೃಥ್ವಿ ಶಾ ಸ್ಪೋಟಕ ಬ್ಯಾಟಿಂಗ್‌ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು. ನನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಓಪನಿಂಗ್‌ ಮಾಡಿದ ಎಲ್ಲಾ ಆರು ಎಸೆತಗಳನ್ನು ಹೊಡೆಯಬೇಕು ಎಂದು ಅಂದುಕೊಳ್ಳುತ್ತಿದ್ದೆ. ಆದರೆ, ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಪೃಥ್ವಿ ಶಾ ಆಡಿದ ರೀತಿ ನಾನು ಆಡಿಲ್ಲ ಎಂದು ಹೇಳಿದರು. "ಒವರ್‌ನ ಆರು ಎಸೆತಗಳನ್ನು ಗ್ಯಾಪ್‌ನಲ್ಲಿ ಆರು ಬೌಂಡರಿ ಹೊಡೆಯುವುದು ಸುಲಭವಲ್ಲ. ನನ್ನ ವೃತ್ತಿ ಜೀವನದಲ್ಲಿ ತುಂಬಾ ಸಲ ಓಪನಿಂಗ್‌ ಮಾಡಿದ್ದೇನೆ ಹಾಗೂ ಓವರ್‌ನ ಎಲ್ಲಾ ಎಸೆತಗಳನ್ನು ಹೊಡೆದಿದ್ದೇನೆ ಆದರೆ, 18 ರಿಂದ 20 ರನ್‌ ಮಾತ್ರ ಗಳಿಸಿದ್ದೇನೆ. ಆರು ಎಸೆತಗಳಿಗೆ ಆರು ಬೌಂಡರಿ ಅಥವಾ ಆರು ಸಿಕ್ಸರ್‌ ಸತತವಾಗಿ ಹೊಡೆದಿಲ್ಲ. ಈ ವಿಷಯದಲ್ಲಿ ಚೆಂಡು ಹಾಗೂ ಬ್ಯಾಟ್‌ ನಡುವೆ ಸಮಯ ಚೆನ್ನಾಗಿ ಇರಬೇಕು ಹಾಗೂ ಗ್ಯಾಪ್‌ಗಳನ್ನು ಪತ್ತೆ ಮಾಡಬೇಕು," ಎಂದು ಸೆಹ್ವಾಗ್‌ ಕ್ರಿಕ್‌ಬಝ್‌ಗೆ ತಿಳಿಸಿದರು. "ಪೃಥ್ವಿ ಶಾ ಬ್ಯಾಟಿಂಗ್‌ನಲ್ಲಿ ಅದ್ಭುತವಾಗಿದ್ದಾರೆ. ಅವರು ಕ್ರಿಕೆಟ್ ಪಂದ್ಯವನ್ನು ಆಡಲು ಬಂದಂತೆ ನನಗೆ ಕಾಣಿಸಲಿಲ್ಲ ಅಥವಾ 19 ವಯೋಮಿತಿ ತಂಡದ ಸಹ ಆಟಗಾರನಾಗಿದ್ದ ಶಿವಂ ಮಾವಿ ಬೌಲಿಂಗ್‌ ಚೆನ್ನಾಗಿ ತಿಳಿದಿದ್ದ ಕಾರಣ ಅವರಲ್ಲಿ ಅಪಾರವಾದ ವಿಶ್ವಾಸವಿತ್ತು ಎಂದು ಭಾವಿಸುತ್ತೇನೆ. ಆಶಿಸ್‌ ನೆಹ್ರಾಗೆ ಸುಮಾರು ಬಾರಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದೇನೆ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದೇನೆ. ಆದರೆ, ಆರು ಎಸೆತಗಳಲ್ಲಿ ಆರು ಬೌಂಡರಿಗಳನ್ನು ಸಿಡಿಸಲು ಸಾಧ್ಯವಾಗಲಿಲ್ಲ. ಅದ್ಭುತವಾದ ಇನಿಂಗ್ಸ್ ಆಡಿದ ಪೃಥ್ವಿ ಶಾಗೆ ಹ್ಯಾಟ್ಸ್‌ ಆಫ್‌ ಹೇಳಬೇಕು," ಎಂದು ಯುವ ಆಟಗಾರನನ್ನು ವೀರು ಶ್ಲಾಘಿಸಿದರು. ಕಳೆದ ಹಲವು ವರ್ಷಗಳಿಂದ ಏರಿಳಿತಗಳನ್ನು ಕಂಡಿರುವ ಪೃಥ್ವಿ ಶಾ ಶತಕ ಸಿಡಿಸಬೇಕಾಗಿತ್ತು ಎಂಬ ಮಾತನ್ನು ವಿರೇಂದ್ರ ಸೆಹ್ವಾಗ್ ಇದೇ ವೇಳೆ ತಿಳಿಸಿದರು. "ಶತಕ ಸಿಡಿಸಿದ್ದರೆ, ಅವರು ತುಂಬಾ ಉತ್ಸಕರಾಗಿರುತ್ತಿದ್ದರು. ತಮ್ಮ ವೃತ್ತಿ ಜೀವನದ ಕಠಿಣ ಸಮಯದಿಂದ ಈಗಾಗಲೇ ಾವರು ಹೊರ ಬಂದಿದ್ದಾರೆ. ಆದರೆ, ಈಗ ಅವರು ತೋರುತ್ತಿರುವ ಪ್ರದರ್ಶನದಿಂದ ಶತಕಗಳನ್ನು ಸಿಡಿಸಬೇಕು ಹಾಗೂ ಚೇಸಿಂಗ್‌ನಲ್ಲಿ ಅಜೇಯರಾಗಿ ಉಳಿಯಬೇಕು," ಎಂದು ಸೆಹ್ವಾಗ್‌ ಯುವ ಬ್ಯಾಟ್ಸ್‌ಮನ್‌ಗೆ ಸಲಹೆ ನೀಡಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3nzhl3e

ಕೋವಿಡ್‌ ಸಂಕಷ್ಟ: ಸೋಮವಾರ ಕಾಂಗ್ರೆಸ್ ಶಾಸಕರು, ಸಂಸದರ ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಂಕಷ್ಟ ತೀವ್ರಗೊಂಡ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅವರು ಸೋಮವಾರ ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖರ ಸಭೆಯನ್ನು ಕರೆದಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆ ಸಭೆ ನಡೆಯಲಿದ್ದು ವರ್ಚುವಲ್ ಮೂಲಕ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಬಿಜೆಪಿ ಸರ್ಕಾರದ ಲೋಪದೋಷಗಳು ಹಾಗೂ ಅದನ್ನು ಸರಿಪಡಿಸುವ ಬಗ್ಗೆ ಅನುಸರಸಬೇಕಾದ ಕ್ರಮಗಳನ್ನು ಮತ್ತು ರಾಜ್ಯದ ಸದ್ಯದ ವಾಸ್ತವ ಸ್ಥಿತಿಯ ಬಗ್ಗೆ ಚರ್ಚಿಸುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿದೆ. ವಿಧಾನಸಭೆ, ಪರಿಷತ್ ಸದಸ್ಯರು, ಲೋಕಸಭಾ ರಾಜ್ಯಸಭೆ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಯಾವ ರೀತಿಯಲ್ಲಿ ತರಾಟೆಗೆ ತೆಗೆದುಕೊಳ್ಳಬೇಕು ಹಾಗೂ ಯಾವುದೆಲ್ಲಾ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರವನ್ನು ಎಚ್ಚರಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದು, ಜ್ಯದಲ್ಲಿ ಈಗ ಲಾಕ್‍ಡೌನ್ ಹೇರಿಕೆ ಮಾಡಿರುವುದರಿಂದ ಈಗಾಗಲೇ ಬಸವಳಿದು ಹೋಗಿರುವ ದುಡಿಯುವ ವರ್ಗದ ಜನರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3t6cRT1

ಬೆಂಗಳೂರು: 'ಬೆಡ್‌ ಇದೆ 5 ನಿಮಿಷದಲ್ಲಿ ಬನ್ನಿ' ಕೊರೊನಾ ಸೋಂಕಿತೆ ಸಾವನಪ್ಪಿದ 8 ಗಂಟೆಗಳ ಬಳಿಕ ಆಸ್ಪತ್ರೆಯಿಂದ ಕರೆ!

ಬೆಂಗಳೂರು: ಸರಕಾರ ಹಾಗೂ ಬಿಬಿಎಂಪಿ ಬೆಂಗಳೂರಿನಲ್ಲಿ ಬೆಡ್‌ ಸಮಸ್ಯೆ ಇಲ್ಲ. ಕೊರೆತೆ ಇಲ್ಲ ಎನ್ನುವ ಹೇಳಿಕೆ ನೀಡುತ್ತಿರುವ ಮಧ್ಯೆಯೇ ಬೆಂಗಳೂರಿನಲ್ಲಿ ಯಾವ ರೀತಿ ಬೆಡ್‌ ಹಾಗೂ ಆಕ್ಸಿಜನ್‌ ಕೊರತೆ ಇದೆ ಎನ್ನುವುದಕ್ಕೆ ಮತ್ತೆ ಮತ್ತೆ ಪುರಾವೆಗಳು ಸಿಗುತ್ತಿದೆ. ಇದೀಗ ಕಮ್ಮಾನಹಳ್ಳಿ ಮಹಿಳೆಯೊಬ್ಬರು ಸರಿಯಾದ ಸಮಯಕ್ಕೆ ಬೆಡ್‌ ಹಾಗೂ ಚಿಕಿತ್ಸೆ ಸಿಗದೆ ಸಾವನಪ್ಪಿದ್ದಾರೆ. ಹೌದು, ಕಮ್ಮಾನಹಳ್ಳಿಯ ರೆಜಿನಾ ಎಂಬ ಮಹಿಳೆಗೆ ಮಂಗಳವಾರ ಕೊರೊನಾ ದೃಢಪಟ್ಟಿತ್ತು. ಲಕ್ಷಣಗಳಿದ್ದರೂ, ಯಾವುದೇ ತೀವ್ರ ತರದ ಸಮಸ್ಯೆ ಇರಲಿಲ್ಲ. ಈ ಹಿನ್ನೆಲೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮರು ದಿನ ರೆಜಿನಾ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಇದರಿಂದ ಕುಪಿತಗೊಂಡ ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆಸ್ಪತ್ರೆಗೆಳಿಗೆ ನಿರಂತರ ಕರೆ ಮಾಡಿ ವಿಚಾರಿಸಿದ್ದಾರೆ. ಅಲ್ಲದೇ ಸರಕಾರದ ಹೆಲ್ಪ್‌ ಸೆಂಟರ್‌ಗೂ ಕರೆ ಮಾಡಿದ್ದಾರೆ. ಆದರೆ ಒಂದು ದಿನ ಈ ರೀತಿ ಪ್ರಯತ್ನ ಪಟ್ಟರು, ಬೆಡ್‌, ಆಕ್ಸಿಜನ್‌ ವ್ಯವಸ್ಥೆ ಮಾಡಲಾಗಿಲ್ಲ. ಎಲ್ಲೂ ಕೂಡ ಬೆಡ್‌ ಸಿಕ್ಕಿರಲಿಲ್ಲ. ಅಂಬ್ಯುಲೆನ್ಸ್‌ ಕೂಡ ವ್ಯವಸ್ಥೆ ಆಗಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸೋಂಕಿತೆ ರೆಜಿನಾ ಸಾವನಪ್ಪಿದ್ದಾರೆ. ಇನ್ನು, ಕೊರೊನಾ ಸೋಂಕಿತೆ ರೆಜಿನಾ ಸಾವನಪ್ಪಿದ ಎಂಟು ಗಂಟೆಗಳ ಬಳಿಕ ಕುಟುಂಬಸ್ಥರಿಗೆ ಆಸ್ಪತ್ರೆಯಿಂದ ಕರೆ ಬಂದಿದೆ. ಬೆಡ್‌ ಇದೆ ಐದು ನಿಮಿಷಗಳಲ್ಲಿ ಆಸ್ಪತ್ರೆಗೆ ಬಂದು ತಲುಪಿ ಎಂದು ಹೇಳಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ನೋವು ತೋಡಿಕೊಂಡಿದ್ದು, ಅಗತ್ಯತೆ ಇದ್ದಾಗ ಅವರಿಗೆ ಬೆಡ್‌ ಸಿಕ್ಕಿರಲಿಲ್ಲ. ಸಾವನಪ್ಪಿದ ಬಳಿಕ ಬೆಡ್‌ ಇದೆ ಎಂದು ವೈದ್ಯರು ಹೇಳಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನ ಪರಿಸ್ಥಿತಿ ಎಲ್ಲೆ ಮೀರಿದೆ. ಬೆಡ್‌, ಆಕ್ಸಿಜನ್‌ ಇಲ್ಲದೆ ಜನರು ಸಾವನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿದೆ.


from India & World News in Kannada | VK Polls https://ift.tt/3eFG3eh

ದುಡಿಯುವ ವರ್ಗಕ್ಕೆ, ರೈತರಿಗೆ ಪ್ಯಾಕೇಜ್ : ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ರಾಜ್ಯದಲ್ಲಿ ಈಗ ಲಾಕ್‍ಡೌನ್ ಹೇರಿಕೆ ಮಾಡಿರುವುದರಿಂದ ಈಗಾಗಲೇ ಬಸವಳಿದು ಹೋಗಿರುವ ದುಡಿಯುವ ವರ್ಗದ ಜನರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಅವರ ಸಲಹೆಗಳು ಉತ್ತರ ಕರ್ನಾಟಕವೂ ಸೇರಿದಂತೆ ಅನೇಕ ಜಿಲ್ಲೆಗಳ ಜನ ಬೇಸಿಗೆಯಲ್ಲಿ ನಗರಗಳಿಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಅದನ್ನು ಮುಂಗಾರಿನ ಕೃಷಿ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ಈಗ ಲಾಕ್ ಡೌನ್ ಹೇರಿಕೆ ಮಾಡಿರುವುದರಿಂದ ಅವರ ದುಡಿಮೆ ಸಂಪೂರ್ಣ ಹಾಳಾಗಿದೆ. ದುಡಿಯಲೆಂದು ಬಂದವರು ಮರಳಿ ವಾಪಸ್ಸು ಹೋಗಿದ್ದಾರೆ. ಆದ್ದರಿಂದ ಸರ್ಕಾರ ಈ ಎಲ್ಲ ರೈತಾಪಿ ಕುಟುಂಬಗಳಿಗೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ಉಚಿತವಾಗಿ ವಿತರಿಸಬೇಕು. ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿ.ಪಿ.ಎಲ್. ವರ್ಗಕ್ಕೆ ಸೇರಿದ ಕುಟುಂಬಗಳಿವೆ. ಈ ಕುಟುಂಬಗಳಿಗೆ ಸೇರಿದ ಬಹುಪಾಲು ಜನರು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಖ್ಯೆ ಸುಮಾರು 1.5 ಕೋಟಿಗಳಷ್ಟಿದೆ. ಎಲ್ಲ ದುಡಿಯುವ ವರ್ಗಗಳು, ಸಮುದಾಯಗಳು ಹಾಗೂ ಬಿ.ಪಿ.ಎಲ್ ವರ್ಗದಡಿ ಬರುವ ಕುಟುಂಬಗಳು ದುಡಿಮೆ ಇಲ್ಲದೆ ಆರ್ಥಿಕ ಚೈತನ್ಯ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ ಅವರೆಲ್ಲರಿಗೂ ಪ್ರತಿ ತಿಂಗಳು ಕನಿಷ್ಟ 10000 ಸಾವಿರ ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಈ ಕೂಡಲೇ ಘೋಷಿಸಬೇಕು. ರಾಜ್ಯದಲ್ಲಿ 87 ಲಕ್ಷ ರೈತಾಪಿ ಕುಟುಂಬಗಳಿವೆ. ರೈತರಲ್ಲಿ ಸಣ್ಣ ,ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವ ಕಟುಂಬಗಳು ಶೇ. 90 ರಷ್ಟಿವೆ. ಬಹುಪಾಲು ಈ ಕುಟುಂಬಗಳೂ ಸಹ ಬಿ.ಪಿ.ಎಲ್ ವರ್ಗದಡಿಯೇ ಇವೆ. ಹಾಗಾಗಿ ಈ ರೈತಾಪಿ ಕುಟುಂಬಗಳಿಗೂ ಸಹ ತಿಂಗಳಿಗೆ 10000 ರೂ ಗಳ ಪ್ಯಾಕೇಜನ್ನು ಘೋಷಿಸಬೇಕು. ರಾಜ್ಯದ ಕೃಷಿಕರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಕೃಷಿ ಸಾಲಗಳನ್ನು ಕನಿಷ್ಟ 5 ಲಕ್ಷ ರೂಗಳವರೆಗೆ ನೀಡಬೇಕು. ಇದನ್ನು ಮಾಡುವುದು ಕಷ್ಟದ ವಿಚಾರವೇನೂ ಅಲ್ಲ. ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಸಂಬಂಧಿಸಿದ ಸುಮಾರು 10.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ವಸೂಲು ಮಾಡದೆ ಕೈ ಬಿಡಲಾಗಿದೆ. ಅಂಥದ್ದರಲ್ಲಿ ರೈತಾಪಿವರ್ಗಗಳಿಗೆ ನೀಡುವ ಕೆಲವು ಸಾವಿರ ಕೋಟಿಗಳಷ್ಟು ಬಡ್ಡಿ ರಹಿತ ಸಾಲದಿಂದ ದೇಶದ ಆರ್ಥಿಕತೆ ಮುಳುಗಿ ಹೋಗುವುದಿಲ್ಲ. ಬದಲಿಗೆ ಆರ್ಥಿಕತೆ ಸುಧಾರಣೆಯಾಗುತ್ತದೆ. ಆದ್ದರಿಂದ ಬಡ್ಡಿ ರಹಿತ ಸಾಲವನ್ನು ನೀಡಿ ರೈತರ ನೆರವಿಗೆ ನಿಲ್ಲಬೇಕು. ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕ ವಲಸೆ ಹೋಗುತ್ತಿರುವುದರಿಂದ ಕಳೆದ ವರ್ಷದಂತೆ ಈ ವರ್ಷವೂ ಸಹ ಕೃಷಿ ಕ್ಷೇತ್ರದ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಕೃಷಿ ಅವಶ್ಯಕ ವಸ್ತುಗಳಾದ ಬೀಜ, ಔಷಧ, ರಸಗೊಬ್ಬರಗಳ ಪೂರೈಕೆಯನ್ನು, ದಾಸ್ತಾನನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸಬೇಕು. ದಿನಾಂಕ: 15-04-21 ರಂದು ರಸಗೊಬ್ಬರಗಳ ಬೆಲೆಗಳನ್ನು ಅದರಲ್ಲೂ ಮುಖ್ಯವಾಗಿ ಡಿ.ಎ.ಪಿ. ಕಾಂಪ್ಲೆಕ್ಸ್‍ಗಳ ಬೆಲೆಗಳನ್ನು ಕ್ವಿಂಟಾಲಿಗೆ ರೂ.1,250/- ರಿಂದ ರೂ.1,400/- ಗಳವರೆಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದೆ. ಸದರಿ ಆದೇಶವನ್ನು ಹಿಂಪಡೆದು ಹಳೆಯ ದರಗಳಲ್ಲೇ ಮಾರಾಟ ಮಾಡಬೇಕು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರಿಯಾಯಿತಿ ದರಗಳಲ್ಲಿ ಸಾಧ್ಯವಾದರೆ ಉಚಿತವಾಗಿ ರಸಗೊಬ್ಬರಗಳನ್ನು ವಿತರಿಸಬೇಕು. ನಗರಗಳಿಂದ ಗ್ರಾಮಗಳಿಗೆ ವಲಸೆ ಹೊರಟ ಕಾರ್ಮಿಕರಿಗೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯಡಿ [ನರೇಗಾ] ಯೋಜನೆಯಡಿ ಕನಿಷ್ಟ 150 ಮಾನವ ದಿನಗಳಷ್ಟು ಮತ್ತು ಅದಕ್ಕೂ ಹೆಚ್ಚು ಬೇಡಿಕೆಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗನೀಡಬೇಕು. ಹಿಂದೆ ನಿಮ್ಮದೇ ಸರ್ಕಾರವಿದ್ದಾಗ ಮನಮೋಹನಸಿಂಗರು ಪ್ರಧಾನಮಂತ್ರಿಗಳಾಗಿದ್ದಾಗ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 150 ಮಾನವ ದಿನಗಳಿಗೆ ಹೆಚ್ಚಿಸಿ ಎಂದಾಗ ಅವರು ಅದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿದ್ದರು. ಈಗಲೂ ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ ಬಿ. ಜೆ.ಪಿ ಸಂಸದರುಗಳು ಈ ಕುರಿತು ಪ್ರಧಾನಿಗಳನ್ನು ಒತ್ತಾಯ ಮಾಡಿ ರಾಜ್ಯದ ಜನರ ನೆರವಿಗೆ ನಿಲ್ಲಬೇಕು. ಈ ಯೋಜನೆಯನ್ನು ಕೃಷಿಯ ವಿಸ್ತರಿತ ಪ್ರದೇಶಗಳಾದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳ ಜನರಿಗೂ ವಿಸ್ತಿರಿಸಬೇಕು. ಅವರೂ ಸಹ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ನರೇಗಾ ಯೋಜನೆಯ ಕೂಲಿ ದರಗಳನ್ನು ಹಣದುಬ್ಬರವನ್ನು ಆಧರಿಸಿ ಕೂಡಲೇ ಹೆಚ್ಚು ಮಾಡಬೇಕು. ರಾಜ್ಯದ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪಕ್ಕದ ಕೇರಳ ರಾಜ್ಯದಂತೆ ಪ್ರತಿ ಕುಟುಂಬಕ್ಕೆ ಆಹಾರ ಧಾನ್ಯಗಳ, ಜೀವನಾವಶ್ಯಕ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್‍ಗಳನ್ನು ಒದಗಿಸಬೇಕು. ಕಿಟ್ ಗಳಲ್ಲಿ ಪ್ರತಿಯೊಬ್ಬರಿಗೆ ಕನಿಷ್ಟ 10 ಕೆ.ಜಿ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಬೇಳೆಕಾಳುಗಳು ಮುಂತಾದ ದಿನಸಿ ಪದಾರ್ಥಗಳು ಇರುವಂತೆ ನೋಡಿಕೊಳ್ಳಬೇಕು. ಸಣ್ಣ, ಅತಿ ಸಣ್ಣ, ಗೃಹ ಮತ್ತು ಮಧ್ಯ ಪ್ರಮಾಣದ ಕೈಗಾರಿಕೆಗಳು ಕೇಂದ್ರದ ನಿರಂತರ ಗದಾ ಪ್ರಹಾರಗಳಿಂದ ಬಸವಳಿದು ಹೋಗಿವೆ. ಮೊದಲು ಕಷ್ಟದಲ್ಲಿರುವವರಿಗೆ ಉಸಿರಾಡಲು ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಸ್ಥಿತಿಯಲ್ಲಿರುವವರಿಗೂ ನೆರವಾಗಬೇಕು. ಆದ್ದರಿಂದ ಈ ವಲಯಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸುಗಮವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಇವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುವವರೆಗೆ ಸಾಲದ ಮೇಲಿನ ಬಡ್ಡಿಗಳನ್ನು ಮನ್ನಾ ಮಾಡಬೇಕು. ಇದಕ್ಕಾಗಿ ತಾವು ಕೇಂದ್ರವನ್ನು ಒತ್ತಾಯಿಸಬೇಕು. ಶತಾಯಗತಾಯ ಪ್ರಯತ್ನ ಮಾಡಿ ಇವರ ನೆರವಿಗೆ ಸರ್ಕಾರ ನಿಲ್ಲಬೇಕು. ರಾಜ್ಯದಲ್ಲಿ ಯಥೇಚ್ಛವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹಾಗಾಗಿ ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ, ಮಧ್ಯಮ ಪ್ರಮಾಣದ ಈ ಕಂಪೆನಿಗಳಿಗೆ ಉಚಿತವಾಗಿ ವಿದ್ಯುತ್ ಅನ್ನು ಪೂರೈಸಬೇಕು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಲ್ಲದಿದ್ದರೂ ಅದಾನಿ ಮುಂತಾದವರಿಗೆ ವರ್ಷಕ್ಕೆ ಅನಾಮತ್ತಾಗಿ ಸಾವಿರಾರು ಕೋಟಿಗಳನ್ನು ನೀಡಲಾಗುತ್ತಿದೆ. ಅದನ್ನು ನಿಲ್ಲಿಸಿ ಸರ್ಕಾರ ಉದ್ಯೋಗ ಸೃಷ್ಟಿಸುವ ಈ ಕೈಗಾರಿಕೆಗಳ ನೆರವಿಗೆ ನಿಲ್ಲಬೇಕು. ಈ ಕಂಪೆನಿಗಳು ಉತ್ಪಾದಿಸಿ ರಫ್ತು ಮಾಡುವ ಉತ್ಪನ್ನಗಳಿಗೆ ರಫ್ತು ಶುಲ್ಕಕ್ಕೆ ವಿನಾಯಿತಿ ನೀಡಬೇಕು. ಆಮದು ಶುಲ್ಕವನ್ನೂ ಕಡಿಮೆ ಮಾಡಬೇಕು. ಆಟೋ, ಕ್ಯಾಬ್, ಟ್ಯಾಕ್ಸಿ ಮುಂತಾದ ವಾಹನಗಳಿಗೆ ಕಳೆದ ಒಂದು ವರ್ಷದಿಂದ ಬಾಡಿಗೆ ಇಲ್ಲ. ಪ್ರಮುಖ ಪ್ರಯಾಣಿಕರಾಗಿದ್ದ ಐ. ಟಿ ಮುಂತಾದ ಕಂಪೆನಿಗಳ ಉದ್ಯೋಗಿಗಳು ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ವಾಹನಗಳ ದುಡಿಮೆ ನೆಚ್ಚಿಕೊಂಡಿದ್ದ ಚಾಲಕರು, ಮಾಲಿಕರು ವಿಪರೀತ ನಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ವಲಯದ ಕೆಲವರು ನಷ್ಟದಿಂದ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿಗಳು ಬರುತ್ತಿವೆ. ಸರ್ಕಾರ ಕಣ್ಣು ಮುಚ್ಚಿಕೊಂಡು ಮೌನವಾಗಿರುವುದು ಭೀಕರ ಅಮಾನವೀಯತೆಗೆ ಸಾಕ್ಷಿ. ನಿಮ್ಮ ಪ್ಯಾಕೇಜು ಮತ್ತು ಕೇಂದ್ರದ ಆತ್ಮ ನಿರ್ಭರ ಪ್ಯಾಕೇಜು ಸಮರ್ಪಕವಾಗಿ ಈ ವರ್ಗಗಳಿಗೆ ತಲುಪಿದ್ದರೆ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ರಾಜ್ಯ ಸರ್ಕಾರ ಘೋಷಿಸಿದ್ದ ಪ್ಯಾಕೇಜಿನಲ್ಲಿ ಕಾಲು ಭಾಗದಷ್ಟು ಚಾಲಕರಿಗೂ ಅನುಕೂಲವಾಗಲಿಲ್ಲ. ಆದ್ದರಿಂದ ಸರಳ ನಿಯಮಗಳನ್ನು ಮಾಡಿ ಕಳೆದ ವರ್ಷ ಬಾಕಿಯಾಗಿರುವ ಎಲ್ಲರಿಗೂ ಘೋಷಿತ ಪರಿಹಾರವನ್ನು ನೀಡಬೇಕು. ಈ ವರ್ಷ ಮತ್ತೆ ಲಾಕ್ ಡೌನ್ ಹೇರಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಪ್ರತಿ ತಿಂಗಳು ಕನಿಷ್ಟ 10000 ರೂ ನೀಡುವ ಪ್ಯಾಕೇಜನ್ನು ಘೋಷಿಸಬೇಕು. ಈ ವಾಹನಗಳ ಮಾಲೀಕರಿಗೆ ವಿಮೆಯನ್ನು ಮುಂದೂಡಬೇಕು. ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ವಿವಿಧ ತೆರಿಗೆಗಳನ್ನು ಮನ್ನಾ ಮಾಡಬೇಕು. ಸಾಲದ ಅಸಲು ಮೊತ್ತದ ವಸೂಲಿಯನ್ನು ಮುಂದೂಡಬೇಕು. ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ಮಟ್ಟದ ರಿಯಾಯಿತಿ ಕೊಡಿಸುವುದಾಗಿ ಘೋಷಿಸಿತು. ಆದರೆ ಅದು ಜಾರಿಗೆ ಬರಲಿಲ್ಲ. ಈ ವರ್ಷ ಮತ್ತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಶುಲ್ಕ ಮನ್ನಾ ಮಾಡಲು ಅಥವಾ ಶೇ. 50 ರಷ್ಟಾದರೂ ಕಡಿತಗೊಳಿಸಲು ಕಠಿಣ ನಿಯಮಾವಳಿಗಳನ್ನು ರೂಪಿಸಬೇಕು. ಈ ಎಲ್ಲ ಒತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಆರ್ಥಿಕ ಪ್ಯಾಕೇಜುಗಳನ್ನು ಘೋಷಿಸಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3317cD1

ಕೋವಿಡ್‌ ಎಫೆಕ್ಟ್‌: ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ: ಲಕ್ಷ್ಮಣ ಸವದಿ

ಬೆಂಗಳೂರು: ಕೋವಿಡ್ 19ರ 2ನೇ ಅಲೆ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಿ ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನುಹೊರತುಪಡಿಸಿ) ಅನ್ವಯಿಸುವಂತೆ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಧಿಸೂಚನೆ ಸಂಖ್ಯೆ ಟಿಡಿ 1 ಟಿಡಿಆರ್ 2021 ದಿನಾಂಕ: 12.04.2021 ಅನ್ವಯ ದಿನಾಂಕ: 15.04.2021 ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ:30.04.2021ರ ವರೆಗೆ ವಿಸ್ತರಿಸಿದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ದಿನಾಂಕ:15.05.2021 ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ:31.05.2021 ರವರೆಗೆ ಅವಧಿಯನ್ನು ವಿಸ್ತರಿಸಿ ಇಲಾಖೆ ಆದೇಶಿಸಿದೆ. ಕೋವಿಡ್‌ ಎರಡನೇ ಅಲೆ ತೀವ್ರ ರೀತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್‌ಡೌನ್ ಜಾರಿಯಲ್ಲಿದೆ. ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು ಈ ನಿಟ್ಟಿನಲ್ಲಿ ಜನರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.


from India & World News in Kannada | VK Polls https://ift.tt/3e2MDfB

ಲಸಿಕೆ ಇನ್ನೂ ಬಂದಿಲ್ಲ, ನೋಂದಣಿ ಮಾಡಿಸಿಕೊಂಡವರು ವಾಕ್ಸಿನ್‌ ಕೇಂದ್ರಗಳಿಗೆ ಹೋಗಬೇಡಿ, ಸುಧಾಕರ್‌ ಮನವಿ

ಬೆಂಗಳೂರು: ಮೇ 1 ರಿಂದ 18 ವರ್ಷದಿಂದ 44 ವರ್ಷದ ಜನರು ಕೋವಿಡ್‌ ಲಸಿಕೆ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿತ್ತು. ಈ ಕುರಿತಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆದರೆ ಸದ್ಯ ನೋಂದಣಿ ಮಾಡಿಕೊಂಡವರು ಆಸ್ಪತ್ರೆಗೆ ಅಥವಾ ಲಸಿಕಾ ಕೇಂದ್ರಕ್ಕೆ ಬರಬೇಡಿ ಎಂದು ಸರ್ಕಾರ ಸೂಚನೆ ನೀಡಿದೆ. ಕಾರಣ ರಾಜ್ಯಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಬೆಂಗಳೂರಿನಲ್ಲಿ ಶುಕ್ರವಾರ ಈ ಕುರಿತಾಗಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌, ಮೇ 1 ರಿಂದ 18 ವರ್ಷದಿಂದ 44 ವರ್ಷಗಳ ಪ್ರಾಯದ ಜನರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಅನ್ವಯ 3 ರಿಂದ 3.5 ಕೋಟಿ ಜನರು ರಾಜ್ಯದಲ್ಲಿ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1 ಕೋಟಿ ಕೋವಿಶೀಲ್ಡ್‌ ಡೋಸ್‌ಗೆ ಈಗಾಗಲೇ ಆರ್ಡರ್‌ ಮಾಡಿದೆ. ಸೀರಂ ಇನ್ಟಿಟ್ಯೂಟ್‌ ಒಂದು ತಿಂಗಳಲ್ಲಿ ಸುಮಾರು 5 ರಿಂದ 6 ಕೋಟಿ ಡೋಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಭಾರತ್ ಭಯೋಟೆಕ್‌ 1 ರಿಂದ 1.25 ಲಕ್ಷ ಕೋಟಿ ಡೋಸ್ ತಯಾರು ಮಾಡುವ ಸಾಮರ್ಥ್ಯ ಹೊಂದಿದೆ. 28 ತಾರೀಕಿನಿಂದ ನೋಂದಣಿ ಸಾಕಷ್ಟು ಜನರು ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಸಿಕೊಂಡಿದ್ದಾರೆ ಮೇ 1 ರಿಂದ ಆರಂಭವಾಗಬೇಕಾಗಿತ್ತು, ಆದರೆ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಲಸಿಕೆ ಪೂರೈಕೆ ಕುರಿತಾಗಿ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು. ಲಸಿಕೆಗಾಗಿ ನೋಂದಣಿ ಮಾಡಿಸಿಕೊಂಡವರು ಶನಿವಾರ ಲಸಿಕೆ ಕೇಂದ್ರಕ್ಕೆ ಬರಬೇಡಿ. ಸರ್ಕಾರ ಅಧಿಕೃತ ಮಾಹಿತಿ ನೀಡುವ ವರೆಗೂ ಆಸ್ಪತ್ರೆಗಳಿಗೆ ಹೋಗಬಾರದು ಎಂದು ಸುಧಾಕರ್‌ ತಿಳಿಸಿದ್ದಾರೆ. ಲಸಿಕೆ ಯಾವ ದಿನದಿಂದ ಆರಂಭವಾಗಬಹುದು ಎಂಬುವುದನ್ನು ನಾನು ಹೇಳಲ್ಲ. ಸರ್ಕಾರಕ್ಕೆ ಇದನ್ನು ಅಂದಾಜು ಮಾಡಿ ಹೇಳಲು ಸಾಧ್ಯವಿಲ್ಲ. ಕಂಪನಿ ಅಧಿಕೃತವಾಗಿ ಮಾಹಿತಿ ಹಂಚಿಕೆ ಮಾಡಿದ ಬಳಿಕ ರಾಜ್ಯದ ಜನರಿಗೆ ತಿಳಿಸಲಾಗುವುದು. ಆದರೆ ಸತತ ಪ್ರಯತ್ನ ಮುಂದುವರಿದಿದೆ. ಒತ್ತಡ ಹೇರಿ ಆದಷ್ಟು ಶೀಘ್ರದಲ್ಲಿ ರಾಜ್ಯ ಲಸಿಕೆ ತರಿಸಿಕೊಳ್ಳುವುದು ನಮ್ಮ ಧ್ಯೇಯವಾಗಿದೆ ಎಂದರು. ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡುತ್ತೇವೆ ಎಂದು ಹೇಳಿದ್ದೇವೆ. ಅದರಲ್ಲಿ ಯಾವುದೇ ಗೊಂದಲ ಬೇಡ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬಹುದು. 99 ಲಕ್ಷ ನೋಂದಾಣಿ ಆದ ಪೈಕಿ 95 ಲಕ್ಷ ಲಸಿಕೆ ಈಗಾಗಲೇ ನೀಡಿದ್ದೇವೆ. ಕೇಂದ್ರ ಸರ್ಕಾರದ ಜೊತೆ ನಿಕಟವಾದ ಮನವಿ ಮಾಡಿದ್ದೇವೆ. ಆರು ಲಕ್ಷ ಡೋಸ್‌ ಇದೆ. ಎಲ್ಲೂ ಸ್ಥಗಿತ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.


from India & World News in Kannada | VK Polls https://ift.tt/3e7ceEu

ಮಿಷನ್‌ ಆಕ್ಸಿಜನ್‌ಗೆ ಒಂದು ಕೋಟಿ ರೂ ದೇಣಿಗೆ ನೀಡಿದ ಸಚಿನ್‌ ತೆಂಡೂಲ್ಕರ್‌!

ಹೊಸದಿಲ್ಲಿ: ಕೊರೊನಾ ವೈರಸ್‌ ಎರಡನೇ ಅಲೆ ಎದುರಿಸುತ್ತಿರುವ ದೇಶದಲ್ಲಿ ಕೋವಿಡ್‌-ರೋಗಿಗಳಿಗೆ ನೆರವಾಗುವ ಸಲುವಾಗಿ 'ಮಿಷನ್‌ ಆಕ್ಸಿಜನ್‌ಗೆ' ಒಂದು ಕೋಟಿ ರೂ.ಗಳ ದೇಣಿಗೆಯನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್‌ ದಂತಕತೆ ನೀಡಿದ್ದಾರೆ. "ಅಗತ್ಯವಿರುವ ಈ ಸಮಯದಲ್ಲಿ ರಾಷ್ಟ್ರದಾದ್ಯಂತ ಆಸ್ಪತ್ರೆಗಳಿಗೆ ಜೀವ ಉಳಿಸುವ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸುವ ಮತ್ತು ಒದಗಿಸುವ ಪ್ರಯತ್ನದಲ್ಲಿ ಮಿಷನ್ ಆಕ್ಸಿಜನ್‌ಗೆ ಅವರು(ಸಚಿನ್‌) ಒಂದು ಕೋಟಿ ರೂ. ದೇಣಿಗೆ ನೀಡಿದ್ದು ನಂಬಲಾಗದಷ್ಟು ಹೃದಯಸ್ಪರ್ಶಿ," ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಕೊರೊನಾ ವೈರಸ್‌ ಎರಡನೇ ಎಲೆಯು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಅಪಾರ ಒತ್ತಡಕ್ಕೆ ತಳ್ಳಿದೆ. ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳಿಗೆ ಆಮ್ಲಜನಕ ಒದಗಿಸುವುದು ಪ್ರಸ್ತುತ ತುಂಬಾ ಮುಖ್ಯವಾಗಿದೆ. 250 ಯುವ ಉದ್ಯಮಿಗಳ ಗುಂಪು ಮಿಷನ್ ಆಕ್ಸಿಜನ್ ಅಡಿ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲು ಮತ್ತು ದೇಶಾದ್ಯಂತದ ಆಸ್ಪತ್ರೆಗಳಿಗೆ ದಾನ ಮಾಡಲು ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದೆ, ” ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ. "ನಮ್ಮ ಪ್ರಯತ್ನವು ಶೀಘ್ರದಲ್ಲೇ ಭಾರತದಾದ್ಯಂತ ಇನ್ನೂ ಅನೇಕ ಆಸ್ಪತ್ರೆಗಳಿಗೆ ತಲುಪುತ್ತದೆ ಎಂದು ಭಾವಿಸುತ್ತೇನೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ಎಲ್ಲರ ಹಿಂದೆ ನಾವು ಒಟ್ಟಾಗಿ ಇಂದು ನಿಲ್ಲಬೇಕು," ಎಂದು ಹೇಳಿದರು. ಸಚಿನ್ ತೆಂಡೂಲ್ಕರ್‌ ಅವರು ಅರ್ಹತೆ ಪಡೆದ ನಂತರ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ಮಾರ್ಚ್ 27 ರಂದು ಅವರಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿತ್ತು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ 2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಿರುದ್ಧದ ಹೋರಾಟಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಗ ಪರಿಹಾರ ನಿಧಿಗೆ 25 ಲಕ್ಷ ರೂ. ಗಳ ದೇಣಿಗೆಯನ್ನು ಸಚಿನ್ ತೆಂಡೂಲ್ಕರ್‌ ಕಳೆದ ಮಾರ್ಚ್‌ ತಿಂಗಳಲ್ಲಿ ನೀಡಿದ್ದರು. ಭಾರತದಲ್ಲಿ ಕೊರೊನಾ ವೈರಸ್‌ ಎರಡನೇ ಅಲೆ ಎದ್ದಿರುವ ಕಠಿಣ ಸನ್ನಿವೇಶದಲ್ಲಿ ಜನರಿಗೆ ತಕ್ಷಣ ನೆರವು ನೀಡುವ ಸಲುವಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫ್ರಾಂಚೈಸಿಗಳಾದ ರಾಜಸ್ಥಾನ್‌ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೋವಿಡ್‌ ಪರಿಹಾರ ನಿಧಿಗೆ ಕ್ರಮವಾಗಿ 7.5 ಕೋಟಿ ರೂ. ಹಾಗೂ 1.5 ಕೋಟಿ ರೂ. ಗಳನ್ನು ದೇಣಿಗೆ ನೀಡಿದೆ. ಅಲ್ಲದೆ, ಕೋಲ್ಕತಾ ನೈಟ್‌ ರೈಡರ್ಸ್ ತಂಡದ ವೇಗಿ ಪ್ಯಾಟ್‌ ಕಮಿನ್ಸ್ ಅವರು ಭಾರತದ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಸಲು 50 ಸಾವಿರ ಯುಎಸ್‌ ಡಾಲರ್‌ ಅನ್ನು ದೇಣಿಗೆ ನೀಡಿದ್ದರು ಹಾಗೂ ಸಹಾಯ ಮಾಡುವಂತೆ ವಿದೇಶಿ ಆಟಗಾರರಿಗೂ ಆಗ್ರಹಿಸಿದ್ದರು .


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gXBA9k

ಕರ್ಪ್ಯೂ ಗೊಂದಲ: ಕೈಗಾರಿಕೆ, ಗಾರ್ಮೆಂಟ್ಸ್‌, ನಿರ್ಮಾಣ ಕಾರ್ಯಕ್ಕೆ ಅನುಮತಿ, ಜನರ ಓಡಾಟಕ್ಕೆ ನಿರ್ಬಂಧ!

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿ ಇಂದಿಗೆ ಮೂರನೇ ದಿನ. ಲಾಕ್‌ಡೌನ್‌ ಅಥವಾ ಕರ್ಫ್ಯೂ ಇದ್ದರೂ ಕೆಲವೊಂದು ರಿಯಾಯಿತಿಗಳನ್ನು ಸರ್ಕಾರ ನೀಡಿದೆ. ಕೈಗಾರಿಕೆ, ನಿರ್ಮಾಣ ಕಾರ್ಯಗಳು, ಗಾರ್ಮೆಂಟ್‌, ನಂದಿನಿ ಪಾರ್ಲರ್‌ಗಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಒಂದು ಕಡೆಯಲ್ಲಿ ರಿಯಾಯಿತಿ ನೀಡಿ ಮತ್ತೊಂದು ಕಡೆಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರುವ ಕೆಲಸವೂ ನಡೆಯುತ್ತಿರುವುದು ಸರ್ಕಾರದ ಗೊಂದಲದ ನಡೆಗೆ ಸಾಕ್ಷಿಯಾಗಿದೆ. ಕೈಗಾರಿಕೆ, ನಿರ್ಮಾಣ ಕಾರ್ಯ ಹಾಗೂ ಗಾರ್ಮೆಂಟ್ಸ್ ಸಂಸ್ಥೆಗಳ ಪೈಕಿ ಕೆಲವು ಸಂಸ್ಥೆಗಳು ನೌಕರರಿಗೆ ವಾಹನ ವ್ಯವಸ್ಥೆ ಕಲ್ಪಿಸಿವೆ. ಆದರೆ ಒಂದಿಷ್ಟು ಜನರು ತಮ್ಮ ಸ್ವಂತ ವಾಹನಗಳಲ್ಲೇ ಕೆಲಸಕ್ಕೆ ತೆರಳಬೇಕಾಗಿದೆ. ಕಂಪನಿಗಳ ಐಡಿ ಅಥವಾ ದಾಖಲೆಗಳು ಇದ್ದರೆ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಹೀಗಿದ್ದರೂ ಪೊಲೀಸರು 10 ಗಂಟೆ ಆಗುತ್ತಿದ್ದಂತೆ ಜನರ ಓಡಾಟಕ್ಕೆ ನಿರ್ಬಂಧ ಹೇರುತ್ತಿದ್ದಾರೆ. ಇದರಿಂದ ರಿಯಾಯಿತಿ ಇದ್ದರೂ ಪರದಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ. ಕೋವಿಡ್‌ ಕರ್ಫ್ಯೂವನ್ನು ಬಹುತೇಕ ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಕೆಲವರು ಅನಗತ್ಯವಾಗಿ ಸಮಯ ಮೀರಿದರೂ ಓಡಾಟ ನಡೆಸುತ್ತಾರೆ. ಆದರೆ ಈ ಸಂಖ್ಯೆ ತೀರಾ ವಿರಳವಾಗಿದೆ. ಹೀಗಿದ್ದರೂ ಜನರ ಮೇಲೆ ಪ್ರಹಾರ ನಡೆಯುತ್ತದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. ಹೋಟೆಲ್‌, ಹಾಲು ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಜನರಿಗೆ ನಿರ್ಬಂಧ ಹೇರಲಾಗಿದೆ. ಹಾಲು ಉತ್ಪನ್ನಗಳು ಹಾಗೂ ಹೋಟೆಲ್‌ಗಳನ್ನು ದಿನವಿಡಿ ತೆರೆದಿಡಲು ಅವಕಾಶ ನೀಡಿದರೂ ನಮಗೆ ಪಾರ್ಸಲ್‌ ತರಲು ಅನುಮತಿ ಇದೆಯಾ ಎಂಬುವುದಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ ಎನ್ನುತ್ತಾರೆ ಗ್ರಾಹಕರೊಬ್ಬರು. ಸಿಎಂ ಸೂಚನೆ ಅನ್ವಯ ಪೊಲೀಸರ ಕ್ರಮ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಸಿಎಂ ಈ ಸೂಚನೆಯನ್ನು ನೀಡಿದ್ದಾರೆ. ಅದರಂತೆ ಹಲವು ಕಡೆಗಳಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. 10 ಗಂಟೆಯ ಬಳಿಕ ರಸ್ತೆಗಿಳಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಬೆಂಗಳೂರು, ಮೈಸೂರು, ಕಲಬುರಗಿ ಸೇರಿದಂತೆ ಹಲವು ಕಡೆಗಳಲ್ಲಿ ಮಾರ್ಕೆಟ್, ದಿನಸಿ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅವಧಿಯೂ ಮುನ್ನ ಬಂದ್ ಮಾಡಿಸುತ್ತಿರುವ ಆರೋಪವೂ ಇದೆ. ಒಟ್ಟಿನಲ್ಲಿ ಗೊಂದಲದ ಲಾಕ್‌ಡೌನ್‌ಗೆ ಮೂರು ದಿನಗಳಾಗಿವೆ. ಒಂದು ಕಡೆಯಲ್ಲಿ ಕೋವಿಡ್ ಸಂಕಷ್ಟ ಮತ್ತೊಂದು ಕಡೆಯಲ್ಲಿ ಲಾಕ್‌ಡೌನ್‌ ಸಂಕಷ್ಟದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುವುದಂತೂ ಸತ್ಯ.


from India & World News in Kannada | VK Polls https://ift.tt/3aN6r4z

ಅವಕಾಶ ಸಿಕ್ಕರೆ ಖಂಡಿತಾ ಸೆಹ್ವಾಗ್ ಜೊತೆ ಮಾತನಾಡುತ್ತೇನೆಂದ ಪೃಥ್ವಿ ಶಾ!

ಅಹ್ಮದಾಬಾದ್‌: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸತತ ಎರಡು ಪಂದ್ಯಗಳಲ್ಲಿ ಮೊಟ್ಟ ಮೊದಲ ಎಸೆತದಲ್ಲಿ ಫೋರ್‌ ಬಾರಿಸಿ ಇನಿಂಗ್ಸ್ ಆರಂಭಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಭಾರತ ತಂಡದ ಮಾಜಿ ಓಪನಿಂಗ್‌ ಬ್ಯಾಟ್ಸ್‌ಮನ್‌ ಅವರನ್ನು ನೆನಪಿಸಿದರು. ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಕಳೆದ ಪಂದ್ಯದಲ್ಲಿಯೂ ಪೃಥ್ವಿ ಶಾ ಸತತ ಮೂರು ಬೌಂಡರಿಗಳೊಂದಿಗೆ ತಮ್ಮ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಗುರುವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಶಿವಂ ಮಾವಿಗೆ ಆರು ಎಸೆತಗಳಿಗೆ ಸತತ ಆರು ಬೌಂಡರಿಗಳನ್ನು ಸಿಡಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿಯೇ ಅಜಿಂಕ್ಯ ರಹಾನೆ ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಭಾಜನರಾದರು. ಇನಿಂಗ್ಸ್ ಉದ್ದಕ್ಕೂ ಅದೇ ಲಯವನ್ನು ಮುಂದುವರಿಸಿದ ಪೃಥ್ವಿ ಶಾ ಕೇವಲ 18 ಎಸೆತಗಳಲ್ಲಿ ಪ್ರಸಕ್ತ ಆವೃತ್ತಿಯ ಅತ್ಯಂತ ವೇಗದ ಅರ್ಧಶತಕ ಪೂರೈಸಿದರು. ಅಂತಿಮವಾಗಿ 41 ಎಸೆತಗಳಲ್ಲಿ 82 ರನ್‌ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ 7 ವಿಕೆಟ್‌ಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು ಹಾಗೂ ಮ್ಯಾನ್ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದರು. ಮೊದಲ ಓವರ್‌ನಲ್ಲಿಯೇ ಆರು ಬೌಂಡರಿ ಸಿಡಿಸಿದ್ದರ ಹಿಂದೆ ವಿರೇಂದ್ರ ಸೆಹ್ವಾಗ್‌ ಅವರ ಜೊತೆ ಸಂಭಾಷಣೆ ನಡೆಸಲಾಗಿತ್ತೆ ಎಂಬುದನ್ನು ಪೃಥ್ವಿ ಶಾ ಪಂದ್ಯದ ಬಳಿಕ ಬಹಿರಂಗಪಡಿಸಿದರು. "ನಾನು ಚೆನ್ನಾಗಿ ಆಡುತ್ತಿದ್ದೇನೆಂದು ಅನಿಸಿದರೆ, ರನ್‌ಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಅಲ್ಲದೆ, ಬ್ಯಾಟಿಂಗ್‌ ವೇಳೆ ನನ್ನ ಬಗ್ಗೆ ನಾನು ಕಾಳಜಿ ವಹಿಸುವುದಿಲ್ಲ ಹಾಗೂ ತಂಡವನ್ನು ಗೆಲ್ಲಿಸುವುದಷ್ಟೆ ನನ್ನ ಗುರಿಯಾಗಿರುತ್ತದೆ. ಆದರೆ, ಸೆಹ್ವಾಗ್‌ ಅವರ ಜೊತೆ ನಾನಿನ್ನೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತಾ ವೀರು ಸರ್‌ ಬಳಿ ಮಾತನಾಡುತ್ತೇನೆ. ಏಕೆಂದರೆ ಅವರು ಮೊದಲನೇ ಎಸೆತದಲ್ಲಿ ಬೌಂಡರಿ ಮೂಲಕ ಇನಿಂಗ್ಸ್ ಆರಂಭಿಸುವ ಆಟಗಾರ," ಎಂದು ಪೃಥ್ವಿ ಶಾ ತಿಳಿಸಿದರು. ಶಿವಂ ಮಾವಿ ಅವರೊಂದಿಗೆ ತುಂಬಾ ಕ್ರಿಕೆಟ್‌ ಆಡಿದ್ದೇನೆಂದು ಪೃಥ್ವಿ ಶಾ ಇದೇ ವೇಳೆ ವಿವರಿಸಿದರು. 2018ರಲ್ಲಿ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಶಿವಮ್‌ ಮಾವಿ ಹಾಗೂ ನಾನು ಜೊತೆಯಲ್ಲಿಯೇ ಆಡಿದ್ದೆವು. ಹಾಗಾಗಿ, ಅವರು ನನಗೆ ಯಾವ ಲೈನ್ ಅಂಡ್‌ ಲೆನ್ತ್‌ನಲ್ಲಿ ಬೌಲಿಂಗ್‌ ಮಾಡುತ್ತಾರೆಂದು ಮೊದಲೇ ಊಹಿಸಿ ಕೆಕೆಆರ್‌ ವೇಗಿಯನ್ನು ಟಾರ್ಗೆಟ್‌ ಮಾಡಿದೆ ಎಂದರು. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿರಲಿಲ್ಲ. ಸುಲಭದ ಎಸೆತಕ್ಕಾಗಿ ಕಾಯುತ್ತಿದ್ದೆ ಅಷ್ಟೆ. ಶಿವಂ ಮಾವಿ ನನಗೆ ಎಲ್ಲಿ ಬೌಲಿಂಗ್‌ ಮಾಡುತ್ತಾನೆಂದು ನನಗೆ ಗೊತ್ತಿತ್ತು. ನಾವಿಬ್ಬರೂ 4 ರಿಂದ 5 ವರ್ಷಗಳ ಕಾಲ ಜೊತೆಯಲ್ಲಿಯೇ ವಯೋಮಿತಿ ಕ್ರಿಕೆಟ್‌ ಆಡಿದ್ದೇವೆ. ಹೌದು, ನಾನು ಶಾರ್ಟ್ ಬಾಲ್‌ಗೆ ಸಜ್ಜಾಗಿದ್ದೆ," ಎಂದು ಹೇಳಿದರು. "ಒಂದು ಎಸೆತ ಹೆಲ್ಮೆಟ್‌ಗೆ ನೇರವಾಗಿ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ, ಆದರೆ ಬರಲಿಲ್ಲ. ಈ ವಿಕೆಟ್‌ನಲ್ಲಿ ಸ್ಪಿನ್ನರ್‌ಗಳಿಗೆ ಚೆಂಡು ನಿಂತು ಬರಬಹುದು, ಇಲ್ಲವಾದರೆ ಸ್ವಾಭಾವಿಕವಾಗಿ ಆಫ್‌ಸೈಡ್‌ ಕಡೆ ಚೆಂಡು ಹೋಗಲಿದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ಅದೇ ಎಸೆತಗಳಿಗಾಗಿ ಕಾಯುತ್ತಿದ್ದೆ," ಎಂದು ಪೃಥ್ವಿ ಶಾ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QHsVxe

ಆಸ್ಪತ್ರೆಯಲ್ಲಿ ಬೆಡ್‌ ಸಿಗುತ್ತಿಲ್ಲ, ಸಹಾಯವಾಣಿಗೆ ಕರೆ ಮಾಡಿದರೆ ಉತ್ತರವಿಲ್ಲ! ಇದು ಬೆಂಗಳೂರಿನ ಸ್ಥಿತಿ

ಬೆಂಗಳೂರು: ಕೋವಿಡ್‌ ಸೋಂಕಿತ ಮಹಿಳೆಯ ಹೆಸರು ಲಕ್ಷ್ಮೀ. ವಯಸ್ಸು 67, ಆಕ್ಸಿಜನ್ ಮಟ್ಟ 70 ಕ್ಕೆ ಬಂದು ಬಲುಪಿದೆ. ಈ ಮಹಿಳೆಯ ಮನೆಯಲ್ಲಿ ನಾಲ್ವರಿಗೂ ಕೋವಿಡ್‌ ಸೋಂಕು ಬಂದಿದೆ. ಲಕ್ಷ್ಮೀ ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆಸ್ಪತ್ರೆಗೆ ದಾಖಲು ಮಾಡಲು ಸಹಾಯವಾಣಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಕರೆ ಮಾಡಿದರೆ ಸಿಗುತ್ತಿರುವುದು ಒಂದೇ ಉತ್ತರ ‘ನೋ ಬೆಡ್‌’!. ಹೌದು, ಇದು ಸದ್ಯ ಬೆಂಗಳೂರಿನಲ್ಲಿರುವ ಪರಿಸ್ಥಿತಿ. ನಗರದ ಎಲ್ಲಾ ಆಸ್ಪತ್ರೆಗಳ ಬೆಡ್‌ ಭರ್ತಿ ಆಗಿವೆ. ಯಾರಿಗೂ ಆಕ್ಸಿಜನ್ ಸೌಲಭ್ಯ ಹೊಂದಿರುವ ಹಾಸಿಗೆಗಳು ಸಿಗುತ್ತಿಲ್ಲ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬ ಪರಿಸ್ಥಿತಿ ನಿರ್ಮಾನವಾಗಿದೆ. ‘ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ಕರೆ ಮಾಡಿದರೂ, ಸಹಾಯವಾಣಿಗೆ ಕರೆ ಮಾಡಿದರೂ ಯಾವುದೇ ಉತ್ತರ ಸಿಗುತ್ತಿಲ್ಲ. ಬೆಡ್‌ ಇಲ್ಲ ಎಂದು ಕೈತೊಳೆದುಕೊಂಡು ಸುಮ್ಮನಾಡುತ್ತಾರೆ. ಹಾಗಾದರೆ ಬದುಕುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಸೋಂಕಿತರ ಕುಟುಂಬಸ್ಥರು. “ನಮಗೆ ನಿತ್ಯ ನೂರಾರು ಕರೆ ಬರುತ್ತಿವೆ. ಆದರೆ ಎಲ್ಲೂ ಬೆಡ್‌ ಖಾಲಿ ಇಲ್ಲ. ಕರೆ ಮಾಡಿದವರು ಹೆಸರು, ವಿಳಾಸ, ಬಿಯು ನಂಬರ್‌ಗಳನ್ನು ಸಂಗ್ರಹ ಮಾಡುತ್ತೇವೆ. ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಪ್ರಯತ್ನ ಮಾಡುತ್ತೇವೆ. ಆದರೆ ಬೆಡ್‌ ಇಲ್ಲದೆ ನಾನೇನು ಮಾಡುವುದು” ಎನ್ನುತ್ತಾರೆ ವಾರ್‌ರೂಂ ಸಿಬ್ಬಂದಿ. ಸದ್ಯ ರಾಜ್ಯಾದ್ಯಂತ ಐಸಿಯುನಲ್ಲಿ 2431 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆ. ಹಾಸಿಗೆ ಅಗತ್ಯ ಇರುವವರು 1912 ಗೆ ಕರೆ ಮಾಡಬಹುದು ಎಂದು ಸರ್ಕಾರ, ಬಿಬಿಎಂಪಿ ಹೇಳುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 4,300 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಖಾಸಗಿ ಆಸ್ಪತ್ರೆಯಿಂದ 75 ಶೇ ಹಾಸಿಗೆಗಳನ್ನು ಸರ್ಕಾರ ಪಡೆದುಕೊಂಡಿದೆ. ಹೀಗಿದ್ದರೂ ಹಾಸಿಗೆ ಕೊರತೆ ಎದುರಾಗಿದೆ. ಸದ್ಯ ಬೆಂಗಳೂರಿನಲ್ಲಿ ನೂರಾರು ಜನರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸ್ಪಂದಿಸಬೇಕಿದೆ. ಸದ್ಯ ಅಗತ್ಯ ಇರುವ ಆಕ್ಸಿಜನ್ ಬೆಡ್‌ ಸೌಲಭ್ಯವನ್ನು ಹೆಚ್ಚಿಸಬೇಕಿದೆ. ಅಗತ್ಯ ಇರುವವರಿಗೆ ಕೂಡಲೇ ಬೆಡ್‌ ಸೌಲಭ್ಯ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲಾಂದ್ರೆ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.


from India & World News in Kannada | VK Polls https://ift.tt/2R9I6iL

ಅಮೆರಿಕಾದಿಂದ ಭಾರತಕ್ಕೆ ಬಂತು 440 ಆಕ್ಸಿಜನ್ ಸಿಲಿಂಡರ್‌ ಸಹಿತ ಹಲವು ಕೋವಿಡ್‌ ಪರಿಹಾರ ಸಾಮಾಗ್ರಿಗಳು

ವಾಷಿಂಗ್ಟನ್‌: ಕೊರೊನಾ ಸೋಂಕು ಭಾರತದಲ್ಲಿ ಮಿತಿಮೀರಿ ವ್ಯಾಪಿಸುತ್ತಿರುವ ಹಿನ್ನೆಲೆ ಭಾರತದ ನೆರವಿಗೆ ಧಾವಿಸಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಭಾರತೀಯರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಾಯ ಹಸ್ತವನ್ನು ಚಾಚಲು ಮುಂದಾಗಿದ್ದಾರೆ. ಅಧ್ಯಕ್ಷ ಜೋ ಬೈಡೆನ್ 2021 ರ ಏಪ್ರಿಲ್ 26 ರಂದು ವಾಗ್ದಾನ ಮಾಡಿದಂತೆ, ಅಮೆರಿಕವು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮೂಲಕ, ಭಾರತೀಯರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲು, ಜೀವಗಳನ್ನು ಉಳಿಸಲು, ಹರಡುವುದನ್ನು ನಿಲ್ಲಿಸಲು ಸಹಾಯವನ್ನು ಕ್ಷಿಪ್ರವಾಗಿ ಕ್ರೋಢೀಕರಿಸುತ್ತಿದೆ. ಇಂದು ಅಮೆರಿಕಾದಿಂದ ತುರ್ತು COVID-19 ಪರಿಹಾರ ಸಾಮಗ್ರಿಗಳು ಮೊದಲ ಕಂತಿನಲ್ಲಿ ಭಾರತಕ್ಕೆ ರವಾನೆಯಾಗಲಿದ್ದು, ಟ್ರಾವಿಸ್ ವಾಯುನೆಲೆಯಿಂದ ವಿಶ್ವದ ಅತಿದೊಡ್ಡ ಸೇನಾ ವಿಮಾನದಲ್ಲಿ ನವದೆಹಲಿಗೆ ಆಗಮಿಸಲಿರುವ ಪರಿಹಾರ ಸಾಮಾಗ್ರಿಗಳಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳು ಮತ್ತು ನಿಯಂತ್ರಕಗಳು ಸೇರಿವೆ, ಇದನ್ನು ಕ್ಯಾಲಿಫೋರ್ನಿಯಾ ರಾಜ್ಯವು ಭಾರತಕ್ಕೆ ಕಲಿಸಿಕೊಟ್ಟಿದೆ. ಇದಲ್ಲದೆ, USAID 960,000 ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಕಿಟ್‌ಗಳೂ ಇದರಲ್ಲಿ ಸೇರಿದ್ದು, ಇವು ಸೋಂಕುಗಳನ್ನು ಗುರುತಿಸಲು ಹಾಗೂ ಕೊರೊನಾ ಸೋಂಕಿನ ಸಮುದಾಯ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಜೊತೆಗೆ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ 100,000 N95 ಮಾಸ್ಕ್‌ ಸೇರಿವೆ. ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ತಗ್ಗಿಸಲು ಯುಎಸ್‌ಎಐಡಿ(USAID)ಯು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ USAID 23 ಮಿಲಿಯನ್ ಡಾಲರ್ ಸಹಾಯವನ್ನು ನೀಡಿದೆ. ಇದು ಸುಮಾರು 10 ಮಿಲಿಯನ್ ಭಾರತೀಯರನ್ನು ತಲುಪಿದ್ದು, 320 ಪ್ರಾಥಮಿಕ ಆರೋಗ್ಯ ಸೌಲಭ್ಯಗಳಲ್ಲಿ ಬಳಸಲಾಗುವ 1,000 ವೈದ್ಯಕೀಯ ಆಮ್ಲಜನಕ ಸಾಂದ್ರಕಗಳನ್ನು ಯುಎಸ್‌ಎಐಡಿ ತ್ವರಿತವಾಗಿ ಕ್ರೋಢೀಕರಿಸುತ್ತಿದೆ. ಯುಎಸ್‌ಎಐಡಿ ಕಾರ್ಯಕ್ರಮಗಳು ಜೀವ ಉಳಿಸಲು ಮತ್ತು COVID-19 ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿವೆ. ಇದರ ಜೊತೆಗೆ ಕೊರೊನಾ ಸಂಬಂಧಿತ ಪೂರ್ವಾಗ್ರಹಗಳನ್ನು ಕಡಿಮೆ ಮಾಡುವುದು, ಪ್ರಕರಣಗಳ ಪತ್ತೆ ಮಾರ್ಗಗಳು ಹಾಗೂ ಕಣ್ಗಾವಲು ಬಲಪಡಿಸುವ ವಿಧಾನಗಳು; ತುರ್ತು ಸಿದ್ಧತೆ ಮತ್ತು ಸಾಂಕ್ರಾಮಿಕಕ್ಕೆ ಶಕ್ತ ಪ್ರತಿಕ್ರಿಯೆ ನೀಡುವಿಕೆಯನ್ನು ಹೆಚ್ಚಿಸಲು ನವ ಆರ್ಥಿಕ ಕಾರ್ಯವಿಧಾನಗಳನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತವೆ. ಕಳೆದ ಹಲವಾರು ದಶಕಗಳಿಂದ USAID ಬಾಣಂತಿ ಹಾಗೂ ನವಜಾತ ಶಿಶು ಮರಣ, ಪೋಲಿಯೊ, ಎಚ್ಐವಿ ಮತ್ತು ಕ್ಷಯ ಸೇರಿದಂತೆ ದೇಶದ ಅತ್ಯಂತ ಕ್ಲಿಷ್ಟ ಆರೋಗ್ಯ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕೆಲಸ ಮಾಡಿದೆ. ಅಮೆರಿಕದಲ್ಲಿ 70 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಜನರೊಂದಿಗೆ ಸಂಪರ್ಕದಲ್ಲಿದ್ದು, ಕೆಲಸ ಮಾಡುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಮೆರಿಕ ಭಾರತದೊಂದಿಗೆ ಒಟ್ಟಾಗಿ ಹೋರಾಡಲಿದೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅಮೆರಿಕನ್ ಆಸ್ಪತ್ರೆಗಳು ತೊಂದರೆಗೊಳಗಾದಾಗ ಭಾರತವು ಅಮೆರಿಕಕ್ಕೆ ಸಹಾಯವನ್ನು ಕಳುಹಿಸಿದಂತೆಯೇ, ಅಮೆರಿಕವು ಈಗ ಭಾರತಕ್ಕೆ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡುತ್ತಿದೆ. ಮತ್ತು ವಿಶ್ವದಾದ್ಯಂತದ ಪರಿಹಾರ ಕಾರ್ಯಗಳಿಗೆ ದೇಣಿಗೆ ನೀಡಲು ಆಸಕ್ತಿ ಹೊಂದಿರುವವರು ಅಂತರರಾಷ್ಟ್ರೀಯ ವಿಪತ್ತು ( )ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಬಹುದು.


from India & World News in Kannada | VK Polls https://ift.tt/3gMut3G

‘ದೇಶದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ, ಸಿಎಂ ಕಚೇರಿ ವಾರ್‌ ರೂಂ ರೀತಿಯಲ್ಲಿ ಕೆಲಸ ಮಾಡ್ತಿದೆ’; ಬಿವೈ ವಿಜಯೇಂದ್ರ

ಮೈಸೂರು: ಕೊರೊನಾ ಸೋಂಕು ಬಹಳ ವೇಗವಾಗಿ ಹರಡುತ್ತಿದ್ದು, ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ರಾಜಕಾರಣ ಮಾಡುವ ಸಮಯ ಅಲ್ಲ. ಪಕ್ಷಾತೀತವಾಗಿ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಹಿಂದಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೆ ಬಹಳ ವ್ಯತ್ಯಾಸವಿದೆ. ಸೋಂಕು ಹಿಂದಿಗಿಂತ ನಾಲ್ಕು ಪಟ್ಟು ವೇಗವಾಗಿ ಹರಡುತ್ತಿದೆ. ಯಾರೂ ಇದನ್ನು ಊಹೆ ಮಾಡಿರಲಿಲ್ಲ ಎಂದರು. ಕೊರೊನಾದಿಂದ ಬಡವರು, ಶ್ರೀಮಂತರು ಎಲ್ಲರೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸೋಂಕು ಯಾರನ್ನೂ ಬಿಡುತ್ತಿಲ್ಲ. ಹೀಗಾಗಿ, ಎಲ್ಲಾ ಪಕ್ಷದವರು ಸಹಕಾರ ನೀಡಬೇಕು. ಮುಖ್ಯಮಂತ್ರಿ ಕಚೇರಿ ವಾರ್‌ ರೂಂ ರೀತಿ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರು ಹಗಲು ರಾತ್ರಿ ಇಡೀ ರಾಜ್ಯದ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದು ಹೇಳಿದರು. ಸಚಿವರ ಕೋರಿಕೆ ಮೇರೆಗೆ ಎರಡು ದಿನಗಳ ಹಿಂದೆ ಮೈಸೂರಿಗೆ ಒಂದು ಸಾವಿರ ರೆಮ್‌ಡಿಸಿವಿರ್‌ ಕಳುಹಿಸಿದ್ದಾರೆ. ದೊಡ್ಡ ಸವಾಲು ನಮ್ಮ ಮುಂದಿದೆ. ಆ ಸವಾಲನ್ನು ಎದುರಿಸುವ ಶಕ್ತಿ ಬಿಜೆಪಿ ಸರಕಾರಕ್ಕೆ ಇದೆ ಎಂದರು. ಇನ್ನು ಜಿಲ್ಲೆಯಲ್ಲಿ ಬೆಡ್‌ಗಳಿಗೆ ಒತ್ತಡ ಹೆಚ್ಚಿದೆ. ತೀವ್ರ ಸಮಸ್ಯೆ ಎದುರಿಸುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಉಳಿದವರು ಮನೆಯಲ್ಲೇ ಐಸೋಲೇಷನ್‌ ಆಗಿ ಚಿಕಿತ್ಸೆ ಪಡೆಯಬೇಕು. ಸಿದ್ಧತೆ ಮಾಡಿಕೊಳ್ಳಲು, ಸೌಲಭ್ಯ ಹೆಚ್ಚಿಸಿಕೊಳ್ಳಲು ಸರಕಾರವು ಲಾಕ್‌ಡೌನ್‌ ಮಾಡಿದೆ ಎಂದರು.


from India & World News in Kannada | VK Polls https://ift.tt/3eFmClP

'ನೋ.. ಚಾನ್ಸ್‌, ನಿಮಗೆ ಬೌಲಿಂಗ್‌ ಮಾಡಲ್ಲ' ಕೊಹ್ಲಿಗೆ ಬೌಲಿಂಗ್‌ ಮಾಡಲು ನಿರಾಕರಿಸಿದ ಜೇಮಿಸನ್‌!

ಅಹ್ಮದಾಬಾದ್‌: ನಾಯಕತ್ವದ ಭಾರತ ಹಾಗೂ ಕೇನ್ ವಿಲಿಯಮ್ಸನ್‌ ನಾಯಕತ್ವ ನ್ಯೂಜಿಲೆಂಡ್‌ ತಂಡಗಳು ಇಂಗ್ಲೆಂಡ್‌ನಲ್ಲಿ ಜೂನ್‌ 18ರಿಂದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಹಾಗಾಗಿ 2021ರ ಆವೃತ್ತಿಯ ಐಪಿಎಲ್‌ ಟೂರ್ನಿಯ ಬಳಿಕ ಎರಡೂ ತಂಡಗಳು ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿವೆ. ನ್ಯೂಜಿಲೆಂಡ್‌ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಅರ್ಹತಾ ಪಂದ್ಯಗಳನ್ನು ತನ್ನ ತವರಿನಲ್ಲಿಯೇ ಮುಗಿಸಿತ್ತು. ಆದರೆ, ಭಾರತ ತಂಡ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಮಣಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತ್ತು. ಭಾರತ 2-1 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಮಣಿಸಿದ್ದರೆ, 3-1 ಅಂತರದಲ್ಲಿ ಇಂಗ್ಲೆಂಡ್‌ ತಂಡವನ್ನು ತವರು ಮಣ್ಣಿಯಲ್ಲಿ ಸೋಲಿಸಿತ್ತು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ಸ್‌ಗೆ ಅರ್ಹತೆ ಪಡೆದ ಎರಡನೇ ತಂಡವಾಗಿದೆ. ನ್ಯೂಜಿಲೆಂಡ್‌ನ ಹಲವು ಆಟಗಾರರು ಹಾಗೂ ಭಾರತ ತಂಡದ ಆಟಗಾರರು ಸದ್ಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡುತ್ತಿದ್ದಾರೆ. ಅದೇ ರೀತಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಜೊತೆಯಲ್ಲಿಯೇ ಇರುವ ನ್ಯೂಜಿಲೆಂಡ್‌ನ ಅವರನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತ ಹಾಗೂ ನ್ಯೂಜಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ಸ್‌ ಸಲುವಾಗಿ ನಾಯಕ ವಿರಾಟ್‌ ಕೊಹ್ಲಿ, ಸಹ ಆಟಗಾರ ನ್ಯೂಜಿಲೆಂಡ್‌ ಕೈಲ್‌ ಜೇಮಿಸನ್‌ ಅವರ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಇನ್ನೂ ಕೊಹ್ಲಿ ಯೋಜನೆ ಸಕಾರವಾಗಿಲ್ಲ ಎಂಬುದನ್ನು ಆರ್‌ಸಿಬಿ ಆಲ್‌ರೌಂಡರ್‌ ಬಹಿರಂಗಪಡಿಸಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 15 ಕೋಟಿ ರೂ. ಗಳಿಗೆ ಖರೀದಿಸಿರುವ ಕೈಲ್‌ ಜೇಮಿಸನ್‌ ಅವರು ಐಪಿಎಲ್‌ ಬರುವಾಗ ಕೆಲ ಡ್ಯೂಕ್‌ ಬಾಲ್‌ಗಳನ್ನು ಭಾರತಕ್ಕೆ ತಂದಿದ್ದಾರೆ. ಏಕೆಂದರೆ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಈ ಚೆಂಡುಗಳನ್ನು ಬಳಸಲಾಗುತ್ತದೆ ಎಂದು ಡ್ಯಾನ್‌ ಕ್ರಿಸ್ಟಿಯನ್‌ ಹೇಳಿದರು. ಆರ್‌ಸಿಬಿ ನೆಟ್ಸ್‌ನಲ್ಲಿ ಕೈಲ್‌ ಜೇಮಿಸನ್‌ ಅವರಿಂದ ಡ್ಯೂಕ್‌ ಬಾಲ್‌ನಲ್ಲಿ ಬ್ಯಾಟಿಂಗ್‌ ಮಾಡಲು ನಾಯಕ ವಿರಾಟ್‌ ಕೊಹ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಕಿವೀಸ್‌ ವೇಗಿ ಕೈಲ್‌ ಜೇಮಿಸನ್‌, ಟೀಮ್‌ ಇಂಡಿಯಾ ನಾಯಕನ ಉಪಾಯಕ್ಕೆ ಇನ್ನೂ ಮಣಿದಿಲ್ಲ ಎಂದು ಕ್ರಿಸ್ಟಿಯನ್‌ ತಿಳಿಸಿದರು . "ಐಪಿಎಲ್‌ ಟೂರ್ನಿಗೆ ಬಂದ ಆರಂಭಿಕ ವಾರದಿಂದ ನಾವು ಇಲ್ಲಿದ್ದೇವೆ. ನೆಟ್ಸ್ ಮುಗಿದ ಬಳಿಕ ನಾನು, ಕೊಹ್ಲಿ, ಜೇಮಿಸನ್‌ ಒಂದು ಹತ್ತಿರ ಕುಳಿತು, ಟೆಸ್ಟ್ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಿದ್ದೆವು. ವಿರಾಟ್‌ ಕೊಹ್ಲಿ: 'ಜೇಮಿ ನೀವು ಡ್ಯೂಕ್‌ ಬಾಲ್‌ಗಳಲ್ಲಿ ಹೆಚ್ಚು ಬೌಲಿಂಗ್‌ ಮಾಡಿದ್ದೀರಾ? ಎಂದು ಕೇಳಿದರು. ಇದಕ್ಕೆ ಜೇಮಿ: 'ಹೌದು, ಕೆಲ ಡ್ಯೂಕ್‌ ಬಾಲ್‌ಗಳು ನನ್ನ ಬಳಿ ಇವೆ. ಐಪಿಎಲ್‌ ಮುಗಿದು ಇಂಗ್ಲೆಂಡ್‌ಗೆ ತೆರಳುವ ಮುನ್ನ ಈ ಚೆಂಡುಗಳಲ್ಲಿ ಅಭ್ಯಾಸ ನಡೆಸುತ್ತೇನೆ ವಿರಾಟ್‌' ಎಂದರು. ಅದಕ್ಕೆ ಕೊಹ್ಲಿ, 'ಓಹ್‌, ನೀವು ನನಗೆ ನೆಟ್ಸ್‌ನಲ್ಲಿ ಡ್ಯೂಕ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡುತ್ತೀರಾ? ನಿಮ್ಮ ಬೌಲಿಂಗ್‌ ಎದುರಿಸಲು ನನಗೆ ತುಂಬಾ ಖುಷಿ ಇದೆ,' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಮಿ,'ನೋ ಚಾನ್ಸ್‌, ನಿಮಗೆ ನಾನು ಬೌಲಿಂಗ್‌ ಮಾಡಲ್ಲ!'ಎಂದು ಕಡ್ಡಿ ಮುರಿದಂತೆ ನಿರಾಕರಿಸಿದರು. ಕೈಲ್‌ ಜೇಮಿಸನ್‌ ಅವರು ಡ್ಯೂಕ್‌ ಬಾಲ್‌ನಲ್ಲಿ ರಿಲೀಸ್‌ ಪಾಯಿಂಟ್‌ ನೋಡುತ್ತಾರೆ ಹಾಗೂ ಎಲ್ಲಾ ರೀತಿಯಲ್ಲೂ ಅವರು ಡ್ಯೂಕ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡುತ್ತಾರೆ," ಎಂದು ಕ್ರಿಸ್ಟಿಯನ್‌ ಗ್ರೇಡ್‌ ಕ್ರಿಕೆಟರ್ ಯೂಟ್ಯೂಬ್‌ ಚಾನೆಲ್‌ಗೆ ಹೇಳಿದ್ದಾರೆ. ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ಕೆ.ಎಲ್‌ ರಾಹುಲ್‌ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aQKH80

ಚಿಕ್ಕಮಗಳೂರು: ಮದುವೆಗೆ 1 ದಿನ ಬಾಕಿ ಇರುವಾಗಲೇ ವರ ಕೊರೊನಾಗೆ ಬಲಿ, ಹಸೆಮಣೆ ಏರಬೇಕಿದ್ದ ಯುವಕ ಮಸಣಕ್ಕೆ!

ಕೊಪ್ಪ: ಮದುವೆಯಾಗಲು ಬೆಂಗಳೂರಿನಿಂದ ತಾಲೂಕಿನ ಕುಂಚೂರು ಬಳಿಯ ದೇವರಕೊಡಿಗೆ ಗ್ರಾಮಕ್ಕೆ ಆಗಮಿಸಿದ್ದ ಯುವಕ ಕೊರೊನಾಗೆ ಬಲಿಯಾಗಿದ್ದಾನೆ. ದೇವರಕೊಡಿಗೆಯ ಕೃಷಿಕ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಅವರ ಪುತ್ರ ಪೃಥ್ವಿರಾಜ್‌(32) ಕೊರೊನಾದಿಂದ ಬುಧವಾರ ಮೃತಪಟ್ಟವ. ಮೃತ ಪೃಥ್ವಿರಾಜ್‌ ಅವರಿಗೆ ತಂದೆ, ತಾಯಿ ಮತ್ತು ತಮ್ಮ ಇದ್ದಾರೆ. ಪೃಥ್ವಿರಾಜ್‌ ಅವರಿಗೆ ಕುಂಚೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ಮದುವೆ ನಿಶ್ಚಯವಾಗಿತ್ತು. ಬೆಂಗಳೂರಿನಿಂದ 10ದಿನದ ಹಿಂದೆ ಮನೆಗೆ ಬಂದಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಅವರಿಗೆ ಬುಧವಾರ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ಕೊರೊನಾ ಇಲ್ಲವೆಂಬ ವರದಿ ಸಿಕ್ಕಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಉಸಿರಾಟದ ತೊಂದರೆಯಿಂದಾಗಿ ಅವರು ಮೃತಪಟ್ಟಿದ್ದಾರೆ. ಮೆಗ್ಗಾನ್‌ ಆಸ್ಪತ್ರೆಯ ಪರೀಕ್ಷೆ ವರದಿಯಲ್ಲಿಅವರಿಗೆ ಕೊರೊನಾ ದೃಢಪಟ್ಟಿದೆ. ಮೃತದೇಹವನ್ನು ಆಸ್ಪತ್ರೆ ವಾಹನದಲ್ಲಿ ತಂದು ನಂತರ ದೇವರಕೊಡಿಗೆಯಲ್ಲಿ ಅಂತ್ಯಕ್ರಿಯೆ ನರವೇರಿಸಲಾಯಿತು. ತಾಲೂಕಿನಲ್ಲಿ ಇದುವರೆಗೆ ಕೊರೊನಾದಿಂದ 4 ಜನ ಮೃತಪಟ್ಟಂತಾಗಿದೆ.


from India & World News in Kannada | VK Polls https://ift.tt/3u5M0rx

ಕೋವಿಡ್‌ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ಅವರಿಗೆ ಚಿಕಿತ್ಸೆ: ಸಚಿವ ಸುಧಾಕರ್‌

ಬೆಂಗಳೂರು: ಕೋವಿಡ್‌ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್‌ ಕಂಡು ಬರುವವರ ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್‌ ವಿಧಾನ ಅನುಸರಿಸಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. ''ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಆರ್‌ಟಿಪಿಸಿಆರ್‌ ಅಥವಾ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮಾಡಿಸಿದರೂ ನೆಗೆಟಿವ್‌ ವರದಿ ಬರುತ್ತಿದೆ. ವ್ಯಕ್ತಿಗೆ ಕೋವಿಡ್‌ ರೋಗ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್‌ ಬರುವುದರಿಂದ ರೋಗ ತೀವ್ರತೆ ಹೆಚ್ಚಾದ ಸಮಯದಲ್ಲಿಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಿಂಡ್ರೋಮಿಕ್‌ ವಿಧಾನ ಅನುಸರಿಸಲು ತೀರ್ಮಾನಿಸಲಾಗಿದೆ,'' ಎಂದು ಸಚಿವರು ತಿಳಿಸಿದ್ದಾರೆ. ''ಈ ವಿಧಾನದಲ್ಲಿಸಂಬಂಧಪಟ್ಟ ವೈದ್ಯರು ಅಥವಾ ವೈದ್ಯಾಧಿಕಾರಿಗಳೇ ರೋಗಿಗಳ ಸ್ಥಿತಿಯನ್ನು ಪ್ರಮಾಣೀಕರಿಸುತ್ತಾರೆ. ನಂತರ ರೋಗಿಗೆ ಪ್ರತ್ಯೇಕ ಸಂಖ್ಯೆ ನೀಡಿ ಗುರುತಿಸಿ, ನಿರ್ದಿಷ್ಟ ಆಸ್ಪತ್ರೆಯಲ್ಲಿಹಾಸಿಗೆ ಲಭ್ಯವಾಗಿಸಲಾಗುತ್ತದೆ. ಇವರನ್ನು ಕೊರೊನಾ ರೋಗಿ ಎಂದೇ ಪರಿಗಣಿಸಲಾಗುತ್ತದೆ. ರೋಗಿಗೆ ಸೂಕ್ತ ಸಮಯದಲ್ಲಿಅಗತ್ಯ ಚಿಕಿತ್ಸೆ ನೀಡಬೇಕಿರುವುದರಿಂದ ಈ ವಿಧಾನವನ್ನು ಅನುಸರಿಸಲು ನಿರ್ಧರಿಸಲಾಗಿದೆ. ಈ ವಿಧಾನ ಅನುಸರಿಸುವ ಕುರಿತು ಎಲ್ಲಅಧಿಕಾರಿಗಳಿಗೆ ಸೂಚಿಸಲಾಗಿದೆ,'' ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆ ಹೊರಡಿಸಿದ್ದು, ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಸಮಸ್ಯೆ ಏನಾಗಿತ್ತು? - ತೀವ್ರತರದ ಕೊರೊನಾ ಲಕ್ಷಣ ಇದ್ದರೂ ಕೋವಿಡ್‌ ಟೆಸ್ಟ್‌ನಲ್ಲಿಕೆಲವರಿಗೆ ನೆಗೆಟಿವ್‌ ಬರುತ್ತಿದೆ. - ಪಾಸಿಟಿವ್‌ ವರದಿ ಇದ್ದ ಹೊರತೂ ಬಿಬಿಎಂಪಿಯಿಂದ ಬಿಯು ನಂಬರ್‌ ಕೊಡುತ್ತಿರಲಿಲ್ಲ. - ಇದರಿಂದಾಗಿ ಆಸ್ಪತ್ರೆಯಲ್ಲಿಸೂಕ್ತ ಸಿಗದೆ ನಿತ್ಯ ಹಲವಾರು ರೋಗಿಗಳು ಮೃತಪಡುತ್ತಿದ್ದಾರೆ.


from India & World News in Kannada | VK Polls https://ift.tt/3nBbSco

ಮೈಸೂರು: ಕುಡಿದ ನಶೆಯಲ್ಲಿ 2 ಮಕ್ಕಳ ಸಹಿತ ತುಂಬು ಗರ್ಭಿಣಿ ಪತ್ನಿ, ತಾಯಿಯನ್ನು ಕೊಂದ ವಿಶೇಷ ಚೇತನ!

ಮೈಸೂರು: ಪತ್ನಿಯ ಶೀಲ ಶಂಕಿಸಿದ ವಿಶೇಷ ಚೇತನನೊಬ್ಬ ಕುಡಿದ ಅಮಲಿನಲ್ಲಿ ಪತ್ನಿ, ತಾಯಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ತಾಲೂಕಿನ ಚಾಮೇಗೌಡನ ಹುಂಡಿ ಗ್ರಾಮದ ಮಣಿಕಂಠ ಸ್ವಾಮಿ (35) ನೀಚ ಕೃತ್ಯ ಎಸಗಿದ ಆರೋಪಿ. ಕೊಲೆ ಮಾಡಿದ ಬಳಿಕ ಆರೋಪಿ ತನ್ನ ಮೂರು ಚಕ್ರದ ವಾಹನದೊಂದಿಗೆ ಪರಾರಿಯಾಗಿದ್ದ. ಪೊಲೀಸರು ಕೆಲವೇ ಗಂಟೆಗಳಲ್ಲೇ ಚುರುಕಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ನಿ ಗಂಗಾ (28), ತಾಯಿ ಕೆಂಪಾಲಮ್ಮ (60), ಮಕ್ಕಳಾದ ಸಾಮ್ರಾಟ್‌ (3), ರೋಹಿತ್‌ (2) ಅವರ ತಲೆಗೆ ಆರೋಪಿಯು ರಾಡ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಣಿಕಂಠ ಸ್ವಾಮಿ, ತನ್ನ ಪತ್ನಿಯ ಶೀಲ ಶಂಕಿಸಿ ಆಗಾಗ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ತಡರಾತ್ರಿಯೂ ಮಾತಿನ ಚಕಮಕಿ ನಡೆದಿದ್ದು, ಕುಡಿದ ಅಮಲಿನಲ್ಲಿ ಮಧ್ಯರಾತ್ರಿ ಕೊಲೆ ಮಾಡಿದ್ದಾನೆ. ಪತ್ನಿ ತುಂಬು ಗರ್ಭಿಣಿಯಾಗಿದ್ದು, ಎರಡು ದಿನದೊಳಗಡೆ ಹೆರಿಗೆಯಾಗುವ ಸೂಚನೆಯನ್ನು ವೈದ್ಯರು ನೀಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತಾಲೂಕಿನ ಹೆಗ್ಗನೂರು ಗ್ರಾಮದ ಗಂಗಾಳನ್ನು 7 ವರ್ಷಗಳ ಹಿಂದೆ ಮಣಿಕಂಠ ಸ್ವಾಮಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಮೂರನೇ ಹೆರಿಗೆಗಾಗಿ ತಾಯಿ ಮನೆ ಹೆಗ್ಗನೂರು ಗ್ರಾಮಕ್ಕೆ ಕರೆದೊಯ್ಯಲು ಗಂಗಾಳ ಪೋಷಕರು ಮನೆಗೆ ಬಂದು ಒತ್ತಾಯಿಸಿದ್ದರು. ಇದನ್ನು ಮಣಿಕಂಠಸ್ವಾಮಿ ಒಪ್ಪದೆ ತಾನೇ ಪತ್ನಿಯ ಬಾಣಂತನ ಮಾಡುವುದಾಗಿ ಹೇಳಿದ್ದ. ಇದರಿಂದಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಹೆಗ್ಗನೂರು ಗ್ರಾಮಸ್ಥರು ಆರೋಪಿಯನ್ನು ತಮಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಆರೋಪಿಯನ್ನು ಸೆರೆ ಹಿಡಿದು ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗರ್ಭಿಣಿ, ವೃದ್ಧೆ, ಚಿಕ್ಕಮಕ್ಕಳನ್ನು ಕಂಡ ಗ್ರಾಮಸ್ಥರು ಮಮ್ಮಲ ಮರುಗಿದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ದಕ್ಷಿಣ ವಲಯ ಪೋಲೀಸ್‌ ಮಹಾ ನಿರೀಕ್ಷಕ ಪ್ರವೀಣ್‌ ಮಧುಕರ್‌ ಪವರ್‌, ಹೆಚ್ಚುವರಿ ಪೋಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌, ಹುಣಸೂರು ವಿಭಾಗದ ಡಿವೈಎಸ್‌ಪಿ ರವಿಪ್ರಸಾದ್‌, ವೃತ್ತ ನಿರೀಕ್ಷಕ ಎನ್‌.ಆನಂದ್‌, ರಾಜೇಂದ್ರ, ಪಿಎಸ್‌ಐಗಳಾದ ಜಯಪ್ರಕಾಶ್‌, ಆರ್‌.ದಿವ್ಯ, ಶ್ವಾನದಳ, ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಮೃತ ಗಂಗಾಳ ಸಹೋದರ ಲೋಕೇಶ್‌ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಎಚ್‌.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಡೆಸಿದ್ದು, ಶವಗಳನ್ನು ವರಸುದಾರರಿಗೆ ಒಪ್ಪಿಸಲಾಯಿತು.


from India & World News in Kannada | VK Polls https://ift.tt/3u4CyEA

ಸದ್ಯಕ್ಕೆ 18ರಿಂದ 44 ವರ್ಷದವರಿಗೆ ಲಸಿಕೆ ಸಿಗುವುದು ಅನುಮಾನ​? 3ನೇ ಹಂತದ ಲಸಿಕೆ ಅಭಿಯಾನ ವಿಳಂಬ?

ಹೊಸದಿಲ್ಲಿ: ಕೊರೊನಾ ನಿರೋಧಕ ಲಸಿಕೆಗಳ ಕೊರತೆಯಿಂದಾಗಿ, ಬಹುತೇಕ ರಾಜ್ಯಗಳಲ್ಲಿ ಮೇ 1ರಿಂದ ಆರಂಭಗೊಳ್ಳಬೇಕಿರುವ ವಿಳಂಬವಾಗುವ ಸಾಧ್ಯತೆ ಇದೆ. ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳ ಪೂರೈಕೆಯಲ್ಲಿ ತೀವ್ರ ಕೊರತೆ ಎದುರಾಗಿರುವ ಕಾರಣ ದಿಲ್ಲಿ ಸರಕಾರ, 3ನೇ ಹಂತದ ಲಸಿಕೆ ಅಭಿಯಾನವನ್ನು ಮುಂದೂಡಿದೆ. ಮಹಾರಾಷ್ಟ್ರ ಬುಧವಾರವೇ ಇಂತಹ ನಿರ್ಧಾರ ಕೈಗೊಂಡಿತ್ತು. ಬಿಜೆಪಿ ಆಡಳಿತವಿರುವ ಗುಜರಾತ್‌ ಸರಕಾರ ಕೂಡ ಇದೇ ಕಾರಣ ನೀಡಿದೆ ಎನ್ನಲಾಗಿದೆ. ರಾಜಸ್ಥಾನ, ಛತ್ತೀಸ್‌ಗಢ ಸೇರಿ ಇನ್ನೂ ಕೆಲವು ರಾಜ್ಯಗಳೂ ಇದೇ ಹಾದಿ ತುಳಿಯುವ ಸಾಧ್ಯತೆ ಇದ್ದು, ಸದ್ಯಕ್ಕೆ 18ರಿಂದ 44 ವರ್ಷದವರಿಗೆ ಲಸಿಕೆ ಸಿಗುವುದು ಅನುಮಾನವಾಗಿದೆ. ಮೇ 1ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ನಡೆಯಲಿದೆ ಎಂದು ಕೇಂದ್ರ ಸರಕಾರ ಏ.19ರಂದು ಘೋಷಿಸಿತ್ತು. ಏ. 28ರಿಂದ ಕೋವಿನ್‌ ಆ್ಯಪ್‌ ಇಲ್ಲವೇ ಆರೋಗ್ಯ ಸೇತು ಆ್ಯಪ್‌ ಮೂಲಕ ನೋಂದಣಿಗೆ ಚಾಲನೆಯನ್ನೂ ನೀಡಲಾಗಿದೆ. ಆದರೆ ಕೆಲವು ಲಸಿಕೆ ಕೊರತೆಯಿಂದ ಮೇ 1ರಿಂದ ಅಭಿಯಾನ ಆರಂಭಿಸಲು ಸಾಧ್ಯವಿಲ್ಲ ಎಂದಿವೆ. ಎರಡನೇ ಹಂತದ ಅಭಿಯಾನದಡಿ 45ರಿಂದ 60 ವರ್ಷದೊಳಗಿನವರಿಗೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಲಸಿಕೆಗಳ ಪೂರೈಕೆಯೇ ಇಲ್ಲದಿರುವಾಗ ಇನ್ನು 18ರಿಂದ 44 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕುವುದಾಗಿ ಹೇಳಿದರೆ ಅದು ಸಾಧ್ಯವಾಗದ ಮಾತಾಗಿದೆ. ಒಂದೊಮ್ಮೆ ಪ್ರಯತ್ನಿಸಿದರೂ ಜನದಟ್ಟಣೆ ಉಂಟಾಗಿ ಲಸಿಕೆ ಅಲಭ್ಯತೆಯಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಹಾಗಾಗಿ ಸಮರ್ಪಕ ಪೂರೈಕೆ ಆಗದ ಹೊರತು ಅಭಿಯಾನ ಆರಂಭಿಸುವುದಿಲ್ಲ ಎಂದು ದಿಲ್ಲಿ ಸೇರಿ ಕೆಲವು ರಾಜ್ಯಗಳು ಹೇಳಿವೆ.


from India & World News in Kannada | VK Polls https://ift.tt/330Q0NX

‘ಜಿಂದಾಲ್‌ಗೆ ತರಾತುರಿಯಲ್ಲಿ ಭೂಮಿ ನೀಡಿರೋದು ಯಾಕೆ? ರಾಜ್ಯದಲ್ಲಿ ಹಗಲು ದರೋಡೆ ನಡೀತಿದೆ’; ಎಚ್‌ ವಿಶ್ವನಾಥ್

ಮೈಸೂರು: ಬಳ್ಳಾರಿಯ ಸಂಡೂರಿನಲ್ಲಿ ಜಿಂದಾಲ್‌ ಕಂಪನಿಗೆ ಸರಕಾರಿ ಭೂಮಿ ಪರಭಾರೆ ಮಾಡಿರುವ ಕ್ರಮ ಸರಿಯಲ್ಲ. ಇದರ ಹಿಂದೆ ದೊಡ್ಡ ವ್ಯವಹಾರವೇ ನಡೆದಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಜಿಂದಾಲ್‌ ಕಂಪನಿಗೆ 3,660ಕ್ಕೂ ಹೆಚ್ಚು ಎಕರೆ ಭೂಮಿಯನ್ನು ನೀಡಿರುವುದು ಸರಿಯಲ್ಲ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಜಿಂದಾಲ್‌ ಕಂಪನಿಗೆ ಭೂಮಿ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹಗಲು-ರಾತ್ರಿ ಧರಣಿ ನಡೆಸಿದ್ದರು. ಆದರೀಗ ತರಾತುರಿಯಲ್ಲಿ ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ರಾಜ್ಯವೇ ಕೊರೊನಾ ಸೋಂಕಿನಿಂದ ತತ್ತರಿಸಿದೆ. ಇಂತಹ ಸಂದರ್ಭ ದಲ್ಲಿ ಸರಕಾರ ತರಾತುರಿಯಲ್ಲಿ ಜಿಂದಾಲ್‌ ಕಂಪನಿಗೆ ಭೂಮಿ ನೀಡಿರು ವುದು ಸರಿಯಾದ ಕ್ರಮವಲ್ಲ. ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದರು. ಜಿಂದಾಲ್‌ ಕಂಪನಿಯಿಂದ ಸರಕಾರಕ್ಕೆ 2 ಸಾವಿರ ಕೋಟಿ ರೂ.ಬಾಕಿ ಬರಬೇಕಿದೆ. ಕಳೆದ ಸಂಪುಟ ಸಭೆಯಲ್ಲಿ ಜಿಂದಾಲ್‌ ಪರ ತೆಗೆದು ಕೊಂಡಿರುವ ತೀರ್ಮಾನವನ್ನು ಮುಂದಿನ ಸಭೆಯಲ್ಲಿ ರದ್ದುಗೊಳಿಸಬೇಕು ಎಂದರು. ರಾಜ್ಯದಲ್ಲಿ ಪ್ರತಿಪಕ್ಷ ಸತ್ತು ಹೋಗಿರುವುದರಿಂದ ಈ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಕೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಈ ವಿಚಾರದ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದರು.


from India & World News in Kannada | VK Polls https://ift.tt/2RfWR3C

‘ರಾಜ್ಯದಲ್ಲಿ ಕೊರೊನಾ ನಿರ್ವಹಣೆ ತೃಪ್ತಿ ತಂದಿಲ್ಲ, ಕತ್ತಿ ಹೇಳಿಕೆ ಅಕ್ಷಮ್ಯ ಅಪರಾಧ’; ಸಿ.ಟಿ ರವಿ ಅಸಮಾಧಾನ

ಹಾಸನ: ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸಾಯುವಂತೆ ಹೇಳಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರವಿ, ‘ಸಚಿವ ಉಮೇಶ್‌ ಕತ್ತಿ ಹೇಳಿಕೆ ಅಕ್ಷಮ್ಯ ಅಪರಾಧ, ಯಾರೂ ಕೂಡ ಸಾವನ್ನು ಬಯಸಬಾರದು’ ಎಂದರು. ರಾಜ್ಯದಲ್ಲಿ ತೃಪ್ತಿ ತಂದಿಲ್ಲ. ಇನ್ನಷ್ಟು ಆಲೋಚನೆ ಮಾಡಬೇಕಿತ್ತು ಎಂದ ರವಿ, ಹಾಗೆಂದ ಮಾತ್ರಕ್ಕೆ ಏನೂ ಮಾಡಿಯೇ ಇಲ್ಲ ಎಂಬ ಆರೋಪ ಒಪ್ಪಿಕೊಳ್ಳಲು ಆಗುವುದಿಲ್ಲ ಎಂದೂ ಹೇಳಿದರು. ವೆಂಟಿಲೇಟರ್‌, ಆಕ್ಸಿಜನ್‌ ಅಗತ್ಯವಿಲ್ಲದವರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯಕೀಯ ಎಮರ್ಜೆನ್ಸಿ ಎಂದು ಪರಿಗಣಿಸುವ ಬದಲು ಪ್ರತಿಪಕ್ಷಗಳು ಟೀಕೆಯಲ್ಲಿ ತೊಡಗಿವೆ. ಕಾಂಗ್ರೆಸ್‌ ಆಡಳಿತದ ಮಹಾರಾಷ್ಟ್ರ, ಛತ್ತೀಸ್‌ಘಡದಲ್ಲೂ ಕೊರೊನಾ ಸೋಂಕು ವ್ಯಾಪಕವಾಗಿದೆ. ಅಲ್ಲಿಯ ಬಗ್ಗೆ ಮಾತನಾಡದವರು ಇಲ್ಲಿಯ ಬಗ್ಗೆ ಏಕೆ ಟೀಕಿಸಬೇಕು? ಸಂಕಷ್ಟವನ್ನು ಮೊದಲು ಎದುರಿಸೋಣ, ಆ ಬಳಿಕ ಪ್ರತಿಪಕ್ಷ ಮುಖಂಡರು ಟೀಕೆ ಮಾಡಲಿ ಎಂದು ತಿರುಗೇಟು ನೀಡಿದರು.


from India & World News in Kannada | VK Polls https://ift.tt/3u7A8VF

ಪುತ್ತೂರು: ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ಅಗತ್ಯ ವಸ್ತು ಖರೀದಿಸಲು ಬಂದ ವ್ಯಕ್ತಿ!

ಪುತ್ತೂರು: ಕೊರೊನಾ ತಡೆಗಟ್ಟಲು ಮನುಷ್ಯರೆಲ್ಲಮಾಸ್ಕ್‌ ಧರಿಸಿರುವಾಗ ಇದೇ ನಿಯಮ ಸಾಕು ನಾಯಿಗೂ ಅನ್ವಯವಾಗುತ್ತಾ? ಕಾನೂನು ಏನು ಹೇಳುತ್ತದೆ ಎಂಬುದು ಎರಡನೇ ವಿಚಾರ. ಆದರೆ ಇಲ್ಲೊಬ್ಬರು ಅಗತ್ಯ ವಸ್ತುಗಳನ್ನು ಖರೀದಿಸಲು ಪೇಟೆಗೆ ಬಂದಾಗ ತಮ್ಮ ಜತೆ ಕರೆ ತಂದಿದ್ದ ಸಾಕು ತೊಡಿಸಿದ್ದರು. ಪ್ರವೀಣ್‌ ಎಂಬವರು ಗುರುವಾರ ಬೆಳಗ್ಗೆ ಪುತ್ತೂರು ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಾಗ ನಾಯಿ ಮರಿಯನ್ನೂ ಕೂರಿಸಿಕೊಂಡು ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರಿಗೆ ಇವರನ್ನು ಕಂಡಾಗ ಆಶ್ಚರ್ಯ. ತಾವು ಮಾಸ್ಕ್‌ ಧರಿಸಿದ್ದಲ್ಲದೆ ನಾಯಿ ಮರಿಗೂ ಮಾಸ್ಕ್‌ ಹಾಕಿದ್ದರು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಿರುವಾಗ ಸಾಕುಪ್ರಾಣಿಗಳ ಬಗೆಗೂ ಕಾಳಜಿ ವಹಿಸಬೇಕಲ್ಲವೇ? ಇದು ನಮ್ಮ ಜವಾಬ್ದಾರಿಯಲ್ಲವೇ ಎಂದು ಹೇಳಿದರು. ಇತ್ತೀಚೆಗೆ ಬೀದಿ ಬದಿಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಶ್ವಾನಕ್ಕೆ ಮಾಸ್ಕ್‌ ಹಾಕಿದ್ದರು. ಆದರೆ ತಾನು ಮಾಸ್ಕ್‌ ಹಾಕಿರಲಿಲ್ಲ. ಈ ವಿಡಿಯೋ ಭಾರೀ ವೈರಲ್‌ ಆಗಿತ್ತು.


from India & World News in Kannada | VK Polls https://ift.tt/3vuYBEW

ಪಂಜಾಬ್‌ ವಿರುದ್ಧ ಇಂದಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ಇಲ್ಲಿದೆ..

ಅಹ್ಮದಾಬಾದ್‌: ಪ್ರಸ್ತುತ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್ಸ್‌ ಸನಿಹದಲ್ಲಿರುವ ವಿರಾಟ್‌ ಕೊಹ್ಲಿ ನಾಯಕತ್ವ ತಂಡ ಇಂದು ವಿರುದ್ಧ ಸೆಣಸಲು ಸಜ್ಜಾಗುತ್ತಿದೆ. ಇನ್ನು ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ಕೆ.ಎಲ್‌ ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಮಾತ್ರ. ಹಾಗಾಗಿ, ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವ ತುಡಿತದಲ್ಲಿ ಪಂಜಾಬ್‌ ಕಣಕ್ಕೆ ಇಳಿಯಲಿದೆ. ಇನ್ನು ಆರ್‌ಸಿಬಿ ಕಳೆದ ಪಂದ್ಯದಲ್ಲಿ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ ಒಂದೇ ಒಂದು ರನ್‌ನಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್‌ ಮಾಡಿದ್ದ ಎಬಿ ಡಿವಿಲಿಯರ್ಸ್ ಅಜೇಯ 75 ರನ್‌ ಗಳಿಸಿ ಬೆಂಗಳೂರು ಗೆಲುವಿನಲ್ಲಿ ನೆರವಾಗಿದ್ದರು. ಇನ್ನು ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಲ್‌ ಪಟೇಲ್‌ ಅದ್ಭುತ ಪ್ರದರ್ಶನ ತೋರಿದ್ದರು. ಮತ್ತೊಂದು ಕಡೆ ಪಂಜಾಬ್‌ ಕಿಂಗ್ಸ್ ತಂಡ ಬ್ಯಾಟಿಂಗ್‌ನಲ್ಲಿ ಸಾಕಷ್ಟು ತಿಣುಕಾಡುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ರನ್‌ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಅಲ್ಲದೆ, ಕೆ.ಎಲ್‌ ರಾಹುಲ್‌, ಮಯಾಂಕ್ ಅಗರ್ವಾಲ್‌, ನಿಕೋಲಸ್‌ ಪೂರನ್‌, ಕ್ರಿಸ್‌ ಗೇಲ್‌ ಅವರಿಂದ ಇನ್ನೂ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿ ಬಂದಿಲ್ಲ. ಆದರೆ, ಪಂಜಾಬ್‌ ತಂಡದ ಬೌಲಿಂಗ್‌ ವಿಭಾಗ ಅದ್ಭುತವಾಗಿದೆ. ಪಿಚ್‌ ರಿಪೋರ್ಟ್‌: ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಅದ್ಭುತವಾಗಿದೆ. ಆದರೆ, ನಿಧಾನಗತಿಯ ಬೌಲರ್‌ಗಳಿಗೆ ಇಲ್ಲಿನ ಪಿಚ್‌ ಸ್ವಲ್ಪ ನೆರವಾಗಬಹುದು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದಲ್ಲಿ ಪಂದ್ಯವೀಡಿ ಬ್ಯಾಟಿಂಗ್‌ಗೆ ನೆರವಾಗಬಹುದು. ಎರಡನೇ ಬ್ಯಾಟಿಂಗ್‌ ಮಾಡುವ ತಂಡಕ್ಕೂ ಇದು ನೆರವಾಗುತ್ತದೆ. ಹಾಗಾಗಿ, ದೊಡ್ಡ ಮೊತ್ತದ ಪಂದ್ಯ ಎಂದೇ ನಾವು ಹೇಳಬಹುದು. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್ ಆರ್‌ಸಿಬಿ: ದೇವದತ್‌ ಪಡಿಕ್ಕಲ್‌, ವಿರಾಟ್ ಕೊಹ್ಲಿ(ನಾಯಕ), ರಜತ್‌ ಪಾಟಿದರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಎಬಿ ಡಿವಿಲಿಯರ್ಸ್(ವಿ.ಕೀ), ವಾಷಿಂಗ್ಟನ್‌ ಸುಂದರ್‌, ದೇನಿಯಲ್ ಸ್ಯಾಮ್ಸ್‌, ಕೈಲ್‌ ಜೇಮಿಸನ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ಯುಜ್ವೇಂದ್ರ ಚಹಲ್‌. ಪಿಬಿಕೆಎಸ್‌: ಕೆ.ಎಲ್‌ ರಾಹುಲ್‌, ಮಯಾಂಕ್‌ ಅಗರ್ವಾಲ್‌, ಕ್ರಿಸ್‌ ಗೇಲ್‌, ದೀಪಕ್‌ ಹೂಡಾ, ನಿಕೋಲ್ಸ್ ಪೂರನ್‌, ಮೊಯ್ಸೆಸ್‌ ಹೆನ್ರಿಕ್ಸ್, ಶಾರೂಖ್ ಖಾನ್‌, ಕ್ರಿಸ್‌ ಜೋರ್ಡನ್‌, ಮೊಹಮ್ಮದ್‌ ಶಮಿ, ಅರ್ಷದೀಪ್‌ ಸಿಂಗ್‌, ರವಿ ಬಿಷ್ಣೋಯ್‌ ಪಂದ್ಯದ ವಿವರ ಪಂದ್ಯ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್‌ ಕಿಂಗ್ಸ್ ದಿನಾಂಕ: ಏಪ್ರಿಕ್‌ 30, 2021 ಸಮಯ: ರಾತ್ರಿ 07:30ಕ್ಕೆ ಸ್ಥಳ: ಮೊಟೇರಾ ಕ್ರೀಡಾಂಗಣ, ಅಹ್ಮದಾಬಾದ್‌ ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಮುಖಾಮುಖಿ ದಾಖಲೆ ಆಡಿರುವ ಒಟ್ಟು ಪಂದ್ಯಗಳು: 26 ಆರ್‌ಸಿಬಿ ಗೆಲುವು: 12 ಪಿಬಿಕೆಎಸ್‌ ಗೆಲುವು: 14


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vuXPrj

ಕೋವಿಡ್‌ ಪರಿಹಾರ ನಿಧಿ ಸಂಗ್ರಹ ಹಿನ್ನೆಲೆ; ರಾಜ್ಯ ಸರ್ಕಾರಿ ನೌಕರರ ಸಂಬಳ ಕಟ್‌?

ಬೆಂಗಳೂರು: ರಾಜ್ಯ ಸರಕಾರಿ ನೌಕರರ ವೇತನವನ್ನು ಒಂದು ಬಾರಿಗೆ ಅನ್ವಯವಾಗುವಂತೆ ಕಡಿತಗೊಳಿಸಿ ಕೋವಿಡ್‌ ಪರಿಹಾರ ನಿಧಿಗೆ ಸಂದಾಯ ಮಾಡುವ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಸರಕಾರಿ ನೌಕರರ ಸಂಘಕ್ಕೆ ಬಿಡಲಾಗಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಂಪುಟದ ಸದಸ್ಯರ 1 ವರ್ಷದ ವೇತನವನ್ನು ಕೋವಿಡ್‌ ನಿಧಿಗೆ ನೀಡಲು ಒಪ್ಪಿಗೆ ಕೊಡಲಾಗಿದೆ. ಶಾಸಕರು 1 ತಿಂಗಳ ವೇತನ ಬಿಟ್ಟು ಕೊಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಸರಕಾರಿ ನೌಕರರೂ ಸಹಕಾರ ನೀಡಬೇಕೆಂಬ ಪ್ರಸ್ತಾಪವಾಗಿದೆ. ಆರೋಗ್ಯ, ವೈದ್ಯ ಶಿಕ್ಷಣ, ಗೃಹ, ಕಂದಾಯ ಹೊರತು ಪಡಿಸಿ ಇತರ ಇಲಾಖೆಯವರು ತಮ್ಮ ವೇತನದಲ್ಲಿ ನಿರ್ದಿಷ್ಟ ಪಾಲನ್ನು ಕೋವಿಡ್‌ ಕೇರ್‌ ನಿಧಿಗೆ ಒದಗಿಸಬೇಕು ಎಂಬ ಸೂಚನೆ ಕೊಡಲಾಗಿದೆ. ಅದರಂತೆ ನೌಕರರು 1 ದಿನದ ಅಥವಾ ಗರಿಷ್ಠ 1 ವಾರದ ಸಂಬಳ ತ್ಯಾಗ ಮಾಡಬೇಕಾಗಿ ಬರಬಹುದು. ಈ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರ ತಿಳಿಸುವಂತೆ ಸರಕಾರಿ ನೌಕರರ ಸಂಘಕ್ಕೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.


from India & World News in Kannada | VK Polls https://ift.tt/2RfQdKI

ಕೊರೊನಾ ಸಂಕಷ್ಟ ಕಾಲದಲ್ಲಿ ಪಾಸಿಟಿವ್ ಮಾಹಿತಿಗಳ ಹೂರಣವಾಗಲಿ ಸಾಮಾಜಿಕ ಜಾಲತಾಣ..

ಬಾಲಚಂದ್ರ ರೂಗಿ: 'ಮರಳಿ ಬಾರದೂರಿಗೆ ನಿನ್ನ ಪಯಣ, ರಿಪ್‌, ನೋ ಮೋರ್‌, ಅವ್ರು ಹೋದ್ರಂತೆ, ಇವ್ರು ಸತ್ತರಂತೆ.... ಇದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟ್ಟರ್‌ನಲ್ಲಿ ಕಳೆದ ಒಂದು ವಾರದಿಂದ ಹೆಚ್ಚಾಗಿರುವ ಮಾಹಿತಿ. ಒಮ್ಮೆ ವಾಟ್ಸ್‌ಆ್ಯಪ್‌ ತಗೆದು ಸ್ಟೇಟಸ್‌ಗೆ ಹೋದರೆ ಸಾಕು. ಅಲ್ಲಿ ಸಾವಿನ ಸುದ್ದಿಗಳು ಬಿಟ್ಟರೆ ಬೇರೇನೂ ನೋಡಲು ಸಿಗದಂತಾಗಿದೆ. ಇನ್ನು ಫೇಸ್‌ಬುಕ್‌, ಟ್ವಿಟರ್‌ಗಳಲ್ಲೂ ಕೂಡ ರಿಪ್‌, ನೋ ಮೋರ್‌ ಎಂಬಂತಾಗಿ ಕುಳಿತಿವೆ. ಟಿವಿ ನೋಡುವುದರಿಂದ ಸಾಕಷ್ಟು ಭಯ ಆಗುತ್ತಿದ್ದ ಜನ, ಈಗ ಸಾಮಾಜಿಕ ಜಾಲತಾಣವನ್ನೂ ನೋಡಿದರೆ ನಮ್ಮವರೂ ಯಾರಾದರೂ ಸತ್ತಿರುತ್ತಾರೆ. ಅದಕ್ಕೆ ಮನಸ್ಸಿಗೆ ನೋವಾಗುತ್ತದೆ. ಅದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿಯೇ ನೋಡುವುದನ್ನೇ ಬಿಟ್ಟಿದ್ದೀವಿ ಎನ್ನುತ್ತಾರೆ. ಭಯದ ಮನೆ: ಯಾರದೇ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಯಾವುದೇ ಓಪನ್‌ ಮಾಡಿದ್ರೂ ಪಾಸ್‌ಪೋರ್ಟ್‌ ಸೈಜ್‌ ಪೋಟೊಗಳೇ ಕಾಣುತ್ತಿವೆ. ಈಗ ಸಾಮಾಜಿಕ ಜಾಲ ತಾಣವೆಂದರೆ ಭಯದ ಮನೆಯಂತಾಗಿವೆ. ಅಷ್ಟೇ ಅಲ್ಲ, ಅವುಗಳನ್ನು ಓಪನ್‌ ಮಾಡುವುದೇ ಯಾರು ಸತ್ತರು ಅಂತ ತಿಳಿಯುವುದಕ್ಕೆ ಎಂಬಂತಾಗಿದೆ ಎನ್ನುತ್ತಾರೆ ಅನೇಕರು. ಜಾಗೃತಿ ಮಾಯ: ಕೊರೊನಾ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ನೀಡುವುದು, ತಿಳಿವಳಿಕೆ ನೀಡುವುದು ಸಾಮಾಜಿಕ ಜಾಲತಾಣದಲ್ಲಿ ಎಲ್ಲೂ ಕಾಣುತ್ತಿಲ್ಲ. ಒಂದು ರೀತಿ ಭಯ ಹುಟ್ಟಿಸುವ ತಾಣಗಳು ಎಂಬಂತಾಗಿದೆ. ಸರಕಾರ ಸಾಕಷ್ಟು ನಿಯಮಗಳನ್ನು ಮಾಡಿದೆ. ಅವುಗಳನ್ನು ಹಾಕುವುದಾಗಲಿ, ಅಥವಾ ವೈದ್ಯರ ಸಲಹೆಗಳನ್ನು ಹಾಕುವುದಾಗಲಿ ಯಾರೂ ಮಾಡುತ್ತಿಲ್ಲ. ಬದಲಾಗಿ ಸತ್ತವರ ಚಿತ್ರಗಳನ್ನು ಹಾಕಿ ಇನ್ನಷ್ಟು ಭಯದ ವಾತಾವರಣ ಸೃಷ್ಟಿಸುವ ತಾಣಗಳಾಗಿ ಮಾರ್ಪಟ್ಟಿವೆ. ಗುಣಮುಖರಾದವರ ವಿಡಿಯೋ ಬರಲಿ: ಸಾಮಾಜಿಕ ಜಾಲ ತಾಣ ಎಂದರೆ ಜಾಗೃತಿಯ ತಾಣ ಎನ್ನುತ್ತೇವೆ. ಆದರೆ ಅಲ್ಲಿ ಯಾವುದೇ ಜಾಗೃತಿ ಇಲ್ಲದಾಗಿದೆ. ಈಗೇನಿದ್ದರೂ ಸತ್ತವರ ಚಿತ್ರ ಹಾಕಿ ಹೆದರಿಸುವ ತಾಣ ಎಂಬಂತಾಗಿದೆ. ಅದರ ಬದಲಾಗಿ ಕೊರೊನಾ ಗೆದ್ದು ಬಂದವರ ವಿಡಿಯೋ ಮಾಡಿ ಹಾಕುವುದು, ಧೈರ್ಯ ಮತ್ತು ಆತ್ಮಸೈರ್ಯ ತುಂಬುವಂತಹ ಜನರ ಬಗ್ಗೆ ಕಾಳಜಿ ವಹಿಸುವಂತ ಮಾಹಿತಿಗಳು ಹೆಚ್ಚಾಗಿ ಬರಬೇಕು. ಹೊಸ ಕಾರು ತಗೊಂಡಿದ್ದೀವಿ. ಹೊಸ ಮನೆ ಕಟ್ಟಿದ್ದೀವಿ. ಮದುವೆ ಆಗಿದ್ದೀವಿ ಎನ್ನುವಂತಾ ಚಿತ್ರಗಳು ಈ ಹಿಂದೆ ಬರುತ್ತಿದ್ದವು. ಆದರೆ ಇಂದು ಅದರ ಬದಲಾಗಿ ಸಿಂಗಲ್‌ ಚಿತ್ರ ನೋಡುವಂತ ಪರಿಸ್ಥಿತಿ ಬರುತ್ತಿವೆ. ಬೇರೆ ದೇಶಗಳಲ್ಲಿ ಕೊರೊನಾ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿವೆ. ಅಂತಹ ಮಾಹಿತಿಗಳು ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆ ತಂದಿವೆ. ಆದರೆ ನಮ್ಮಲ್ಲಿ ಹೆಚ್ಚಾಗಿ ಮತ್ತಷ್ಟು ನೋವು ತರುವಂತಹ ಮಾಹಿತಿಗಳೇ ಹರಿದಾಡುತ್ತಿರುವುದರಿಂದ ಇನ್ನಷ್ಟು ಭಯ ಹೆಚ್ಚಿಸುತ್ತಿವೆ. ಜತೆಗೆ ನಮ್ಮನ್ನೂ ಸಾವಿನ್ನತ್ತ ಕರೆದುಕೊಂಡು ಹೋಗುತ್ತಿವೆ ಎನ್ನುವ ಭಯ ಶುರುವಾಗಿದೆ ಎನ್ನುತ್ತಾರೆ ವಿಜಯಪುರದ ಮಹಾಂತೇಶ ಬಿರಾದಾರ. 'ಸಾಮಾಜಿಕ ಜಾಲತಾಣಗಳು ಮಾಹಿತಿ ಆಧರಿಸಿರಬೇಕು. ಸುಳ್ಳು ಸುದ್ದಿ ಹರಡಬಾರದು. ಭಯಾನಕ ಪೋಸ್ಟ್‌ಗಳನ್ನು ನಿಲ್ಲಿಸಬೇಕು. ಧೈರ್ಯ ತುಂಬುವ, ಆತ್ಮಸೈರ್ಯದ ಮಾಹಿತಿ ನೀಡಬೇಕು. ಕೊರೊನಾ ಗೆದ್ದವರ ಸ್ಟೋರಿಗಳು ಪ್ರಕಟಗೊಳ್ಳಬೇಕು' ಎನ್ನುತ್ತಾರೆ, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಓಂಕಾರ ಕಾಕಡೆ. 'ದಿನ ಬೆಳಗಾದರೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ನೋಡುವುದು ಯಾರು ಸತ್ತಿದ್ದಾರೆಂದು ತಿಳಿದುಕೊಳ್ಳುವುದಕ್ಕೆ ಎಂಬಂತಾಗಿದೆ. ಅದು ಬದಲಾಗಬೇಕು. ಉತ್ತಮ ಮಾಹಿತಿಗಳು ಇಲ್ಲಿ ಬರಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಪೋಸ್ಟ್‌ಗಳು ಪ್ರಕಟಗೊಳ್ಳಬೇಕು' ಎನ್ನುತ್ತಾರೆ, ಬಾಗಲಕೋಟೆ ಸಾಹಿತಿ ಡಾ. ಪ್ರಕಾಶ ಖಾಡೆ.


from India & World News in Kannada | VK Polls https://ift.tt/3eFPev9

14 ದಿನ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ, ಬಸವರಾಜ ಬೊಮ್ಮಾಯಿ

ಬೆಂಗಳೂರು: 14 ದಿನಗಳ ಕಾಲ ಜಾರಿಯಲ್ಲಿರುವ ಲಾಕ್‌ಡೌನ್‌ನನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ನಿಟ್ಟಿನಲ್ಲಿ ಐದು ಜನ ಎಡಿಜಿಪಿಗಳನ್ನು ನಿಯೋಜನೆ ಮಾಡಲಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ ಹೋಂ ಗಾರ್ಡ್ 8,500 ಜನರನ್ನು ಬಳಸಿಕೊಳ್ಳಬಹುದು ಎಂದು ಅನುಮತಿ ನೀಡಲಾಗಿದೆ. ಹೆಚ್ಚಿಗೆ ಬೇಕಾದರೂ ಕೊಡಲು ಸಿದ್ದರಿದ್ದೇವೆ ಎಂದರು. ಕೋವಿಡ್‌ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಜೈಲುಗಳಲ್ಲಿ ಸ್ಯಾನಿಟೈಸ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟು 300 ಜನರಿಗೆ ಪಾಸಿಟಿವ್ ಆಗಿದೆ. ಅವರನ್ನೆಲ್ಲಾ ಪ್ರತ್ಯೇಕವಾಗಿಡಲಾಗಿದೆ ಎಂದು ಮಾಹಿತಿ ನೀಡಿದರು ಬೆಂಗಳೂರಿನಲ್ಲಿ ಸಿವಿಲ್‌ ಡಿಫೆನ್ಸ್‌ ಸ್ವಯಂಸೇವಕರು 15,000 ಮಂದಿ ಇದ್ದಾರೆ. ಅವರನ್ನು ಕೋವಿಡ್‌ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಅಗ್ನಿಶಾಮಕ ಇಲಾಖೆಯನ್ನು ಶುಚಿತ್ವ ಕಾರ್ಯಕ್ಕಾಗಿ ಬಳಕೆ ಮಾಡಿಕೊಳ್ಳಲು ಆದೇಶ ನೀಡಲಾಗಿದೆ ಎಂದು ತಿಳಿಸಿದರು. ಕೈಗಾರಿಕೆಗಳು ಹಾಗೂ ಅಗತ್ಯ ಸಂದರ್ಭದಲ್ಲಿ ಮಾತ್ರ ಜನರಿಗೆ ಮನೆಯಿಂದ ಹೊರ ಹೋಗಲು ಅವಕಾಶ ನೀಡಲಾಗಿದೆ. ಇತರರಿಗೆ ಮತ್ತಷ್ಟು ಕಟ್ಟುನಿಟ್ಟಿನ 'ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.


from India & World News in Kannada | VK Polls https://ift.tt/3u4Qa2D

ಉಮೇಶ್ ಕತ್ತಿ ಬೇಜವಾಬ್ದಾರಿ ಸಚಿವ, ಕೂಡಲೇ ಮಂತ್ರಿಮಂಡಲದಿಂದ ಕೈಬಿಡಬೇಕು, ಬಿಎಸ್‌ವೈಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ವಿವಾದಾತ್ಮಕ ಹೇಳಿಕೆ ಕೊಟ್ಟ ಓರ್ವ ಬೇಜವಾಬ್ದಾರಿ ಸಚಿವ, ಕೂಡಲೇ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ವಿರೋಧ ಪಕ್ಷದ ನಾಯಕ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ರೈತ ಪ್ರತಿನಿಧಿಯೊಬ್ಬರು ಕರೆ ಮಾಡಿ ಪಡಿತರ ಅಕ್ಕಿ ಕಡಿತದ ಕುರಿತಾಗಿ ಪ್ರಶ್ನೆ ಮಾಡಿದರೆ ಸಾಯೋದೇ ಒಳ್ಳೆಯದು ಎಂಬ ಹೇಳಿಕೆ ಕೊಡುತ್ತಾರೆ. ಇದು ಉದ್ಧಟತನ ಮಾತು. ನನ್ನ ಪ್ರಕಾರ ಅವರು ಮಂತ್ರಿಯಾಗಲು ಲಾಯಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಉಮೇಶ್ ಕತ್ತಿ ಪರವಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುವುದು ಸರಿಯಲ್ಲ, ಇದರ ಬದಲಾಗಿ ಕೂಡಲೇ ಕತ್ತಿಯನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಇಂತಹ ಮಂತ್ರಿಗಳನ್ನು ಸಚಿವ ಸಂಪುಟದಲ್ಲಿ ಇಟ್ಟುಕೊಂಡರೆ ಬಡವರಿಗೆ ಏನು ನೆರವು ಹಾಗೂ ರಕ್ಷಣೆ ನೀಡಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಜನರಿಗೆ ಅನುಕೂಲವಾಗಲಿ ಮಾಡಲು 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಇವಾಗ ಪಡಿತರ ಅಕ್ಕಿ ಕಡಿಮೆ ಮಾಡಿ ಜನರು ಸಾಯಿರಿ ಎನ್ನುವ ಮಟ್ಟಿಗೆ ಬಂದು ಬಟ್ಟಿದ್ದಾರೆ.ಇದಮನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಕೂಡಲೇ ಉಮೇಶ್ ಕತ್ತಿಯನ್ನು ಮಂತ್ರಿ ಮಂಡಲದಿಂದ ಕಯಬಿಡಬೇಕು ಸಚಿವರಾಗಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ. ಇಂತಹ ನಡತೆ ಉಳ್ಳವರು ಸಚಿವರಾಗಿರಬಾರದು ಎಂದರು. ಅವರ ಹೇಳಿಕೆ ಕಾನೂನು ಪ್ರಕಾರವೂ ತಪ್ಪು, ಸರ್ಕಾರ ಬೇಜವಾಬ್ದಾರಿಯುತವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ರಾಜೀನಾಮೆ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ. ಈ ಸರ್ಕಾರವೂ ಪ್ರತಿಯೊಬ್ಬರಿಗೆ 10 ಕೆಜಿ ಕೊಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು. ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖಾ ಸಚಿವ ಉಮೇಶ್ ಕತ್ತಿಗೆ ರೈತ ಮುಖಂಡರೊಬ್ಬರು ಕರೆ ಮಾಡಿ ಪಡಿತರ ಅಕ್ಕಿ ಕಡಿತದ ಬಗ್ಗೆ ಪ್ರಶ್ನೆ ಮಾಡಿದ್ದರು. ಹೀಗಾದರೆ ನಾವು ಬದುಕೋದಾ ಸಾಯೋದಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಕತ್ತಿ ಸಾಯೋದೇ ಒಳ್ಳೆಯದು ಎಂದು ಹೇಳಿದ್ದರು. ಸಚಿವರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.


from India & World News in Kannada | VK Polls https://ift.tt/3ufIVF2

ಈತ ವಿಶ್ವದ ನಂ.1 ಆಟಗಾರ ಆಗುವುದರಲ್ಲಿ ಸಂಶಯವೇ ಇಲ್ಲ ಎಂದ ರೈನಾ!

ಹೊಸದಿಲ್ಲಿ: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರರಲ್ಲೂ ಪ್ರಚಂಡ ಫಾರ್ಮ್‌ನಲ್ಲಿ ಕಾಣುತ್ತಿರುವ ಸಹ ಆಟಗಾರ ಅವರನ್ನು ಬ್ಯಾಟ್ಸ್‌ಮನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕಳೆದ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯಲ್ಲಿ ಗಾಯದಿಂದ ಟೀಮ್‌ ಇಂಡಿಯಾದಿಂದ ಹೊರ ನಡೆದಿದ್ದ ಸರ್‌ ರವೀಂದ್ರ ಜಡೇಜಾ ಬಳಿಕ ಹಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ನಂತರ ಸಂಪೂರ್ಣ ಫಿಟ್‌ ಆಗಿ 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಮರಳಿದರು. ಅದರಂತೆ ಅವರು ಅದ್ಭುತ ಫಾರ್ಮ್‌ನಲ್ಲಿ ಕಾಣುತ್ತಿದ್ದಾರೆ. ರವೀಂದ್ರ ಜಡೇಜಾ ಮೊದಲು ವಿಕೆಟ್‌ ಟೇಕಿಂಗ್‌ ಬೌಲರ್‌ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ಟೀಮ್‌ ಇಂಡಿಯಾದಲ್ಲಿ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ನೆರವಾಗುತ್ತಿದ್ದಾರೆ. ಇದೀಗ ಅವರು ವಿಶ್ವ ಕ್ರಿಕೆಟ್‌ನಲ್ಲಿ ಪರಿಪೂರ್ಣ ಕ್ರಿಕೆಟಿಗರಾಗಿ ಹೊರಹೊಮ್ಮುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್‌ ರೈನಾ, ರವೀಂದ್ರ ಜಡೇಜಾ ಪ್ರಸ್ತುತ ವಿಶ್ವದ ನಂ.1 ಆಟಗಾರ ಎಂದು ಶ್ಲಾಘಿಸಿದ್ದಾರೆ. "ಅವರು (ಜಡೇಜಾ) ಅದ್ಭುತ ಆಟಗಾರ, ವಿಶ್ವದ ನಂ.1 ಕ್ರಿಕೆಟಿಗರಾಗುವತ್ತಾ ಅವರು ಹೆಜ್ಜೆ ಇಡುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಜತೆಗೆ ಅವರು ಪೀಲ್ಡಿಂಗ್ ಮಾಡುವುದನ್ನೂ ತುಂಬಾ ಆನಂದಿಸುತ್ತಾರೆ ಹಾಗೂ ಅವರು ಚೆಂಡನ್ನು ಹೇಗೆ ಥ್ರೋ ಮಾಡುತ್ತಾರೆ ಸೇರಿದಂತ ಮೈದಾನದಲ್ಲಿ ಅವರು ತೋರುವ ವರ್ತನೆ ನನಗೆ ಇಷ್ಟ," ಎಂದರು. "ಅವರು ಅಸಾಧಾರಣ ಆಟಗಾರ, ಅವರು ಪಂದ್ಯದಲ್ಲಿ ಬಹಳಷ್ಟು ಥ್ರೋಗಳನ್ನು ನೇರವಾಗಿ ಸ್ಟಂಪ್‌ಗಳಿಗೆ ಹೊಡೆಯುತ್ತಾರೆ. ಹಲವು ವರ್ಷಗಳ ಹಿಂದಿನಿಂದ ನಾನು ಅವರ ಜೊತೆ ಆಡಿಕೊಂಡು ಬರುತ್ತಿದ್ದೇನೆ. ಅವರೊಂದಿಗೆ ಅತ್ಯುತ್ತಮ ನೆನಪುಗಳಿವೆ," ಎಂದು ಸುರೇಶ್‌ ರೈನಾ ಸ್ಟಾರ್‌ಸ್ಪೋರ್ಟ್ಸ್‌ ಪ್ರೀ ಶೋನಲ್ಲಿ ತಿಳಿಸಿದರು. ರವೀಂದ್ರ ಜಡೇಜಾ ಅವರನ್ನು ತಂಡದ ನಾಯಕನ ಆಟಗಾರ ಎಂದು ಬಣ್ಣಿಸಿದ ಸುರೇಶ್‌ ರೈನಾ, ಆಲ್‌ರೌಂಡರ್‌ ಪ್ರಸ್ತುತ ಹಾಟ್‌ ಫಾರ್ಮ್‌ನಲ್ಲಿದ್ದಾರೆ ಎಂದು ಹೇಳಿದರು. ರವೀಂದ್ರ ಜಡೇಜಾ ಅವರು ಕ್ಲಾಸ್‌ ಆಲ್‌ರೌಂಡರ್‌ ಆಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಮೂರೂ ಸ್ವರೂಪಕ್ಕೆ ಹೇಳಿ ಮಾಡಿಸಿದ ಆಟಗಾರ ಎಂದರು. "ಪಂದ್ಯವನ್ನು ಯಾವುದೇ ಕ್ಷಣದಲ್ಲಿ ಬದಲಾವಣೆ ಮಾಡುವ ಆಟಗಾರರ ಸಾಲಿಗೆ ರವೀಂದ್ರ ಜಡೇಜಾ ಸೇರುತ್ತಾರೆ. ಯಾರೇ ನಾಯಕರಾಗಿದ್ದರೂ ಎಡಗೈ ಆಟಗಾರನನ್ನು ತಂಡಕ್ಕೆ ಕರೆದುಕೊಳ್ಳುತ್ತಾರೆ. ಪಂದ್ಯವನ್ನು ಯಾವುದೇ ಕ್ಷಣದಲ್ಲಿ ತಿರುಗಿಸುವ ಸಾಮರ್ಥ್ಯ ಈತನಲ್ಲಿದೆ. ಇದನ್ನೇ ಅವರು ಸದ್ಯ ಮಾಡುತ್ತಿದ್ದಾರೆ. ಬ್ಯಾಟಿಂಗ್ ಅತ್ಯುತ್ತಮವಾಗಿ ಮಾಡುತ್ತಿದ್ದಾರೆ, ಬೌಲಿಂಗ್‌ನಲ್ಲಿಯೂ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಅವರು ಟೂರ್ನಿಯಲ್ಲಿ 7 ರಿಂದ 8 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಮೂರೂ ಸ್ವರೂಪದ ಕ್ರಿಕೆಟ್‌ಗೆ ಈ ತರಹ ಆಟಗಾರ ತಂಡದಲ್ಲಿ ಇರಬೇಕು," ಎಂದು ಸುರೇಶ್‌ ರೈನಾ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/330JqqB

ದೇಶದಲ್ಲಿ ಕೊರೊನಾ ನಿಗ್ರಹಿಸಲು ಲಕ್ಷಾಂತರ ವೈದ್ಯರು, ನರ್ಸ್‌ಗಳ ತುರ್ತು ಅಗತ್ಯತೆ ಇದೆ..! ಡಾ. ದೇವಿ ಶೆಟ್ಟಿ

ಬೆಂಗಳೂರು: ಕೊರೊನಾ ವೈರಸ್‌ನ 2ನೇ ಅಲೆ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಇಂದಿನ ದಿನಗಳಲ್ಲಿ ಕರುನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಅವರು, ಹೊಸದೊಂದು ಚಿಂತನೆಯನ್ನು ನಾಡಿನ ಜನರೆದುರು ಮಂಡಿಸಿದ್ದಾರೆ. ಕೊರೊನಾ ವೈರಸ್‌ನ ಕರಾಳತೆ, ಆಘಾತವನ್ನು ಎದುರಿಸಲು, ಈ ಸಂಕಟದಿಂದ ಹೊರಬರಲು ಧನಾತ್ಮಕ ಚಿಂತನೆಯ ಮೂಲಕ ಹಲವು ಉಪಾಯವನ್ನು ಅವರು ವಿವರಿಸಿದ್ದಾರೆ. ಭಾರತದ ಮೇಲೆ ಮೊದಲ ಬಾರಿ ಕೊರೊನಾ ವೈರಸ್ ದಾಳಿ ನಡೆಸಿದಾಗ ಯಾವುದೇ ಪಿಪಿಇ ಕಿಟ್ ಇರಲಿಲ್ಲ. ಕೇವಲ 30 ಸಾವಿರ ವೆಂಟಿಲೇಟರ್‌ಗಳಿದ್ದವು. ಆದ್ರೆ, ನಾವು ಕೇವಲ 8 ವಾರಗಳಲ್ಲೇ ಪಿಪಿಇ ಕಿಟ್‌ ಹಾಗೂ ವೆಂಟಿಲೇರ್‌ಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತೆವು..! ಇದು ಭಾರತದ ಶಕ್ತಿ. ಇದೀಗ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದ್ರೆ, ಈ ಸಮಸ್ಯೆಯನ್ನೂ ನಾವು ಕೆಲವೇ ದಿನಗಳಲ್ಲಿ ಮೆಟ್ಟಿ ನಿಲ್ಲುತ್ತೇವೆ. ಏಕೆಂದರೆ ಭಾರತವು ಯುವಕರೇ ಬಹುಸಂಖ್ಯಾತರಾಗಿರುವ ದೇಶ. ಈ ದೇಶ ಯುವಶಕ್ತಿ ಬಹುಬೇಗ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಇರುವ ಉಕ್ಕಿನ ಕಾರ್ಖಾನೆಗಳು ದ್ರವ ಆಮ್ಲಜನಕ ಉತ್ಪಾದಿಸುವಲ್ಲಿ ಕೈಜೋಡಿಸಿವೆ. ದೇಶದ ಆಮ್ಲಜನಕ ಅಗತ್ಯತೆಗಳಿಗೆ ಅವು ಸ್ಪಂದಿಸುತ್ತಿವೆ.ಇಂದಿನ ಸ್ಥಿತಿಗತಿ ಬೇಸರ ತರಿಸುತ್ತಿದೆಯಾದರೂ, ಮಾನಸಿಕವಾಗಿ ಕುಗ್ಗುವ ಅಗತ್ಯತೆ ಇಲ್ಲ. ಆದ್ರೆ, ಆಕ್ಸಿಜನ್ ಕೊರತೆಯ ನಂತರ ಎದುರಾಗೋದು ನರ್ಸ್‌ ಹಾಗೂ ವೈದ್ಯರ ಕೊರತೆಯ ಸಮಸ್ಯೆ. ಏಕೆಂದರೆ, ಪಿಪಿಇ ಕಿಟ್, ವೆಂಟಿಲೇಟರ್ ರೀತಿಯಲ್ಲೇ ಆಮ್ಲಜನಕ ಕೊರತೆಯ ಸಮಸ್ಯೆಯನ್ನು ನಾವು ಬಹುಬೇಗ ಮೆಟ್ಟಿ ನಿಲ್ಲುತ್ತೇವೆ. ಆದ್ರೆ, ಐಸಿಯುಗಳಲ್ಲಿ ರೋಗಿಗಳು ಜೀವ ಕೈಚೆಲ್ಲದಂತೆ ಕಾಪಾಡುವ ಜವಾಬ್ದಾರಿ ನರ್ಸ್‌ ಹಾಗೂ ವೈದ್ಯರ ಮೇಲಿದೆ.

ದೇಶದಲ್ಲಿ ಕೊರೊನಾ ವೈರಸ್ ಸ್ಥಿತಿಗತಿ ಈಗ ಹೇಗಿದೆ..? ಮುಂದೆ ಏನಾಗಬಹುದು..? ವೈದ್ಯಕೀಯ ಕ್ಷೇತ್ರದ ಮುಂದಿನ ಸವಾಲುಗಳೇನು..? ಇದಕ್ಕೆ ಸೂಕ್ತ ಪರಿಹಾರ ಇದೆಯೇ..? ಯಾವೆಲ್ಲಾ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು..? ಸರ್ಕಾರದ ಮುಂದಿರುವ ಮಾರ್ಗಗಳೇನು..? ಹೀಗೆ ಹಲವು ವಿಚಾರಗಳ ಬಗ್ಗೆ ಖ್ಯಾತ ವೈದ್ಯರಾದ ಡಾ. ದೇವಿ ಶೆಟ್ಟಿ ಅವರು ಸಿಂಬೋಸಿಸ್ ಗೋಲ್ಡನ್ ಭಾಷಣದಲ್ಲಿ ವಿವರಿಸಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ:


ದೇಶದಲ್ಲಿ ಕೊರೊನಾ ನಿಗ್ರಹಿಸಲು ಲಕ್ಷಾಂತರ ವೈದ್ಯರು, ನರ್ಸ್‌ಗಳ ತುರ್ತು ಅಗತ್ಯತೆ ಇದೆ..! ಡಾ. ದೇವಿ ಶೆಟ್ಟಿ

ಬೆಂಗಳೂರು:

ಕೊರೊನಾ ವೈರಸ್‌ನ 2ನೇ ಅಲೆ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಇಂದಿನ ದಿನಗಳಲ್ಲಿ ಕರುನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಅವರು, ಹೊಸದೊಂದು ಚಿಂತನೆಯನ್ನು ನಾಡಿನ ಜನರೆದುರು ಮಂಡಿಸಿದ್ದಾರೆ. ಕೊರೊನಾ ವೈರಸ್‌ನ ಕರಾಳತೆ, ಆಘಾತವನ್ನು ಎದುರಿಸಲು, ಈ ಸಂಕಟದಿಂದ ಹೊರಬರಲು ಧನಾತ್ಮಕ ಚಿಂತನೆಯ ಮೂಲಕ ಹಲವು ಉಪಾಯವನ್ನು ಅವರು ವಿವರಿಸಿದ್ದಾರೆ.

ಭಾರತದ ಮೇಲೆ ಮೊದಲ ಬಾರಿ ಕೊರೊನಾ ವೈರಸ್ ದಾಳಿ ನಡೆಸಿದಾಗ ಯಾವುದೇ ಪಿಪಿಇ ಕಿಟ್ ಇರಲಿಲ್ಲ. ಕೇವಲ 30 ಸಾವಿರ ವೆಂಟಿಲೇಟರ್‌ಗಳಿದ್ದವು. ಆದ್ರೆ, ನಾವು ಕೇವಲ 8 ವಾರಗಳಲ್ಲೇ ಪಿಪಿಇ ಕಿಟ್‌ ಹಾಗೂ ವೆಂಟಿಲೇರ್‌ಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತೆವು..! ಇದು ಭಾರತದ ಶಕ್ತಿ.

ಇದೀಗ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದ್ರೆ, ಈ ಸಮಸ್ಯೆಯನ್ನೂ ನಾವು ಕೆಲವೇ ದಿನಗಳಲ್ಲಿ ಮೆಟ್ಟಿ ನಿಲ್ಲುತ್ತೇವೆ. ಏಕೆಂದರೆ ಭಾರತವು ಯುವಕರೇ ಬಹುಸಂಖ್ಯಾತರಾಗಿರುವ ದೇಶ. ಈ ದೇಶ ಯುವಶಕ್ತಿ ಬಹುಬೇಗ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಇರುವ ಉಕ್ಕಿನ ಕಾರ್ಖಾನೆಗಳು ದ್ರವ ಆಮ್ಲಜನಕ ಉತ್ಪಾದಿಸುವಲ್ಲಿ ಕೈಜೋಡಿಸಿವೆ. ದೇಶದ ಆಮ್ಲಜನಕ ಅಗತ್ಯತೆಗಳಿಗೆ ಅವು ಸ್ಪಂದಿಸುತ್ತಿವೆ.

ಇಂದಿನ ಸ್ಥಿತಿಗತಿ ಬೇಸರ ತರಿಸುತ್ತಿದೆಯಾದರೂ, ಮಾನಸಿಕವಾಗಿ ಕುಗ್ಗುವ ಅಗತ್ಯತೆ ಇಲ್ಲ. ಆದ್ರೆ, ಆಕ್ಸಿಜನ್ ಕೊರತೆಯ ನಂತರ ಎದುರಾಗೋದು ನರ್ಸ್‌ ಹಾಗೂ ವೈದ್ಯರ ಕೊರತೆಯ ಸಮಸ್ಯೆ. ಏಕೆಂದರೆ, ಪಿಪಿಇ ಕಿಟ್, ವೆಂಟಿಲೇಟರ್ ರೀತಿಯಲ್ಲೇ ಆಮ್ಲಜನಕ ಕೊರತೆಯ ಸಮಸ್ಯೆಯನ್ನು ನಾವು ಬಹುಬೇಗ ಮೆಟ್ಟಿ ನಿಲ್ಲುತ್ತೇವೆ. ಆದ್ರೆ, ಐಸಿಯುಗಳಲ್ಲಿ ರೋಗಿಗಳು ಜೀವ ಕೈಚೆಲ್ಲದಂತೆ ಕಾಪಾಡುವ ಜವಾಬ್ದಾರಿ ನರ್ಸ್‌ ಹಾಗೂ ವೈದ್ಯರ ಮೇಲಿದೆ.



ಈ ಲೆಕ್ಕಾಚಾರಗಳನ್ನು ಗಮನಿಸಿ.. ಗಾಬರಿಯಾಗೋದು ಖಚಿತ..!
ಈ ಲೆಕ್ಕಾಚಾರಗಳನ್ನು ಗಮನಿಸಿ.. ಗಾಬರಿಯಾಗೋದು ಖಚಿತ..!

ದೇಶದಲ್ಲಿ 15 ರಿಂದ 20 ಲಕ್ಷ ಜನರು ಪ್ರತಿದಿನ ಸೋಂಕಿತರಾಗುತ್ತಿದ್ದಾರೆ. ಈ ಪೈಕಿ ಶೇ. 5ರಷ್ಟು ಜನರು ಐಸಿಯುಗೆ ದಾಖಲಾಗುವ ಅಗತ್ಯತೆ ಬರಬಹುದು. ಅಂದರೆ ನಮಗೆ ಪ್ರತಿದಿನ 80 ಸಾವಿರ ಐಸಿಯು ಬೆಡ್ ಬೇಕಾಗುತ್ತದೆ. ಆದ್ರೆ, ಭಾರತದಲ್ಲಿ 75 ಸಾವಿರದಿಂದ 90 ಸಾವಿರ ಐಸಿಯು ಬೆಡ್‌ಗಳು ಮಾತ್ರ ಇವೆ. ಈಗಾಗಲೇ ಇವೆಲ್ಲವೂ ಭರ್ತಿಯಾಗಿವೆ. ಆಘಾತಕಾರಿ ವಿಚಾರವೆಂದರೆ ದೇಶದಲ್ಲಿ ಕೊರೊನಾ ಇನ್ನೂ ಉಚ್ಛ್ರಾಯ ಸ್ಥಿತಿ ತಲುಪಿಲ್ಲ. ಆಗ ಎಷ್ಟು ಐಸಿಯು ಬೆಡ್‌ಗಳು ಬೇಕಾಗಬಹುದು. ಒಬ್ಬ ರೋಗಿ ಕನಿಷ್ಟ 10 ದಿನಗಳಾದ್ರೂ ಐಸಿಯು ಬೆಡ್‌ನಲ್ಲಿ ಇರಬೇಕಾಗುತ್ತೆ. ಪರಿಸ್ಥಿತಿ ಹೀಗಿರುವಾಗ ಮುಂದಿನ ಚಿತ್ರಣ ಏನಾಗಬಹುದು..?



​ನಾವೀಗ ಮಾಡಬೇಕಾದ್ದು ಏನು..?
​ನಾವೀಗ ಮಾಡಬೇಕಾದ್ದು ಏನು..?

ನಾವು ಮುಂದಿನ ಕೆಲವೇ ವಾರಗಳಲ್ಲಿ ದೇಶಾದ್ಯಂತ ಕನಿಷ್ಟ 5 ಲಕ್ಷ ಐಸಿಯು ಬೆಡ್‌ಗಳನ್ನು ಸೃಷ್ಟಿ ಮಾಡಬೇಕಿದೆ. ದುರಂತವೆಂದರೆ, ಕೇವಲ ಐಸಿಯು ಬೆಡ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡೋದಿಲ್ಲ. ಅದಕ್ಕೆ ವೈದ್ಯರು ಹಾಗೂ ನರ್ಸ್‌ಗಳು ಬೇಕು. ಹಾಗೆ ನೋಡಿದ್ರೆ ಐಸಿಯುಗಳಲ್ಲಿ ವೈದ್ಯರಿಗಿಂತಾ ನರ್ಸ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ರೆ, ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಶೇ. 78ರಷ್ಟಿದೆ.



ಮುಂದಿವೆ ಸವಾಲಿನ ದಿನಗಳು..!
ಮುಂದಿವೆ ಸವಾಲಿನ ದಿನಗಳು..!

ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಕನಿಷ್ಟ 2 ಲಕ್ಷ ನರ್ಸ್‌ ಹಾಗೂ 1.5 ಲಕ್ಷ ವೈದ್ಯರ ಅಗತ್ಯತೆ ಇದೆ. ಅದೂ ಕೂಡಾ ಕೆಲವೇ ವಾರಗಳಲ್ಲಿ. ಇಷ್ಟೂ ಪ್ರಮಾಣದ ಸಿಬ್ಬಂದಿ ಮುಂದಿನ 1 ವರ್ಷಗಳ ಕಾಲ ಕೊರೊನಾ ನಿರ್ವಹಣೆ ಮಾಡಬೇಕಿದೆ. ಏಕೆಂದರೆ, ಸದ್ಯದ ಕೊರೊನಾ ಅಲೆ ಕನಿಷ್ಟ ಪಕ್ಷ 4 ರಿಂದ 5 ತಿಂಗಳು ಇರುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಸಂಭಾವ್ಯ 3ನೇ ಅಲೆಗೂ ಸಿದ್ದವಿರಬೇಕಿದೆ. ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ವೈರಸ್‌ ಹೇಗೆ ವರ್ತಿಸಿದೆ ಎಂಬುದನ್ನು ನೋಡಿಕೊಂಡು ನಾವು ಈ ಅಂದಾಜು ಮಾಡಬೇಕಿದೆ. ಅಮೆರಿಕದಲ್ಲಿ ಕೊರೊನಾ ವೈರಸ್‌ ವರ್ತಿಸುವುದಕ್ಕಿಂತಾ ಭಿನ್ನವಾಗೇನೂ ಭಾರತದಲ್ಲಿ ವರ್ತಿಸುತ್ತಿಲ್ಲ. ನಮ್ಮ ವಂಶವಾಹಿ ವ್ಯತ್ಯಾಸಗಳು ಅಷ್ಟೇನೂ ವೈರಸ್ ಮೇಲೆ ಪರಿಣಾಮ ಬೀರಿಲ್ಲ.



2 ಲಕ್ಷ ನರ್ಸ್‌, 1.5 ಲಕ್ಷ ಡಾಕ್ಟರ್‌ಗಳ ಸೃಷ್ಟಿ ಹೇಗೆ..?
2 ಲಕ್ಷ ನರ್ಸ್‌, 1.5 ಲಕ್ಷ ಡಾಕ್ಟರ್‌ಗಳ ಸೃಷ್ಟಿ ಹೇಗೆ..?

ಕೆಲವೇ ವಾರಗಳಲ್ಲಿ ಇಷ್ಟು ಪ್ರಮಾಣದ ಮಾನವ ಸಂಪನ್ಮೂಲ ಸೃಷ್ಟಿ ಭಾರತದಿಂದ ಮಾತ್ರ ಸಾಧ್ಯ. ಏಕೆಂದರೆ ಭಾರತದಾದ್ಯಂತ ನರ್ಸಿಂಗ್ ಕಾಲೇಜುಗಳಲ್ಲಿ ಬಿಎಸ್‌ಸಿ ಹಾಗೂ ಜಿಎನ್‌ಎಂ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 2 ಲಕ್ಷದ 20 ಸಾವಿರದಷ್ಟಿದೆ. ಈ ವಿದ್ಯಾರ್ಥಿಗಳು ಈಗ ಪರೀಕ್ಷೆಗಾಗಿ ಕಾದು ಕುಳಿತಿದ್ದಾರೆ. ಇವರೆಲ್ಲರೂ ಪ್ರಾಯೋಗಿಕ ತರಬೇತಿ ಪಡೆದಿದ್ದಾರೆ. ಆದ್ರೆ, ಪರೀಕ್ಷೆಯನ್ನು ಎದುರಿಸಿಲ್ಲ ಅಷ್ಟೇ. ಇವರನ್ನು ಆರೋಗ್ಯ ಇಲಾಖೆಯು ನೇರವಾಗಿ ಕೆಲಸಕ್ಕೆ ಆಹ್ವಾನಿಸಬೇಕಿದೆ. 1 ವರ್ಷಗಳ ಕಾಲ ಕೊರೊನಾ ವೈರಸ್ ರೋಗಿಗಳಿಗೆ ಐಸಿಯುಗಳಲ್ಲಿ ಚಿಕಿತ್ಸೆ ನೀಡಿದರೆ ನಿಮಗೆ ಪದವಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ಹೇಳಿದರೆ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯವಾಗುತ್ತದೆ.

ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸರ್ಕಾರಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ವೇಳೆ ಕೋವಿಡ್ ಐಸಿಯುಗಳಲ್ಲಿ 1 ವರ್ಷಗಳ ಕಾಲ ಕಾರ್ಯನಿರ್ವಹಿಸಿದವರಿಗೆ ಮೊದಲ ಪ್ರಾಶಸ್ತ್ಯ ನೀಡೋದಾಗಿ ಭರವಸೆ ನೀಡಿ ಕೆಲಸ ಕ್ಕೆ ಕರೆದುಕೊಳ್ಳಬೇಕಿದೆ. ಏಕೆಂದರೆ, ಕೊರೊನಾ ವಿರುದ್ಧದ ಸಮರವನ್ನು ನರ್ಸ್‌ ಹಾಗೂ ವೈದ್ಯರಿಲ್ಲದೆ ಹೋರಾಡಲು ಸಾಧ್ಯವಿಲ್ಲ. ಹಾಗೂ ಹಿರಿಯ ವಯಸ್ಸಿನ ವೈದ್ಯರು ಕೊರೊನಾ ವಿರುದ್ಧದ ಸಮರದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಲಸಿಕೆ ಪಡೆದ ಯುವಕರು ಈ ಸಮರದಲ್ಲಿ ಭಾಗಿಯಾಗಲು ಯೋಗ್ಯರು.



​ವೈದ್ಯರ ಕೊರತೆಗೂ ಇಲ್ಲಿದೆ ಪರಿಹಾರ..!
​ವೈದ್ಯರ ಕೊರತೆಗೂ ಇಲ್ಲಿದೆ ಪರಿಹಾರ..!

ನರ್ಸ್‌ ಸಮಸ್ಯೆಯನ್ನು ಒಂದು ಹಂತದಲ್ಲಿ ಬಗೆಹರಿಸಿದ ಬಳಿಕ ವೈದ್ಯರ ಕೊರತೆ ಸಮಸ್ಯೆ ಬಗೆಹರಿಸೋದು ಹೇಗೆ..? ದೇಶದ ಹಲವು ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್‌ ಮುಗಿಸಿದ ವೈದ್ಯರು ನೀಟ್ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಇವರ ಸಂಖ್ಯೆ 1 ಲಕ್ಷ 30 ಸಾವಿರದಷ್ಟಿದೆ. ಇವರೆಲ್ಲರೂ ಈಗ ಸ್ನಾತಕೋತ್ತರ ಪದವಿ ಪಡೆಯಲು ಪ್ರವೇಶ ಪರೀಕ್ಷೆಗೆ ತಯಾರಾಗುತ್ತಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ಇವರಿಗೆ ಆದಷ್ಟು ಬೇಗ ಆನ್‌ಲೈನ್ ನೀಟ್ ಪರೀಕ್ಷೆ ನೀಡಬೇಕಿದೆ. ಕೆಲವೇ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶವೂ ಬರಬೇಕಿದೆ. ದೇಶಾದ್ಯಂತ 35 ಸಾವಿರ ಸ್ನಾತಕೋತ್ತರ ಪದವಿ ಸೀಟ್‌ಗಳಿವೆ. ಅಲ್ಲಿಗೆ ಕಲಿಯಲು 1 ಲಕ್ಷ ವಿದ್ಯಾರ್ಥಿಗಳು ಸೇರ್ಪಡೆಯಾದರೆ, ಸೀಟ್ ಸಿಗದ 1 ಲಕ್ಷ ವಿದ್ಯಾರ್ಥಿಗಳು ಸೇವೆಗೆ ಲಭ್ಯರಾಗುತ್ತಾರೆ. ಅವರು ಮುಂದಿನ ವರ್ಷ ನೀಟ್ ಪರೀಕ್ಷೆ ಎದುರಿಸುವ ಸಂದರ್ಭದಲ್ಲಿ ಅವರಿಗೆ ಭಾರೀ ಪ್ರಮಾಣದ ಗ್ರೇಸ್ ಅಂಕಗಳನ್ನು ಕೊಡುತ್ತೇವೆ ಎಂದು ಅವರನ್ನು ಒಂದು ವರ್ಷಗಳ ಕಾಲ ಕೋವಿಡ್ ಐಸಿಯುನಲ್ಲಿ ಸೇವೆಗೆ ನೇಮಿಸಬಹುದಾಗಿದೆ. ಇದನ್ನು ನಿರ್ವಹಿಸಲು ಸರ್ಕಾರವು ಪ್ರತ್ಯೇಕ ಇಲಾಖೆಯನ್ನು ತೆರೆಯಬೇಕಿದೆ.



ಟೈರ್ 2, 3 ಸಿಟಿಗಳ ಕಥೆ ಏನಾಗಬಹುದು..?
ಟೈರ್ 2, 3 ಸಿಟಿಗಳ ಕಥೆ ಏನಾಗಬಹುದು..?

ಇನ್ನು ನಾವು ಕೊರೊನಾ ಸ್ಥಿತಿಯನ್ನು ಕೇವಲ ದಿಲ್ಲಿ, ಬೆಂಗಳೂರು, ಪುಣೆಯಂಥಾ ನಗರಗಳನ್ನು ನೋಡಿ ಅವಲೋಕಿಸುತ್ತಿದ್ದೇವೆ. ಟೈರ್ 2, 3 ನಗರಗಳ ಕಥೆ ಏನು..? ಸದ್ಯ ಈ ನಗರಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆ ಇದೆ. ಆದ್ರೆ, ಆ ನಗರಗಳಲ್ಲೂ ಬೆಂಗಳೂರಿನಂಥಾ ಸ್ಥಿತಿಯೇ ಎದುರಾದರೂ ಅಚ್ಚರಿ ಇಲ್ಲ. ಕೋವಿಡ್ ಯಾರನ್ನೂ ಬಿಡೋದಿಲ್ಲ. ಆದ್ರೆ, ಆ ನಗರಗಳಲ್ಲಿ ದೊಡ್ಡ ಮಟ್ಟದ ಖಾಸಗಿ ಆಸ್ಪತ್ರೆಗಳೂ ಇಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವೂ ಇಲ್ಲ.



ಪಿಜಿ ವೈದ್ಯರು ಪರೀಕ್ಷೆಗೆ ಬದಲು ಐಸಿಯುಗೆ ಬರಲಿ..!
ಪಿಜಿ ವೈದ್ಯರು ಪರೀಕ್ಷೆಗೆ ಬದಲು ಐಸಿಯುಗೆ ಬರಲಿ..!

ಇನ್ನೊಂದೆಡೆ ಸ್ನಾತಕೋತ್ತರ ಪದವಿ ಮುಗಿಸಿದ 25 ಸಾವಿರ ವೈದ್ಯರು ಇದೀಗ ಪರೀಕ್ಷೆಗಾಗಿ ಎದುರು ನೋಡ್ತಿದ್ದಾರೆ. ಅವರೂ ಕೂಡಾ ಕೋವಿಡ್ ಐಸಿಯುಗಳಲ್ಲಿ ಕಾರ್ಯನಿರ್ವಹಿಸಬಹುದು. ಅವರು ಪರೀಕ್ಷೆ ಬರೆಯದೇ ಕೋವಿಡ್ ಐಸಿಯುಗಳಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದರೆ ಪದವಿ ಪ್ರಮಾಣ ಪತ್ರ ನೀಡಿ. ಹಾಗೆ ನೋಡಿದ್ರೆ, 90 ಸಾವಿರದಿಂದ 1 ಲಕ್ಷ ಭಾರತೀಯ ವೈದ್ಯರು ವಿದೇಶಗಳಲ್ಲೂ ಪದವಿ ವ್ಯಾಸಂಗ ಮುಗಿಸಿದ್ದಾರೆ. ಅವರಲ್ಲಿ ಪ್ರತಿಭಾಶಾಲಿಗಳನ್ನೂ ಗುರ್ತಿಸಿ ಕೋವಿಡ್ ಐಸಿಯುಗಳಲ್ಲಿ 1 ವರ್ಷ ಕಾರ್ಯನಿರ್ವಹಿಸುವಂತೆ ಹೇಳಬಹುದು.

ಈ ಎಲ್ಲವನ್ನೂ ಕೆಲವೇ ವಾರಗಳಲ್ಲಿ ಮಾಡಿದರೆ ಕೋವಿಡ್ ವಿರುದ್ಧದ ಸಮರದಲ್ಲಿ ನಾವು ಮೇಲುಗೈ ಸಾಧಿಸಬಹುದು. ಇಲ್ಲವಾದ್ರೆ, ಈ ಪರಿಸ್ಥಿತಿ ಇನ್ನಷ್ಟು ಗಂಭೀರ ಆಗಬಹುದು. ಏಕೆಂದರೆ, ಐಸಿಯುಗೆ ದಾಖಲಾಗುವ ರೋಗಿಗಳಿಗೆ ಆಮ್ಲಜನಕ ನೀಡಿದಾಕ್ಷಣ ಅವರು ಗುಣಮುಖ ಆಗೋದಿಲ್ಲ. ಅವರನ್ನು ಗಮನಿಸಲು ವೈದ್ಯರು ಹಾಗೂ ನರ್ಸ್‌ಗಳು ಬೇಕು.



ಸರ್ಕಾರ ಈಗ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳಬೇಕು..!
ಸರ್ಕಾರ ಈಗ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳಬೇಕು..!

ಮೇ ತಿಂಗಳ ಬಿಸಿಲಿನಲ್ಲಿ ಗಂಟೆಗಟ್ಟಲೆ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸೋದು ಸುಲಭದ ಕೆಲಸವಲ್ಲ. ಈಗಾಗಲೇ 1 ವರ್ಷದಿಂದ ಈ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‌ಗಳ ಕಾರ್ಯ ಶ್ಲಾಘನೀಯ. ಆದ್ರೆ, ಅವರು ಸುಸ್ತಾಗಿದ್ದಾರೆ. ಹಲವರು ಸೋಂಕಿತರಾಗಿದ್ದಾರೆ. ಹೀಗಾಗಿ, ಪರ್ಯಾಯಗಳನ್ನು ನಾವು ಹುಡುಕಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದ ಕೇಂದ್ರ ಸರ್ಕಾರವು ಈ ಸವಾಲನ್ನು ಸಮರ್ಥವಾಗಿ ಎದುರಿಸುತ್ತದೆ. ಒಂದು ಹಂತದಲ್ಲಿ ನಾನು ಅಂದಾಜಿಸಿರುವ ಕೋವಿಡ್ ರೋಗಿಗಳ ಸಂಖ್ಯೆ ಹಾಗೂ ಅಗತ್ಯವಿರುವ ಐಸಿಯುಗಳ ಸಂಖ್ಯೆ ತಪ್ಪಾಗಬಹುದು. ಆದ್ರೆ, ನಾನು ಹೇಳಿದಂತೆಯೇ ಆದರೆ ಏನು ಮಾಡೋದು..? ಈಗಾಗಲೇ ತಡವಾಗಿದೆ. ನಾವು ಸುಮ್ಮನೆ ನೋಡುತ್ತಾ ಕೂರೋದು ಸಾಧ್ಯವೇ ಇಲ್ಲ..!





from India & World News in Kannada | VK Polls https://ift.tt/3xrkFBY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...