ಪಶುವೈದ್ಯೆ ಅತ್ಯಾಚಾರ, ಹತ್ಯೆ ಮಾಡಿ ಸುಟ್ಟು ಹಾಕಿದ ಜಾಗಗಳನ್ನು ಖಾತರಿ ಪಡಿಸಿದ ಆರೋಪಿಗಳು!

ಹೈದರಾಬಾದ್‌: ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಕೃತ್ಯ ನಡೆಸದ ಜಾಗಗಳನ್ನು ಖಚಿತ ಪಡಿಸಿದ್ದಾರೆ. ಶಂಶಾಬಾದ್‌ ಮತ್ತು ಶದ್‌ನಗರ್‌ ನಡುವಣ ರಾಷ್ಟ್ರೀಯ ಹೆದ್ದಾರಿ 44ರ ಸಮೀಪ ಛತ್ತನಪಲ್ಲಿ ಗ್ರಾಮದಲ್ಲಿ ಪಶುವೈದ್ಯೆಯನ್ನು ಸುಟ್ಟು ಹಾಕಿದ ಜಾಗವನ್ನು ಆರೋಪಿಗಳಾದ ಜೊಲ್ಲು ಶಿವ ಮತ್ತು ಜೊಲ್ಲು ನವೀನ್‌ ಖಾತರಿ ಪಡಿಸಿದ್ದಾರೆ. ಇಬ್ಬರು ಆರೋಪಿಗಳು ಲಾರಿಯ ಕ್ಯಾಬಿನ್‌ನಲ್ಲಿ ಪಶುವೈದ್ಯೆಯ ದೇಹವನ್ನು ತಂದರೆ, ಮತ್ತಿಬ್ಬರು ಆಕೆಯ ಸ್ಕೂಟರ್‌ ಮೂಲಕ ಬೆಂಕಿ ಹಚ್ಚಿದ ಜಾಗಕ್ಕೆ ಬಂದಿದ್ದರು. ಜನಗಳ ಸಂಚಾರ ಇದ್ದುದರಿಂದ ಆರಂಭದಲ್ಲಿ ಪಶುವೈದ್ಯೆಯ ದೇಹವನ್ನು ಸುಟ್ಟುಹಾಕಲು ಗುಪ್ತ ಸ್ಥಳವನ್ನು ಹುಡುಕಲು ವಿಫಲರಾಗಿದ್ದರು. ಅಂತಿಮವಾಗಿ ಫ್ಲೈಓವರ್‌ನ ಅಂಡರ್‌ ಪಾಸ್‌ನಲ್ಲಿ ಬರುವಾಗ ಇದೇ ಸೂಕ್ತ ಸ್ಥಳವೆಂದು ಪಶುವೈದ್ಯೆಯ ದೇಹಕ್ಕೆ ಡೀಸೆಲ್‌ ಸುರಿದು ಬೆಂಕಿ ಹಂಚಿದ್ದರು. ನಂತರ ಆ ಜಾಗದಿಂದ ಕಾಲ್ಕಿತ್ತ ಆರೋಪಿಗಳು ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದೆಯೇ ಎಂಬುದನ್ನು ಪರೀಕ್ಷಿಸಲು ಮತ್ತೆ ಬಂದಿದ್ದರು. ದಾಖಲೆಗಳನ್ನು ಅಳಿಸುವ ಪ್ರಯತ್ನ ನಡೆಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೆಟ್ರೋಲ್‌/ಡೀಸೆಲ್‌ ಮಾರಾಟಗಾರರಿಗೆ ಸೈಬರಾಬಾದ್‌ ಪೊಲೀಸರು ಮಾರಾಟದ ವೇಳೆ ನಿಗಾ ಇಡುವಂತೆ ಎಚ್ಚರಿಸಿದ್ದಾರೆ. ಇನ್ನು ಮೆಟ್ರೊ ಪಾಲಿಟನ್‌ ಡೆವಲಪ್‌ಮೆಂಟ್‌ ಅಥಾರಿಟಿಗೆ ಔಟರ್‌ ರಿಂಗ್‌ ರೋಡ್‌ನ ಪ್ರವೇಶ ಮತ್ತು ನಿರ್ಗಮನ ಧ್ವಾರದಲ್ಲಿ ಬೀದಿದೀಪದ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅಳವಡಿಸುವಂತೆ ತಾಕೀತು ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಆರೋಪಿಗಳನ್ನು ಪೊಲೀಸ್‌ ಕಸ್ಟಡಿ ಒಪ್ಪಿಸುವಂತೆ ಮಹಬೂಬ್‌ನಗರ ಸ್ಥಳೀಯ ಕೋರ್ಟ್‌ಗೆ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/2LcHsed

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...