ಮಕ್ಕಳು ಶಾಲೆಗೆ ಗೈರಾದರೆ ಪೋಷಕರಿಗೆ ಸರಕಾರದಿಂದ ನೋಟಿಸ್‌!

ಶಿವರಾಮ್‌ ಬೆಂಗಳೂರುಬೆಂಗಳೂರು: ಇನ್ನು ಮುಂದೆ ಮಕ್ಕಳು ಸತತವಾಗಿ ಒಂದು ವಾರ ಶಾಲೆಗೆ ಗೈರು ಹಾಜರಾದರೆ ಪೋಷಕರಿಗೆ ಕಡ್ಡಾಯವಾಗಿ ಹಾಜರಾತಿ ಪ್ರಾಧಿಕಾರದಿಂದ ನೋಟಿಸ್‌ ಜಾರಿಯಾಗಲಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಹೈಕೋರ್ಟ್‌ ನೀಡಿರುವ ಕಟ್ಟುನಿಟ್ಟಿನ ಆದೇಶದ ಮೇರೆಗೆ ಶಿಕ್ಷಣ ಇಲಾಖೆ ಈ ಪೋಷಕರಿಗೆ ನೋಟಿಸ್‌ ನೀಡಲು ನಿರ್ಧರಿಸಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅಧ್ಯಕ್ಷತೆಯಲ್ಲಿನಡೆದ ಅಂತರ ಇಲಾಖಾ ಸಮಿತಿ ಸಭೆಯಲ್ಲಿವಾರ ಗೈರು ಹಾಜರಾದ ಮಕ್ಕಳ ಎಲ್ಲಾಪೋಷಕರಿಗೆ ಕಡ್ಡಾಯವಾಗಿ ಹಾಜರಾತಿ ಪ್ರಾಧಿಕಾರದಿಂದ ನೋಟಿಸ್‌ ನೀಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ತಾಲೂಕು ಹಂತದ ಶಿಕ್ಷಣ ಸಂಯೋಜಕರನ್ನು ಹಾಜರಾತಿ ಪ್ರಾಧಿಕಾರವಾಗಿ ಸರಕಾರ ನೇಮಿಸಿದೆ. ಇದು ತಮ್ಮ ವ್ಯಾಪ್ತಿಯಲ್ಲಿಬರುವ ಎಲ್ಲಶಾಲೆಗಳ ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಮಾಹಿತಿಯನ್ನು ಹೊಂದಿರಬೇಕು. ಪ್ರತಿ ವಾರ ಗೈರು ಹಾಜರಾದ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಬೇಕು. ಆದರೆ, ಪ್ರತಿ ವಾರ ಜಿಲ್ಲೆಗಳಿಂದ ಪಡೆಯುವ ಅಂಕಿ-ಅಂಶಗಳನ್ನು ರಾಜ್ಯ ಹಂತದಲ್ಲಿ ವಿಶ್ಲೇಷಿಸಿದಾಗ ಗೈರು ಹಾಜರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. 4 ಜಿಲ್ಲೆಗಳು ನೋಟಿಸ್‌ ಜಾರಿ ಮಾಡಿಲ್ಲ: ನ. 16ರಂದು ಲಭ್ಯವಾದ ಮಾಹಿತಿಯಂತೆ, ಬಾಗಲಕೋಟೆ, ಚಿಕ್ಕೋಡಿ, ಬೀದರ್‌ ಹಾಗೂ ದಕ್ಷಿಣ ಕನ್ನಡ ಶೈಕ್ಷಣಿಕ ಜಿಲ್ಲೆಗಳಲ್ಲಿ ವಾರ ಗೈರು ಹಾಜರಾದ ಮಕ್ಕಳ ಪೋಷಕರಿಗೆ ನೋಟಿಸ್‌ ಜಾರಿಗೊಳಿಸಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ. ಇನ್ನು, ಗೈರು ಹಾಜರಾದ ಮಕ್ಕಳ ಪೋಷಕರಿಗೆ ನೋಟಿಸ್‌ ಜಾರಿಯಾದ ನಂತರ ಅನುಪಾಲನೆ ನಡೆಸಿ ಮಗುವನ್ನು ಮರಳಿ ಶಾಲೆಗೆ ಕರೆತರಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆಯೂ ಸೂಚಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಗೆ ದೂರು: ಮಕ್ಕಳನ್ನು ಮರಳಿ ಶಾಲೆಗೆ ಕಳಿಸಲು ಪೋಷಕರು ನಿರಾಕರಿಸಿದಲ್ಲಿಮಕ್ಕಳ ಕಲ್ಯಾಣ ಸಮಿತಿಗೆ ದೂರು ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಮೈಸೂರು, ರಾಮನಗರ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿಮಾತ್ರ ದೂರು ದಾಖಲಿಸಿರುವುದು ಕಂಡು ಬಂದಿದೆ. ಇತರೆ ಜಿಲ್ಲೆಗಳು ಶೂನ್ಯ ವರದಿ ನೀಡಿರುವುದು ಕಂಡು ಬಂದಿದೆ. ಶನಿವಾರವೇ ವರದಿ ಸಲ್ಲಿಸಲು ಸೂಚನೆ: ಪ್ರತಿ ವಾರ ಗೈರು ಹಾಜರಾದ ಮಕ್ಕಳ ಮಾಹಿತಿಯನ್ನು ದಾಖಲೆಸಹಿತ ಜಿಲ್ಲೆಗಳಲ್ಲಿಪರಿಶೀಲಿಸಿ, ನಂತರ ವರದಿಯನ್ನು ಶನಿವಾರವೇ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಆದರೆ, ಕೆಲ ಜಿಲ್ಲೆಗಳ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ವಿಳಂಬವಾಗಿ ಮಾಹಿತಿ ನೀಡುತ್ತಿದ್ದಾರೆ. ಒಂದು ವೇಳೆ ತಪ್ಪು ಮಾಹಿತಿ ಒದಗಿಸಿದಲ್ಲಿಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಸಮಗ್ರ ಯೋಜನಾ ನಿರ್ದೇಶಕ ಡಾ.ಎಂ.ಟಿ. ರೇಜು ಎಚ್ಚರಿಸಿದ್ದಾರೆ. ಸರಿಯಾಗಿ ಪಾಲನೆಯಗಾದ ನಿಯಮ: ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕರೆತರುವ ಉದ್ದೇಶದಿಂದ ಹೈಕೋರ್ಟ್‌ 2013ರಲ್ಲಿಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸರಕಾರಕ್ಕೆ ಸೂಚಿಸಿತ್ತು. 2014ರಲ್ಲಿಶಿಕ್ಷಣ ಇಲಾಖೆ ನಿಯಮ-6ಕ್ಕೆ ತಿದ್ದುಪಡಿ ತಂದಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಸರಿಯಾಗಿ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಸಿವಿಕ್‌ ಸೊಸೈಟಿಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಪ್ರತಿಕ್ರಿಯಿಸಿದ್ದಾರೆ. ಸ್ಥಳೀಯ ಮಟ್ಟದಲ್ಲೇ ನಿಖರ ಮಾಹಿತಿ ಇಲ್ಲ: ಪ್ರತಿ ವರ್ಷ ಪ್ರಾರಂಭವಾಗುವ ಒಂದು ತಿಂಗಳು ಮುನ್ನ ಅಂದರೆ ಮೇ ತಿಂಗಳಲ್ಲೇ ಆಯಾ ಶಾಲೆ ಮುಖ್ಯ ಶಿಕ್ಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸುವಂತೆ ಪೋಷಕರ ಮನವೊಲಿಸಬೇಕು. ಆರಂಭದಲ್ಲಿಒಂದು ವಾರ ಮಗು ಶಾಲೆಗೆ ಬರದಿದ್ದಲ್ಲಿ ಪೋಷಕರಿಗೆ ಕಡ್ಡಾಯವಾಗಿ ನೋಟಿಸ್‌ ನೀಡಬೇಕು. ಆನಂತರ ಹಾಜರಾತಿ ಪ್ರಾಧಿಕಾರದ ಮುಂದೆ ಮಗು ಹಾಜರುಪಡಿಸಬೇಕು. ಆದರೆ, ಡಿಸೆಂಬರ್‌ನಲ್ಲಿಇಂತಹ ಪ್ರಕ್ರಿಯೆ ನಡೆಸುವುದರಿಂದ ಪ್ರಯೋಜನವಿಲ್ಲ. ಗ್ರಾ.ಪಂ ಹಾಗೂ ಮುನಿಸಿಪಲ್‌ಮಟ್ಟದ ವಾರ್ಡ್‌ ಸಮಿತಿಗಳ ಬಳಿಯೇ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಸರಿಯಾದ ಮಾಹಿತಿ ಇಲ್ಲಎಂದು ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ.


from India & World News in Kannada | VK Polls https://ift.tt/2LbwdTo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...