ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಲ್ಲಿ ಬಿಸಿಸಿಐ ಪ್ರತಿನಿಧಿಸಲಿರುವ ಜೂನಿಯರ್‌ ಶಾ!

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ () ಮುಖ್ಯ ನಿರ್ವಾಹಕ ಸಮಿತಿ ಸಭೆಗಳಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ()ಯನ್ನು ಪ್ರತಿನಿಧಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಹಾಗೂ ಬಿಸಿಸಿಐನ ಕಾರ್ಯದರ್ಶಿ ನೇಮಕಗೊಂಡಿದ್ದಾರೆ. ಆಡಳಿತಾಧಿಕಾರಿಯಾಗಿ ಜಯ್‌ ಶಾ ಗಣನೀಯ ರೀತಿಯಲ್ಲಿ ಪ್ರಗತಿ ಕಾಣುತ್ತಿದ್ದು, ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಇದಕ್ಕೂ ಮುನ್ನ ಸುಪ್ರೀಂ ನೇಮಿತ ಕ್ರಿಕೆಟ್‌ ಆಡಳಿತ ಸಮಿತಿ ಆಳ್ವಿಕೆಯಲ್ಲಿ ಬಿಸಿಸಿಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್‌ ಜೊಹ್ರಿ ಅವರು ಐಸಿಸಿಎ ಈ ಎಲ್ಲಾ ಸಭೆಗಳಲ್ಲಿ ಬಿಸಿಸಿಐನ ಪ್ರತಿನಿಧಿಯಾಗಿ ಪಾಲ್ಗೊಳ್ಳುತ್ತಿದ್ದರು. ಅಕ್ಟೋಬರ್‌ 23ರಂದು ಬಿಸಿಸಿಐನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ 31 ವರ್ಷದ ಜಯ್‌ ಶಾ ಕೂಡ ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಇದೀಗ ಬಿಸಿಸಿಐನ 88ನೇ ವಾರ್ಷಿಕ ಸಭೆಯಲ್ಲಿ ಜಯ್‌ ಶಾ ಅವರಿಗೆ ಐಸಿಸಿಯಲ್ಲಿ ಭಾರತೀಯ ಕ್ರಿಕೆಟ್‌ ಮಂಡಳಿಯನ್ನು ಪ್ರತಿನಿಧಲು ಆಯ್ಕೆ ಮಾಡಲಾಗಿದೆ. ಜಯ್‌ ಶಾ, 2013ರಲ್ಲಿ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬಳಿಕ ಲೋಧಾ ಸಮಿತಿ ಶಿಫಾರಸಿನ ಅನ್ವಯ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಅಧಿಕಾರದಲ್ಲಿ ಜಯ್‌ ಶಾ ಮುಂದುವರಿಯಲಿಲ್ಲ. ಬಳಿಕ ಬಿಸಿಸಿಐನ ಕಾರ್ಯದರ್ಶಿ ಸ್ಥಾನ ಪಡೆದುಕೊಂಡಿದ್ದಾರೆ. ಆಯ್ಕೆ ಸಮಿತಿ ಅಧಿಕಾರಾವಧಿ ಅಂತ್ಯಇದೇ ವೇಳೆ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಟೀಮ್‌ ಇಂಡಿಯಾದ ಆಯ್ಕೆ ಸಮಿತಿಯ ಅಧಿಕಾರಾವಧಿಯನ್ನು ಅಂತ್ಯಗೊಳಿಸಲಾಗಿದೆ. "ಯಾರೊಬ್ಬರೂ ಅವಧಿಗಿಂತಲೂ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ. ಅಂದಹಾಗೆ ಎಂಎಸ್‌ಕೆ ಪ್ರಸಾದ್‌ ಮುಂದಾಳತ್ವದ ಆಯ್ಕೆ ಸಮಿತಿ ಉತ್ತಮ ಕೆಲಸ ಮಾಡಿದೆ. ಇದೇ ವೇಳೆ ಆಯ್ಕೆದಾರರಿಗೆ ನಿರ್ಧಿಷ್ಟ ಅವಧಿಯ ಅಧಿಕಾರಾವಧಿಯನ್ನು ನಿಗದಿ ಪಡಿಸಲಿದ್ದೇವೆ. ಪ್ರತಿವರ್ಷ ಆಯ್ಕೆದಾರರ ಬದಲಾವಣೆ ಒಳ್ಳೆಯ ನಡೆಯಲ್ಲ," ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಭಾನುವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಗಂಗೂಲಿ ಆಳ್ವಿಕೆ ವಿಸ್ತರಣೆಗೆ ಸುಪ್ರೀಂ ಮೊರೆ ಬಿಸಿಸಿಐನ ಅಧ್ಯಕ್ಷ ಸೌರವ್‌ ಗಂಗೂಲಿ ಆಳ್ವಿಕೆ ವಿಸ್ತರಣೆಗೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಭಾನುವಾರ ನಿರ್ಧರಿಸಲಾಗಿದೆ. ಅಕ್ಟೋಬರ್‌ 23ರಂದು ಅಧಿಕಾರ ಸ್ವೀಕರಿಸಿದ ಸೌರವ್‌, ಬಿಸಿಸಿಐ ನೂತನ ನಿಯಮಾನುಸಾರ ಮುಂದಿನ ವರ್ಷ ತಮ್ಮ ಸ್ಥಾನ ಬಿಟ್ಟುಕೊಡಬೇಕಿದೆ. ಆದರೆ ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸಿದರೆ 2024ರವರೆಗೆ ಮುಂದುವರಿಯಬಹುದಾಗಿದೆ. ಬಿಸಿಸಿಐನ ನೂತನ ಸಂವಿಧಾನದ ಅನುಸಾರ ಬಿಸಿಸಿಐ ಅಥವಾ ಯಾವುದೇ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ 2-3 ವರ್ಷ ಆಳ್ವಿಕೆ ನಡೆಸಿರುವವರು ಕನಿಷ್ಠ 3 ವರ್ಷಗಳ ಕೂಲಿಂಗ್‌ ಅವಧಿ ಪೂರೈಸಬೇಕು. ಸೌರವ್‌, ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ 2ನೇ ಬಾರಿ ಅಧಿಕಾರದಲ್ಲಿ ಮುಂದುವರಿದಿದ್ದರು. ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನ ಪಡೆದರು ಹೀಗಾಗಿ ಮುಂದಿನ ವರ್ಷ ಕೂಲಿಂಗ್‌ ಅವಧಿ ಪಡೆಯಬೇಕಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33EMeHO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...