ಹೈದರಾಬಾದ್: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮತ್ತು ನಡುವೆ ರೋಚಕ ಹೋರಾಟ ನಡೆಯಿತು. ಹರಿಯಾಣ ಸ್ಟೀಲರ್ಸ್ ತಂಡ ಎದುರಾಳಿ ತಂಡವನ್ನು ಪಲ್ಟಿ ಹೊಡೆಸಿ ಜಯಗಳಿಸಿತು. 34-24 ಅಂಕಗಳ ಅಂತರದಲ್ಲಿ ಹರಿಯಾಣ ತಂಡ ಜಯ ಗಳಿಸಿತು. ದಿನದ ದ್ವಿತೀಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 34-24 ಅಂಕಗಳಿಂದ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿತು. ಮೊದಲಾರ್ಧದ ವೇಳೆ 22-10ರ ಭಾರಿ ಮುನ್ನಡೆ ಕಂಡುಕೊಂಡ ಸ್ಟೀಲರ್ಸ್ ದ್ವಿತೀಯಾರ್ಧದಲ್ಲಿ ಎದುರಾಳಿಯ ಪ್ರತಿ ಹೋರಾಟಕ್ಕೆ ಮಂಕಾದಂತೆ ಗೋಚರಿಸಿದರೂ, ಆ ಬಳಿಕ ಚೇತರಿಸಿಕೊಂಡು ಮೊದಲ ಜಯದ ಸಿಹಿ ಸವಿಯಿತು. ಹರಿಯಾಣ ಸ್ಟೀಲರ್ಸ್ ಪರ ನವೀನ್ 14 ಅಂಕ ಗಳಿಸಿ ತಂಡದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JIS7gs