ಏಕದಿನ ವಿಶ್ವಕಪ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಬರ್ಮಿ‌ಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿದೆ. ಭಾರತ ಬ್ಯಾಟಿಂಗ್ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಕಾರ್ತಿಕ್, ಜಾಧವ್‌ಗೆ ಕೊಕ್; ಭುವಿ, ಕಾರ್ತಿಕ್ ಇನ್ ಭಾರತ ತಂಡದಲ್ಲಿ ಪ್ರಮುಖವಾಗಿಯೂ ಎರಡು ಬದಲಾವಣೆಗಳನ್ನು ತರಲಾಗಿದ್ದು, ಕೇದರ್ ಜಾಧವ್ ಹಾಗೂ ಕುಲ್‌ದೀಪ್ ಯಾದವ್‌ರನ್ನು ಕೈಬಡಲಾಗಿದೆ. ಇವರ ಸ್ಥಾನಗಳಗೆ ದಿನೇಶ್ ಕಾರ್ತಿಕ್ ಹಾಗೂ ಭುವನೇಶ್ವರ್ ಕುಮಾರ್ ಆಯ್ಕೆ ಮಾಡಲಾಗಿದೆ. ಅತ್ತ ಬಾಂಗ್ಲಾ ತಂಡದಲ್ಲಿ ಎರಡು ಬದಲಾವಣೆ ತರಲಾಗಿದ್ದು, ರುಬೆಲ್ ಹುಸೇನ್ ಹಾಗೂ ಶಬ್ಬೀರ್ ರೆಹಮಾನ್ ತಂಡವನ್ನು ಸೇರಿಕೊಂಡಿದ್ದಾರೆ. ಆಡುವ ಬಳಗ ಇಂತಿದೆ: India (Playing XI): Lokesh Rahul, , Virat Kohli(c), Rishabh Pant, Dinesh Karthik, MS Dhoni(w), Hardik Pandya, Bhuvneshwar Kumar, Mohammed Shami, Yuzvendra Chahal, Jasprit Bumrah Bangladesh (Playing XI): Tamim Iqbal, Soumya Sarkar, , Mushfiqur Rahim(w), Liton Das, Mosaddek Hossain, Sabbir Rahman, Mohammad Saifuddin, Mashrafe Mortaza(c), Rubel Hossain, Mustafizur Rahman ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ ಗೆದ್ದ ಬಳಿಕ ಭಾನುವಾರ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಮೊದಲ ಸೋಲಿಗೆ ತುತ್ತಾಗಿರುವ ಭಾರತ ತಂಡ ಮಂಗಳವಾರ ಬಾಂಗ್ಲಾದೇಶ ವಿರುದ್ಧ ಗೆದ್ದು ಮತ್ತೆ ಪಾರಮ್ಯ ಮೆರೆಯುವ ಇರಾದೆಯಲ್ಲಿದೆ. ಬಾಂಗ್ಲಾ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ. ಟೂರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ತಂಡಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.ಆದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಸದ್ಯ 11ಅಂಕಗಳನ್ನು ಹೊಂದಿರುವ ವಿರಾಟ್‌ ಕೊಹ್ಲಿ ಮತ್ತು ಬಳಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬೇಕಾದರೆ ಉಳಿದೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕು. ಅದೇ ವೇಳೆ ಆಸ್ಪ್ರೇಲಿಯಾ ತಂಡ ತನ್ನ ಕೊನೆಯ ಪಂದ್ಯದಲ್ಲಿ ಸೋಲಬೇಕು. ಅತ್ತ ಬಾಂಗ್ಲಾ ತಂಡ ಟೂರ್ನಿಯ ಆರಂಭದಿಂದಲೂ ಸ್ಫೂರ್ತಿಯದಾಯಕ ಪ್ರದರ್ಶನ ನೀಡುತ್ತಿದ್ದು ನಾಲ್ಕರ ಘಟ್ಟ ಪ್ರವೇಶಿಸಲು ಎದುರು ನೋಡುತ್ತಿದೆ. ಆ ನಿಟ್ಟಿನಲ್ಲಿ ಬಾಂಗ್ಲಾ ಯಶಸ್ವಿಯಾದರೆ, ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿ ಸೆಮಿಫೈನಲ್ಸ್‌ ಪ್ರವೇಶಿಸಿದ ಹೆಗ್ಗಳಿಕೆ ಬಾಂಗ್ಲಾ ತಂಡದ್ದಾಗಲಿದೆ. ಆದರೆ, ಆ ಹಾದಿ ದುರ್ಗಮವಾಗಿರುವಂತಿದೆ. ಸದ್ಯ 7 ಪಂದ್ಯಗಳಲ್ಲಿ 7 ಅಂಕ ಕಲೆಹಾಕಿರುವ ಬಾಂಗ್ಲಾ ಸೆಮಿಫೈನಲ್ಸ್‌ ಪ್ರವೇಶಿಸಬೇಕಾದರೆ, ಮಂಗಳವಾರದ ಪಂದ್ಯದಲ್ಲಿ ಜಯಿಸುವುದರ ಜತೆಗೆ ಇತರ ಪಂದ್ಯಗಳ ಫಲಿತಾಂಶಗಳು ಬಾಂಗ್ಲಾ ಪರ ಇರಬೇಕಾಗುತ್ತದೆ. ಮಶ್ರಫೆ ಮೊರ್ತಜಾ ನೇತೃತ್ವದ ಬಾಂಗ್ಲಾ ತಂಡದಲ್ಲಿ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಟ್ರಂಪ್‌ ಕಾರ್ಡ್‌ ಎನಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RMIvUx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...