ಟೊಕಿಯೋ: ಪ್ರತಿಷ್ಠಿತ ಮೊದಲ ಸುತ್ತಿನಲ್ಲೇ ಪ್ರಶಸ್ತಿ ನಿರೀಕ್ಷೆಯಾಗಿದ್ದ ಕಿಡಂಬಿ ಶ್ರೀಕಾಂತ್‌ಗೆ ಆಘಾತ ಎದುರಾಗಿದೆ. ಭಾರತೀಯರೇ ಆದ ವಿರುದ್ಧ ಸೋಲಿಗೆ ಶರಣಾಗಿರುವ ಕಿಡಂಬಿ, ಮೊದಲ ಸುತ್ತಿನಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ. ಪುರುಷ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಹೋರಾಟದಲ್ಲಿ ಕಿಡಂಬಿ ವಿರುದ್ಧ ಪ್ರಣೋಯ್ 13-21, 21-11, 22-20ರ ಅಂತರದ ಪ್ರಯಾಸದ ಗೆಲುವು ದಾಖಲಿಸಿ ಮುನ್ನಡೆಸಿದರು. 7.5 ಲಕ್ಷ ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್ ಮೊದಲ ಸೆಟ್ ವಶಪಡಿಸಿ ಶುಭಾರಂಭ ಮಾಡಿದರೂ ಬಳಿಕದ ಎರಡು ಸೆಟ್‌ಗಳಲ್ಲಿ ಹೊಡೆತವನ್ನು ಎದುರಿಸಿ ಸೋಲಿನ ಆಘಾತಕ್ಕೊಳಗಾದರು. ಈ ಮೊದಲು ನಾಲ್ಕು ಬಾರಿ ಎದುರಾದಾಗ ಪ್ರಣೋಯ್ ವಿರುದ್ಧ ಕಿಡಂಬಿ ಗೆಲುವು ದಾಖಲಿಸಿದ್ದರು. ಆದರೆ ಇದೀಗ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Z5AbSE