ಫುಟ್ಬಾಲ್ ಆಡುತ್ತೆ ಈ ಆಕಳು; ವೀಡಿಯೋ ನೋಡಿ

ಹೊಸದಿಲ್ಲಿ: ಭಾರತೀಯರಿಗೆ ಕ್ರಿಕೆಟ್ ಹುಚ್ಚಿರಬಹುದು. ಆದರೆ ವಿಶ್ವದಲ್ಲಿ ಅತಿ ಜನಪ್ರಿಯ ಕ್ರೀಡೆ. ಇಂಡಿಯನ್ ಸೂಪರ್ ಲೀಗ್ ಆರಂಭವಾದ ಮೇಲೆ ಭಾರತದಲ್ಲೂ ಫುಟ್ಬಾಲ್ ಜ್ವರ ಏರುತ್ತಿದೆ. ಮನುಷ್ಯರು ಫುಟ್ಬಾಲ್ ಆಡಿರುವುದನ್ನು ನೋಡಿರುತ್ತೀರ. ಆದರೆ ಸಹ ಕಾಲ್ಚೆಂಡು ಆಟವನ್ನು ಆಡುತ್ತದೆ ಎಂದರೆ ನೀವು ನಂಬುತ್ತೀರ. ನಂಬಿಕೆ ಬರದಿದ್ದರೆ ಈ ವೀಡಿಯೋ ನೋಡಿ. ಈ ವೀಡಿಯೋದಲ್ಲಿ ಆಕಳೊಂದು ಮೈದಾನದಲ್ಲಿ ಮಕ್ಕಳೊಂದಿಗೆ ಫುಟ್ಬಾಲ್ ಆಡುತ್ತಿದೆ. ಈ ಸ್ವಾರಸ್ಯಕರ ವೀಡಿಯೋವನ್ನು ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಜನರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬರು ಕರುವೆಂದು ಭಾವಿಸಿ ಬಾಲ್‌ನ್ನು ರಕ್ಷಣಾತ್ಮಕವಾಗಿ ಕಾಯ್ದುಕೊಂಡಿದೆ ಎಂದಿದ್ದಾರೆ. ಮತ್ತೊಬ್ಬರು ಕಲ್ಲಂಗಡಿ ಹಣ್ಣೆಂದು ಭಾವಿಸಿರಬೇಕು ಎಂದರೆ, ಇನ್ನೊಬ್ಬರು ಹೋದ ಜನ್ಮದಲ್ಲಿ ಫುಟ್ಬಾಲ್ ಆಟಗಾರನಾಗಿದ್ದೀರಬೇಕು ಎಂದಿದ್ದಾರೆ. ವೀಡಿಯೋದಲ್ಲೇನಿದೆ? ಮೈದಾನವೊಂದರಲ್ಲಿ ಮಕ್ಕಳು ಕಾಲ್ಚೆಂಡು ಆಟವನ್ನಾಡುತ್ತಿದ್ದು ಆಕಳೊಂದು ಮೈದಾನದ ಮಧ್ಯದಲ್ಲಿ ನಿಂತಿದೆ. ಅದರ ಕಾಲ ಕೆಳಗೆ ಚೆಂಡಿದೆ. ಚೆಂಡನ್ನೆತ್ತಿಕೊಳ್ಳಲು ಬಂದವರಿಗೆಲ್ಲ ಆಕಳು ಓಡಿಸಿದೆ. ಬಳಿಕ ಒಬ್ಬ ಹುಡುಗ ಅದರ ಕಾಲ ಕೆಳಗಿದ್ದ ಚೆಂಡನ್ನು ತಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆಗ ಆಕಳು ಕೂಡ ಆ ಚೆಂಡಿನ ಹಿಂದೆ ಓಡಿದೆ. ಬಾಲ್‌ಗಾಗಿ ಮೈದಾನದಲ್ಲೆಲ್ಲ ಅದು ಓಡಾಡುವುದನ್ನು ಕಂಡು ಅಲ್ಲಿ ನೆರೆದವರೆಲ್ಲ ನಗುತ್ತಿದ್ದಾರೆ. 2 ನಿಮಿಷದ ಈ ವೀಡಿಯೋವನ್ನೀಗ 10 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ.


from India & World News in Kannada | VK Polls https://ift.tt/2NtyZqV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...