ಕೇಂದ್ರ ಬಜೆಟ್‌ ಪರಿಣಾಮ: ಒಂದೇ ದಿನದಲ್ಲಿ ಪೆಟ್ರೋಲ್‌ ದರ 2.54 ರೂ. ಹೆಚ್ಚಳ

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ 2 ರೂ. ಸೆಸ್‌ ಹೇರಿಕೆ ಮಾಡಿದ್ದರು. ಅದರ ನೇರ ಪರಿಣಾಮ ಬೀರಿದ್ದು ಲೀಟರ್‌ಗೆ 2.54 ರೂ. ಹೆಚ್ಚಾಗಿದೆ. ಜುಲೈ 5, ಶುಕ್ರವಾರ ಬೆಂಗಳೂರಲ್ಲಿ ಪೆಟ್ರೋಲ್‌ ದರ 72.83 ರೂ. ಇತ್ತು. ಇದೀಗ ಒಂದೇ ದಿನಕ್ಕೆ 75.37 ರೂ. ತಲುಪಿದೆ. ದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 2.45 ರೂ. ಹೆಚ್ಚಳವಾಗಿದ್ದು, 72.96 ರೂ.ಗೆ ತಲುಪಿದೆ. ಕೋಲ್ಕತಾದಲ್ಲಿ 2.40 ರೂ., ಚೆನ್ನೈನಲ್ಲಿ 2.57 ರೂ. ಮತ್ತು ಮುಂಬಯಿನಲ್ಲಿ 2.42 ರೂ. ಹೆಚ್ಚಾಗಿದೆ. ಡೀಸೆಲ್‌ ದರವೂ ಅಷ್ಟೇ ಹೆಚ್ಚಾಗಿದ್ದು ರಾಷ್ಟ್ರಾದ್ಯಂತ ಸುಮಾರು 2.50 ರೂ. ಹೆಚ್ಚಾಗಿದೆ. ಬೆಂಗಳೂರು ಲೀಟರ್‌ 2.43 ರೂ. ಹೆಚ್ಚಾಗಿದ್ದು, 68.88 ರೂ. ತಲುಪಿದೆ. ದಿಲ್ಲಿಯಲ್ಲಿ 2.36 ರೂ., ಕೋಲ್ಕತಾದಲ್ಲಿ 2.36 ರೂ., ಚೆನ್ನೈನಲ್ಲಿ 2.52 ರೂ. ಮತ್ತು ಮುಂಬಯಿನಲ್ಲಿ 2.50 ರೂ. ಹೆಚ್ಚಾಗಿದೆ.


from India & World News in Kannada | VK Polls https://ift.tt/2FYuWMT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...