ಜಗನ್ನಾಥ ರಥಯಾತ್ರೆ 2019: ಭಕ್ತಾದಿಗಳಿಗೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ಪುರಿ: ಒಡಿಶಾದ ತೀರ್ಥ ನಗರಿ ಪುರಿಯಲ್ಲಿ ಇಂದಿನಿಂದ ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ಪ್ರಾರಂಭವಾಗಲಿದ್ದು, ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಮತ್ತು ಪ್ರಧಾನಿ ಶುಭಕೋರಿದ್ದಾರೆ. ರಥ ಯಾತ್ರೆಗೆ ಸಕಲ ರೀತಿಯಲ್ಲಿ ಪುರಿ ನಗರಿ ಸಜ್ಜಾಗಿದ್ದು, ನಗರದಾದ್ಯಂತ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. 9 ದಿನಗಳ ವಾರ್ಷಿಕ ಯಾತ್ರೆಯೂ ಧಾರ್ಮಿಕ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳಲು ಮತ್ತು ಭಗವಾನ್ ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ರಥ ಎಳೆಯಲು ವಿಶ್ವದಾದ್ಯಂತದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ. ಒಡಿಶಾ ಪುರಿಯೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ರಥಯಾತ್ರೆ ಆಯೋಜಿಸಲಾಗಿದೆ. ಒಂಬತ್ತು ದಿನಗಳ ರಥೋತ್ಸವದ ಅಂಗವಾಗಿ ಜಗನ್ನಾಥ, ಬಲರಾಮ ಮತ್ತು ಸುಭದ್ರಾ ದೇವಿಯ ಮೂರ್ತಿಗಳನ್ನು ನಗರದ ಗುಡಿಚಾ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿಂದ ವಾಪಸ್ ಕರೆತರಲಾಗುತ್ತದೆ.


from India & World News in Kannada | VK Polls https://ift.tt/2KZf80o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...