ಬೆಂಗಳೂರು: ಜನರು ಸಾಯುತ್ತಿರುವುದು ಕೊರೊನಾ ಪ್ರಭಾವದಿಂದಲ್ಲ, ಸರ್ಕಾರದ ನಿರ್ಲಕ್ಷ್ಯದಿಂದ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದೆ. ಚಾಮರಾಜನಗರ ದುರಂತದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದೆ. ಸೋಂಕಿತರು ಸಾಯುತ್ತಿರುವುದು ಕರೋನಾದ ಪ್ರಭಾವದಿಂದಲ್ಲ, ಸರ್ಕಾರದ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯಿಂದ.ಹಾಗಾಗಿ ಇವೆಲ್ಲವೂ ಸರ್ಕಾರ ನಡೆಸುತ್ತಿರುವ ಮಾರಣಹೋಮ ಎನ್ನಬಹುದು ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಚಾಮರಾಜ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಆಕ್ಸಿಜನ್ ಖಾಲಿಯಾಗಿದೆ. ಪರಿಣಾಮ ವೆಂಟಿಲೇಟರ್‌ನಲ್ಲಿದ್ದ ಹನ್ನೆರಡು ಜನ ಕೊರೊನಾ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಆರು ಸಾವಿರ ಲೀಟರ್ ಆಕ್ಸಿಜನ್ ಘಟಕ ಸ್ಥಾಪನೆಯಾಗಿದೆಯಾದರೂ ಅದಕ್ಕೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಅದರಲ್ಲಿದ್ದ ಆಕ್ಸಿಜನ್ ಮಧ್ಯರಾತ್ರಿ ವೇಳೆಗೆ ಖಾಲಿಯಾಗಿದೆ. ಹೀಗಾಗಿ ವೆಂಟಿಲೇಟರ್‌ನಲ್ಲಿದ್ದ ಹನ್ನೆರಡು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
from India & World News in Kannada | VK Polls https://ift.tt/2RhvW7l