ಶೇ 97ರಷ್ಟು ಮಂದಿ ಭಾರತೀಯರನ್ನು ಬಡವರನ್ನಾಗಿಸಿದ ಸರ್ಕಾರ: ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ಸಾಂಕ್ರಾಮಿಕದ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ ಮುಂದುವರಿಸಿದ್ದಾರೆ. ಕೋವಿಡ್ ಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಯಡವಟ್ಟುಗಳನ್ನು ಮಾಡುತ್ತಿದೆ. ಕೇಂದ್ರದ ನಾಯಕತ್ವದ ದರ್ಪದಿಂದಾಗಿ ಶೇ 97ರಷ್ಟು ಭಾರತೀಯರು ತಮ್ಮ ಆದಾಯದಲ್ಲಿ ಕುಸಿತ ಎದುರಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೊರೊನಾ ವೈರಸ್‌ ವಿವಿಧ ರೂಪಾಂತರಗಳು ಆರ್ಥಿಕ ದುರಂತಕ್ಕೆ ಎರಡನೆಯ ಕಾರಣವಾಗಿವೆ ಎಂದು ರಾಹುಲ್ ಉಲ್ಲೇಖಿಸಿದ್ದಾರೆ. ಎರಡನೆಯ ಅಲೆಯನ್ನು ನಿಯಂತ್ರಿಸಲು ದೇಶದ ವಿವಿಧ ಭಾಗಗಳಲ್ಲಿ ಹೇರಿಕೆ ಮಾಡಿರುವ ಲಾಕ್‌ಡೌನ್‌ ಶೇ 97ರಷ್ಟು ಭಾರತೀಯರನ್ನು ಬಡವರನ್ನಾಗಿಸಿದೆ ಎಂಬ ವರದಿಯನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. 'ಒಬ್ಬ ಮನುಷ್ಯ ಮತ್ತು ಆತನ ದರ್ಪ + ಒಂದು ವೈರಸ್ ಮತ್ತು ಅದರ ರೂಪಾಂತರಗಳು' ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. 'ಮೋದಿ ಸರ್ಕಾರದ ರಹಿತ ಕಾರ್ಯತಂತ್ರವು ಭಾರತ ಮಾತೆಯ ಎದೆಗೆ ಚುಚ್ಚಿದ ಕಠಾರಿ. ದುರಂತ ಸತ್ಯ' ಎಂದು ಲಸಿಕೆ ಕೊರತೆ ವಿಚಾರವಾಗಿ ಕಿಡಿಕಾರಿದ್ದಾರೆ. 'ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕದ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು. 1. ಆಂಫೊರೆಟಿಸಿನ್ ಬಿ ಔಷಧದ ಕೊರತೆಗೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತಿದೆ. 2. ರೋಗಿಗೆ ಈ ಔಷಧವನ್ನು ಒದಗಿಸುವ ಪ್ರಕ್ರಿಯೆ ಏನು? 3. ಚಿಕಿತ್ಸೆ ಒದಗಿಸುವ ಬದಲು, ಮೋದಿ ಸರ್ಕಾರ ಏಕೆ ಸರ್ಕಾರವನ್ನು ಔಪಚಾರಿಕತೆಗಳಲ್ಲಿಯೇ ಸಿಲುಕಿಸುತ್ತಿದೆ?' ಎಂದು ಮತ್ತೊಂದು ಟ್ವೀಟ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಇರಿಸಿದ್ದಾರೆ.


from India & World News in Kannada | VK Polls https://ift.tt/3fDfo3p

ಟೀಮ್‌ ಇಂಡಿಯಾ ರವಿಶಾಸ್ತ್ರಿ ಕೈಯಲ್ಲಿದೆ ಎಂದ ಪಣೇಸರ್‌ಗೆ ಬಟ್‌ ತಿರುಗೇಟು!

ಹೊಸದಿಲ್ಲಿ: ಇತ್ತೀಚಿನ ವರ್ಷಗಳಲ್ಲಿ ಯಶಸ್ವಿಯಾಗಲು ನಾಯಕ ಹಾಗೂ ಹೆಡ್‌ ಕೋಚ್ ರವಿಶಾಸ್ತ್ರಿ ಅವರ ಬಾಂಧವ್ಯ ಹಾಗೂ ಪಾಲುದಾರಿಕೆ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಜೋಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಭಾರತ ಅದ್ಭುತವಾಗಿ ಪ್ರದರ್ಶನ ತೋರುತ್ತಿದೆ. ಆದರೆ, ಇಂಗ್ಲೆಂಡ್‌ ತಂಡದ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್‌ ಅವರು ಇಂಡಿಯಾ ಟುಡೇ ಸಂದರ್ಶನದಲ್ಲಿ ಟೀಮ್‌ ಇಂಡಿಯಾದಲ್ಲಿ ಹೆಡ್‌ ಕೋಚ್‌ ಅವರ ಪ್ರಭಾವ ಜಾಸ್ತಿ ಇದೆ ಎಂದು ಹೇಳಿದ್ದರು. ಅಲ್ಲದೆ, ಟೀಮ್‌ ಇಂಡಿಯಾ ವಿರಾಟ್‌ ಕೊಹ್ಲಿ ತಂಡವಲ್ಲ ಬದಲಿಗೆ ರವಿಶಾಸ್ತ್ರಿ ತಂಡ ಎಂದು ಸ್ಪಿನ್‌ ದಿಗ್ಗಜ ಆರೋಪ ಮಾಡಿದ್ದರು. "ಕಳೆದ ಹಲವು ತಿಂಗಳುಗಳ ಭಾರತ ತಂಡದ ಪ್ರದರ್ಶನವನ್ನು ವಿಶ್ಲೇಷಣೆ ಮಾಡಿದರೆ, ವಿರಾಟ್‌ ಕೊಹ್ಲಿಗಿಂತ ಭಾರತ ರವಿಶಾಸ್ತ್ರಿ ತಂಡ ಎಂಬಂತೆ ಭಾಸವಾಗುತ್ತದೆ. ಇದು ನನ್ನ ಕನಿಷ್ಠ ಭಾವನೆಯಾಗಿದೆ," ಎಂದು ಮಾಂಟಿ ಪನೇಸರ್ ಹೇಳಿದ್ದರು. ಮಾಂಟಿ ಪನೇಸರ್ ಅವರ ಆರೋಪ ಅಷ್ಟಕ್ಕೆ ತಣ್ಣಗಾಗಲಿಲ್ಲ. ಪಾಕಿಸ್ತಾನ ಮಾಜಿ ನಾಯಕ ಅವರು ಮಾಂಟಿ ಪನೇಸರ್‌ ಹೇಳಿಕೆಯನ್ನು ತಿರಸ್ಕರಿಸಿದರು ಹಾಗೂ ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ನ "ಸಂದರ್ಭ ಮತ್ತು ತರ್ಕ" ಏನೆಂಬುದು ಅರ್ಥವಾಗುತ್ತಿಲ್ಲ ಎಂದು ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. "ಕೆಲವರು ಈ ರೀತಿ ಹೇಳುವ ಅಗತ್ಯವೇನಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ವಿರಾಟ್‌ ಕೊಹ್ಲಿ ಸಿಕ್ಕಾಪಟ್ಟೆ ರನ್‌ ಗಳಿಸಿದ್ದಾರೆ. ಇವರ ಕೊಡುಗೆ ಇಲ್ಲದೆ ಭಾರತ ತಂಡದ ಗೆಲುವಿನ ಸರಾಸರಿ ಊಹೆ ಮಾಡಲು ಸಾಧ್ಯವಿದೆಯೇ? ಇಲ್ಲವೇ ಇಲ್ಲ. ಅವರು ಒಂದು ಸರಣಿಗೆ ಇರಲಿಲ್ಲವೆಂದು ನಾವು ಅದನ್ನು ವಿಫಲವೆಂದು ಪರಿಗಣಿಸಬಹುದು. ಒಂದು ಅಥವಾ ಎರಡು ವಿಫಲ ಸರಣಿಗಳು ಸಾಮಾನ್ಯ. ಆದರೆ ನೀವು ಇನ್ನೂ ಅವರ ಕೊಡುಗೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಂತೆಯೇ, ತರಬೇತುದಾರನ ಸಕಾರಾತ್ಮಕ ಪ್ರಭಾವದಿಂದ ತಂಡವು ಅವರೊಂದಿಗೆ ಇರುವುದನ್ನು ಖಚಿತಪಡಿಸುತ್ತದೆ," ಎಂದರು. ಪ್ರತಿಯೊಬ್ಬ ಸದಸ್ಯರು ತಂಡಕ್ಕೆ ಅಮೂಲ್ಯರು ಮತ್ತು ಅವರೆಲ್ಲರೂ ಒಬ್ಬರಿಗೊಬ್ಬರು ಚೆನ್ನಾಗಿ ಮಾತನಾಡುತ್ತಾರೆ ಎಂಬುದು ತಂಡದ ಬಂಧವನ್ನು ತೋರಿಸುತ್ತದೆ ಎಂದು ಬಟ್ ಹೇಳಿದರು. "ವಿರಾಟ್‌ ಹಾಗೂ ರವಿಶಾಸ್ತ್ರಿ ಅವರು ಏನನ್ನೂ ಹೇಳುವುದಿಲ್ಲ ಹಾಗೂ ಇವರಿಬ್ಬರೂ ಜೊತೆಯಾಗಿ ಕೆಲಸ ಮಾಡುವಲ್ಲಿ ಸಂತೋಷವಾಗಿದ್ದಾರೆ. ಈ ಜೋಡಿ ಸಮನಾದ ಮೌಲ್ಯವನ್ನು ಹೊಂದಿದ್ದಾರೆಂದು ನಾನು ನಂಬುತ್ತೇನೆ. ಜತೆಗೆ ತಂಡದ ಪ್ರತಿಯೊಬ್ಬ ಸದಸ್ಯರು ಕೂಡ ಮೌಲ್ಯರಾಗಿದ್ದಾರೆ. ಒಬ್ಬರಿಗೊಬ್ಬರು ಸಂತೋಷವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಒಂದು ತಂಡ ಎಂದು ಹೇಳುವ ಬದಲು ಬೇರೆಯವರ ಬಗ್ಗೆ ಏಕೆ ಮಾತನಾಡಬೇಕು? ಪಣೇಸರ್‌ ಅವರು ಯಾವ "ಸಂದರ್ಭ ಮತ್ತು ತರ್ಕ" ಬಳಸಿದ್ದಾರೆಂದು ನನಗೆ ಗೊತ್ತಿಲ್ಲ," ಎಂದು ಸಲ್ಮಾನ್ ಬಟ್‌ ತಿಳಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಭಾರತ ತಂಡ ಯುಕೆ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಜೂನ್‌ 2 ರಂದು ಟೀಮ್‌ ಇಂಡಿಯಾ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fWF5uR

36ನೇ ವಸಂತಕ್ಕೆ ಪದಾರ್ಪಣೆ ಮಾಡಿದ ದಿನೇಶ್‌ ಕಾರ್ತಿಕ್‌!

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಅತ್ಯುತ್ತುಮ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾಗಿರುವ ದಿನೇಶ್‌ ಕಾರ್ತಿಕ್ ಅವರು ಇಂದು(ಮಂಗಳವಾರ) 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಜನುಮ ದಿನಕ್ಕೆ ಹಾಲಿ-ಮಾಜಿ ಕ್ರಿಕೆಟಿಗರು ಸೇರಿದಂತೆ ಅಪಾರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಶುಭ ಕೋರಿದ್ದಾರೆ. 1985ರ ಜೂನ್‌ 1 ರಂದು ತಮಿಳುನಾಡಿನ ತೋತುಕುಡಿಯಲ್ಲಿ ಜನಿಸಿದ್ದ ಅವರು ಬರೋಡಾ ಹಾಗೂ ತಮಿಳುನಾಡು ಪರ ದೇಶಿ ಕ್ರಿಕೆಟ್‌ ಆಡಿದ್ದಾರೆ. ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ದೊಡ್ಡ ಹೆಸರು ಮಾಡಿದ್ದ ದಿನೇಶ್‌ ಕಾರ್ತಿಕ್‌ ಅವರು 2004 ಸೆ. 6 ರಂದು ಇಂಗ್ಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಂತರ ಇದೇ ವರ್ಷ ನ. 3 ರಂದು ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ದಿನೇಶ್‌ ಕಾರ್ತಿಕ್‌ 26 ಟೆಸ್ಟ್ ಪಂದ್ಯಗಳಿಂದ 1,025 ರನ್‌, 94 ಓಡಿಐ ಪಂದ್ಯಗಳಿಂದ 1,752 ರನ್‌ ಹಾಗೂ 32 ಟಿ20 ಪಂದ್ಯಗಳಿಂದ 399 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 203 ಪಂದ್ಯಗಳಿಂದ 3946 ರನ್‌ಗಳನ್ನು ದಾಖಲಿಸಿದ್ದಾರೆ. ಮಹೇಂದ್ರ ಸಿಂಗ್‌ ಧೋನಿಗೂ ಮೊದಲು ಭಾರತ ಪ್ರತಿನಿಧಿಸಿದ್ದ ದಿನೇಶ್‌ ಕಾರ್ತಿಕ್‌ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳು ಆಡಲು ಸಾಧ್ಯವಾಗಲಿಲ್ಲ. ಏಕೆಂದರೆ ಕಾರ್ತಿಕ್‌ಗಿಂತ ಅದ್ಭುತ ವಿಕೆಟ್‌ ಕೀಪಿಂಗ್‌ ಕೌಶಲ ಎಂಎಸ್‌ ಧೋನಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಜಾರ್ಖಂಡ್‌ ಮೂಲದ ಆಟಗಾರ ವಿಕೆಟ್‌ ಕೀಪಿಂಗ್‌ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದರು. ಆದರೂ, ದಿನೇಶ್‌ ಕಾರ್ತಿಕ್‌ ಅವರು ಸಿಕ್ಕ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಟೀಮ್‌ ಇಂಡಿಯಾದಲ್ಲಿ ನಿಯಮಿತವಾಗಿ ಆಡುವಲ್ಲಿ ವಿಫಲರಾಗಿದ್ದರು. ಎಂಎಸ್‌ ಧೋನಿ ನಾಯಕತ್ವದಲ್ಲಿ 2007ರ ಉದ್ಘಾಟನಾ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ದಿನೇಶ್‌ ಕಾರ್ತಿಕ್‌ ಸದಸ್ಯರಾಗಿದ್ದರು. ಅಲ್ಲದೆ, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿಯೂ ದಿನೇಶ್‌ ಕಾರ್ತಿಕ್‌ ಇದ್ದರು. ದಿನೇಶ್‌ ಕಾರ್ತಿಕ್‌ ಅವರ ವೃತ್ತಿ ಜೀವನದ ಸ್ಮರಣೀಯ ಪಂದ್ಯ ಎಂದರೆ ಅದು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ನಿದಹಾಸ್‌ ತ್ರಿಕೋನ ಸರಣಿಯ ಫೈನಲ್‌ ಹಣಾಹಣಿ ಎಂದೇ ಹೇಳಬಹುದು. ಶ್ರೀಲಂಕಾದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ 18 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತ್ತು. ಈ ವೇಳೆ ಕೊನೆಯ ಎರಡು ಓವರ್‌ಗಳಿಗೆ ಭಾರತಕ್ಕೆ 35 ರನ್‌ ಅಗತ್ಯವಿತ್ತು. 19ನೇ ಓವರ್‌ ಬೌಲಿಂಗ್‌ ಮಾಡಿದ ರುಬೆಲ್‌ ಹೊಸೈನ್‌ ಅವರಿಗೆ ದಿನೇಶ್‌ ಕಾರ್ತಿಕ್‌ 22 ರನ್‌ಗಳನ್ನು ಸಿಡಿಸಿದರು. ನಂತರ ಕೊನೆಯ ಓವರ್‌ನಲ್ಲಿ ಭಾರತಕ್ಕೆ 12 ರನ್‌ ಅಗತ್ಯವಿತ್ತು. ಅದರಂತೆ ಕಾರ್ತಿಕ್‌ ಸ್ಪೋಟಕ ಬ್ಯಾಟಿಂಗ್‌ ಮಾಡಿ ಭಾರತವನ್ನು ಸುಲಭವಾಗಿ ಗೆರೆ ಮುಟ್ಟಿಸಿದರು. ಆ ಮೂಲಕ ಭಾರತ ನಿದಹಾಸ್‌ ಟ್ರೋಫಿ ಮುಡಿಗೇರಿಸಿಕೊಂಡಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3c818gW

ಅನ್‌ಲಾಕ್ ಪ್ರಕ್ರಿಯೆಗೆ ಬಹುತೇಕ ಸಚಿವರ ಒಲವು, ಅಂತಿಮ ನಿರ್ಧಾರ ಬಿಎಸ್‌ವೈ ಕೈಯಲ್ಲಿ

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜಾರಿಯಲ್ಲಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರೀ ಹೊಡೆತ ನೀಡಿದೆ. ಉದ್ಯಮ, ಕೈಗಾರಿಕೆ, ಸಣ್ಣ ಪುಟ್ಟ ವ್ಯಾಪಾರಸ್ಥರು ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಜೂನ್ 7 ರ ಬಳಿಕ ಲಾಕ್‌ಡೌನ್ ಹಂತಹಂತವಾಗಿ ಸಡಿಲಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಹುತೇಕ ಸಚಿವರು ಶಾಸಕರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು ತಜ್ಞರ ವರದಿ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಎರಡನೇ ಹಂತದ ಲಾಕ್‌ಡೌನ್ ಜೂನ್ 7 ಕ್ಕೆ ಅಂತ್ಯಗೊಳ್ಳುತ್ತದೆ. ಆದರೆ ಜೂನ್ 7 ರ ಬಳಿಕವೂ ಲಾಕ್‌ಡೌನ್ ವಿಸ್ತರಣೆ ಮಾಡಬೇಕು ಎಂಬ ಅಭಿಪ್ರಾಯವನ್ನು ತಾಂತ್ರಿಕ ಸಲಹಾ ಸಮಿತಿ ನೀಡಿದೆ ಎಂಬ ಮಾಹಿತಿ ಇದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ 5 ರಷ್ಟು ಬರುವವರೆಗೂ ಲಾಕ್‌ಡೌನ್ ಅನಿವಾರ್ಯ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿದ್ದು ತಜ್ಞರ ಮಾತನ್ನು ಕೇಳಿ ನಿರ್ಧಾರ ಕೈಗೊಳ್ಳಿ ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಈಗಾಗಲೇ 28 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಬಳಿಕ ಮತ್ತೆ ಲಾಕ್‌ಡೌನ್ ವಿಸ್ತರಣೆ ಮಾಡಿದರೆ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಬಹುದು ಎಂಬುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಇನ್ನು ಕೋವಿಡ್ ಲಾಕ್‌ಡೌನ್‌ನನ್ನು ಒಮ್ಮೆಲೆ ತೆರವುಗೊಳಿಸುವ ಬದಲಾಗಿ ಹಂತ-ಹಂತವಾಗಿ ತೆರವುಗೊಳಿಸಬೇಕು ಎಂಬ ಅಭಿಪ್ರಾಯವನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಹೇಳಿದ್ದಾರೆ. ಇನ್ನು ಸಚಿವ ಎಸ್‌ಟಿ ಸೋಮಶೇಖರ್ ಕೂಡಾ ಲಾಕ್‌ಡೌನ್ ಸಡಿಲಿಕೆ ಮಾಡುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಕ್ರೊಡೀಕರಿಸಿ ಸಿಎಂ ಬಿಎಸ್‌ ಯಡಿಯೂರಪ್ಪ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಸಚಿವರು ಹಾಗೂ ತಜ್ಞರ ಜೊತೆಗೆ ಸಭೆಯನ್ನು ನಡೆಸಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ ಬೇಡವೋ ಎಂಬ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಬಹುಷಃ ಜೂನ್ 6 ರಂದು ಈ ಕುರಿತಾಗಿ ಅಂತಿಮ ನಿರ್ಧಾರ ಘೋಷಣೆ ಆಗಲಿದೆ.


from India & World News in Kannada | VK Polls https://ift.tt/3uDt2Yw

ಅಮೆರಿಕಾದಲ್ಲಿ ಮೇ ತಿಂಗಳ ಕೊನೆಯ ಸೋಮವಾರ ‘ಮೆಮೊರಿಯಲ್‌ ಡೇ’ ಆಚರಿಸಲಾಗ್ತಿದೆ. ಏನಿದರ ವಿಶೇಷತೆ?

ನ್ಯೂಯಾರ್ಕ್: ಅಮೇರಿಕಾದಲ್ಲಿ ಪ್ರತಿ ವರುಷ ಮೇ ತಿಂಗಳ ಕೊನೇ ಸೋಮವಾರವನ್ನು ‘’ ಎಂದು ಆಚರಿಸಲಾಗುತ್ತದೆ. ‘ಡೆಕೊರೇಶನ್ ಡೇ’ ಅಂತಾನೂ ಕರೆಯಲ್ಪಡುತ್ತಿದ್ದ ಈ ದಿನವನ್ನು ಈ ದೇಶದಲ್ಲಿ ಮಿಲಿಟರಿ ಸೇವೆಯಲ್ಲಿ ಜೀವ ತೆತ್ತ ಜನರಿಗೆ ಗೌರವ ಸಲ್ಲಿಸುವ ದಿನವನ್ನಾಗಿ ಪರಿಗಣಿಸುತ್ತಾರೆ. 1971ರಿಂದ ನಾರ್ತ್ ಅಮೇರಿಕಾದಲ್ಲಿ ಈ ದಿನ ಸಾರ್ವತ್ರಿಕ ರಜಾ ದಿನ. ಚಿಕಾಗೋ, ನ್ಯೂಯಾರ್ಕ್, ವಾಶಿಂಗ್ಟನ್ ಮುಂತಾದ ನಗರಗಳಲ್ಲಿ ಪರೇಡ್ ನಡೆಯುತ್ತವೆ, ರುದ್ರಭೂಮಿಗಳು, ಸ್ಮಾರಕಗಳಿಗೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳೂ ಇವೆ. 1914-1919ವರೆಗೂ ನಡೆದ ಮಹಾಯುದ್ಧ-1ರಲ್ಲಿ ಬಹಳಷ್ಟು ಜನರ ಪ್ರಾಣ ತ್ಯಾಗವಾಗಿತ್ತು. ಯೂರೋಪಿನಲ್ಲಿ, ಯುದ್ದಭೂಮಿಯ ಭೀಭಿತ್ಸ ನೋಟದ ಜತೆ ಅಲ್ಲಿ ಬೆಳೆದ ಕೆಂಪು ಗಸಗಸೆ ಗಿಡದ ಹೂವುಗಳು ಪ್ರಖ್ಯಾತ ಆಂಗ್ಲ ಕವಿತೆಯಾಗಿ ಮೂಡಿಬಂದವು. ಈಗಲೂ ಆ ಕವಿತೆಯಿಂದ ಸ್ಪೂರ್ತಿ ಪಡೆದು, ಕೆಂಪು ಗಸಗಸೆ ಹೂವುಗಳು ಮೆಮೋರಿಯಲ್ ಡೇ ದ್ಯೋತಕವಾಗಿದೆ. ಈ ದಿನ ಕಡ್ಡಾಯ ರಜೆ ಇರುವುದರಿಂದ, ಸೋಮವಾರವೇ ಬೀಳುವುದರಿಂದ ಅನೇಕರು ‘ಲಾಂಗ್ ವೀಕೆಂಡ್’ ಟ್ರಿಪ್, ಪಾರ್ಟಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದೂ ಇದೆ. ಪ್ರಾಚೀನ ಗ್ರೀಕ್, ರೋಮನ್ ಮತ್ತಿತ್ತರ ನಾಗರೀಕತೆಗಳಲ್ಲಿ ಮಡಿದ ಯೋಧರಿಗೆ ನಮನ ಸಲ್ಲಿಸುವುದಕ್ಕಾಗಿ ಪ್ರತ್ಯೇಕ ದಿನಗಳನ್ನು ಮೀಸಲಾಗಿ ಇಡುತ್ತಿದ್ದರು. 1865ರಲ್ಲಿ ಕೊನೆಗೊಂಡ ಕುಖ್ಯಾತ ಅಮೇರಿಕನ್ ಸಿವಿಲ್ ವಾರ್ ಮುಗಿಯುವ ಹಂತದಲ್ಲಿ ಆಗ ತಾನೇ ಬಿಡುಗಡೆಗೊಂಡ ಯುದ್ಧ ಕೈದಿಗಳು ಸತ್ತವರಿಗಾಗಿ ಶೋಕ ಗೀತೆಗಳನ್ನು ಹಾಡಿ, ರುದ್ರಭೂಮಿಯಲ್ಲಿ ಹೂವುಗಳನ್ನು ಅರ್ಪಿಸಿ ,ಸತ್ತವರಿಗೆ ತಕ್ಕದಾದ ಅಂತಿಮ ಸಂಸ್ಕಾರ ನೀಡಬೇಕೆಂದು ಆಗ್ರಹಪಡಿಸಿತು. ಇದನ್ನು ಬಹುಶಃ ಈ ದಿನದ ಮೊದಲ ಆಚರಣೆ ಎಂದು ಪರಿಗಣಿಸಬಹುದೇನೋ. ಮೇ 1868ರಲ್ಲಿ ಜೆನರಲ್ ಜಾನ್ ಲೋಗನ್ ಎಂಬಾತ ಆಗ ತಾನೇ ಮುಗಿದ ಸಿವಿಲ್ ವಾರ್ ಅಲ್ಲಿ ಮಡಿದ ಸುಮಾರು 620,000 ಯೋಧರ ಸ್ಮರಣಾರ್ಥಕವಾಗಿ ಈ ದಿನವನ್ನು ಆಚರಿಸಬೇಕೆಂದು ಆದೇಶ ನೀಡಿದ. ಆ ದಿನ ಸಿವಿಲ್ ವಾರ್ ವಾರ್ಷಿಕೋತ್ಸವ ಅಲ್ಲದಿದ್ದರೂ, ಎಲ್ಲೆಡೆ ಹೂವುಗಳು ಅರಳುವ ಕಾಲವಾದುದರಿಂದ ಆಯ್ಕೆ ಮಾಡಲಾಯಿತು ಎಂದು ಇತಿಹಾಸಕಾರರ ಅಂಬೋಣ. ಆಗೆಲ್ಲಾ ಈ ದಿನವನ್ನು "ಡೆಕೊರೇಶನ್ ಡೇ" ಎಂದು ಸುಮಾರು ರಾಜ್ಯಗಳಲ್ಲಿ ಹಾಗೂ ಸಿವಿಲ್ ವಾರ್ ಹುತಾತ್ಮರ ಸ್ಮರಣೆಯಲ್ಲಿ ಆಚರಿಸಲ್ಪಡುತ್ತಿತ್ತು. ಮತ್ತು 1971ರಿಂದ ಎಲ್ಲಾ ಯುದ್ಧಗಳಲ್ಲೂ ಮಡಿದ ಯೋಧರಿಗಾಗಿ ಎಂದು ಬದಲಾಯಿಸಿ ಅದನ್ನು ರಾಷ್ಟ್ರ್ರೀಯ ರಜಾದಿನವನ್ನಾಗಿ ಹೆಸರಿಸಲಾಯಿತು. ಅಮೇರಿಕಾದ ಧ್ವಜವನ್ನು ಮಧ್ಯಾಹ್ನ 12 ವರೆಗೂ ಅರ್ಧದಲ್ಲಿ ಹಾರಿಸಿ ಆ ಮೇಲೆ ಪೂರ್ತಿ ಹಾರಿಸಲಾಗುತ್ತದೆ ಹಾಗೂ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಯುದ್ಧದಲ್ಲಿ ಮಡಿದ ಯೋಧರಿಗೆ ರಾಷ್ಟ್ರೀಯ ನಮನವನ್ನು ಸಲ್ಲಿಸಲಾಗುತ್ತದೆ.


from India & World News in Kannada | VK Polls https://ift.tt/2RYElNK

ಗುಡ್ ನ್ಯೂಸ್: 18 ಲಕ್ಷಕ್ಕೆ ಕುಸಿದ ಸಕ್ರಿಯ ಪ್ರಕರಣಗಳು, ದೈನಂದಿನ ಪಾಸಿಟಿವಿಟಿ ದರ ಶೇ 6.62ಕ್ಕೆ ಇಳಿಕೆ

ಹೊಸದಿಲ್ಲಿ: ದೇಶದಲ್ಲಿ ಕಳೆದ 54 ದಿನಗಳಲ್ಲಿಯೇ ಅತ್ಯಂತ ಕಡಿಮೆ ದೈನಂದಿನ ಪ್ರಕರಣಗಳು ಮಂಗಳವಾರ ವರದಿಯಾಗಿವೆ. ಜತೆಗೆ ಸಕ್ರಿಯ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ. ಎರಡನೆಯ ಅಲೆ ವಿರುದ್ಧದ ಹೋರಾಟದಲ್ಲಿ ತಕ್ಕಮಟ್ಟಿಗೆ ಸಫಲತೆ ಕಂಡುಕೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,27,510 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಇದರಿಂದ ದೇಶದ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ. 2,55,287 ಮಂದಿ ಸೋಂಕಿತರು ಗುಣಮುಖರಾಗಿರುವುದು ನೆಮ್ಮದಿಯ ಸಂಗತಿ. ಇದರಿಂದ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,59,47,629ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,95,520ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಂಖ್ಯೆ 1,30,572ರಷ್ಟು ಇಳಿಕೆಯಾಗಿದೆ. ಮಂಗಳವಾರ ದೇಶದಲ್ಲಿನ ಒಟ್ಟು ಚೇತರಿಗೆ ಪ್ರಮಾಣ ಶೇ 92.09ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ 8.64ಕ್ಕೆ ಇಳಿದಿದ್ದು, ದೈನಂದಿನ ಪಾಸಿಟಿವಿಟಿ ದರ ಕೂಡ ಶೇ 6.62ಕ್ಕೆ ತಗ್ಗಿದೆ. ದೈನಂದಿನ ಸಾವಿನ ಸಂಖ್ಯೆಯಲ್ಲಿಯೂ ಅಲ್ಪ ಇಳಿಕೆಯಾಗಿದೆ. ಕಳೆದ ಒಂದು ದಿನದಲ್ಲಿ 2,795 ಮಂದಿ ಕೊವಿಡ್ 19ಕ್ಕೆ ಬಲಿಯಾಗಿದ್ದಾರೆ. ದೇಶದಲ್ಲಿ ಮೊದಲ ಸಾವು ದಾಖಲಾದ ಸಂದರ್ಭದಿಂದ ಇದುವರೆಗೂ 3,31,895 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ 21,60,46,638 ಡೋಸ್‌ಗಳಷ್ಟು ಲಸಿಕೆ ನೀಡಲಾಗಿದೆ. ಮೇ 31ರಂದು 19,25,374 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೂ ಒಟ್ಟು 34,67,92,257 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.


from India & World News in Kannada | VK Polls https://ift.tt/3yMMPs1

ಕೊರೊನಾ ಕ್ರೂರತೆ: ಹೆತ್ತವರಿಲ್ಲ, ಇದೀಗ ಅಜ್ಜಿಯೂ ಇಲ್ಲ, ತಬ್ಬಲಿಗಳಾದ ಬಾಲಕಿಯರು!

ಬೆಂಗಳೂರು: ಕೋವಿಡ್‌ ಮಹಾಮಾರಿ ಉಂಟು ಮಾಡುತ್ತಿರುವ ಕಷ್ಟ, ನಷ್ಟ ನೋವುಗಳು ಅಷ್ಟಿಷ್ಟಲ್ಲ. ಅದೆಷ್ಟೋ ಪ್ರೀತಿಪಾತ್ರರನ್ನು ಈ ಮಹಾಮಾರಿ ಕಸಿದುಕೊಂಡಿದೆ. ಹಲವು ಕುಟುಂಬಗಳನ್ನು ಛಿದ್ರಗೊಳಿಸಿದೆ. ಮಕ್ಕಳನ್ನು ತಬ್ಬಲಿಯನ್ನಾಗಿಸಿದೆ. ಹೌದು, ಈ ಇಬ್ಬರು ಪುಟ್ಟ ಬಾಲಕಿಯರ ಸ್ಥಿತಿಯೂ ಹೀಗೆ ಆಗಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ಬಾಲಕಿಯರ ಕಥೆ. ದೇವನಹಳ್ಳಿಯ ನಿವಾಸಿಗಳಾದ ಈ ಮಕ್ಕಳು ಸಣ್ಣ ವಯಸ್ಸಿನಲ್ಲಿರುವಾಗಲೇ ಇವರ ತಂದೆ- ತಾಯಿ ಬಿಟ್ಟು ಹೋಗಿದ್ದಾರೆ. ಅಪ್ಪ- ಅಮ್ಮನಿಲ್ಲದ ಪುಟ್ಟ ಮಕ್ಕಳನ್ನು ಸಾಕಿದವರು ಅಜ್ಜಿ. ತನ್ನ ಅನಾರೋಗ್ಯದ ನಡುವೆಯೂ ಮೊಮ್ಮಕ್ಕಳಿಗೆ ಬೊಗಸೆ ತುಂಬಾ ಪ್ರೀತಿ ಕೊಟ್ಟು ಬೆಳೆಸಿದರು. ಆದರೆ ವಿಧಿಯ ಬರಹ ಬೇರೆಯದ್ದೇ ಆಗಿತ್ತು. ಕೋವಿಡ್ ಎಂಬ ಮಹಾಮಾರಿ ಇದೀಗ ಅಜ್ಜಿಯನ್ನು ಬಲಿಪಡೆದುಕೊಂಡಿದೆ. ಮೊಮ್ಮಕ್ಕಳಿನ ಪಾಲಿನ ಪ್ರೀತಿಯ ಅಜ್ಜಿ ಸೋಂಕಿನಿಂದ ಮರಣ ಹೊಂದಿದ್ದಾರೆ. ಇದರಿಂದ 15 ವರ್ಷದ ಪ್ರಮಿಳಾ ( ಹೆಸರು ಬದಲಾಯಿಸಲಾಗಿದೆ) ಹಾಗೂ ಆಕೆಯ ಸಹೋದರಿ 13 ವರ್ಷ ನವಿತಾ ( ಹೆಸರು ಬದಲಾಯಿಸಲಾಗಿದೆ) ಅನಾಥರಾಗಿದ್ದಾರೆ. ಸದ್ಯ ಈ ಇಬ್ಬರು ಬಾಲಕಿಯರು ದೊಡ್ಡಮ್ಮನ ಆಶ್ರಯದಲ್ಲಿದ್ದಾರೆ. ತಬ್ಬಲಿಯಾಗಿರುವ ಬಾಲಕಿಯರನ್ನು ಮೇ 24 ರಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ. ಬಾಲಕಿಯರಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನೆಗೆಟಿವ್ ಬಂದ ಬಳಿಕ ಬಾಲ ಕಾಯ್ದೆಯಡಿ ನೋಂದಣಿಯಾದ ಸಂಸ್ಥೆಯಲ್ಲಿ ದಾಖಲಿಸಲಾಗುದೆಂದು ಮಕ್ಕಳ ಕಲ್ಯಾಣ ಸಮಿತಿ ಸಮಿತಿ ತೀರ್ಮಾನಿಸಿದೆ. ಕೋವಿಡ್ ಸೋಂಕು ಇಂತಹ ಹಲವು ಮಕ್ಕಳನ್ನು ಅನಾಥರನ್ನಾಗಿದೆ. ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 13 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 4 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಬೆಳಗಾವಿಯಲ್ಲಿ ಮೂರು ಪ್ರಕರಣಗಳಲ್ಲಿ 3 ಮಕ್ಕಳು ತಂದೆ -ತಾಯಿಯನ್ನು ಕಳೆದುಕೊಂಡಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಪ್ರಕರಣದಲ್ಲಿ 3 ಮಕ್ಕಳು ಅನಾಥರಾಗಿದ್ದಾರೆ. ಚಾಮರಾಜನಗರದಲ್ಲಿ 1, ಮಂಡ್ಯದಲ್ಲಿ 1 ಹಾಗೂ ದಾವಣಗೆರೆಯಲ್ಲೂ 1 ಪ್ರಕರಣ ವರದಿಯಾಗಿದೆ. ಒಟ್ಟು 9 ಕುಟುಂಬಗಳಲ್ಲಿ 13 ಮಕ್ಕಳು ಕೋವಿಡ್ ಕಾರಣದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ರಕ್ಷಣೆಗೆ ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ. ಮಕ್ಕಳ ಪಾಲನೆ ಹಾಗೂ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ವಿಶೇಷ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಮಕ್ಕಳ ದತ್ತು ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗದಂತೆ ಮುತುವರ್ಜಿ ವಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದೆ.


from India & World News in Kannada | VK Polls https://ift.tt/2Rdjt54

ಸೋಲಿನ ಬೆನ್ನಲ್ಲೇ ಬಿಜೆಪಿಗೆ ಆಘಾತ: ಟಿಎಂಸಿಯತ್ತ ಮರಳಿ ಮುಖ ಮಾಡಿದ ಪಶ್ಚಿಮ ಬಂಗಾಳದ ಮುಖಂಡರು

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ತೃಣಮೂಲ ಕಾಂಗ್ರೆಸ್‌ನ ನೂರಾರು ಮುಖಂಡರು, ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡಿದ್ದರು. ಇದರಿಂದ ನಾಯಕಿ, ಮುಖ್ಯಮಂತ್ರಿ ಅವರಿಗೆ ತೀವ್ರ ಹಿನ್ನಡೆಯುಂಟಾಗಿತ್ತು. ಟಿಎಂಸಿಯನ್ನು ತಳಮಟ್ಟದಿಂದ ದುರ್ಬಲಗೊಳಿಸಲು ಕೂಡ ಟಿಎಂಸಿ ಮುಖಂಡರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನಗಳನ್ನು ನಡೆಸಿತ್ತು. ಆದರೆ, ಮೇ 2ರಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಅಧಿಕಾರಕ್ಕೆ ಬಂದಿತು. ಈಗ ಟಿಎಂಸಿಯಿಂದ ಬಿಜೆಪಿ ವಲಸೆ ಹೋದ ಮುಖಂಡರು ಮರಳಿ ಮನೆಗೆ ಬರುತ್ತಿದ್ದಾರೆ. ಬಿಜೆಪಿಗೆ ಹೋಗಿ ಸೋಲು ಕಂಡ ಅನೇಕ ಮುಖಂಡರು ಹಿಂದಿರುಗಿ ಬಂದು ದೀದಿ ಪಕ್ಷದ ಕದ ಬಡಿಯುತ್ತಿದ್ದಾರೆ. ಮಾಜಿ ಶಾಸಕಿ ಸೊನಾಲಿ ಗುಹಾ, ಮಾರ್ಚ್‌ನಲ್ಲಿ ಟಿಎಂಸಿ ತೊರೆದಿದ್ದರು. ಈಗ ಟಿಎಂಸಿಗೆ ಮರಳಲು ಹಾತೊರೆಯುತ್ತಿದ್ದಾರೆ. ಮಾಜಿ ಫುಟ್ಬಾಲರ್ ದೀಪೇಂದು ಬಿಸ್ವಾಸ್ ಕೂಡ ಟಿಎಂಸಿಗೆ ಹಿಂದಿರುಗಲು ಇಚ್ಚಿಸಿ ಪಕ್ಷಕ್ಕೆ ಪತ್ರ ಬರೆದಿದ್ದಾರೆ. ಚುನಾವಣೆ ಆರಂಭವಾಗುವ ಕೆಲವೇ ವಾರದವರೆಗೂ ಮಮತಾ ಸರ್ಕಾರದಲ್ಲಿ ಸಚಿವರಾಗಿದ್ದು, ಕಮಲ ಪಾಳೆಯಕ್ಕೆ ಜಿಗಿದಿದ್ದ ರಾಜಿಬ್ ಬ್ಯಾನರ್ಜಿ ಅವರೂ ಈಗ ತವರಿಗೆ ಬರುತ್ತೇನೆ ಎನ್ನುತ್ತಿದ್ದಾರೆ. ಸರಳ ಮುರ್ಮು, ಅಮಲ್ ಆಚಾರ್ಯ ಮುಂತಾದವರು ಕೂಡ ಹಳೆಯ ಮನೆಯೇ ಬೇಕು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಮುಕುಲ್ ರಾಯ್ ಹೆಸರು ಹೀಗೆ ಪಕ್ಷಾಂತರ ಮಾಡಿ, ಸಂಕಟ ಅನುಭವಿಸುತ್ತಿರುವ ಹೆಸರುಗಳಲ್ಲಿ ಟಿಎಂಸಿಯ ಹಿರಿಯ ಮುಖಂಡ ಮುಕುಲ್ ರಾಯ್ ಹೆಸರೂ ಇದೆ. ಆರಂಭದಲ್ಲಿಯೇ ಬಿಜೆಪಿಗೆ ಜಿಗಿದ್ದ ನಾಯಕರಲ್ಲಿ ಒಬ್ಬರಾದ ರಾಯ್, ಟಿಎಂಸಿಗೆ ವಾಪಸಾಗುವ ಬಯಕೆ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಮುಕುಲ್ ರಾಯ್ ಅವರ ಮಗ ಫೇಸ್‌ಬುಕ್‌ನಲ್ಲಿ ಬಿಜೆಪಿ ವಿರುದ್ಧ ವ್ಯಾಪಕ ಟೀಕೆಗಳನ್ನು ನಡೆಸುತ್ತಿರುವುದು ಈ ಹೊಗೆಗೆ ತುಪ್ಪು ಸುರಿದಂತಾಗಿದೆ. ಹಾಲಿ ಶಾಸಕರು, ಸಂಸದರೂ ಇದ್ದಾರೆ 'ಇಲ್ಲಿಂದ ಹೋಗಿ ಪಕ್ಷದ ಪರ ಪ್ರಚಾರ ನಡೆಸಿದವರು ಮತ್ತು ಸ್ಪರ್ಧಿಸಿ ಸೋಲು ಕಂಡವರು ಮಾತ್ರವಲ್ಲ, ಬಿಜೆಪಿಯಲ್ಲಿರುವ ಏಳರಿಂದ ಎಂಟು ಹಾಲಿ ಶಾಸಕರು, ಮೂರು ನಾಲ್ಕು ಹಾಲಿ ಸಂಸದರು ಕೂಡ ಟಿಎಂಸಿ ಸೇರಲು ಬಯಸುತ್ತಿದ್ದಾರೆ' ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ತಿಳಿಸಿದ್ದಾರೆ. 'ಆದರೆ, ಈ ಬಗ್ಗೆ ಪಕ್ಷ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಪಕ್ಷದ ಮುಖಂಡರ ಭಾವನೆಗಳನ್ನೂ ಗೌರವಿಸಬೇಕಾಗುತ್ತದೆ. ಚುನಾವಣೆಗೆ ಮುನ್ನವಷ್ಟೇ ಈ ಮುಖಂಡರು ಪಕ್ಷದಿಂದ ಹೊರಹೋಗಿದ್ದರು. ಕಾರ್ಯಕರ್ತರು ಮತ್ತು ನಾಯಕರು ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು' ಎಂದು ಘೋಷ್ ತಿಳಿಸಿದ್ದಾರೆ. ಅಳುತ್ತಾ ಬಂದರು, ನಗುತ್ತಾ ಹೋಗುತ್ತಿದ್ದಾರೆ 'ಟಿಎಂಸಿ ಅಧಿಕಾರ ಕಳೆದುಕೊಂಡು, ಬಿಜೆಪಿ ಆಡಳಿತ ನಡೆಸಲಿದೆ ಎಂಬ ಗ್ರಹಿಕೆ ಇತ್ತು. ಅನೇಕ ಜನರು ಅಳುತ್ತಾ ನಮ್ಮ ಪಕ್ಷ ಸೇರಿಕೊಂಡಿದ್ದರು. ಈಗ ನಗುತ್ತಾ ಹೊರಹೋಗುತ್ತಿದ್ದಾರೆ. ಜನರು ಇದನ್ನು ನೋಡುತ್ತಿದ್ದಾರೆ. ಅವರು ನಮ್ಮ ಬಳಿ ಏಕೆ ಬಂದರು ಮತ್ತು ಈಗ ಏಕೆ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದನ್ನು ಜನ ನೋಡುತ್ತಿದ್ದಾರೆ' ಎಂದು ಬಂಗಾಳ ಬಿಜೆಪಿ ನಾಯಕ ಶಾಮಿಕ್ ಭಟ್ಟಾಚಾರ್ಯ ಕಿಡಿಕಾರಿದ್ದಾರೆ.


from India & World News in Kannada | VK Polls https://ift.tt/3vJGVG0

ದೇಶವನ್ನು 70 ವರ್ಷ ಹಿಂದೆ ಕೊಂಡೊಯ್ದಿದ್ದೇ ಮೋದಿ ಸರ್ಕಾರದ ಸಾಧನೆ; ಸಿದ್ದರಾಮಯ್ಯ

ಬೆಂಗಳೂರು: ದೇಶವನ್ನು 70 ವರ್ಷ ಹಿಂದೆ ಕೊಂಡೊಯ್ದಿದ್ದೇ ಪ್ರಧಾನಿ ಮೋದಿಯವರ ಸಾಧನೆ ಎಂದು ಪ್ರತಿಪಕ್ಷದ ನಾಯಕ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು, ಮೋದಿ ಸರಕಾರಕ್ಕೆ 7 ವರ್ಷ ತುಂಬಿತೆಂದು ಬಿಜೆಪಿ ನಾಯಕರು ಖಾಲಿ ಕೊಡ ಹೊತ್ತು ಸಂಭ್ರಮಿಸಿದ್ದಾರೆ. ದೇಶ ಸೂತಕದ ಮನೆಯಾಗಿದೆ. ಮನೆ ಮನೆಯಲ್ಲೂ ಕತ್ತಲು ಆವರಿಸಿದೆ. ಹಾಗಾಗಿ ದೇಶದ ಜನರು ಮೋದಿ ಸರಕಾರಕ್ಕೆ 7 ವರ್ಷವಾಯಿತೆಂದು ಖುಷಿ ಪಟ್ಟಿಲ್ಲ. ಬದಲಾಗಿ ಶ್ರದ್ಧಾಂಜಲಿ ಅರ್ಪಿಸಿದವರಂತೆ ಶೋಕ ವ್ಯಕ್ತಪಡಿಸಿದ್ದಾರೆ ಎಂದರು. ಮೋದಿಯವರದ್ದು ಅಸಂಖ್ಯಾತ ಡಿಸಾಸ್ಟರುಗಳ ಅವಧಿಯಾಗಿದೆ ಎಂದ ಸಿದ್ದರಾಮಯ್ಯ, ಪಟ್ಟಿ ಮಾಡಿದರೆ ಬಹುಶಃ ನೂರಾರು, ಸಾವಿರಾರು ಸುಳ್ಳುಗಳಿವೆ. ಬಿಜೆಪಿಯೆಂದರೆ ಸುಳ್ಳುಗಳನ್ನು ಸೃಷ್ಟಿಸುವ ಜಗತ್ತಿನ ಅತಿ ದೊಡ್ಡ ಕೈಗಾರಿಕೆಯಿದ್ದಂತೆ.ವಿಕಾಸ ಉಳ್ಳವರ ಪರ ''ದೇಶದ ಜನರು ಕಷ್ಟ ಪಟ್ಟು ಕಟ್ಟಿದ ಕಾರ್ಖಾನೆಗಳನ್ನು ಖಾಸಗಿಗೆ ಮಾರಾಟ ಮಾಡಿರುವ ಮೋದಿ ಸುಳ್ಳಿನ ಕಾರ್ಖಾನೆ ನಡೆಸುತ್ತಿದ್ದಾರೆ. ದೇಶ ಅಭಿವೃದ್ಧಿಯಾಗುವ ಬದಲು ಈ ವಿಭಾಗದಲ್ಲಿ ಹಿಂದಕ್ಕೆ ಹೋಗುತ್ತಿದೆ. 'ಸಬ್‌ ಕಾ ಸಾಥ್‌. ಸಬ್‌ ಕಾ ವಿಕಾಸ್‌. ಸಬ್‌ ಕಾ ವಿಶ್ವಾಸ್‌' ಎಂಬುದೆಲ್ಲ ಬರೀ ಸುಳ್ಳೆಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಸಬ್‌ ಕಾ ಸಾಥ್‌ ಅಂಬಾನಿ ಕಾ ವಿಕಾಸ್‌. ಅದಾನಿ ಕಾ ವಿಕಾಸ್‌. ಟೋಟಲಿ ಗುಜರಾತ್‌ ಕಾರ್ಪೊರೇಟ್‌ ಆದ್ಮಿ ಕಾ ವಿಶ್ವಾಸ್‌' ಆಗಿದೆ. ದೇಶದ ಜನರು ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಬೊಗಸೆ ಆಕ್ಸಿಜನ್‌ಗೆ, ಇಂಜೆಕ್ಸನ್‌ಗೆ, ಲಸಿಕೆಗೆ ಜನ ಒದ್ದಾಡುತ್ತಿದ್ದಾರೆ. ಮೋದಿಯವರ ಸರಕಾರದ ತುಘಲಕ್‌ ಆಡಳಿತದಿಂದ ಕಾರ್ಪೊರೇಟ್‌ ಕಂಪನಿಗಳು 12 ಲಕ್ಷ ಕೋಟಿ ರೂ. ಗೂ ಹೆಚ್ಚಿನ ಹಣ ದೋಚಿವೆ. ಡಿಮಾನಿಟೈಸೇಷನ್‌, ಜಿಎಸ್‌ಟಿ ಹಾಗೂ ಸ್ವತಃ ಮೋದಿಯವರೇ ಕೊರೊನಾ ವಿರುದ್ಧ ಗೆದ್ದು ಬಿಟ್ಟಿದ್ದೇವೆಂದು ಹೇಳಿ ಜನರು ಮೈಮರೆಯುವಂತೆ ಮಾಡಿದ್ದು ಈ ಸರಕಾರದ ಮಹಾ ಡಿಸಾಸ್ಟರುಗಳಾಗಿವೆ ಎಂದು ಆರೋಪಿಸಿದರು.


from India & World News in Kannada | VK Polls https://ift.tt/2TnLI1u

ಬಿಎಂಟಿಸಿ ಟಿಕೆಟ್‌ ದರ ಶೇ 20 ಹೆಚ್ಚಳ ಸಾಧ್ಯತೆ; ಕೊರೊನಾ ಸಂಕಷ್ಟದಲ್ಲಿ ಜನರ ಜೇಬಿಗೆ ಬೀಳಲಿದೆ ಕತ್ತರಿ

ಬೆಂಗಳೂರು: ಕೋವಿಡ್‌ನ ಎರಡನೇ ಅಲೆಯ ದಳ್ಳುರಿಯಲ್ಲಿ ಬೇಯುತ್ತಿರುವ ನಗರದ ಜನತೆಗೆ ಬಸ್‌ ಪ್ರಯಾಣ ದರ ಹೆಚ್ಚಳದ ಬರೆ ಹಾಕಲು ರಾಜ್ಯ ಸರಕಾರ ಹೊರಟಿದೆ. ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿಇಳಿಕೆಯಾಗಿ ಲಾಕ್‌ಡೌನ್‌ ನಿರ್ಬಂಧ ತೆರವಾಗುತ್ತಿದ್ದಂತೆಯೇ ಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾರ್ವಜನಿಕರಿಗೆ ಬಸ್‌ ಪ್ರಯಾಣ ದರ ಏರಿಕೆಯ ಬಿಸಿಯೂ ತಟ್ಟಲಿದೆ. ಬಿಎಂಟಿಸಿಯು ಜನವರಿ ತಿಂಗಳಿನಲ್ಲಿ ಶೇ 20ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸಾರಿಗೆ ಸಚಿವ ಅವರು ದರ ಏರಿಕೆಯ ಸುಳಿವು ನೀಡಿದ್ದಾರೆ. ರಾಜ್ಯ ಸರಕಾರವು 2020ರ ಫೆ. 25ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕೆಎಸ್‌ಆರ್‌ಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಶೇ 12ರಷ್ಟು ಹೆಚ್ಚಳ ಮಾಡಿತ್ತು. ಆದರೆ, ಬಿಎಂಟಿಸಿ ಪ್ರಯಾಣ ದರ ಏರಿಕೆಗೆ ಒಪ್ಪಿಗೆ ಕೊಟ್ಟಿರಲಿಲ್ಲ. ಇದೀಗ ದರ ಏರಿಕೆ ಪ್ರಸ್ತಾವದ ಚೆಂಡು ಮುಖ್ಯಮಂತ್ರಿಗಳ ಅಂಗಳದಲ್ಲಿದ್ದು, ಅನುಮೋದನೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. 7 ವರ್ಷಗಳ ಬಳಿಕ ದರ ಏರಿಕೆ ? ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ಬಿಎಂಟಿಸಿಗೆ ಟಿಕೆಟ್‌ ದರ ಹೆಚ್ಚಳದ ಮೂಲಕ ಚೇತರಿಕೆ ನೀಡಲು ಉದ್ದೇಶಿಸಲಾಗಿದೆ. 2014ರ ಫೆ.2ರಂದು 2ನೇ ಹಂತದಲ್ಲಿ1 ರೂ. ಪ್ರಯಾಣ ದರ ಹೆಚ್ಚಳ ಮಾಡಿದ್ದ ಸಂಸ್ಥೆಯು, ಮರು ವರ್ಷವೇ 2015ರ ಜ. 10ರಂದು 15 ಹಂತಗಳಲ್ಲಿದರ ಇಳಿಕೆ ಮಾಡಿತ್ತು. ಆನಂತರ ಡೀಸೆಲ್‌, ಬಿಡಿಭಾಗಗಳ ಬೆಲೆ ಏರಿಕೆ, ಸಿಬ್ಬಂದಿ ವೆಚ್ಚ ಹೆಚ್ಚಳದಿಂದಾಗಿ ಬಿಎಂಟಿಸಿಯ ನಷ್ಟದ ಪ್ರಮಾಣ ಜಾಸ್ತಿಯಾಯಿತು. ಈ ಹಿನ್ನೆಲೆಯಲ್ಲಿ ಹಲವು ಸಲ ಟಿಕೆಟ್‌ ದರ ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರೂ, ಹಿಂದಿನ ಸರಕಾರಗಳು ಸಮ್ಮತಿ ನೀಡದೆ ತಿರಸ್ಕರಿಸಿದ್ದವು. 2020ರ ಫೆಬ್ರವರಿಯಲ್ಲೂ ಅನುಮತಿ ನೀಡಿರಲಿಲ್ಲ. ಕೊರೊನಾ ಸೋಂಕಿನಿಂದ ಸಂಸ್ಥೆಯು, ಆರ್ಥಿಕವಾಗಿ ದಿವಾಳಿ ಅಂಚಿಗೆ ತಲುಪಿದೆ. ಹೀಗಾಗಿ, ಪ್ರಯಾಣ ದರ ಏರಿಸಲು ಚಿಂತನೆ ನಡೆದಿದೆ. ಕೊರೊನಾದಿಂದ 1000 ಕೋಟಿ ನಷ್ಟ: ಕೋವಿಡ್‌ ಪೂರ್ವದಲ್ಲಿ ಬಿಎಂಟಿಸಿಯು ಬಸ್‌ಗಳ ಕಾರ್ಯಾಚರಣೆಯಿಂದ ನಿತ್ಯ 5 ಕೋಟಿ ರೂ. ಆದಾಯ ಗಳಿಸುತ್ತಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆದಾಯ ಕುಸಿದು, ನಷ್ಟ ಹೆಚ್ಚಿದೆ. ಕಳೆದ ವರ್ಷ ಲಾಕ್‌ಡೌನ್‌ ನಿರ್ಬಂಧ ತೆರವಾದ ಬಳಿಕ ಬಸ್‌ಗಳನ್ನು ಆಚರಣೆ ಮಾಡಿದರೂ ಮೊದಲಿನ ಸ್ಥಿತಿಗೆ ಮರಳಲು ಸಾಧ್ಯವಾಗಲೇ ಇಲ್ಲ. ಆನಂತರ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನೌಕರರು ಮುಷ್ಕರ ಹೂಡಿದ್ದರಿಂದ ಆದಾಯ ಶೂನ್ಯವಾಯಿತು. ಮುಷ್ಕರ ಸ್ಥಗಿತಗೊಂಡು ಬಸ್‌ ಸಂಚಾರ ಶುರುವಾಗುತ್ತಿದ್ದಂತೆಯೇ ಕೋವಿಡ್‌ನ ಎರಡನೇ ಅಲೆ ಅಪ್ಪಳಿಸಿತು. ಪರಿಣಾಮ, ನಷ್ಟ ಹೆಚ್ಚುತ್ತಲೇ ಇದೆ. ಕೋವಿಡ್‌ ಸೋಂಕು ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಸಂಸ್ಥೆಗೆ 1000 ಕೋಟಿ ರೂ. ನಷ್ಟವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಆದಾಯ ಖೋತಾ ಆಗಿರುವುದರಿಂದ ಕಳೆದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಸರಕಾರವೇ ಸಿಬ್ಬಂದಿಯ ವೇತನಕ್ಕೆ ಹಣ ಬಿಡುಗಡೆ ಮಾಡಿದೆ. ಅಲ್ಲಿಂದ ಮಾರ್ಚ್‌ವರೆಗೆ ಸಂಸ್ಥೆಯೇ ತನ್ನ ಸ್ವಂತ ಸಂಪನ್ಮೂಲದಲ್ಲಿ ವೇತನ ನೀಡಿತ್ತು. ಇದೀಗ ಏಪ್ರಿಲ್‌ ಮತ್ತು ಮೇ ತಿಂಗಳ ವೇತನಕ್ಕೂ ಸರಕಾರವೇ ಅನುದಾನ ಒದಗಿಸಿದೆ. ಬಿಎಂಟಿಸಿಯ ಆರ್ಥಿಕ ಅಧಃಪತನವು 2012-13ರಿಂದಲೇ ಶುರುವಾಯಿತು. ಸದ್ಯ ಒಟ್ಟು 1350 ಕೋಟಿ ರೂ. ಸಂಚಿತ ನಷ್ಟದ ಭಾರ ಹೊತ್ತುಕೊಂಡಿದೆ. 2019-20ರಲ್ಲಿ1807 ಕೋಟಿ ರೂ. ಆದಾಯ ಬಂದಿದ್ದು, 2669.31 ಕೋಟಿ ರೂ. ವೆಚ್ಚವಾಗಿದೆ. ದರ ಏರಿಕೆ ಪ್ರಸ್ತಾವನೆ ಪರಿಶೀಲನೆಯಲ್ಲಿಬಿಎಂಟಿಸಿಯು ಶೇ 20ರಷ್ಟು ಪ್ರಯಾಣ ದರ ಏರಿಕೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಕೋವಿಡ್‌ನಿಂದ ಜನರು ಸಂಕಷ್ಟದಲ್ಲಿದ್ದು, ದರ ಏರಿಕೆ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಕಳೆದ ವರ್ಷ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳ ಪ್ರಯಾಣ ದರವನ್ನು ಶೇ 12ರಷ್ಟು ಹೆಚ್ಚಳ ಮಾಡಲಾಗಿತ್ತು. ಆಗಿನ ಪರಿಸ್ಥಿತಿಯಲ್ಲಿ ಬಿಎಂಟಿಸಿ ಬಸ್‌ಗಳ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಹೆಚ್ಚಿಸಿರಲಿಲ್ಲ ಎಂದು ಹೇಳಿದರು. ಬಿಎಂಟಿಸಿ ನಷ್ಟದ ಸವಾರಿ:
ವರ್ಷ ನಷ್ಟದ ಪ್ರಮಾಣ (ಕೋಟಿಗಳಲ್ಲಿ)
2016-17 260.91
2017-18 217.61
2018-19 349.48
2019-20 549.34
2020-21 400 (ಅಂದಾಜು)


from India & World News in Kannada | VK Polls https://ift.tt/2RXktKM

ಇಂದಿನಿಂದ ಜೂನ್‌ 4ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಮೇ.31ರಿಂದ ಜೂನ್‌ 4ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್‌ ಘೋಷಿಸಿರುವುದಾಗಿ ಮುನ್ಸೂಚನೆ ನೀಡಿದೆ. ನೈರುತ್ಯ ಮಾನ್ಸೂನ್‌ ಜೂನ್‌ 3ರ ಸುಮಾರಿಗೆ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ರಾಜ್ಯಕ್ಕೆ ಜೂನ್‌ 5 ರಂದು ಬರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 5 ದಿನಗಳು ರಾಜ್ಯದ ಒಳನಾಡಿನ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಬೀದರ್‌, ಕಲಬುರಗಿ, ಗದಗ, ಕೊಪ್ಪಳ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಜೂ.3ರಂದು ಮುಂಗಾರು ಆಗಮನ: ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಇನ್ನಷ್ಟು ಚುರುಕಾಗಿದ್ದು, ಸೋಮವಾರ ಹಲವೆಡೆ ಭಾರಿ ಮಳೆ ಸುರಿದಿದೆ. ಈ ಬಾರಿ ಮೇ 31ಕ್ಕೆ ಮುಂಗಾರು ಆಗಮನವಾಗಲಿದೆ ಎಂದು ಆರಂಭದಲ್ಲಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ, ಬಳಿಕ ದಿನಾಂಕವನ್ನು ಪರಿಷ್ಕರಿಸಿ ಜೂ.3ಕ್ಕೆ ಕೇರಳಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದೆ. ರಾಜ್ಯಕ್ಕೆ ಒಂದೆರಡು ದಿನ ವಿಳಂಬವಾಗಿ ಜೂ.5 ಅಥವಾ 6ರಂದು ಪ್ರವೇಶವಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್‌.ಎಸ್‌.ಎಂ. ಗಾವಸ್ಕರ್‌ ಮಾಹಿತಿ ನೀಡಿದ್ದಾರೆ. ಬೇಸಿಗೆಯೂ ತಂಪಾಗಿತ್ತು: ಸುಡು ಬಿಸಿಲಿನ ಏಪ್ರಿಲ್‌ ಮತ್ತು ಮೇ ತಿಂಗಳ ಬೇಸಿಗೆ ಅವಧಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಂದಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ದೂರವಾಗಿದೆ. ಮೇ ತಿಂಗಳಲ್ಲಿ74 ಮಿ.ಮೀ.ನಷ್ಟು ವಾಡಿಕೆ ಮಳೆ ಇದ್ದು, ಈ ಬಾರಿ 113 ಮಿ.ಮೀ.ನಷ್ಟು ದಾಖಲೆ ಮಳೆ ಬಿದ್ದಿದೆ.


from India & World News in Kannada | VK Polls https://ift.tt/3c6bZYT

ಕಳಪೆ ಗುಣಮಟ್ಟದಿಂದ ಉಪಯೋಗವಾಗದಿದ್ದರೂ 94% ವೆಂಟಿಲೇಟರ್‌ ಬಳಕೆಯಾಗಿದೆ ಎಂದ ಸರ್ಕಾರ

ಬೆಂಗಳೂರು: ಕೇಂದ್ರದ ಮೋದಿ ಸರಕಾರ ಪಿಎಂ ಕೇರ್ಸ್ ಯೋಜನೆಯಡಿ ರಾಜ್ಯಕ್ಕೆ ಒದಗಿಸಿದ 2913 ವೆಂಟಿಲೇಟರ್‌ಗಳ ಪೈಕಿ ಅರ್ಧದಷ್ಟು ಅಳವಡಿಕೆಯೇ ಆಗದೆ ಆಸ್ಪತ್ರೆಗಳ ಗೋಡೌನ್‌ನಲ್ಲಿ ಧೂಳು ಹಿಡಿಯುತ್ತಿದ್ದರೂ ಇತ್ತ ರಾಜ್ಯ ಸರಕಾರ ಮಾತ್ರ 94% ವೆಂಟಿಲೇಟರ್‌ ಬಳಕೆಯಾಗಿದೆ ಎಂದು ಸಮಜಾಯಿಷಿ ನೀಡಿದೆ. ರಾಜ್ಯಕ್ಕೆ ಪಿಎಂ ಕೇರ್ಸ್‌ನಡಿ ಮೊದಲ ಹಂತದಲ್ಲಿ 2025 ಹಾಗೂ 2ನೇ ಹಂತದಲ್ಲಿ 888 ವೆಂಟಿಲೇಟರ್‌ ಪೂರೈಕೆಯಾಗಿವೆ. ಒಟ್ಟು 2913 ವೆಂಟಿಲೇಟರ್‌ಗಳ ಪೈಕಿ 2737ನ್ನು ಅಳವಡಿಸಲಾಗಿದೆ. ಉಳಿದ 176ನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಲಾಗುತ್ತದೆ ಎಂದು ಸರಕಾರ ಹೇಳಿದೆ. ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲೇ ಕೆಲವು ಉಪಕರಣಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ನಿಜ. ಅವುಗಳನ್ನು ಪೂರೈಕೆ ಮಾಡಿದ ಕಂಪನಿ ಕಡೆಯಿಂದಲೇ ರಿಪೇರಿ ಮಾಡಿಸಲಾಗಿದೆ. ವೆಂಟಿಲೇಟರ್‌ ಬಳಕೆ ಕುರಿತು ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅಲ್ಲದೆ ಈ ವೆಂಟಿಲೇಟರ್‌ ಹೇಗೆ ಬಳಕೆ ಮಾಡಬೇಕು ಎಂಬುದನ್ನು ಆನ್‌ಲೈನ್‌ ಮೂಲಕವೂ ಆರೋಗ್ಯ ಸಿಬ್ಬಂದಿ ವೀಕ್ಷಿಸಬಹುದು ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಗುಣಮಟ್ಟ ಪ್ರಮಾಣೀಕರಿಸದೆ ಪೂರೈಕೆ: ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ವಲಯದ ಕಾರ್ಪೋರೇಟರ್‌ ಕಂಪನಿಗಳು, ಉದ್ಯಮಿಗಳು ಸೇರಿದಂತೆ ಹಲವರು ಅಪಾರ ಪ್ರಮಾಣದಲ್ಲಿ ಪಿಎಂ ಕೇರ್ಸ್‌ಗೆ ಹಣ ಸಂದಾಯ ಮಾಡಿದ್ದಾರೆ. ಈ ಹಣದಲ್ಲೇ ವೆಂಟಿಲೇಟರ್‌ ಸೇರಿದಂತೆ ಅಗತ್ಯ ಉಪಕರಣಗಳನ್ನು ಖರೀದಿಸಿ ರಾಜ್ಯಗಳಿಗೆ ಕೇಂದ್ರ ಸರಕಾರ ಪೂರೈಕೆ ಮಾಡಿದೆ. ಖರೀದಿಸಿ ಪೂರೈಸಿದಾಗ ಕಂಪನಿಗಳು ಕಳಪೆ ಉಪಕರಣಗಳನ್ನು ಪ್ಯಾಕ್‌ ಮಾಡಿ ರವಾನಿಸಿವೆ. ಪೂರೈಕೆ ಮಾಡುವುದಕ್ಕೂ ಮುನ್ನ ಉಪಕರಣಗಳ ಗುಣಮಟ್ಟ ಸರಿಯಾಗಿ ಪ್ರಮಾಣೀಕರಿಸಿಲ್ಲ. ದೊಡ್ಡ ಪ್ರಮಾಣದಲ್ಲಿ ಖರೀದಿ ನಡೆದಿದೆ. ಪೂರೈಕೆ ಮಾಡಿದ ಕಂಪನಿಗಳು ಕಳಪೆ ಉಪಕರಣ ಒದಗಿಸಿವೆ. ಆ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ವೈದ್ಯಕೀಯ ರಂಗದಿಂದ ಬರುತ್ತಿದೆ.


from India & World News in Kannada | VK Polls https://ift.tt/3uIaN45

ಪಿಎಂ ಕೇರ್ಸ್‌ನಡಿ ರಾಜ್ಯಕ್ಕೆ ಬಂದ 2913 ವೆಂಟಿಲೇಟರ್‌ಗಳ ಪೈಕಿ ಹೆಚ್ಚಿನವು ಕಳಪೆ! ಸರ್ಕಾರ, ಅಧಿಕಾರಿಗಳ ಮೌನ!

ಬೆಂಗಳೂರು: ಕೇಂದ್ರ ಸರಕಾರ ಪಿಎಂ ಕೇರ್ಸ್ ಯೋಜನೆಯಡಿ ರಾಜ್ಯಕ್ಕೆ ಒದಗಿಸಿದ 2913 ವೆಂಟಿಲೇಟರ್‌ಗಳ ಪೈಕಿ ಅರ್ಧದಷ್ಟು ಅಳವಡಿಕೆಯೇ ಆಗದೆ ಆಸ್ಪತ್ರೆಗಳ ಗೋಡೌನ್‌ನಲ್ಲಿ ಧೂಳು ಹಿಡಿಯುತ್ತಿವೆ. ಅಳವಡಿಸಿರುವ ವೆಂಟಿಲೇಟರ್‌ಗಳಲ್ಲೂ ಹೆಚ್ಚಿನವು ಬಳಸಲಾಗದ ಸ್ಥಿತಿಯಲ್ಲಿವೆ. ವೆಂಟಿಲೇಟರ್‌ಗಳ ಕಳಪೆ ಗುಣಮಟ್ಟ, ತಾಂತ್ರಿಕ ಸಮಸ್ಯೆಗಳೇ ಇವುಗಳ ಬಳಕೆಗೆ ಪ್ರಧಾನ ಅಡ್ಡಿ. ಆದರೆ, ರಾಜ್ಯ ಸರಕಾರ ಮಾತ್ರ ಕೇಂದ್ರವನ್ನು ಮೆಚ್ಚಿಸುವುದಕ್ಕಾಗಿ ಎಲ್ಲವೂ ಸರಿ ಇದೆ, 94%ರಷ್ಟನ್ನು ಅಳವಡಿಸಲಾಗಿದೆ ಎಂದು ತಿಪ್ಪೆ ಸಾರಿಸುತ್ತಿದೆ. ಕೇಂದ್ರ ಸರಕಾರ ಕೊರೊನಾ ಮೊದಲ ಅಲೆಯ ವೇಳೆ 2025, 2ನೇ ಅಲೆಗೆ ಮುನ್ನ 888 ವೆಂಟಿಲೇಟರ್‌ಗಳನ್ನು ಒದಗಿಸಿದೆ. ಇವುಗಳನ್ನು ಸರಕಾರ ಜಿಲ್ಲಾ ಮತ್ತು ತಾಲೂಕು ಸರಕಾರಿ ಆಸ್ಪತ್ರೆಗಳು, ಸರಕಾರಿ ಮತ್ತು ಖಾಸಗಿ ಮೆಡಿಕಲ್‌ ಕಾಲೇಜುಗಳಿಗೆ ಹಂಚಿಕೆ ಮಾಡಿದೆ. ಇವುಗಳಲ್ಲಿ ಹೆಚ್ಚಿನವು ಅಳವಡಿಕೆ ಆಗಿಯೇ ಇಲ್ಲ. ಕೆಲವು ಕಡೆ ಅಳವಡಿಸಿದ್ದರೂ ಬಳಕೆಗೆ ಲಭ್ಯವಾಗುವ ಸ್ಥಿತಿಯಲ್ಲಿಲ್ಲ. ಪಿಎಂ ಕೇರ್ಸ್‌ ಎನ್ನುವುದು ಜನರೇ ಸಂಕಷ್ಟ ಕಾಲದಲ್ಲಿ ನೀಡಿದ ಹಣದಿಂದ ರೂಪಿತವಾದ ನಿಧಿ. ಕಳೆದ ವರ್ಷ 3000 ಕೋಟಿ ರೂಪಾಯಿಗೂ ಹೆಚ್ಚು ಹಣ ಸಾರ್ವಜನಿಕರಿಂದ ಪಿಎಂ ಕೇರ್ಸ್‌ಗೆ ಸಂಗ್ರಹವಾಗಿದೆ. ಆದರೆ, ಕೇಂದ್ರ ಸರಕಾರ ಕೇರ್‌ಲೆಸ್‌ ಆಗಿ ಗುತ್ತಿಗೆ ನೀಡಿ ಕಳಪೆ ಗುಣಮಟ್ಟದ ವೆಂಟಿಲೇಟರ್‌ಗಳ ಖರೀದಿಸಿದೆ. ಇದು ಜನರ ಹಣಕ್ಕೆ ಮಾಡಿದ ಮೋಸ ಎಂಬ ಅಭಿಪ್ರಾಯಕ್ಕೆ ಪ್ರಕರಣ ಕಾರಣವಾಗಿದೆ. ನಮ್ಮನ್ನು ಕೇಳಬೇಡಿ: ವೆಂಟಿಲೇಟರ್‌ಗಳಲ್ಲಿಅರ್ಧದಷ್ಟು ಕಳಪೆಯಾಗಿದ್ದರೂ ಅವುಗಳನ್ನು ತಿರಸ್ಕರಿಸಲಾಗದೆ ಕರ್ನಾಟಕವೂ ರಾಜ್ಯವೂ ಸೇರಿದಂತೆ ಎಲ್ಲ ಬಿಜೆಪಿ ಸರಕಾರಗಳು ಉಭಯ ಸಂಕಟಕ್ಕೆ ಸಿಲುಕಿವೆ. ಸಚಿವರು, ಅಧಿಕಾರಿಗಳು ಈ ಕುರಿತು ಬಹಿರಂಗವಾಗಿ ಮಾತನಾಡಲು ಸಿದ್ಧರಿಲ್ಲ. ಉಪಕರಣಗಳಲ್ಲಿ ದೋಷ ಇರುವ ಕುರಿತು ಅಧಿಕಾರಿಗಳು ಮಾತನಾಡಲು ಹಿಂದೇಟು ಹಾಕುತ್ತಾರೆ. ಜಿಲ್ಲಾಆರೋಗ್ಯಾಧಿಕಾರಿಗಳು ಈ ಸಂಬಂಧ ಸರಕಾರವನ್ನೇ ಕೇಳಿ ಎನ್ನುತ್ತಿದ್ದಾರೆ.


from India & World News in Kannada | VK Polls https://ift.tt/3wPuGHV

ಚೀನಾದಲ್ಲೀಗ ನಾವಿಬ್ಬರು, ನಮಗೆ ಮೂವರು..! ಕುಟುಂಬವೊಂದಕ್ಕೆ 3 ಮಕ್ಕಳನ್ನು ಹೊಂದುವ ಅವಕಾಶ..!

ಬೀಜಿಂಗ್ (): ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಚೀನಾ, ಜನಸಂಖ್ಯೆ ನಿಯಂತ್ರಿಸಲು ಕೈಗೊಂಡಿದ್ದ ಕ್ರಮಗಳನ್ನು ಹಂತ ಹಂತವಾಗಿ ಸಡಿಲ ಮಾಡುತ್ತಿದೆ. ಚೀನಾದಲ್ಲಿ ಇದೀಗ ವಿವಾಹಿತ ಜೋಡಿಯು ಗರಿಷ್ಠ 3 ಮಕ್ಕಳನ್ನು ಹೊಂದಬಹುದಾಗಿದೆ. ಚೀನಾದಲ್ಲಿ ಈ ಹಿಂದೆ ದಂಪತಿಗೆ ಒಂದೇ ಮಗುವನ್ನು ಹೊಂದುವ ಅವಕಾಶ ಇತ್ತು. 2016ರಲ್ಲಿ ಈ ನೀತಿಯನ್ನು ಸಡಿಲಗೊಳಿಸಿದ್ದ ಚೀನಾ ಸರ್ಕಾರ, ಎರಡು ಮಕ್ಕಳನ್ನು ಮಾಡಿಕೊಳ್ಳಬಹುದು ಎಂದು ಅವಕಾಶ ನೀಡಿತ್ತು. ಇದೀಗ ಮೇ 31, 2021ರಿಂದ ಜಾರಿಗೆ ಬರುವಂತೆ ಕುಟುಂಬವೊಂದು 3 ಮಕ್ಕಳನ್ನು ಹೊಂದಬಹುದಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಚೀನಾ ಸರ್ಕಾರ ತಂದಿದ್ದ ನೀತಿಗಳೇನೋ ಯಶಸ್ವಿಯಾಗಿವೆ. ಆದ್ರೆ, ಯುವ ಸಮುದಾಯ ಗಣನೀಯವಾಗಿ ಕುಸಿದಿದೆ. ಈ ನಡುವೆ, ಕುಟುಂಬವೊಂದು 3 ಮಕ್ಕಳನ್ನು ಹೊಂದಬಹುದಾದರೂ. ಚೀನಾದಲ್ಲಿ ಇರುವ ಹಣದುಬ್ಬರಕ್ಕೆ ಹೋಲಿಸಿದರೆ ಮಕ್ಕಳನ್ನು ಸಾಕೋದು ದುಬಾರಿ ಎನಿಸಿದೆ. ಪಾಲಿಟ್ ಬ್ಯೂರೋ ಸಭೆಯ ಬಳಿಕ ತಮ್ಮ ಸರ್ಕಾರದ ನಿರ್ಧಾರ ಪ್ರಕಟಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಭವಿಷ್ಯದ ಯುವಪೀಳಿಗೆಯ ಸಂಖ್ಯೆ ಹಾಗೂ ವಯಸ್ಕರ ಸಂಖ್ಯೆಯಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರೋದಾಗಿ ಹೇಳಿದ್ರು. ಅಷ್ಟೇ ಅಲ್ಲ, ಈ ಸಂಬಂಧ ನಾಗರಿಕರಿಗೂ ಸರ್ಕಾರ ನೆರವಾಗಿ ನಿಲ್ಲಲಿದೆ ಎಂದು ಹೇಳಿದ್ದಾರೆ. ಆದ್ರೆ, ಯಾವ ರೀತಿಯ ನೆರವನ್ನು ಜನಸಾಮಾನ್ಯರಿಗೆ ಸರ್ಕಾರ ನೀಡಲಿದೆ ಎಂಬ ಮಾಹಿತಿಯನ್ನ ಚೀನಾ ಅಧ್ಯಕ್ಷರು ಹೇಳಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾದ ಸಮಾಜಶಾಸ್ತ್ರಜ್ಞ ಯುಫಿ ಲಿ ಅವರು, ಚೀನಾದಲ್ಲಿ ಮಕ್ಕಳನ್ನು ಸಾಕೋದು ಬಹಳ ದುಬಾರಿ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ, ಆಹಾರ, ಬಟ್ಟೆ, ವಸತಿ ನೀಡಲು ಅತ್ಯಧಿಕ ಮೊತ್ತ ಭರಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕು ಎಂದು ಕರೆ ನೀಡಿದರು.


from India & World News in Kannada | VK Polls https://ift.tt/3wN7ESm

ಕೊಹ್ಲಿಗೆ ಬೌಲಿಂಗ್‌ ಮಾಡಲು ನಿರಾಕರಿಸಿದ್ದ ಜೇಮಿಸನ್‌ ಬಗ್ಗೆ ಕಿವೀಸ್‌ ವೇಗಿ ಹೇಳಿದ್ದಿದು!

ಹೊಸದಿಲ್ಲಿ: ಜೂನ್‌ 18 ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಮ್ಟನ್‌ನಲ್ಲಿ ಜರುಗಲಿರುವ ಉದ್ಘಾಟನಾ ಆವೃತ್ತಿಯ ಪೈನಲ್‌ ಕಡೆ ಎಲ್ಲರ ಚಿತ್ತ ನೆಟ್ಟಿದೆ. ಈ ಮಹತ್ವದ ಕಾದಾಟದಲ್ಲಿ ನಾಯಕತ್ವದ ಟೀಮ್‌ ಇಂಡಿಯಾ ಹಾಗೂ ಕೇನ್‌ ವಿಲಿಯಮ್ಸನ್‌ ನಾಯಕತ್ವದ ನ್ಯೂಜಿಲೆಂಡ್‌ ಮುಖಾಮುಖಿಯಾಗುತ್ತಿವೆ. ಐಸಿಸಿ ಟೆಸ್ಟ್‌ ಕ್ರಿಕೆಟ್‌ನ ಮಹತ್ವದ ಪಂದ್ಯಕ್ಕೆ ಇನ್ನೂ ಕೇವಲ 18 ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಹಲವು ಮಾಜಿ ಹಾಗೂ ಹಾಲಿ ಕ್ರಿಕಿಟಿಗರು ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕ ವಿರಾಟ್‌ ಕೊಹ್ಲಿ, ತಮ್ಮ ಸಹ ಆಟಗಾರ ಕೈಲ್‌ ಜೇಮಿಸನ್‌ಗೆ ಡ್ಯೂಕ್‌ ಬಾಲ್‌ನಲ್ಲಿ ಒಮ್ಮೆ ಬೌಲಿಂಗ್ ಮಾಡುವಂತೆ ಕೇಳಿಕೊಂಡಿದ್ದರು. ಆದರೆ, ಸೌತಾಮ್ಟನ್‌ನಲ್ಲಿ ಬಳಸುವ ಡ್ಯೂಕ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡಲು ನ್ಯೂಜಿಲೆಂಡ್‌ ವೇಗಿ ನಿರಾಕರಿಸಿದ್ದರು. ಈ ಸಂಗತಿಯನ್ನು ಆರ್‌ಸಿಬಿ ಆಟಗಾರ ಡ್ಯಾನ್‌ ಕ್ರಿಸ್ಟಿಯನ್‌ ಅವರು ಗ್ರೇಡ್‌ ಕ್ರಿಕೆಟರ್ಸ್‌ ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಇತ್ತೀಚೆಗೆ ಬಹಿರಂಗಪಡಿಸಿದ್ದರು. "ಐಪಿಎಲ್‌ ಟೂರ್ನಿಗೆ ಬಂದ ಆರಂಭಿಕ ವಾರದಿಂದ ನಾವು ಇಲ್ಲಿದ್ದೇವೆ. ನೆಟ್ಸ್ ಮುಗಿದ ಬಳಿಕ ನಾನು, ಕೊಹ್ಲಿ, ಜೇಮಿಸನ್‌ ಒಂದು ಹತ್ತಿರ ಕುಳಿತು, ಟೆಸ್ಟ್ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಿದ್ದೆವು. ವಿರಾಟ್‌ ಕೊಹ್ಲಿ: 'ಜೇಮಿ ನೀವು ಡ್ಯೂಕ್‌ ಬಾಲ್‌ಗಳಲ್ಲಿ ಹೆಚ್ಚು ಬೌಲಿಂಗ್‌ ಮಾಡಿದ್ದೀರಾ? ಎಂದು ಕೇಳಿದ್ದರು. ಇದಕ್ಕೆ ಜೇಮಿ: 'ಹೌದು, ಕೆಲ ಡ್ಯೂಕ್‌ ಬಾಲ್‌ಗಳು ನನ್ನ ಬಳಿ ಇವೆ. ಐಪಿಎಲ್‌ ಮುಗಿದು ಇಂಗ್ಲೆಂಡ್‌ಗೆ ತೆರಳುವ ಮುನ್ನ ಈ ಚೆಂಡುಗಳಲ್ಲಿ ಅಭ್ಯಾಸ ನಡೆಸುತ್ತೇನೆ ವಿರಾಟ್‌' ಎಂದರು. ಅದಕ್ಕೆ ಕೊಹ್ಲಿ, 'ಓಹ್‌, ನೀವು ನನಗೆ ನೆಟ್ಸ್‌ನಲ್ಲಿ ಡ್ಯೂಕ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡುತ್ತೀರಾ? ನಿಮ್ಮ ಬೌಲಿಂಗ್‌ ಎದುರಿಸಲು ನನಗೆ ತುಂಬಾ ಖುಷಿ ಇದೆ,' ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಮಿ,'ನೋ ಚಾನ್ಸ್‌, ನಿಮಗೆ ನಾನು ಬೌಲಿಂಗ್‌ ಮಾಡಲ್ಲ!'ಎಂದು ಕಡ್ಡಿ ಮುರಿದಂತೆ ನಿರಾಕರಿಸಿದರು. ಅವರು ಡ್ಯೂಕ್‌ ಬಾಲ್‌ನಲ್ಲಿ ರಿಲೀಸ್‌ ಪಾಯಿಂಟ್‌ ನೋಡುತ್ತಾರೆ ಹಾಗೂ ಎಲ್ಲಾ ರೀತಿಯಲ್ಲೂ ಅವರು ಡ್ಯೂಕ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡುತ್ತಾರೆ," ಎಂದು ಕ್ರಿಸ್ಟಿಯನ್‌ ಗ್ರೇಡ್‌ ಕ್ರಿಕೆಟರ್ ಯೂಟ್ಯೂಬ್‌ ಚಾನೆಲ್‌ಗೆ ಹೇಳಿದ್ದಾರೆ. ಈ ಘಟನೆ ಬಗ್ಗೆ ಮಾತನಾಡುತ್ತಿದ್ದ ವೇಳೆ ನ್ಯೂಜಿಲೆಂಡ್‌ ಹಿರಿಯ ವೇಗಿ , 'ಕೈಲ್‌ ಜೇಮಿಸನ್‌ ಅವರ ಪ್ರತಿಕ್ರಿಯೆ ಬುದ್ದಿವಂತಿಕೆಯಿಂದ ಕೂಡಿಲ್ಲ ಎಂದು ಹೇಳಿದರು. "ಈ ಕತೆ ನಿಜ ಎಂಬುದು ನನಗೆ ಖಚಿತತೆ ಇದೆ. ಆದರೆ, ಹೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಅದು ಉತ್ತರವಾಗಿರುತ್ತದೆ. ನೀವು ಅವರಿಗೆ ಏಕೆ ಒಂದು ನೋಟವನ್ನು ನೀಡುತ್ತೀರಿ? ವಿರಾಟ್ ಕೊಹ್ಲಿ ಬಲೆಗೆ ಬೀಳುತ್ತಾರೆಯೇ ಎಂದು ನೋಡಲು ಇದು ಸ್ಮಾರ್ಟ್ ಆಗಿತ್ತು ಆದರೆ ಕೈಲ್ ಜೇಮಿಸನ್‌ ಇಲ್ಲಿ ಬುದ್ದಿವಂತಿಕೆ ತೋರಿಸಿಲ್ಲ. ಕೊಹ್ಲಿ ಏನನ್ನೂ ಎದುರು ನೋಡುತ್ತಿದ್ದರು ಎಂಬುದನ್ನು ಅರಿಯದೆ ಜೇಮಿಸನ್‌ ನಿರಾಕರಿಸಿದ್ದು ದಡ್ಡತನ," ಎಂದು ಸೌಥ್‌ ಗಾರ್ಡಿಯನ್‌ಗೆ ತಿಳಿಸಿದ್ದಾರೆ. ಕಳೆದ ವರ್ಷ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಸೇರಿದಂತೆ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕೈಲ್‌ ಜೇಮಿಸನ್‌ ಒತ್ತಡ ಹೇರಿದ್ದರು. ಈ ಕಾರಣದಿಂದಲೇ ದುಬಾರಿ ಮೊತ್ತಕ್ಕೆ ಅತಿ ಉದ್ದದ ವೇಗಿಯನ್ನು 2021ರ ಐಪಿಎಲ್‌ ಆಟಗಾರರ ಹರಾಜಿನಲ್ಲಿಆರ್‌ಸಿಬಿ ಖರೀದಿಸಿತ್ತು. ಅರ್ಧಕ್ಕೆ ನಿಂತಿರುವ ಹದಿನಾಲ್ಕನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆಡಿದ್ದ 7 ಪಂದ್ಯಗಳಿಂದ ಜೇಮಿಸನ್‌ 9 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34wnCDY

ಅಂದು ಆಸ್ಟ್ರೇಲಿಯಾ ಪರ ವಿಶ್ವಕಪ್‌ ಗೆದ್ದ ಆಟಗಾರ ಇಂದು ಕಾರ್ಪೆಂಟರ್‌!

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2017ರಲ್ಲೇ ನಿವೃತ್ತಿ ಘೋಷಿಸಿರುವ 2015ರ ವಿಶ್ವ ಚಾಂಪಿಯನ್ಸ್‌ ತಂಡದ ಎಡಗೈ ಸ್ಪಿನ್ನರ್‌ , ಇದೀಗ ಹೊಟ್ಟೆ ಪಾಡಿಗಾಗಿ ಮರಗೆಲಸ ಆಯ್ಕೆ ಮಾಡಿ ಗಮನ ಸೆಳೆದಿದ್ದಾರೆ. 2001-02ರಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟ್ಸ್‌ಮನ್ ಹಾಗೂ ಎಡಗೈ ಸ್ಪಿನ್ನರ್‌ ಗ್ಸೇವಿಯರ್‌ ಡೊಹರ್ಟಿ, 2015ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಜಂಟಿ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಪಡೆದ ಮೈಕಲ್ ಕ್ಲಾರ್ಕ್‌ ಬಳಗದ ಸದಸ್ಯರಾಗಿದ್ದರು. ಅಂದಹಾಗೆ ಆ ಟೂರ್ನಿಯಲ್ಲಿ ಡೊಹರ್ಟಿಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡುವ ಅವಕಾಶ ಲಭ್ಯವಾಗಿತ್ತು. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಡೊಹರ್ಟಿ 7 ಓವರ್‌ ಎಸೆದರೂ ವಿಕೆಟ್‌ ಪಡೆಯಲಾಗದೆ 60 ರನ್‌ಗಳನ್ನು ಬಿಟ್ಟುಕೊಟ್ಟು ನಿರಾಸೆ ಅನುಭವಿಸಿದ್ದರು. ದುರದೃಷ್ಟವಶಾತ್ ಅದೇ ಅವರ ಕಟ್ಟ ಕಡೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯವಾಗಿದೆ. ಒಟ್ಟಾರೆ ಆಸ್ಟ್ರೇಲಿಯಾ ತಂಡದ ಪರ 4 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಡೊಹರ್ಟಿ 7 ಟೆಸ್ಟ್‌ ವಿಕೆಟ್‌ ಕೂಡ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 60 ಪಂದ್ಯಗಳಲ್ಲಿ ಕಾಂಗರೂ ಪಡೆಯನ್ನು ಪ್ರತಿನಿಧಿಸಿ 55 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ತಮ್ಮ ಕೈಚಳಕ ಪ್ರದರ್ಶಿಸಿ 11 ಪಂದ್ಯಗಳಲ್ಲಿ 10 ವಿಕೆಟ್‌ ಸಂಪಾದಿಸಿದ್ದಾರೆ. ಇದೀಗ ತಮ್ಮ ನೂತನ ವೃತ್ತಿ ಬದುಕಿನ ಕುರಿತಾಗಿ ಆಸ್ಟ್ರೇಲಿಯಾ ಕ್ರಿಕೆಟರ್ಸ್‌ ಅಸೋಸಿಯೇಷನ್‌ ತನ್ನ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ 38 ವರ್ಷದ ಮಾಜಿ ಕ್ರಿಕೆಟಿಗ ಡೊಹರ್ಟಿ ಮಾತನಾಡಿದ್ದಾರೆ. ನಿವೃತ್ತಿ ನಂತರ ಕಷ್ಟದ ದಿನಗಳಲ್ಲಿ ತಮ್ಮ ನೆರವಿಗೆ ಬಂದ ಆಸ್ಟ್ರೇಲಿಯಾ ಕ್ರಿಕೆಟರ್ಸ್‌ ಅಸೋಸಿಯೇಷನ್‌ಗೆ ಇದೇ ವೇಳ ಧನ್ಯವಾದವನ್ನೂ ತಿಳಿಸಿದ್ದಾರೆ. ನಿವೃತ್ತಿ ನಂತರ ಹಲವು ಕೆಲಸಗಳನ್ನು ಮಾಡಿ, ಕೊನೆಗೆ ಮರಗೆಲಸದಲ್ಲಿ ನೆಮ್ಮದಿ ಕಂಡುಕೊಂಡಿರುವುದಾಗಿ ಮಾಜಿ ಸ್ಪಿನ್ನರ್‌ ಹೇಳಿಕೊಂಡಿದ್ದಾರೆ. "ಕಾರ್ಪೆಂಟರಿ ಅಪ್ರೆಂಟ್‌ಷಿಪ್‌ನ 3ನೇ ಹಂತದಲ್ಲಿ ನಾನಿದ್ದೇನೆ. ಇಂದು ನಿರ್ಮಾಣ ಸ್ಥಳದಲ್ಲಿ ನನ್ನ ಕೆಲಸ ನಿರ್ವಹಿಸುತ್ತಿದ್ದು, ಇದನ್ನು ಬಹಳಾ ಆನಂದಿಸಿದ್ದೇನೆ. ಹೊರಗಡೆ ಇದ್ದು, ನನ್ನ ಕೈಗಳಿಗೆ ಕೆಲಸಕೊಟ್ಟು ದುಡಿಯುತ್ತಿರುವುದಕ್ಕೆ ಬಹಳಾ ಸಂತಸವಿದೆ. ಹೊಸ ಸಂಗತಿಗಳನ್ನು ಕಲಿಯುತ್ತಿದ್ದೇನೆ. ಇದು ಕ್ರಿಕೆಟ್‌ಗಿಂತಲೂ ಬಹಳಾ ವಿಭಿನ್ನವಾದುದ್ದು," ಎಂದು ಡೊಹರ್ಟಿ ಹೇಳಿಕೊಂಡಿದ್ದಾರೆ. "ನಾನು ಕ್ರಿಕೆಟ್‌ ಮುಗಿಸಿದ ಬಳಿಕ, ಮುಂದೇನು ಮಾಡುತ್ತೇನೆ ಎಂಬುದು ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಮೊದಲ 12 ತಿಂಗಳು ಕಾಲ ನನಗೆ ಸಿಕ್ಕ ಕೆಲಸಗಳನ್ನು ಮಾಡಿದೆ. ಆಫೀಸ್‌ ಕೆಲಸ ಕ್ರಿಕೆಟ್‌ ಕೆಲಸ ಎಲ್ಲವನ್ನೂ ಮಾಡಿದೆ. ಕೊನೆಗೆ ಕಾರ್ಪೆಂಟರ್‌ ಕೆಲಸದಲ್ಲಿ ನನಗೆ ನೆಮ್ಮದಿ ಸಿಕ್ಕಿದೆ," ಎಂದಿದ್ದಾರೆ. "ಆಸ್ಟ್ರೇಲಿಯನ್ ಕ್ರಿಕೆಟರ್ಸ್‌ ಅಸೋಸಿಯೇಷನ್‌ ಬಹಳಾ ಸಹಾಯ ಮಾಡಿದೆ. ಇದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಕ್ರಿಕೆಟ್‌ ಆಡುವ ದಿನಗಳು ಮುಗಿದ ಬಳಿಕ ಮುಂದೇನು ಎಂಬುದು ಬಹಳಾ ಕಾಡುತ್ತದೆ. ಹಣ ಇಲ್ಲದೆ ಮುಂದಿನ ಜೀವನ ಹೇಗೆ ಎಂಬುದು ಕಾಡಲಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಎಸಿಎ ನೆರವಾಗಿದೆ," ಎಂದು ಹೇಳಿಕೊಂಡಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 71 ಪಂದ್ಯಗಳನ್ನು ಆಡಿರುವ ಡೊಹರ್ಟಿ, 176 ಲಿಸ್ಟ್‌ 'ಎ' ಪಂದ್ಯಗಳು ಮತ್ತು ಒಟ್ಟು 74 ಟಿ20 ಪಂದ್ಯಗಳನ್ನು ಆಡಿ ಸಮಗ್ರವಾಗಿ 415 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆಡಮ್‌ ವೋಜಸ್‌ ಮತ್ತು ಕ್ರಿಸ್‌ ಹಾರ್ಟ್ಲೀ ಅವರೊಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೊಹರ್ಟಿ ನಿವೃತ್ತಿ ಘೋಷಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vE04Jw

ಕೋವಿಡ್, ಬ್ಲ್ಯಾಕ್ ಫಂಗಸ್ ಕಾಟ.. ಪ್ರತಿದಿನವೂ ಸಾವಿನಾಟ: ವೈದ್ಯರನ್ನೂ ಕಾಡುತ್ತಿದೆ ಖಿನ್ನತೆ..!

ಶಿವಾನಂದ ಹಿರೇಮಠ : ಕೋವಿಡ್‌ ಹಾಗೂ ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಬಿಡುವಿಲ್ಲದೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಈಗ ಸಾವು-ನೋವುಗಳನ್ನು ದಿನವೂ ಕಂಡು ಖಿನ್ನತೆಗೊಳಗಾಗುತ್ತಿದ್ದಾರೆ. ಇಂತಹ ವೈದ್ಯರಿಗೆ ಮನೋರೋಗ ತಜ್ಞರು ಮತ್ತು ಹಿರಿಯ ವೈದ್ಯರ ಮೂಲಕ ಕೌನ್ಸೆಲಿಂಗ್‌ಗೆ ಒಳಪಡಿಸಲಾಗುತ್ತಿದೆ. ವೈದ್ಯರನ್ನು ಆಘಾತದಿಂದ ಹೊರ ತರಲು ಪ್ರಯತ್ನಿಸಲಾಗುತ್ತಿದೆ. ಕೊರೊನಾದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರಿಗೆ ಚಿಕಿತ್ಸೆ ನೀಡುತ್ತಾ ಮನನೊಂದಿರುವ ವೈದ್ಯರಿಗೆ ನಿದ್ರಾಹೀನತೆ, ಜಿಗುಪ್ಸೆ, ವೃತ್ತಿ ಬದುಕಿನ ಮೇಲೆ ನಿರಾಸೆ, ಊಟ ಸೇರದೆ ಇರುವುದು, ತಲೆ ನೋವು ಇತ್ಯಾದಿ ಅಡ್ಡ ಪರಿಣಾಮಗಳು ಕಾಣಿಸತೊಡಗಿವೆ. ಆರೋಗ್ಯ ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆ ಜತೆಗೆ ತಮ್ಮನ್ನೇ ತಾವು ರಕ್ಷಣೆ ಮಾಡಿಕೊಳ್ಳುವ ಒತ್ತಡವೂ ವೈದ್ಯರ ಮೇಲಿದೆ. ಈಗಿನ ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಖಿನ್ನತೆಗೊಳಗಾಗುತ್ತಿರುವ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರ ನಡವಳಿಕೆ ಮತ್ತು ಕಾರ್ಯಕ್ಷಮತೆ ಮೇಲೆ ಇದು ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಹಿರಿಯ ಆರೋಗ್ಯ ಪರಿಣಿತರು. ಈ ಕುರಿತು ಪ್ರತಿಕ್ರಿಯೆ ನೀಡಿದ ಮನೋರೋಗ ತಜ್ಞ ಪಿ. ವಿ. ಭಂಡಾರಿ, 'ವೈದ್ಯರೆಂದರೆ ಸೂಪರ್ ಮ್ಯಾನ್‌ಗಳಲ್ಲ. ಸಮಸ್ಯೆ ಹಂಚಿಕೊಳ್ಳದಿದ್ದರೆ ವೃದ್ಧಿಸುತ್ತದೆ. ವೈದ್ಯರೆಂಬ ಬಿಗುಮಾನ ಬಿಟ್ಟು ಸಲಹೆ ಪಡೆಯಿರಿ. ಮನಸ್ಸು, ದೇಹ ನಿರಾಳಗೊಳಿಸುವ ವ್ಯಾಯಾಮ, ಪ್ರಾಣಾಯಾಮದ ಜೊತೆಗೆ ಉತ್ತಮ ಮಿತಾಹಾರ ತೆಗೆದುಕೊಳ್ಳುವುದು ಖಿನ್ನತೆಯಿಂದ ಹೊರ ಬರಲು ಸರಳ ಮಾರ್ಗ' ಎಂದು ವಿವರಿಸಿದರು. ಇದೇ ವಿಚಾರದ ಬಗ್ಗೆ ಮಾತನಾಡಿದ ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್, 'ಅನುಭವ ಖಿನ್ನತೆಯನ್ನು ಹೋಗಲಾಡಿಸುತ್ತದೆ. ಅನನುಭವಿಗಳಿಗೆ ಜಾಸ್ತಿ. ಹೊಂದಿಕೊಳ್ಳುವ ಗುಣ, ಧೈರ್ಯ ಮತ್ತು ಗುಣಾತ್ಮಕ ಮನೋಭಾವ ಇದ್ದರೆ ಜಯಿಸಬಹುದು. ಕೊರೊನಾ ಜೊತೆಗೆ ಬದುಕುವುದನ್ನು ಸಾಮಾನ್ಯರಿಗಿಂತಾ ಮೊದಲು ವೈದ್ಯರು ಕಲಿತುಕೊಳ್ಳಬೇಕು' ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3wLMaVW

ಜೂನ್ ಬಳಿಕ ಸಾಲ,ಕಂತುಗಳ ಪಾವತಿಯ ಪೂರ್ತಿ ಬಾಕಿ ಕಟ್ಟಬೇಕು ಎಂಬ ಸುತ್ತೋಲೆ, ವಾಪಸ್‌ ಪಡೆಯಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ/ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಅವರು ಆಗ್ರಹಿಸಿದ್ದಾರೆ. ಸಾಲ/ಕಂತುಗಳ ಪಾವತಿ ಅವಧಿಯನ್ನು ಮುಂದೂಡಿ ಬಳಿಕ ಪೂರ್ತಿ ಕಟ್ಟಬೇಕು ಎಂಬ ಆದೇಶ ಜನರಿಗೆ ಹಾಕಿರುವ ಟೋಪಿ ಎಂದು ಅವರು ಕಿಡಿ ಕಾರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೊನಾ ಹೆಸರಿನಲ್ಲಿ ಪ್ಯಾಕೇಜ್ ಘೋಷಣೆ ಮಾಡಿ ಈ ರೀತಿಯ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಒತ್ತಾಯ ಮಾಡಿದ್ದರಿಂದ ಕಳೆದ ವರ್ಷ 3 ಹಂತಗಳಲ್ಲಿ 2284.5 ಕೋಟಿ ರೂ ಗಳ ಪ್ಯಾಕೇಜನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿದ್ದರು. ಆ ಪ್ಯಾಕೇಜಿನಲ್ಲಿ 824 ಕೋಟಿ ರೂಗಳು ಕಟ್ಟಡ ಕಾರ್ಮಿಕರ ನಿಧಿಯಾಗಿತ್ತು. ಅವರ ಹಣವನ್ನು ಅವರಿಗೆ ನೀಡುವುದು ಸರ್ಕಾರದ ಪ್ಯಾಕೇಜು ಹೇಗಾಗುತ್ತದೆ? ಎಂದು ಜನರು ಕೇಳಿದ್ದರು. ಇದನ್ನು ಹೊರತು ಪಡಿಸಿ ಸರ್ಕಾರ ನೈಜವಾಗಿ ಖರ್ಚು ಮಾಡಿದ್ದು ಕೇವಲ 800 ಕೋಟಿ ರೂಗಳನ್ನು ಮಾತ್ರ. ಈ ವರ್ಷ ದಿನಾಂಕ 19-5-21 ರಂದು 2250 ಕೋಟಿ ಎಂದು ಹೇಳಿ 1111.82 ಕೋಟಿ ರೂಗಳ ಪ್ಯಾಕೇಜು ಘೋಷಿಸಲಾಗಿದೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗೆ ತಲಾ 3000 ರೂಗಳಂತೆ 494 ಕೋಟಿ ರೂಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಅದನ್ನು ಹೊರತು ಪಡಿಸಿದರೆ ಉಳಿಯುವುದು ಕೇವಲ 617.82 ಕೋಟಿ ರೂ ಮಾತ್ರ. ಇದರ ನಂತರ ರೈತರ ಮತ್ತು ಸ್ವ ಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿಯ ಸಾಲಗಳ ಮರುಪಾವತಿಯ ಅವಧಿಯನ್ನು 1-05-2020 ರಿಂದ 31-7-2021 ರವರೆಗೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಇದಕ್ಕಾಗಿ 134.38 ಕೋಟಿ ರೂಗಳ ಪ್ಯಾಕೇಜನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ಘೋಷಿಸಿರುವ ಪ್ಯಾಕೇಜಿನಲ್ಲಿ 3 ತಿಂಗಳ ಅವಧಿಯಲ್ಲಿ ಕಟ್ಟಬೇಕಾದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುತ್ತಿದೆಯೆಂಬ ಅರ್ಥದಲ್ಲಿ ಹೇಳಿದ್ದರು. ಆದರೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರು ದಿನಾಂಕ 21-5-21 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ 1-4-21 ರಿಂದ 30-6-21 ರವರೆಗೆ ಗಡುವು ಬರುವ ಸಾಲ/ ಕಂತುಗಳನ್ನು ಸಾಲ ಪಡೆದ ಸದಸ್ಯರು ಸಾಲ ಮರುಪಾವತಿಸಲು 30-6-21 ರ ವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಅಂದರೆ ಜೂನ್ ನಂತರ ಪೂರಾ ಬಾಕಿಯನ್ನು ಕಟ್ಟಬೇಕೆಂದು ಅರ್ಥ. ಇದರಿಂದ ರೈತರಿಗೆ ಲಾಭವೇನು? ಮುಖ್ಯಮಂತ್ರಿಗಳು ಪ್ಯಾಕೇಜು ನೀಡುತ್ತೇವೆ ಎಂದು ಹೇಳಿ ಜನರಿಗೆ ಯಾಕೆ ಟೋಪಿ ಹಾಕಬೇಕು? ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಈ ಕೂಡಲೇ ಸಹಕಾರ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ವಾಪಸ್ಸು ಪಡೆಯಬೇಕು. ಜೊತೆಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ನೀಡಿರುವ ಪ್ಯಾಕೇಜುಗಳ ಕುರಿತು ಮಾಹಿತಿ ತರಿಸಿಕೊಂಡು ಅವುರಂತೆ ರೈತರಿಗೆ ಮತ್ತು ರಾಜ್ಯದ ಎಲ್ಲ ದುಡಿಯುವ ಜನರಿಗೆ ಪ್ಯಾಕೇಜುಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಕ್ಕ ಪಕ್ಕದ ಎಲ್ಲ ರಾಜ್ಯಗಳಿಗಿಂತ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಜೆಟ್ ಸಂದರ್ಭದಲ್ಲೆ ಮುಖ್ಯ ಮಂತ್ರಿಗಳು ಹೇಳಿರುವುದರಿಂದ ಆ ಎಲ್ಲ ರಾಜ್ಯಗಳಿಗಿಂತ ಉತ್ತಮ ಪ್ಯಾಕೇಜನ್ನು ನೀಡಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/3yO5L9J

ವಿಶ್ವದ ಯಾವುದೇ ತಂಡವನ್ನು ಸೋಲಿಸುವ ತಾಕತ್ತು ಭಾರತಕ್ಕಿದೆ ಎಂದ ಅಕ್ಷರ್!

ಹೊಸದಿಲ್ಲಿ: ಜೂನ್‌ 18 ರಿಂದ ಸೌತಾಮ್ಟನ್‌ನಲ್ಲಿ ನಡೆಯುವ ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯ ಮೂಲಕ ಟೀಮ್‌ ಇಂಡಿಯಾದ ನಾಲ್ಕು ತಿಂಗಳ ಇಂಗ್ಲೆಂಡ್‌ ಪ್ರವಾಸ ಆರಂಭವಾಗಲಿದೆ. ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿಯೂ ಕೊಹ್ಲಿ ಪಡೆ ಕಾದಾಟ ನಡೆಸಲಿದೆ. 20 ಸದಸ್ಯರ ಭಾರತ ಟೆಸ್ಟ್ ತಂಡ ಹಾಗೂ ಐವರು ಸ್ಟ್ಯಾಂಡ್‌ ಬೈ ಆಟಗಾರರು ಜೂನ್‌ 2 ರಂದು ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್‌, ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತದ ಸ್ಪಿನ್ನರ್‌ಗಳು ಮಹತ್ವದ ಪಾತ್ರವನ್ನು ವಹಿಸಲಿದ್ದಾರೆಂದು ಹೇಳಿದ್ದಾರೆ. ಇಂಡಿಯಾ ಟಿವಿ ಜೊತೆ ಮಾತನಾಡಿದ ಅಕ್ಷರ್ ಪಟೇಲ್‌, ಇಂಗ್ಲೆಂಡ್‌ ಪರಿಸ್ಥಿತಿಗಳಲ್ಲಿ ಆಡಲು ನಾವು ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿರುವುದು ಟೀಮ್‌ ಇಂಡಿಯಾಗೆ ಪ್ಲಸ್‌ ಪಾಯಿಂಟ್‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಾವು ಭಾರತದಲ್ಲಿ ಆಡಿದಾಗ ಸ್ಪಿನ್ನರ್‌ಗಳು ಆಕ್ರಮಣಕಾರಿ ಆಟವನ್ನು ಆಡಬಹುದು. ಆದರೆ, ನೀವು ವಿದೇಶಿದಲ್ಲಿ ಆಡುವಾಗ ಅದರಲ್ಲೂ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದಲ್ಲಿ ಆಡುವಾಗ ಇಲ್ಲಿನ ವಾತಾವರಣ ಹೆಚ್ಚು ಸಹಕಾರಿಯಾಗುವುದಿಲ್ಲ. ಆದರೆ, ಗುಣಮಟ್ಟದ ಸ್ಪಿನ್ನರ್‌ಗಳಿದ್ದರೆ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ. ವೇಗಿಗಳಿಗೆ ವಿಶ್ರಾಂತಿ ನೀಡಲು ಸ್ಪಿನ್ನರ್‌ಗಳು ನೆರವಾಗುತ್ತಾರೆ ಹಾಗೂ ಎದುರಾಳಿ ತಂಡ ದೊಡ್ಡ ಮೊತ್ತ ಕಲೆಹಾಕಲು ಅವಕಾಶ ನೀಡುವುದಿಲ್ಲ," ಎಂದು ಅಕ್ಷರ್‌ ತಿಳಿಸಿದರು. "ಇಂಗ್ಲೆಂಡ್‌ ಪರಿಸ್ಥಿತಿಗಳು ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ ಹಾಗೂ ಇಂತಹ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬೌಲಿಂಗ್‌ ಮಾಡುವುದೇಗೆಂದು ಅರ್ಥ ಮಾಡಿಕೊಳ್ಳಲು ಸ್ಪಿನ್ನರ್‌ಗಳಿಗೆ ಈ ಪ್ರವಾಸ ಅತ್ಯಂತ ಮುಖ್ಯವಾಗಿದೆ," ಎಂದು ಎಡಗೈ ಸ್ಪಿನ್ನರ್‌ ಹೇಳಿದರು. ಯಾವುದೇ ಪರಿಸ್ಥಿತಿಗಳಿಗೆ ಭಾರತ ತಂಡದ ಸ್ಪಿನ್‌ ದಾಳಿ ಹೊಂದಾಣಿಕೆಯಾಗುತ್ತದೆ ಹಾಗೂ ಎದುರಾಳಿ ತಂಡಕ್ಕೆ ಒತ್ತಡ ಹೇರಬಲ್ಲದು ಎಂಬ ಅಂಶವನ್ನು ಉಲ್ಲೇಖಿಸಿದರು. "ಸನ್ನಿವೇಶಗಳಿಗೆ ಅನುಗುಣವಾಗಿ ಹೇಗೆ ಬೌಲ್‌ ಮಾಡಬೇಕೆಂದು ಅವರಿಗೆ ತಿಳಿದಿದೆ. ಆ ರೀತಿಯ ಸ್ಪಿನ್ ದಾಳಿ ನಮ್ಮಲ್ಲಿ ಇದೆ. ಪಿಚ್‌ ನೆರವಾಗಲಿ ಅಥವಾ ಬಿಡಲಿ ಅಥವಾ ವೇಗದ ಬೌಲರ್‌ಗಳಿಗೆ ಪಿಚ್‌ ನೆರವು ನೀಡುತ್ತಿದ್ದರೂ ಪರವಾಗಿಲ್ಲ, ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯ ನಮ್ಮ ಸ್ಪಿನ್ನರ್‌ಗಳಿಗೆ ಇದೆ," ಎಂದು ಹೇಳಿದರು. ಇಂಡಿಯನ್‌ ಸ್ಪಿನ್ನರ್‌ಗಳು ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ನೆರವಾಗಬಲ್ಲರು ಎಂಬ ಅಂಶವನ್ನು ಅಕ್ಷರ್ ಪಟೇಲ್‌ ಇದೇ ವೇಳೆ ಒತ್ತಿ ಹೇಳಿದರು. "ಸ್ಪಿನ್ನರ್‌ಗಳ ಜೊತೆಗೆ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ಕೂಡ ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡಬಲ್ಲರು. 8 ಅಥವಾ 9 ಕ್ರಮಾಂಕದವರೆಗೂ ನಾವು ಬ್ಯಾಟಿಂಗ್‌ ಮಾಡಿದರೆ, ಎಂತಹ ತಂಡವನ್ನು ಬೇಕಾದರೂ ಸೋಲಿಸಬಹುದು. ಇದು ತಂಡಕ್ಕೆ ಪ್ಲಸ್‌ ಪಾಯಿಂಟ್‌," ಎಂದು ಅಕ್ಷರ್‌ ಪಟೇಲ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yNJecZ

WTC ಫೈನಲ್‌ಗೂ ಮೊದಲೇ ಕಿವೀಸ್‌ ಮೇಲುಗೈಗೆ ಕಾರಣ ತಿಳಿಸಿದ ವೆಂಗ್ಸರ್ಕರ್‌!

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ನಡೆಯಬೇಕಿರುವ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಯಾವ ತಂಡಕ್ಕೆ ಮೇಲುಗೈ ಇದೆ ಎಂಬುದನ್ನು ಭಾರತ ತಂಡದ ಮಾಜಿ ನಾಯಕ ವಿವರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನ ವಿಶ್ವಕಪ್ ಟೂರ್ನಿ ಎಂದೇ ಮಹತ್ವ ಪಡೆದುಕೊಂಡಿರುವ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯವು ಜೂನ್‌ 18-22ರವರೆಗೆ ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಜೂನ್‌ 2ರಂದು ಚೆನ್ನೈನಿಂದ ಲಂಡನ್‌ಗೆ ಚಾರ್ಟರ್‌ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದೆ. ಬಳಿಕ 3 ದಿನಗಳ ಕಟ್ಟು ನಿಟ್ಟಿನ ಕ್ವಾರಂಟೈನ್‌ ನಂತರ ಅಭ್ಯಾಸ ಆರಂಭಿಸಲಿದೆ. ಅದೇ ನ್ಯೂಜಿಲೆಂಡ್‌ ತಂಡ ಈಗಾಗಲೇ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿದ್ದು, ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮುನ್ನ ಆತಿಥೇಯ ಇಂಗ್ಲೆಂಡ್‌ ಎದುರು 2 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದ್ದು, ಈ ಸರಣಿ ಜೂನ್ 2ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿರುವ ದಿಲೀಪ್‌ ವೆಂಗ್ಸರ್ಕರ್‌, ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲೆಂಡ್‌ ತಂಡಕ್ಕೆ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮೊದಲೇ ಮೇಲುಗೈ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೂ ಮುನ್ನ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿ ನ್ಯೂಜಿಲೆಂಡ್‌ ತಂಡಕ್ಕೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನೆರವಾಗಲಿದೆ. ಈ ಮೂಲಕ ಸತತ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸುವಾಗ ಸಂಪೂರ್ಣ ಸಜ್ಜಾಗಿ ಕಣಕ್ಕಿಳಿಯಲಿದೆ. ಇನ್ನು ಜೂನ್‌ನಲ್ಲಿ ಇಂಗ್ಲೆಂಡ್‌ನ ಹವಾಗುಣ ಮೋಡ ಮುಚ್ಚಿದ ವಾತಾವರಣದಿಂದ ಕೂಡಿರಲಿದೆ. ಇದು ಕಿವೀಸ್‌ ಪಡೆಗೆ ತಾಯ್ನಾಡಿನ ಸ್ಥಿತಿಗತಿಗಳನ್ನು ತಂದುಕೊಡಲಿದ್ದು, ನ್ಯೂಜಿಲೆಂಡ್‌ ತಂಡದ ವೇಗಿಗಳು ಇದರ ಸಂಪೂರ್ಣ ಲಾಭ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಈಗಾಗಲೇ ಹಲವು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ಒಟ್ಟು 520 ಅಂಕಗಳನ್ನು ಗಳಿಸಿದ ಟೀಮ್‌ ಇಂಡಿಯಾ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಕಾಲಿಟ್ಟಿದೆ. ತನ್ನ ಕಳೆದ ಎರಡು ಟೆಸ್ಟ್‌ ಸರಣಿಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಬಗ್ಗುಬಡಿದಿರುವ ಭಾರತ ತಂಡ ಆತ್ಮವಿಶ್ವಾಸದ ಅಲೆಯಲ್ಲಿದೆ ಆದರೂ, ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮುನ್ನ ಅಲ್ಲಿನ ಪರಿಸ್ಥಿತಿಗೆ ಬಹುಬೇಗ ಹೊಂದಿಕೊಳ್ಳುವುದರಲ್ಲಿ ತಂಡದ ಪ್ರದರ್ಶನ ಮಟ್ಟ ನಿರ್ಧಾರವಾಗಲಿದೆ. ಇನ್ನು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡ ಸತತ ಸೋಲುಂಡರೆ ಅಥವಾ ಗಾಯದ ಸಮಸ್ಯೆಗಳನ್ನು ಏನಾದರೂ ಎದುರಿಸಿದರೆ ಭಾರತ ವಿರುದ್ಧ ಫೈನಲ್ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಭಾರತಕ್ಕೆ ಹೊಂದಿಕೊಳ್ಳುವುದೇ ಸವಾಲು: ವೆಂಗ್ಸರ್ಕರ್‌ಕಿವೀಸ್‌ ಸವಾಲು ಮೆಟ್ಟಿನಿಂತು ಟೆಸ್ಟ್‌ ಕ್ರಿಕೆಟ್‌ನ ವಿಶ್ವಕಪ್‌ ಟ್ರೋಫಿಯನ್ನು ಭಾರತ ತಂಡ ಮುಡಿಗೇರಿಸಿಕೊಳ್ಳಬೇಕಾದರೆ ಮೊದಲಿಗೆ ಇಂಗ್ಲೆಂಡ್‌ನ ಹವಾಗುಣಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು 65 ವರ್ಷದ ಮಾಜಿ ಕ್ರಿಕೆಟಿಗ ವೆಂಗ್ಸರ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ. "ಖಂಡಿತಾ ನ್ಯೂಜಿಲೆಂಡ್‌ ತಂಡಕ್ಕೆ ಮೇಲುಗೈ ಇದೆ. ಏಕೆಂದರೆ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮೊದಲು ಇಂಗ್ಲೆಂಡ್‌ ಎದುರು 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದು ಖಂಡಿತಾ ಕಿವೀಸ್‌ ಪಡೆಗೆ ನೆರವಾಗಲಿದೆ. ಆದರೆ, ಭಾರತ ತಂಡ ಎಷ್ಟು ಬೇಗ ಅಲ್ಲಿನ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುತ್ತದೆ ಎಂಬುದು ಇಲ್ಲಿ ಮುಖ್ಯ. ಆದರೂ ಎರಡು ಪಂದ್ಯಗಳನ್ನು ಆಡಿ ಮೂರನೇ ಪಂದ್ಯಕ್ಕೆ ಮುಂದಾಗುವ ನ್ಯೂಜಿಲೆಂಡ್‌ಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಉತ್ತಮ ಅರಿವಿರುತ್ತದೆ. ಅದೇ ವಿರಾಟ್‌ ಕೊಹ್ಲಿ ಬಳಗ ಮೊದಲ ಪಂದ್ಯವನ್ನಾಡಲು ಅಣಿಯಾಗಲಿದೆ," ಎಂದು ವೆಂಗ್ಸರ್ಕರ್‌ ನ್ಯೂಸ್‌ 18ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fyo1MH

ಟಿವಿ5 ತೆಲುಗು, ಎಬಿಎನ್ ಆಂಧ್ರ ಜ್ಯೋತಿ 'ದೇಶದ್ರೋಹ' ಗುದ್ದಾಟ: ಜಗನ್ ಸರ್ಕಾರಕ್ಕೆ 'ಸುಪ್ರೀಂ' ಶಾಕ್..!

: ನ್ಯೂಸ್ ಚಾನಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ ಆಂಧ್ರ ಪ್ರದೇಶ ಸರ್ಕಾರದ ಕ್ರಮಕ್ಕೆ ಕೆಂಡಕಾರಿದೆ. ದೇಶದ್ರೋಹ ಪ್ರಕರಣದ ಇತಿಮಿತಿಗಳ ಕುರಿತು ವ್ಯಾಖ್ಯಾನ ಮಾಡುವುದಾಗಿ ತಿಳಿಸಿರುವ ಸುಪ್ರೀಂ ಕೋರ್ಟ್‌, ಮಾಧ್ಯಮ ಸ್ವಾತಂತ್ರ್ಯವನ್ನು ದಮನ ಮಾಡುವಂತಿಲ್ಲ ಎಂದು ಜಗನ್ ಸರ್ಕಾರಕ್ಕೆ ಚಾಟಿ ಬೀಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷದ ರೆಬೆಲ್ ಸಂಸದ ರಘುರಾಮ ಕೃಷ್ಣಂ ರಾಜು ಅವರು ಆಂಧ್ರ ಸರ್ಕಾರದ ವಿರುದ್ಧ ದನಿ ಎತ್ತಿದ್ದರು. ಕೊರೊನಾ ವೈರಸ್ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ತಮ್ಮದೇ ಪಕ್ಷದ ಸಿಎಂ ವಿರುದ್ಧ ಹರಿಹಾಯ್ದಿದ್ದರು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದ ಜಗನ್ ಸರ್ಕಾರ, ಜೊತೆಯಲ್ಲೇ ಟಿವಿ 5 ಸುದ್ದಿ ವಾಹಿನಿ ಹಾಗೂ ಸುದ್ದಿ ವಾಹಿನಿ ವಿರುದ್ಧವೂ ದೇಶದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿತ್ತು. ಸಂಸದರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ನೀಡಿದ ಬೆನ್ನಲ್ಲೇ, ಹಾಗೂ ಎಬಿಎನ್ ಆಂಧ್ರ ಜ್ಯೋತಿ ಕೂಡಾ ಸುಪ್ರೀಂ ಮೊರೆ ಹೋಗಿದ್ದವು. ಸಂಸದರ ನಿಲುವನ್ನು ಪ್ರಸಾರ ಮಾಡಿದ್ದ ತಪ್ಪಿಗೆ ವಾಹಿನಿಗಳ ವಿರುದ್ಧ ದೇಶದ್ರೋಹ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಡಿ. ವೈ. ಚಂದ್ರಚೂಡ್, ಎಲ್. ನಾಗೇಶ್ವರ ರಾವ್ ಹಾಗೂ ಎಸ್. ರವೀಂದ್ರ ಭಟ್ ಅವರಿದ್ದ ಪೀಠವು, ಆಂಧ್ರ ಸರ್ಕಾರದ ನಡೆ ಮೇಲ್ನೋಟಕ್ಕೆ ಮಾಧ್ಯಮ ಸ್ವಾತಂತ್ರ್ಯವನ್ನು ದಮನ ಮಾಡುವ ಪ್ರಯತ್ನದಂತೆ ಕಂಡುಬರ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಹಂತದಲ್ಲಿ ನಾವು ದೇಶದ್ರೋಹ ಪ್ರಕರಣದ ಇತಿಮಿತಿಗಳ ಕುರಿತಾಗಿ ವ್ಯಾಖ್ಯಾನ ನೀಡಬೇಕಾದ ಸಮಯ ಬಂದಿದೆ ಎಂದು ನ್ಯಾ. ಡಿ. ವೈ. ಚಂದ್ರಚೂಡ ಅವರು ಅಭಿಪ್ರಾಯಪಟ್ಟರು. ಸೆಕ್ಷನ್ 214ಎ ಹಾಗೂ 153ಎ ಕುರಿತಾಗಿ ವಿವರಣೆ ನೀಡಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ. ಇದೇ ವೇಳೆ, ಎರಡೂ ಸುದ್ದಿವಾಹಿಗಳ ವಿರುದ್ಧ ಸರ್ಕಾರ ದಬ್ಬಾಳಿಕೆ ಪ್ರವೃತ್ತಿಯ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ಆದ್ರೆ, ವಾಹಿನಿಗಳ ವಿರುದ್ಧದ ಪ್ರಕರಣಗಳ ತನಿಖೆಗೆ ನ್ಯಾಯಪೀಠ ಯಾವುದೇ ತಡೆ ನೀಡಿಲ್ಲ. ವಾಹಿನಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸೋದಕ್ಕೂ ನ್ಯಾಯಪೀಠ ನಿರಾಕರಿಸಿದೆ.


from India & World News in Kannada | VK Polls https://ift.tt/3vEA7cy

ಪಕ್ಷಾಂತರ ಮಾಡಿಯೋ, ಯಾರದೋ ಕಾಲು ಹಿಡಿದು ಯಡಿಯೂರಪ್ಪ ಸಿಎಂ ಆದವರಲ್ಲ, ನಳಿನ್ ಕುಮಾರ್ ಕಟೀಲ್

ಬೆಂಗಳೂರು: ನಾಯಕರಂತೆ ಪಕ್ಷಾಂತರ ಮಾಡಿಯೋ, ಯಾರದೋ ಕಾಲು ಹಿಡಿದು ಯಡಿಯೂರಪ್ಪ ಅವರು ಸಿಎಂ ಆದವರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಟಾಂಗ್ ನೀಡಿದ್ದಾರೆ. ಈ ಕುರಿತಾಗಿ ಟ್ವಿಟ್ಟರ್‌ನಲ್ಲಿ, ಸಿದ್ದರಾಮಯ್ಯ ಅವರು ತಾವು ಎಲ್ಲಿದ್ದವರು, ತಮ್ಮ ಗುರುಗಳು ಯಾರು ಎಂಬುದನ್ನು ಯೋಚಿಸಬೇಕು. ಕಾಂಗ್ರೆಸ್‌ಗೆ ಹೀನಾಮಾನವಾಗಿ ಬಯ್ಯುತ್ತಿದ್ದ ವ್ಯಕ್ತಿ, ಅದೇ ಪಕ್ಷಕ್ಕೆ ಬಂದು ಸಿಎಂ ಆಗಿದ್ದಾರೆ ಎಂದಿದ್ದಾರೆ. ಬಿಜೆಪಿ ಸಮರ್ಥ ರಾಜಕೀಯ ಪಕ್ಷ, ನಾಯಕತ್ವದ ಕೊರತೆ ಎದುರಾಗುವುದಿಲ್ಲ. ಅದರಲ್ಲೂ ನಾಯಕತ್ವದ ಪಾಠವನ್ನು ನಾವು ಕಾಂಗ್ರೆಸ್‌ ಪಕ್ಷದಿಂದ ಕಲಿಯಬೇಕಿಲ್ಲ.ಯಡಿಯೂರಪ್ಪ ಅವರು 40-45 ವರ್ಷಗಳ ಸುದೀರ್ಘ ಹೋರಾಟ ಮಾಡಿ ಪಕ್ಷವನ್ನು ಬೆಳೆಸಿದ ಕಾರಣದಿಂದಾಗಿಯೇ ಇಂದು ಎತ್ತರದ ಸ್ಥಾನಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಮೊದಲು ತಮ್ಮ ಪಕ್ಷದ ಸ್ಥಿತಿಗತಿಗಳ ಬಗ್ಗೆ ನೋಡಿಕೊಳ್ಳುವುದು ಒಳ್ಳೆಯದು. ಕಾಂಗ್ರೆಸ್‌ ಪಕ್ಷದವರಿಗೆ ಸದ್ಯ ಬೇರೆ ಏನೂ ಕೆಲಸವಿಲ್ಲ. ಪ್ರತಿಪಕ್ಷವಾಗಿಯೂ ಸರಿಯಾಗಿ ಕೆಲಸ ಮಾಡದೆ ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವ ಕೊರತೆ ಇದೆಯೇ ಹೊರತು ಬಿಜೆಪಿಯಲ್ಲಿ ಅಲ್ಲ. ಸಿದ್ದರಾಮಯ್ಯ ಅವರು ಸಮರ್ಥ ನಾಯಕ ಅಲ್ಲ ಎನ್ನುವುದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು ಎಂದು ಕಾಲೆಳೆದಿದ್ದಾರೆ. ರಾಜ್ಯದಲ್ಲಿ ನಾಯಕತ್ವ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.


from India & World News in Kannada | VK Polls https://ift.tt/34xQAn8

ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳ ನಿರ್ಲಕ್ಷ್ಯ: ಹೆಚ್ಚುತ್ತಿದೆ ಮರಣ ಪ್ರಮಾಣ..!

ಪ್ರಮೋದ ಹರಿಕಾಂತ : ಇಡೀ ರಾಜ್ಯವೇ ಕೊರೊನಾ ಸೋಂಕಿತರ ಲೆಕ್ಕಾಚಾರದಲ್ಲಿ ಮುಳುಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಕೊರೊನಾ ಸೋಂಕಿಲ್ಲದ ಅನ್ಯ ರೋಗಿಗಳೇ ಸಕಾಲದಲ್ಲಿ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಆಸ್ಪತ್ರೆಗಳ ಎದುರೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ಕೊರೊನಾ ರೋಗಿಗಳೇ ತುಂಬಿಕೊಂಡಿದ್ದಾರೆ. ಹೀಗಾಗಿ ಅನ್ಯ ರೋಗಗಳು ಕಾಣಿಸಿಕೊಂಡಾಗ ಚಿಕಿತ್ಸೆ ಕೊಡಿಸುವುದೇ ಕಷ್ಟವಾಗುತ್ತಿದೆ. ಬಹುತೇಕ ಆಸ್ಪತ್ರೆಗಳು ರೋಗಿಯನ್ನು ದಾಖಲಿಸಿಕೊಳ್ಳಲು ಆರ್‌ಟಿ-ಪಿಸಿಆರ್‌ ಟೆಸ್ಟ್‌ ವರದಿ ಕಡ್ಡಾಯ ಮಾಡಿವೆ. ಅತ್ಯಂತ ಅಪಾಯದಲ್ಲಿರುವ ವ್ಯಕ್ತಿಗಳ ಜೀವ ರಕ್ಷಣೆಗಿಂತಲೂ ಕೊರೊನಾ ಇದೆಯೋ ಇಲ್ಲವೋ ಎಂಬುದೇ ಮುಖ್ಯವಾಗಿ ಜನರು ಚಿಕಿತ್ಸೆ ದೊರೆಯದೆ ಮೃತರಾಗುತ್ತಿದ್ದಾರೆ. ಈ ನಿರ್ಲಕ್ಷ್ಯ ಮತ್ತು ನಿಯಮಗಳ ಭಾರದಿಂದ ಹೆರಿಗೆ ನೋವಿನಿಂದ ಬಳಲುವ ಗರ್ಭಿಣಿಯರು, ಡಯಾಲಿಸಿಸ್‌ಗೆ ಒಳಗಾಗಬೇಕಾದ ಮಧುಮೇಹಿಗಳು, ಆಗಾಗ ಚಿಕಿತ್ಸೆ ಅಗತ್ಯವಿರುವ ಕ್ಯಾನ್ಸರ್‌ ರೋಗಿಗಳು, ಹೃದಯದ ಕಾಯಿಲೆ ಇರುವವರು, ಹಿರಿಯರು ತೊಂದರೆಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷದ ಮೊದಲನೇ ಅಲೆ ಸಂದರ್ಭ ಅನ್ಯ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸರಿಯಾಗಿ ಚಿಕಿತ್ಸೆ ದೊರೆತಿರಲಿಲ್ಲ. ಈ ಬಾರಿಯಂತೂ ಇಡೀ ವ್ಯವಸ್ಥೆ ಕೊರೊನಾವನ್ನೇ ಸಂಭಾಳಿಸಲು ಸಾಧ್ಯವಾಗದೆ ಕಷ್ಟಪಡುತ್ತಿದೆ. ಹೀಗಾಗಿ ಅನ್ಯ ರೋಗಿಗಳ ಗೋಳಾಟ ಹೇಳತೀರದಾಗಿದೆ.


from India & World News in Kannada | VK Polls https://ift.tt/3yNzLlX

ಕೋವಿಡ್‌ ಸಂಕಷ್ಟ:ತಜ್ಞರ ಜೊತೆ ಮಾತುಕತೆ ನಡೆಸಿ ಲಾಕ್‌ಡೌನ್ ಬಗ್ಗೆ ಮುಂದಿನ ನಿರ್ಧಾರ; ಬಿಎಸ್‌ವೈ

ಬೆಂಗಳೂರು: ತಜ್ಞರ ಜೊತೆಗೆ ಮಾತುಕತೆ ನಡೆಸಿ ರಾಜ್ಯದಲ್ಲಿ ವಿಸ್ತರಣೆ ಮಾಡಬೇಕೋ ಬೇಡವೋ ಎಂಬ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ ಬೇಡವೋ ಎಂಬ ನಿಟ್ಟಿನಲ್ಲಿ ತಜ್ಞರ ಜೊತೆ ಮಾತುಕತೆ ನಡೆಸಲಾಗುವುದು. ಇದಾದ ಬಳಿಕ ಲಾಕ್‌ಡೌನ್ ಕುರಿತಾಗಿ ನಿರ್ಧಾರ ಮಾಡಲಾಗುವುದು ಎಂದರು. ಇನ್ನು ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿದೆ. ಅದರ ಕಡೆಗೆ ವಿಶೇಷ ಗಮನ ನೀಡುತ್ತೇನೆ ಎಂದು ತಿಳಿಸಿದರು. ಕೋವಿಡ್ 19 ವಿಷಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಗಳೊಂದಿಗೆ‌ ಮುಖ್ಯಮಂತ್ರಿಗಳು ವಿಡಿಯೋ ಸಂವಾದವನ್ನು ಸೋಮವಾರ ನಡೆಸಿದ್ದು ಸುಮಾರು ಒಂದು ಗಂಟೆಗಳ ಕಾಲ ಅವರ ಜೊತೆ ಚರ್ಚೆ ನಡೆಸಿ ಸಮಸ್ಯೆ ಆಲಿಸಿದರು. ನರ್ಸ್‌ಗಳು ಡಾಕ್ಟರ್‌ ಗಳನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ಪ್ರಾಣದ ಹಂಗನ್ನು ತೊರೆದು ಮನೆಯಲ್ಲಿ ಕೋವಿಡ್ ಬಂದರೂ ಅವರಿಗೆ ಕೋವಿಡ್‌ ಬಂದರೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವ ರೀತಿ ಅಭಿನಂದನೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ. ಸಂವಾದದ ಸಂದರ್ಭದಲ್ಲಿ ಕೆಲವು ಸಲಹೆ ಹಾಗೂ ಸಮಸ್ಯೆ ತೋಡಿಕೊಂಡಿದ್ದಾರೆ. ಅವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ತಜ್ಞರ ವರದಿಯನ್ನ ಆಧರಿಸಿ ಲಾಕ್‌ಡೌನ್ ಬಗ್ಗೆ ಕ್ರಮ- ಆರ್.ಅಶೋಕ್ ರಾಜ್ಯದಲ್ಲಿ ತಜ್ಞರ ವರದಿಯನ್ನ ಆಧರಿಸಿ ಲಾಕ್‌ಡೌನ್ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್ ತಿಳಿಸಿದರು. ಪಾಸಿಟಿವಿಟಿ ರೇಟ್ ಆಧಾರದ ಮೇಲೆ ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನಲ್ಲಿ 500 ಕ್ಕಿಂತ ಕಡಿಮೆ ಪ್ರಕರಣಗಳು ಬರಬೇಕು, ರಾಜ್ಯದಲ್ಲಿ 2 ಸಾವಿರ, ಮೂರು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಬೇಕು. ಆಗ ಮಾತ್ರ ಲಾಕ್ ಡೌನ್ ಕೈ ಬಿಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಕೋವಿಡ್ ಸಂಬಂಧಿತ ಸಚಿವರ ಸಭೆ ಮಂಗಳವಾರ ಇದೆ, ಎರಡು ದಿನಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ಜೂನ್ 5 ಅಥವಾ 6ರೊಳಗೆ ಲಾಕ್‌ಡೌನ್ ಕುರಿತಾಗಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.


from India & World News in Kannada | VK Polls https://ift.tt/3fBaTqc

ನಮ್ಮ ಮೆಟ್ರೋ ಯೋಜನೆಯಿಂದ ಜಕ್ಕೂರು ವಾಯುನೆಲೆ ಬಂದ್ ಆಗುವ ಆತಂಕ..!

ಶ್ರೀಕಾಂತ್‌ ಹುಣಸವಾಡಿ : ಉದ್ದೇಶಿತ ಎಲಿವೇಟೆಡ್‌ ಮೆಟ್ರೋ ರೈಲು ಯೋಜನೆಯಿಂದ ಜಕ್ಕೂರು ವಾಯುನೆಲೆಗೆ ಅಡ್ಡಿಯಾಗಲಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ. ಅಲ್ಲದೆ, ಮೆಟ್ರೋ ಯೋಜನೆಯ ಎತ್ತರವನ್ನು ತಗ್ಗಿಸಬೇಕು, ಇಲ್ಲವೇ ರನ್‌ ವೇ ಉದ್ದ ಕಡಿತ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಶಿಫಾರಸು ಮಾಡಿದೆ. ಜಕ್ಕೂರು ವಾಯುನೆಲೆ ಬಳಿ ಮೆಟ್ರೋ ರೈಲು ಯೋಜನೆಯನ್ನು ಪ್ರಶ್ನಿಸಿ ಬೆಂಗಳೂರಿನ ವಕೀಲ ಅಜಯ್‌ ಕುಮಾರ್‌ ಪಾಟೀಲ್‌ ಸಲ್ಲಿಸಿದ್ದ ಅರ್ಜಿ ಮನವಿ ಆಲಿಸುತ್ತಿರುವ ಸಿಜೆ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಎಎಐ ವರದಿ ಸಲ್ಲಿಸಿದೆ. ವರದಿಯ ವಿವರಗಳೇನು?: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಳೆದ ಏಪ್ರಿಲ್‌ನಲ್ಲಿ ಅಬ್‌ಸ್ಟಾಕಲ್‌ ಲಿಮಿಟೇಷನ್‌ ಸರ್ಫೇಸಸ್‌ (ಒಎಲ್‌ಎಸ್‌) ಸಮೀಕ್ಷೆ ನಡೆಸಿತ್ತು. ಅದರಲ್ಲಿ ಉದ್ದೇಶಿತ ಮೆಟ್ರೋ ರೈಲಿನ ಎಲಿವೇಟೆಡ್‌ ಮಾರ್ಗದಿಂದ ಸರಕಾರಿ ವೈಮಾನಿಕ ತರಬೇತಿ ಶಾಲೆ (ಜಿಎಫ್‌ಟಿಎಸ್‌) ಇರುವ ಜಕ್ಕೂರು ವಾಯುನೆಲೆ ರನ್‌ವೇಗೆ ಧಕ್ಕೆ ಆಗಲಿದೆ ಎಂದು ಹೇಳಿದೆ. ವಾಯುನೆಲೆಗೆ ಮೆಟ್ರೊ ಮಾರ್ಗ ಅಡ್ಡಿಯಾಗಲಿದೆ ಎಂಬುದನ್ನು ಗುರುತಿಸಿ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು () ರಾಜ್ಯ ಸರಕಾರಕ್ಕೆ ಎರಡು ಸಲಹೆಗಳನ್ನು ನೀಡಿದ್ದಾರೆ. ಒಂದು, ನಾಗರಿಕ ವಿಮಾನಯಾನ (ವೈಮಾನಿಕ ಕಾರ್ಯಾಚರಣೆ ಸುರಕ್ಷತೆಗಾಗಿ ಎತ್ತರದ ಮಿತಿ) ನಿಯಮ 2015ರ ಅನ್ವಯ ಮೆಟ್ರೋ ಕಂಬಗಳ ಎತ್ತರವನ್ನು ತಗ್ಗಿಸುವುದು, ಎರಡು ರನ್‌ವೇ ಉದ್ದವನ್ನು ಕಡಿತಗೊಳಿಸುವ ಮೂಲಕ ಇತರೆ ಬಿಕ್ಕಟ್ಟು ನಿವಾರಣಾ ಕ್ರಮ ಕೈಗೊಳ್ಳಬಹುದು. ಈ ಕುರಿತು ಈಗಾಗಲೇ 2021ರ ಮೇ 20ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಡಿಜಿಸಿಎ, ಎಲಿವೇಟೆಡ್‌ ರಾಷ್ಟ್ರೀಯ ಹೆದ್ದಾರಿ 2010ರಿಂದ 2015ರ ನಡುವೆ ನಿರ್ಮಾಣವಾದಾಗ, ಜಕ್ಕೂರು ವಾಯುನೆಲೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ತನ್ನ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಹಾಗಾಗಿ, ಅದನ್ನು ಏನೂ ಮಾಡಲಾಗದು, ರನ್‌ ವೇ ಉದ್ದ ಕಡಿತಗೊಳಿಸಬೇಕು ಎಂದು ಸರಕಾರಕ್ಕೆ ಸೂಚಿಸಿದೆ. ಸರಕಾರ ಕೂಡ ಮೂಲಸೌಕರ್ಯ ಯೋಜನೆ ಮತ್ತು ಜಕ್ಕೂರಿನಲ್ಲಿ ವೈಮಾನಿಕ ಚಟುವಟಿಕೆ ಎರಡನ್ನೂ ಕಾಯ್ದುಕೊಳ್ಳಲು ರನ್‌ ವೇ ಕಡಿತಕ್ಕೆ ಮುಂದಾಗಿದೆ. ಇದಕ್ಕೆ ಅರ್ಜಿದಾರರು ತೀವ್ರ ಆಕ್ಷೇಪ ಎತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ: ಡಿಜಿಸಿಎ ವರದಿ ಮತ್ತು ರಾಜ್ಯದ ಸರಕಾರದ ಮೆಮೋಗೆ ಉತ್ತರಿಸಿರುವ ಅರ್ಜಿದಾರರ ಪರ ವಕೀಲ ಕೆ.ಎನ್‌.ಫಣೀಂದ್ರ, 'ಸರಕಾರ ಮತ್ತು ಡಿಜಿಸಿಎ ಕ್ರಮ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದಕ್ಕೆ ಉದಾಹರಣೆಯಂತಿದೆ. ಹೈಕೋರ್ಟ್‌ ನಿರ್ದೇಶನದ ಹೊರತಾಗಿಯೂ ಹಲವು ಬಾರಿ ಜಕ್ಕೂರು ವಾಯುನೆಲೆಯ ಸರ್ವೆ ಕಾರ್ಯ ನಡೆಸಲು ನಿರಾಕರಿಸಿದ್ದ ಡಿಜಿಸಿಎ, ವಾಯುನೆಲೆ ಮತ್ತು ರನ್‌ ವೇ ಸಂರಕ್ಷಿಸುವ ಬದಲು ತಾನೇ ರನ್‌ ವೇ ಕಡಿತ ಮಾಡಲು ಸರಕಾರಕ್ಕೆ ಶಿಫಾರಸು ಮಾಡಿದೆ' ಎಂದು ಹೇಳಿದ್ದಾರೆ. ಅಲ್ಲದೆ, ಡಿಜಿಸಿಎ ಕ್ರಮ ಏರ್‌ಕ್ರಾಫ್ಟ್‌ ಕಾಯಿದೆ-1934ರ ಮೂಲ ಆಶಯಕ್ಕೆ ವಿರುದ್ಧವಾಗಿದೆ. ನಿಯಮದಂತೆ ವಾಯುನೆಲೆಯ ಸುತ್ತ ಯಾವುದೇ ನಿರ್ಮಾಣ ಕಾರ್ಯಕೈಗೊಳ್ಳುವಂತಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. ಜೂ.18ಕ್ಕೆ ಅಂತಿಮ ವಿಚಾರಣೆ: ಗಂಭೀರ ವಿಚಾರವಾಗಿರುವುದರಿಂದ ನ್ಯಾಯಪೀಠ ಜೂ. 18ರಂದು ಅಂತಿಮ ವಿಚಾರಣೆ ಕೈಗೆತ್ತಿಕೊಂಡು, ಸಾಧ್ಯವಾದಷ್ಟು ಬೇಗ ಇತ್ಯರ್ಥಗೊಳಿಸಲಾಗುವುದೆಂದು ಹೇಳಿದೆ. 60 ಮೀ. ನಿರ್ಮಾಣ ರಹಿತ ವಲಯ: ಜಕ್ಕೂರಿನಲ್ಲಿ ಸರಕಾರಿ ವಿಮಾನ ಹಾರಾಟ ತರಬೇತಿ ಶಾಲೆಯಿದೆ. ಏರೋಡ್ರಮ್‌ನ ರನ್‌ವೇ ಸುತ್ತಮುತ್ತ 60 ಮೀ.ವರೆಗೆ ಕಾಮಗಾರಿ ನಡೆಸುವಂತಿಲ್ಲ. ಅದನ್ನು ನಿರ್ಮಾಣರಹಿತ ವಲಯವೆಂದು ಘೋಷಿಸಲಾಗಿದೆ. ಉದ್ದೇಶಿತ ಕಾಮಗಾರಿಯಿಂದ ಬಹುತೇಕ ಜಕ್ಕೂರು ವಾಯುನೆಲೆ ಬಂದ್‌ ಆಗಲಿದೆ ಮತ್ತು ಐತಿಹಾಸಿಕ ವಾಯುನೆಲೆ ಪ್ರದೇಶ ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇದೆ ಎಂಬುದು ಅರ್ಜಿದಾರರ ವಾದ. ಸದ್ಯಕ್ಕೆ ಮೆಟ್ರೊ ಕಾಮಗಾರಿ ಸ್ಥಗಿತ: ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆಯಾದ ನಂತರ ನ್ಯಾಯಾಲಯ ವಿಚಾರಣೆ ನಡೆಸಿ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ 2020ರ ಸೆ.28ರಂದು ಮೆಟ್ರೋ ಕಾಮಗಾರಿಗೆ ತಡೆ ನೀಡಿದೆ. ಹಾಗಾಗಿ, ಸದ್ಯ ಮೆಟ್ರೋ ಕಾಮಗಾರಿ ಸ್ಥಗಿತಗೊಂಡಿದೆ. ಕಾನೂನು ವ್ಯಾಜ್ಯ ಇತ್ಯರ್ಥವಾಗುವವರೆಗೂ ಕಾಮಗಾರಿ ಆರಂಭ ಅನುಮಾನವಾಗಿದೆ.


from India & World News in Kannada | VK Polls https://ift.tt/3yRh40D

ಕೊರೊನಾ ಲಸಿಕೆಗೆ ಪ್ರಮಾಣ ಪತ್ರ ಕಡ್ಡಾಯ.. ಲಾಕ್‌ಡೌನ್ ನಡುವೆ ಇಕ್ಕಟ್ಟಿನಲ್ಲಿ ಗ್ರಾಮೀಣ ಜನತೆ..

ಎಂ. ಪ್ರಶಾಂತ್‌ ಸೂಲಿಬೆಲೆ (): ಒಂದು ಕಡೆ ಸರಕಾರ ಪ್ರತಿಯೊಬ್ಬರೂ ಕೊರೊನಾ ಹಾಕಿಸಿಕೊಳ್ಳಬೇಕು ಅಂತೇಳಿದೆ. ಇನ್ನೊಂದು ಕಡೆ ಅದೇ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕಾದರೆ ನೂರೆಂಟು ನಿರ್ಬಂಧ ಹಾಕಿ ಲಸಿಕೆ ಜನರ ಕೈಗೆಟುಕದಂತೆ ಮಾಡಿದೆ. ವ್ಯಾಕ್ಸಿನ್‌ ಬೇಕಾದರೆ ಪತ್ರ ತನ್ನಿ ಎಂಬ ಸರಕಾರಿ ಆಸ್ಪತ್ರೆ ವೈದ್ಯರ ಸೂಚನೆಗೆ ಗ್ರಾಮೀಣರು ಪರದಾಡುತ್ತಿದ್ದಾರೆ. ಬಿಗಿ ಕರ್ಫ್ಯೂ ಇರುವಾಗ ಜಿಲ್ಲಾ ಕೇಂದ್ರಗಳಿಗೆ ಹೋಗಿ ಪತ್ರ ತರೋದು ಹೇಗೆ ಎಂದು ಹೈರಾಣಾಗುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ. ರಾಜ್ಯದಲ್ಲಿ ಕೋವಿಡ್‌ ಅಬ್ಬರ ಜೋರಾಗು ತ್ತಿದ್ದಂತೆಯೇ ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆ ಪಡೆಯುವುದೊಂದೇ ಮಾರ್ಗ ಎಂದರಿತ ಸರಕಾರ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ 60 ವರ್ಷದ ಒಳಗಿನವರಿಗೆ ಲಸಿಕೆ ನೀಡಲು ಮುಂದಾಯಿತು. ಇದಾದ ಮೇಲೆ 18 ವರ್ಷದವರಿಗೂ ಲಸಿಕೆ ಅಂತೇಳಿತಾದ್ರೂ, ಇಂದು - ನಾಳೆ ಅಂತಾ ಮುಂದಕ್ಕೆ ಹೋಗುತ್ತಿದೆಯೇ ವಿನಃ ಅವರಿಗೆ ಲಸಿಕೆ ಭಾಗ್ಯ ಸಿಗುತ್ತಿಲ್ಲ. ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನೂರೆಂಟು ನಿಬಂಧನೆಗಳನ್ನು ತಂದಿಟ್ಟು ಜನರ ಪರದಾಟಕ್ಕೆ ಕಾರಣವಾಗಿದೆ. ಅನೆಕ್ಸ್‌ ಫಾರ್ಮ್ ಕಡ್ಡಾಯ: ಸದ್ಯ ಸರಕಾರದ ಸೂಚನೆ ಅನ್ವಯ, 18 ವರ್ಷ ಮೇಲ್ಪಟ್ಟವರು ತಮ್ಮ ವೃತ್ತಿಯ ಬಗ್ಗೆ ಅನೆಕ್ಸ್‌-3 ಫಾರ್ಮ್ ಸಲ್ಲಿಕೆ ಮಾಡಬೇಕು. ಈ ಫಾರ್ಮ್‌ನಲ್ಲಿ ಫೋನ್‌ ನಂಬರ್ ಸಹಿತ ಎಲ್ಲ ಮಾಹಿತಿ ತುಂಬಿ ಸಂಬಂಧಿಸಿದ ನೋಡಲ್‌ ಅಧಿಕಾರಿಯಿಂದ ಸಹಿ ಹಾಕಿಸಿ, ವೈದ್ಯರಿಗೆ ನೀಡಿದರೆ ಮಾತ್ರ ಕೋವಿಡ್‌ ಲಸಿಕೆ ಹಾಕಲಾಗುತ್ತದೆ. ಫಾರ್ಮ್ ಇಲ್ಲ ಅಂದರೆ ಲಸಿಕೆ ಹಾಕಲ್ಲ. ಅಲೆದಾಟ: ಅನೆಕ್ಸ್‌ ಫಾರ್ಮ್ ಭರ್ತಿ ಮಾಡಿ ಅದನ್ನು ಸಂಬಂಧಿಸಿದ ನೋಡಲ್‌ ಅಧಿಕಾರಿಗಳಿಂದ ಸಹಿ ಪಡೆಯಲು ಅವರನ್ನು ಜಿಲ್ಲಾ, ತಾಲೂಕು ಕೇಂದ್ರಗಳಿಗೆ ಹುಡುಕಿಕೊಂಡು ಹೋಗಬೇಕಿದೆ. ಸದ್ಯ ಬಿಗಿ ಕರ್ಫ್ಯೂ ಇರೋದ್ರಿಂದ ಜನರಿಗೆ ಸಾರಿಗೆ ವ್ಯವಸ್ಥೆಯಿಲ್ಲ. ದ್ವಿಚಕ್ರ ವಾಹನಗಳಲ್ಲಿ ಹೋದರೆ ಪೊಲೀಸರು ಹಿಡಿದು ಕೇಸ್‌ ಹಾಕ್ತಾರೆ. ಜನ ಅರ್ಹ ಪ್ರಮಾಣ ಪತ್ರಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಗಳಲ್ಲಿ ಲಸಿಕೆ ಇದ್ದರೂ ಜನರಿಗೆ ಸಿಗದಂತಾಗಿದೆ. ಅರ್ಹ ನೀಡಲು ಅನುಷ್ಠಾನಾಧಿಕಾರಿ, ನೋಡಲ್‌ ಅಧಿಕಾರಿಗಳು ಕೈಗೆ ಸಿಗದಂತಾಗಿದ್ದಾರೆ. ಇದು ಜನರಿಗೆ ಸಮಸ್ಯೆಯಾಗಿದೆ. ಯಾವುದಕ್ಕೆ ಯಾರು ಪತ್ರ ನೀಡ್ತಾರೆ ಗೊತ್ತಾ?: ವಿಕಲ ಚೇತನರಿಗೆ ಜಿಲ್ಲಾ ವಿಕಲ ಚೇತನರ ಅಧಿಕಾರಿಗಳು, ಕೈದಿಗಳಿಗೆ ಅಧೀಕ್ಷರು, ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯ ಸಹಾಯಕರಿಗೆ ನಗರಸಭೆ, ಪುರಸಭೆ ಮುಖ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರಿಗೆ ತಾಲೂಕು ಆರೋಗ್ಯಾಧಿಕಾರಿಗಳು, ಕೋವಿಡ್‌ ಕೆಲಸಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರಿಗೆ ಡಿಡಿಪಿಐ, ಸರಕಾರಿ ಸಾರಿಗೆ ಸಿಬ್ಬಂದಿಗೆ ಸಾರಿಗೆ ವ್ಯವಸ್ಥಾಪಕರು, ಆಟೋ, ಕ್ಯಾಬ್‌ ಚಾಲಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಿದ್ಯುತ್‌ ಸರಬರಾಜು ಸಿಬ್ಬಂದಿಗೆ ಇಇ ಬೆಸ್ಕಾಂ, ಅಂಚೆ ಇಲಾಖೆ ಸಿಬ್ಬಂದಿಗೆ ಅಂಚೆ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರಿಗೆ ಮುಖ್ಯಾಧಿಕಾರಿಗಳು, ನಗರಸಭೆ, ಪುರಸಭೆ, ಗ್ರಾಪಂ ಭದ್ರತಾ ಸಿಬ್ಬಂದಿ, ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ ಕಾರ್ಮಿಕ ನಿರೀಕ್ಷಕರು, ನ್ಯಾಯಾಂಗ ಅಧಿಕಾರಿಗಳು, ವ್ಯವಸ್ಥಾಪಕರಿಗೆ ಸಂಬಂಧಪಟ್ಟ ತಾ. ನ್ಯಾಯಾಲಯಗಳು, ಎಪಿಎಂಸಿಗಳಿಗೆ ಕಾರ್ಯದರ್ಶಿಗಳು ಪ್ರಮಾಣ ಪತ್ರ ನೀಡುತ್ತಾರೆ. ಪ್ರಮಾಣಪತ್ರ ಇಲ್ಲ ಅಂದರೆ ಇಂಜೆಕ್ಷನ್‌ ಇಲ್ಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಸರಕಾರಿ ಆಸ್ಪತ್ರೆ ಸೇರಿದಂತೆ ಬಹುತೇಕ ಕಡೆ ಅನೆಕ್ಸ್‌ ಅರ್ಹತಾ ಪ್ರಮಾಣ ಪತ್ರ ಇಲ್ಲ ಅಂದರೆ ಲಸಿಕೆ ಹಾಕುತ್ತಿಲ್ಲ. ಜನ ನಿತ್ಯ ಲಸಿಕೆಗಾಗಿ ಆಸ್ಪತ್ರೆಗಳತ್ತ ಅಲೆದಾಟ ನಡೆಸಿ ವಾಪಸ್‌ ಆಗುತ್ತಿದ್ದಾರೆ. ವೈದ್ಯರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಗಳಿಂದ ಗ್ರಾಮೀಣರು ಹೈರಾಣಾಗುತ್ತಿದ್ದಾರೆ.


from India & World News in Kannada | VK Polls https://ift.tt/3fV75yQ

ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ, ಡಿಕೆಶಿ ಆರೋಪ

ಹುಬ್ಬಳ್ಳಿ: ಇಲ್ಲಿಯವರೆಗೂ ಸರ್ಕಾರ ನೀಡಿದ ಕೋವಿಡ್‌ ಪರಿಹಾರ ರೈತರಿಗೆ ಸಿಕ್ಕಿಲ್ಲ ಎಂದು ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಧಾರವಾಡ ತಾಲೂಕಿನ ರಾಯಾಪುರದಲ್ಲಿ ಮಾತನಾಡಿದ ಅವರು, ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡು ಗಂಟೆ ಅವಕಾಶ ನೀಡ್ತಾರೆ ಆದ್ರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ನಿಮಗೆ ಕಣ್ಣು, ಹೃದಯ ಇದಿಯಾ..? ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಕೊಡಿ, ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲವು ಮಿನಿಸ್ಟರ್ ಗಳನ್ನ ಜಿಲ್ಲೆಗೆ ಕಳಿಸಿದ್ರಿ‌ ಎಂದು ಕಿಡಿಕಾರಿದರು. ನಾವು ರೈತರ ಜೊತೆ ನಿಲ್ಲುತ್ತೇವೆ, ಲಾಕ್ ಡೌನ್ ವಿಸ್ತರಣೆ ಬಗ್ಗೆ ನಾನೇನು ಹೇಳಲಾರೆ. ಅದು ಸರ್ಕಾರದ ನಿರ್ಧಾರ, ಅವರೇನಾದ್ರು ಮಾಡಿಕೊಳ್ಳಲಿ. ನನಗೆ ಸರ್ಕಾರ ಕೇಳಿದ್ರೆ ನನ್ನ ಅಭಿಪ್ರಾಯ ಹೇಳ್ತೀನಿ, ಆವಾಗ ಉತ್ತರ ಕೊಡ್ತೀನಿ ಎಂದರು. ರೈತರ ಹೊಲಗಳಿಗೆ ಭೇಟಿ ಹುಬ್ಬಳ್ಳಿಯಲ್ಲಿ ರೈತರ ಹೊಲಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡಿ ರೈತರ ಜೊತೆಗೆ ಮಾತುಕತೆ ನಡೆಸಿದರು. ಧಾರವಾಡ ಜಿಲ್ಲೆಯ ರಾಯಪುರ ಗ್ರಾಮದ ರೈತರ ಹೊಲಗಳಿಗೆ ಭೇಟಿದ ಸಂದರ್ಭದಲ್ಲಿ ಕೊರೊನಾ ಕಾರಣಕ್ಕೆ ಬೆಳೆದ ಬೆಳೆಗಳು ಮಾರಾಟ ಮಾಡಲು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ನಾವು ಬೆಳೆದ ತರಕಾರಿ ಮಾರಾಟ ಮಾಡಲು ಪೊಲೀಸರು ಬಿಡುತ್ತಿಲ್ಲ. ಮೆಣಸಿನಕಾಯಿ ನಲವತ್ತು ರೂಪಾಯಿ ಇದ್ದ ಬೆಲೆ ಈಗ ಒಂದು ರೂಪಾಯಿ ಸಹ ಕೇಳುತ್ತಿಲ್ಲ, ಅಷ್ಟೇ ಅಲ್ಲದೆ ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಆಗುತ್ತಿಲ್ಲ. ಬಿತ್ತನೆ ಬೀಜ ವಿತರಣೆ ಕೇವಲ 5 ಎಕರೆಗೆ ಮಾತ್ರ ನೀಡಲಾಗುತ್ತಿದೆ. 8-10 ಎಕರೆ ಜಮೀನು ಹೊಂದಿರುವ ರೈತರಿಗೆ ಬಿತ್ತನೆ ಬೀಜ‌ದ ಕೊರತೆ ಆಗುತ್ತಿದೆ. ಇನ್ನುಳಿದ ಜಮೀನಿಗೆ ಬಿತ್ತನೆ ಬೀಜ‌ ಎಲ್ಲಿಂದ ತರುವುದು..? ಇನ್ನೂ ರಸಗೊಬ್ಬರ ಸಹ ಸಮರ್ಪಕವಾಗಿ ನೀಡುತ್ತಿಲ್ಲ, ಕೇವಲ ಮೂರು ಚೀಲ ಮಾತ್ರ ನೀಡಲಾಗುತ್ತಿದೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುಂದೆ ರೈತರು ಅಳಲು ತೋಡಿಕೊಂಡರು.


from India & World News in Kannada | VK Polls https://ift.tt/3p2VjXs

ರಾಜ್ಯದಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಎಷ್ಟು? ಅವರ ಸ್ಥಿತಿ ಹೇಗಿದೆ..?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಹಲವು ಕುಟುಂಬಗಳನ್ನು ಛಿದ್ರಗೊಳಿಸಿದೆ. ಅಷ್ಟು ಮಾತ್ರವಲ್ಲ ಹಲವು ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಹೌದು, ರಾಜ್ಯ ಸರ್ಕಾರ ನೀಡುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಒಟ್ಟು 13 ಮಕ್ಕಳು ತಮ್ಮ ಪೋಷಕರನ್ನು ಅಂದರೆ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಆರಂಭದಲ್ಲಿ ಮಂಡ್ಯ ಹಾಗೂ ಚಾಮರಾಜನಗರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿತ್ತು. ಆದರೆ ಇದೀಗ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ರಾಯಚೂರು ಜಿಲ್ಲೆಯೊಂದರಲ್ಲೇ ಮೂರು ಪ್ರಕರಣಗಳು ಪತ್ತೆಯಾಗಿದ್ದು 4 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳಲ್ಲಿ 3 ಮಕ್ಕಳು ತಂದೆ -ತಾಯಿಯನ್ನು ಕಳೆದುಕೊಂಡರೆ,ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಪ್ರಕರಣದಲ್ಲಿ 3 ಮಕ್ಕಳು ಅನಾಥರಾಗಿದ್ದಾರೆ. ಚಾಮರಾಜನಗರದಲ್ಲಿ 1, ಮಂಡ್ಯದಲ್ಲಿ 1 ಹಾಗೂ ದಾವಣಗೆರೆಯಲ್ಲೂ 1 ಪ್ರಕರಣ ವರದಿಯಾಗಿದೆ. ಒಟ್ಟು 9 ಕುಟುಂಬಗಳಲ್ಲಿ 13 ಮಕ್ಕಳು ಕೋವಿಡ್ ಕಾರಣದಿಂದಾಗಿ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಸುರಕ್ಷತೆಗೆ ಕ್ರಮ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಸುರಕ್ಷತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಅನಾಥ ಮಕ್ಕಳ ಕ್ಷೇಮ ಹಾಗೂ ಸುರಕ್ಷತೆಯ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ. ಸದ್ಯ ಎಲ್ಲ ಮಕ್ಕಳು ತಮ್ಮ ಸಂಬಂಧಿಕರ ಆಶ್ರಯದಲ್ಲಿದ್ದು ಸುರಕ್ಷಿತರಾಗಿದ್ದಾರೆ. ಹೀಗಿದ್ದರೂ ಸಿಡಬ್ಲ್ಯೂಸಿ ಮೂಲಕ ಮಕ್ಕಳ ಮೇಲೆ ನಿಗಾ ಇಡಲಾಗಿದೆ. ಸದ್ಯ 13 ಮಕ್ಕಳು ಪತ್ತೆಯಾಗಿದ್ದು, ಇಲಾಖೆಯ ಮೂಲಕ ಮತ್ತಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಅನಾಥ ಮಕ್ಕಳ ಸಂರಕ್ಷಣೆಗಾಗಿ ನೇಮಕಗೊಂಡ ನೋಡಲ್ ಅಧಿಕಾರಿ ಕೆ.ಪಿ ಮೋಹನ್ ರಾಜ್ 'ವಿಜಯ ಕರ್ನಾಟಕ ವೆಬ್‌'ಗೆ ತಿಳಿಸಿದ್ದಾರೆ. ಅನಾಥ ಮಕ್ಕಳಿಗೆ ಸರ್ಕಾರದಿಂದ ನೆರವು ಕೋವಿಡ್‌ನಿಂದ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಸರ್ಕಾರ ಯೋಜನೆಯನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಮೂಲಕ ಪ್ರತಿ ತಿಂಗಳು 3,500 ರೂ. ಸಹಾಯ ಧನವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ತಂದೆ -ತಾಯಿಯನ್ನು ಕಳೆದುಕೊಂಡ 10 ವರ್ಷದ ಒಳಗಿನ ಮಕ್ಕಳಿದ್ದರೆ ಅವರನ್ನು ಆರೈಕೆ ಮಾಡಲು ಯಾವುದೇ ಕುಟುಂಬದ ಸದಸ್ಯರು ಲಭ್ಯವಿಲ್ಲದಿದ್ದರೆ, ಮಕ್ಕಳನ್ನು ನೊಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಿಸಿ ಆರೈಕೆ ನೀಡಲಾಗುವುದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮಾದರಿ ವಸತಿ ಶಾಲೆಗಳಾದ ಕಸ್ತೂರ್ ಬಾ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. 10 ನೇ ತರಗತಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಅಥವಾ ಕೌಶಲ್ಯ ಅಭಿವೃದ್ಧಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್‌ ನೀಡುವುದು. 21 ವರ್ಷ ಪೂರೈಸಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಮದುವೆ, ಸ್ವಯಂ ಉದ್ಯೋಗಕ್ಕೆ1 ಲಕ್ಷ ರೂ. ಸಹಾಯಧನ ಹಾಗೂ ಕೊವಿಡ್‌ನಿಂದ ಅನಾಥವಾಗುವ ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿಯನ್ನು ಒದಗಿಸಿ, ಅವರ ಮೂಲಕ ಸಹಾಯ ಹಾಗೂ ಮಾರ್ಗದರ್ಶನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.


from India & World News in Kannada | VK Polls https://ift.tt/2SJ6iJz

WTC Final: ಭಾರತ ತಂಡದಲ್ಲಿನ ಗಂಭೀರ ಸಮಸ್ಯೆ ಬಹಿರಂಗಪಡಿಸಿದ ಭಾರದ್ವಾಜ್‌!

ಹೊಸದಿಲ್ಲಿ: ಇಂಗ್ಲೆಂಡ್‌ ಸೌತಾಮ್ಟನ್‌ನ ರೋಸ್‌ ಬೌಲ್‌ನಲ್ಲಿ ಜೂನ್‌ 18 ರಿಂದ 22ರವರೆಗೆ ನಡೆಯುವ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಹಾಲಿ ಹಾಗೂ ಮಾಜಿ ಆಟಗಾರರು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಬಗ್ಗೆಯೂ ಹಲವು ದಿಗ್ಗಜರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಭಾರತ ತಂಡದ ಮಾಜಿ ನಾಯಕ ಹಾಗೂ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯ ನಿರ್ದೇಶಕ ರಾಹುಲ್‌ ದ್ರಾವಿಡ್‌, ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಮ್‌ ಇಂಡಿಯಾ ಗೆಲ್ಲುವ ನೆಚ್ಚಿನ ತಂಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಇಂಗ್ಲೆಂಡ್‌ ತಂಡದ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಗಸ್ಟ್‌ನಲ್ಲಿ ಇಲ್ಲಿನ ವಾತಾವರಣ ಸ್ಪಿನ್‌ ಸ್ನೇಹಿಯಾಗಿದ್ದರೆ, ಭಾರತ 5-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಭಾರತ ತಂಡದ ಮಾಜಿ ಆಲ್‌ರೌಂಡರ್ ಹಾಗೂ ಕನ್ನಡಿಗ ಮಾತನಾಡಿದ್ದು, ಇಂಗ್ಲೆಂಡ್‌ ಪ್ರವಾಸ ಮಾಡುತ್ತಿರುವ ಭಾರತ ತಂಡದಲ್ಲಿರುವ ಒಂದೇ ಒಂದು ಸಮಸ್ಯೆಯನ್ನು ಪತ್ತೆ ಹಚ್ಚಿದ್ದಾರೆ ಹಾಗೂ ಇದನ್ನು ಸರಿಪಡಿಸಿಕೊಂಡರೆ ಟೀಮ್‌ ಇಂಡಿಯಾ ಬಲಿಷ್ಠವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್‌ಕೀಡಾದೊಂದಿಗೆ ಮಾತನಾಡಿರುವ ಭಾರದ್ವಾಜ್‌, " ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್‌ ಗಿಲ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಹೆಚ್ಚಿನ ಅನುಭವ ಇಲ್ಲ ಹಾಗೂ ರೋಹಿತ್‌ ಶರ್ಮಾಗೆ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವದ ಕೊರತೆ ಇದೆ. ಚೇತೇಶ್ವರ್‌ ಪೂಜಾರ ಹಾಗೂ ನಾಯಕ ವಿರಾಟ್‌ ಕೊಹ್ಲಿಯನ್ನು ಬಹುಬೇಗ ಕ್ರೀಸ್‌ಗೆ ಕರೆತರಲು ನ್ಯೂಜಿಲೆಂಡ್‌ ಎದುರು ನೋಡುತ್ತಿದೆ. ಹಾಗಾಗಿ, ರೋಹಿತ್‌ ಹಾಗೂ ಗಿಲ್‌ ಜೋಡಿಯಿಂದ ಭಾರತಕ್ಕೆ ಉತ್ತಮ ಆರಂಭದ ಅಗತ್ಯವಿದೆ. ಆರಂಭಿಕ ಸ್ಥಾನ ದುರ್ಬಲವಾಗಿದ್ದರೆ, ಮಧ್ಯಮ ಕ್ರಮಾಂಕ ಕೂಡ ದುರ್ಬಲವಾಗಿದೆ. ರೋಹಿತ್ ಶರ್ಮಾಗೆ ಎದುರಾಗಿರುವ ಟೆಸ್ಟ್ ಅನ್ನು ಅವರು ಪಾಸ್‌ ಮಾಡಬೇಕಾದ ಅಗತ್ಯವಿದೆ," ಎಂದು ಹೇಳಿದ್ದಾರೆ. ಡಬ್ಲ್ಯುಟಿಸಿ ಫೈನಲ್‌ಗೂ ಮುನ್ನ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ನ್ಯೂಜಿಲೆಂಡ್ ತಂಡ ಭಾರತದ ಎದುರು ಒಂದು ಕೈ ಮೇಲುಗೈ ಸಾಧಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಆದಷ್ಟು ಬೇಗ ಇಂಗ್ಲೆಂಡ್‌ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸಬೇಕಾಗಿದೆ ಎಂಬುದನ್ನು ಭಾರದ್ವಾಜ್‌ ಉಲ್ಲೇಖಿಸಿದ್ದಾರೆ. " ಇಂಗ್ಲೆಂಡ್‌ ಪ್ರವಾಸ ಮಾಡಲಿರುವ ಭಾರತ ತಂಡ ನೇರವಾಗಿ ಪಂದ್ಯ ಆಡಲಿದೆ. ಇಲ್ಲಿನ (ಇಂಗ್ಲೆಂಡ್‌) ಪರಿಸ್ಥಿತಿಗಳಿಗೆ ಹೊಂದಿಕೊಂಡು ಆಡುವುದು ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ. ಒಮ್ಮೆ ನೀವು ಇಲ್ಲಿ ಹೊಂದಿಕೊಂಡರೆ ಸೆಂಚುರಿ ಬಾರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಇಂತಹ ಪರಸ್ಥಿತಿಯಲ್ಲಿ ಆಡುವ ಸಾಮರ್ಥ್ಯ ಈ ಹಿಂದೆ ರಾಹುಲ್‌ ದ್ರಾವಿಡ್‌ ಅವರಲ್ಲಿತ್ತು. 40 ರಿಂದ 50 ರನ್‌ ಗಳಿಸುವ ಮೂಲಕ ತಮ್ಮ ಕೆಲಸ ಮುಗಿಯಿತು ಎಂದು ರೋಹಿತ್‌ ಹಾಗೂ ಗಿಲ್‌ ಅಂದುಕೊಳ್ಳಬಾರದು. ಭಾರತದ ದುರ್ಬಲ ಬ್ಯಾಟಿಂಗ್‌ ಕ್ರಮಾಂಕವೂ ಚಿಂತಾಜನಕವಾಗಿದೆ," ಎಂದು ಮಾಜಿ ಆಲ್‌ರೌಂಡರ್‌ ವಿಜಯ್‌ ಭಾರದ್ವಾಜ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wKORa9

ಕೋವಿಡ್‌ ಲಾಕ್‌ಡೌನ್: ವಿಸ್ತರಣೆಯೋ, ಸಡಿಲಿಕೆಯೋ? ಸರ್ಕಾರದ ನಿಲುವೇನು

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವಿಸ್ತರಣೆ ಆಗುತ್ತಾ ಅಥವಾ ಸಡಿಲಿಕೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಇನ್ನು ಗೊಂದಲಮಯವಾಗಿದೆ. ರಾಜ್ಯ ಸರ್ಕಾರ ತಜ್ಞರ ಅಭಿಪ್ರಾಯಗಳನ್ನು ಪಡೆದುಕೊಂಡು ಲಾಕ್‌ಡೌನ್‌ ಕುರಿತಾಗಿ ಜೂನ್ 5 ಅಥವಾ 6 ರಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಆದರೆ ಲಾಕ್‌ಡೌನ್ ವಿಸ್ತರಣೆ ಆಗುತ್ತಾ ಇಲ್ಲವಾ ಎಂಬ ಪ್ರಶ್ನೆಗೆ ಸರ್ಕಾರದಿಂದ ಇನ್ನು ಖಚಿತವಾದ ಉತ್ತರ ಸಿಗುತ್ತಿಲ್ಲ. ಮೂಲಗಳ ಪ್ರಕಾರ ಕೋವಿಡ್ ಲಾಕ್‌ಡೌನ್ ವಿಸ್ತರಣೆಗೆ ಸಚಿವರಲ್ಲಿ ಒಮ್ಮತವಿಲ್ಲ. ಲಾಕ್‌ಡೌನ್‌ನಿಂದ ಆರ್ಥಿಕತೆ ನೆಲಕಚ್ಚಿದ್ದು ಮತ್ತೆ ವಿಸ್ತರಣೆ ಮಾಡಿದ್ದಲ್ಲಿ ಸಂಕಷ್ಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಬೇಕು ಎಂಬ ಅಭಿಪ್ರಾಯಗಳು ಕೆಲವು ಸಚಿವರಿಂದ ವ್ಯಕ್ತವಾಗುತ್ತಿದೆ. ಆದರೆ ಮತ್ತೆ ಕೆಲವರು ಲಾಕ್‌ಡೌನ್ ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ 20,378 ಕ್ಕೆ ಇಳಿಕೆಯಾಗಿದೆ. ಭಾನುವಾರ 28,053 ಜನರು ಕೋವಿಡ್‌ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 342010 ರಷ್ಟಿದ್ದರೆ, ಭಾನುವಾರ ಕೋವಿಡ್‌ ನಿಂದ 382 ಜನರು ಮೃತಪಟ್ಟಿದ್ದಾರೆ. ಇನ್ನು ಕೋವಿಡ್ ಖಚಿತ ಪ್ರಕರಣಗಳ ಶೇಖಡಾವಾರು ಪ್ರಮಾಣ - 14.68 ರಷ್ಟಿದೆ. ಮೃತಪಟ್ಟವರ ಶೇಕಡಾವಾರು ಪ್ರಮಾಣ- 1.87 ರಷ್ಟಿದೆ. ಬೆಂಗಳೂರು ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಭಾನುವಾರ 4734 ಪ್ರಕರಣಗಳು ವರದಿಯಾಗಿವೆ. ಆದರೆ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಹಾಸನದಲ್ಲಿ 2227 ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ 1559 ಪ್ರಕರಣಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ತಜ್ಞರ ಪ್ರಕಾರ ಶೇ 5 ರಷ್ಟು ಪಾಸಿಟಿವಿಟಿ ಪ್ರಮಾಣ ಬಂದಲ್ಲಿ ಲಾಕ್‌ಡೌನ್ ವಿಸ್ತರಣೆ ಅಗತ್ಯವಿಲ್ಲ. ಆದರೆ ಸದ್ಯ ಖಚಿತ ಪ್ರಕರಣಗಳ ಶೇಖಡಾವಾರು ಪ್ರಮಾಣ - 14.68 ರಷ್ಟಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ವಿಸ್ತರಣೆ ಅಗತ್ಯ ಎನ್ನುತ್ತಾರೆ. ಆದರೆ ಜೂನ್ 7 ರ ಬಳಿಕ ಲಾಕ್‌ಡೌನ್ ವಿಸ್ತರಣೆ ಮಾಡದೆ ಕೆಲವು ಬಿಗಿ ನಿಯಮಗಳನ್ನು ಜಾರಿಗೆ ತಂದು ಹೆಚ್ಚು ಜನರು ಸೇರದಂತೆ ಕ್ರಮ ಕೈಗೊಳ್ಳಿ ಸಲಹೆಗಳು ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಎರಡು ಕಡೆಗಳಲ್ಲಿ ಅವಲೋಕನ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಜೀವ ಹಾಗೂ ಜೀವನ ಎರಡೂ ಮುಖ್ಯವಾಗಿದೆ. ಎರಡಕ್ಕೂ ಅಡಚಣೆ ಉಂಟಾಗದ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳಲಿ ಎಂಬುವುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.


from India & World News in Kannada | VK Polls https://ift.tt/3fwnZ7X

ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಲು ನೆರವಾದ ದಿಗ್ಗಜನನ್ನು ನೆನೆದ ಜಡೇಜಾ!

ಹೊಸದಿಲ್ಲಿ: ಪ್ರಸ್ತುತ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಕೂಡ ಒಬ್ಬರು. ತಮ್ಮ ಸ್ಪಿನ್‌ ಬೌಲಿಂಗ್‌ ಮೂಲಕವೇ ಅವರು ಮೋಡಿ ಮಾಡುವುದಿಲ್ಲ. ಜತೆಗೆ, ತಮ್ಮ ಬಿರುಸಿನ ಬ್ಯಾಟಿಂಗ್‌ ಮೂಲಕವೂ ಪಂದ್ಯ ಗೆದ್ದು ಕೊಡುವ ಸಾಮರ್ಥ್ಯ ಜಡೇಜಾಗೆ ಇದೆ. ಇದರ ನಡುವೆ ಮೈದಾನದಲ್ಲಿ ಅದ್ಭುತ ಫೀಲ್ಡಿಂಗ್‌ ಮಾಡುವ ಕೌಶಲವನ್ನು ಎಡಗೈ ಆಟಗಾರ ಕರಗತ ಮಾಡಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್‌ನಲ್ಲಿ ಗಣನೀಯ ಸುಧಾರಣೆ ಕಂಡಿದ್ದಾರೆ. ಅಲ್ಲದೆ, ಎಲ್ಲಾ ಸ್ವರೂಪದ ಭಾರತ ತಂಡದ ಕೆಳ ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ವಿಶ್ವಸಾರ್ಹ ಬ್ಯಾಟ್ಸ್‌ಮನ್‌ ಆಗಿ ಹೊರ ಹೊಮ್ಮಿದ್ದಾರೆ. ಪಂದ್ಯದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಸ್ಫೋಟಕ ಬ್ಯಾಟಿಂಗ್‌ ಹಾಗೂ ನಿಧಾನಗತಿಯ ಬ್ಯಾಟ್‌ ಮಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಅಂದಹಾಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲಿ ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್‌ನಲ್ಲಿಸಮಸ್ಯೆಯನ್ನು ಹೊಂದಿದ್ದರು. ಅದರಂತೆ ಅವರ ಶಾಟ್‌ ಸೆಲೆಕ್ಷನ್‌ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ವೇಳೆ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವಲ್ಲಿ ಅವರು ಹೆಣಗಾಡುತ್ತಿದ್ದರು. ಇತ್ತೀಚೆಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಂದರ್ಶನದಲ್ಲಿ ರವೀಂದ್ರ ಜಡೇಜಾಗೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, 2015ರ ಏಕದಿನ ವಿಶ್ವಕಪ್‌ ಸಮಯದಲ್ಲಿ ಇದೇ ಸಮಸ್ಯೆಯನ್ನು ನನ್ನ ಬಳಿ ಹೇಳಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದರು. "ನಾನು ಪ್ರಯತ್ನಿಸದ ಎಸೆತಗಳ ವಿರುದ್ಧ ಬಲವಾಗಿ ಹೊಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದು ನನಗೆ ಈಗಲೂ ನೆನಪಿದೆ," ಎಂದು ಜಡೇಜಾ 5 ವರ್ಷಗಳ ಹಿಂದಿನ ಸಂಗತಿಯನ್ನು ಸ್ಮರಿಸಿಕೊಂಡರು. "ಶಾಟ್‌ ಸೆಲೆಕ್ಷನ್‌ ವಿಷಯದಲ್ಲಿ ತಪ್ಪು ಮಾಡುತ್ತಿದ್ದೇನೆಂಬ ಬಗ್ಗೆ ನನಗೂ ಆ ವೇಳೆ ಅನಿಸಿತ್ತು. ಆದರೆ, ಆರಂಭದಲ್ಲಿ ನನ್ನ ತೀರ್ಪು ಸರಿಯಾಗಿರಲಿಲ್ಲ. "ಶಾಟ್‌ ಹೊಡೆಯಬೇಕಾ? ಅಥವಾ ಬೇಡವಾ? ಎಂಬಂತೆ ಎರಡು ಮನಸಿನಿಂದ ಆಡುತ್ತಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ನನ್ನ ಸಮಯವನ್ನು ತೆಗೆದುಕೊಳ್ಳುವುದನ್ನು ನಾನು ಇಷ್ಟಪಡುತ್ತೇನೆ ಹಾಗೂ ನನ್ನ ಮನಸಿನಲ್ಲಿಯೂ ಯಾವುದೇ ವಿಷಯಗಳಿಲ್ಲ. ತಡವಾಗಿ ನಾನು ರನ್‌ ಗಳಿಸುತ್ತೇನೆಂಬ ವಿಶ್ವಾಸ ನನ್ನಲ್ಲಿದೆ. ಈ ರೀತಿಯ ಯೋಚನೆ ಬದಲಾಯಿಸಿದ್ದು ನನಗೆ ಸಹಾಯವಾಗಿದೆ," ಎಂದು ಅವರು ಹೇಳಿದರು. "ಹೌದು ಶಾರ್ಟ್‌ ಎಸೆತದಲ್ಲಿ ನೀವು ಸಿಕ್ಸರ್‌ ಸಿಡಿಸಿದರೆ ನಿಮ್ಮ ವಿಶ್ವಾಸದ ಮಟ್ಟ ಅಗ್ರ ಸ್ಥಾನಕ್ಕೇರುತ್ತದೆ. ಬೌನ್ಸರ್‌ನಲ್ಲಿ ನಾನು ಎಂದಿಗೂ ಸಮಸ್ಯೆ ಎದುರಿಸಿಲ್ಲ. ಬೌನ್ಸರ್‌ ಅಥವಾ ಈ ಬಗ್ಗೆ ಯೋಚನೆ ಮಾಡುವ ಮೂಲಕ ನಾನು ಹೆಚ್ಚು ಬಾರಿ ಔಟ್‌ ಆಗಿಲ್ಲ. ಇದು ಶಾಟ್‌ ಸೆಲೆಕ್ಷನ್‌ ಹಾಗೂ ಬ್ಯಾಲೆನ್ಸ್ ಮೇಲೆ ಎಲ್ಲವೂ ಅವಲಂಬಿತವಾಗಿದೆ," ಎಂದು ಜಡೇಜಾ ಮಾತು ಮುಗಿಸಿದರು. ಜೂನ್‌ 18 ರಿಂದ ನ್ಯೂಜಿಲೆಂಡ್‌ ವಿರುದ್ಧ ಆರಂಭವಾಗುವ ಉದ್ಘಾಟನಾ ಆವೃತ್ತಿಯ ಹಣಾಹಣಿಯ ಭಾರತ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಲು ರವೀಂದ್ರ ಜಡೇಜಾ ಎದುರು ನೋಡುತ್ತಿದ್ದಾರೆ. ಈ ಮಹತ್ವದ ಪಂದ್ಯದ ಬಳಿಕ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎಡಗೈ ಆಟಗಾರ ಕಾಣಿಸಿಕೊಳ್ಳಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fyCuIo

ಡಿ.ಕೆ. ಶಿವಕುಮಾರ್‌ ಮನವಿಗೆ ಸ್ಪಂದಿಸಿದ ತೆಲಂಗಾಣ ಸರಕಾರ: ಮಂಡ್ಯ ವ್ಯಕ್ತಿಯ ಶವ ಹಸ್ತಾಂತರಿಸಿದ ಹೈದರಾಬಾದ್‌ ಆಸ್ಪತ್ರೆ

ಬೆಂಗಳೂರು: ಹೈದರಾಬಾದ್‌ ಆಸ್ಪತ್ರೆಯೊಂದರ ಬಿಲ್‌ ಕಟ್ಟಲಾಗದೆ ಒದ್ದಾಡುತ್ತಿದ್ದ ಮಂಡ್ಯದ ಕುಟುಂಬವೊಂದರ ನೆರವಿಗೆ ಧಾವಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾಡಿಕೊಂಡ ಮನವಿಗೆ ತೆಲಂಗಾಣ ಸರಕಾರ ತಕ್ಷಣ ಸ್ಪಂದಿಸಿ, ವ್ಯಕ್ತಿಯ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಹೈದರಾಬಾದ್‌ನ ಮೆಡಿಕೋವರ್‌ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್‌ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅವರ ಚಿಕಿತ್ಸೆ ವೆಚ್ಚ 7.50 ಲಕ್ಷ ರೂ. ಆಗಿತ್ತು. ಆದರೆ ಮಂಜುನಾಥ್‌ ಅವರ ಪತ್ನಿ ಶಶಿಕಲಾ ಅವರಿಗೆ 2 ಲಕ್ಷ ರೂ. ಮಾತ್ರ ಕಟ್ಟಲು ಸಾಧ್ಯವಾಗಿತ್ತು. ಉಳಿದ ಹಣ ಕಟ್ಟದೆ ಶವ ನೀಡುವುದಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪಟ್ಟು ಹಿಡಿಯಿತು. ಈ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗಮನಕ್ಕೆ ಬಂತು. ಭಾನುವಾರ ಸಂಜೆ 6.45ಕ್ಕೆ ತೆಲಂಗಾಣ ಮುಖ್ಯಮಂತ್ರಿಗಳನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿ, 'ಶಶಿಕಲಾ ಅವರ ನೆರವಿಗೆ ಬರಬೇಕು' ಮನವಿ ಮಾಡಿದ್ದರು. ಅರ್ಧ ಗಂಟೆಯಲ್ಲೇ ಡಿಕೆಶಿ ಮನವಿಗೆ ಸ್ಪಂದಿಸಿದ ತೆಲಂಗಾಣ ಟಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲತಾರಕ ರಾಮರಾವ್‌ (ಕೆಟಿಆರ್‌), 'ಶಿವಕುಮಾರ್‌ಅವರೇ, ನಾವು ಆ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ. ಸಂಪರ್ಕ ವಿವರ ನೀಡಿ. ನಮ್ಮ ಕಚೇರಿ ಅಧಿಕಾರಿಗಳು ಸ್ಪಂದಿಸುವರು' ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಸ್ಪಂದಿಸಿದ ಡಿ.ಕೆ. ಶಿವಕುಮಾರ್‌, ಶಶಿಕಲಾ ಅವರ ದೂರವಾಣಿ ಸಂಖ್ಯೆ ನೀಡಿದರು. ತೆಲಂಗಾಣ ಸರಕಾರ ಅಗತ್ಯ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿಮಂಜುನಾಥ್‌ ಅವರ ಶವವನ್ನು ಆಸ್ಪತ್ರೆ ಆಡಳಿತ ಮಂಡಳಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದೆ.


from India & World News in Kannada | VK Polls https://ift.tt/2Tyvovb

ವೈಫಲ್ಯವನ್ನು ತೋರಿಸಿದರೆ ಅಸಹಕಾರ ಹೇಗಾಗುತ್ತೆ?; ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಪ್ರತಾಪ್‌ಸಿಂಹ ಕಿಡಿ

ಮೈಸೂರು: ಕೋವಿಡ್‌ ನಿರ್ವಹಣೆಗಾಗಿ ಜಿಲ್ಲೆಗೆ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸರಕಾರದಿಂದ 41 ಕೋಟಿ ರೂ. ತಂದುಕೊಟ್ಟಿ ದ್ದಾರೆ. ಅದರಲ್ಲಿ ಈಗಾಗಲೇ 38 ಕೋಟಿ ರೂ. ಖರ್ಚಾಗಿದೆ ಎನ್ನುತ್ತಿದ್ದಾರೆ. ಇದಕ್ಕೆ ಡಿಸಿ ಲೆಕ್ಕ ಕೊಡಬೇಕು. ಜೊತೆಗೆ ಈ ಬಗ್ಗೆ ತನಿಖೆಯಾಗಬೇಕು ಎಂದು ಜಿಲ್ಲಾಧಿಕಾರಿ ವಿರುದ್ಧ ಸಂಸದ ಪ್ರತಾಪ ಸಿಂಹ ಮತ್ತೆ ಕಿಡಿಕಾರಿದ್ದಾರೆ. ಉನ್ನತೀಕರಣಗೊಂಡಿರುವ ತುಳಸಿದಾಸ್‌ ಆಸ್ಪತ್ರೆಯ ಕಟ್ಟಡದಲ್ಲಿ 50 ಹಾಸಿಗೆಗಳ ಕೋವಿಡ್‌ ಹೆರಿಗೆ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಔಷಧ ಖರೀದಿಸಲು ದುಡ್ಡಿಲ್ಲ ಎಂದು ಜಿಲ್ಲಾಆರೋಗ್ಯಾಧಿಕಾರಿ ಡಾ.ಟಿ. ಅಮರ್‌ನಾಥ್‌ ಹೇಳುತ್ತಾರೆ. ಆದರೆ, ಸ್ವಿಮ್ಮಿಂಗ್‌ ಪೂಲ್‌ ಕಟ್ಟಲು ಹಣ ಬಂತು’ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ‘ಬೊಕ್ಕಸ ಬರಿದಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಳಸುತ್ತಿಲ್ಲ ಎಂದು ಮುಖ್ಯ ಮಂತ್ರಿಗಳೇ ಹೇಳುತ್ತಿದ್ದಾರೆ. ಹೀಗಿರುವಾಗ ಸರಕಾರದ 28 ಲಕ್ಷ ರೂ. ವೆಚ್ಚದಲ್ಲಿ ಸ್ವಿಮ್ಮಿಂಗ್‌ ಪೂಲ್‌ ಕಟ್ಟಿಸಿಕೊಳ್ಳುವವರಿಂದ ಜನಪ್ರತಿನಿಗಳು ಪಾಠ ಕಲಿಯುವ ಅಗತ್ಯವಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಾಗ ಸರಕಾರದ ದುಡ್ಡಿನಲ್ಲಿ ಈಜುಕೊಳ ಕಟ್ಟಿಸಿಕೊಂಡವರಿಂದ ನಾವು ಪಾಠ ಕಲಿಯಬೇಕಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿಎಂ ಕೇರ್‌ ನಿಧಿಯಿಂದ ಮೈಸೂರಿಗೆ 40 ವೆಂಟಿಲೇಟರ್‌ಗಳು ಬಂದಿವೆ. ಈಗಲೂ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ. ಇವುಗಳನ್ನೇ ಕೇಳುವುದು ತಪ್ಪಾ? ಇದು ಜಿಲ್ಲಾಧಿಕಾರಿಗಳ ವೈಫಲ್ಯ ತೋರಿಸುತ್ತೆ. ಇದನ್ನು ಕೇಳಿದರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಅಸಹಕಾರ ಹೇಗಾಗುತ್ತೆ? ಎಂದು ಪ್ರಶ್ನಿಸಿದರು. 'ಕೋವಿಡ್‌ ಚಿಕಿತ್ಸೆಗಾಗಿ ನಿಯಮಾವಳಿಯಂತೆ ಯಾವುದೇ ಒಂದು ಸ್ಟೆಪ್‌ಡೌನ್‌ ಆಸ್ಪತ್ರೆಗೆ ಅನುಮತಿ ನೀಡುವ ಮುನ್ನ, ಆ ಆಸ್ಪತ್ರೆಯ ವೈದ್ಯಕೀಯ, ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಅದಕ್ಕೆ ಡಿಎಚ್‌ಒ ನೇತೃತ್ವದ ಸಮಿತಿ ಇರಬೇಕು. ಸಮಿತಿ ಪರಿಶೀಲಿಸಿ ನೀಡಿದ ವರದಿ ಆಧಾರದಲ್ಲಿ ಡಿಸಿ ಅವರು ಈ ಆಸ್ಪತ್ರೆಗೆ ಅನುಮತಿ ನೀಡಬೇಕು. ಆದರೆ, ಇಲ್ಲಿ ಯಾವ ಸಮಿತಿಯೂ ಇಲ್ಲ, ವರದಿಯೂ ಇಲ್ಲ. ಆದರೂ ಜಿಲ್ಲಾಧಿಕಾರಿ ನಿಯಮಗಳನ್ನು ಗಾಳಿಗೆ ತೂರಿ ಯಾಕೆ 16 ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಅನುಮತಿ ನೀಡಿದ್ದಾರೆ? ಇದರಲ್ಲಿವೈಯಕ್ತಿಕ ಅಥವಾ ಸಾರ್ವಜನಿಕ ಹಿತಾಸಕ್ತಿ ಇದೆಯೇ ಎಂಬುದನ್ನು ಡಿಸಿ ಬಹಿರಂಗಪಡಿಸಲಿ ಎಂದರು. ಉಸ್ತುವಾರಿ ಸಚಿವರಿಗೆ ಪತ್ರ ಇದೇ ವೇಳೆ ಡಿಸಿ ವಿರುದ್ಧ ಆರೋಗಳ ಸುರಿಮಳೆಗೈದಿರುವ ಸಂಸದ ಪ್ರತಾಪಸಿಂಹ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಪತ್ರ ಬರೆದಿದ್ದಾರೆ. ಮೇ 25ರಂದು ಮುಖ್ಯ ಕಾರ‍್ಯದರ್ಶಿಗಳು ನೀಡಿರುವ ಹೊಸ ಆದೇಶದಲ್ಲಿ ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳ ಶೇ. 75ರಷ್ಟು ಬೆಡ್‌ಗಳನ್ನು ಸರಕಾರಿ ಕೋಟಾದಡಿ ಪಡೆದುಕೊಳ್ಳಬೇಕು ಎಂಬ ನಿಯಮಗಳನ್ನು ಯಾವ ಕಾರಣಕ್ಕಾಗಿ ಮೈಸೂರಿನಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿಲ್ಲ? ಒಂದು ವೇಳೆ ಆದೇಶ ಜಾರಿಯಾಗಿದ್ದರೆ ಬಡ ರೋಗಿಗಳಿಗೆ ಲಕ್ಷಾಂತರ ರೂ. ಹೊರೆ ತಪ್ಪುತ್ತಿರಲಿಲ್ಲವೆ? ಖಾಸಗಿ ಆಸ್ಪತ್ರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ನಿಗಾ ಇಡಿ ಎಂದರೂ ಜಿಲ್ಲಾಡಳಿವೇಕೆ ಮೀನಮೇಷ ಎಣಿಸುತ್ತಿದೆ? ಖಾಸಗಿ ಆಸ್ಪತ್ರೆಗಳಲ್ಲಿಚಿಕಿತ್ಸೆ ಕೊರೊನಾ ರೋಗಿಗಳು ಎಷ್ಟು? ಅದರಲ್ಲಿ ಸರಕಾರಿ ಕೋಟಾ ಎಷ್ಟು ಜನರಿಗೆ ಸಿಕ್ಕಿತು? ಎಂಬುದನ್ನು ಲೆಕ್ಕಹಾಕಿದರೆ ಸತ್ಯ ಹೊರ ಬೀಳುತ್ತದೆ. ತನಿಖೆ ನಡೆಸಿ ಎಂದು ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/3fyASyd

ಡಿಸಿಯಾಗಿ ಮೈಸೂರಿಗೆ ಬಂದ ದಿನದಿಂದಲೂ ನಾನು ಟಾರ್ಗೆಟ್‌, ನನ್ನ ಮೇಲೆ ವೈಯಕ್ತಿಕ ದಾಳಿ: ರೋಹಿಣಿ ಸಿಂಧೂರಿ ಬೇಸರ

ಮೈಸೂರು: ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದ ದಿನದಿಂದಲೂ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ. ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೆ ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ಶಕ್ತಿಯನ್ನು ವ್ಯಯಿಸುತ್ತೇನೆ ಎಂದು ಹೇಳಿದ್ದಾರೆ. ''ಕೊರೊನಾದಂತಹ ಪಿಡುಗು ನಮ್ಮನ್ನು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲೂ ನನ್ನ ಮೇಲೆ ಸುಳ್ಳುಗಳನ್ನು ಹೊರಿಸಿ ಬೇಜವಾಬ್ದಾರಿ ಹೇಳಿಕೆಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ನೀಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿ, ಆತ್ಮವಿಶ್ವಾಸ ಕುಂದುವಂತೆ ಮಾಡಬಹುದು. ಜನರಿಗೆ ಜಿಲ್ಲಾಡಳಿತ ಭರವಸೆ ನೀಡುವ ಕೆಲಸ ಮಾಡಲಿದೆ. ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿ ತದ ಪ್ರತಿಯೊಬ್ಬರೂ 24 ಗಂಟೆ ಅವಿರತ ಶ್ರಮ ವಹಿಸುತ್ತಿದ್ದಾರೆ,'' ಎಂದು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ. ''ರಾಜ್ಯದಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ಹಾಕಿದ ಜಿಲ್ಲೆ ಮೈಸೂರು. ಇತರ ಜಿಲ್ಲೆಗೆ ಹೋಲಿಸಿದರೆ ಮರಣ ಪ್ರಮಾಣ ಮೈಸೂರಿನಲ್ಲಿ ಕಡಿಮೆ ಇದೆ. ಟೆಸ್ಟಿಂಗ್‌ನಲ್ಲಿ ರಾಜ್ಯ ನೀಡಿದ ಗುರಿಯಲ್ಲಿ ಶೇ. 150ರಷ್ಟು ಪೂರೈಸಲಾಗಿದೆ. 2020ರಲ್ಲೇ ಗಣಕೀಕೃತ ಬೆಡ್‌ ವ್ಯವಸ್ಥೆಯನ್ನು ಜಿಲ್ಲೆ ಪ್ರಾರಂಭಿಸಿದ್ದರಿಂದ ಎರಡನೇ ಅಲೆ ಬಂದಾಗ ಸಾಕಷ್ಟು ನೆರವಾಯಿತು. ರಾಜ್ಯಕ್ಕೆ ಮಾದರಿಯಾಗುವಂತೆ 'ಕೋವಿಡ್‌ ಮಿತ್ರ' ತೆರೆಯಲಾಗಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಮೆಡಿಕಲ್‌ ಕನ್ಸಲ್‌ಟೆನ್ಸಿ ದೊರೆತಿದೆ'' ಎಂದು ಹೇಳಿದ್ದಾರೆ. ಮಹಿಳೆಯರ ವಿಶೇಷ ಗಮನ!ಸದ್ಯ ಎಲ್ಲರಿಗೂ ವ್ಯಾಕ್ಸಿನೇಷನ್‌, ಮಧುಮೇಹ ಮತ್ತು ಕೊಮಾರ್ಬಿಡಿಟೀಸ್‌ ಪ್ರಕರಣಗಳನ್ನು ಸ್ಕ್ರೀನಿಂಗ್‌ ಮತ್ತು ಟ್ರ್ಯಾಕಿಂಗ್‌ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಮನೆಮನೆ ಸಮೀಕ್ಷೆಯಲ್ಲಿ ನಾವು ಕಂಡುಕೊಂಡ ಸಂಗತಿಯೆಂದರೆ, ರೋಗ ಲಕ್ಷಣಗಳನ್ನು ಬಹಿರಂಗಪಡಿಸಲು ಮತ್ತು ಚಿಕಿತ್ಸೆ ಪಡೆಯಲು ಮಹಿಳೆಯರಲ್ಲಿ ಹಿಂಜರಿಕೆ ಇದೆ. ಮನೆಯ ಕೆಲಸಗಳನ್ನು ಎದುರಿಸಲು ಯಾರೂ ಇಲ್ಲದಿರುವುದರಿಂದ ಅನೇಕ ಬಾರಿ ಅವರು ಆಸ್ಪತ್ರೆಗೆ ಹೋಗುವುದಿಲ್ಲ. ಹಾಗಾಗಿ ಮಹಿಳೆಯರ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ ಎಂದರು. ನಗರ ಪಾಲಿಕೆ ಈಗಾಗಲೇ ಕೋವಿಡ್‌ ಕೇರ್‌ ಸೆಂಟರ್‌ ತೆರೆದಿದೆ. ತಾಲೂಕಿನಲ್ಲಿ ಸರಕಾರಿ ಹಾಸ್ಟೆಲ್‌ಗಳು, ಸರಕಾರಿ ಕಟ್ಟಡಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲು ನಿರ್ದೇಶಿಸ ಲಾಗಿದೆ. ಅಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಸದ್ಯ ಮೈಸೂರಲ್ಲಿ8865, ತಾಲೂಕುಗಳಲ್ಲಿ 6855 ಸಕ್ರಿಯ ಪ್ರಕರಣಗಳಿವೆ. ವಾರ್ಡ್‌ವಾರು, ಪಂಚಾಯಿತಿ ವಾರು ಎಲ್ಲರೂ ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಂಸದರಿಗೆ 'ಲೆಕ್ಕ' ಒಪ್ಪಿಸಿದ ಡಿಸಿ! ಸಸದ ಪ್ರತಾಪಸಿಂಹ ಅವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಲೆಕ್ಕಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರಕಟಣೆ ಹೊರಡಿಸಿರುವ ಡಿಸಿ, ರಾಜ್ಯ ಸರಕಾರದಿಂದ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಬಂದಿರುವ 41 ಕೋಟಿ ರೂ. ಅನುದಾನದಲ್ಲಿ ಏನೆಲ್ಲಾ ಖರ್ಚು ವೆಚ್ಚವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಈ ಎಲ್ಲಾ ಖರ್ಚುಗಳನ್ನು ಸಿಎಜಿ ಸರಿಯಾದ ಸಮಯದಲ್ಲಿ ಲೆಕ್ಕ ಪರಿಶೋಧನೆಗೆ ಒಳಪಡಿಸುತ್ತದೆ. ಎಲ್ಲವೂ ಸರಕಾರದ ಮಾರ್ಗಸೂಚಿಯಂತೆ ನಡೆದಿದೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3fya3Kz

ಯೋಗೇಶ್ವರ್‌ ವಜಾಕ್ಕೆ ಪಟ್ಟು ಹಿಡಿದ ಶಾಸಕರಿಗೆ ಸಿಎಂ ಸಮಾಧಾನ; ಅತ್ತ ಕಾಡಿನಲ್ಲಿ ಸಿಪಿವೈ ‘ರಹಸ್ಯ ಪೂಜೆ’!

ಬೆಂಗಳೂರು: ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾದ ನಿಷ್ಠ ಶಾಸಕರು ಸಚಿವ ಸಿ.ಪಿ.ಯೋಗೇಶ್ವರ್‌ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಡ ತಂದಿದ್ದಾರೆ. ಯೋಗೇಶ್ವರ್‌ ದಿಲ್ಲಿಗೆ ತೆರಳಿದಾಗಲೇ ಶಾಸಕರ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಸಚಿವರು, ಶಾಸಕರು ಸೇರಿದಂತೆ ಪಕ್ಷದ ಹಲವರ ಸಿಎಂಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿದ್ದರು. ಕಳೆದ ಗುರುವಾರ ನಡೆದ ಸಂಪುಟ ಸಭೆಗೆ ಯೋಗೇಶ್ವರ್‌ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮಕ್ಕೆ ಶಾಸಕರು ಒತ್ತಾಯಿಸಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಶಾಸಕರು, ಸಿಎಂ ಅವರನ್ನು ಭಾನುವಾರ ಭೇಟಿಯಾಗಿ ತಮ್ಮ ಅಚಲ ನಿಷ್ಠೆ ಪ್ರದರ್ಶಿಸಿದರು. ಜತೆಗೆ ಯೋಗೇಶ್ವರ್‌ ವಜಾಕ್ಕೆ ಪಟ್ಟು ಹಾಕಿದರು. ಕಳೆದ ವಿಧಾನಸಭೆಯಲ್ಲಿ ಪರಾಭವಗೊಂಡಿದ್ದ ಯೋಗೇಶ್ವರ್‌ಗೆ ವಿಧಾನ ಪರಿಷತ್‌ ಸ್ಥಾನ ನೀಡಿ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲಾಗಿದೆ. ಈ ನಡುವೆಯೂ ಅವರು ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ. ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತಂದಿದ್ದಾರೆ. ಹಾಗಾಗಿ ತಕ್ಷಣವೇ ಅವರನ್ನು ಸಂಪುಟದಿಂದ ತೆಗೆದು ಹಾಕುವಂತೆ ಶಾಸಕರು ಸಿಎಂ ಅವರಿಗೆ ಒತ್ತಾಯಿಸಿದರು ಎನ್ನಲಾಗಿದೆ. ಯೋಗೇಶ್ವರ್‌ರಿಂದ ಪಕ್ಷಕ್ಕಾಗುವ ಲಾಭಕ್ಕಿಂತ ಹಾನಿಯೇ ಹೆಚ್ಚು. ಅವರು ಮಂತ್ರಿಯಾದ ಬಳಿಕವೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಪ್ರಯೋಜನವಾಗಿಲ್ಲ ಎಂದು ಶಾಸಕರು ದೂರಿದರು ಎಂದು ಗೊತ್ತಾಗಿದೆ. ವರಿಷ್ಠರಿಗೆ ಬಿಡಲಾಗಿದೆ ಶಾಸಕರ ಅಹವಾಲು ಆಲಿಸಿದ ''ಕೋವಿಡ್‌ ನಿರ್ವಹಣೆಗೆ ಆದ್ಯತೆ ನೀಡಬೇಕಿದ್ದು, ರಾಜಕಾರಣ ಮಾಡಲು ಇದು ಸಮಯವಲ್ಲ. ಯಾವುದೇ ವಿಚಾರವಿದ್ದರೂ ವರಿಷ್ಠರು ನೋಡಿಕೊಳ್ಳುತ್ತಾರೆ. ವರಿಷ್ಠರ ಬೆಂಬಲವೂ ನನಗಿದೆ. ಹಾಗಾಗಿ ಸಮಾಧಾನದಿಂದ ಇರಿ,'' ಎಂದು ಸೂಚಿಸಿದರು ಎನ್ನಲಾಗಿದೆ. ಯೋಗೇಶ್ವರ್‌ ವಿರುದ್ಧ ಸಹಿ ಸಂಗ್ರಹ ಮಾಡಿ ಹೈಕಮಾಂಡ್‌ಗೆ ದೂರು ಸಲ್ಲಿಸುವುದಾಗಿ ಶಾಸಕರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ''ಇಂತಹ ಚಟುವಟಿಕೆ ನಡೆಸುವ ಅಗತ್ಯವಿಲ್ಲ. ಪರ-ವಿರೋಧ ಹೇಳಿಕೆಯೂ ಬೇಡ. ಎಲ್ಲವೂ ವರಿಷ್ಠರ ಗಮನದಲ್ಲಿದೆ. ಹೈಕಮಾಂಡ್‌ ಸೂಕ್ತ ಕ್ರಮ ಕೈಗೊಳ್ಳುತ್ತದೆ,'' ಎಂದರು ಎಂದು ತಿಳಿದು ಬಂದಿದೆ. ಶಾಸಕರಾದ ರೇಣುಕಾಚಾರ್ಯ, ರಾಜುಗೌಡ, ಎಂ.ಪಿ.ಕುಮಾರಸ್ವಾಮಿ, ಮಾಡಾಳು ವಿರೂಪಾಕ್ಷಪ್ಪ, ಬೆಳ್ಳಿ ಪ್ರಕಾಶ್‌, ಬಸವರಾಜ ದಡೆಸೂಗೂರು, ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಜ್ಯೋತಿ ಗಣೇಶ್‌, ಮಸಾಲೆ ಜಯರಾಂ, ಡಾ. ಶಿವರಾಜ್‌ ಪಾಟೀಲ, ಗೂಳಿಹಟ್ಟಿ ಶೇಖರ್‌ ಮತ್ತಿತರರು ಸಿಎಂ ಅವರನ್ನು ಭೇಟಿಯಾದರು. ಪ್ಯಾಕೇಜ್‌ಗೂ ಮನವಿ ಈ ಮಧ್ಯೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ, ಅರ್ಚಕರು, ಅನುದಾನ ರಹಿತ ಶಾಲೆ ಶಿಕ್ಷಕರಿಗೂ ಪ್ಯಾಕೇಜ್‌ ಘೋಷಣೆ ಮಾಡುವಂತೆ ಸಿಎಂ ಅವರನ್ನು ಭೇಟಿಯಾದ ಶಾಸಕರು ಒತ್ತಾಯಿಸಿದ್ದಾರೆ. ಕಾಡಿನಲ್ಲಿ ಯೋಗೇಶ್ವರ್‌ ಪೂಜೆ ಇತ್ತ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿರುವ ಸಚಿವ ಸಿ.ಪಿ.ಯೋಗೇಶ್ವರ್‌ ದಿಲ್ಲಿ ಪ್ರವಾಸಕ್ಕೂ ಮುನ್ನ ಇಷ್ಟಾರ್ಥ ಪ್ರಾಪ್ತಿಗಾಗಿ 'ರಹಸ್ಯ ಪೂಜೆ' ನಡೆಸಿರುವ ಅಂಶ ಬೆಳಕಿಗೆ ಬಂದಿದೆ. ತಮ್ಮ ಕಾರ್ಯಾಚರಣೆಯ ಯಶಸ್ವಿಗಾಗಿ ತಿಪಟೂರು ಬಳಿಯ ನೊಣವಿನಕೆರೆಯ ಕಾಡಿನಲ್ಲಿರುವ ದೇವಸ್ಥಾನದಲ್ಲಿ ಯೋಗೇಶ್ವರ್‌ ವಿಶೇಷ ಪೂಜೆ ಮಾಡಿಸಿದ್ದರು ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/3fZcuEX

ದಿಲ್ಲಿಗೆ ತೆರಳುವ ಮುನ್ನ ಕಾಡಿನಲ್ಲಿ 3 ದಿನಗಳ ರಹಸ್ಯ ಪೂಜೆ ನಡೆಸಿದ್ದ ಸಚಿವ ಸಿಪಿ ಯೋಗೇಶ್ವರ್‌!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಲು ದಿಲ್ಲಿಗೆ ತೆರಳಿದ್ದ ಸಚಿವ ಸಿ.ಪಿ.ಯೋಗೇಶ್ವರ್‌ ಈ ಪ್ರವಾಸಕ್ಕೂ ಮುನ್ನ ಇಷ್ಟಾರ್ಥ ಪ್ರಾಪ್ತಿಗಾಗಿ ರಹಸ್ಯ ಪೂಜೆ ನಡೆಸಿರುವ ಅಂಶ ಬೆಳಕಿಗೆ ಬಂದಿದೆ. ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಲು ದಿಲ್ಲಿಗೆ ತೆರಳಿದ್ದ ಯೋಗೇಶ್ವರ್‌ ಬರಿಗೈಲಿ ವಾಪಸ್‌ ಬಂದದ್ದು ಗೊತ್ತಿರುವ ವಿಚಾರ. ಆದರೆ, ಅವರು ದಿಲ್ಲಿಗೆ ಹೊರಡುವ ಮುನ್ನ 'ದಂಡಕಾರಣ್ಯ' ಪ್ರವೇಶಿಸಿದ್ದ ಸಂಗತಿ ಬಹಳ ಕುತೂಹಲಕಾರಿಯಾಗಿದೆ. ತಿಪಟೂರಿನ ಬಳಿಯ ನೊಣವಿನಕೆರೆಯ ಕಾಡಿನಲ್ಲಿರುವ ದೇವಸ್ಥಾನದಲ್ಲಿ ಯೋಗೇಶ್ವರ್‌ ಪೂಜೆ ಮಾಡಿಸಿದ್ದರು. ಈ ಸಂಬಂಧವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಈಗ ಪೋಟೊಗಳು ಹರಿದಾಡುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್‌ ಸೋತಿದ್ದರು. ನಂತರ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಇನ್ನೂ ಉನ್ನತ ಹುದ್ದೆಯ ಬಯಕೆಯಲ್ಲಿರುವ ಯೋಗೇಶ್ವರ್‌ ಕಾಡಿನಲ್ಲಿರುವ ದೇವರ ಮೊರೆ ಹೋದರು. ನೊಣವಿನಕೆರೆಯ ಕಾಡಿನ ದೇಗುಲದಲ್ಲಿ 3 ದಿವಸ ಪೂಜೆ ಮಾಡಿಸಿದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಬಿಜೆಪಿಯಲ್ಲಿ ಯೋಗೇಶ್ವರ್‌ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪೂಜೆ ವಿಚಾರ ತಿಳಿದು ಸ್ವಪಕ್ಷದಲ್ಲೇ ಯೋಗೇಶ್ವರ್‌ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.


from India & World News in Kannada | VK Polls https://ift.tt/3c5mNX5

ಕೊರೊನಾ ವೈರಸ್ ನೈಸರ್ಗಿಕ ಅಲ್ಲ, ಚೀನಾ ಲ್ಯಾಬ್ ಸೃಷ್ಟಿ: ಬ್ರಿಟನ್ ತಜ್ಞರ ಅಭಿಮತ

ಲಂಡನ್: ವೈರಸ್ ಮೂಲದ ತನಿಖೆ ವಿಚಾರದಲ್ಲಿ ಬ್ರಿಟನ್ ದೇಶದ ತಜ್ಞರು ಇದೇ ಮೊದಲ ಬಾರಿಗೆ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ಚೀನಾದ ವುಹಾನ್‌ನಲ್ಲಿ ಇರುವ ವೈರಾಣು ಲ್ಯಾಬ್‌ನಲ್ಲೇ ಕೊರೊನಾ ವೈರಸ್ ಸೃಷ್ಟಿಯಾಯ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಯೋಗಾಲಯದಲ್ಲಿ ಆಕಸ್ಮಿಕವಾಗಿ ಈ ವೈರಸ್ ಸೋರಿಕೆ ಆಗಿರಬಹುದು ಎಂದು ಅಭಿಪ್ರಾಯಪಟ್ಟಿರುವ ತಜ್ಞರು. ಇದು ಪ್ರಕೃತಿ ಸಹಜವಾಗಿ ಸೃಷ್ಟಿಯಾದ ವೈರಸ್ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ವಿಶ್ವಾದ್ಯಂತ ಹರಡಿದ ಬಳಿಕ ಅದನ್ನು ನೈಸರ್ಗಿಕ ವೈರಸ್ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ರಿವರ್ಸ್‌ ಎಂಜಿನಿಯರಿಂಗ್ ಮಾದರಿ ತಯಾರಿಸುವ ಮೂಲಕ ಅದು ಬಾವಲಿಯಿಂದ ಸೃಷ್ಟಿಯಾದ ವೈರಸ್ ಎಂದು ಬಿಂಬಿಸುವ ಪ್ರಯತ್ನ ನಡೆಯಿತು ಎಂದು ತಜ್ಞರು ಹೇಳಿದ್ದಾರೆ. ಬ್ರಿಟನ್‌ನ ಪ್ರೊಫೆಸರ್ ಆಂಗಸ್ ಡಲ್‌ಗ್ಲೆಷ್ ಹಾಗೂ ನಾರ್ವೆ ವಿಜ್ಞಾನಿ ಬಿರ್‌ಗರ್ ಸೊರೆನ್‌ಸೆನ್ ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶಗಳು ಬಯಲಾಗಿವೆ. ಬಯೋಫಿಸಿಕ್ಸ್‌ ಡಿಸ್ಕವರಿ ಎಂಬ ಪಾಕ್ಷಿಕ ವೈಜ್ಞಾನಿಕ ಪತ್ರಿಕೆಯಲ್ಲಿ ಈ ಸಂಬಂಧ ಸಂಶೋಧನಾ ವರದಿ ಪ್ರಕಟವಾಗಲಿದೆ ಎಂದು ಬ್ರಿಟನ್‌ನ ಖ್ಯಾತ ಡೈಲಿ ಮೇಲ್ ಡಾಟ್ ಕಾಂ ವೆಬ್‌ಸೈಟ್ ವರದಿ ಮಾಡಿದೆ. 22 ಪುಟಗಳ ಈ ವರದಿಯಲ್ಲಿ ವುಹಾನ್‌ ಲ್ಯಾಬ್‌ನ ಜಾತಕವನ್ನೇ ಬಿಚ್ಚಿಡಲಾಗಿದೆ. 2002ರಿಂದ 2019ರವರೆಗೆ ಈ ಲ್ಯಾಬ್‌ನಲ್ಲಿ ನಡೆದ ಅಧ್ಯಯನಗಳ ಸಾರವೇ ವರದಿಯಲ್ಲಿದೆ. ಕೊರೊನಾ ವೈರಾಣುವಿಗೆ ಯಾವುದೇ ನೈಸರ್ಗಿಕ ವಂಶಜರು ಇಲ್ಲ. ಈ ವೈರಸ್ ಅನ್ನು ಲ್ಯಾಬ್‌ನಲ್ಲಿ ಕೃತಕವಾಗಿ ಸೃಷ್ಟಿಸಲಾಗಿದೆ. ಲ್ಯಾಬ್‌ನಲ್ಲಿ ಆದ ಅಚಾತುರ್ಯದಿಂದಲೂ ಇದು ಸೃಷ್ಟಿ ಆಗಿರಬಹುದು ಎಂದು ಅಭಿಪ್ರಾಯಪಡಲಾಗಿದೆ. ಏಕೆಂದರೆ ಯಾವುದೇ ಒಂದು ವೈರಾಣು ರೂಪಾಂತರ ಹೊಂದಿದ ಬಳಿಕ ತೋರುವ ಸಹಜ ವರ್ತನೆಯನ್ನು ಕೊರೊನಾ ವೈರಸ್ ತೋರುತ್ತಿಲ್ಲ. ಹೀಗಾಗಿ, ತಜ್ಞರ ಅನುಮಾನಗಳು ಬಲವಾಗುತ್ತಿವೆ.


from India & World News in Kannada | VK Polls https://ift.tt/3p4oxVQ

ಉತ್ತರ ಪ್ರದೇಶದಲ್ಲಿ ಕೋವಿಡ್ ರೋಗಿಯ ಮೃತದೇಹವನ್ನು ನದಿಗೆ ಎಸೆದ ಜನ: ಆಘಾತಕಾರಿ ವಿಡಿಯೋ ಬಹಿರಂಗ

ಬಲರಾಮಪುರ: ಉತ್ತರ ಪ್ರದೇಶದಲ್ಲಿ ರೋಗಿಯ ಮೃತದೇಹವನ್ನು ನದಿಗೆ ಎಸೆಯುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಗಂಗಾ ನದಿಯ ತೀರದಲ್ಲಿ ಸಾವಿರಾರು ಕೋವಿಡ್ ರೋಗಿಗಳ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಅದರ ನಡುವೆ, ಗಂಗಾ ನದಿಯಲ್ಲಿ ನೂರಾರು ಶವಗಳು ತೇಲಿ ಬರುತ್ತಿರುವುದು ವ್ಯಾಪಕ ಚರ್ಚೆಗೆ ಒಳಗಾಗಿತ್ತು. ನದಿಗಳಲ್ಲಿ ಎಸೆಯುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ ಕೆಲವು ರಾಜ್ಯಗಳಿಗೆ ಸೂಚನೆ ನೀಡಿತ್ತು. ಈ ಕೆಟ್ಟ ಪರಿಪಾಠವನ್ನು ನಿಯಂತ್ರಿಸಲು ತೀರಗಳಲ್ಲಿ ಗಸ್ತು ಪಹರೆಯನ್ನು ಹೆಚ್ಚಿಸುವಂತೆಯೂ ಅದು ನಿರ್ದೇಶಿಸಿತ್ತು. ಶವಸಂಸ್ಕಾರಕ್ಕೆ ಹಣದ ಕೊರತೆ ಮತ್ತು ಅಜ್ಞಾನದ ಕಾರಣದಿಂದ ಈ ರೀತಿಯ ಅಭ್ಯಾಸ ನಡೆಯುತ್ತಿದೆ ಎನ್ನಲಾಗಿದೆ. ಮೇ 28ರಂದು ಬಲರಾಮಪುರ ಜಿಲ್ಲೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗಳು, ಶವವನ್ನು ನದಿಗೆ ಎಸೆಯುವ ಘಟನೆಯನ್ನು ಚಿತ್ರೀಕರಿಸಿದ್ದಾರೆ. ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳು ರಾಪ್ಟಿ ನದಿ ಸೇತುವೆ ಮೇಲಿಂದ ಎತ್ತಿ ನದಿಗೆ ಹಾಕಲು ಮುಂದಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಆ ಮೃತದೇಹವು ಕೋವಿಡ್ ರೋಗಿಯದ್ದು. ಅವರ ಸಂಬಂಧಿಕರು ಅದನ್ನು ನದಿಗೆ ಎಸೆಯಲು ಪ್ರಯತ್ನಿಸುತ್ತಿದ್ದರು ಎಂಬುದನ್ನು ಬಲರಾಮಪುರದ ಮುಖ್ಯ ವೈದ್ಯಕೀಯ ಅಧಿಕಾರಿ ಖಚಿತಪಡಿಸಿದ್ದಾರೆ. ಮೃತ ರೋಗಿಯ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಆ ಮೃತದೇಹವನ್ನು ಅವರಿಗೆ ಮರಳಿ ಒಪ್ಪಿಸಲಾಗಿದೆ. ಗಂಗಾ ನದಿಯಲ್ಲಿ ಇದೇ ರೀತಿ ನೂರಾರು ಮೃತದೇಹಗಳು ಪತ್ತೆಯಾಗಿದ್ದವು. ಇದು , ಬಿಹಾರಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.


from India & World News in Kannada | VK Polls https://ift.tt/2R3SlVY

ಕದ್ದು ಮುಚ್ಚಿ ಪ್ರೇಯಸಿಯನ್ನು ಮದುವೆಯಾದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್: ಪ್ರಧಾನಿ ಅವರು ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ಶನಿವಾರ ವೆಸ್ಟ್ ಮಿನಿಸ್ಟರ್ ಕ್ಯಾಥೆಡ್ರಾಲ್‌ನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ತಮಗಿಂತ ಸುಮಾರು 20 ವರ್ಷ ಕಿರಿಯಳನ್ನು ಬೋರಿಸ್ ಜಾನ್ಸನ್ ವರಿಸಿದ್ದಾರೆ. ಸನ್ ಆಂಡ್ ಮೇಲ್ ಈ ಗೋಪ್ಯ ಬಗ್ಗೆ ವರದಿ ಪ್ರಕಟಿಸಿದೆ. ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಲು ಜಾನ್ಸನ್ ಅವರ ಡಾನಿಂಗ್ ಸ್ಟ್ರೀಟ್ ಕಚೇರಿ ವಕ್ತಾರ ನಿರಾಕರಿಸಿದ್ದಾರೆ. ಕೇಂದ್ರ ಲಂಡನ್‌ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಕೊನೆಯ ಕ್ಷಣಗಳಲ್ಲಿ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ಜಾನ್ಸನ್ ಅವರ ಕಚೇರಿಯ ಹಿರಿಯ ಅಧಿಕಾರಿಗಳಿಗೂ ಈ ಮದುವೆ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಕೋವಿಡ್ 19 ನಿಯಂತ್ರಣಗಳ ಕಾರಣ ಇಂಗ್ಲೆಂಡ್‌ನಲ್ಲಿ 30 ಜನರ ಹಾಜರಿಗೆ ಸೀಮಿತಗೊಳಿಸಲಾಗಿದೆ. ಅದಕ್ಕೆ ಅನುಗುಣವಾಗಿ ಕೂಡ ಮದುವೆಯಾಗಿದ್ದಾರೆ. ಕ್ಯಾಥೊಲಿಕ್ ಕ್ಯಾಥೆಡ್ರಾಲ್ ಅನ್ನು ಮಧ್ಯಾಹ್ನ 1.30ರ ವೇಳೆಗೆ ಇದ್ದಕ್ಕಿದ್ದಂತೆ ಮುಚ್ಚಲಾಯಿತು. ಸುಮಾರು 30 ನಿಮಿಷಗಳ ಬಳಿಕ ಕ್ಯಾರಿ ಸೈಮಂಡ್ಸ್ ಬಿಳಿ ಗೌನು ಧರಿಸಿ ಆಗಮಿಸಿದರು ಎನ್ನಲಾಗಿದೆ. 56 ವರ್ಷದ ಬೋರಿಸ್ ಜಾನ್ಸನ್ ಮತ್ತು 33 ವರ್ಷದ ಸೈಮಂಡ್ಸ್ ಇಬ್ಬರೂ 2019ರಲ್ಲಿ ಜಾನ್ಸನ್ ಪ್ರಧಾನಿಯಾದ ಸಂದರ್ಭದಿಂದಲೂ ಲಿವ್ ಇನ್ ಟುಗೆದರ್‌ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಇಬ್ಬರೂ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹಾಗೂ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಘೋಷಿಸಿದ್ದರು. ಈ ಜೋಡಿಗೆ 2020ರ ಏಪ್ರಿಲ್‌ನಲ್ಲಿ ಮಗ ಜನಿಸಿದ್ದ. ಇಬ್ಬರ ಮದುವೆ ಆಹ್ವಾನ ಪತ್ರಿಕೆಗಳನ್ನು ಸ್ನೇಹಿತರು ಹಾಗೂ ಕುಟುಂಬದವರಿಗೆ ಕಳುಹಿಸಲಾಗುತ್ತಿದೆ. 2022ರ ಜುಲೈ 30ರಂದು ಮದುವೆಯಾಗಲಿದ್ದಾರೆ ಎಂದು ಸನ್ ಪತ್ರಿಕೆ ಈ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು. ಬೋರಿಸ್ ಜಾನ್ಸನ್ ಅವರ ಖಾಸಗಿ ಜೀವನವು ಮಾಧ್ಯಮಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ತಮ್ಮ ವಿವಾಹೇತರ ಸಂಬಂಧದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಆಗ ವಿರೋಧಪಕ್ಷ ಕನ್ಸರ್ವೇಟಿವ್ ಪಾರ್ಟಿಯ ನೀತಿ ತಂಡದಿಂದ ಅವರನ್ನು ತೆಗೆದುಹಾಕಲಾಗಿತ್ತು. ಎರಡು ಬಾರಿ ವಿಚ್ಚೇದನ ಪಡೆದಿರುವ ಜಾನ್ಸನ್, ತಮಗೆ ಎಷ್ಟು ಮಕ್ಕಳಿದ್ದಾರೆ ಎಂಬ ಮಾಹಿತಿ ನೀಡಲು ನಿರಾಕರಿಸಿದ್ದರು. ಜಾನ್ಸನ್ ಅವರ ಕೊನೆಯ ಮದುವೆ ವಕೀಲೆ ಮರೀನಾ ವ್ಹೀಲರ್ ಅವರೊಂದಿಗೆ ಆಗಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಇಬ್ಬರೂ ಬೇರೆಯಾಗಿದ್ದಾಗಿ ಪ್ರಕಟಿಸಿದ್ದರು. ಇಬ್ಬರಿಗೂ ನಾಲ್ಕು ಮಕ್ಕಳಿದ್ದಾರೆ.


from India & World News in Kannada | VK Polls https://ift.tt/3p36e3i

ತಗ್ಗಿತು ಆಂಬ್ಯುಲೆನ್ಸ್‌ ಸೈರನ್‌ ಮೊರೆತ: ಬೆಂಗಳೂರಿನಲ್ಲಿ ಬೇಡಿಕೆ ಶೇ. 80ರಷ್ಟು ಕುಸಿತ

ಶಿವರಾಮ್‌ : ಕೆಲವೇ ದಿನಗಳ ಹಿಂದೆ ನಡು ರಾತ್ರಿಯ ನಿದ್ದೆಯಿಂದಲೂ ಬಡಿದೆಬ್ಬಿಸುತ್ತಿದ್ದ ಆಂಬ್ಯುಲೆನ್ಸ್‌ಗಳ ಸದ್ದು ಈಗ ಸ್ವಲ್ಪ ಕಡಿಮೆಯಾಗಿದೆ. ದಿನವಿಡೀ ಎಲ್ಲಿ ನೋಡಿದರಲ್ಲಿ ಕಾಣುತ್ತಿದ್ದ ಈ ವಾಹನಗಳು, ಈಗ ಅಪರೂಪಕ್ಕಷ್ಟೇ ಕಾಣಿಸಿಕೊಳ್ಳುತ್ತಿವೆ. ಅಂಬ್ಯುಲೆನ್ಸ್‌ ಸಿಕ್ಕಿಲ್ಲ ಎಂಬ ಕಣ್ಣೀರ ಕೋಡಿ, ಸಕಾಲದಲ್ಲಿ ವಾಹನ ಸಿಗದೆ ದಾರಿಯಲ್ಲೇ ಪ್ರಾಣ ಬಿಡುವ ಪ್ರಕರಣಗಳು ಇಲ್ಲವಾಗಿವೆ. ಅಲ್ಲಿಗೆ ರಾಜಧಾನಿಯಲ್ಲಿ ನಿರ್ಮಾಣಗೊಂಡಿದ್ದ ಭಯಾನಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಗಿರುವ ಸೂಚನೆ ದೊರೆಯುತ್ತಿದೆ. ನಗರದಲ್ಲಿ ಮೇ ಆರಂಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗಕೇರಿತ್ತು. ಗರಿಷ್ಠ 21,126 ಸೋಂಕಿತರು ನಗರದಲ್ಲೇ ಪತ್ತೆಯಾಗುತ್ತಿದ್ದರು. ಇದು ರಾಜ್ಯದ ಸೋಂಕಿತರಿಗೆ ಹೋಲಿಸಿದರೆ ಶೇ. 70ರಷ್ಟಿತ್ತು. ಹೀಗಾಗಿ, ಸೋಂಕಿತರನ್ನು ಆಸ್ಪತ್ರೆಗಳಿಗೆ ಸೇರಿಸಲು ಆಂಬ್ಯುಲ್ಸೆನ್‌ಗಳು ಒಂದರ ಹಿಂದೊಂದರಂತೆ ಓಡುತ್ತಿದ್ದವು. ಒಂದೊಂದು ಚಿತಾಗಾರಗಳ ಮುಂದೆ ಶವಗಳನ್ನು ಹೊತ್ತ ನೂರಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳು 'ಕ್ಯೂ'ನಲ್ಲಿ ನಿಂತ ಮನಕಲಕುವ ದೃಶ್ಯ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಆರ್ಭಟಕ್ಕೆ ಸಾಕ್ಷಿಯಾಗಿತ್ತು. ಈಗಲೂ ಸಾವಿನ ಸಂಖ್ಯೆ ಹೆಚ್ಚೇ ಇದೆಯಾದರೂ ಪರಿಸ್ಥಿತಿ ಒಂದಿಷ್ಟು ತಹಬದಿಗೆ ಬಂದಿದೆ. 'ನಗರದಲ್ಲಿ ಎರಡು ಸಾವಿರಕ್ಕೂ ಅಧಿಕ ಖಾಸಗಿ (ಪರಿವರ್ತಿತ ಟಿಟಿಗಳೂ ಸೇರಿ) ಆಂಬ್ಯುಲೆನ್ಸ್‌ಗಳಿವೆ. ಪ್ರತಿ ದಿನ ಒಬ್ಬೊಬ್ಬ ಚಾಲಕರಿಗೆ ಸೋಂಕಿತರ ಕಡೆಯಿಂದ ಆಸ್ಪತ್ರೆಗೆ ಸೇರಿಸಲು ಕನಿಷ್ಠ 10 ಕರೆಗಳು ಬರುತ್ತಿದ್ದವು. ಇದೀಗ ಒಂದು ಕರೆ ಬಂದರೆ ಹೆಚ್ಚು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸೌಲಭ್ಯ ಇಲ್ಲದವರು ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತಾರೆ. ಈ ಪೈಕಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರೇ ಹೆಚ್ಚು' ಎನ್ನುತ್ತಾರೆ ಚಾಲಕರ ಸಂಘದ ಸದಸ್ಯ ಬಿ.ಆರ್‌. ವೆಂಕಟೇಶ್‌. 'ಕೋವಿಡ್‌ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆಂಬ್ಯುಲೆನ್ಸ್‌ಗಳಿಗೆ ಶೇ 80ರಷ್ಟು ಬೇಡಿಕೆ ಕಡಿಮೆಯಾಗಿದೆ. ಬಹುಶಃ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಲು ಪ್ರಮುಖ ಕಾರಣ ಇರಬಹುದು' ಎನ್ನುತ್ತಾರೆ, ಅಖಿಲ ಕರ್ನಾಟಕ ಆಂಬ್ಯುಲೆನ್ಸ್‌ ಚಾಲಕರು ಹಾಗೂ ಮಾಲೀಕರ ಸಂಘದ ಗೌರವಾಧ್ಯಕ್ಷೆ ಲಕ್ಷ್ಮಿ ಕೆ.


from India & World News in Kannada | VK Polls https://ift.tt/3i2FqyE

ಗ್ರಾಮಾಂತರ ಭಾಗದ ಕೊರೊನಾ ಕಥೆಗಳಿವು..! ಒಂದಕ್ಕಿಂತಾ ಒಂದು ವಿಚಿತ್ರ..!

ವಿಷ್ಣು ಯರಬಾಳು : 'ಧೂಳು ಹೊಡದಿದ್ವಿ ಅದಕ್ಕೆ ಕೆಮ್ಮು ಬಂದಿರಬೇಕ್ರೀ'.. ಇದು ಹಳ್ಳಿಗಳಲ್ಲಿ ಕೊರೊನಾ ಪರೀಕ್ಷೆಗೆ ಹೋಗುವ ಡಾಕ್ಟರ್‌, ನರ್ಸ್‌ಗಳಿಗೆ ಕೆಲ ಜನರು ಹೇಳುವ ಉದಾಸೀನದ ಮಾತು. ಇದು ಇಷ್ಟಕ್ಕೆ ಮುಗಿಯುವುದಿಲ್ಲ.. 'ದುಡ್ಡಿದ್ದೋರಿಗೆ ಕೊರೊನಾ ಬರುತ್ತೇರೀ.. ನಮಗಲ್ಲ. ನಮ್ಮ ಮನೆ ಮುಂದೆ ಬಂದ ನಿಲ್ಲಬೇಡರೀ ನಮಗ್ಯಾವ ರೋಗ ಬಂದಿಲ್ಲ, ನಮ್ಮ ಅಣ್ಣ ಹೇಳಿದ ಗುಳಿಗಿ ನುಂಗಿ ಆರಾಮ ಅದೀನಿ..!' ಇಷ್ಟು ಹೇಳಿ ಆರೋಗ್ಯ ಕಾರ್ಯಕರ್ತರನ್ನು ಅಲ್ಲಿಯೇ ಬಿಟ್ಟು, ಹೊಲಕ್ಕೊ, ಹಾಡಿಗೋ ಹೊರಟುಬಿಡುತ್ತಾರೆ. ಇಂತವರಿಂದ ಹಳ್ಳಿಗಳು ಅಪಾಯಕ್ಕೆ ಸಿಲುಕುತ್ತಿವೆ. ಜ್ವರವಿದ್ದವರನ್ನು ಪರೀಕ್ಷೆ ಮಾಡಿಸುವುದು, ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆದುಕೊಂಡು ಹೋಗಿ ಸೇರಿಸುವುದು ಈಗ ಆರೋಗ್ಯ ಕಾರ್ಯಕರ್ತರಿಗೆ ಸವಾಲಿನ ಕೆಲಸ ಆಗಿದೆ. ಹೀಗೆ ಹೇಳಿದವರೇ ರೋಗ ಉಲ್ಬಣ ಆಗಿ, ಉಸಿರಾಟಕ್ಕೆ ತೊಂದರೆ ಆದಾಗ ಆಸ್ಪತ್ರೆ ಕಡೆಗೆ ಮುಖ ಮಾಡಿಕೊಂಡು ಬರುತ್ತಿರುವುದರಿಂದ ಆಸ್ಪತ್ರೆಗಳು ತುಂಬಿಹೋಗಿದ್ದು ಸಾವು-ನೋವು ಕೂಡ ಹೆಚ್ಚುತ್ತಿದೆ. ಕೋವಿಡ್‌ ಕತೆಗಳು: ಕೊರೊನಾಗೆ ತುತ್ತಾದವರ ಕತೆಗಳು ಅವರ ಉದಾಸೀನತೆಗೆ ಸಾಕ್ಷಿಯಾಗಿವೆ. ತೀವ್ರ ಜ್ವರ ಬಂದು ಸುಸ್ತಾದ ತಂದೆ, ವಿಪರೀತ ಜ್ವರ ಬಂದ 28 ವರ್ಷದ ಮಗನಿಗೆ ಟೆಸ್ಟ್‌ ಮಾಡಿಸಿದಾಗ ಇಬ್ಬರಿಗೂ ಪಾಸಿಟಿವ್‌. ನಿಮ್ಮ ತಂದೆಗೆ ಉಸಿರಾಟ ಸಮಸ್ಯೆ ಇದೆ ಆಕ್ಸಿಜನ್‌ ಕೊಡಬೇಕು ಕೋವಿಡ್‌ ಕೇಂದ್ರಕ್ಕೆ ಕರೆದುಕೊಂಡು ಹೋಗು ಎಂದರೆ, 'ನನಗೇನೂ ಆಗಿಲ್ಲರೀ ನಮ್ಮಪ್ಪನ್‌ ಕರಕೊಂಡು ಹೋಗಿ, ನನಗೆ ಕೆಲಸ ಬಹಳ ಇದೆ, ಭತ್ತ ಕೊಯ್ಲು ಮಾಡಬೇಕು, ಅದನ್ನು ನೀವು ಬಂದು ಮಾಡ್ತಿರೀ ಎನ್‌? ನನಗೇನೂ ಆಗಿಲ್ಲ' ಎಂದು ಡಾಕ್ಟರ್‌ಗೆ ಬುದ್ದಿ ಹೇಳಿ ಮನೆ ದಾರಿ ಹಿಡಿದ. ಆದ್ರೆ ಮೂರನೇ ದಿನಕ್ಕೆ ಬಹಳ ಸುಸ್ತಾಗುತ್ತಿದೆ ಎಂದು ಫೋನ್‌ ಮಾಡಿ ವಿಷಯ ತಿಳಿಸಿದ. ಅವನ ಮನೆಗೆ ಎಎನ್‌ಎಂ ಕಳಿಸಲಾಯಿತು. ಅಲ್ಲಿ ಆತ ಉಲ್ಟಾ ಹೊಡೆದಿದ್ದ..! 'ನಾನು ಏನಾದ್ರೂ ಸತ್ರೆ ನೀವೇ ಕಾರಣ, ಸರಕಾರಿ ಆಸ್ಪತ್ರೆ ಹೋಗಿ ಸೇರಿದ್ದೇನೆ' ಎಂದು ಬರೆದು ಇಡುತ್ತೇನೆ ಎಂದು ಬೆದರಿಕೆ ಹಾಕಿದ..! ಈತನ ಮಾತು ಕೇಳಿದ ಹರಪನಹಳ್ಳಿ ತಾಲೂಕಿನ ಆರೋಗ್ಯ ಕಾರ್ಯಕರ್ತರು ಕಂಗಾಲಾಗಿ ಹೋದರು.. ಒಂದು ಸೂಜಿ ಸಾಕು!: ಜ್ವರ, ವಾಂತಿಭೇದಿ ಆದ ವ್ಯಕ್ತಿಯೊಬ್ಬ 'ಒಂದು ಸೂಜಿ ಮಾಡಿ ಬಿಡಿ ಮೇಡಮ್‌. ಎಲ್ಲ ಸರಿ ಹೋಗುತ್ತೆ ನಮ್ಮ ಮನೆಯಲ್ಲಿ ದೇವರ ಹಬ್ಬ ಮಾಡ್ತಾ ಇದ್ದೇವೆ. ಬೀಗರೂ ಬಂದಿದ್ದಾರೆ ಪೂಜೆ ಮಾಡ್ಸಬೇಕು, ಕೊರೊನಾ ದುಡ್ಡಿದ್ದೋರಿಗೆ ಬರುತ್ತೇರೀ ನಮಗಲ್ಲ' ಎಂದು ವೈದ್ಯರಿಗೆ ಸಲಹೆ ನೀಡಿದ. ಹಾಗೆಲ್ಲ ಮಾಡಬಾರದಪ್ಪ ಟೆಸ್ಟ್‌ ಮಾಡಿ ಸ್ವಲ್ಪ ದಿನ ಮನೆಯಲ್ಲಿ ಒಬ್ಬನೇ ಇರು. ನಿನಗೆ ಬಹಳ ಜ್ವರವಿದೆ. ಎಲ್ಲರ ಜತೆ ಸೇರಬೇಡ, ನಿಮ್ಮ ಮಕ್ಕಳ ಪರಿಸ್ಥಿತಿ ಒಮ್ಮೆ ನೋಡು ಎಂದು ಹೇಳಿದರೂ ಹಬ್ಬ ಮಾಡಿದ. ಎರಡು ದಿನ ಬಿಟ್ಟು ಮತ್ತೆ ಆಸ್ಪತ್ರೆಗೆ ಬಂದ. ಇದೀಗ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊಡಲಾಗುತ್ತಿದೆ..! ಈತನಿಗೆ ಫೋನ್‌ ಮಾಡಿ ಕರೆದರೂ ಆಸ್ಪತ್ರೆಗೆ ಹೋಗಿರಲಿಲ್ಲ. ಇದೀಗ ಹಬ್ಬ ಮಾಡಿ ಅದೆಷ್ಟು ಮಂದಿಗೆ ಕೊರೊನಾ ಹಚ್ಚಿದ್ದಾನೋ ಗೊತ್ತಿಲ್ಲ. ಈಗ ಸುಸ್ತಾಗಿ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ವೈದ್ಯೆ ಹೇಳಿದರು. 'ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಲ್ಲಿಯೇ ಟೆಸ್ಟ್‌ ಮಾಡಿಸಿದ್ದಾನೆ. ಆತನಿಗೆ ಪಾಸಿಟಿವ್‌ ಬಂದಿದೆ. ಆದರೆ ಆತ ತನ್ನ ಸ್ವಂತ ಊರಿನ ನಂಬರ್‌ ಮತ್ತು ವಿಳಾಸ ಕೊಟ್ಟಿದ್ದಾನೆ. ಈತ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ. ಕೊನೆಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ಬಂದಾಗ ಸಿಕ್ಕಿಬಿದ್ದಿದ್ದಾನೆ. ನಾಲ್ಕು ದಿನ ಊರೆಲ್ಲ ಸುತ್ತಿ ಬಂದಿದ್ದೀಯಾ ನಿನಗೆ ಪಾಸಿಟಿವ್‌ ಬಂದಿದೆ ಎಂದರೆ, ಬಿಡಿ ಮೇಡಮ್ ಆ ಟೆಸ್ಟ್‌ ವರದಿ ತಪ್ಪಿರಬೇಕು. ನನಗೆಲ್ಲಿ ಬರುತ್ತೆ ರೋಗ ಎಂದು ಉಡಾಫೆ ಉತ್ತರ ಕೊಡುತ್ತಾನೆ' ಎನ್ನುತ್ತಾರೆ ಡಾಕ್ಟರ್‌. ಇಂತಹ ಚಿತ್ರಗಳು ಹಳ್ಳಿಗಳ ಕಡೆ ಹೆಚ್ಚಿದೆ. ಜನರ ಉದಾಸೀನ, ಮೌಢ್ಯ ಅವರ ಉಸಿರನ್ನೇ ಅಡಗಿಸುತ್ತಿದೆ. ಜತೆಗೆ ಹಳ್ಳಿಗಳಲ್ಲೂ ಸೋಂಕು ಹೆಚ್ಚಲು ಕಾರಣ ಆಗುತ್ತದೆ ಎನ್ನುತ್ತಾರೆ ಆರೋಗ್ಯ ಕಾರ್ಯಕರ್ತರು.


from India & World News in Kannada | VK Polls https://ift.tt/3i4u39i

ಆ.28ರಂದು ಸಿಪಿಎಲ್ 2021 ಟೂರ್ನಿ ಶುರು, ಎಲ್ಲ 6 ತಂಡಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ!

ಬೆಂಗಳೂರು: ಟೂರ್ನಿಯ 2021ರ ಆವೃತ್ತಿಗೆ ಆಟಗಾರರ ಅಂತಿಮ ಪಟ್ಟಿಯನ್ನು ಶುಕ್ರವಾರ ಪ್ರಕಟ ಮಾಡಲಾಗಿದ್ದು, ವಿಶ್ವ ಕ್ರಿಕೆಟ್‌ನ ಕೆಲ ಬಲಿಷ್ಠ ಆಟಗಾರರನ್ನು ಆರು ಫ್ರಾಂಚೈಸಿಗಳು ಆಯ್ಕೆ ಮಾಡಿವೆ. ಈ ಬಾರಿಯ ವಿಶೇಷತೆ ಎಂಬಂತೆ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಕೆರಿಬಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ಬಾರ್ಬೇಡೊಸ್‌ ಟ್ರೈಡೆಂಟ್ಸ್‌ ತಂಡದ ಪರ ಮಾರಿಸ್‌ ಆಡಲಿದ್ದಾರೆ. ಶ್ರೀಲಂಕಾದ ಲೆಗ್‌ ಸ್ಪಿನ್ನರ್‌ ವಾನಿಂದು ಹಸರಂಗ ಅವರನ್ನು ಸೇಂಟ್‌ ಕಿಟ್ಸ್‌ ಅಂಡ್‌ ನೆವೀಸ್‌ ಪೇಟ್ರಿಯಟ್ಸ್‌ ತಂಡ ಆಯ್ಲೆ ಮಾಡಿಕೊಂಡಿದೆ. ತಂಡದಲ್ಲಿ ಮತ್ತು ಡ್ವೇಯ್ನ್ ಬ್ರಾವೊ ಅವರಂತಹ ದಿಗ್ಗಜ ಆಟಗಾರರಾಗಿದ್ದರು. ಕಳೆದ ಆವೃತ್ತಿಗಳಲ್ಲಿ ಜಮೈಕಾ ತಲಾವಾಸ್‌ ತಂಡದ ಪರ ಆಡಿದ್ದ ನೇಪಾಳದ ಲೆಗ್‌ ಸ್ಪಿನ್ನರ್‌ ಸಂದೀಪ್ ಲಾಮಿಚಾನೆ, ಮುಂದಿನ ಟೂರ್ನಿಯಲ್ಲಿ ಟ್ರಿನ್ಬಾಗೊ ನೈಟ್‌ ರೈಡರ್ಸ್‌ ತಂಡದ ಪರ ಆಡಲಿದ್ದಾರೆ. ಫವಾದ್‌ ಆಲಮ್ ಸ್ಥಾನದಲ್ಲಿ ಕೈರೊನ್ ಪೊಲಾರ್ಡ್‌ ಸಾರಥ್ಯದ ಟ್ರಿನ್ಬಾಗೊ ತಂಡ ಸಂದೀಪ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಿಪಿಎಲ್ 2020 ಟೂರ್ನಿಯಲ್ಲಿ ಗಯಾನ ಅಮೇಝಾನ್ ವಾರಿಯರ್ಸ್‌ ತಂಡದ ಪರ ಆಡಿದ್ದ ಅಫಘಾನಿಸ್ತಾನದ ರಶೀದ್‌ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ರಾಷ್ಟ್ರೀಯ ತಂಡದ ಸೇವೆ ನಿಮಿತ್ತ ಈ ಬಾರಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸೇಂಟ್ ಲೂಸಿಯಾ ಝೂಕ್ಸ್‌ ಪರ ಆಡಿದ್ದ ಮೊಹಮ್ಮದ್‌ ನಬಿ ಕೂಡ ಹೊರಗುಳಿದಿದ್ದಾರೆ. ಕೆರಿಬಿಯನ್ ಪ್ರೀಮಿಯರ್‌ ಲೀಗ್‌ ಆಗಸ್ಟ್‌ 28ರಂದು ಆರಂಭವಾಗಲಿದ್ದು, ಟೂರ್ನಿಯ ಎಲ್ಲ 3 ಪಂದ್ಯಗಳು ಸೇಂಟ್‌ ಕಿಟ್ಸ್‌ ಅಂಡ್‌ ನೆವೀಸ್‌ ಅಂಗಣದಲ್ಲಿ ಆಯೋಜನೆ ಆಗಲಿದ್ದು, ಎಲ್ಲಾ 6 ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಜಮೈಕಾ ತಲಾವಾಸ್‌ಆಂಡ್ರೆ ರಸೆಲ್, ಕಾಲೋಸ್‌ ಬ್ರಾತ್ವೇಟ್‌, ರೋವ್ಮನ್ ಪೊವೆಲ್, ಫೀಡೆಲ್‌ ಎಡ್ವರ್ಡ್ಸ್‌, ವೀರಸ್ವಾಮಿ ಪೆರುಮಾಳ್, ರಯಾನ್ ಪ್ರಸಾದ್, ಶಕಿಬ್ ಅಲ್ ಹಸನ್, ಹೈದರ್ ಅಲಿ, ಚಾಡ್ವಿಕ್ ವಾಲ್ಟನ್, ಕಾಸಿ ಅಹ್ಮದ್, ಜೇಸನ್ ಮೊಹಮ್ಮದ್, ಮಿಗ್ಯೂಲ್ ಪ್ರೆಟೋರಿಯಸ್, ಕೆನಾರ್ ಲೂಯಿಸ್, ಇಬ್ರಾಹಿಮ್ ಝದ್ರಾನ್, ಅಭಿಜಯ್ ಮಾನ್‌ಸಿಂಗ್, ಜೊಶುವಾ ಜೇಮ್ಸ್‌, ಕಿರ್ಕ್ ಮಕೆನ್ಜಿ. ಟ್ರಿನ್ಬಾಗೊ ನೈಟ್ ರೈಡರ್ಸ್ಕೈರೊನ್ ಪೊಲಾರ್ಡ್, ಆಂಡರ್ಸನ್ ಫಿಲಿಪ್, ಟಿಯಾನ್ ವೆಬ್‌ಸ್ಟರ್, ಅಕೀಲ್ ಹೊಸೈನ್, ಜೇಡೆನ್ ಸೀಲ್ಸ್, ಅಲಿ ಖಾನ್, ಸಂದೀಪ್ ಲಮಿಚಾನೆ, ಇಸುರು ಉದಾನಾ, ರವಿ ರಾಂಪಾಲ್, ದಿನೇಶ್ ರಾಮ್ದಿನ್, ಲಿಯೊನಾರ್ಡೊ ಜೂಲಿಯನ್, ಸುನಿಲ್ ನರೈನ್, ಕಾಲಿನ್ ಮುನ್ರೊ, ಡರ್ರೆನ್ ಬ್ರಾವೋ, ಲೆಂಡ್ಲ್ ಸಿಮನ್ಸ್, ಖಾರಿ ಪಿಯರ್, ರೀಝಾ ಹೆಂಡ್ರಿಕ್ಸ್‌. ಗಯಾನಾ ಅಮೆಝಾನ್ ವಾರಿಯರ್ಸ್ನಿಕೋಲಸ್ ಪೂರನ್, ಚಂದ್ರಪಾಲ್ ಹೇಮರಾಜ್, ಓಡಿಯನ್ ಸ್ಮಿತ್, ಆಂಥೋನಿ ಬ್ರಾಂಬಲ್, ಕೆವಿನ್ ಸಿಂಕ್ಲೇರ್, ಅಶ್ಮೀದ್ ನೆಡ್, ಶೊಯೇಬ್ ಮಲಿಕ್, ವಾಕರ್ ಸಲಾಮ್ಖೀಲ್, ನಿಯಾಲ್ ಸ್ಮಿತ್, ಗುಡಕೇಶ್ ಮೋಟಿ, ಮೊಹಮ್ಮದ್ ಹಫೀಜ್, ಶಿಮ್ರಾನ್ ಹೆಟ್ಮಾಯೆರ್, ಇಮ್ರಾನ್ ತಾಹಿರ್, ಬ್ರಾಂಡನ್ ಕಿಂಗ್, ನವೀನ್ ಉಲ್ಹಕ್, ರೊಮೇರಿಯೊ ಶಪರ್ಡ್‌. ಸೇಂಟ್ ಲೂಸಿಯಾ ಝೂಕ್ಸ್‌ಆಂಡ್ರೆ ಫ್ಲೆಚರ್, ಜಾವ್ಲೆ ಗ್ಲೆನ್, ಫಾಫ್ ಡು'ಪ್ಲೆಸಿಸ್, ಕೀಮೋ ಪಾಲ್, ವಹಾಬ್ ರಿಯಾಝ್, ಮ್ಯಾಥ್ಯೂ ವೇಡ್, ಉಸ್ಮಾನ್ ಖಾದಿರ್, ಸಮಿತ್ ಪಟೇಲ್, ಮಾರ್ಕ್ ಡಯಾಲ್, ಕೆರಾನ್ ಕೊಟ್ಟೊಯ್, ಜೆವರ್ ರಾಯಲ್, ಕದೀಮ್ ಅಲ್ಲೆನ್, ಕೆಸ್ರಿಕ್ ವಿಲಿಯಮ್ಸ್, ರಾಖೀಮ್ ಕಾರ್ನ್‌ವಾಲ್, ರಾಸ್ಟನ್ ಚೇಸ್, ಓಬೆಡ್ ಮೆಕಾಯ್, ಮಾರ್ಕ್ ಡಯಾಲ್. ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಟ್ಸ್‌ಎವಿನ್ ಲೂಯಿಸ್, ಕ್ರಿಸ್ ಗೇಲ್, ಎನ್ರಿಚ್ ನೊರ್ಕಿಯ, ರಾಸ್ಸಿ ವಾನ್ ಡೆರ್ ಡುಸೆನ್, ಡ್ವೇನ್ ಬ್ರಾವೋ, ಶೆರ್ಫೇನ್ ರುದರ್ಫೋರ್ಡ್, ವಾನಿಂದು ಹಸರಂಗ, ರಹಮನುಲ್ಲಾ ಗುರ್ಬಾಜ್, ಕಾಲಿನ್ ಆರ್ಚಿಬಾಲ್ಡ್, ಮೈಕೆಲ್ ಲೂಯಿಸ್, ಡೆವೊನ್ ಥಾಮಸ್, ಫೇಬಿಯೆನ್ ಅಲೆನ್, ಶೆಲ್ಡನ್ ಕಾಟ್ರೆಲ್, ರಾಯಡ್ ಎಮ್ರಿಟ್, ಜಾನ್ ರಶ್ ಜಗ್ಗರ್ಸ್, ಜೊಶುವಾ ಡಾ ಸಿಲ್ವಾ, ಡೊಮಿನಿಕ್ ಡ್ರೇಕ್ಸ್. ಬಾರ್ಬೆಡೋಸ್ ಟ್ರೈಡೆಂಟ್ಸ್ಜೇಸನ್ ಹೋಲ್ಡರ್, ನಯೀಮ್ ಯಂಗ್, ಜೋಶುವಾ ಬಿಷಪ್, ಕ್ರಿಸ್ ಮೋರಿಸ್, ತಿಸರಾ ಪೆರೆರಾ, ಮೊಹಮ್ಮದ್ ಅಮೀರ್, ಓಶೇನ್ ಥಾಮಸ್, ಆಝಮ್ ಖಾನ್, ಆಷ್ಲೇ ನರ್ಸ್, ಶಫೀಖ್ ಉಲ್ಲಾ ಗಫಾರಿ, ಸಮಿತ್ ಪಟೇಲ್, ಜಾನ್ಸನ್ ಚಾರ್ಲ್ಸ್, ಶೇಯ್ ಹೋಪ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್, ರೇಮನ್ ರೀಫರ್, ಜಸ್ಟಿನ್ ಗ್ರೀವ್ಸ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yJnjnv

ನಾಯಕತ್ವ ಬದಲಾವಣೆ ಚರ್ಚೆ: ಬಿಎಸ್‌ವೈಯನ್ನು ಭೇಟಿ ಮಾಡಿದ ಆಪ್ತ ಶಾಸಕರು! ಕುತೂಹಲ ಕೆರಳಿಸಿದ ಮಾತುಕತೆ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಅವರನ್ನು ಭಾನುವಾರ ಬಿಜೆಪಿಯ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಭಾನುವಾರ ಸಿಎಂ ನಿವಾಸ ಕಾವೇರಿಯಲ್ಲಿ ಶಾಸಕರಾದ ರಾಜುಗೌಡ, ಎಂಪಿ ರೇಣುಕಾಚಾರ್ಯ, ನಿರಂಜನ ಕುಮಾರ್, ಎಂಪಿ ಕುಮಾರಸ್ವಾಮಿ, ರಾಜಕೀಯ ಕಾರ್ಯದರ್ಶಿ ಜೀವರಾಜ್, ಬೆಳ್ಳಿ ಪ್ರಕಾಶ್, ಅರುಣ್ ಕುಮಾರ್ ಪೂಜಾರ್, ಬಸವರಾಜ ದಡೇಸಗೂರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಾಸಕರು ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಭೇಟಿ‌ ಮಾಡಿ ಕ್ಷೇತ್ರದ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು ಎಂದು ಅಧಿಕೃತವಾಗಿ ಹೇಳಲಾಗುತ್ತಿದ್ದರೂ ರಾಜಕೀಯ ವಿಚಾರವಾಗಿ ಚರ್ಚೆ ನಡೆದಿದೆ ಎಂಬ ಮಾಹಿತಿಗಳು ಮೂಲಗಳಿಂದ ಲಭ್ಯವಾಗಿದೆ. ಸಿಎಂ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಸಚಿವ ಸಿ.ಪಿ ಯೋಗೀಶ್ವರ್‌ ಅವರು ಬಹಿರಂಗ ಆರೋಪ ಮಾಡಿದ್ದರು. ಅಲ್ಲದೆ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧವೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪವನ್ನು ಮಾಧ್ಯಮಗಳ ಮುಂದೆ ಮಾಡಿದ್ದರು. ಅಷ್ಟೇ ಅಲ್ಲದೆ ದೆಹಲಿಗೆ ತೆರಳಿ ಈ ಕುರಿತಾಗಿ ಹೈಕಮಾಂಡ್‌ ಭೇಟಿಯನ್ನು ಸಿಪಿ ಯೋಗೀಶ್ವರ್‌ ಸೇರಿದಂತೆ ಕೆಲವು ಶಾಸಕರು ನಡೆಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಆದರೆ ನಾಯಕತ್ವ ಬದಲಾವಣೆ ವಿಚಾರವನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ನಿರಾಕರಿಸಿದ್ದರು. ಇನ್ನು ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ಸಚಿವ ಸಿಪಿವೈ ವಿರುದ್ಧ ಎಂಪಿ ರೇಣುಕಾಚಾರ್ಯ ಸೇರಿದಂತೆ ಬಿಎಸ್‌ವೈ ಆಪ್ತರು ಕಿಡಿಕಾರಿದ್ದರು. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಇದೀಗ ಸುಮಾರು 15 ಶಾಸಕರು ಜೊತೆಗೂಡಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.


from India & World News in Kannada | VK Polls https://ift.tt/3uwfEW5

ಕಲ್ಲಂಗಡಿ ರೈತನ ಕಂಗೆಡಿಸಿದ ಕೊರೊನಾ..! ಹೊಲದಲ್ಲೇ ಕೊಳೆಯುತ್ತಿದೆ ಹಣ್ಣು..!

ಪಿ.ಎಚ್‌. ಕೃಷ್ಣಮೂರ್ತಿ ಮಾಯಕೊಂಡ (): ಬಿರು ಬೇಸಿಗೆ ಈ ಹೊತ್ತಲ್ಲಿ ನೆತ್ತಿ ತಂಪಾಗಿಸುವ ಹಣ್ಣಿಗೆ ಡಿಮ್ಯಾಂಡ್‌ ಹೆಚ್ಚಿ ಬೆಳೆದ ಕೈ ತುಂಬಾ ಝಣ ಝಣ ಕಾಂಚಾಣ ಎಣಿಸಬೇಕಿತ್ತು. ಆದರೆ ಮತ್ತು ಲಾಕ್‌ಡೌನ್‌, ಕಲ್ಲಂಗಡಿ ಬೆಳೆದ ರೈತನನ್ನು ಕಂಗೆಡಿಸಿ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ಕೊರೊನಾ ಕಾಲದಲ್ಲಿ ಕಲ್ಲಂಗಡಿ ಬೆಳೆದ ರೈತ ಕಂಗೆಟ್ಟಿದ್ದಾನೆ. ಲಾಕ್‌ಡೌನ್‌ ಇಲ್ಲದೆ ಇದ್ದರೆ ಅಷ್ಟೋ ಇಷ್ಟೋ ಕಾಸು ಎಣಿಸಬಹುದಿತ್ತು. ಆದರೆ ಅದಕ್ಕೂ ಬರೆ ಬಿದ್ದಿದೆ. ಜಮೀನುಗಳಲ್ಲಿ ಕಲ್ಲಂಗಡಿ ಫಸಲು ತುಂಬಿದ್ದು ಡಿಮ್ಯಾಂಡ್‌ ಇಲ್ಲದೆ, ಸೂಕ್ತ ಇಲ್ಲದೇ ಹೊಲದಲ್ಲಿಯೇ ಕೊಳೆಯುವಂತಾಗಿದೆ. ಇಲ್ಲಿನ ಕೊಡಗನೂರು ಗ್ರಾಮದ ರೈತರಾದ ಕೆ.ಎಸ್‌. ಮಂಜುನಾಥ್‌ ಬಾಬರ್‌ ಹಾಗೂ ಹನುಮಂತರಾವ್‌ ಬಾಬರ್‌ ಸಹೋದರರು 2 ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಇಳುವರಿಯೇನೋ ಉತ್ತಮವಾಗಿದೆ. ಆದರೆ ಮಾರುಕಟ್ಟೆ ಇಲ್ಲ, ಹಣ್ಣಿಗೆ ದರವೂ ಇಲ್ಲ. ಸುಮಾರು 250 ಟನ್‌ಗಿಂತ ಅಧಿಕ ಹಣ್ಣು ಬಳ್ಳಿಯಲ್ಲೇ ಕೊಳೆಯುತ್ತಿದೆ. ಈಗಾಗಲೇ ಕಿತ್ತು ರಾಶಿ ಹಾಕಿರುವ 50 ಟನ್‌ಗಿಂತ ಅಧಿಕ ಹಣ್ಣು ಕೇಳುವವರಿಲ್ಲದೆ ಹಾಳಾಗಿದೆ ಎಂದು ರೈತರು ಹೇಳುತ್ತಾರೆ. ಒಂದು ಕೆಜಿ ಕಲ್ಲಂಗಡಿ ಬೀಜಕ್ಕೆ 26 ಸಾವಿರ ರೂ. ಇದೆ. 2 ಎಕರೆಗೆ 750 ಗ್ರಾಂ ಬೀಜ ಹಾಕಿದ್ದೇವೆ. ಒಟ್ಟು 20 ಸಾವಿರ ಆಗಿದೆ. ಸುಮಾರು 1 ಲಕ್ಷ ರೂ. ಗಳನ್ನು ಖರ್ಚು ಮಾಡಿ ಮಲ್ಚಿಂಗ್‌ ಮಾಡಿದ್ದೇವೆ. ಗೊಬ್ಬರ, ಕೀಟ ನಾಶಕ, ಕೂಲಿ ಸೇರಿ ಒಟ್ಟು 3 ಲಕ್ಷ ಖರ್ಚು ಮಾಡಿದ್ದು ಹಾಕಿರುವ ಹಣ ವಾಪಸ್‌ ಬಂದರೆ ಸಾಕು ಎನ್ನುತ್ತಾರೆ ಈ ರೈತ. ಇವರಿಗೆ 25 ಎಕರೆ ಜಮೀನಿದ್ದು, 5 ಎಕರೆ ತೆಂಗು ಉಳಿದ 20 ಎಕರೆಯಲ್ಲಿ ನಾನಾ ಹಣ್ಣು, ತರಕಾರಿ ಬೆಳೆದಿದ್ದು ಎಲ್ಲ ಬೆಳೆಗೂ ಇದೇ ಪರಿಸ್ಥಿತಿಯಿದೆ. ಈ ಭಾಗದಲ್ಲಿ ಕಲ್ಲಂಗಡಿ ಬೆಳೆವ ರೈತರು ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಸಾಗಾಟ ಮಾಡಿ ಲಾಭ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ಎಲ್ಲೆಡೆ ಬಂದ್‌ ಇರೋದ್ರಿಂದ ಮಾರುಕಟ್ಟೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂ. ಹಣ ವ್ಯಯಿಸಿ ಈಗ ಸಾವಿರ ರೂ.ಲೆಕ್ಕದಲ್ಲಿ ಪಡೆಯುವಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ಸರಕಾರ ಪರಿಹಾರ ನೀಡುವುದಾಗಿ ಹೇಳಿದ್ದು ಯಾವ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲನೆ ಮಾಡಿಲ್ಲ, ಪರಿಹಾರ ನೀಡಬೇಕು ಇಲ್ಲವೇ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಒದಗಿಸಬೇಕು ಎಂದು ರೈತರು ಒತ್ತಾಯಿಸುತ್ತಾರೆ.


from India & World News in Kannada | VK Polls https://ift.tt/2RV85Lq

ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ! ಕಾಂಗ್ರೆಸ್ ಆರೋಪ

ಬೆಂಗಳೂರು: ಕೋವಿಡ್‌ ನಿಂದ ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ ಎಂದು ಲೇವಡಿ ಮಾಡಿದೆ. ಟ್ವಿಟ್ಟರ್‌ನಲ್ಲಿ ವಿರುದ್ಧ ಕಾಂಗ್ರೆಸ್ ಈ ರೀತಿಯ ಆರೋಪ ಮಾಡಿದೆ. ಕೊರೊನಾ ಕಾಲಘಟ್ಟವನ್ನು ಉಭಯ ಸರ್ಕಾರಗಳು ಭರಪೂರ ಲೂಟಿಗೆ ಬಳಸಿಕೊಳ್ಳುತ್ತಿವೆ. ಈ ಹೆಣದ ಮೇಲಿನ ಹಣಕ್ಕಾಗಿಯೇ ಬಿಜೆಪಿಯಲ್ಲಿ ಕಿತ್ತಾಟ ಶುರುವಾಗಿರುವುದು ಎಂದು ಆರೋಪಿಸಿದೆ. ಪಿಎಂ ಕೇರ್ಸ್‌ನಿಂದ ಹಿಡಿದು ಔಷಧ ಕಾಳಸಂತೆ, ಲಸಿಕೆ ಬ್ಲಾಕಿಂಗ್‌ವರೆಗೂ ಚಾಚಿವೆ ಇವರ ಬಾಚಿ ತಿನ್ನುವ ಕೈಗಳು ಎಂದು ಕಿಡಿಕಾರಿದೆ. ಬಿಜೆಪಿ ಶಾಸಕರೊಬ್ಬರ ವಿರುದ್ಧ ಬೆಡ್‌ಬ್ಲಾಕ್‌ ದಂಧೆಯಲ್ಲಿ ಶಾಮೀಲು ಆರೋಪ ಕೇಳಿ ಬಂದಿತ್ತು. ಇದೀಗ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡುವ ಮೂಲಕ ಹಣ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಲಸಿಕೆ ಕಮಿಷನ್ ಆರೋಪ ಕೇಳಿ ಬಂದಿದೆ. ಉಚಿತವಾಗಿ ನೀಡಬೇಕಾಗಿದ್ದ ಕೋವಿಡ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಇದರಲ್ಲಿ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ ವೆಂಕಟೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯಕ್ತರಿಗೆ ದೂರನ್ನು ನೀಡಿದ್ದಾರೆ. ಈ ಆಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಗಂಭೀರ ಆರೋಪ ಮಾಡುವ ಮೂಲಕ ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ತಮ್ಮ ಮೇಲೆ ಬಂದಿರುವ ಆರೋಪವನ್ನು ಶಾಸಕ ರವಿ ಸುಬ್ರಹ್ಮಣ್ಯ ನಿರಾಕರಿಸಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಆರೋಪ ಮಾಡಿದ್ದಾರೆ.


from India & World News in Kannada | VK Polls https://ift.tt/3c44bXD

ಕೊರೊನಾ ಕಾಲದಲ್ಲಿ ಕೂಡಿಬರದ 'ಕಂಕಣ ಬಲ'..! ಮುರಿದುಬೀಳ್ತಿವೆ ನಿಶ್ಚಿತಾರ್ಥ..!

ಬಸವರಾಜ ಜುಮನಾಳ ಬೇವೂರ: ಕೊರೊನಾ ಎರಡನೇ ಅಲೆಗೆ ಸಿಲುಕಿ ನಿಶ್ಚಿತಾರ್ಥ, , ಮುಂಜಿಯಂತಹ ಶುಭ ಕಾರ್ಯಗಳು ಮುಂದೂಡಿಕೆಯಾಗುತ್ತಿದ್ದು, ಹಲವು ಕನಸುಗಳನ್ನು ಹೊತ್ತ ಜೋಡಿಗಳು ಕಂಕಣ ಬಲ ಕೂಡಿಬರದೇ ನಿರಾಸೆಯಾಗುತ್ತಿದ್ದಾರೆ. ಜತೆಗೆ ಕೆಲವೆಡೆ ನಿಶ್ಚಿತಾರ್ಥಗಳು ಮುರಿದು ಬೀಳುತ್ತಿವೆ. ಕಳೆದ ವರ್ಷ ಮದುವೆ ಸೀಜನ್‌ನಲ್ಲೇ ಕೊರೊನಾ ಹೆಮ್ಮಾರಿ ವಕ್ಕರಿಸಿದ್ದರಿಂದ ಈ ಬಾರಿಯಾದರೂ ಭರ್ಜರಿಯಾಗಿ ಮದುವೆ ಮಾಡಬೇಕು ಎಂದು ಪ್ಲ್ಯಾನ್‌ ಮಾಡಿಕೊಂಡಿದ್ದ ಹಲವರಿಗೆ ನಿರಾಸೆಯಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನಮಗೆ ಇನ್ನೂ ಕಂಕಣ ಭಾಗ್ಯ ಕೂಡಿಬರುತ್ತಿಲ್ಲ ಎಂದು ಜೋಡಿಗಳು ಮಾತನಾಡಿಕೊಳ್ಳುವಂತಾಗಿದೆ. ಕಟ್ಟುನಿಟ್ಟಿನ ಲಾಕ್‌ಡೌನ್‌ ಪಾಲನೆಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಕಲ್ಯಾಣ ಮಂಟಪಗಳಿಗೆ ಬೀಗ ಬಿದ್ದು ಮದುವೆಗಳು ರದ್ದಾಗಿವೆ. ಜತೆಗೆ ಕೆಲವೆಡೆ ನಿಶ್ಚಿತಾರ್ಥವೂ ಮುರಿದುಬೀಳುತ್ತಿವೆ. ಇದೆಲ್ಲಾ ಕೊರೊನಾ ಸೃಷ್ಟಿಸಿದ ಅವಾಂತರ ಕಾರಣ. ಕೂಡಿ ಬಂದ ಕಂಕಣ ಬಲವೂ ಮುರಿದು ಬೀಳುತ್ತಿರುವುದನ್ನು ಕಂಡು ಪಾಲಕರು ಕಂಗಾಲಾಗಿದ್ದಾರೆ. ಈ ನಿಶ್ಚಿತಾರ್ಥಗಳಿಗೆ ಮಧ್ಯಸ್ಥಿಕೆ ವಹಿಸಿದ ಸಮಾಜದ ಹಿರಿಯರು, ಬಂಧುಗಳಲ್ಲಿ ದಿಗಿಲು ಹುಟ್ಟಿಸಿದೆ ಈ ಹೊಸ ಬೆಳವಣಿಗೆ. ಬದುಕಿದ್ರೆ ನೋಡೋಣ: ಕೊರೊನಾ ಸೋಂಕು ಯಾರನ್ನೂ ಬಿಟ್ಟಿಲ್ಲ. ಮದುವೆಗೆ ಸಜ್ಜಾದವರನ್ನೂ ಕಾಡಿದೆ. ಹೀಗೆ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದವರು ಮದುವೆ ವಿಚಾರದಿಂದ ಹಿಂದೆ ಸರಿಯುತ್ತಿರುವ ಪ್ರಕರಗಳು ಬೆಳಕಿಗೆ ಬರುತ್ತಿವೆ. ಸಾವಿರ ಸಮಸ್ಯೆಗಳ ಮೆಟ್ಟಿಲು ದಾಟಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳು, ಇದೀಗ ಮದುವೆ ಮಾತನ್ನೇ ಮರೆತು ಸದ್ಯಕ್ಕೆ ಏನೂ ಬೇಡ ಎನ್ನುವ ನಿಲುವಿಗೆ ಬರುತ್ತಿದ್ದಾರೆ. ಕೆಲಸ ಉಳಿದ್ರೆ ಮದುವೆ: ಕೊರೋನಾ ಹಾವಳಿ, ಲಾಕ್‌ಡೌನ್‌ ಆರ್ಥಿಕ ನಷ್ಟ, ಇತ್ಯಾದಿ ಕಾರಣಗಳಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟವೂ ಆಗುತ್ತಿದ್ದು, ಮದುವೆಗೆ ಸಜ್ಜಾದ ಖಾಸಗಿ ಕಂಪನಿ ನೌಕರರು ಇದೀಗ ತಮ್ಮ ಆ ಪ್ರಯತ್ನದಿಂದ ಹಿಂದಡಿ ಇಡುತ್ತಿರುವ ಬೆಳವಣಿಗೆಗಳೂ ನಡೆದಿವೆ. 'ಕೊರೊನಾ ಎಲ್ಲರ ನಿದ್ದೆಗೆಡಿಸಿದೆ. ಮಕ್ಕಳ ಮದುವೆ ಚಿಂತೆ ಕಾಡುತ್ತಿದೆ. ಹೆಣ್ಣಿನ ಕಡೆಯಿಂದ ಅವಸರ ಬೇಡ ಎಂದರೂ ಕೇಳುತ್ತಿಲ್ಲ. ಇತ್ತ ಸರಕಾರ ಬಿಗಿ ನಿಯಮ ಹೇರಿದೆ. ಹೇಗೆ ಮಾಡುವುದು ಎನ್ನುವುದೇ ಚಿಂತೆಯಾಗಿದೆ' ಎನ್ನುತ್ತಾರೆ, ಗ್ರಾಮಸ್ಥ ಶರಣಪ್ಪ ಚಿಕ್ಕಮ್ಯಾಗೇರಿ 'ಯಾವುದೇ ಮದುವೆಗಳಿಗೆ ತಡೆವೊಡ್ಡಿಲ್ಲ. ಸರಕಾರದ ನಿಯಮ ಪಾಲಿಸಿ ಕಾರ್ಯಕ್ರಮ ನಡೆಸಿ ಎಂದು ತಿಳಿಸಲಾಗುತ್ತಿದೆ. ಮದುವೆ ಕಾರ್ಯಕ್ರಮಕ್ಕೆ ತಾಲೂಕು ಆಡಳಿತದಿಂದ ಒಪ್ಪಿಗೆ ಪಡೆದು ನಿಯಮಗಳಂತೆ ನಡೆಸಬಹುದು' ಎಂದು ಬಾಗಲಕೋಟೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಸ್ಪಷ್ಟನೆ ನೀಡಿದ್ದಾರೆ.


from India & World News in Kannada | VK Polls https://ift.tt/3fwM6U0

ಪ್ರತಿಯೊಬ್ಬ ಬೌಲರ್‌ ಮಂಕಡ್‌ ಮಾಡಲು ಮುಂದಾಗಬೇಕು ಎಂದ ಶಾಮ್ಸಿ!

ಹೊಸದಿಲ್ಲಿ: ಕ್ರಿಕೆಟ್‌ ಜಗತ್ತಿನಲ್ಲಿ ಸದಾ ಹಸಿ ಬಿಸಿ ಚರ್ಚೆಗೆ ಕಾರಣವಾಗುವ '' ರನ್‌ಔಟ್‌ ಬಗ್ಗೆ ಇದೀಗ ದಕ್ಷಿಣ ಆಫ್ರಿಕಾದ ಸ್ಟಾರ್‌ ಸ್ಪಿನ್ನರ್‌ ತಬ್ರೇಝ್‌ ಶಾಮ್ಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ನ ನಿಯಮಗಳ ಪ್ರಕಾರ ಬೌಲರ್‌ ಚೆಂಡನ್ನು ಎಸೆಯುವ ಮೊದಲು ನಾನ್‌ ಸ್ಟ್ರೈಕ್‌ನಲ್ಲಿರುವ ಬ್ಯಾಟ್ಸ್‌ಮನ್‌ ಯಾವುದೇ ಕಾರಣಕ್ಕೂ ಕ್ರೀಸ್‌ನಿಂದ ಹೊರಬರುವ ಹಾಗಿಲ್ಲ. ಹೀಗೆ ಬೌಲರ್‌ ಚೆಂಡನ್ನು ಎಸೆಯೋ ಮೊದಲೇ ರನ್‌ ಕದಿಯಲು ಮುಂದಾಗುವ ನಾನ್‌ ಸ್ಟ್ರೈಕರ್‌ನ ಬೌಲರ್‌ ರನ್‌ಔಟ್‌ ಮಾಡಬಹುದಾಗಿದೆ. ಕ್ರಿಕೆಟ್‌ ಜಗತ್ತಿನಲ್ಲಿ ಈ ರೀತಿಯ ರನ್‌ಔಟ್‌ಗಳ ಉದಾಹರಣೆ ಬಹಳಷ್ಟಿದೆ. ಭಾರತ ತಂಡ ಮಾಜಿ ನಾಯಕ ವಿನೂ ಮಂಕಡ್‌ ಅವರಿಂದ ಈ ರೀತಿಯ ರನ್‌ಔಟ್‌ ಹೆಚ್ಚು ಸುದ್ದಿ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಮಂಕಡಿಂಗ್ ಎಂದೇ ಕರೆಯಲಾಗುತ್ತದೆ. ಇತ್ತೀಚಿನ ದಿನಳಲ್ಲಿ ಮಂಕಡಿಂಗ್ ಮೂಲಕ ರನ್‌ಔಟ್‌ ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಎಂದು ಹಲವರು ವಾದಿಸಿದ್ದಾರೆ. ಆದರೆ ನಿಯಮಗಳನ್ನು ಗಮನಿಸಿದರೆ. ಇದು ನ್ಯಾಯ ಸಮ್ಮತವಾದುದ್ದಾಗಿದೆ. ಇಂದು ಬ್ಯಾಟ್ಸ್‌ಮನ್‌ ಸ್ನೇಹಿ ಆಗಿರುವ ಕ್ರಿಕೆಟ್‌ನಲ್ಲಿ ನಿಯಮ ಬದ್ಧವಾಗಿ ಮಂಕಡಿಂಗ್ ಮೂಲಕ ಔಟ್‌ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಭಾರತ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ಇತ್ತೀಚಿನ ದಿನಗಳಲ್ಲಿ ಬಲವಾಗಿ ವಾದಿಸುತ್ತಾ ಬಂದಿದ್ದಾರೆ. ಅಂದಹಾಗೆ 2019ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಅವರನ್ನು ಆರ್‌ ಅಶ್ವಿನ್ ಇದೇ ರೀತಿಯಲ್ಲಿ ರನ್‌ಔಟ್‌ ಮಾಡಿದ್ದರು. ಅಂದು ರಾಯಲ್ಸ್‌ ತಂಡ ಇನ್ನೇನು ಬಟ್ಲರ್‌ ಆರ್ಭಟದ ಬಲದಿಂದ ಪಂದ್ಯ ಗೆಲ್ಲುವುದಿತ್ತು. ಆ ಸಂದರ್ಭದಲ್ಲಿ ಅಶ್ವಿನ್ ತಮ್ಮ ಸಮಯ ಪ್ರಜ್ಞೆಯ ಮೂಲಕ ಬಟ್ಲರ್‌ಗೆ ಮಂಕಡಿಂಗ್ ಮೂಲಕ ಪೆವಿಲಿಯನ್ ದಾರಿ ತೋರಿದ್ದರು. ಆದರೆ, ಇದು ಕ್ರಿಕೆಟ್‌ ಜಾಗತ್ತಿನಲ್ಲಿ ಇನ್ನಿಲ್ಲದ ಚರ್ಚೆಗೆ ಕಾರಣವಾಯಿತು. ಹಲವುರು ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ವಾದಿಸಿದರೆ. ನಿಯಮಗಳ ಪ್ರಕಾರ ಇದು ಸರಿ. ಬ್ಯಾಟ್ಸ್‌ಮನ್‌ಗಳು ಮೊದಲೇ ಕ್ರೀಸ್‌ನಿಂದ ಹೊರಗುಳಿಯುವುದು ಮೋಸ ಮಾಡಿದಂತೆ ಎಂದು ಅಶ್ವಿನ್ ಪರವಾಗಿ ಹಲವರು ನಿಂತರು. ಇದೀಗ ಈ ಬಗ್ಗೆ ಚರ್ಚೆಗೆ ಇಳಿದಿರುವ ಹರಿಣ ಪಡೆಯ ಸ್ಟಾರ್‌ ಸ್ಪಿನ್ನರ್‌ ತಬ್ರೇಝ್‌ ಶಾಮ್ಸಿ, ಪ್ರತಿಯೊಬ್ಬ ಬೌಲರ್‌ ಕೂಡ ಇಂದು ಮಂಕಡ್‌ ಮಾಡುವ ಅಗತ್ಯವಿದೆ. ಇಲ್ಲಿ ಅಂಜಿಕೊಳ್ಳುವ ಪ್ರಶ್ನೆಯೇ ಎದುರಾಗಬಾರದು. ಇದು ನಿಯಮದಲ್ಲೇ ಇದೆ ಎಂದು ಟ್ವೀಟ್‌ ಮಾಡುವ ಮೂಲಕ ಅಶ್ವಿನ್‌ ಹೋರಾಟಕ್ಕೆ ಜೊತೆಯಾಗಿದ್ದಾರೆ. "ಆರ್‌ ಅಶ್ವಿನ್‌... ಎಲ್ಲಾ ಬೌಲರ್‌ಗಳು ಮಂಕಡ್‌ ಮಾಡಲು ಭಯಪಡದೇ ಮುಂದಾಗಬೇಕು. ಇದು ಆಟದ ನಿಯಮದಲ್ಲೇ ಇದೆ. ಅಲ್ಲಿ ಬ್ಯಾಟ್ಸ್‌ಮನ್‌ ಮೋಸ ಮಾಡುತ್ತಿರುವ ಸಂದರ್ಭದಲ್ಲಿ ಬೌಲರ್‌ ಮಂಕಡ್‌ ಮಾಡಿದ್ದಾರೆ. ಇದಕ್ಕೆ ಬೌಲರ್‌ ವಿರುದ್ಧ 'ಕ್ರೀಡಾ ಸ್ಫೂರ್ತಿ' ತೋರಿಲ್ಲ ಎಂದು ನಿಂದಿಸುವುದು ಏಕೆ?," ಎಂದು ಶಾಮ್ಸಿ ಟ್ವೀಟ್‌ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಐಪಿಎಲ್‌ನಲ್ಲಿ ನಡೆದ ಘಟನೆ ಒಂದನ್ನು ಅಶ್ವಿನ್‌ ಬಹಿರಂಗ ಪಡಿಸಿದ್ದರು. 2019ರ ಐಪಿಎಲ್‌ ವೇಳೆ ಪಂಜಾಬ್‌ ಕಿಂಗ್ಸ್‌ ಪರ ಆಡುತ್ತಿದ್ದ ವೇಗಿ ಅಂಕಿತ್ ರಜಪೂತ್‌ ತಾವು ಮಂಕಡ್‌ ಮಾಡಿದರೆ ಎಲ್ಲರೂ ತಮ್ಮನ್ನು ಖಳ ನಾಯಕನ ರೀತಿ ಕಾಣುತ್ತಾರೆ ಎಂದು ಹೇಳಿಕೊಂಡಿದ್ದರು ಎಂಬ ವಿಚಾರವನ್ನು ಅಶ್ವಿನ್ ಹೊರಹಾಕಿದ್ದರು. ಮಂಕಡ್‌ ಮಾಡಿದರೆ ಬೌಲರ್‌ನ ವಿಲನ್‌ ರೀತಿ ಕಾಣುವುದರಿಂದ ಆತನ ಮೇಲೆ ಎದುರಾಗುವ ಮಾನಸಿಕ ಚಿತ್ರಹಿಂಸೆಯ ಬಗ್ಗೆ ಒಮ್ಮೆ ಆಲೋಚಿಸಿ. ಇದು ನಿಲ್ಲಬೇಕು, ನಿಯಮ ಬದ್ಧವಾಗಿರುವ ಮಂಕಡ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು 34 ವರ್ಷದ ಆಫ್‌ ಸ್ಪಿನ್ನರ್‌ ಅಶ್ವಿನ್ ವಾದಿಸಿದ್ದರು. ಇದಕ್ಕೆ ಶಾಮ್ಸಿ ಇದೀಗ ಕೈ ಜೋಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yQ8Aak

ಲಾಕ್‌ಡೌನ್ ವಿಸ್ತರಣೆ ವಿಚಾರ: ತಜ್ಞರ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ; ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ವಿಸ್ತರಣೆ ಮಾಡಬೇಕಾ ಬೇಡವೋ ಎಂಬ ವಿಚಾರವನ್ನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಗೃಹ ಸಚಿವ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಜೂನ್‌ ಏಳರವರೆಗೆ ಲಾಕ್‌ಡೌನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 7 ನೇ ತಾರೀಕಿನ ಬಳಿಕ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸಿಎಂ ಬಿಎಸ್‌ ಯಡಿಯೂರಪ್ಪನವರು ತಜ್ಞರ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದರು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಪೈಕಿ ಒಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ 7 ನೇ ತಾರೀಕಿನ ವರೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಯಾರೂ ಸದ್ಯ ಮೈಮರೆಯಬಾರದು. ಕೋವಿಡ್‌ ಪಾಸಿಟಿವ್ ರೇಟ್ ಕಡಿಮೆಯಾಗಬೇಕು, ಸೋಂಕು ಸಂಖ್ಯೆ ಹತೋಟಿಗೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳ ಮೇಲೆ ಜನರೇ ಸ್ವತಃ ನಿರ್ಬಂಧ ಹೇರಿಕೊಳ್ಳಬೇಕು. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್ ಒಂದು ವಾರಗಳ ಕಾಲ ಇದೆ. ಎಲ್ಲರೂ ಸಹಕಾರ ಕೊಡಬೇಕು. ಹೀಗಾದರೆ ಕೋವಿಡ್ ನಿಯಂತ್ರಣ ಆಗಲಿದೆ. 7 ತಾರೀಕಿನ ವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದೇ ವೇಳೆ ಕೇಂದ್ರ ಸರ್ಕಾರ 7 ವರ್ಷ ಪೂರೈಸಿದ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ಆಗಿದೆ. ಎಲ್ಲಾ ಕಾರ್ಯಕರ್ತರಿಗೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹಳ್ಳಿಗಳಿಗೆ ತೆರಳಿ ಕೋವಿಡ್ ಸೇವೆ ಮಾಡುವಂತೆ ಕರೆ ನೀಡಿದ್ದಾರೆ. ರಾಜ್ಯದಲ್ಲೂ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಕಾರ್ಯಕರ್ತರು ಹಳ್ಳಿಗಳಿಗೆ ತೆರಳಿ ಜನರಿಗೆ ಸಹಕಾರ ಮಾಡಲಿದ್ದಾರೆ ಎಂದು ತಿಳಿಸಿದರು.


from India & World News in Kannada | VK Polls https://ift.tt/34v0l5v

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...