
ದುಬೈ: ಭಾರತದಲ್ಲಿ ವೈರಸ್ ಆರ್ಭಟ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಆಮ್ಲಜನಕದ ಕೊರತೆಯೂ ಎದುರಾಗಿದೆ. ಹೀಗಾಗಿ, ಭಾರತದ ನೆರವಿಗೆ ಧಾವಿಸಿದೆ. ಸೌದಿ ಅರೇಬಿಯಾ ದೇಶವು ಭಾರತಕ್ಕೆ 80 ಮೆಟ್ರಿಕ್ ಟನ್ ದ್ರವ ಆಮ್ಲಜನಕವನ್ನು ಭಾರತಕ್ಕೆ ರವಾನಿಸಿದೆ. ಹಡಗಿನ ಮೂಲಕಕ್ಕೆ ದ್ರವ ಆಮ್ಲಜನಕವನ್ನು ಭಾರತಕ್ಕೆ ರವಾನೆ ಮಾಡಲಾಗಿದೆ. ಭಾರತದಲ್ಲಿ ಆಮ್ಲಜನಕದ ಕೊರತೆ ಉಂಟಾಗಿರುವ ಕಾರಣ, ಸೌದಿ ಅರೇಬಿಯಾ ದೇಶವು ಭಾರತದ ನೆರವಿಗೆ ನಿಂತಿದೆ. ಭಾರತದ ಅದಾನಿ ಗ್ರೂಪ್ ಹಾಗೂ ಲಿಂಡೆ ಸಂಸ್ಥೆಯ ಸಹಭಾಗಿತ್ವದೊಂದಿಗೆ ಸೌದಿ ಅರೇಬಿಯಾದಿಂದ ಹಡಗಿನ ಮೂಲಕ ದ್ರವ ತರಿಸಿಕೊಳ್ಳಲಾಗುತ್ತಿದೆ. ಭಾರತದ ಹಲವೆಡೆ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರೋದು ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ದೇಶವು ಭಾರತದ ನೆರವಿಗೆ ಮುಂದಾಗಿದೆ. ಈ ಸಂಬಂಧ ರಿಯಾದ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಅದಾನಿ ಗ್ರೂಪ್ ಹಾಗೂ ಲಿಂಡೆ ಸಂಸ್ಥೆಯ ಸಹಯೋಗದೊಂದಿಗೆ ಭಾರತೀಯ ರಾಯಭಾರ ಕಚೇರಿಯು 80 ಮೆಟ್ರಿಕ್ ಟನ್ ಆಮ್ಲಜನಕವನ್ನು ಹಡಗಿನ ಮೂಲಕ ಭಾರತಕ್ಕೆ ರವಾನಿಸುತ್ತಿದೆ. ಇದಕ್ಕೆ ನೆರವಾದ ಸೌದಿ ಅರೇಬಿಯಾದ ಆರೋಗ್ಯ ಸಚಿವರಿಗೆ ಧನ್ಯವಾದ ಅರ್ಪಿಸುತ್ತಿರೋದಾಗಿ ತಿಳಿಸಿದೆ. ಇದೇ ವಿಚಾರವಾಗಿ ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಕೂಡಾ ಟ್ವೀಟ್ ಮಾಡಿದ್ದಾರೆ. ಮಾನವೀಯತೆ ಮೆರೆದ ಸೌದಿ ಅರೇಬಿಯಾದ ರಾಜ ಸಲ್ಮಾನ್ ಹಾಗೂ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
from India & World News in Kannada | VK Polls https://ift.tt/3njjCzq