ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ಶಾಕ್‌ನಿಂದ ಹೊಡೆತ ತಿಂದಿರುವ ಕಾಂಗ್ರೆಸ್ ಹೈಕಮಾಂಡ್ ಈಗ ಮತ್ತೊಂದು ಸುತ್ತಿನ ರಾಜೀನಾಮೆ ಪರ್ವದಿಂದ ಕಂಗೆಟ್ಟಿದೆ. ಈಗ ರಾಜೀನಾಮೆ ಸಲ್ಲಿಸಿದವರು ಹಾಗೂ . ಈ ಇಬ್ಬರೂ ರಾಹುಲ್ ಗಾಂಧಿಯ ಪರಮಾಪ್ತ ಬಳಗದಲ್ಲಿ ಇರುವವರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಬೆಂಬಲಿಸಿ ಮಿಲಿಂದ್ ದಿಯೋರಾ ಮುಂಬಯಿ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ, ರಾಹುಲ್ ಪರಮಾಪ್ತರಲ್ಲಿ ಒಬ್ಬರಾದ ಜ್ಯೋತಿರಾದಿತ್ಯ ಸಿಂಧಿಯಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯಕ ಸಾಧನೆಯ ಹಿನ್ನೆಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
from India & World News in Kannada | VK Polls https://ift.tt/2L8rWBG