ಜಿಂದ್: ಆಡಬೇಡ ಎಂದು ಬೈದ ತಾಯಿ ಮೊಬೈಲ್‌ನ್ನು ಕಸಿದುಕೊಂಡಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣಾದಲ್ಲಿ ಭಾನುವಾರ ನಡೆದಿದೆ. 10ನೇ ತರಗತಿವರೆಗೆ ಓದಿರುವ ಬಾಲಕ ಕಳೆದ ವರ್ಷ ಶಿಕ್ಷಣವನ್ನು ಮೊಟಕುಗೊಳಿಸಿದ್ದ. ಸದಾ ಪಬ್‌ಜಿ ಆಡಿಕೊಂಡೇ ಸಮಯ ಕಳೆಯುತ್ತಿದ್ದ ಆತನ ಈ ಚಟ ತಾಯಿಗೆ ಬೇಸರ ತರಿಸಿತ್ತು. ಆತನ ತಂದೆ ಪೊಲೀಸ್ ಆಗಿದ್ದು ಮಗನ ಮೊಬೈಲ್ ಗೇಮ್ ಹುಚ್ಚಿಗೆ ಬೇಸತ್ತು ಹೋಗಿದ್ದರು. ಪತಿ- ಪತ್ನಿ ಸದಾ ಈ ಕಾರಣಕ್ಕೆ ಮಗನನ್ನು ಬೈಯ್ಯುತ್ತ ಇರುತ್ತಿದ್ದರು ಎಂದು ತಿಳಿದುಬಂದಿದೆ. ಶನಿವಾರ ಸಂಜೆ ನಾನು ಕೆಲಸಕ್ಕೆ ಹೋದಾಗ, ಕೋಣೆಯಲ್ಲಿ ಕುಳಿತು ಪಬ್‌ಜಿ ಆಡುತ್ತಿದ್ದ ಮಗನಿಗೆ ಪತ್ನಿ ಬೈದಿದ್ದಾಳೆ ಮತ್ತು ಮೊಬೈಲ್‌ನ್ನು ಕಸಿದುಕೊಂಡಿದ್ದಾಳೆ. ಮರುದಿನ ಮುಂಜಾನೆ ಎದ್ದು ನೋಡಿದಾಗ ಆತ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇಲ್ಲಿಯವರೆಗೆ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಆದರೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
from India & World News in Kannada | VK Polls https://ift.tt/2L8A0md