ಹೊಸದಿಲ್ಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸಹಾಯಧನ ಸುಮಾರು 10 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. 2018-19ನೆ ಸಾಲಿನಲ್ಲಿ 70,90 ಸಾವಿರ ಕೋಟಿ ರೂಪಾಯಿ ಸಹಾಯಧನ ನೀಡಲಾಗಿತ್ತು. 2019-20ನೇ ಸಾಲಿನಲ್ಲಿ 79.99 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ಯೂರಿಯಾಗೆ 53.62 ಸಾವಿರ ಕೋಟಿ ರೂ. ನ್ಯೂಟ್ರಿಮೆಂಟ್ ಆಧಾರಿತ ಸಹಾಯಧನಗಳಿಗೆ 26.36 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ರಸಗೊಬ್ಬರ ಸಹಾಯಧನ ಹೆಚ್ಚಳವು ನೇರ ಹಣ ವರ್ಗಾವಣೆಯ ಮೂಲಕ ರೈತರಿಗೆ ಸಹಾಯಧನ ವರ್ಗಾವಣೆಯಲ್ಲಿ ದಕ್ಷತೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸದಾನಂದಗೌಡ ತಿಳಿಸಿದರು.
from India & World News in Kannada | VK Polls https://ift.tt/2Xy7jpd