ಸ್ಪಾಗಳಲ್ಲಿ ಮಾಂಸದಂಧೆ: 25 ಮಹಿಳೆಯರು ಸೇರಿದಂತೆ 35 ಜನರ ಬಂಧನ

ಹೊಸದಿಲ್ಲಿ: ರಾಜಧಾನಿ ದಿಲ್ಲಿಗೆ ಹೊಂದಿಕೊಂಡಿರುವ ನೋಯಿಡಾದ ಸೆಕ್ಟರ್ ನಂಬರ್ 18ರಲ್ಲಿ 14ಕ್ಕೂ ಅಧಿಕ ಸ್ಪಾದಲ್ಲಿ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು, 25 ಮಹಿಳೆಯರು ಮತ್ತು 10 ಪುರುಷರು ಸೇರಿದಂತೆ ಒಟ್ಟು 35 ಜನರನ್ನು ಬಂಧಿಸಿದ್ದಾರೆ. ಸ್ಪಾಗಳಲ್ಲಿ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಭಾನುವಾರ ತಡರಾತ್ರಿ ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆಕ್ಷೇಪಾರ್ಹ ವಸ್ತುಗಳು ಮತ್ತು ನಗದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 14 ಸ್ಪಾಗಳ ಪೈಕಿ ಮೋಕ್ಷಾ, ಬುದ್ಧ ಮತ್ತು ವೇದಿಕಾ ಸ್ಪಾ ಸೆಂಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ 13 ಸ್ಪಾಗಳು ವ್ಯೆಶ್ಯಾವಾಟಿಕೆ ದಂಧೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಈ ಸ್ಪಾಗಳ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ. ಬದಲಿಗೆ ಈ ಸ್ಪಾಗಳಿಗೆ ಬೀಗ ಜಡಿಯಲಾಗಿದೆ ಎಂದು ತಿಳಿದು ಬಂದಿದೆ.


from India & World News in Kannada | VK Polls https://ift.tt/2NoU45x

ಜಮ್ಮು& ಕಾಶ್ಮೀರದಲ್ಲಿ ಭೀಕರ ಬಸ್ ಅಪಘಾತ: ಕನಿಷ್ಠ 33 ಸಾವು

ಶ್ರೀನಗರ: ಬಸ್ ಕಂದಕಕ್ಕೆ ಉರುಳಿ ಕನಿಷ್ಠ 33 ಜನ ದುರ್ಮರವನ್ನಪ್ಪಿ, 22 ಜನರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. JK17-6787 ನೋಂದಣಿ ಸಂಖ್ಯೆಯ ಮಿನಿಬಸ್, ಕಿಶ್ತ್ವಾರ್‌ನಿಂದ ಕೇಶ್ವಾನ್ ಕಡೆಗೆ ಸಾಗುತ್ತಿದ್ದು, ಓವರ್‌ಲೋಡ್ ಆಗಿದ್ದರಿಂದ ಶ್ರೀಗ್ವರಿ ಬಳಿ ಆಳವಾದ ಕಂದಕಕ್ಕೆ ಬಿತ್ತು , ಎಂದು ಸ್ಥಳೀಯರು ತಿಳಿಸಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮುಂಜಾನೆ 8.40ಕ್ಕೆ ಅಪಘಾತ ನಡೆದಿದ್ದು, ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.


from India & World News in Kannada | VK Polls https://ift.tt/2Jep9Um

ಇಂದಿನಿಂದ ಸುಪ್ರೀಂ ಕೋರ್ಟ್ ಕಲಾಪ ಪುನರಾರಂಭ: ರಾಮಮಂದಿರ, ರಫೇಲ್‌, ರಾಹುಲ್‌ ಪ್ರಕರಣಗಳ ಇತ್ಯರ್ಥ ನಿರೀಕ್ಷೆ

ಹೊಸದಿಲ್ಲಿ: ಬರೋಬ್ಬರಿ 6 ವಾರಗಳ ದೀರ್ಘ ರಜೆ ಬಳಿಕ ಜುಲೈ 1 ರಿಂದ ಸುಪ್ರೀಂ ಕೋರ್ಟ್ ಕಾರ್ಯ ಕಲಾಪಗಳು ಪುನರಾರಂಭಗೊಳ್ಳಲಿವೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ಎಲ್ಲ 31 ನ್ಯಾಯಾಧೀಶರೊಂದಿಗೆ ಕೋರ್ಟ್ ಕಲಾಪಗಳು ಆರಂಭವಾಗಲಿವೆ. ಪುನಃ ಕಾರ್ಯಾರಂಭ ಮಾಡುತ್ತಿದ್ದಂತೆ ಅತಿ ಸೂಕ್ಷ್ಮ ಪ್ರಕರಣಗಳಾದ ಒಪ್ಪಂದ, ,ರಾಮ ಮಂದಿರ,ರಾಹುಲ್‌ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ, ಆರ್‌ಟಿಐ ವ್ಯಾಪ್ತಿಗೆ ಸಿಜೆಐ, ವಿಚಾರಣೆಗಳನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದ್ದು, ಆದಷ್ಟು ಬೇಗ ಈ ಪ್ರಕರಣಗಳ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ದೇಶದ ರಾಜಕೀಯ, ಧಾರ್ಮಿಕ ಚಿತ್ರಣದ ಮೇಲೆ ಮಹತ್ತರ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವ ಪ್ರಕರಣಗಳಿವೆ?: ದಶಕಗಳಿಂದ ನಡೆಯುತ್ತಿರುವ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಭೂಮಿ ವ್ಯಾಜ್ಯದ ಪ್ರಕರಣ ಮಾಜಿ ನ್ಯಾ. ಖಲೀಫುಲ್ಲಾ ನೇತೃತ್ವದ ಸಮಿತಿಯ ಸಂಧಾನ ಪ್ರಕ್ರಿಯೆ ಸ್ಥಿತಿಗತಿ ಕುರಿತು ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಮಾಹಿತಿ ಪಡೆಯಲಿದೆ. ಇನ್ನೊಂದೆಡೆ, ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧವಿಮಾನಗಳನ್ನು ಕೇಂದ್ರ ಸರಕಾರ ಖರೀದಿಸುವ ಒಪ್ಪಂದದ ಕುರಿತು ಸುಪ್ರೀಂಕೋರ್ಟಿನ ತೀರ್ಪು ಮರುಪರಿಶೀಲನೆಗೆ ಮನವಿ ಮಾಡಲಾಗಿದ್ದ ಅರ್ಜಿಗಳ ಭವಿಷ್ಯದ ಬಗ್ಗೆ ಕೂಡ ಸಿಜೆಐ ಪೀಠ ನಿರ್ಧರಿಸಲಿದೆ. ರಫೇಲ್‌ಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ 2018 ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲರಾದ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ಈಗ ಕೈಗೆತ್ತಿಕೊಳ್ಳಲಿದ್ದು, ಸದಸ್ಯದಲ್ಲಿಯೇ ತನ್ನ ನಿಲುವು ಪ್ರಕಟಿಸುವ ಸಾಧ್ಯತೆಗಳಿವೆ. ಇವೆರಡಲ್ಲದೆ ಚೌಕಿದಾರ್‌ ಚೋರ್‌ ಹೈ ಎಂದು ಸುಪ್ರೀಂಕೋರ್ಟ್‌ ಕೂಡ ಅಭಿಪ್ರಾಯಪಟ್ಟಿದೆ ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ಬಗ್ಗೆ ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಈಗಾಗಲೇ ತಮ್ಮ ಹೇಳಿಕೆ ಕುರಿತು ರಾಹುಲ್‌ ಸುಪ್ರೀಂಕೋರ್ಟ್‌ಗೆ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಸಂಧಾನ ಸಮಿತಿಯ ಯತ್ನ ವಿಫಲ? ರಾಮಜನ್ಮಭೂಮಿ ವಿವಾದ ಇತ್ಯರ್ಥಕ್ಕೆ ಮಾಜಿ ನ್ಯಾಯಮೂರ್ತಿ ಎಫ್‌.ಎಮ್‌.ಖಲೀಫುಲ್ಲಾ ನೇತೃತ್ವದಲ್ಲಿ ತ್ರಿಸದಸ್ಯರ ಸಮಿತಿಯನ್ನು ಸುಪ್ರೀಂಕೋರ್ಟ್‌ ರಚಿಸಿ, ಕ್ಯಾಮೆರಾ ರೆಕಾರ್ಡಿಂಗ್‌ ಸಹಿತ ಸಂಧಾನ ಮಾತುಕತೆ ನಡೆಸುವಂತೆ ಸೂಚಿಸಿತ್ತು. ಸಿಜೈ ನೇತೃತ್ವದ ಪಂಚಸದಸ್ಯ ಪೀಠ ಸಮಿತಿಗೆ ಆಗಸ್ಟ್‌ 15ರವರೆಗೆ ಸಮಾಯಾವಕಾಶ ನೀಡಿದೆ. ಸಂಧಾನಕ್ಕೆ ಹಿಂದು ಸಂಘಟನೆಗಳ ಪರವಾದ ದಾವೆದಾರರು ಮತ್ತು ಮುಸ್ಲಿಂ ಸಂಘಟನೆಗಳ ಪರವಾದ ದಾವೆದಾರರು ಹೆಚ್ಚು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸಮಿತಿಯ ಯತ್ನಕ್ಕೆ ಯಶಸ್ಸು ಕಷ್ಟಸಾಧ್ಯ ಎಂದು ವಿಶ್ಲೇಷಿಸಲಾಗಿದೆ. 2010ರ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ 14 ಅರ್ಜಿಗಳು ಸದ್ಯ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ವಿದೇಶಿ ದೇಣಿಗೆ ದುರುಪಯೋಗದ ಪಿಐಎಲ್‌ ವಿಚಾರಣೆ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಇಂದಿರಾ ಜೈಸಿಂಗ್‌ , ಆನಂದ್‌ ಗ್ರೋವರ್‌ ಮತ್ತು ಲಾಯರ್ಸ್‌ ಕಲೆಕ್ಟೀವ್‌ ಎನ್‌ಜಿಒ ವಿರುದ್ಧ ಸಲ್ಲಿಕೆಯಾಗಿರುವ ವಿದೇಶಿ ದೇಣಿಗೆ ದುರುಪಯೋಗ ಆರೋಪದ ಪಿಐಎಲ್‌ ಅರ್ಜಿ ಕುರಿತು ಸುಪ್ರೀಂಕೋರ್ಟ್‌ ಈ ತಿಂಗಳು ನಿರ್ಧರಿಸಲಿದೆ. ಎಫ್‌ಐಆರ್‌ ದಾಖಲಿಸಿ, ಇಂದಿರಾ ಜೈಸಿಂಗ್‌ ವಿರುದ್ಧ ತನಿಖೆ ನಡೆಸುವಂತೆ ಪಿಐಎಲ್‌ ಕೋರಿದೆ. ವಿಧಿ 370 ಹಣೆಬರಹ? ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ , ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೂಡ ಸುಪ್ರೀಂಕೋರ್ಟ್‌ ಈ ತಿಂಗಳು ನಡೆಸಲಿದೆ. ವಿಧಿ 35ಎ ಪ್ರಶ್ನಿಸಿರುವ ಹಲವು ಅರ್ಜಿಗಳ ವಿಚಾರಣೆ ಕೂಡ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.


from India & World News in Kannada | VK Polls https://ift.tt/2ZZYHEA

ಭಾರತ ಸೋಲಲು ಕೇಸರಿ ಜರ್ಸಿ ಹಾಕಿದ್ದೇ ಕಾರಣ ಎಂದ ಮುಫ್ತಿ

ಹೊಸದಿಲ್ಲಿ: ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರುದ್ಧ ಪರಾಭವಗೊಂಡ ಹಿನ್ನೆಲೆಯಲ್ಲಿ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಕೇಸರಿ ಜರ್ಸಿ ವಿವಾದವನ್ನು ಕೆಣಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಫ್ತಿ, ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದೆ ಎಂದಿದ್ದಾರೆ. 'ನಾನು ಮೂಢ ನಂಬಿಕೆಗಳನ್ನು ನಂಬುತ್ತೇನೆಂದು ಕರೆದರೂ ಪರವಾಗಿಲ್ಲ ಭಾರತದ ಗೆಲುವಿನ ಓಟವನ್ನು ತಡೆದದ್ದೆ 'ಟೀಂ ಇಂಡಿಯಾ ಧರಿಸಿದ್ದ ಕೇಸರಿ ಸರ್ಜಿ ಎಂದು ಹೇಳಿದ್ದಾರೆ. ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ವಿರುದ್ಧ 31 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿದೆ. ಈ ಮೂಲಕ 1992ರ ಬಳಿಕ ಭಾರತ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ.


from India & World News in Kannada | VK Polls https://ift.tt/2RMvcmW

ರಾಜೀನಾಮೆ ಹಠ: ರಾಹುಲ್ ಮನವೊಲಿಸಲು ಕೈ ಮುಖ್ಯಮಂತ್ರಿಗಳ ಕಸರತ್ತು

ಹೊಸದಿಲ್ಲಿ: ಪಕ್ಷದ ಅಧ್ಯಕ್ಷ ಸ್ಥಾನ ಬೇಡವೆಂದು ಹಠ ಹಿಡಿದಿರುವ ಅವರನ್ನು ಭೇಟಿಯಾಗಿ ಮನವೊಲಿಸಲು ಸರಕಾರವಿರುವ ರಾಜ್ಯದ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಢ ಮತ್ತು ಪುದುಚೇರಿಯ ಮುಖ್ಯಮಂತ್ರಿಗಳು ಸೋಮವಾರ ಮಧ್ಯಾಹ್ನ ರಾಹುಲ್ ಅವರನ್ನು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿಯವರ ಪಾತ್ರದ ಬಗ್ಗೆ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಮತ್ತು ಅವರು ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ತಡೆಯುವ ಉದ್ದೇಶದಿಂದ ಪಕ್ಷದೊಳಗೆ ಸರಣಿ ರಾಜೀನಾಮೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಗೆ ನಿರ್ಧರಿಸಲಾಗಿದೆ. ಸಭೆಯ ನಿಖರವಾದ ಕಾರ್ಯಸೂಚಿ ಇನ್ನೂ ತಿಳಿದಿಲ್ಲವಾದರೂ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆ 2019 ರಲ್ಲಿ ಪಕ್ಷದ ನಿರಾಶಾದಾಯಕ ಪ್ರದರ್ಶನದ ಬಗ್ಗೆ ಚರ್ಚೆ ನಡಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ , ಮಧ್ಯಪ್ರದೇಶದ ಕಮಲ್ ನಾಥ್, ಛತ್ತೀಸ್‌ಗಢದ ಸಿಎಂ ಭೂಪೇಶ್ ಬಾಗೆಲ್ ಮತ್ತು ಪುದುಚೇರಿ ಸಿಎಂ ವಿ ನಾರಾಯಣಸಾಮಿ ಅವರು ಭಾಗವಹಿಸಲಿದ್ದು ಹಿಂದಿ ಹೃದಯಭೂಮಿಯಲ್ಲಿ ಪಕ್ಷದ ಸೋಲಿನ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಚುನಾವಣಾ ಫಲಿತಾಂಶದ ಎರಡು ದಿನಗಳ ನಂತರ ಮೇ 25 ರಂದು ನಡೆದ ಮೊದಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ, ಪಕ್ಷದ ನೀರಸ ಪ್ರದರ್ಶನದ ಜವಾಬ್ದಾರಿಯನ್ನು ಹೊತ್ತುಕೊಂಡು ರಾಜೀನಾಮೆ ನೀಡುವುದಾಗಿ ಗಾಂಧಿ ಪ್ರಸ್ತಾಪಿಸಿದ್ದರು. ಮೇ 25 ರ ಸಿಡಬ್ಲ್ಯುಸಿ ಸಭೆಯ ನಂತರ ಗಾಂಧಿಯವರು ಸಿಎಂಗಳೊಂದಿಗೆ ನಡೆಸುತ್ತಿರುವ ಮೊದಲ ಸಭೆ ಇದಾಗಲಿದೆ. ರಾಹುಲ್ ರಾಜೀನಾಮೆ ವಿರೋಧಿ ಪಕ್ಷದಲ್ಲಿ ಸಾಮೂಹಿಕ ರಾಜೀನಾಮೆ ಶುರುವಾಗಿದೆ. ಈ ದಿಶೆಯಲ್ಲಿ ಒಗ್ಗಟ್ಟಿನ ಪ್ರದರ್ಶನ ಕಂಡುಬರುತ್ತಿದ್ದು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ (ಯುಪಿಸಿಸಿ) 36 ಮಂದಿ ಸೇರಿದಂತೆ ಸುಮಾರು 200 ಮಂದಿ ಪದಾಧಿಕಾರಿಗಳು ತಮ್ಮ ಸ್ಥಾನ ತ್ಯಜಿಸಿದ್ದಾರೆ. ಇಲ್ಲಿಯವರೆಗೆ ರಾಜೀನಾಮೆ ನೀಡಿದ ಪ್ರಮುಖರಲ್ಲಿ ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್, ದೆಹಲಿ ಘಟಕ ಕಾರ್ಯಕಾರಿ ಅಧ್ಯಕ್ಷ ರಾಜೇಶ್ ಲಿಲೋಥಿಯಾ, ತೆಲಂಗಾಣದ ಕಾರ್ಯಕಾರಿ ಅಧ್ಯಕ್ಷ ಪೊನ್ನಮ್ ಪ್ರಭಾಕರ್ ಮತ್ತು ಎಂಪಿಸಿಸಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಬರಿಯಾ ಸೇರಿದ್ದಾರೆ. ಸಾಮೂಹಿಕ ರಾಜೀನಾಮೆಗಳ ಮಧ್ಯೆ, ಕಾಂಗ್ರೆಸ್ ಹಿರಿಯ ಮುಖಂಡ ಎಂ.ವೀರಪ್ಪ ಮೊಯ್ಲಿ, ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಲು ಶೇಕಡಾ ಒಂದು ಪ್ರತಿಶತ ಅವಕಾಶವೂ ಇಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.


from India & World News in Kannada | VK Polls https://ift.tt/2KOLxa4

ಪ್ರಿಯಾಂಕಾ ಗಾಂಧಿ ಸೋಲಿನ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ: ಯೋಗಿ ತಿರುಗೇಟು

ಜೈ ಶ್ರೀರಾಮ, ವಂದೇ ಮಾತರಂ ವಿಷಯವಾಗಿ ಮತ್ತೆ RSS ವಿರುದ್ಧ ಗುಡುಗಿದ ಓವೈಸಿ

ಹೈದರಾಬಾದ್: ಮತ್ತು ಘೋಷಣೆಯ ವಿಷಯವನ್ನಿಟ್ಟುಕೊಂಡು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಮತ್ತೊಮ್ಮೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ಗುಡುಗಿದ್ದಾರೆ. ಜೈ ಶ್ರೀರಾಮ ಮತ್ತು ವಂದೇ ಮಾತರಂ ಘೋಷಣೆ ಕೂಗದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಓವೈಸಿ, ದೇಶದಲ್ಲಿರುವ ದಲಿತರು, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ. ಘೋಷಣೆ ಕೂಗದವರ ಮೇಲೆ ಹಲ್ಲೆ ನಡೆಸುತ್ತಿರುವ ಸಂಘಟನೆಗಳ ಹಿಂದೆ ಆರ್‌ಎಸ್‌ಎಸ್ ಕೈವಾಡ ಇದೆ ಎಂದು ಅವರು ದೂರಿದ್ದಾರೆ. ಕಳ್ಳತನದ ಆರೋಪದ ಮೇಲೆ ಜಾರ್ಖಂಡ್‌ನಲ್ಲಿ ಮುಸ್ಲಿಂ ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಲೆಗೈದ ಪ್ರಕರಣ ಉಲ್ಲೇಖಿಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿರುವ ಓವೈಸಿ, ಅಲ್ಪಸಂಖ್ಯಾತ ಮುಸ್ಲಿಮರನ್ನು ಭಯೋತ್ಪಾದಕರು, ರಾಷ್ಟ್ರ ವಿರೋಧಿಗಳು ಮತ್ತು ಗೋ ಹತ್ಯೆಕೋರರು ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/326fVCn

ಆಂದೋಲನವಾಗಲಿ ಮಳೆ ಕೊಯ್ಲು

ಇಪಿಎಫ್‌ ಹಿಂಪಡೆದಾಗ ಆ ಹಣಕ್ಕೆ ತೆರಿಗೆ ಇದೆಯೇ?

ಇಡ್ಲಿ ಹಿಟ್ಟಿನೊಂದಿಗೆ ಬಕೆಟ್‌ ನೀರು ಉಚಿತ!

ಎಬಿಡಿ, ಗೇಲ್ ದಾಖಲೆ ಸರಿಗಟ್ಟಿದ ಹಿಟ್‌ಮ್ಯಾನ್

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಮೂರನೇ ಶತಕ ಸಾಧನೆ ಮಾಡಿದ್ದಾರೆ. ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ಕು ರನ್ ಗಳಿಸಿದ್ದಾಗ ಲಭಿಸಿದ ಜೀವದಾನದ ಸ್ಪಷ್ಟ ಲಾಭ ಪಡೆದ ರೋಹಿತ್ ಫೈಟ್ ಬ್ಯಾಕ್ ಸೆಂಚುರಿ ಬಾರಿಸಿದರು. ಅಷ್ಟೇ ಯಾಕೆ ಇದು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಬ್ಯಾಟ್‌ನಿಂದ ಸಿಡಿದ 25ನೇ ಶತಕವಾಗಿದೆ. ಈ ಮೂಲಕ ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ಕುಮಾರ ಸಂಗಕ್ಕರ ದಾಖಲೆಯನ್ನು ಸರಿಗಟ್ಟಿದ್ದರು. ತಮ್ಮ 212ನೇ ಪಂದ್ಯದ 206ನೇ ಇನ್ನಿಂಗ್ಸ್‌ನಲ್ಲಿ ರೋಹಿತ್ 25 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕಗಳ ಬಾರಿಸಿದ ಸಾಲಿನಲ್ಲಿ ಆರನೇ ಸ್ಥಾನಕ್ಕೆ ನೆಗೆದಿದ್ದಾರೆ. ಭಾರತದ ಪರ ಸಚಿನ್ ತೆಂಡೂಲ್ಕರ್ 49 ಹಾಗೂ ವಿರಾಟ್ ಕೊಹ್ಲಿ 41 ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 30, ಶ್ರೀಲಂಕಾದ ಸನತ್ ಜಯಸೂರ್ಯ 28 ಹಾಗೂ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ 27 ಶತಕಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ನಾಯಕ ವಿರಾಟ್ ಕೊಹ್ಲಿ ಜತೆಗೆ ಶತಕದ ಜತೆಯಾಟದಲ್ಲಿ ಭಾಗಿಯಾಗಿದ್ದರು. 109 ಎಸೆತಗಳನ್ನು ಎದುರಿಸಿದ ರೋಹಿತ್ 15 ಬೌಂಡರಿಗಳಿಂದ 102 ರನ್ ಗಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2IZcmWN

ಪಾಕ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 532 ಕೆಜಿ ಹೆರಾಯಿನ್‌ ವಶ

ಹೊಸದಿಲ್ಲಿ: ಪಾಕಿಸ್ತಾನದಿಂದ ಪೂರೈಕೆಯಾಗುತ್ತಿದ್ದ ಭಾರಿ ಪ್ರಮಾಣದ ಹೆರಾಯಿನ್‌ ಅನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ 532 ಕೆಜಿ ಹೆರಾಯಿನ್‌ ಸಾಗಣೆ ಮಾಡಲಾಗುತ್ತಿತ್ತು. ಅಟ್ಟಾರಿ-ವಾಘಾ ಗಡಿ ಮೂಲಕ ಟ್ರಕ್‌ನಲ್ಲಿ ಹೆರಾಯಿನ್‌ ಅವನ್ನು ಸಾಗಣೆ ಮಾಡಲಾಗುತ್ತಿತ್ತು. ಶಂಕೆಯ ಮೇರೆಗೆ ತಪಾಸಣೆಗೊಳಪಡಿಸಿದ ಅಧಿಕಾರಿಗಳಿಗೆ ವಸ್ತು ಪತ್ತೆಯಾಯಿತು. ಒಟ್ಟು 532 ಕೆಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಯಿತು. ಇದರ ಮೌಲ್ಯ 2700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ''ಇದು ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳ ಸಾಗಣೆ ವಿರುದ್ಧದ ಬಹುದೊಡ್ಡ ಗೆಲುವು. ಅಮೃತಸರ ಕಸ್ಟಮ್ಸ್‌ ಆಯುಕ್ತರ ಕಚೇರಿಯ ಸಮಯೋಚಿತ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ,'' ಎಂದು ಎಂದು ಕಸ್ಟಮ್ಸ್‌ ಆಯುಕ್ತ ದೀಪಕ್‌ ಕುಮಾರ್‌ ಗುಪ್ತಾ ತಿಳಿಸಿದ್ದಾರೆ. ಇದುವರೆಗೆ ದೇಶದ ಯಾವ ಮೂಲೆಯಲ್ಲಿಯೂ ಏಕಕಾಲಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡ ನಿದರ್ಶನ ಇಲ್ಲ. ಪಾಕ್‌ನ ಇಂತಹ ಪಿತೂರಿಯಿಂದಲೇ ಪಂಜಾಬ್‌ನಲ್ಲಿ ಮಾದಕ ವ್ಯಸನದ ಹಾವಳಿ ಹೆಚ್ಚಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಹೇಳಿದ್ದಾರೆ.


from India & World News in Kannada | VK Polls https://ift.tt/2XeCUfA

ಏಕದಿನ ವಿಶ್ವಕಪ್‌ನಲ್ಲಿ ಕಿಂಗ್ ಕೊಹ್ಲಿ ಸತತ 5ನೇ ಫಿಫ್ಟಿ ದಾಖಲೆ

ಬರ್ಮಿಂಗ್‌ಹ್ಯಾಮ್: ಟೀಮ್ ಇಂಡಿಯಾ ನಾಯಕ ಏಕದಿನ ವಿಶ್ವಕಪ್‌ನಲ್ಲಿ ಸತತ ಐದು ಅರ್ಧಶತಕಗಳ ದಾಖಲೆ ಬರೆದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬಳಿಕ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಸತತವಾಗಿ ಐದು ಅರ್ಧಶತಕಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. 2015ನೇ ಆವೃತ್ತಿಯಲ್ಲಿ ಸ್ಮಿತ್ ಸತತ ಐದು ಫಿಫ್ಟಿ ಬಾರಿಸಿದ್ದರು. ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತಿ ಒತ್ತಡದ ಸನ್ನಿವೇಶದಲ್ಲಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ಮೊದಲು ವೆಸ್ಟ್‌ಇಂಡೀಸ್, ಅಪಘಾನಿಸ್ತಾನ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಫಿಫ್ಟಿ ಬಾರಿಸಿದ್ದರು. ಇನ್ನು ಏಕದಿನ ವಿಶ್ವಕಪ್‌ವೊಂದರಲ್ಲಿ ಸತತವಾಗಿ ಐದು ಫಿಫ್ಟಿಗಳನ್ನು ಬಾರಿಸಿರುವ ಭಾರತದ ಮೊದಲ ನಾಯಕ ಎಂಬ ದಾಖಲೆಗೂ ಕೊಹ್ಲಿ ಪಾತ್ರವಾಗಿದ್ದಾರೆ. 1992ರ ಆವೃತ್ತಿಯಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ನಾಲ್ಕು ಫಿಫ್ಟಿ ಸಾಧನೆ ಮಾಡಿದ್ದರು. ಅಂದ ಹಾಗೆ ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲೇ ಏಕದಿನದಲ್ಲಿ ಅತಿ ವೇಗದ 11000 ರನ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ 20 ಸಹಸ್ರ ರನ್‌ಗಳ ಮಹತ್ತ ವಿಶ್ವದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ವಿರಾಟ್ ಕೊನೆಯ 5 ಇನ್ನಿಂಗ್ಸ್‌ಗಳು: ಇಂಗ್ಲೆಂಡ್: 50* ವೆಸ್ಟ್‌ಇಂಡೀಸ್: 72 ಅಫಘಾನಿಸ್ತಾನ: 67 ಪಾಕಿಸ್ತಾನ: 77 ಆಸ್ಟ್ರೇಲಿಯಾ: 82


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LqDKPa

ಹಳಿ ತಪ್ಪಿದ ಕುಲ್ಚಾ; ಚಹಲ್ ದುಬಾರಿ ಬೌಲರ್!

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ವಿನ್ ದ್ವಯರಾದ ಹಾಗೂ ಸಾಕಷ್ಟು ದುಬಾರಿಯೆನಿಸಿಕೊಂಡಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ರಿಸ್ಟ್ ಸ್ಪಿನ್ನರ್‌ಗಳನ್ನು ಭಾರತೀಯ ಪಡೆ ಅತಿ ಹೆಚ್ಚು ನಂಬಿಕೊಂಡಿತ್ತು. ಇದುವರೆಗಿನ ಪಂದ್ಯಗಳಲ್ಲಿ ಪಂದ್ಯದ ಮಧ್ಯಂತರ ಅವಧಿಯಲ್ಲಿ ವಿಕೆಟುಗಳನ್ನು ಕಬಳಿಸುವ ಮೂಲಕ ಪರಿಣಾಮಕಾರಿಯೆನಿಸಿಕೊಂಡಿದ್ದರು. ಆದರೆ ಆತಿಥೇಯ ಇಂಗ್ಲೆಂಡ್ ವಿರುದ್ಧ 'ಕುಲ್ಚಾ' ಆಟ ನಡೆಯಲಿಲ್ಲ. ಚಲಹ್ ತಮ್ಮ 10 ಓವರ್‌ಗಳ ಕೋಟಾದಲ್ಲಿ 88 ರನ್ ಬಿಟ್ಟುಕೊಟ್ಟರೆ ಕುಲ್‌ದೀಪ್ ಒಂದು ವಿಕೆಟ್ ಪಡೆದರೂ ಸಹ 72 ರನ್ ತೆತ್ತಿದ್ದರು. ಅಂದೆರ 20 ಓವರ್‌ಗಳಲ್ಲಿ 160 ರನ್ ಹರಿದು ಬಂದಿದ್ದವು. ಈ ಪೈಕಿ ಚಹಲ್ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅತಿ ದುಬಾರಿ ಬೌಲರ್ ಎಂಬ ಅಪಖ್ಯಾತಿಗೊಳಗಾಗಿದ್ದಾರೆ. ಈ ಹಿಂದೆ 2003 ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಾವಗಲ್ ಶ್ರೀನಾಥ್ 87 ರನ್ ಬಿಟ್ಟುಕೊಟ್ಟಿರುವುದು ಭಾರತೀಯ ಬೌಲರ್‌ನ ಕೆಟ್ಟ ಪ್ರದರ್ಶನವಾಗಿತ್ತು. ಇದೀಗ ಚಹಲ್ ಮತ್ತಷ್ಟು ದುಬಾರಿಯೆನಿಸಿದ್ದಾರೆ. ಅತ್ತ ತಮ್ಮ 50ನೇ ಏಕದಿನ ಪಂದ್ಯದಲ್ಲಿ ಚೈನಾಮನ್ ಖ್ಯಾತಿಯ ಕುಲ್‌ದೀಪ್ ಸಹ ನಿರಾಸೆ ಮೂಡಿಸಿದರು. ಪರಿಣಾಮ ಇಂಗ್ಲೆಂಡ್ 337 ರನ್‌ಗಳ ಬೃಹತ್ ಮೊತ್ತ ಪೇರಿಸುವಂತಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2FInpS6

4, 4, 5; ಮೂರು ಪಂದ್ಯದಲ್ಲೇ 13 ವಿಕೆಟ್ ಕಿತ್ತ ಶಮಿ

ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಐದು ವಿಕೆಟ್ ಸಾಧನೆ ಮಾಡುವ ಮೂಲಕ ಮಿಂಚಿದ್ದಾರೆ. ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 69 ರನ್ ತೆತ್ತಿರುವ ಶಮಿ ಐದು ವಿಕೆಟುಗಳನ್ನು ಪಡೆದರು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಮೊತ್ತ ಮೊದಲ ಬಾರಿಗೆ ಐದು ವಿಕೆಟ್ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮೊದಲು 1987ರ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಎಂಬ ಖ್ಯಾತಿಗೆ ಶಮಿ ಪಾತ್ರವಾಗಿದ್ದರು. ಇದರೊಂದಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಒಟ್ಟು 13 ವಿಕೆಟ್ ಸಾಧನೆ ಮಾಡಿದ್ದಾರೆ. ಅಲ್ಲದೆ ಎಲ್ಲ ಮೂರು ಪಂದ್ಯಗಳಲ್ಲೂ 4 ವಿಕೆಟ್‌ಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾರೆ. ಮೊದಲ 7 ಓವರ್‌ಗಳಲ್ಲಿ 29 ರನ್ ಮಾತ್ರ ಬಿಟ್ಟುಕೊಟ್ಟಿದ್ದ ಶಮಿ ಕೊನೆಯ ಮೂರು ಓವರ್‌ಗಳಲ್ಲಿ 40 ರನ್ ಬಿಟ್ಟುಕೊಡುವ ಮೂಲಕ ಹಿನ್ನಡೆ ಅನುಭವಿಸಿದರು. ಆದರೂ ನಿರಂತರ ಅಂತರಾಳದಲ್ಲಿ ವಿಕೆಟುಗಳನ್ನು ಪಡೆಯುವ ಮೂಲಕ ಮಿಂಚಿದರು. ಮೊಹಮ್ಮದ್ ಶಮಿ ಬಲೆಗೆ ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯಾನ್ ಮಾರ್ಗನ್, ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ಬಿದ್ದರು. ಒಟ್ಟಾರೆಯಾಗಿ ಏಕದಿನದಲ್ಲಿ ಮೊತ್ತ ಮೊದಲ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿರುವ ಶಮಿ ಜೀವನಶ್ರೇಷ್ಠ ಬೌಲಿಗ್ ಸಾಧನೆಯನ್ನು ಮಾಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ls1GBO

ಅಮರನಾಥ ಯಾತ್ರೆಗೆ ವಿದ್ಯುಕ್ತ ಚಾಲನೆ: ಭಾರಿ ಬಿಗಿ ಭದ್ರತೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ವಾರ್ಷಿಕ ಅಮರನಾಥ ಯಾತ್ರೆಗೆ ಜಮ್ಮುವಿನ ಭಗವತಿ ನಗರ್ ಮೂಲ ಶಿಬಿರದಿಂದ 2,200 ಯಾತ್ರಾರ್ಥಿಗಳ ಮೊದಲ ತಂಡ ಯಾತ್ರೆ ಆರಂಭಿಸಿದೆ. ಬಿಗಿ ಭದ್ರತೆಯೊಂದಿಗೆ ಕಾಶ್ಮೀರ ಕಣಿವೆಯತ್ತ ತೆರಳಿದೆ. ದೇಶದ ವಿವಿಧ ಭಾಗಗಳ 1,839, ಪುರುಷರು, 333 ಮಹಿಳೆಯರು, 17 ಮಕ್ಕಳು ಮತ್ತು 45 ಸಾಧು - ಸಾಧ್ವಿಯರು 93 ವಾಹನಗಳಲ್ಲಿ ಯಾತ್ರೆ ಕೈಗೊಂಡಿದ್ದಾರೆ. ಜಮ್ಮು ಕಾಶ್ಮೀರದ ರಾಜ್ಯಪಾಲರ ಸಲಹೆಗಾರ ಕೆ.ಕೆ.ಶರ್ಮಾ ಮೂಲ ಶಿಬಿರದಲ್ಲಿ ವಿಶೇಷ ಪೂಜೆ ನಂತರ ಮಂತ್ರ ಪಠಣದ ನಡವೆ ಮೊದಲ ತಂಡದ ಯಾತ್ರೆಗೆ ಹಸಿರು ನಿಶಾನೆ ತೋರಿದರು. ಭದ್ರತಾ ಕ್ರಮವಾಗಿ ಕೇಂದ್ರೀಯ ಮೀಸಲು ಪಡೆ ಸಿಆರ್‌ಪಿಎಫ್ ರಾಜ್ಯ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಜಮ್ಮು ನಗರದಲ್ಲಿ ಮತ್ತು ಹೆದ್ದಾರಿಯಲ್ಲಿ ನಿಯೋಜಿಸಲಾಗಿದೆ. ಸುಗಮ ಮತ್ತು ಶಾಂತಿಯುತ ಯಾತ್ರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ . ಕೋಮು ಸೌಹಾರ್ದತೆ ಮತ್ತು ಸಹೋದರತೆಯ ಸಂಕೇತವಾಗಿ ಶಾಂತಿಯುತವಾಗಿ ನೆರವೇರಲಿದೆ ಎಂದು ಸಿಆರ್ ಪಿಎಫ್ ಐಜಿ ರವಿದೀಪ್ ಸಹಾಯ್ ಹೇಳಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ಮೂಲ ಶಿಬಿರದಿಂದ ಮತ್ತೊಂದು ಯಾತ್ರಾರ್ಥಿಗಳ ತಂಡ ಪವಿತ್ರ ಗುಹೆಯಲ್ಲಿನ ಶಿವನ ದರ್ಶನಕ್ಕೆ ಪ್ರಯಾಣ ಬೆಳಸಲಿದೆ. ಆಗಸ್ಟ್ 15ರಂದು ಅಮರನಾಥ್ ಯಾತ್ರೆಗೆ ತೆರೆ ಬೀಳಲಿದೆ.


from India & World News in Kannada | VK Polls https://ift.tt/2XeWFn6

ರಾಹುಲ್‌ಗೆ ಗಾಯ; ಪಂತ್ ಆರಂಭಿಕನಾಗಿ ಕಣಕ್ಕಿಳಿಯುವರೇ?

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡದ ಆಟಗಾರ ಗಾಯದ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಭಾರತ ಇನ್ನಿಂಗ್ಸ್ ವೇಳೆ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವರೇ ಎಂಬುದು ಸಂಶಯಕ್ಕೀಡು ಮಾಡಿದೆ. ಹಾಗೊಂದು ವೇಳೆ ಪಂದ್ಯದ ದ್ವಿತಿಯಾರ್ಧದ ವೇಳೆ ರಾಹುಲ್ ಪೂರ್ಣ ಫಿಟ್ನೆಸ್ ಮರಳಿ ಪಡೆಯದಿದ್ದಲ್ಲಿ ರಿಷಬ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಆರಂಭಿಕ ಜಾನಿ ಬೈರ್‌ಸ್ಟೋವ್ ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಜಂಪ್ ಮಾಡಿ ರಾಹುಲ್ ಕ್ಯಾಚ್ ಹಿಡಿಯಲು ವಿಫಲ ಯತ್ನವನ್ನು ನಡೆಸಿದ್ದರು. ಪರಿಣಾಮ ತಲೆ ಕೆಳಗಾಗಿ ಕುಸಿದು ಬಿದ್ದಿದ್ದರು. ತಕ್ಷಣವೇ ಮೈದಾನ ತೊರೆದ ರಾಹುಲ್ ಬಳಿಕ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ. ರಾಹುಲ್ ಗಾಯವು ಆತಂಕದ ವಿಷಯವಲ್ಲ ಎಂಬುದು ತಿಳಿದು ಬಂದಿಲ್ಲ. ಹಾಗಾಗಿ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಅತ್ತ ರಾಹುಲ್ ಅಲಭ್ಯವಾದರೆ ರಿಷಬ್ ಪಂತ್‌ಗೆ ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಓಪನರ್ ಆಗಿ ಕಣಕ್ಕಿಳಿಯುವ ಅದೃಷ್ಟ ಸಿಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2IYg0QI

ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷ ಟ್ರಂಪ್‌

ಸೋಲ್‌: ಅಮೆರಿಕ ಮತ್ತು ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಅಮೆರಿಕ ಅಧ್ಯಕ್ಷ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ನೆಲದ ಮೇಲೆ ಕಾಲಿಟ್ಟಿದ್ದಾರೆ. ಉತ್ತರ ಕೊರಿಯಾಕ್ಕೆ ಭೇಟಿ ಕೊಟ್ಟ ಮೊದಲ ಅಮೆರಿಕ ಅಧ್ಯಕ್ಷ ಎಂಬ ಗೌರವಕ್ಕೆ ಡೊನಾಲ್ಡ್‌ ಟ್ರಂಪ್‌ ಪಾತ್ರರಾಗಿದ್ದಾರೆ. ಉತ್ತರ ಕೊರಿಯಾ ಅಧ್ಯಕ್ಷ ಅವರೊಂದಿಗೆ ಮಾತುಕತೆ ನಡೆಸಿ ಇತಿಹಾಸ ಬರೆದಿದ್ದಾರೆ. ಉತ್ತರ ಕೊರಿಯಾ ಯುದ್ಧದಲ್ಲಿ ಹೋರಾಡಿದ ಸ್ಥಳದಲ್ಲಿ ಉಭಯ ನಾಯಕರು ಭೇಟಿಯಾದರು. ಉಭಯ ನಾಯಕರು ಕೆಲವು ಸಮಯ ಚರ್ಚೆ ನಡೆಸಿದ ನಂತರ ದಕ್ಷಿಣ ಕೊರಿಯಾದ ಸೋಲ್‌ನ ಭೂ ಪ್ರದೇಶದ ಮೇಲೆ ಹೆಜ್ಜೆ ಹಾಕಿದರು. ಅಲ್ಲಿ ಈ ಇಬ್ಬರೂ ನಾಯಕರನ್ನು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜಿ ಇನ್‌ ಬರಮಾಡಿಕೊಂಡರು. ಇಂದು ಉತ್ತಮ ದಿನ. ಇಲ್ಲಿಗೆ ಬಂದಿರುವುದು ಗೌರವದ ವಿಷಯ. ಬಹಳಷ್ಟು ದೊಡ್ಡ ಸಂಗತಿಗಳು ನಡೆಯುತ್ತಿವೆ ಎಂದು ಡೊನಾಲ್ಡ್ ಟ್ರಂಪ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/2XiSxmf

ಬೌಂಡರಿ ಗೆರೆ ಬಳಿ ಡೈವ್ ಹೊಡೆದು ಅದ್ಭುತ ಕ್ಯಾಚ್ ಹಿಡಿದ ಜಡೇಜಾ

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತದ ಫೀಲ್ಡರ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಆಡುವ ಬಳಗದಲ್ಲಿ ಇಲ್ಲದಿದ್ದರೂ 12ನೇ ಆಟಗಾರನಾಗಿ ಕ್ಷೇತ್ರರಕ್ಷಣೆಗಿಳಿದ ಜಡೇಜಾ, ಇಂಗ್ಲೆಂಡ್‌ಗೆ ಮೊದಲ ಆಘಾತ ನೀಡುವಲ್ಲಿ ನೆರವಾದರು. ಆರಂಭಿಕರಾದ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಇಂಗ್ಲೆಂಡ್‌ಗೆ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 22.1 ಓವರ್‌ಗಳಲ್ಲಿ 160 ರನ್‌ಗಳ ಜತೆಯಾಟ ನೀಡಿದರು. ಈ ಹಂತದಲ್ಲಿ ಕುಲ್‌ದೀಪ್ ಯಾದವ್ ದಾಳಿಗಿಳಿದ ಜೇಸನ್ ರಾಯ್ ದೊಡ್ಡ ಹೊಡೆತಕ್ಕೆ ಮುಂದಾದರು. ಬೌಂಡರಿ ಗೆರೆ ಬಳಿ ಓಡೋಡಿ ಬಂದ ರವೀಂದ್ರ ಜಡೇಜಾ ಡೈವ್ ಹೊಡೆಯುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು. ಈ ಮೊದಲು ಕೆಎಲ್ ರಾಹುಲ್ ಸಿಕ್ಸರ್ ಗೆರೆಯಲ್ಲಿ ಕ್ಯಾಚ್‌ಗಾಗಿ ಡೈವ್ ಹೊಡೆಯುವ ವೇಳೆ ಕುಸಿದು ಬಿದ್ದಿದ್ದರು. ಪರಿಣಾಮ ಗಾಯದ ಆತಂಕದ ಹಿನ್ನಲೆಯಲ್ಲಿ ಮೈದಾನ ತೊರೆದಿದ್ದರು. ಬಳಿಕ ರಾಹುಲ್ ಸ್ಥಾನದಲ್ಲಿ ಫೀಲ್ಡಿಂಗ್ ಮಾಡಲು ಜಡೇಜಾ ಅಂಗಣಕ್ಕಿಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XaDkP1

ಮಹಿ ಎಡವಟ್ಟು; ಮತ್ತೆ ಫೇಲ್ ಆಯ್ತು ಧೋನಿ ರಿವ್ಯೂ ಸಿಸ್ಟಂ

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಎಡವಟ್ಟು ಮಾಡಿದ್ದಾರೆ. ಇದರೊಂದಿಗೆ ಮಗದೊಮ್ಮೆ ಧೋನಿ ರಿವ್ಯೂ ಸಿಸ್ಟಂ ಮಗದೊಂದು ಫೇಲ್ ಆಗಿದೆ. ಪಂದ್ಯದ 11ನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಹಾರ್ದಿಕ್ ಪಾಂಡ್ಯ ಎಸೆದ ತಮ್ಮ ಪ್ರಥಮ ಓವರ್‌ನ ಐದನೇ ಎಸೆತದಲ್ಲಿ ಜೇಸನ್ ರಾಯ್ ಲೆಗ್ ಸೈಡ್‌ನಲ್ಲಿ ಮಿಸ್ ಮಾಡಿದ್ದರು. ಪರಿಣಾಮ ಅಂಪೈರ್ ವೈಡ್ ನೀಡಿದರು. ತಕ್ಷಣ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಡಿಆರ್‌ಎಸ್ ಮನವಿ ಪಡೆಯಲು ಬಯಸಿದ್ದರೂ ವಿಕೆಟ್ ಕೀಪರ್ ಧೋನಿ ಆಸಕ್ತಿ ತೋರಲಿಲ್ಲ. ಇದರಿಂದಾಗಿ ಜೇಸನ್ ರಾಯ್ ಔಟ್ ಮಾಡುವ ಸುವರ್ಣಾವಕಾಶವನ್ನು ಭಾರತ ಮಿಸ್ ಮಾಡಿಕೊಂಡಿತು. ದೋನಿಗೆ ನಿರ್ಧಾರಕ್ಕೆ ಗೌರವ ನೀಡಿದ ಕೊಹ್ಲಿ ಡಿಆರ್‌ಎಸ್ ನಿರ್ಣಯಕ್ಕೆ ಮೊರೆ ಹೋಗಲಿಲ್ಲ. ಇದರಿಂದಾಗಿ ಭಾರತಕ್ಕೆ ಅಮೂಲ್ಯವಾದ ವಿಕೆಟ್ ನಷ್ಟವಾಗಿದೆ. ಬಳಿಕ ರಿಪ್ಲೇ ಪರೀಶೀಲಿಸಿದ ಔಟ್ ಎಂಬುದು ಸ್ಫಷ್ಟವಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YkW0NH

ಭಾರತಕ್ಕೆ ಪಾಕ್ ಬೆಂಬಲ; ಟ್ವಿಟರ್‌ನಲ್ಲಿ ವೈರಲ್

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ತಂಡವನ್ನು ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಬಹುಶ: ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಪಾಕ್‌ನಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟ್ವಿಟರ್‌ನಲ್ಲೂ ವ್ಯಾಪಕ ಟ್ರೋಲ್‌ಗಳು ಹರಿದಾಡುತ್ತಿದೆ. ಕೇವಲ ಪಾಕಿಸ್ತಾನ ಅಷ್ಟೇ ಅಲ್ಲದೆ ಸೆಮಿಫೈನಲ್ ರೇಸ್‌ನಲ್ಲಿರುವ ಏಷ್ಯಾದ ಎಲ್ಲ ತಂಡಗಳು ಭಾರತವನ್ನು ಬೆಂಬಲಿಸುತ್ತಿದೆ. ಪಾಕ್ ಸೇರಿದಂತೆ ಇಂಗ್ಲೆಂಡ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಭಾರತದ ಗೆಲುವನ್ನು ಬಯಸುತ್ತಿದೆ. ಹೆಚ್ಚೂಕಡಿಮೆ 72 ವರ್ಷಗಳ ಹಿಂದೆ ಇದೇ ರೀತಿ ನೆರೆಹೊರೆಯವರು ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ಅಂಥದ್ದೇ ಒಗ್ಗಟ್ಟಿನ ಪ್ರದರ್ಶನವಾಗುತ್ತಿದೆ. ಅಂದು ಬ್ರಿಟಿಷರನ್ನು ಭಾರತದಿಂದ ಓಡಿಸಲು ಕೈಗೊಂಡ ಒಗ್ಗಟ್ಟು. ಈಗಿನದು ಇಂಗ್ಲೆಂಡ್‌ ತಂಡವನ್ನು ವಿಶ್ವಕಪ್‌ ಸೆಮಿಫೈನಲ್‌ ಸ್ಪರ್ಧೆಯಿಂದ ಹೊರಗಟ್ಟುವ ಉದ್ದೇಶದ್ದು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZUAAHx

ಭಾರತ ಹಾಗೂ ಇಂಗ್ಲೆಂಡ್ ಪಂದ್ಯದ ಹಿಂದಿನ ವಿಶೇಷವಾದ ಉದ್ದೇಶ ಗೊತ್ತೇನು?

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ವಿಶೇಷವಾದ ಉದ್ದೇಶವನ್ನು ಇರಿಸಿಕೊಂಡು ಭಾರತ ಹಾಗೂ ಆತಿಥೇಯ ತಂಡಗಳು ಕಣಕ್ಕಿಳಿದಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್) ನೂತನವಾಗಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಒಂದು ದಿನ ಕಾರ್ಯಕ್ರಮದ ಅಂಗವಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದೆ. ಮೈದಾನದ ಹೊರಗಡೆಯ ಎಲ್ಲ ಕರ್ತವ್ಯವನ್ನು ಮಕ್ಕಳು ಆರಂಭಿಸುವುದು ಈ ಪಂದ್ಯದ ಮಗದೊಂದು ವಿಶಿಷ್ಟವಾಗಿದೆ. ಟಾಸ್‌ನಿಂದ ಹಿಡಿದು ಪಂದ್ಯದ ಬಳಿಕ ನಡೆಯುವ ಸುದ್ದಿಗೋಷ್ಠಿಯನ್ನು ಮಕ್ಕಳನ್ನು ಆರಂಭಿಸಲಿದ್ದಾರೆ. ಜಗತ್ತಿನ ಪ್ರತಿಯೊಂದು ಮಗುವಿಗೂ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವುದು ಇದರ ಹಿಂದಿನ ಧ್ಯೇಯವಾಗಿದೆ. ಅಲ್ಲದೆ ಆರೋಗ್ಯ ಪಾಠದ ಜತೆಗೆ ಕ್ರಿಕೆಟ್ ಆಡಲು ಮಕ್ಕಳಿಗೆ ನೆರವಾಗಲಿದೆ. ಯೂನಿಸೆಫ್ ಅಂಬಾಸಿಡರ್ ಕೂಡಾ ಆಗಿರುವ ಸಚಿನ್ ತೆಂಡೂಲ್ಕರ್ ಸಹ ಪ್ರಮುಖ ಆಕರ್ಷಣೆಯಾಗಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/304nrvD

ಭಾರತಕ್ಕೆ ಪಾಕ್ ಬೆಂಬಲ; ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಇಂಗ್ಲೆಂಡ್ ಸವಾಲನ್ನು ಎದುರಿಸುತ್ತಿದೆ. ಭಾರತಕ್ಕಿಂತಲೂ ಈ ಪಂದ್ಯ ನೆರೆಯ ಪಾಕಿಸ್ತಾನ ಪಾಲಿಗೆ ಅತಿ ಮುಖ್ಯವೆನಿಸಿದೆ. ಯಾಕೆಂದರೆ ಈ ಪಂದ್ಯದಲ್ಲಿ ಭಾರತ ಗೆದ್ದರಷ್ಟೇ ಪಾಕಿಸ್ತಾನದ ಸೆಮಿಫೈನಲ್ ಪ್ರವೇಶ ಆಸೆ ಜೀವಂತವಾಗಿರಲಿದೆ. ಇದರಂತೆ ಟಾಸ್ ವೇಳೆಯಲ್ಲಿ ಈ ಬಗ್ಗೆ ನಾಯಕ ಅವರಲ್ಲಿ ಕೇಳಿದಾಗ, ಪಾಕಿಸ್ತಾನ ಭಾರತವನ್ನು ಬೆಂಬಲಿಸುತ್ತಿರುವುದು ಅಪರೂಪದ ವಿಷಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೊರಗಡೆ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಅಭಿಮಾನಿಗಳು ಭಾರತವನ್ನು ಬೆಂಬಲಿಸುವ ನಂಬಿಕೆಯಿದೆ. ಬಹುಶ: ಇದೊಂದು ಅಪರೂಪದ ವಿಚಾರ ಎಂದು ನಗುತ್ತಲೇ ನುಡಿದರು. ಇದುವರೆಗೆ ಎಂಟು ಪಂದ್ಯಗಳನ್ನು ಆಡಿರುವ ಪಾಕಿಸ್ತಾನ ಮೂರು ಗೆಲುವಿನೊಂದಿಗೆ ಒಂಬತ್ತು ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ನೆಗಿದಿದೆ. ಅತ್ತ ಇಂಗ್ಲೆಂಡ್ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಎಂಟು ಅಂಕಗಳನ್ನು ಗಳಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XEbgbe

ಕೊನೆಗೂ ಶಂಕರ್‌ಗೆ ಕೊಕ್; ಪಂತ್‌ಗೆ ಚೊಚ್ಚಲ ವಿಶ್ವಕಪ್ ಪಂದ್ಯ

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ ತರಲಾಗಿದೆ. ಆಲ್‌ರೌಂಡರ್ ಸ್ಥಾನಕ್ಕೆ ಉದಯೋನ್ಮುಖ ರಿಷಬ್ ಪಂತ್‌ರನ್ನು ಸೇರಿಕೊಳ್ಳಲಾಗಿದೆ. ಇದರೊಂದಿಗೆ ಪಂತ್‌ಗೆ ಚೊಚ್ಚಲ ವಿಶ್ವಕಪ್ ಪಂದ್ಯವನ್ನಾಡುವ ಅದೃಷ್ಟ ಒಲಿದು ಬಂದಿದೆ. ಸರಾಸರಿ ಪ್ರದರ್ಶನವನ್ನೇ ನೀಡುತ್ತಾ ಬಂದಿರುವ ಶಂಕರ್‌ರನ್ನು ಕೈಬಿಡಲು ಸಾಕಷ್ಟು ಒತ್ತಡಗಳು ಕೇಳಿಬಂದಿದ್ದವು. ಈ ನಡುವೆ ಸುದ್ದಿಗೋಷ್ಠಿಯಲ್ಲಿ ತ್ರಿ ಡೈಮನ್ಷನಲ್ ಪ್ಲೇಯರ್ ಶಂಕರ್‌ರನ್ನು ನಾಯಕ ವಿರಾಟ್ ಕೊಹ್ಲಿ ಬೆಂಬಲಿಸಿದ್ದರು. ಇದೀಗ ಮಹತ್ವದ ದಲಾವಣೆ ತರಲಾಗಿದೆ. ಈ ಬಗ್ಗೆ ಟಾಸ್ ವೇಳೆ ಹೇಳಿಕೆ ನೀಡಿರುವ ಕೊಹ್ಲಿ, ಚೊಕ್ಕದಾದ ಬೌಂಡರಿ ಪ್ರಯೋಜನವನ್ನು ಪಂತ್ ಪಡೆಯಬಹುದಾಗಿದೆ ಎಂದಿದ್ದಾರೆ. ಈ ಹಿಂದೆ ವಿಶ್ವಕಪ್‌ಗಾಗಿನ ನೈಜ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ವಿಫಲವಾಗಿದ್ದರು. ಆದರೆ ವಿಶ್ವಕಪ್ ಮಧ್ಯೆ ಶಿಖರ್ ಧವನ್ ಗಾಯಗೊಂಡಿದ್ದರಿಂದ ಪಂತ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ವಿಶ್ವಕಪ್ ಕನಸು ನನಸಾಗಿದೆ. ಅತ್ತ ಅನುಭವಿ ದಿನೇಶ್ ಕಾರ್ತಿಕ್ ತಂಡದಲ್ಲಿದ್ದರೂ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಇನ್ನೊಂದೆಡೆ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಖಚಿತವೆನಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XBYoSR

ಏಕದಿನ ವಿಶ್ವಕಪ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಬರ್ಮಿ‌ಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಮುಖಾಮುಖಿಯಾಗುತ್ತಿದೆ. ಶಂಕರ್ ಔಟ್, ಪಂತ್‌ಗೆ ಚೊಚ್ಚಲ ವಿಶ್ವಕಪ್ ಪಂದ್ಯ... ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ತರಲಾಗಿದ್ದು, ವಿಜಯ್ ಶಂಕರ್ ಸ್ಥಾನಕ್ಕೆ ರಿಷಬ್ ಪಂತ್ ಆಯ್ಕೆ ಮಾಡಲಾಗಿದೆ. ಅತ್ತ ಇಂಗ್ಲೆಂಡ್ ತಂಡದಲ್ಲಿ ಮೊಯಿನ್ ಅಲಿ ಸ್ಥಾನಕ್ಕೆ ಲಿಯಮ್ ಪ್ಲಂಕೆಟ್ ಆಯ್ಕೆ ಮಾಡಲಾಗಿದೆ. ಆಡುವ ಬಳಗ ಇಂತಿದೆ: India (Playing XI): Lokesh Rahul, , Virat Kohli(c), Rishabh Pant, Kedar Jadhav, MS Dhoni(w), Hardik Pandya, Mohammed Shami, Kuldeep Yadav, Yuzvendra Chahal, Jasprit Bumrah England (Playing XI): Jason Roy, Jonny Bairstow, Joe Root, Eoin Morgan(c), Ben Stokes, Jos Buttler(w), Chris Woakes, Adil Rashid, Liam Plunkett, , Mark Wood ಇಂಗ್ಲೆಂಡ್ ಬ್ಯಾಟಿಂಗ್ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇಂಗ್ಲೆಂಡ್ vs ಏಷ್ಯಾ ಸಮರ... ಭಾರತ ಕ್ರಿಕೆಟ್‌ ತಂಡಕ್ಕೆ 44 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಬಹುಶಃ ಇಂಥದ್ದೊಂದು ಸುಸಂದರ್ಭ ಎದುರಾಗಿರಲಿಲ್ಲ. ಇದಕ್ಕೆ ಭಾರತೀಯ ಬಳಗ ಬ್ರಿಟಿಷರಿಗೆ ಧನ್ಯವಾದ ಹೇಳಲೇಬೇಕಿದೆ. ಅಖಂಡ ಭಾರತ ವಿಭಜನೆಗೊಂಡು 7 ದಶಕಗಳ ಬಳಿಕ, ಭೌಗೋಳಿಕವಾಗಿಯಲ್ಲದಿದ್ದರೂ ಭಾವನಾತ್ಮಕವಾಗಿ ಭಾರತ ಮತ್ತು ಪಾಕಿಸ್ತಾನವನ್ನು ಆಂಗ್ಲರು ಮತ್ತೆ ಒಂದುಗೂಡಿಸುತ್ತಿದ್ದಾರೆ(!). ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಮತ್ತು ಸರ್ಫರಾಜ್‌ ಅಹಮದ್‌ ಸಾರಥ್ಯದ ಪಾಕಿಸ್ತಾನ ತಂಡಗಳ ನಡುವೆ ಭಾನುವಾರ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯದ ವೇಳೆ ಪಾಕಿಸ್ತಾನೀಯರು 'ಇಂಡಿಯಾ, ಇಂಡಿಯಾ' ಎಂದು ಕೊಹ್ಲಿ ಪಡೆಗೆ ಬೆಂಬಲ ವ್ಯಕ್ತಪಡಿಸುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ; ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕ್ರಿಕೆಟ್‌ ಅಭಿಮಾನಿಗಳೂ ಪಾಕ್‌ ಅಭಿಮಾನಿಗಳ ದನಿಗೆ ದನಿಗೂಡಿಸಲಿದ್ದಾರೆ. ಹೆಚ್ಚೂಕಡಿಮೆ 72 ವರ್ಷಗಳ ಹಿಂದೆ ಇದೇ ರೀತಿ ನೆರೆಹೊರೆಯವರು ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ಅಂಥದ್ದೇ ಒಗ್ಗಟ್ಟಿನ ಪ್ರದರ್ಶನವಾಗಲಿದೆ. ಅಂದು ಬ್ರಿಟಿಷರನ್ನು ಭಾರತದಿಂದ ಓಡಿಸಲು ಕೈಗೊಂಡ ಒಗ್ಗಟ್ಟು. ಈಗಿನದು ಇಂಗ್ಲೆಂಡ್‌ ತಂಡವನ್ನು ವಿಶ್ವಕಪ್‌ ಸೆಮಿಫೈನಲ್‌ ಸ್ಪರ್ಧೆಯಿಂದ ಹೊರಗಟ್ಟುವ ಉದ್ದೇಶದ್ದು. ನಾಲ್ಕು ಸೆಮಿಫೈನಲ್‌ ಸ್ಥಾನಗಳಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಭಾರತಕ್ಕೆ ಮೂರು ಸ್ಥಾನ ಬಹುತೇಕ ಖಾತರಿಯಾಗಿವೆ. ಇನ್ನೊಂದು ಸ್ಥಾನಕ್ಕೆ ಇಂಗ್ಲೆಂಡ್‌, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ಪೈಪೋಟಿ ಏರ್ಪಟ್ಟಿದೆ. ಪಾಕಿಸ್ತಾನ 8 ಪಂದ್ಯಗಳಲ್ಲಿ 9 ಅಂಕ ಹೊಂದಿದ್ದರೆ, ಬಾಂಗ್ಲಾದೇಶ (7 ಪಂದ್ಯ) ಮತ್ತು ಶ್ರೀಲಂಕಾ (7 ಪಂದ್ಯ) ತಲಾ 7 ಅಂಕ ಹೊಂದಿವೆ. ಇಂಗ್ಲೆಂಡ್‌ 7 ಪಂದ್ಯಗಳಲ್ಲಿ 8 ಅಂಕ ಕಲೆಹಾಕಿದೆ. ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಇಂಗ್ಲೆಂಡ್‌ ಅಪಾಯಕಾರಿ ತಂಡವೆಂಬುದರಲ್ಲಿ ಎರಡು ಮಾತೇ ಇಲ್ಲ. ಅಕಸ್ಮಾತ್‌ ಭಾನುವಾರದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಗೆದ್ದರೆ 10 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಇನ್ನಷ್ಟು ಹತ್ತಿರವಾಗಲಿದೆ. ಸೋತರೆ ಸೆಮಿಫೈನಲ್ಸ್‌ ಸ್ಪರ್ಧೆಯಿಂದ ಬಹುತೇಕ ಹೊರಬೀಳಲಿದೆ. ಆಗ ತಮಗೆ ಅವಕಾಶದ ಬಾಗಿಲು ತೆರೆಯಬಹುದು ಎಂಬುದು ಏಷ್ಯಾದ ಮೂರು ತಂಡಗಳ ಲೆಕ್ಕಾಚಾರ. ಕೊಹ್ಲಿ ಪಡೆಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಇದೇ ಕಾರಣಕ್ಕಾಗಿ. ಭಾರತ ಮತ್ತು ಇಂಗ್ಲೆಂಡ್‌ ಇಲ್ಲಿಯ ತನಕ ವಿಶ್ವಕಪ್‌ನಲ್ಲಿ 7 ಬಾರಿ ಮುಖಾಮುಖಿಯಾಗಿವೆ. ತಲಾ 3ರಲ್ಲಿ ಜಯಶಾಲಿಯಾಗಿವೆ. ಒಂದು ಪಂದ್ಯ ಟೈ ಆಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅಜೇಯ ತಂಡವಾಗಿ ಗುರುತಿಸಿಕೊಂಡಿದ್ದು, ಈ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಮೇಲುಗೈ ಸಾಧಿಸುವ ಎಲ್ಲ ಸಾಧ್ಯತೆಗಳಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/320FGUA

2ನೇ ಅವಧಿಯ ಮೊದಲ ಮನ್ ಕೀ ಬಾತ್: ನೀರಿನ ಸಂರಕ್ಷಣೆಗೆ ಒತ್ತು ನೀಡಿದ ನಮೋ

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಹೊಸ ಹುಮ್ಮಸ್ಸಿನಲ್ಲಿರುವ ಪ್ರಧಾನಿ ಅವರು ತಮ್ಮ ಸರಕಾರದ ಎರಡನೇ ಅವಧಿಯ ಚೊಚ್ಚಲ 'ಮನ್‌ ಕಿ ಬಾತ್‌' ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದರು. ಪ್ರತಿ ವರ್ಷ ದೇಶದ ಬಹುತೇಕ ಪ್ರದೇಶ ನೀರಿನ ಸಮಸ್ಯೆ ಅನುಭವಿಸುತ್ತಿದೆ. ಇಂಥ ಭೀಕರ ಸಮಸ್ಯೆಯಿಂದ ಪಾರಾಗಲು ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವುದು ಅತ್ಯವಶಕ ಎಂದರು. ಮಾನವಶಕ್ತಿ ಮತ್ತು ಸಹಕಾರದಿಂದ ನೀರಿನ ಸಮಸ್ಯೆ ಬಗೆಹರಿಸಬಹುದೆಂದು ನಂಬಿರುವುದಾಗಿ ಪ್ರಧಾನಿ ತಿಳಿಸಿದರು. ನೂತನ ಜಲಶಕ್ತಿ ಸಚಿವಾಲಯ ಸ್ಥಾಪಿಸುವುದಾಗಿ ತಿಳಿಸಿರುವ ಮೋದಿ, ಜಲಕ್ಷಾಮ ಎದುರಿಸುವಲ್ಲಿ ಈ ಸಚಿವಾಲಯ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಜಾರ್ಖಂಡ್‌ನ ಹಜಾರಿ ಬಾಗ್‌ನ ಸರಂಪಚ್‌ವೊಬ್ಬರ ಸಂದೇಶವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.


from India & World News in Kannada | VK Polls https://ift.tt/2Xj2Si4

ಓದುವುದರಲ್ಲಿ ಮುಂದಿದ್ದಾಳೆಂದು ಶಿಕ್ಷಕನ ಜತೆ ಸೇರಿ ಅತ್ಯಾಚಾರ ಎಸಗಿದ ನಾಲ್ವರು ಅಣ್ಣಂದಿರು!

ಲಖನೌ: ಶಾಲೆಯಲ್ಲಿ ಓದುವುದರಲ್ಲಿ ಮುಂದಿದ್ದಾಳೆ ಎಂಬ ಮತ್ಸರದಿಂದ ಸರಕಾರಿ ಶಾಲೆಯ ಆವರಣದಲ್ಲೇ ಶಿಕ್ಷಕನ ಜತೆ ಸೇರಿ ನಾಲ್ವರು ಸಹೋದರ ಸಂಬಂಧಿಗಳು ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದೆಲ್ಲವನ್ನು ತಡೆಯಬೇಕಿದ್ದ ಶಿಕ್ಷಕನೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸೀತಾಪುರದ 8ನೇ ತರಗತಿ ವಿದ್ಯಾರ್ಥಿನಿಯನ್ನು ಓದಿನಲ್ಲಿ ಮುಂದಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ದುರುಳರು ಅತ್ಯಾಚಾರದ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ವಿದ್ಯಾರ್ಥಿನಿಯ ಕುಟುಂಬ ಸದಸ್ಯರಿಗೆ ವೀಡಿಯೋ ದೃಶ್ಯ ಸಿಕ್ಕಿದ ನಂತರ ಕುಕೃತ್ಯ ಬೆಳಕಿಗೆ ಬಂದಿದೆ. 16 ವರ್ಷದ ವಿದ್ಯಾರ್ಥಿಯ ಪೋಷಕರು ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ ಇದುವರೆಗೆ ಯಾರನ್ನು ಬಂಧಿಸಲಾಗಿಲ್ಲ. ಕಳೆದ ಎರಡು ವರ್ಷಗಳಿಂದ ಹಲವು ಬಾರಿ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸೀತಾಪುರದ ಮೊಹಾಲಿ ಥಾಣೆ ಪ್ರದೇಶದ ಸರಕಾರಿ ಶಾಲೆಯಲ್ಲಿ ಅತ್ಯಾಚಾರ ನಡೆಸುತ್ತಿದ್ದರು ಎಂದು ಅಪ್ರಾಪ್ತೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಎಸ್‌ಪಿ ಅಧುವನ್‌ ಕುಮಾರ್‌ ಸಿಂಗ್‌ ಟಿಒಐಗೆ ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ಮತ್ತು ಅಪ್ರಾಪ್ತೆ ಕೂಡುಕುಟುಂಬದಲ್ಲಿ ಜೀವನ ನಡೆಸುತ್ತಿದ್ದು, ಶಾಲೆಯಲ್ಲಿ ಆಕೆ ಮೊದಲ ಸ್ಥಾನ ಗಳಿಸುತ್ತಿದ್ದುದರಿಂದ ಮತ್ಸರಗೊಂಡ ಆಕೆಯ ಸಹೋದರರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.


from India & World News in Kannada | VK Polls https://ift.tt/2FEqhj2

200 ರೂಪಾಯಿಗಾಗಿ ಯುವಕನನ್ನು ಕೊಂದ ಬಾಲಕರು

ಹೊಸದಿಲ್ಲಿ: ತಮ್ಮಿಂದ ಪಡೆದುಕೊಂಡಿದ್ದ 200 ರೂಪಾಯಿಯನ್ನು ಮರಳಿ ನೀಡಿದ್ದಕ್ಕೆ ಕೋಪಗೊಂಡ ಇಬ್ಬರು ಬಾಲಕರು 17 ವರ್ಷದ ಯುವಕನನ್ನು ಹತ್ಯೆಗೈದ ಬೆಚ್ಚಿ ಬೀಳಿಸುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನಿತಿನ್ ಮಿಶ್ರಾ ಮೃತ ದುರ್ದೈವಿಯಾಗಿದ್ದಾನೆ. ನೈಲಾನ್ ಹಗ್ಗವನ್ನು ಆತನ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿದ ಬಾಲಕರು, ಬಳಿಕ ಮುಖದ ಮೇಲೆ ದೊಡ್ಡ ಕಲ್ಲನ್ನೆತ್ತಿ ಜಜ್ಜಿದ್ದಾರೆ. ಬಳಿಕ ಆನಂದ ವಿಹಾರದ ಬಳಿಯಿದ್ದ ಕಸ ಡಂಪ್ ಮಾಡುವ ಸ್ಥಳದಲ್ಲಿ ಎಸೆದಿದ್ದಾರೆ. ಬುಧವಾರದಿಂದ ಮಿಶ್ರ ನಾಪತ್ತೆಯಾಗಿದ್ದ. ಗುರುವಾರ ರಾತ್ರಿಯವರೆಗೆ ಆತನಿಗಾಗ ಹುಡುಕಿ, ಶುಕ್ರವಾರ ಮುಂಜಾನೆ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಕಸ ಆಯುವವರು ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಆತ ಧರಿಸಿದ್ದ ಬಟ್ಟೆಯ ಆಧಾರದ ಮೇಲೆ ಗುರುತು ಪತ್ತೆಯಾಯಿತು. ತನಿಖೆ ನಡೆಸಿದ ಪೊಲೀಸರಿಗೆ ಆತ ಕೊನೆಯದಾಗಿ 2 ಮಕ್ಕಳ ಜತೆ ಕಾಣಿಸಿಕೊಂಡಿದ್ದ ಮಾಹಿತಿ ಸಂಗ್ರಹಿಸಿ, ಅವರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ. ಆತ 200 ರೂಪಾಯಿ ಸಾಲ ಪಡೆದಿದ್ದ. ಮರಳಿಸಲು ಒಪ್ಪದಿದ್ದಾಗ ಜಗಳವಾಯಿತು. ಕೋಪದ ಭರದಲ್ಲಿ ಕೊಂದು ಹಾಕಿದೆವು ಎಂದು ಬಾಲಕರು ಒಪ್ಪಿಕೊಂಡಿದ್ದಾರೆ.


from India & World News in Kannada | VK Polls https://ift.tt/2YpVnT4

ದಲಿತ ಯುವಕನ ಜತೆ ಪ್ರೀತಿ: ಬುಡಗಟ್ಟು ಬಾಲಕಿ ತಳಿಸಿದ ಸಮುದಾಯದ ಜನ

ಭೋಪಾಲ: ದಲಿತ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಬುಡಕಟ್ಟು ಜನಾಂಗದ ಬಾಲಕಿ ಮೇಲೆ ತನ್ನದೇ ಸಮುದಾಯದ ಸದಸ್ಯರು ಕ್ರೂರವಾಗಿ ಥಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ದಲಿತ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾಳೆಂದು ತಮ್ಮ ಸಮುದಾಯದ ಜನರು ಸಾರ್ವಜನಿಕವಾಗಿಯೇ ಮನ ಬಂದಂತೆ ತಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಸಂಬಂಧ ಪ್ರಮುಖ ಆರೋಪಿಗಳ ವಿರುದ್ಧ ಹಲವು ಪ್ರಕರಣ ದಾಖಲಿಸಿರುವ ಪೊಲೀಸರು, ಸದ್ಯ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.


from India & World News in Kannada | VK Polls https://ift.tt/2FEqa76

ವಿದ್ಯುತ್ ಶಾಕ್‌ ತಗುಲಿ ಸತ್ತವನು ಮತ್ತೆ ಎದ್ದು ಕುಳಿತ

ಮಿಚಿಗನ್: ಸತ್ತವರು ಮತ್ತೆ ಬದುಕಲು ಸಾಧ್ಯವೇ? ನಿಮ್ಮ ಉತ್ತರ ಖಚಿತವಾಗಿಯೂ ಇಲ್ಲ ಎಂದಾಗಿರುತ್ತದೆ. ಆದರೆ ತಗುಲಿ ಸಾವನ್ನಪ್ಪಿದ 20 ವರ್ಷದ ಯುವಕ 20 ನಿಮಿಷ ಬಿಟ್ಟು ಮತ್ತೆ ಎದ್ದು ಕುಳಿತ ವಿಸ್ಮಯಕಾರಿ ಘಟನೆ ಅಮೆರಿಕಾದಲ್ಲಿ ನಡೆದಿದೆ. ಹೌದು ಮೈಕಲ್ ಪ್ರುಯಿಟ್ ಎಂಬ ಯುವಕನಿಗೆ ವಿದ್ಯುತ್ ತಗುಲಿ ಆತ ಸಾವನ್ನಪ್ಪಿದ್ದ. 20 ನಿಮಿಷದವರೆಗೆ ಆತ ಉಸಿರಾಡಿರಲಿಲ್ಲ. 20 ನಿಮಿಷದ ಬಳಿಕ ವೈದ್ಯರು ಮತ್ತೆ ವಿದ್ಯುತ್ ಶಾಕ್ ನೀಡಿದಾಗ ಆಶ್ಚರ್ಯವೆಂಬಂತೆ ಆತ ಎದ್ದು ಕುಳಿತಿದ್ದಾನೆ. ವರದಿಗಳ ಪ್ರಕಾರ, ಮೈಕಲ್ ಲೋಹದ ಏಣಿಯನ್ನೆತ್ತಿಕೊಂಡು ಮೆಟ್ಟಿಲು ಏರಿ ಹೋಗುತ್ತಿದ್ದಾಗ, ಏಣಿ ವಿದ್ಯುತ್ ತಂತಿಗೆ ತಗುಲಿ ಆತನಿಗೆ ಶಾಕ್ ತಾಗಿತು. ಪರಿಣಾಮ ಆತನ ಉಸಿರು ನಿಂತಿತು. ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ 911ಗೆ ಕರೆ ಮಾಡಲಾಯಿತು. ಅರೆ ವೈದ್ಯಕೀಯ ಸಿಬ್ಬಂದಿ ತಕ್ಷಣ ಅಲ್ಲಿಗೆ ಆಗಮಿಸಿದರು. ಆ್ಯಂಬುಲೆನ್ಸ್‌ನಲ್ಲಿ ಒಂದು ಬಾರಿ ಸಹ ಆತನ ಎದೆ ಬಡಿದುಕೊಳ್ಳಲಿಲ್ಲ. ಯುವಕನನ್ನು ಆಸ್ಪತ್ರೆಗೆ ಕರೆ ತಂದಾಗ ಆತನಿಗೆ ಜೀವಂತವಿರುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೂ ವೈದ್ಯರಿಗೆ ಜೀವವಿದೆ ಎನ್ನಿಸಿತು. ಆತನ ಕಿವಿ ಬಳಿ ನೀ ಮರಳಿ ದೀವ ಪಡೆಯಬೇಕು ಎಂದು ಹೇಳಿದ ವೈದ್ಯರು ಆತನಿಗೆ ವಿದ್ಯುತ್ ಶಾಕ್ ನೀಡಿದರು. ಎರಡು ನಿಮಿಷದೊಳಗೆ ಆತನ ಎದೆ ಮತ್ತೆ ಬಡಿಯಲು ಆರಂಭವಾಯಿತು. ವೈದ್ಯರು ಸಹ ಆತ ಪುನರ್ಜೀವಿತಗೊಂಡಿದ್ದಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.


from India & World News in Kannada | VK Polls https://ift.tt/2xomP7u

ಇಂದು ಇಂಗ್ಲೆಂಡ್‌ ವರ್ಸಸ್‌ ಏಷ್ಯಾ ಸಮರ!

ಎಜ್‌ಬಾಸ್ಟನ್‌: ಭಾರತ ಕ್ರಿಕೆಟ್‌ ತಂಡಕ್ಕೆ ನಲವತ್ತನಾಲ್ಕು ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಬಹುಶಃ ಇಂಥದ್ದೊಂದು ಸುಸಂದರ್ಭ ಎದುರಾಗಿರಲಿಲ್ಲ. ಇದಕ್ಕೆ ಭಾರತೀಯ ಬಳಗ ಬ್ರಿಟಿಷರಿಗೆ ಧನ್ಯವಾದ ಹೇಳಲೇಬೇಕಿದೆ. ಅಖಂಡ ಭಾರತ ವಿಭಜನೆಗೊಂಡು 7 ದಶಕಗಳ ಬಳಿಕ, ಭೌಗೋಳಿಕವಾಗಿಯಲ್ಲದಿದ್ದರೂ ಭಾವನಾತ್ಮಕವಾಗಿ ಭಾರತ ಮತ್ತು ಪಾಕಿಸ್ತಾನವನ್ನು ಆಂಗ್ಲರು ಮತ್ತೆ ಒಂದುಗೂಡಿಸುತ್ತಿದ್ದಾರೆ(!). ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಮತ್ತು ಸರ್ಫರಾಜ್‌ ಅಹಮದ್‌ ಸಾರಥ್ಯದ ಪಾಕಿಸ್ತಾನ ತಂಡಗಳ ನಡುವೆ ಭಾನುವಾರ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯದ ವೇಳೆ ಪಾಕಿಸ್ತಾನೀಯರು 'ಇಂಡಿಯಾ, ಇಂಡಿಯಾ' ಎಂದು ಕೊಹ್ಲಿ ಪಡೆಗೆ ಬೆಂಬಲ ವ್ಯಕ್ತಪಡಿಸುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ; ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕ್ರಿಕೆಟ್‌ ಅಭಿಮಾನಿಗಳೂ ಪಾಕ್‌ ಅಭಿಮಾನಿಗಳ ದನಿಗೆ ದನಿಗೂಡಿಸಲಿದ್ದಾರೆ. ಹೆಚ್ಚೂಕಡಿಮೆ 72 ವರ್ಷಗಳ ಹಿಂದೆ ಇದೇ ರೀತಿ ನೆರೆಹೊರೆಯವರು ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ಅಂಥದ್ದೇ ಒಗ್ಗಟ್ಟಿನ ಪ್ರದರ್ಶನವಾಗಲಿದೆ. ಅಂದು ಬ್ರಿಟಿಷರನ್ನು ಭಾರತದಿಂದ ಓಡಿಸಲು ಕೈಗೊಂಡ ಒಗ್ಗಟ್ಟು. ಈಗಿನದು ಇಂಗ್ಲೆಂಡ್‌ ತಂಡವನ್ನು ವಿಶ್ವಕಪ್‌ ಸೆಮಿಫೈನಲ್‌ ಸ್ಪರ್ಧೆಯಿಂದ ಹೊರಗಟ್ಟುವ ಉದ್ದೇಶದ್ದು. ನಾಲ್ಕು ಸೆಮಿಫೈನಲ್‌ ಸ್ಥಾನಗಳಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಭಾರತಕ್ಕೆ ಮೂರು ಸ್ಥಾನ ಬಹುತೇಕ ಖಾತರಿಯಾಗಿವೆ. ಇನ್ನೊಂದು ಸ್ಥಾನಕ್ಕೆ ಇಂಗ್ಲೆಂಡ್‌, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ಪೈಪೋಟಿ ಏರ್ಪಟ್ಟಿದೆ. ಪಾಕಿಸ್ತಾನ 8 ಪಂದ್ಯಗಳಲ್ಲಿ 9 ಅಂಕ ಹೊಂದಿದ್ದರೆ, ಬಾಂಗ್ಲಾದೇಶ (7 ಪಂದ್ಯ) ಮತ್ತು ಶ್ರೀಲಂಕಾ (7 ಪಂದ್ಯ) ತಲಾ 7 ಅಂಕ ಹೊಂದಿವೆ. ಇಂಗ್ಲೆಂಡ್‌ 7 ಪಂದ್ಯಗಳಲ್ಲಿ 8 ಅಂಕ ಕಲೆಹಾಕಿದೆ. ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಇಂಗ್ಲೆಂಡ್‌ ಅಪಾಯಕಾರಿ ತಂಡವೆಂಬುದರಲ್ಲಿ ಎರಡು ಮಾತೇ ಇಲ್ಲ. ಅಕಸ್ಮಾತ್‌ ಭಾನುವಾರದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಗೆದ್ದರೆ 10 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಇನ್ನಷ್ಟು ಹತ್ತಿರವಾಗಲಿದೆ. ಸೋತರೆ ಸೆಮಿಫೈನಲ್ಸ್‌ ಸ್ಪರ್ಧೆಯಿಂದ ಬಹುತೇಕ ಹೊರಬೀಳಲಿದೆ. ಆಗ ತಮಗೆ ಅವಕಾಶದ ಬಾಗಿಲು ತೆರೆಯಬಹುದು ಎಂಬುದು ಏಷ್ಯಾದ ಮೂರು ತಂಡಗಳ ಲೆಕ್ಕಾಚಾರ. ಕೊಹ್ಲಿ ಪಡೆಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಇದೇ ಕಾರಣಕ್ಕಾಗಿ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XbAsS3

ತಾಕತ್ತಿದ್ದರೆ ಸರಕಾರ ಉರುಳಿಸಿ: ಬಿಜೆಪಿಗೆ ಕಮಲ್‌ನಾಥ್ ಸವಾಲು

ಹೊಸದಿಲ್ಲಿ: ತಾಕತ್ತಿದ್ದರೆ ನನ್ನ ಸರಕಾರವನ್ನು ಉರುಳಿಸಿ ನೋಡೋಣ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕಮಲ್‌ನಾಥ್ ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಾಯಕ ಕೈಲಾಸ್ ವಿಜಯ ವರ್ಗೀಯ ಅವರು ಯಾವುದೇ ಕ್ಷಣದಲ್ಲಿ ಕೈ ಸರಕಾರವನ್ನು ಉರುಳಿಸಬಲ್ಲೆವು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ಕೇಳಲಾಯಿತು. ಅದಕ್ಕುತ್ತರಿಸಿದ ಕಮಲ್‌ನಾಥ್, ಅವರೇನು ನಮ್ಮ ಸರಕಾರದ ಮೇಲೆ ಕರುಣೆ ತೋರುತ್ತಿದ್ದಾರೆಯೇ? ಸರಕಾರ ಉರುಳಿಸಬಲ್ಲೆವು ಎಂದು ಹೇಳುತ್ತ ಕುಳಿತುಕೊಳ್ಳಬಾರದು. ಅವರೇಕೆ ದೊಡ್ಡ ದೊಡ್ಡ ಮಾತನ್ನಾಡುತ್ತಿದ್ದಾರೆ. ತಾಕತ್ತಿದ್ದರೆ ನಮ್ಮ ಸರಕಾರವನ್ನುರುಳಿಸುವ ಪ್ರಯತ್ನ ಮಾಡಬೇಕು, ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ್ನು ಗೆಲ್ಲಿಸಿ ರಾಜ್ಯದ ಜನರು ತಮ್ಮ ಆಯ್ಕೆಯನ್ನು ಸ್ಪಷ್ಟ ಪಡಿಸಿದ್ದಾರೆ. ಸೋಲಿಂದ ಕಂಗೆಟ್ಟಿರುವ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಲು ಬಿಜೆಪಿ ನಾಯಕರು ಇಂತಹ ಮಾತುಗಳನ್ನಾಡುತ್ತಾರೆ ಎಂದು ಕಮಲ್‌ನಾಥ್ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರ್ವತ್ರಿಕ ಚುನಾವಣೆಯಲ್ಲಿ ಜನರು ನಮ್ಮನ್ನು ತಿರಸ್ಕರಿಸಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಮಾತನ್ನು ನಾವು ಜನರಿಗೆ ಮನವರಿಕೆ ಮಾಡಿಸುವುಲ್ಲಿ ವಿಫಲರಾದೆವು. ಚುನಾವಣೆ ರಾಷ್ಟ್ರೀಯವಾದ ವಿಷಯದ ಮೇಲೆ ಕೇಂದ್ರೀಕೃತವಾಯಿತು ಎಂದಿದ್ದಾರೆ. 231 ವಿಧಾನಸಭಾ ಸೀಟುಗಳಿರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ನ 114 ಮತ್ತು ಬಿಜೆಪಿಯ 108 ಶಾಸಕರಿದ್ದಾರೆ. ಬಿಎಸ್‌ಪಿ 1 , ಸಮಾಜವಾದಿ ಪಕ್ಷದ 2 ಮತ್ತು 4 ಪಕ್ಷೇತರ ಶಾಸಕರ ಸಮರ್ಥನೆ ಪಡೆದುಕೊಂಡು ಸರಕಾರ ರಚಿಸಿದೆ.


from India & World News in Kannada | VK Polls https://ift.tt/2XeZ4cV

ಪಾಲಿಕೆ ಅಧಿಕಾರಿ ಮೇಲೆ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದ ವರ್ಗೀಯಗೆ ಬೇಲ್

ಹೊಸದಿಲ್ಲಿ: ಪಾಲಿಕೆ ಅಧಿಕಾರಿ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗೀಯಗೆ ಭೋಪಾಲ್ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಜೂನ್ 26ರಂದು ಇಂದೋರ್‌ ಮುನ್ಸಿಪಲ್‌ ಕಾರ್ಪೊರೇಷನ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಆಕಾಶ್‌ ಬೆಂಬಲಿಗನೋರ್ವನ ಕಟ್ಟಡ ಕೆಡವಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಕಟ್ಟಡ ಕೆಡವದಂತೆ ಆಕಾಶ್‌ ಆಜ್ಞೆ ನೀಡಿದರೂ, ಮಾತು ಕೇಳದೇ ಇದ್ದ ಅಧಿಕಾರಿ ವಿರುದ್ಧ ಕೆಂಡಾಮಂಡಲರಾದ ಶಾಸಕ ಆಕಾಶ್‌, ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದರು. ಈ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.


from India & World News in Kannada | VK Polls https://ift.tt/2XfHJp5

ಪಾಕಿಸ್ತಾನಕ್ಕೆ ರೋಚಕ ಗೆಲುವು: ಸರ್ಫರಾಜ್‌ ಬಳಗದ ಸೆಮೀಸ್‌ ಆಸೆ ಜೀವಂತ

ಲೀಡ್ಸ್: ಶಹೀನ್‌ ಅಫ್ರಿದಿ ಅವರ ಶಿಸ್ತಿನ ದಾಳಿಯ ಜತೆಗೆ ಬಾಬರ್‌ ಅಜಮ್‌ ಮತ್ತು ಇಮಾದ್‌ ವಾಸಿಮ್‌ ಅವರ ಹೊಣೆಗಾರಿಕೆಯುತ ಬ್ಯಾಟಿಂಗ್‌ ನೆರವಿನಿಂದ ತಂಡ ವಿಶ್ವಕಪ್‌ ಟೂರ್ನಿಯ ರೌಂಡ್‌ ರಾಬಿನ್‌ ಲೀಗ್‌ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಎರಡು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ, ತನ್ನ ಸೆಮಿಫೈನಲ್ಸ್‌ ಹಂತವನ್ನು ಜೀವಂತವಾಗಿರಿಸಿಕೊಂಡಿದೆ. ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 227 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 230 ರನ್‌ ಗಳಿಸಿತ್ತು. ಪಾಕ್‌ ಪರ ಇಮಾದ್‌ ವಾಸಿಮ್‌ (49*) ಮತ್ತು ಬಾಬರ್‌ ಅಜಮ್‌ (45) ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಪಾಕ್‌ ಬೌಲರ್‌ಗಳಿಗೆ ಸಂಪೂರ್ಣ ಪ್ರಭುತ್ವ ಸಾಧಿಸಲು ಸಾಧ್ಯವಾಗದಿದ್ದರೂ ವೇಗಿ ಶಹೀನ್‌ ಅಫ್ರಿದಿ ಮಾತ್ರ ನಾಲ್ಕು ವಿಕೆಟ್‌ ಉರುಳಿಸುವ ಮೂಲಕ ಎದುರಾಳಿ ತಂಡಕ್ಕೆ ಕಡಿವಾಣ ಹಾಕಿದರು. ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳಲು ತಿಣುಕಾಡಿದ ಆಫ್ಘನ್‌ ಬ್ಯಾಟ್ಸ್‌ಮನ್‌ಗಳು ಕೆಲವು ಕೆಟ್ಟ ಹೊಡೆತಗಳಿಗೆ ಯತ್ನಿಸಿ ನಿಯಮಿತವಾಗಿ ವಿಕೆಟ್‌ ಚೆಲ್ಲಿದರು. ಇದರ ನಡುವæಯೂ ಅಸ್ಘರ್‌ ಅಫ್ಘನ್‌ (42 ರನ್‌, 35 ಎಸೆತ) ಮತ್ತು ನಜೀಬುಲ್ಲಾ ಝದ್ರಾನ್‌ (42 ರನ್‌, 54 ಎಸೆತ) ಅಫಘಾನಿಸ್ತಾನ ಪರ ಗರಿಷ್ಠ ರನ್‌ ಕಲೆಹಾಕಿದರು. ಪಾಕಿಸ್ತಾನ ಪರ ಕರಾರುವಾಕ್‌ ದಾಳಿ ಸಂಘಟಿಸಿದ ಅಫ್ರಿದಿ, ತನ್ನ ಪಾಲಿನ ಹತ್ತು ಓವರ್‌ಗಳಲ್ಲಿ 47 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರೆ, ಇಮಾದ್‌ ವಾಸಿಮ್‌ ಮತ್ತು ವಹಾಬ್‌ ರಿಯಾಜ್‌ ತಲಾ 2 ವಿಕೆಟ್‌ ತಮ್ಮದಾಗಿಸಿಕೊಂಡರು. ಸಂಕ್ಷಿಪ್ತ ಸ್ಕೋರ್‌ ಅಫಘಾನಿಸ್ತಾನ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 227 (ಅಸ್ಘರ್‌ ಅಫ್ಘನ್‌ 42, ನಜೀಬುಲ್ಲಾ ಝದ್ರಾನ್‌ 42, ರಹಮತ್‌ ಶಾ 35; ಶಹೀನ್‌ ಅಫ್ರಿದಿ 47ಕ್ಕೆ 4, ವಹಾಬ್‌ 29ಕ್ಕೆ 2, ಇಮಾದ್‌ ವಾಸಿಮ್‌ 48ಕ್ಕೆ 2). ಪಾಕಿಸ್ತಾನ: 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 230 (ಬಾಬರ್‌ 45, ಇಮಾದ್‌ 49*; ನಬಿ 23ಕ್ಕೆ 2, ಮುಜೀಬ್‌ 34ಕ್ಕೆ 2).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KMutkO

ಇಂಡಿಯಾ vs ಇಂಗ್ಲೆಂಡ್: ಅಂಕಿ-ಅಂಶ ಏನು ಹೇಳುತ್ತದೆ?

ಲಂಡನ್: ವರ್ಸಸ್‌ ಪಾಕಿಸ್ತಾನ ಪಂದ್ಯಕ್ಕೆ ಹೇಗೆ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದರೋ, ಅದೇ ರೀತಿಯಲ್ಲಿ ಭಾನುವಾರ ನಡೆಯುತ್ತಿರುವ, ಅತ್ಯಂತ ರೋಚಕ ವರ್ಸಸ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯ ಹಲವು ರೀತಿಯಲ್ಲಿ ಪ್ರಮುಖವೆನಿಸಿದೆ. ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಎದುರಿಸುವುದು ಒಂದೆಡೆಯಾದರೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಂತೆ, ಇಂಗ್ಲೆಂಡ್ ತಂಡವನ್ನು ಕೂಡ ಬಿಂಬಿಸಿರುವುದರಿಂದ, ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಪಂದ್ಯದ ಕುರಿತ ಪ್ರಮುಖ ಅಂಕಿ-ಅಂಶಗಳು ಈ ರೀತಿ ಇವೆ. ಭಾರತ ವರ್ಸಸ್‌ ಇಂಗ್ಲೆಂಡ್‌ ಅಂಕಿ-ಅಂಶಆಡಿದ ಒಟ್ಟು ಪಂದ್ಯ 99 ಭಾರತದ ಗೆಲುವು 53 ಇಂಗ್ಲೆಂಡ್‌ ಗೆಲುವು 41 ಟೈ 2 ಫಲಿತಾಂಶ ರಹಿತ 3 ವಿಶ್ವಕಪ್‌ ಮುಖಾಮುಖಿ: 7 ಭಾರತ ಗೆಲುವು 3 ಇಂಗ್ಲೆಂಡ್‌ ಜಯ 3 ಟೈ 1 ಗರಿಷ್ಠ ಸ್ಕೋರ್‌ಭಾರತ 338 (2011ರ ವಿಶ್ವಕಪ್‌) ಇಂಗ್ಲೆಂಡ್‌ 338 (2011ರ ವಿಶ್ವಕಪ್‌) ಕನಿಷ್ಠ ಸ್ಕೋರ್‌ಇಂಗ್ಲೆಂಡ್‌ 168 (2002/03ರ ವಿಶ್ವಕಪ್‌) ಭಾರತ 132 (1975ರ ವಿಶ್ವಕಪ್‌) ಭಾರತ ವಿರುದ್ಧ ಇಂಗ್ಲೆಂಡ್‌ ತಂಡ 1975ರ ಆವೃತ್ತಿಯಲ್ಲಿ 202 ರನ್‌ಗಳ ಅಂತರದಿಂದ ಗೆದ್ದಿತ್ತು. ಇದು ಉಭಯ ತಂಡಗಳ ನಡುವಣ ಭಾರಿ ಅಂತರದ ಗೆಲುವು. ಭಾರತ ತಂಡ 1983ರ ಆವೃತ್ತಿಯಲ್ಲಿ ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಗೆದ್ದಿತ್ತು. ಇದು ಆಂಗ್ಲರ ವಿರುದ್ಧ ಆಡಿದ 7 ವಿಶ್ವಕಪ್‌ ಪಂದ್ಯಗಳ ಪೈಕಿ ಭಾರತಕ್ಕೆ ದಕ್ಕಿದ ದೊಡ್ಡ ಗೆಲುವು. 1975ರ ಆವೃತ್ತಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಸುನಿಲ್‌ ಗವಾಸ್ಕರ್‌ ಗಳಿಸಿದ ರನ್‌. ಆರಂಭಿಕನಾಗಿ ಕ್ರೀಸಿಗಿಳಿದಿದ್ದ ಲಿಟಲ್‌ ಮಾಸ್ಟರ್‌ 174 ಎಸೆತಗಳಲ್ಲಿ 1 ಬೌಂಡರಿ ಸಹಿತ 36 ರನ್‌ಗಳೊಂದಿಗೆ ಔಟಾಗದೆ ಉಳಿದಿದ್ದರು. ಇದು ದಾಖಲೆ. ಹಾಲಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ಜೋ ರೂಟ್‌ ಕಲೆಹಾಕಿರುವ ರನ್‌ 432. ಗರಿಷ್ಠ ರನ್‌ ಪೇರಿಸಿರುವವರ ಪೈಕಿ ರೂಟ್‌ಗೆ ಸದ್ಯಕ್ಕೆ 4ನೇ ಸ್ಥಾನ. 500 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌ (ಆಸ್ಪ್ರೇಲಿಯಾ) ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಹಾಲಿ ವಿಶ್ವಕಪ್‌ನಲ್ಲಿ ಉರುಳಿಸಿದ ವಿಕೆಟ್‌ಗಳು 16. ಅತಿ ಹೆಚ್ಚು ವಿಕೆಟ್‌ ಉರುಳಿಸಿದವರ ಪಟ್ಟಿಯಲ್ಲಿ ಆರ್ಚರ್‌ಗೆ ಸದ್ಯಕ್ಕೆ 2ನೇ ಸ್ಥಾನ. ಆಸ್ಪ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ (19) ಮೊದಲ ಸ್ಥಾನದಲ್ಲಿದ್ದಾರೆ. ಪೂರ್ವ ಇತಿಹಾಸವಿಶ್ವಕಪ್‌ ಇತಿಹಾಸದಲ್ಲಿ ಭಾರತ ಮತ್ತು ಇಂಗ್ಲೆಂಡ್‌ 7 ಬಾರಿ ಮುಖಾಮುಖಿಯಾಗಿದ್ದು, ಸಮಬಲ ನೆಲೆಸಿದೆ. ಅವುಗಳ ವಿವರ ಇಲ್ಲಿದೆ. 1975 ಇಂಗ್ಲೆಂಡ್‌ಗೆ 202 ರನ್‌ ಜಯಇಂಗ್ಲೆಂಡ್‌ : 60 ಓವರ್‌ಗಳಲ್ಲಿ 334/4 (ಡಿ.ಎಲ್‌.ಅಮಿಸ್‌ 137; ಕೀತ್‌ ಫ್ಲೆಚರ್‌ 107; ಅಬಿದ್‌ ಅಲಿ 58ಕ್ಕೆ 2) ಭಾರತ : 60 ಓವರ್‌ಗಳಲ್ಲಿ 132/3 (ಗವಾಸ್ಕರ್‌ 36*, ಜಿ.ಆರ್‌.ವಿಶ್ವನಾಥ್‌ 37) 1983 ಭಾರತಕ್ಕೆ 6 ವಿಕೆಟ್‌ ಜಯಇಂಗ್ಲೆಂಡ್‌ : 60 ಓವರ್‌ಗಳಲ್ಲಿ 213/10 (ಗ್ರ್ಯಾಂಟ್‌ ಫ್ಲವರ್‌ 33, ಸಿ.ಜೆ.ತಾವರೆ 32; ಕಪಿಲ್‌ ದೇವ್‌ 35ಕ್ಕೆ 3, ಮೊಹಿಂದರ್‌ ಅಮರ್‌ನಾಥ್‌ 27ಕ್ಕೆ 2, ರೋಜರ್‌ ಬಿನ್ನಿ 43ಕ್ಕೆ 2) ಭಾರತ : 54.4 ಓವರ್‌ಗಳಲ್ಲಿ 217/4 (ಸುನಿಲ್‌ ಗವಾಸ್ಕರ್‌ 25, ಮೊಹಿಂದರ್‌ ಅಮರ್‌ನಾಥ್‌ 46, ಯಶಪಾಲ್‌ ಶರ್ಮಾ 61, ಸಂದೀಪ್‌ ಪಾಟೀಲ್‌ 51*;) 1987 ಇಂಗ್ಲೆಂಡ್‌ಗೆ 35 ರನ್‌ ಜಯಇಂಗ್ಲೆಂಡ್‌ : 50 ಓವರ್‌ಗಳಲ್ಲಿ 254/6 (ಗೂಚ್‌ 115, ಮೈಕ್‌ ಗ್ಯಾಟಿಂಗ್‌ 56, ಅಲನ್‌ ಲ್ಯಾಂಬ್‌ 32*; ಮಣಿಂದರ್‌ ಸಿಂಗ್‌ 54ಕ್ಕೆ 3, ಕಪಿಲ್‌ 38ಕ್ಕೆ 2). ಭಾರತ : 45.3 ಓವರ್‌ಗಳಲ್ಲಿ 219/10 (ಅಜರುದ್ದೀನ್‌ 64, ಕೆ.ಶ್ರೀಕಾಂತ್‌ 31, ಕಪಿಲ್‌ 30; ಹೆಮಿಂಗ್ಸ್‌ 52ಕ್ಕೆ 4, ನೀಲ್‌ ಫಾಸ್ಟರ್‌ 47ಕ್ಕೆ 3). 1992 ಇಂಗ್ಲೆಂಡ್‌ಗೆ 9 ರನ್‌ ಜಯಇಂಗ್ಲೆಂಡ್‌ : 50 ಓವರ್‌ಗಳಲ್ಲಿ 236/9 (ರಾಬಿನ್‌ ಸ್ಮಿತ್‌ 91, ಗೂಚ್‌ 51; ಕಪಿಲ್‌ 38ಕ್ಕೆ 2, ಮನೋಜ್‌ ಪ್ರಭಾಕರ್‌ 34ಕ್ಕೆ 2, ಜಾವಗಲ್‌ ಶ್ರೀನಾಥ್‌ 47ಕ್ಕೆ 2). ಭಾರತ : 49.2 ಓವರ್‌ಗಳಲ್ಲಿ 227/10 (ರವಿಶಾಸ್ತ್ರಿ 57, ಕೆ.ಶ್ರೀಕಾಂತ್‌ 39, ಸಚಿನ್‌ 35; ಡಿಎ ರೀವ್‌ 38ಕ್ಕೆ 3). 1999 ಭಾರತಕ್ಕೆ 63 ರನ್‌ ಜಯಭಾರತ : 50 ಓವರ್‌ಗಳಲ್ಲಿ 232/8 (ದ್ರಾವಿಡ್‌ 53, ಗಂಗೂಲಿ 40, ಅಜಯ್‌ ಜಡೇಜಾ 39; ಎಂ.ಎ.ಎಲಮ್‌ 28ಕ್ಕೆ 2). ಇಂಗ್ಲೆಂಡ್‌ : 45.2 ಓವರ್‌ಗಳಲ್ಲಿ 169/10 (ತೋರ್ಪೆ 36, ನಾಸಿರ್‌ ಹುಸೇನ್‌ 33; ಗಂಗೂಲಿ 27ಕ್ಕೆ 3, ಕುಂಬ್ಳೆ 30ಕ್ಕೆ 2, ಜಾವಗಲ್‌ ಶ್ರೀನಾಥ್‌ 25ಕ್ಕೆ 2). 2003 ಭಾರತಕ್ಕೆ 82 ರನ್‌ ಜಯಭಾರತ : 50 ಓವರ್‌ಗಳಲ್ಲಿ 250/9 (ದ್ರಾವಿಡ್‌ 62, ಸಚಿನ್‌ 50, ಯುವರಾಜ್‌ ಸಿಂಗ್‌ 42; ಎ.ಆರ್‌.ಕ್ಯಾಡಿಕ್‌ 69ಕ್ಕೆ 3, ಫ್ಲಿಂಟಾಫ್‌ 15ಕ್ಕೆ 2). ಇಂಗ್ಲೆಂಡ್‌ : 45.3 ಓವರ್‌ಗಳಲ್ಲಿ 168/10 (ಫ್ಲಿಂಟಾಫ್‌ 64, ಮೈಕೆಲ್‌ ವಾನ್‌ 20; ಆಶಿಶ್‌ ನೆಹ್ರಾ 23ಕ್ಕೆ 6, ಜಹೀರ್‌ ಖಾನ್‌ 29ಕ್ಕೆ 2). 2011 ಪಂದ್ಯ ಟೈಭಾರತ : 49.5 ಓವರ್‌ಗಳಲ್ಲಿ 338/10 (ಸಚಿನ್‌ 120, ಗಂಭೀರ್‌ 51, ಯುವರಾಜ್‌ ಸಿಂಗ್‌ 58; ಬ್ರೆಸ್ನನ್‌ 48ಕ್ಕೆ 5). ಇಂಗ್ಲೆಂಡ್‌ : 50 ಓವರ್‌ಗಳಲ್ಲಿ 338/8 (ಸ್ಟ್ರಾಸ್‌ 158, ಬೆಲ್‌ 69; ಜಹೀರ್‌ ಖಾನ್‌ 64ಕ್ಕೆ 3, ಮುನಾಫ್‌ ಪಟೇಲ್‌ 70ಕ್ಕೆ 2, ಪಿಯೂಷ್‌ ಚಾವ್ಲಾ 71ಕ್ಕೆ 2). ತಂಡಗಳು ಭಾರತ : ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿಜಯ್‌ ಶಂಕರ್‌, ಕೇದಾರ್‌ ಜಾಧವ್‌, ಧೋನಿ, ಹಾರ್ದಿಕ್‌ ಪಾಂಡ್ಯ, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ಮೊಹಮ್ಮದ್‌ ಶಮಿ, ಜಸ್‌ಪ್ರಿತ್‌ ಬುಮ್ರಾ, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಭುವನೇಶ್ವರ್‌ ಕುಮಾರ್‌ ಮತ್ತು ರವೀಂದ್ರ ಜಡೇಜಾ. ಇಂಗ್ಲೆಂಡ್‌ : ಮಾರ್ಗನ್‌ (ನಾಯಕ), ಜೇಮ್ಸ್‌ ವಿನ್ಸ್‌, ಜಾನಿ ಬೈರ್‌ಸ್ಟೋವ್‌, ಜೋ ರೂಟ್‌, ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌, ಮೊಯೀನ್‌ ಅಲಿ, ಅದಿಲ್‌ ರಶೀದ್‌, ಮಾರ್ಕ್‌ ವುಡ್‌, ಕ್ರಿಸ್‌ ವೋಕ್ಸ್‌, ಜೋಫ್ರಾ ಆರ್ಚರ್‌, ಜೇಸನ್‌ ರಾಯ್‌, ಲಿಯಾಮ್‌ ಪ್ಲಂಕೆಟ್‌, ಟಾಮ್‌ ಕುರನ್‌ ಮತ್ತು ಲಿಯಾಮ್‌ ಡಾಸನ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RLz2g7

ನ್ಯೂಜಿಲೆಂಡ್ ಆಟಗಾರರು ಸಂಘಟಿತರಾಗಿ ಆಡಬೇಕು: ಹರ್ಷ ಭೋಗ್ಲೆ

ಶನಿವಾರದ ಪಂದ್ಯದಲ್ಲಿ ಆಟಗಾರರು ವಿರುದ್ಧ ಸಂಘಟಿತರಾಗಿ ಆಡಬೇಕು ಎಂದು ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಹೇಳಿದ್ದಾರೆ. ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ತಂಡ ಸೊಕ್ಕಿನ ಹೆಜ್ಜೆಯನ್ನಿಡುತ್ತಿರುವ ವೇಳೆಯಲ್ಲಿ ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರು ಲಯ ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. ನ್ಯೂಜಿಲೆಂಡ್‌ಗೆ ಇನ್ನು ಮುಂದಿನ ಸವಾಲು ದೊಡ್ಡದಿದೆ. ಅದರಲ್ಲೂ ತಂಡದ ಬ್ಯಾಟಿಂಗ್‌ ಶಕ್ತಿ ಕೇನ್‌ ವಿಲಿಯಮ್ಸನ್‌ ಸುತ್ತಲೇ ಸುತ್ತುತ್ತಿದ್ದು, ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿಲ್ಲ. ಹೀಗಾಗಿ ಆಸ್ಪ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್‌ ಗಪ್ಟಿಲ್‌ ಹಾಗೂ ರಾಸ್‌ ಟೇಲರ್‌ ಶ್ರಮ ವಹಿಸಬೇಕು ಹಾಗೂ ಬೌಲಿಂಗ್‌ನಲ್ಲಿ ಬೌಲ್ಟ್‌ ಹಾಗೂ ಫಗ್ರ್ಯುಸನ್‌ಗೆ ಹೆನ್ರಿ ಮತ್ತು ಸೌಥಿ ಸಾಥ್‌ ನೀಡಬೇಕು. ನಾಯಕ ಫಿಂಚ್‌ ಹಾಗೂ ವಾರ್ನರ್‌ ನೆರವಿನಿಂದ ಆಸ್ಪ್ರೇಲಿಯಾ ತಂಡ ಇತ್ತೀಚಿನ ಕೆಲ ದಿನಗಳಲ್ಲಿ ಸದೃಢಗೊಳ್ಳುತ್ತಲೇ ಸಾಗುತ್ತಿದೆ. ಇವರಿಬ್ಬರೇ ಸೇರಿಕೊಂಡು ಟೂರ್ನಿಯಲ್ಲಿ ಸಾವಿರ ರನ್‌ ಮಾಡಿದ್ದಾರೆ. ಸ್ಟಾರ್ಕ್‌ ಹಾಗೂ ಬೆಹ್ರೆನ್‌ಡಾರ್ಫ್‌ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಕಾಡುತ್ತಿದ್ದು, ಇನ್‌ಸ್ವಿಂಗ್‌ ಬೌಲಿಂಗ್‌ನ ಪ್ರತಾಪ ತೋರಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್‌ ಮಾಡುವ ವೇಳೆ ಮ್ಯಾಕ್ಸ್‌ವೆಲ್‌ ಹಾಗೂ ಸ್ಟೋಯ್ನಿಸ್‌ ಇನ್ನಷ್ಟು ಶಕ್ತಿ ತೋರಿಸಬೇಕಿದೆ. ಒಟ್ಟಿನಲ್ಲಿ ಆಸ್ಪ್ರೇಲಿಯಾ ತಂಡ ಭಯಂಕರವಾಗಿ ಕಾಣಿಸುತ್ತಿದೆ ಎಂದು ಭೋಗ್ಲೆ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RLz1J5

ಧೋನಿಗೆ ಎಲ್ಲೆಡೆಯಿಂದ ಹೊಗಳಿಕೆಯ ಮಹಾಪೂರ

ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ 56 ರನ್‌ ಬಾರಿಸಿ ತಂಡಕ್ಕೆ ಆಸರೆಯಾದ ಮಹೇಂದ್ರ ಸಿಂಗ್‌ ಧೋನಿಯ ಆಟಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಧೋನಿಯ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಧೋನಿ ಕ್ರಿಕೆಟ್‌ನ ಲೆಜೆಂಡ್‌ ಎಂದಿದ್ದಾರೆ. ಮಾಜಿ ನಾಯಕ ಸೌರವ್‌ ಗಂಗೂಲಿ ಕೂಡ ಧೋನಿ ಪರ ಬ್ಯಾಟ್‌ ಬೀಸಿದ್ದು, ಕೊನೆಯ ಹಂತದಲ್ಲಿ ಅವರು ನೀಡಿದ ಜತೆಯಾಟ ತಂಡದ ಗೆಲುವಿಗೆ ನೆರವು ನೀಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಧೋನಿ ಆಟ ಮಸುಕಾಗಿದೆ ಎಂದು ಹಿರಿಯ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಚರ್ಚೆ ನಡೆದು ಅಭಿಮಾನಿಗಳ ನಡುವೆ ಕಚ್ಚಾಟಕ್ಕೂ ಕಾರಣವಾಗಿತ್ತು. ಸಿಕ್ಸರ್‌ಗಾಗಿ ಬ್ಯಾಟ್‌ ಬದಲುವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ನ ಕೊನೆಯ ಎಸೆತ ಆಡಲು ಬ್ಯಾಟ್‌ ಬದಲಿಸಿಕೊಂಡಿದ್ದ ಧೋನಿಯ ನಿಗೂಢ ಕ್ರಮದ ಬಗ್ಗೆಯೂ ಸೋಶಿಯಲ್‌ ಮೀಡಿಯಾಗಳಲ್ಲಿ ಚರ್ಚೆ ನಡೆದಿದೆ. ಒಶೇನ್‌ ಥಾಮಸ್‌ ಎಸೆದ ಕೊನೆಯ ಓವರ್‌ನಲ್ಲಿ ಒಂದು ಸಿಕ್ಸ್‌ ಹಾಗೂ ಒಂದು ಫೋರ್‌ ಹೊಡೆದಿದ್ದ ಧೋನಿ, ಕೊನೆಯ ಎಸೆತಕ್ಕೆ ಮೊದಲು ಬ್ಯಾಟ್‌ ಬದಲಿಸಿ ಮತ್ತೊಂದು ಸಿಕ್ಸ್‌ ಹೊಡೆದಿದ್ದರು. ಅದು 79 ಮೀಟರ್‌ ದೂರಕ್ಕೆ ಚಿಮ್ಮಿತ್ತು. ರೋಹಿತ್‌ ಅಸಮಾಧಾನತಮಗೆ ಔಟ್‌ ತೀರ್ಪು ನೀಡಿದ ಥರ್ಡ್‌ ಅಂಪೈರ್‌ ಮೈಕೆಲ್‌ ಗೌಫ್‌ ಬಗ್ಗೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಟ್ವಿಟರ್‌ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ. ರೋಹಿತ್‌ 18 ರನ್‌ ಪೇರಿಸಿದ್ದ ವೇಳೆ ಕೆಮರ್‌ ರೋಚ್‌ ಎಸೆದ ಓವರ್‌ನಲ್ಲಿ ಚೆಂಡು ಪ್ಯಾಡ್‌ ಸವರಿಕೊಂಡು ವಿಕೆಟ್‌ಕೀಪರ್‌ ಶಾಯ್‌ ಹೋಪ್‌ ಕೈ ಸೇರಿತ್ತು. ಫೀಲ್ಡ್‌ ಅಂಪೈರ್‌ ರಿಚರ್ಡ್‌ ಇಲ್ಲಿಂಗ್‌ವರ್ಥ್‌ 'ನಾಟೌಟ್‌' ನೀಡಿದ ಕಾರಣ ವಿಂಡೀಸ್‌ ರಿವ್ಯೂ ಕೇಳಿತ್ತು. ಆದರೆ, ಥರ್ಡ್‌ ಅಂಪೈರ್‌ 'ಔಟ್‌' ಎಂದು ಘೋಷಿಸಿದ್ದರು. ಬ್ರಾತ್‌ವೇಟ್‌ಗೆ ದಂಡಅಂಪೈರ್‌ ತೀರ್ಪಿನ ವಿರುದ್ಧ ಮುನಿಸು ವ್ಯಕ್ತಪಡಿಸಿ ಐಸಿಸಿ ನಿಯಮ ಉಲ್ಲಂಘಿಸಿರುವ ವಿಂಡೀಸ್‌ ಆಲ್‌ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್‌ಗೆ ಮ್ಯಾಚ್‌ ರೆಫರಿ ಕ್ರಿಸ್‌ ಬ್ರಾಡ್‌ ಪಂದ್ಯ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಿದ್ದಾರೆ. ಜತೆಗೆ ಎರಡು ಡಿಮೆರಿಟ್‌ ಅಂಕಗಳ ಶಿಕ್ಷೆಗೂ ವಿಂಡೀಸ್‌ ಆಲ್‌ರೌಂಡರ್‌ ಗುರಿಯಾಗಿದ್ದಾರೆ. ತಮ್ಮ ಓವರ್‌ನಲ್ಲಿ (ಇನಿಂಗ್ಸ್‌ನ 42ನೇ ಓವರ್‌) ಅಂಪೈರ್‌ 'ವೈಡ್‌' ತೀರ್ಪು ನೀಡಿದ್ದರಿಂದ ಬ್ರಾತ್‌ವೇಟ್‌ ಮುನಿಸಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Xg54aa

ರಿಷಬ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿ: ಶ್ರೀಕಾಂತ್

ಲಂಡನ್: ಹಲವು ಅಚ್ಚರಿಗಳಿಗೆ ಕಾರಣವಾಗಿರುವ ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ ಭಾರತ ದಿಗ್ವಿಜಯ ಸಾಧಿಸುವತ್ತ ಸಾಗಿದೆ. ಎಲ್ಲರ ಕಣ್ಣು ಭಾನುವಾರದ ಭಾರತ-ಇಂಗ್ಲೆಂಡ್ ನಡುವಣ ಪಂದ್ಯದತ್ತ ನೆಟ್ಟಿದೆ. ಈ ಬಾರಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಬೇಕು ಎಂದು ದೇಶದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಶಿಖರ್ ಧವನ್ ಗಾಯಗೊಂಡಿರುವುದು ಭಾರತ ತಂಡಕ್ಕೆ ಸಮಸ್ಯೆಯಾಗಿದೆ. ಮತ್ತೊಂದೆಡೆ ವಿಜಯ್ ಶಂಕರ್ ಆಯ್ಕೆಗೆ ಎಲ್ಲೆಡೆ ಟೀಕೆ ಕೇಳಿಬಂದಿದೆ. ಹೀಗಾಗಿ ಶ್ರೀಕಾಂತ್ ಪ್ರಕಾರ, ರಿಷಬ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವುದು ಹೆಚ್ಚು ಸೂಕ್ತ. ಇಂಗ್ಲೆಂಡ್ ವಿರುದ್ಧದ ಕಳೆದ ವರ್ಷದ ಪ್ರವಾಸದ ಸಂದರ್ಭದಲ್ಲೂ ರಿಷಬ್ ಸರ್ವಾಂಗೀಣ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರ ಬದಲು ವಿಜಯ್ ಶಂಕರ್, ಕೇದಾರ್ ಜಾಧವ್ ಆಯ್ಕೆ ಸರಿಯಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31Sumto

ಶ್ರೀಲಂಕಾ ಎದುರು ಭಾರತ ಸೋಲಬಹುದು: ಬಸಿತ್‌ ಅಲಿ

ಕರಾಚಿ: ತಂಡವನ್ನು ಸೆಮಿಫೈನಲ್ಸ್‌ ಸ್ಪರ್ಧೆಯಿಂದ ಹೊರಗಟ್ಟಲು, ಭಾರತ ತಂಡ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಉದ್ದೇಶಪೂರ್ವಕವಾಗಿ ಸೋಲಬಹುದು ಎಂದು ಪಾಕ್‌ ತಂಡದ ಮಾಜಿ ಸದಸ್ಯ ಬಸಿತ್‌ ಅಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅಫಘಾನಿಸ್ತಾನ ವಿರುದ್ಧವೂ ಭಾರತ ಉದ್ದೇಶಪೂರ್ವಕವಾಗಿ ಕಳಪೆಯಾಗಿ ಆಡಿತ್ತು ಎಂದು ಬಸಿತ್‌ ಅಲಿ ಹೇಳಿದ್ದಾರೆ. ಅವರು 1993 ಮತ್ತು 1996ರ ನಡುವೆ 19 ಟೆಸ್ಟ್‌ ಹಾಗೂ 50 ಏಕದಿನ ಪಂದ್ಯಗಳಲ್ಲಿ ಪಾಕ್‌ ತಂಡವನ್ನು ಪ್ರತಿನಿಧಿಸಿದ್ದರು. ಪಾಕಿಸ್ತಾನವನ್ನು ಹೊರಗಿಡಲು ಭಾರತ ನಿಜವಾಗಿಯೂ ತನ್ನ ಪಂದ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಸೋಲುತ್ತದೆಂದು ನಿಮಗೆ ಅನ್ನಿಸುತ್ತದೆಯೇ ಎಂದು ಮತ್ತೊಮ್ಮೆ ಕೇಳಿದ್ದಕ್ಕೆ, ''ಅವರು (ಟೀಮ್‌ ಇಂಡಿಯಾ) ಯಾರಿಗೂ ಅರ್ಥವಾಗದ ರೀತಿಯಲ್ಲಿ ಆಡುತ್ತಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಏನಾಯಿತು ಎಂಬುದು ನಿಮಗೆಲ್ಲ ತಿಳಿದೇ ಇದೆ,'' ಎಂದು ಅಲಿ ಉತ್ತರಿಸಿದ್ದಾರೆ. ನ್ಯೂಜಿಲೆಂಡ್‌ ಸಹ ಹೀಗೆಯೇ ಸೋತಿತ್ತು!ತವರಿನಲ್ಲಿ ಸೆಮಿಫೈನಲ್‌ ಪಂದ್ಯ ಆಡುವುದಕ್ಕಾಗಿ 1992ರ ವಿಶ್ವಕಪ್‌ನ ಲೀಗ್‌ ಹಂತದಲ್ಲಿ ನ್ಯೂಜಿಲೆಂಡ್‌ ತಂಡ ಪಾಕ್‌ ವಿರುದ್ಧ ಉದ್ದೇಶಪೂರ್ವಕವಾಗಿ ಸೋತಿತ್ತು. ಇಮ್ರಾನ್‌ ಭಾಯಿ(ಅಂದಿನ ಪಾಕ್‌ ತಂಡದ ನಾಯಕ, ಹಾಲಿ ಪಾಕ್‌ ಪ್ರಧಾನ ಮಂತ್ರಿ)ಯನ್ನು ಬೇಕಾದರೆ ಕೇಳಿ ನೋಡಿ ಎಂದು ಅಲಿ ಹೇಳಿದ್ದಾರೆ. ಆ ಆವೃತ್ತಿಯಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಪಾಕ್‌ ತಂಡ ನ್ಯೂಜಿಲೆಂಡ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತ್ತು. ಅದಾದ ಬಳಿಕ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YonTV8

ಆಸ್ಪ್ರೇಲಿಯಾ vs ನ್ಯೂಜಿಲೆಂಡ್‌: ಸಮಬಲರ ಸೆಣಸಾಟ

ಲಾರ್ಡ್ಸ್‌ನಲ್ಲಿ ಸಂಜೆ 6ಕ್ಕೆ ಆರಂಭವಾಗಲಿರುವ ಶನಿವಾರದ ಎರಡನೇ ಪಂದ್ಯದಲ್ಲಿ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಸೆಣಸಾಡಲಿವೆ. ಎರಡೂ ಬಲಾಢ್ಯ ತಂಡಗಳೇ. ಆಸ್ಪ್ರೇಲಿಯಾ 12 ಅಂಕಗಳೊಂದಿಗೆ ಈಗಾಗಲೇ ಸೆಮಿಫೈನಲ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ನ್ಯೂಜಿಲೆಂಡ್‌ 7 ಪಂದ್ಯಗಳಲ್ಲಿ 5ನ್ನು ಗೆದ್ದು ಉಪಾಂತ್ಯಕ್ಕೆ ಸಮೀಪವಿದೆ. ಇಂದಿನ ಪಂದ್ಯ ಗೆದ್ದರೆ ನಾಯಕ ಕೇನ್‌ ವಿಲಿಯಮ್ಸನ್‌ಗೆ ಚಿಂತೆ ಕಡಿಮೆಯಾಗಲಿದೆ. ನಾಯಕ ಆ್ಯರೋನ್‌ ಫಿಂಚ್‌ ಹಾಗೂ ಡೇವಿಡ್‌ ವಾರ್ನರ್‌ ಅವರ ಅಮೋಘ ಪ್ರದರ್ಶನದಿಂದಾಗಿ ಆಸೀಸ್‌ ತಂಡ ಸಾಕಷ್ಟು ಬಲಿಷ್ಠವಾಗಿದೆ. ಬೌಲಿಂಗ್‌ ಶಕ್ತಿಯೂ ವೃದ್ಧಿಸುತ್ತಿದೆ. ಇದಕ್ಕೆ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬೆಹ್ರೆನ್‌ಡಾರ್ಫ್‌ ಅವರ 5 ವಿಕೆಟ್‌ ಸಾಧನೆಯೇ ಸಾಕ್ಷಿ. ಪಾಕಿಸ್ತಾನ ವಿರುದ್ಧದ ಸೋಲಿನ ನಡುವೆಯೂ ನ್ಯೂಜಿಲೆಂಡ್‌ ಆಟಗಾರರ ಆತ್ಮವಿಶ್ವಾಸ ಕುಗ್ಗಿಲ್ಲ. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಹೊನಲು-ಬೆಳಕಿನಲ್ಲಿ ಜಿದ್ದಾಜಿದ್ದಿನ ಸೆಣಸಾಟ ನಡೆಯುವ ನಿರೀಕ್ಷೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31ZPgqF

ರೈಲ್ವೆ ನೇಮಕಾತಿ 2019: 4,500 ಮಹಿಳಾ ಕಾನ್ಸ್‌ಟೇಬಲ್‌ ಆಯ್ಕೆ ನಿರ್ಧಾರ

ಹೊಸದಿಲ್ಲಿ: ರೈಲ್ವೆ ರಕ್ಷಣಾ ಪಡೆ ()ನಲ್ಲಿ ಖಾತಿಯಿರುವ ಸುಮಾರು 9000 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಮಹಿಳೆಯರಿಗೆ ಶೇ.50ರಷ್ಟು ಕಲ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಆರ್‌ಪಿಎಫ್‌ನಲ್ಲಿ 4,500 ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ನೇಮಕ ಮಾಡುವ ವಿಚಾರವಾಗಿ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ರಾಜ್ಯಸಭೆಯಲ್ಲಿ ಶುಕ್ರವಾರ ಹೇಳಿದ್ದಾರೆ. ಪ್ರಸ್ತುತ ಆರ್‌ಪಿಎಫ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ಗಳ ಸಂಖ್ಯೆ ಶೇ.2.25 ಇದೆ. ಸಂಪೂರ್ಣ ರೌಲ್ವೆ ವಿಭಾಗದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ. ಇದನ್ನು ಪ್ರಮುಖವಾಗಿ ಇಟ್ಟುಕೊಂಡು ರೈಲ್ವೆ ಸಿಬ್ಬಂದಿ ನೇಮಕಾತಿ ವಿಭಾಗಕ್ಕೆ ಪ್ರಸ್ತುತ ಆರ್‌ಪಿಎಫ್‌ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ಹುದ್ದೆಗಳನ್ನು ಒದಗಿಸುಲು ಆದೇಶಿಸಲಾಗಿದೆ ಎಂದು ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. 2018ರ ರೈಲ್ವೆ ಸಿಬ್ಬಂದಿ ನೇಮಕಾತಿಯಲ್ಲಿ 8,619 ಕಾನ್ಸ್‌ಟೇಬಲ್‌ ಹುದ್ದೆಗಳ ಪೈಕಿ 4216 ಹುದ್ದೆಗಳನ್ನು ಮಹಿಳೆಯರಿಗೆ ನೀಡಲಾಗಿದೆ. 1120 ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳ ಪೈಕಿ 201 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಾಗಿ ಇಡಲಾಗಿತ್ತು ಎಂದು ಗೋಯಲ್‌ ಲಿಖಿತ ರೂಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.


from India & World News in Kannada | VK Polls https://ift.tt/2RMY7Ya

ಸರ್ಫರಾಜ್‌ ಅಹಮದ್‌ ಪಡೆಗೆ ದುರ್ಬಲ ಆಫ್ಘನ್‌ ಎದುರಾಳಿ

ಲಂಡನ್‌: ತಂಡದ ನಾಯಕ ಸರ್ಫರಾಜ್‌ ಅಹಮದ್‌ಗೆ ಸೆಮಿಫೈನಲ್ಸ್‌ಗೆ ದಾಂಗುಡಿಯಿಟ್ಟು ವಿಶ್ವಕಪ್‌ನಲ್ಲಿ ದಂಡಯಾತ್ರೆ ಮುಂದುವರಿಸುವ ಬಯಕೆ. ಆದರೆ, ಈ ಪಯಣದಲ್ಲಿ ಸಣ್ಣ ತಪ್ಪಿಗೂ ದೊಡ್ಡ ಬೆಲೆ ಕಟ್ಟಬೇಕಾಗುತ್ತದೆ. ಪಾಕ್‌ ತಂಡ ಇನ್ನು ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಮಾತ್ರ ಆಡಲು ಬಾಕಿ. ಸರ್ಫರಾಜ್‌ ಬಳಗ ತನ್ನ ಸಾಮರ್ಥ್ಯ‌ಕ್ಕೆ ತಕ್ಕಂತೆ ಆಡಿದಲ್ಲಿ ಈ ತಂಡಗಳನ್ನು ಮಣಿಸುವುದು ಕಷ್ಟವೇನಲ್ಲ. ಆದರೆ, ಮುಗಿಲೆತ್ತರಕ್ಕೇರಿ, ಧುತ್ತನೆ ಪಾತಾಳ ಸೇರುವ ಪಾಕ್‌ನ ಆಟದ ಬಗ್ಗೆ ಗೊತ್ತಿರುವ ಎಲ್ಲರ ಮನದಲ್ಲೂ ಸಣ್ಣ ಅನುಮಾನವೊಂದು ಇದ್ದೇ ಇರುತ್ತದೆ. ಈ ಎಲ್ಲ ಕಾರಣಗಳಿಂದ ಇಂದು ನಡೆಯುವ ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ಪಂದ್ಯಕ್ಕೆ ಪ್ರಾಮುಖ್ಯತೆ ಬಂದಿದೆ. ಆಡಿದ ಏಳೂ ಪಂದ್ಯಗಳಲ್ಲಿ ಸೋತಿರುವ ಆಫ್ಘನ್‌ ತಂಡಕ್ಕೆ ಇದು ಕೇವಲ ಒಂದು ಲೀಗ್‌ ಪಂದ್ಯ. ಆದರೆ, ಪಾಕಿಸ್ತಾನಕ್ಕಿದು 'ಮಾಡು ಇಲ್ಲವೇ ಮಡಿ' ಹೋರಾಟದ ಪ್ರಬಲ ಅಧ್ಯಾಯ. ಭಾರತದ ವಿರುದ್ಧ ಸೋಲಿನ ಬಳಿಕ ಪಾಕ್‌ ಆಟಗಾರರು ಚೇತರಿಸಿಕೊಂಡಿದ್ದಾರೆ. ಈ ಹಿಂದಿನ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬಾಬರ್‌ ಅಜಂ (101) ಹಾಗೂ ಶಾಹಿನ್‌ ಅಫ್ರಿದಿ (28/3) ನೀಡಿದ ಪ್ರದರ್ಶನ, ಅದರಲ್ಲೂ ಹ್ಯಾರಿಸ್‌ ಸೊಹೈಲ್‌ ಕಳೆದೆರಡು ಪಂದ್ಯಗಳಲ್ಲಿ ತೋರಿದ ದಿಟ್ಟತನ ತಂಡದ ಪಾಲಿಗೆ ಖಂಡಿತಾ ವರವಾಗಿದೆ. ಇದು ಪುನರಾವರ್ತನೆಯಾದರೆ ಪಾಕ್‌ ಗೆಲುವು ಸಲೀಸು. ಏತನ್ಮಧ್ಯೆ, ಆಲ್‌ರೌಂಡ್‌ ಪ್ರದರ್ಶನದ ನಡುವೆಯೂ ಅಫಘಾನಿಸ್ತಾನದ ಆಟಗಾರರಿಗೆ ಗೆಲುವಿನ ರುಚಿ ಕಾಣಲು ಸಾಧ್ಯವಾಗುತ್ತಿಲ್ಲ. ಚೆನ್ನಾಗಿ ಆಡಿದರೂ, ಅನುಭವದ ಕೊರತೆಯಿಂದ ಪಂದ್ಯಗಳನ್ನು ಕೈಚೆಲ್ಲುತ್ತಲೇ ಹೋಗುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2IYkya4

'ಎಐಸಿಸಿ' ನಿರ್ಧಾರಗಳನ್ನು ಬದಲಿಸಿದ 'ಕಾಂಗ್ರೆಸ್ ಅಧ್ಯಕ್ಷರು': ಛತ್ತೀಸ್‌ಗಢ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ

ಹೊಸದಿಲ್ಲಿ: ಪಕ್ಷದ ಛತ್ತೀಸ್‌ಗಢ ಘಟಕದ ನೂತನ ಅಧ್ಯಕ್ಷರಾಗಿ ಮೋಹನ್ ಮರ್ಕಮ್ ಅವರನ್ನು ನೇಮಿಸುವ ಮೂಲಕ ಎಐಸಿಸಿಯ ನಿರ್ಧಾರಗಳನ್ನು ಕಾಂಗ್ರೆಸ್ ಬದಲಿಸಿದೆ. ಈ ನಿರ್ಧಾರವನ್ನು 'ಕಾಂಗ್ರೆಸ್ ಅಧ್ಯಕ್ಷರು' ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಲೋಕಸಭೆ ಚುನಾವಣೆಯ ಸೋಲಿನ ಆಘಾತದಿಂದ ಕಾಂಗ್ರೆಸ್ ಇನ್ನೂ ಹೈಕಮಾಂಡ್ ಇನ್ನೂ ಚೇತರಿಸಿಕೊಂಡಿಲ್ಲ. ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಅವರು ರಾಜೀನಾಮೆ ನೀಡಿದ್ದರೂ ಪಕ್ಷ ಅದನ್ನು ಅಂಗೀಕರಿಸಿಲ್ಲ. ಹಾಗಿದ್ದರೂ ಅವರು ತಮ್ಮ ಪಟ್ಟು ಸಡಿಲಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಹೆಸರಿಲ್ಲದೆ 'ಕಾಂಗ್ರೆಸ್ ಅಧ್ಯಕ್ಷರು' ಎಂದು ಮಾತ್ರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಪಕ್ಷದ ನಾಯಕತ್ವ ಮುಂದುವರಿಸಲು ರಾಹುಲ್ ಗಾಂಧಿ ಸುತರಾಂ ಒಪ್ಪುತ್ತಿಲ್ಲ. ಬೇರೆಯವರನ್ನು ನೇಮಿಸಲು ಎಐಸಿಸಿ ಸಿದ್ಧವಿಲ್ಲ. ಹೀಗಾಗಿ ಪಕ್ಷದಲ್ಲಿ ಒಂದು ರೀತಿಯ ನಿರ್ವಾತ ಸೃಷ್ಟಿಯಾದಂತೆ ಕಾಣುತ್ತಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ಇನ್ನೊಂದೆರಡು ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹರಡಿವೆ. ತಾವು ಈಗ ಪಕ್ಷದ ಅಧ್ಯಕ್ಷರಾಗಿ ಇಲ್ಲದಿರುವುದರಿಂದ ರಾಜ್ಯಾಧ್ಯಕ್ಷರ ನೇಮಕದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನಿನ್ನೆಯಷ್ಟೇ ರಾಹುಲ್ ಗಾಂಧಿ ಹರ್ಯಾಣದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಹೇಳಿದ್ದರು. ಹೀಗಾಗಿ ಛತ್ತೀಸ್‌ಗಢ ಘಟಕದ ನೂತನ ಅಧ್ಯಕ್ಷರನ್ನು ನೇಮಿಸಿದವರು ಯಾರು ಎಂಬುದು ನಿಗೂಢವಾಗಿದೆ. ರಾಹುಲ್ ಗಾಂಧಿ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಪಟ್ಟು ಹಿಡಿದಿರುವುದರಿಂದ ಬದಲಿ ನಾಯಕರ ಆಯ್ಕೆಗೆ ಕಸರತ್ತುಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ. ಆದರೆ ಪಕ್ಷದ ಚುಕ್ಕಾಣಿ ಹಿಡಿಯಲು ಯಾರೂ ಸಿದ್ಧರಿಲ್ಲ ಎಂಬುದು ಹೆಸರು ಹೇಳಲಿಚ್ಚಿಸದ ಆಂತರಿಕ ಮೂಲಗಳಿಂದ ಬಹಿರಂಗವಾಗಿದೆ. ಏನಿದ್ದರೂ ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಬಹುಸಂಖ್ಯಾತ ಸಮುದಾಯದವರೇ ಆಗಿರುತ್ತಾರೆ. ದೇಶದಲ್ಲಿ ಬಿಜೆಪಿ ಸೃಷ್ಟಿಸಿದ ನೂತನ 'ರಾಜಕೀಯ ವಾಸ್ತವಗಳನ್ನು' ಆಧರಿಸಿ ಕಾಂಗ್ರೆಸ್ ಈ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೆ ಪಕ್ಷದ ಚುಕ್ಕಾಣಿ ಹಿಡಿಯುವವರು ಸಾವೃಜನಿಕ ಮಾನ್ಯತೆ ಹೊಂದಿದವರು ಮತ್ತು ರಾಷ್ಟ್ರೀಯತೆ ಬಗ್ಗೆ ಹೆಮ್ಮೆಯುಳ್ಳವರೇ ಆಗಿರುತ್ತಾರೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮುಕುಲ್ ವಾಸ್ನಿಕ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ವಾಸ್ನಿಕ್ ಅವರು ದೀರ್ಘಕಾಲದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು. ಅಲ್ಲದೆ ತಮಿಳುನಾಡಿ ಮತ್ತು ಕೇರಳ ಘಟಕದ ಉಸ್ತುವಾರಿ ಹೊಂದಿದವರು. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಖರ್ಗೆ ಅವರಿಗೆ ಹಿರಿತನವಿದ್ದು, ಐದು ವರ್ಷಗಳ ಕಾಲ ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ರಾಹುಲ್ ಗಾಂಧಿ ಅವರ 'ಹೊಣೆಗಾರಿಕೆ' ಮಂತ್ರದಿಂದಾಗಿ ಪಕ್ಷ ಆಂತರಿಕ ಕ್ಷೋಭೆಗೊಳಗಾಗಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರಧಾನ ಕಾರ್ಯದರ್ಶಿಗಳು ಕೆಲಸ ಮಾಡುತ್ತಿದ್ದು, ಪಕ್ಷ ಸಹಜಸ್ಥಿತಿಯಲ್ಲಿದೆ ಎಂಬ ಭಾವನೆ ಮೂಡಿಸಲು ಯತ್ನಿಸುತ್ತಿದ್ದಾರೆ. ಅದೂ ಇಲ್ಲದಿದ್ದರೆ ಪಕ್ಷದಲ್ಲಿ ತೀವ್ರ ಅರಾಜಕತೆ ಉಂಟಾಗುತ್ತಿತ್ತು ಎಂದು ನಾಯಕರೊಬ್ಬರು ತಿಳಿಸಿದರು.


from India & World News in Kannada | VK Polls https://ift.tt/2ROo89u

ಇಂಗ್ಲೆಂಡ್‌ ವಿಸಾಗೆ 21,500 ಭಾರತೀಯ ವಿದ್ಯಾರ್ಥಿಗಳಿಂದ ಅರ್ಜಿ

ಹೈದರಾಬಾದ್‌: ಇಂಗ್ಲೆಂಡ್‌ನ ವಿದ್ಯಾರ್ಥಿ ವಿಸಾಗೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ಅತ್ಯಂತ ವೇಗವಾಗಿ ವೃದ್ಧಿಸುತ್ತಿದೆ. ಚೀನಾದ ನಂತರದ ಸ್ಥಾನವನ್ನು ಭಾರತ ಪಡೆದಿದೆ. ಅಮೆರಿಕ ಮೂರನೇ ಸ್ಥಾನದಲ್ಲಿದೆಯ ಏಪ್ರಿಲ್‌ 2018 ಇಂದ ಮಾರ್ಚ್‌ 2019 ರ ನಡುವಿನ ಅವಧಿಯಲ್ಲಿ ವಿದ್ಯಾರ್ಥಿ ವಿಸಾಗೆ ಪ್ರಯತ್ನಿಸಿದವರ ಸಂಖ್ಯೆಯ ವಿವರವನ್ನು ಇಂಗ್ಲೆಂಡ್‌ ಗೃಹ ಕಚೇರಿಯ ಮತ್ತು ವಲಿಸಿಗರ ನಿರ್ವಹಣಾ ವಿಭಾಗದ ಪ್ರಾದೇಶಿಕ ಸಂಪರ್ಕ ಅಧಿಕಾರಿ ಹ್ಯಾಪಿ ಬೂಟಿ ನೀಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ವೀಸಾ ಸಂಖ್ಯೆ 21,500 ಇದೆ. ಚೀನಾದ ವಿದ್ಯಾರ್ಥಿ ವೀಸಾ ಸಂಖ್ಯೆ ಸುಮಾರು 1,00,000 ಇದೆ. ಇನ್ನು ಅಮೆರಿಕದ ಟೈರ್‌-4 ವೀಸಾ ವಿಭಾಗದಲ್ಲಿ 15,000 ವಿದ್ಯಾರ್ಥಿಗಳ ಸಂಖ್ಯೆಯಿದೆ ಎಂದು ಹ್ಯಾರಿ ಬೂಟಿ ತಿಳಿಸಿದ್ದಾರೆ. ಬ್ರೆಕ್ಸಿಟ್‌ನಿಂದ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಪರಿಣಾಮ ಸಂಭವಿಸಿಲ್ಲ. ಇಂಗ್ಲೆಂಡ್‌ಗೆ ಆಗಮಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿ ವೀಸಾ ಅರ್ಜಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಹ್ಯಾರಿ ವಿವರಿಸಿದ್ದಾರೆ. ಭಾರತದಲ್ಲಿ ದಿಲ್ಲಿ ಮತ್ತು ಮುಂಬಯಿನಿಂದ ಅತಿಹೆಚ್ಚು ಅರ್ಜಿಗಳು ಬರುತ್ತವೆ. ತೆಲಂಗಾಣದಿಂದಲೂ ಭಾರಿ ಬೇಡಿಕೆ ವ್ಯಕ್ತವಾಗಿದೆ ಎಂದು ಸಂಕ್ಷಿಪ್ತ ಅಂಕಿಅಂಶಗಳನ್ನು ನೀಡದೆ ಮೇಲ್ಮುಖವಾಗಿ ಹ್ಯಾರಿ ವಿವರಿಸಿದ್ದಾರೆ.


from India & World News in Kannada | VK Polls https://ift.tt/2KOdBdJ

ಸಾವನ್ನಪ್ಪಿದ ಭಿಕ್ಷುಕನ ಚೀಲದಲ್ಲಿತ್ತು ಬರೋಬ್ಬರಿ 3 ಲಕ್ಷ

ಅನಂತಪುರಂ: ಆಂಧ್ರ ಪ್ರದೇಶದ ಗುಂಟ್ಕಲ್‌ನಲ್ಲಿ ಇತ್ತೀಚಿಗೆ ಭಿಕ್ಷುಕನೊಬ್ಬ ಸಾವನ್ನಪ್ಪಿದ. ಅವನ ಚೀಲವನ್ನು ಪರಿಶೀಲಿಸಿದ ಪೊಲೀಸರು ಒಂದು ಕ್ಷಣ ದಿಗ್ಮೂಢರಾಗಿಬಿಟ್ಟರು. ಕಾರಣ ಕಾಯಿಲೆಯಿಂದ ನರಳಿ ನರಳಿ ಸಾವನ್ನಪ್ಪಿದ ಆತನ ಚೀಲದಲ್ಲಿ ಬರೋಬ್ಬರಿ 3 ಲಕ್ಷ ರೂ ಹಣವಿತ್ತು. ಮೃತ ಬಶೀರ್ ಸಾಹೇಬ್ 70ನೇ ವಯಸ್ಸಿಗೆ ಸಾವನ್ನಪ್ಪಿದ್ದು ಆತ ಚಿತ್ತೂರುಜಿಲ್ಲೆಯ ಮದನಪಲ್ಲಿ ಮೂಲದವನಾಗಿದ್ದ, ಕಳೆದ ಹಲವು ವರ್ಷಗಳಿಂದ ಆತ ಮಸ್ತಾನ್ ವಾಲಿ ದರ್ಗಾ ಬಳಿ ಭಿಕ್ಷೆ ಎತ್ತುತ್ತಿದ್ದ. ಕಳೆದ ಕೆಲ ದಿನಗಳ ಗಿಂದೆ ಆತ ಕಾಯಿಲೆಯಿಂದ ಬಳಲುತ್ತಿದ್ದು ಗುರುವಾರ ರಾತ್ರಿ ಸಾವನ್ನಪ್ಪಿದ್ದ, ಈ ಕುರಿತು ಮಾಹಿತಿ ಪಡೆದು ದರ್ಗಾ ಬಳಿ ಆಗಮಿಸಿದ ಗುಂಟ್ಕಲ್ ನಗರ ಪೊಲೀಸರು ಸಾಹೇಬ್ ಶರೀರವನ್ನು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಗುರುತಿನ ಚೀಟಿಗಾಗಿ ಆತನ ಚೀಲವನ್ನು ತಡಕಾಡಿದಾಗ ಆತನ ಚೀಲದಲ್ಲಿ ಭಾರಿ ಮೊತ್ತದ ಹಣವನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ನಾಣ್ಯ ಮತ್ತು ನೋಟುಗಳನ್ನು ಲೆಕ್ಕ ಹಾಕಿದಾಗ 3,22,670 ಲಕ್ಷ ರೂಪಾಯಿಯಾಗಿದೆ. ಅಷ್ಟೆಲ್ಲ ಹಣವಿದ್ದರು ಕೂಡ ಸಾಹೇಬ್ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಲಿಲ್ಲ . ಹೀಗಾಗಿ ನರಳಿ, ನರಳಿ ಸಾವನ್ನಪ್ಪಿದ ಎಂದು ಸ್ಥಳೀಯರು ತಿಳಿಸಿದ್ದಾರೆ.


from India & World News in Kannada | VK Polls https://ift.tt/2X9oU1N

ಈ ವರ್ಷದ ಜೂನ್‌ನಲ್ಲಿ 100 ವರ್ಷಗಳಲ್ಲೇ ಅತಿ ಕಡಿಮೆ ಮಳೆ

ಹೊಸದಿಲ್ಲಿ: ಕಳೆದ 100 ವರ್ಷಗಳಲ್ಲೇ ಜೂನ್‌ ತಿಂಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿರುವ ವರ್ಷ ಇದಾಗಿದೆ ಎಂದು ಇಲಾಖೆ ಅಂಕಿ ಅಂಶಗಳು ಹೇಳುತ್ತವೆ. ದೇಶಾದ್ಯಂತ ಜೂನ್‌ನಲ್ಲಿ ಬಿದ್ದಿರುವ ಮಳೆ ಸಾಮಾನ್ಯಕ್ಕಿಂತ ಶೇ 35ರಷ್ಟು ಕಡಿಮೆಯಿದೆ. ಈ ತಿಂಗಳಲ್ಲಿ ಇನ್ನೆರಡೇ ದಿನಗಳು ಉಳಿದಿದ್ದು ಈ ಕೊರತೆ ತುಂಬುವಂತೆ ಮಳೆಯಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ದೇಶಾದ್ಯಂತ ಜೂನ್‌ ತಿಂಗಳಲ್ಲಿ ಇದುವರೆಗೆ 87.9 ಮಿಲಿಮೀಟರ್ ಮಳೆಯಾಗಿದೆ. ಸಾಮಾನ್ಯ ಮಳೆ ಪ್ರಮಾಣವೆಂದರೆ 151.1 ಮಿಲಿಮೀಟರ್ ಮಳೆ ಬೀಳಬೇಕಿತ್ತು. ಇನ್ನು ಉಳಿದಿರುವ ಎರಡು ದಿನಗಳಲ್ಲಿ ಬೀಳುವ ಮಳೆಯನ್ನೂ ಗಣನೆಗೆ ತೆಗೆದುಕೊಂಡರೆ ಅಂದಾಜು 106 ರಿಂದ 112 ಎಂಎಂ ಮಳೆ ನಿರೀಕ್ಷಿಸಬಹುದು. 1920ರ ಬಳಿಕ ಜೂನ್ ತಿಂಗಳಲ್ಲಿ ಅತಿ ಕಡಿಮೆ ಮಳೆಯಾದ ವರ್ಷಗಳೆಂದರೆ 2009 (85.7 ಎಂಎಂ), 2014 (95.4 ಎಂಎಂ), 1926 (98.7 ಎಂಎಂ) ಮತ್ತು 1923 (102 ಎಂಎಂ). 2009 ಮತ್ತು 2014ರಲ್ಲಿ ಎಲ್‌ನಿನೋ ಕಾರಣಕ್ಕೆ ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಾಗಿತ್ತು. ಈ ವರ್ಷದಂತೆ ಆಗಲೂ ಪೂರ್ವ ಮತ್ತು ಮಧ್ಯ ಪೆಸಿಫಿಕ್ ಸಮುದ್ರದಲ್ಲಿ ತಾಪಮಾನ ಹೆಚ್ಚಿದ್ದರಿಂದ ಎಲ್‌ನಿನೋ ಉಂಟಾಗಿತ್ತು. ಇದರಿಂದಾಗಿ ಭಾರತದ ಮುಂಗಾರು ಮಾರುತಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿತ್ತು. ಈ ವರ್ಷವೂ ಎಲ್‌ನಿನೋ ಹಾವಳಿಯಿಂದಾಗಿ ಮುಂಗಾರು ವಿಳಂಬವಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 'ಜೂನ್ 30ರೊಳಗೆ ಮುಂಗಾರು ಮತ್ತೆ ಪ್ರಬಲವಾಗಬಹುದು ಎಂದು ನಿರೀಕ್ಷಿಲಾಗಿತ್ತು. ಗುಜರಾತ್ ಮತ್ತು ಮಧ್ಯಪ್ರದೇಶದ ಇತರ ಭಾಗಗಳು ಸೇರಿದಂತೆ ಮಧ್ಯ ಭಾರತ ಮತ್ತು ಈಶಾನ್ಯ ಭಾರತದ ಪ್ರದೇಶಗಳಿಗೆ ಮುಂಗಾರು ತಲುಪುವ ನಿರೀಕ್ಷೆಯಿದೆ' ಎಂದು ಹವಾಮಾನ ಇಲಾಖೆ ಅಧಿಕಾರಿ ಕೆ. ಸತಿ ದೇವಿ ತಿಳಿಸಿದರು. ಜುಲೈನಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಜುಲೈ ಮಳೆ ಅತ್ಯಂತ ಅಗತ್ಯವಾಗಿದೆ.


from India & World News in Kannada | VK Polls https://ift.tt/2XDvC4r

ಆಘಾತಕಾರಿ: ಮರಿಗೆ ಸಿಗರೇಟು ತುಂಡು ತಿನ್ನಿಸುತ್ತಿರುವ ತಾಯಿ ಹಕ್ಕಿ

ಮನುಷ್ಯನ ಸ್ವಾರ್ಥ ಸ್ವರ್ಗಕ್ಕಿಂತ ಮಿಗಿಲಾದ ಪ್ರಕೃತಿಯನ್ನು ನರಕವಾಗಿಸುತ್ತಿದೆ. ಮನುಷ್ಯನ ತಪ್ಪಿಗೆ ಪ್ರಕೃತಿ ಶಿಕ್ಷೆ ಕೊಟ್ಟೇ ಕೊಡುತ್ತದೆ. ಆದರೆ ಅದರ ಪರಿಣಾಮ ಮನುಷ್ಯನಿಗಿಂತ ಮೊದಲು ಮೂಕ ಪ್ರಾಣಿ-ಪಕ್ಷಿಗಳಿಗೆ ಆಗುತ್ತಿರುವುದೇ ವಿಪರ್ಯಾಸ. ಪ್ಲಾಸ್ಟಿಕ್, ಇ ತ್ಯಾಜ್ಯ ಸಮುದ್ರವನ್ನು ಕಲುಷಿತಗೊಳಿಸುತ್ತಿದೆ. ಚಿರತೆ, ಹುಲಿ, ಆನೆಗಳಂತಹ ಕಾಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿವೆ. ಲಕ್ಷಾಂತರ ಜೀವಿಗಳು ಕುರುಹೇ ಇಲ್ಲದಂತೆ ಅಳಿದು ಹೋಗಿವೆ. ಇದೆಲ್ಲ ಮನುಷ್ಯನ ಕರ್ಮ ಫಲ. ಪ್ಲಾಸ್ಟಿಕ್ ತ್ಯಾಜ್ಯ ಜಗತ್ತನ್ನು ಬಾಧಿಸುತ್ತಿರುವ ಬಹುದೊಡ್ಡ ಸಮಸ್ಯೆ. ಅದರ ಜತೆಗೆ ಇನ್ನೊಂದು ತ್ಯಾಜ್ಯ ವಸ್ತು ನಮ್ಮ ಸಮುದ್ರ ತೀರಗಳಲ್ಲಿ ರಾಶಿ ಬೀಳುತ್ತಿದೆ. ಇದು ಜಲಚರ ಮತ್ತು ಇತರ ಜೀವಿಗಳ ಪಾಲಿಗೆ ಬಹುದೊಡ್ಡ ಅಪಾಯವನ್ನು ಸೃಷ್ಟಿಸಿದೆ - ಅದೇ ಸಿಗರೇಟ್ ತುಂಡು. ನ್ಯಾಷನಲ್ ಆಡೊನಾನ್ ಸೊಸೈಟಿಯ ಸ್ವಯಂಸೇವಕ ಮತ್ತು ಛಾಯಾಗ್ರಾಹಕರಾಗಿರುವ ಕರೆನ್ ಮೇಸನ್ ಅವರು ಕ್ಲಿಕ್ಕಿಸಿರುವ ಚಿತ್ರವೊಂದು ನಾವು ವನ್ಯಜೀವಿಗಳ ಪಾಲಿಗೆ ಎಂತಹ ಅಪಾಯವನ್ನು ತಂದೊಡ್ಡಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಚಿತ್ರದಲ್ಲಿ ತಾಯಿ ಹಕ್ಕಿಯೊಂದು ಮರಿಗೆ ಆಹಾರವಾಗಿ ಸಿಗರೇಟ್ ತುಂಡನ್ನು ತಿನ್ನಿಸುತ್ತಿದೆ. ಅಂದರೆ ನೇರವಾಗಿ ವಿಷವನ್ನು ಉಣ್ಣಿಸುತ್ತಿದೆ. ಕಾರಣ ಅವುಗಳ ಪಾಲಿಗೆ ಆಹಾರವಿಲ್ಲ. ಬದಲಾಗಿ ಇರುವುದು ಈ ವಿಷಯ ತುಣುಕು. ಪ್ರತಿವರ್ಷ 5.5 ಟ್ರಿಲಿಯನ್ ಫಿಲ್ಟರ್ ಸಿಗರೇಟ್ ಅನ್ನು ಪರಿಸರದಲ್ಲಿ ಎಸೆಯಲಾಗುತ್ತದೆ ಎಂದು ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಭಿಯಾನದಿಂದ. ಪ್ಲಾಸ್ಟಿಕ್ ಸ್ಟ್ರಾಗಳಿಗಿಂತ, ಸಿಗರೇಟ್ ತುಂಡುಗಳು ನಮ್ಮ ಸಾಗರಗಳಿಗೆ ದೊಡ್ಡ ಅಪಾಯವಾಗಿದೆ ಎಂದು ವರದಿಯೊಂದು ಕಂಡುಹಿಡಿದಿದೆ.


from India & World News in Kannada | VK Polls https://ift.tt/2X5RP6N

ಕುಡುಕನನ್ನು ಕಟ್ಟಿಕೊಳ್ಳಲಾರೆ ಎಂದು ಹಸೆಮಣೆಯಿಂದ ಎದ್ದ ವಧು

ಭುವನೇಶ್ವರ: ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕುಡುಕನಿರಲಿ, ಕ್ರೂರಿಯಾಗಿರಲಿ ಪತಿಯೇ ಪರದೈವ ಎಂದು ಕಣ್ಣಿಗೊತ್ತಿಗೊಂಡು ಬದುಕುತ್ತಿದ್ದರು. ಮತ್ತೀಗ ಕಾಲ ಬದಲಾಗಿದೆ. ಮಹಿಳೆಯರಿಗೆ ತಮಗೆ ಸ್ವಂತ ಅಸ್ತಿತ್ವವಿದೆ ಎಂಬುದು ಅರ್ಥವಾಗಿದೆ. ಹೀಗಾಗಿ ಅನ್ಯಾಯವನ್ನೆದುರಿಸುವ, ತಮ್ಮ ಹಕ್ಕನ್ನು ಪಡೆಯುವ ಧೈರ್ಯ ತೋರುತ್ತಿದ್ದಾರೆ. ಇದು ಅಂತಹದ್ದೇ ಯುವತಿಯ ಕಥೆ. ದಿನವೂ ಕುಡಿದ ಮತ್ತಿನಲ್ಲಿಯೇ ಬಂದಿದ್ದ ವರನನ್ನು ವರಿಸಲು ಆಕೆ ನಿರಾಕರಿಸಿದ್ದಾಳೆ. ಒಡಿಶಾದ ಮಮತಾ ಭೋಯಿ ಗೋವರ್ಧನ್ ಬಡಮಾಲ್ ಗ್ರಾಮದ ನಿವಾಸಿಯಾಗಿದ್ದು, ಆದಿವಾಸಿ ಸಮುದಾಯಕ್ಕೆ ಸೇರಿದ್ದಾಳೆ. 20 ವರ್ಷದ ಮಮತಾಗೆ ಇತ್ತೀಚಿಗೆ ಮದುವೆ ನಿಶ್ಚಯವಾಗಿತ್ತು. ಸಾವಿರಾರು ಹೊಂಗನಸುಗಳನ್ನು ಕಟ್ಟಿಕೊಂಡು ಹಸೆಮಣೆ ಏರಿದ್ದ ಆಕೆ ವರ ಕುಡಿದು ತೂರಾಡುತ್ತ, ನಿಲ್ಲಲು ಸಹ ಶಕ್ತಿ ಇಲ್ಲದೆ ತಾಳಿ ಕಟ್ಟಲು ಬಂದಾಗ ಬೆಚ್ಚಿ ಬಿದ್ದಳು. ತಕ್ಷಣಕ್ಕೆ ಹಸೆಮಣೆಯಿಂದ ಎದ್ದು ನಿಂತು ನನಗೀ ಮದುವೆ ಬೇಡ ಎಂದು ಹೊರ ನಡೆದಳು. ಹೀಗಾಗಿ ವರನ ಕಡೆಯವರ ದಿಬ್ಬಣ ಅಲ್ಲಿಂದ ವಧುವಿಲ್ಲದೇ ಮರಳಬೇಕಾಯಿತು. ಮನೆಯ ಸದಸ್ಯರೆಲ್ಲರೂ ಸಹ ಮಗಳ ನಿರ್ಧಾರವನ್ನು ಸಮರ್ಥಿಸಿಕೊಂಡರು. ಮಮತಾಳ ಈ ದಿಟ್ಟ ನಡೆಗಾಗಿ ಜಿಲ್ಲಾಡಳಿತ ಅವಳನ್ನು ಸನ್ಮಾನಿಸಿದೆ.


from India & World News in Kannada | VK Polls https://ift.tt/2XdKrLK

ಪುಣೆ: ಭಾರೀ ಮಳೆಗೆ ಗುಡಿಸಲುಗಳ ಮೇಲೆ ಗೋಡೆ ಕುಸಿದು 15 ಸಾವು

ಪುಣೆ: ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಗೋಡೆಯೊಂದು ಕುಸಿದು ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. 60 ಅಡಿ ಉದ್ದದ ಗೋಡೆ ಅದರ ಪಕ್ಕ ನಿರ್ಮಿತವಾಗಿದ್ದ ತಗಡಿನ ಗುಡಿಸಲುಗಳ ಮೇಲೆ ಜರಿದು ಬಿದ್ದಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೊಂಡ್ವಾದ ತಾಲಾಬ್ ಮಸೀದಿ ಬಳಿ ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ನಗರದಲ್ಲಿ ಬಿದ್ದ ಸತತ ಮಳೆಯಿಂದಾಗಿ ಈ ಗೋಡೆ ಕುಸಿದಿದೆ ಎನ್ನಲಾಗಿದೆ. ಮೃತಪಟ್ಟ 15 ಮಂದಿಯಲ್ಲಿ 9 ಮಂದಿ ಪುರುಷರು, ನಾಲ್ವರು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ. ಎನ್‌ಡಿಆರ್‌ಎಫ್‌ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾರೀ ಮಳೆಯಿಂದ ಗೋಡೆ ಕುಸಿದು ದುರಂತ ಸಂಭವಿಸಿರುವುದನ್ನು ಪುಣೆ ಜಿಲ್ಲಾಧಿಕಾರಿ ನವಲ್ ಕಿಶೋರ್ ರಾಮ್ ಘಟನೆಯನ್ನು ದೃಢಪಡಿಸಿದ್ದಾರೆ. ಮೃತಪಟ್ಟವರು ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಕಾರ್ಮಿಕರು ಎಂದು ಅವರು ತಿಳಿಸಿದ್ದಾರೆ. ಕಳಪೆ ದರ್ಜೆಯ ನಿರ್ಮಾಣ ಹಾಗೂ ನಿರ್ಮಾಣ ಕಂಪನಿಯ ನಿರ್ಲಕ್ಯ್ಷವೇ ಗೋಡೆ ಕುಸಿತಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರಕಾರ ಎಲ್ಲ ನೆರವೂ ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮುಂಬಯಿಯ ಚೆಂಬೂರಿನಲ್ಲೂ ಗೋಡೆ ಕುಸಿತದ ಮತ್ತೊಂದು ಘಟನೆ ನಡೆದಿದೆ. ಶುಕ್ರವಾರ ತಡ ರಾತ್ರಿ ಕಂಪೌಂಡ್ ಗೋಡೆ ಕುಸಿದು ಪಾರ್ಕಿಂಗ್ ಮಾಡಿದ್ದ ಆಟೋ ರಿಕ್ಷಾಗಳ ಮೇಲೆ ಬಿದ್ದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆಗೆಯುವ ಕೆಲಸ ಆರಂಭಿಸಿದ್ದಾರೆ.


from India & World News in Kannada | VK Polls https://ift.tt/2JhoCkz

ಘೋರ: 2 ತಿಂಗಳ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಾಯಿ

ಸಿತಾಪುರ: ಕ್ರೂರ ಮಕ್ಕಳು ಹುಟ್ಟಬಹುದು, ಆದರೆ ಕ್ರೂರ ಇರಲಾರಳು ಎಂದು ಹೇಳುತ್ತಾರೆ. ಆದರೆ ಈ ಘಟನೆ ಅದಕ್ಕೆ ಈ ಮಾತನ್ನೇ ಸುಳ್ಳು ಮಾಡಿದೆ. ತಾಯಿಯೊಬ್ಬಳು 2 ತಿಂಗಳ ಪುಟ್ಟ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಂದ ಬೆಚ್ಚಿ ಬೀಳಿಸುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದಾ ಕಾಯಿಲೆಯಿಂದ ಬಳಲುತ್ತಿದ್ದಕ್ಕೆ ನೊಂದು ಖಿನ್ನತೆಗೆ ಜಾರಿದ್ದ ಆಕೆ ಈ ಘೋರ ಕೃತ್ಯಕ್ಕೆ ಕೈ ಹಾಕಿದ್ದಾಳೆ ಎನ್ನಲಾಗುತ್ತಿದೆ. ಮಗುವಿಗೆ ಬೆಂಕಿ ಹಚ್ಚಿದ ಬಳಿಕ ಸಂಪೂರ್ಣ ಮನೆಗೆ ಕೂಡ ಬೆಂಕಿ ಹಚ್ಚಿದ ಆಕೆ , ನೆರೆಮನೆಯವರಿಗೆ ತಾನು ಮಾಡಿದ ಕೃತ್ಯದ ಬಗ್ಗೆ ಹೇಳಿ ಅಲ್ಲಿಂದ ಪರಾರಿಯಾಗಿದ್ದಾಳೆ. ಮೃತ ಮಗುವಿನ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ತಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


from India & World News in Kannada | VK Polls https://ift.tt/2RObFmc

ಗರ್ಭಿಣಿಯನ್ನು 10 ಕಿ.ಮೀ ಬೈಕ್‌ ಮೇಲೆ ಸಾಗಿಸಿ ಆಸ್ಪತ್ರೆಗೆ ದಾಖಲು

ಉಗ್ರ ನಿಗ್ರಹಕ್ಕೆ ಬ್ರಿಕ್ಸ್‌ ಬಲ: ಭಾರತದ ನಿಲುವಿಗೆ ಗೆಲುವು, ಉಗ್ರಪೋಷಕ ಪಾಕ್‌ಗೆ ಹೊಡೆತ

ಸರಕಾರಿ ಯೋಜನೆ ಪ್ರಚಾರಕ್ಕೆ 3800 ಕೋಟಿ ರೂ. ವೆಚ್ಚ!

ಐಎಂಎ ವಂಚನೆ: 209 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ

ಬೆಂಗಳೂರು/ಹೊಸದಿಲ್ಲಿ: ಸಾವಿರಾರು ಠೇವಣಿದಾರರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಬೆಂಗಳೂರಿನ ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣಕ್ಕೆ ಸಂಬಂಧಿಸಿದಂತೆ (ಇ.ಡಿ) 209 ಕೋಟಿ ರೂ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ (ಲೇವಾದೇವಿ) ವ್ಯವಹಾರ ತಡೆ ಕಾಯ್ದೆ ಅಡಿಯಲ್ಲಿ ಐಎಂಎ ಜ್ಯುವೆಲ್ಸ್ ಸಂಸ್ಥೆಯ 197 ಕೋಟಿ ರೂ ಮೌಲ್ಯದ ಸೊತ್ತುಗಳು ಮತ್ತು 12 ಕೋಟಿ ರೂ ಬ್ಯಾಂಕ್ ಠೇವಣಿಗಳನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ ಪ್ರಧಾನ ಕಚೇರಿ ಹೊಸದಿಲ್ಲಿಯಲ್ಲಿ ತಿಳಿಸಿದೆ. ಒಟ್ಟಾರೆ ಮುಟ್ಟುಗೋಲು ಹಾಕಿಕೊಂಡಿರುವ ಸೊತ್ತಿನ ಮೌಲ್ಯ 209 ಕೋಟಿ ರೂಪಾಯಿಗಳು ಎಂದು ಇ.ಡಿ ಪ್ರಕಟಣೆ ತಿಳಿಸಿದೆ. ಐಎಂಎ ಗ್ರೂಪ್ ಆಫ್ ಕಂಪನೀಸ್ ವಿರುದ್ಧ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಪ್ರಕರಣ ದಾಖಲಿಸಿಕೊಂಡಿತ್ತು. ಸಂಸ್ಥೆಯ ಪ್ರವರ್ತಕ ಹಾಗೂ ಆಡಳಿತ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಹೂಡಿಕದಾರರಿಗೆ 40,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸಿ ತಲೆಮರೆಸಿಕೊಂಡ ಬಳಿಕ ಆತನ ವಿರುದ್ಧ ಇ.ಡಿ ಮನಿ ಲ್ಯಾಂಡರಿಂಗ್ ಕಾಯಿದೆಯಡಿ ಕ್ರಿಮಿನಲ್ ಕೇಸು ದಾಖಲಿಸಿಕೊಂಡಿತ್ತು. ಕರ್ನಾಟಕ ಸರಕಾರ ಈ ಹಗರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.


from India & World News in Kannada | VK Polls https://ift.tt/2JdJhpr

ಏಕದಿನ ವಿಶ್ವಕಪ್: ಲಂಕಾ ವಿರುದ್ಧ ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ಕೆ

ರಿವರ್‌ಸೈಡ್ ಗ್ರೌಂಡ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದೆ. ಚೆಸ್ಟರ್ ಲೆ ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಪ್ರಶಸ್ತಿ ಫೇವರಿಟ್‌ ಇಂಗ್ಲೆಂಡ್‌ ವಿರುದ್ಧ ತನ್ನ ಹಿಂದಿನ ಪಂದ್ಯದಲ್ಲಿ ಸ್ಮರಣೀಯ ಜಯ ಗಳಿಸಿರುವ ಶ್ರೀಲಂಕಾ ತಂಡ ಶುಕ್ರವಾರ ವಿಶ್ವಕಪ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ 'ಚೋಕರ್ಸ್‌' ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ. ಇಂಗ್ಲೆಂಡ್‌ ವಿರುದ್ಧ 20 ರನ್‌ಗಳ ಜಯ ಗಳಿಸುವುದರೊಂದಿಗೆ ಟೂರ್ನಿಯಲ್ಲಿ ಆರು ಪಂದ್ಯಗಳಿಂದ ಒಟ್ಟು 6 ಅಂಕಗಳನ್ನು ಕಲೆಹಾಕಿರುವ ಲಂಕಾ ತನ್ನ ಸೆಮಿಫೈನಲ್ಸ್‌ ಸ್ಪರ್ಧೆಯನ್ನು ಜೀವಂತವಾಗಿರಿಸಿಕೊಂಡಿದ್ದರೆ, ಏಳು ಪಂದ್ಯಗಳಿಂದ ಕೇವಲ ಮೂರಂಕ ಹೊಂದಿರುವ ದಕ್ಷಿಣ ಆಫ್ರಿಕಾ ಈಗಾಗಲೇ ಸ್ಪರ್ಧೆಯಿಂದ ಹೊರಬಿದ್ದಿದ್ದು, ಗೌರವಕ್ಕಾಗಿ ಹೋರಾಟ ನಡೆಸಲಿದೆ. ಕಳಪೆ ನಾಯಕತ್ವಕ್ಕಾಗಿ ಅಭಿಮಾನಿಗಳು ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಫಾಫ್‌ ಡು' ಪ್ಲೆಸಿಸ್‌ ಶ್ರೀಲಂಕಾ ವಿರುದ್ಧವಾದರೂ ಪುಟಿದೇಳುವರೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಹರಿಣ ಪಡೆ ವಿಶ್ವಕಪ್‌ ಮುಖಾಮುಖಿಯಲ್ಲಿ ಲಂಕಾ ವಿರುದ್ಧ 3-1ರ ಮೇಲುಗೈ ಹೊಂದಿರುವ ಕಾರಣ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಜೀವನ್‌ ಮೆಂಡಿಸ್‌ ಮತ್ತು ಸುರಂಗ ಲಕ್ಮಲ್‌ ಈ ಪಂದ್ಯದಲ್ಲಿ ಲಂಕಾ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅತ್ತ ದಕ್ಷಿಣ ಆಫ್ರಿಕಾ ಪರ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿರುವ ಏಡನ್‌ ಮಕ್ರ್ರಾಮ್‌ ಬದಲಿಗೆ ಜೆ.ಪಿ.ಡುಮಿನಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2xnWI0t

ಲಕ್ಷಾಂತರ ರೂ. ಗಳಿಸುವ ಕಚೋರಿವಾಲಾ ವಾಸವಿರುವುದು ಗೇಣುದ್ದ ಮನೆಯಲ್ಲಿ!

ಲಖನೌ: ವಾರ್ಷಿಕ 60-70 ಲಕ್ಷ ರೂಪಾಯಿ ಆದಾಯ ಹೊಂದಿರುವ ಉತ್ತರ ಪ್ರದೇಶದ ಆಲಿಗಢದಲ್ಲಿ ಕಚೋರಿ ಮಾರುವ ಮುಖೇಶ್ ಕುಮಾರ್ ವಾಸಿಸುವ ನಿವಾಸದ ಬಗ್ಗೆ ಕೇಳಿದರೆ ಆಶ್ಚರ್ಯವಾಗುತ್ತದೆ. ಹೌದು, ಲಕ್ಷಾಂತರ ರೂಪಾಯಿ ಸಂಪಾದನೆ ಇರುವ ಮುಖೇಶ್ ಅವರು ಕಿರಿದಾದ ರಸ್ತೆಯಲ್ಲಿ ದೂಳು, ಕಸದಿಂದ ಕೂಡಿರುವ ಕೇವಲ 225 ಚದರ ಅಡಿಯ ಶಿಥಿಲಗೊಂಡ ಮನೆಯಲ್ಲಿ ವಾಸವಾಗಿದ್ದಾರೆ. ಮುಖೇಶ್ ನಿವಾಸಕ್ಕೆ ಹೋಗುವ ರಸ್ತೆ ತುಂಬಾನೇ ಕಿರಿದಾಗಿದ್ದು, ಒಟ್ಟಿಗೆ ಮೂವರು ಜನ ನಡೆದು ಹೋಗಲು ಸಹ ಸಾಧ್ಯವಾಗುವುದಿಲ್ಲ. ಇನ್ನೂ ಇವರ ನಿವಾಸಕ್ಕೆ ಭೇಟಿ ನೀಡುವ ಜನರಿಗೆ ಕುರಲು ನಾಲ್ಕೈದು ಪ್ಲ್ಯಾಸ್ಟಿಕ್ ಕುರುಚಿಗಳನ್ನು ಬಿಟ್ಟರೆ, ಹಳೆಯ ಟಿವಿಎಸ್ ಮೊಪೆಡ್‌ ವಾಹನ ಹೊಂದಿದ್ದಾರೆ. ನಗರದ ಗುಲಾರ್ ರಸ್ತೆಯಲ್ಲಿರುವ ಮುಖೇಶ್ ನಿವಾಸ್, ಅವರ ಸುಪ್ರಸಿದ್ಧ ಕಚೋರಿ ಅಂಗಡಿಯಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿದೆ. ವಾರದ ಹಿಂದಷ್ಟೇ ಅಧಿಕಾರಿಗಳು ಈ ಮನೆ ಮೇಲೆ ದಾಳಿ ನಡೆಸಿದ್ದರು. 12 ವರ್ಷದ ಹಿಂದೆ ಮುಖೇಶ್ ಕುಮಾರ್ ಅವರ ತಂದೆ ಮಖನ್ ಲಾಲ್ (75) ಅವರು 4/4 ಚದರ ಅಡಿಯ ಅಂಗಡಿಯನ್ನು ಬಾಡಿಗೆಗೆ ಪಡೆದು ಕಚೋರಿ ವ್ಯಾಪಾರ ಪ್ರಾರಂಭಿಸಿದ್ದರು. ಆದರೆ, ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಈ ಪುಟ್ಟ ಅಂಗಡಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ನನಗೆ ಮೂವರು ಮಕ್ಕಳಿದ್ದು, ಪ್ರತಿಯೊಬ್ಬರು ಸ್ವಂತ ಮನೆ ಹೊಂದಿದ್ದಾರೆ. ಆದರೆ, ಆ ಮನೆಗಳು ಕೂಡ ನನ್ನ ಮನೆಯಂತೆ ಚಿಕ್ಕದಾಗಿವೆ ಎಂದು ಮಖನ್ ಲಾಲ್ ಹೇಳಿಕೊಂಡಿದ್ದಾರೆ. ಇವರು ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಮಾಡಿರಲಿಲ್ಲ. ಇದುವರೆಗೆ ಯಾವುದೇ ತೆರಿಗೆ ಪಾವತಿಸಿರಲಿಲ್ಲ ಎಂದು ಮುಖೇಶ್‌ಗೆ ತೆರಿಗೆ ಇಲಾಖೆ ನೋಟಿಸ್‌ ನೀಡಿತ್ತು. ಜಿಎಸ್‌ಟಿ ನಿಯಮದ ಪ್ರಕಾರ, ಯಾವುದೇ ವ್ಯಾಪಾರದಲ್ಲಾಗಲೀ 40 ಲಕ್ಷ ರೂ. ಮತ್ತು ಅದಕ್ಕೂ ಮೀರಿದ ವಹಿವಾಟು ಇದ್ದಲ್ಲಿ ಜಿಎಸ್‌ಟಿ ನೋಂದಣಿ ಕಡ್ಡಾಯ. ಸಿದ್ಧಪಡಿಸಿದ ಆಹಾರ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ಅನ್ವಯವಾಗುತ್ತದೆ. ಸದ್ಯದ ನಿಯಮಗಳ ಪ್ರಕಾರ, ಮುಕೇಶ್‌ ಅವರು ಜಿಎಸ್‌ಟಿ ನೋಂದಣಿ ಮಾಡಿಸಬೇಕು ಹಾಗೂ ಒಂದು ವರ್ಷದ ತೆರಿಗೆಯನ್ನು ಪಾವತಿಸಬೇಕಾಗಿದೆ.


from India & World News in Kannada | VK Polls https://ift.tt/2XJaeeg

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ 6 ತಿಂಗಳು ವಿಸ್ತರಣೆ: ಲೋಕಸಭೆಯಲ್ಲಿ ಪ್ರಸ್ತಾವ ಮಂಡಿಸಿದ ಅಮಿತ್ ಶಾ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸುವ ಪ್ರಸ್ತಾವವನ್ನು ಗೃಹಸಚಿವ ಅಮತ್ ಶಾ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದರು. ರಾಜ್ಯದಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಗಡಿ ಪ್ರದೇಶಗಳಲ್ಲಿ ಬಂಕರ್‌ಗಳ ನಿರ್ಮಾಣ ಕಾರ್ಯ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಹಿಂದಿನ ಗೃಹಸಚಿವ ರಾಜನಾಥ್ ಸಿಂಗ್ ಅವಧಿಯಲ್ಲಿ ಈ ಬಂಕರ್‌ಗಳ ನಿರ್ಮಾಣಕ್ಕೆ ಕಾಲಾವಧಿ ನಿಗದಿಪಡಿಸಲಾಗಿತ್ತು. 'ಪ್ರತಿಯೊಬ್ಬರ ಜೀವವೂ ನಮಗೆ ಮುಖ್ಯ' ಎಂದ ಸಚಿವ ಶಾ, ಜುಲೈ 1ರಿಂದ ಆರಂಭವಾಗುವ ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 'ರಮ್ಜಾನ್ ಮತ್ತು ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಜತೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಸುವುದಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ' ಎಂದು ಶಾ ವಿವರಿಸಿದರು. ಜಮ್ಮು-ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ -2019ವನ್ನೂ ಶಾ ಸದನದಲ್ಲಿ ಮಂಡಿಸಿದರು.


from India & World News in Kannada | VK Polls https://ift.tt/2X5YgXp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...