ಮುಂಗಾರು ಮಳೆ ಆಗಮನ: ಭತ್ತದ ಸಸಿ ಮಡಿ ತಯಾರಿ ಬಿರುಸು

ದಾವಣಗೆರೆಯಲ್ಲಿ ಮುಂಗಾರು ಮಳೆ ಸ್ವಲ್ಪ ಚುರುಕಾಗಿದ್ದು ರೈತ ಸಮುದಾಯವು ಹೊಲಗಳಲ್ಲಿ ಕ್ರಿಯಾಶೀಲವಾಗುವಂತೆ ಮಾಡಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಪ್ರಾಂತ್ಯದಲ್ಲಿ ಭತ್ತವೇ ಪ್ರಮುಖ ಬೆಳೆಯಾಗಿರುವುದರಿಂದ ಗದ್ದೆಯನ್ನು ಹಸನು ಮಾಡಿ, ಬತ್ತದ ನಾಟಿ ಮಾಡಲಾಗುತ್ತಿದೆ. 15 ದಿನಗಳ ಹಿಂದೆ ಭತ್ತದ ಮಡಿ ಮಾಡಲು ರೈತರು ಹಿಂದೇಟು ಹಾಕುತ್ತಿದ್ದರು. ತುಂಗಾ- ಭದ್ರಾ ನದಿಗಳ ಮೂಲದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ನದಿಗೆ ನೀರು ಬರುವ ಖಾತ್ರಿಯಲ್ಲಿರುವ ರೈತರು ಈಗ ಭತ್ತದ ಬೆಳೆ ಬೆಳೆಯಲು ಮುಂದಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/LEVrvJP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...