ಮಹಿಳೆಯರೇ ಎಚ್ಚರ: ಗೃಹಲಕ್ಷ್ಮಿ ಯೋಜನೆಗೂ ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಿಗೂ ಸಂಬಂಧ ಇಲ್ಲ!ಸೇವಾಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕಾರ,12ರೂ. ಫೀಸ್‌

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ದಿನಾಂಕ ಘೋಷಣೆಯಾಗುವ ಎರಡು ವಾರಗಳ ಮುಂಚೆಯೇ ಸಾಕಷ್ಟು ಮಹಿಳೆಯರು ಮನೆ ಸಮೀಪದ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ದಾಖಲಾತಿ ನೀಡಿ ಅರ್ಜಿ ಸಲ್ಲಿಕೆಗೆ ನೂರಾರು ರೂ. ಫೀಸ್‌ ಕೂಡಾ ಕಟ್ಟಿದ್ದಾರೆ. ಆದರೆ, ಖಾಸಗಿ ಕಂಪ್ಯೂಟರ್‌ ಸೆಂಟರ್‌ಗೂ ಈ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೂ ಸಂಬಂಧ ಇಲ್ಲ. ಹೌದು, ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಅವಕಾಶವನ್ನು ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಿಗೆ ಅಥವಾ ಮೊಬೈಲ್‌ಗೆ ನೀಡಲಿಲ್ಲ. ಕಡ್ಡಾಯವಾಗಿ ಬಾಪೂಜಿ ಸೇವಾಕೇಂದ್ರ, ಗ್ರಾಮ್‌ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌ ಸೇರಿದಂತೆ ಜಿಲ್ಲಾ ಒನ್‌ ಕೇಂದ್ರಗಳಿಗೆ ತೆರಳಬೇಕು. ಅಥವಾ ಪ್ರಜಾ ಪ್ರತಿನಿಧಿಗಳ ಬಳಿ ಅರ್ಜಿ ಸಲ್ಲಿಸಬಹುದು. ಹೀಗಾಗಿ, ಮಹಿಳೆಯರು ಖಾಸಗಿ ಕಂಪ್ಯೂಟರ್‌ ಸೆಂಟರ್‌ಗೆ ತೆರಳಬಾರದು, ನೂರಾರು ರೂಪಾಯಿ ಶುಲ್ಕ ಪಾವತಿಸಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಜಾಪ್ರನಿಧಿಗಳಿಂದ ನೋಂದಣಿಸೇವಾ ಕೇಂದ್ರಗಳ ಜತೆಗೆ ಪರ್ಯಾಯವಾಗಿ 'ಪ್ರಜಾಪ್ರತಿನಿಧಿ' (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರು) ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ನೋಂದಾಯಿಸಿಕೊಳ್ಳಬಹುದು. ಪ್ರತಿ ಸಾವಿರ ಜನಸಂಖ್ಯೆಗೆ ಇಬ್ಬರಂತೆ (ಒಬ್ಬರು ಮಹಿಳೆಯರು-ಒಬ್ಬರು ಪುರುಷರು) ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದು. ಅವರಿಗೆ ಈಗಾಗಲೇ ಸಿದ್ಧಪಡಿಸಿರುವ ಗೃಹ ಲಕ್ಷ್ಮಿ ಆ್ಯಪ್ ಅಡಿ ನೋಂದಣಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/PW4Azbe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...