ಬೈಕ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ; ಕಳಕೊಂಡವರು ದೈವಸ್ಥಾನಕ್ಕೆ ಹರಕೆ ಹೇಳಲು ಹೊರಟಿದ್ದ ವೇಳೆ ಕಣ್ಣೆದುರೇ ಸಿಕ್ಕಿಬಿದ್ದ!

ಬೈಕ್ ಕದ್ದ ಆರೋಪಿಯೊಬ್ಬ ಬೈಕ್ ಕಳೆದುಕೊಂಡವರು ಕಲ್ಲುರ್ಟಿ ದೈವಸ್ಥಾನಕ್ಕೆ ಹರಕೆ ಹೇಳಲು ಹೊರಟಿದ್ದ ವೇಳೆ ಸಿಕ್ಕಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಮೈಸೂರಿನಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿರುವ ಆರೋಪಿ ಜುಲೈ 25ರಂದು ಸಂಜೆ ಸುಳ್ಯ ಬಸ್ ಸ್ಟ್ಯಾಂಡಿನಲ್ಲಿ ಇರಿಸಲಾಗಿದ್ದ ಬೈಕ್ ಕದ್ದಿದ್ದ. ಬೈಕ್ ಕಳೆದುಕೊಂಡ ವ್ಯಕ್ತಿ ಈ ಬಗ್ಗೆ ಕಲ್ಲುರ್ಟಿ ದೈವಸ್ಥಾನಕ್ಕೆ ಹರಕೆ ಸಲ್ಲಿಸಲು ಹೊರಟಿದ್ದ ವೇಳೆ ಅದೇ ಮಾರ್ಗವಾಗಿ ಬೈಕ್ ಕಳ್ಳ ಬೈಕಿನೊಂದಿಗೆ ಸಂಪಾಜೆ ಕಡೆಗೆ ಹೊರಟಿದ್ದ.ಈ ವೇಳೆ ಸ್ಥಳೀಯರು ಅತನನ್ನು ಬೆನ್ನಟ್ಟಿದ್ದು ಕಲ್ಲುಗುಂಡಿ ಪೊಲೀಸರು ಅಡ್ಡಗಟ್ಟಿ ಬಂಧಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/zZPpy7H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...