ಮೈಸೂರು: ಮುಡಾ ಬಡಾವಣೆಗಳ ಹಸ್ತಾಂತರಕ್ಕೆ ಕಸರತ್ತು ಆರಂಭ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇಲ್ಲಿಯವರೆಗೆ 264 ಬಡಾವಣೆಗಳನ್ನು ನಿರ್ಮಿಸಿದೆ. ಆದರೆ, ಆ ಬಡಾವಣೆಗಳನ್ನು ಸ್ಥಳೀಯ ಪುರಸಭೆ ಅಥವಾ ನಗರಸಭೆಗಳಿಗೆ ಹಸ್ತಾಂತರಿಸಲು ಮುಡಾಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ, ಹಸ್ತಾಂತರ ಮಾಡುವುದಕ್ಕೆ ಒಂದಿಷ್ಟು ನಿಯಮಗಳಿವೆ. ಬಡಾವಣೆಯಲ್ಲಿ, ಯುಜಿಡಿ ವ್ಯವಸ್ಥೆ, ರಸ್ತೆಗಳು, ಉದ್ಯಾನ ನಿರ್ಮಾಣ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳು ಇರಬೇಕು. ಆದರೆ, ಮುಡಾ ಹಸ್ತಾಂತರಿಸಲು ಸಿದ್ಧಪಡಿಸಿರುವ ಹಳೆಯ ಬಡಾವಣೆ ಗಳಲ್ಲಿ ಈ ನಿಯಮಾವಳಿಗಳು ಇಲ್ಲ. ಇದರಿಂದಾಗಿ ಹಸ್ತಾಂತರ ಸಾಧ್ಯವಾಗಿಲ್ಲ. ಆದರೆ, ಈ ನಿಯಮಗಳನ್ನು ಜಾರಿಗೊಳಿಸಿ ಹಸ್ತಾಂತರ ಮಾಡಲು ಮುಡಾ ಚಿಂತನೆ ನಡೆಸಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/CzdNOeM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...