ಸ್ಮಿತ್, ಮಾರ್ನಸ್ ಅರ್ಧಶತಕ ಬಲ; ಇಂಗ್ಲೆಂಡ್‌ಗೆ ತಿರುಗೇಟು ನೀಡಿದ ಆಸ್ಟ್ರೇಲಿಯಾ

ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಹಾಗೂ ಮಾರ್ನಸ್ ಲಾಬುಚೇನ್ ಆಕರ್ಷಕ ಅರ್ಧಶತಕಗಳ ಸಾಧನೆ ಮಾಡಿದ್ದಾರೆ. ತೇವಯುಕ್ತ ಮೈದಾನದಿಂದಾಗಿ ದಿನದಾಟದಲ್ಲಿ 44 ಓವರ್‌ಗಳ ಪಂದ್ಯವಷ್ಟೇ ನಡೆದಿತ್ತು. ಅಲ್ಲದೆ ಮೊದಲ ದಿನದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ. ಆಸೀಸ್ ಆರಂಭಿಕರಾದ ಮಾರ್ಕಸ್ ಹ್ಯಾರಿಸ್ (13) ಹಾಗೂ ಡೇವಿಡ್ ವಾರ್ನರ್ (0) ವಿಕೆಟುಗಳನ್ನು ಬೇಗನೇ ಕಳೆದುಕೊಂಡಿತು. ಈ ಪೈಕಿ ವಾರ್ನರ್ ಖಾತೆ ತೆರೆಯುವಲ್ಲಿ ವಿಫಲವಾಗಿದ್ದರು. ಈ ಹಂತದಲ್ಲಿ ಜತೆಗೂಡಿದ ಸ್ಟೀವ್ ಸ್ಮಿತ್ ಲಹಾಗೂ ಮಾರ್ನಸ್ ಲಾಬುಚೇನ್ ಮೂರನೇ ವಿಕೆಟ್‌ಗೆ 116 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. 128 ಎಸೆತಗಳನ್ನು ಎದುರಿಸಿದ ಮಾರ್ನಸ್ 10 ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರು. ಬಳಿಕ ಸ್ಮಿತ್‌ಗೆ ಟ್ರಾವಿಸ್ ಹೆಡ್ (18*) ಅವರಿಂದಲೂ ಉತ್ತಮ ಬೆಂಬಲ ದೊರಕಿತ್ತು. 93 ಎಸೆತಗಳನ್ನು ಎದುರಿಸಿರುವ ಸ್ಮಿತ್ ಏಳು ಬೌಂಡರಿಗಳಿಂದ 60 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಎರಡು ವಿಕೆಟ್ ಪಡೆದರು. ಇದೀಗಷ್ಟೇ ಭಾರತ ನಾಯಕ ವಿರಾಟ್ ಕೊಹ್ಲಿ ಹಿಂದಕ್ಕೆ ತಳ್ಳಿರುವ ಸ್ಟೀವ್ ಸ್ಮಿತ್ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೆ ಜಿಗಿದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PLcvTr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...