ಕರಾಚಿ: 24ರ ಹರೆಯದ ಯುವ ಭರವಸೆಯ ಬ್ಯಾಟ್ಸ್‌ಮನ್ ಬಾಬರ್ ಅಜಾಮ್‌ರನ್ನು ಪಾಕಿಸ್ತಾನದ 'ವಿರಾಟ್ ಕೊಹ್ಲಿ' ಎಂದೇ ವ್ಯಾಖ್ಯಾನಿಸಲಾಗಿದೆ. ಇದಕ್ಕೆ ತಕ್ಕುದಾಗಿ ಅಮೋಘ ಬ್ಯಾಟಿಂಗ್ ಫಾರ್ಮ್ ಕಾಯ್ದುಕೊಂಡಿರುವ ಬಾಬರ್, ಭಾರತದ ನಾಯಕ ದಾಖಲೆಯನ್ನೇ ಮುರಿದಿದ್ದಾರೆ. ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಾಧನೆ ಮಾಡಿದ್ದಾರೆ. ಇದು ಬಾಬರ್ ಬ್ಯಾಟ್‌ನಿಂದ ಸಿಡಿದ 11ನೇ ಶತಕವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಹಿಂದಿಕ್ಕಿರುವ ಬಾಬರ್, ಏಕದಿನದಲ್ಲಿ ಅತಿ ವೇಗದಲ್ಲಿ 11 ಶತಕಗಳನ್ನು ಬಾರಿಸಿದ ಮೂರನೇ ಅತಿ ವೇಗದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಬಾಬರ್ 71ನೇ ಇನ್ನಿಂಗ್ಸ್‌ನಲ್ಲಿ 11ನೇ ಶತಕ ಗಳಿಸಿದ್ದಾರೆ. ಅಷ್ಟೇ ಶತಕ ಗಳಿಸಲು ಕಿಂಗ್ ಕೊಹ್ಲಿ 82 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇನ್ನು ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಹಾಗೂ ಕ್ವಿಂಟನ್ ಡಿ ಕಾಕ್ ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. 11 ಶತಕಗಳನ್ನು ಗಳಿಸಲು ಇವರಿಬ್ಬರು ಅನುಕ್ರಮವಾಗಿ 64 ಹಾಗೂ 65 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಶ್ರೀಲಂಕಾ ವಿರುದ್ಧ ನಡೆದ ಕರಾಚಿ ಏಕದಿನ ಪಂದ್ಯದಲ್ಲಿ ಬಾಬರ್ 105 ಎಸೆತಗಳಲ್ಲಿ 115 ರನ್ ಚಚ್ಚಿದ್ದರು. ಇದರಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಪರಿಣಾಮ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 305 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಲಂಕಾ ಶೆಹನ್ ಜಯಸೂರ್ಯ (96) ಹೋರಾಟದ ಹೊರತಾಗಿಯೂ 46.5 ಓವರ್‌ಗಳಲ್ಲಿ 238 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಪಾಕ್ ಪರ ಉಸ್ಮಾನ್ ಶಿನ್ವಾರಿ 51 ರನ್ ತೆತ್ತು ಐದು ವಿಕೆಟ್ ಕಬಳಿಸಿದ್ದರು. ಏಕದಿನದಲ್ಲಿ ಅತಿ ವೇಗದಲ್ಲಿ 11 ಶತಕಗಳ ಸಾಧನೆ (ಇನ್ನಿಂಗ್ಸ್): ಹಾಶೀಮ್ ಆಮ್ಲಾ (ದ. ಆಫ್ರಿಕಾ): 64 ಕ್ವಿಂಟನ್ ಡಿ ಕಾಕ್ (ದ.ಆಫ್ರಿಕಾ): 65 ಬಾಬರ್ ಅಜಾಮ್ (ಪಾಕಿಸ್ತಾನ): 71ವಿರಾಟ್ ಕೊಹ್ಲಿ (ಭಾರತ): 82 ಬಾಬರ್ ಅಜಾಮ್ ಏಕದಿನ ಕೆರಿಯರ್: ಪಂದ್ಯ: 73ಇನ್ನಿಂಗ್ಸ್: 71ಅಜೇಯ: 10ರನ್: 3328ಗರಿಷ್ಠ: 125*ಸರಾಸರಿ: 54.55ಸ್ಟ್ರೇಕ್‌ರೇಟ್: 86.87ಶತಕ: 11ಅರ್ಧಶತಕ: 15
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2o60cTY