ಅತಿ ಕಿರಿಯ ಟೆಸ್ಟ್ ನಾಯಕನೆಂಬ ದಾಖಲೆ ಬರೆದ ರಶೀದ್ ಖಾನ್‌

ಚಿತ್ತಗಾಂಗ್: ಅತಿ ಕಿರಿಯ ಟೆಸ್ಟ್ ನಾಯಕನೆಂಬ ದಾಖಲೆಗೆ ಅಫಘಾನಿಸ್ತಾನದ ಲೆಗ್ ಸ್ಪಿನ್ನರ್ ಪಾತ್ರವಾಗಿದ್ದಾರೆ. ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ರಶೀದ್ ಖಾನ್ ಮುನ್ನಡೆಸುತ್ತಿದ್ದಾರೆ. 20 ವರ್ಷ 350ನೇ ದಿನದಲ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಹಿರಿಮೆಗೆ ರಶೀದ್ ಭಾಜನವಾಗಿದ್ದಾರೆ. ಈ ಮೂಲಕ 15 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. 2004ರಲ್ಲಿ ಜಿಂಬಾಬ್ವೆಯ ತಟೆಂಡ ತೈಬು 20 ವರ್ಷ 358ನೇ ದಿನದಲ್ಲಿ ಟೆಸ್ಟ್ ನಾಯಕತ್ವ ವಹಿಸಿದ್ದರು. ಅಪಘಾನಿಸ್ತಾನ 2017ರಲ್ಲಿ ಟೆಸ್ಟ್ ಮಾನ್ಯತೆಯನ್ನು ಪಡೆದಿತ್ತು. ಅಲ್ಲದೆ ಮೊದಲ ಪಂದ್ಯದಲ್ಲೇ ಭಾರತ ವಿರುದ್ಧ ಕೇವಲ ಎರಡು ದಿನಗಳೊಳಗೆ ಸೋಲಿಗೆ ಶರಣಾಗಿತ್ತು. ಬಳಿಕ ದ್ವಿತೀಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ದ ಏಳು ವಿಕೆಟ್ ಅಂತರದ ಗೆಲುವನ್ನು ದಾಖಲಿಸಿತ್ತು. ಏಕದಿನ ವಿಶ್ವಕಪ್ ಬಳಿಕ ಎಲ್ಲ ಪ್ರಕಾರದ ಕ್ರಿಕೆಟ್‌ಗೂ ರಶೀದ್ ಖಾನ್ ಅವರನ್ನು ನಾಯಕರನ್ನಾಗಿ ಅಫಘಾನಿಸ್ತಾನ ಘೋಷಿಸಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PJpa9e

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...