ಲಂಚ ಪಡೆದು ಅಮಾನತುಗೊಂಡ ಮೂವರು ಪೊಲೀಸರು : ಚಾಮರಾಜನಗರ ಸಂಚಾರ ಠಾಣೆ ಪ್ರಕರಣ

ಚಾಮರಾಜನಗರ: ಲಂಚ ಪಡೆದ ಆರೋಪದ ಹಿನ್ನಲೆಯಲ್ಲಿ ಒಂದೇ ಠಾಣೆಯ ಮೂವರು ಪೊಲೀಸರು ವಿವಿಧ ಪ್ರಕರಣಗಳಡಿ ಅಮಾನತುಗೊಂಡಿದ್ದಾರೆ. ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ನಾಗಮ್ಮ,ಎಎಸ್ಐ ನಂಜಪ್ಪ, ಮುಖ್ಯ ಪೇದೆ ಶಂಕರ್ ಅವರನ್ನ, ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಚಾಮರಾಜನಗರ ಹೊರವಲಯದ ಸೋಮವಾರಪೇಟೆ ಸಮೀಪ ಹಣ ಪಡೆದು ರಶೀದಿ ನೀಡದೆ ಪಿಎಸ್ಐ ನಾಗಮ್ಮ ಅವರ ಸಮಕ್ಷಮದಲ್ಲೆ ಲೋಪ ಎಸಗಿದ ವಿಡಿಯೋ ವೈರಲ್ ಆಗಿತ್ತು.ಇದರ ಬಗ್ಗೆ ಸ್ಪಷ್ಟನೆ ಕೇಳಿದರೆ ಉತ್ತರ ಹೇಳಲು ನಿರಾಕರಿಸಿದ ಅಧೀಕ್ಷಕರು ಮೌನವಹಿಸಿದ್ದರು. ನಂತರ ಇಬ್ಬರನ್ನೂ ತಮ್ಮ ಕಚೇರಿಯ ಡಿಸಿಆರ್‌ಬಿ ವಿಭಾಗಕ್ಕೆ ನಿಯೋಜನೆಗೊಳಿಸಿ ಸುಮ್ಮನಾಗಿದ್ದರು. ಒಂದೆರಡು ದಿನದಲ್ಲೆ ಮತ್ತೆ ಎಎಸ್ಐ ನಂಜಪ್ಪ ಎಂಬುವವರ ಹಣ ಪಡೆಯುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೊ ವೈರಲ್ ಆದ ಕೂಡಲೆ ಎಸ್ಪಿ ಅವರು ನಂಜಪ್ಪ ಅವರನ್ನ ಕೂಡಲೇ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಡಿಜಿಪಿ ಅವರೇ, ಒಂದು ಕಣ್ಣಿಗೆ ಬೆಣ್ಣೆ ಹಚ್ಚಿ ಮತ್ತೊಂದು ಕಣ್ಣಿಗೆ ಸುಣ್ಣ ಬಳಿದಿರುವುದೇಕೆ ಎಂಬ ಶೀರ್ಷಿಕೆಯಡಿ ಸೆ.22 ರಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಒಬ್ಬರಿಗೆ ಅಮಾನತು ಮತ್ತೊಬ್ಬರಿಗೆ ವರ್ಗಾವಣೆಯ ಶಿಕ್ಷೆ ಎಷ್ಟು ಸರಿ. ಇಬ್ಬರೂ ಮಾಡಿದ್ದು ಒಂದೇ ತಪ್ಪು ಬೇರೆ ಬೇರೆ ಶಿಕ್ಷೆ ಹೇಗೆ ಎಂದು ಪತ್ರಿಕಾ ವರದಿಗಳು ಪೊಲೀಸ್‌ ಇಲಾಖೆಯನ್ನು ಪ್ರಶ್ನಿಸಿದ್ದವು. ಇದನ್ನ ಮನಗಂಡ ಹಿರಿಯ ಅದಿಕಾರಿಗಳು ಚಾ.ನಗರ ಅಧೀಕ್ಷಕರಿಗೆ ಮೊದಲು ತಪ್ಪೆಸಗಿದ್ದ ಪೊಲೀಸರನ್ನೂ ಅಮಾನತು ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈಗ ಚಾಮರಾಜನಗರ ಪೊಲೀಸ್ ಅಧೀಕ್ಷಕರು ಲಂಚ ಆರೋಪದಡಿ ಮೂವರು ಪೊಲೀಸರನ್ನೂ ಅಮಾನತುಗೊಳಿಸಿದ್ದಾರೆ.


from India & World News in Kannada | VK Polls https://ift.tt/2noBRso

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...