ಟಿಕ್ ಟಾಕ್‌ನಿಂದ ರಾಷ್ಟ್ರೀಯ ಭದ್ರತೆಗೂ ಸವಾಲು, ಅದು ಹೇಗೆ?

ಹೊಸದಿಲ್ಲಿ: ಬಾಲಿವುಡ್‌ ಸಿನಿಮಾಗಳ ಹಾಡಿಗೆ ಲಿಪ್‌ ಸಿಂಕ್‌ ಮಾಡಿರುವ ಮತ್ತು ವಿಚಿತ್ರ ಸ್ಟಂಟ್‌ಗಳನ್ನು ಒಳಗೊಂಡಿರುವ ಟಿಕ್‌ ಟಾಕ್‌ ವಿಡಿಯೊಗಳು ಕೇವಲ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವುದು ಮಾತ್ರ ವಲ್ಲದೇ, ರಾಷ್ಟ್ರೀಯ ಭದ್ರತೆಗೂ ಸವಾಲಾಗಿ ಪರಿಣಮಿಸುತ್ತಿವೆ! ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ನಿಕ್‌ ಫ್ರಿಶ್‌ ಬರೆದಿರುವ ಲೇಖನ ಈ ಬಗ್ಗೆ ಮಾಹಿತಿ ಚೆಲ್ಲಿದ್ದು, ಪಶ್ಚಿಮದ ತಂತ್ರಜ್ಞಾನವು ಚೀನಾಗೆ ಒಡ್ಡಿಕೊಳ್ಳುತ್ತಿರುವುದರಿಂದ ನಾವು ಅನಪೇಕ್ಷಿತ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ‘‘ಫೇಸ್‌ಬುಕ್‌ನಂಥ ಅಮೆರಿಕದ ಕಂಪನಿಗಳು ಆಕ್ರಮಣಕಾರಿಯಾಗಿವೆ ಮತ್ತು ಅಂಕೆಗೆ ಸಿಗದವು ಎಂದು ದೂರುವವರು ಚೀನಾದ ದೈತ್ಯ ತಂತ್ರಜ್ಞಾನ ಕಂಪನಿಗಳತ್ತ ದೃಷ್ಟಿ ಹರಿಸಲಾರರು ಎನಿಸುತ್ತದೆ. ಯಾಕೆಂದರೆ ಅವು ಅಪಾರ ದರ್ಶಕ ಮತ್ತು ಸೆನ್ಸಾರ್‌ಶಿಪ್‌ ಅನ್ನು ನಿರಾಕರಿಸುವ ಕಣ್ಗಾವಲು ಉಪಕರಣಗಳೊಂದಿಗೆ ಸಹಕರಿಸುತ್ತವೆ’’ ಎಂದು ಅವರು ಬರೆದುಕೊಂಡಿದ್ದಾರೆ. ‘‘ಅಮೆರಿಕದ ಪ್ರಮುಖ ಸೇನಾ ಅಧಿಕಾರಿಯೊಬ್ಬರು ತಮ್ಮ ಮಗುವಿನೊಂದಿಗೆ ವಿಡಿಯೊ ಮಾಡಿ ಟಿಕ್‌ಟಾಕ್‌ನಲ್ಲಿ ಷೇರ್‌ ಮಾಡಿ ಕೊಂಡಿದ್ದಾರೆ. ಇಂಥ ವಿಡಿಯೊಗಳಿಂದ ಚೀನಾದ ಗುಪ್ತಚರಕ್ಕೆ ಅನುಕೂಲವಾಗುವ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಿದೆ,’’ ಎಂದು ಹೇಳಲಾಗಿದೆ. ಬಳಕೆದಾರರ ಮಾಹಿತಿಯನ್ನು ಟಿಕ್‌ಟಾಕ್‌, ಚೀನಾ ದಲ್ಲಿರುವ ತನ್ನ ಗ್ರೂಪ್‌ ನೊಂದಿಗೆ ಹಂಚಿ ಕೊಳ್ಳಬಹುದಾಗಿದೆ.


from India & World News in Kannada | VK Polls https://ift.tt/2kKnPAo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...