ಹೊಸದಿಲ್ಲಿ: ಸರ್ಕಾರ ಉಳಿಯುತ್ತೋ ಉರುಳುತ್ತೋ ಅನ್ನೋದು ಸರ್ಕಾರಕ್ಕೆ ಸಂಬಂಧಿಸಿದ ವಿಷಯ, ಎಲ್ಲವನ್ನೂ ಪ್ರಶ್ನಿಸಲು ಸ್ಪೀಕರ್ ಏನು ಹೆಡ್ ಮಾಸ್ಟ್ರೇ ಎಂದು ಅನರ್ಹ ಶಾಸಕರ ಪರ ವಕಾಲತ್ತು ವಹಿಸಿರುವ ಮುಕುಲ್ ರೋಹ್ಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ರಾಜ್ಯದ 17 ಶಾಸಕರು ತಮ್ಮನ್ನು ಅನರ್ಹಗೊಳಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ಅವರ ನ್ಯಾಯಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಅನರ್ಹತೆಯ ಅಪವಾದ ಹೊತ್ತುಕೊಂಡು ಚುನಾವಣೆ ಸ್ಪರ್ಧಿಸಲು ನಮ್ಮ ಕಕ್ಷಿದಾರರರಿಗೆ ಇಷ್ಟವಿಲ್ಲ. ಹೀಗಾಗಿ ಅನರ್ಹತೆಗೇ ತಡೆ ನೀಡಬೇಕು ಎಂದು ಮುಕುಲ್ ರೋಹ್ಟಗಿ ನ್ಯಾಯಪೀಠಕ್ಕೆ ಕೋರಿದ್ದಾರೆ. ಅನರ್ಹ ಶಾಸಕ ಸುಧಾಕರ್ ಪರ ವಕೀಲ ಸಂದರಂ ವಾದ ಮಂಡನೆ ಆರಂಭಿಸಿದ್ದಾರೆ. ರಾಜೀನಾಮೆ ನೀಡಿದ್ದೇನೆ. ಆದರೆ, ವಿಪ್ ಉಲ್ಲಂಘನೆ ಮಾಡಿಲ್ಲ. ಆದರೂ, ಅನರ್ಹ ಮಾಡಲಾಗಿದೆ. ಸರ್ಕಾರ ಸರಿ ಇಲ್ಲದಿದ್ದರೆ ಹೊರಬರುವ ಅವಕಾಶವಿದೆ. ನಾನು ಯಾವ ಪಕ್ಷದ ನಾಯಕರ ಜೊತೆಗೂ ಗುರುತಿಸಿಕೊಂಡಿಲ್ಲ. ನನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂದು ಎಂದು ಸುಧಾಕರ್ ಅವರು ತಮ್ಮ ವಕಿಲರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.
from India & World News in Kannada | VK Polls https://ift.tt/2kXa1T6