ಬ್ಯಾಟಿಂಗ್ ಕೋಚ್ ಸ್ಥಾನದಿಂದ ವಜಾ; ಆಯ್ಕೆಗಾರರ ಜತೆಗೆ ಸಂಜಯ್ ಬಂಗಾರ್ ಮಾತಿನ ಚಕಮಕಿ

ಹೊಸದಿಲ್ಲಿ: ಕೆಲವು ದಿನಗಳಷ್ಟೇ ಹಿಂದೆಯಷ್ಟೇ ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಸ್ಥಾನದಿಂದ ಮಾಜಿ ಆಟಗಾರ ಅವರನ್ನು ತೆರವುಗಳೊಳಿಸಲಾಗಿತ್ತು. ಬ್ಯಾಟಿಂಗ್ ಕೋಚ್ ಆಗಿ ಸಂಜಯ್ ಬಂಗಾರ್ ಸ್ಥಾನಕ್ಕೆ ವಿಕ್ರಮ್ ಠಾಡೋಡ್ ಅವರನ್ನು ನೇಮಕಗೊಳಿಸಲಾಗಿತ್ತು. ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಸಂದರ್ಶನದ ವೇಳೆ ಆಯ್ಕೆ ಸಮಿತಿ ಸದಸ್ಯರ ಜತೆಗೆ ಸಂಜಯ್ ಬಂಗಾರ್ ಮಾತಿನ ಚಕಮಕಿ ನಡೆಸಿದ್ದರು ಎಂಬುದು ತಿಳಿದು ಬಂದಿದೆ. ಪ್ರಮುಖವಾಗಿಯೂ ಭಾರತದ ಮಧ್ಯಮ ಕ್ರಮಾಂಕದ ವೈಫಲ್ಯವೇ ಬಂಗಾರ್ ಜತೆಗಿನ ಒಪ್ಪಂದವನ್ನು ಮುಂದುವರಿಸದಿರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ರವಾನಿಸಿರುವುದು ವ್ಯಾಪಕ ಟೀಕೆಗೊಳಗಾಗಿತ್ತು. ಆಯ್ಕೆ ಸಮತಿಯು ಸಂದರ್ಶನವನ್ನು ನಡೆಸುತ್ತಿರುವ ಸಂಜೆಯ ಹೊತ್ತಿಗೆ ಆಯ್ಕೆಗಾರ ದೆವಾಂಗ್ ಗಾಂಧಿ ಕೊಠಡಿಗೆ ತೆರಳಿದ ಸಂಜಯ್ ಬಂಗಾರ್ ವಾಗ್ವಾದಕ್ಕಿಳಿದರು. ಕೊಠಡಿಯ ಬಾಗಿಲನ್ನು ಬಡಿದು ಒಳ ತೆರಳಿದ ಬಂಗಾರ್, ಬ್ಯಾಟಿಂಗ್ ಕೋಚ್ ಸ್ಥಾನದಿಂದ ತಮ್ಮನ್ನು ಬದಲಾಯಿಸುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದರು ಎಂಬುದು ವರದಿಯಾಗಿದೆ. ಒಟ್ಟಾರೆಯಾಗಿ ನಂಬಿಕೆಯ ಕೊರತೆಯಿಂದಾಗಿ ಬಂಗಾರ್‌ಗೆ ಕೋಚ್ ಸ್ಥಾನ ನಷ್ಟವಾಗಿದೆ. ಹಾಗೆಯೇ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಅಸಾಮರಸ್ಯತೆ ಕಂಡುಬಂದಿತ್ತು ಎಂಬುದು ವರದಿಯಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Zx1sBv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...