ಕೊಚ್ಚಿ: ದೇಶದಲ್ಲೇ ಮೊದಲ ಬಾರಿಗೆ '' ಕೇರಳದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಇಲ್ಲಿನ ಅತೀ ದೊಡ್ಡ ನಗರ ಕೊಚ್ಚಿಯಲ್ಲಿ 2020ರ ಮಾರ್ಚ್‌ನಿಂದ ನೀರಿನಲ್ಲಿ ಚಲಿಸುವ ಮೆಟ್ರೋ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿಳಿಸಿದ್ದಾರೆ. "ವಾಟರ್ ಮೆಟ್ರೋ ನೀರಿನಲ್ಲಿ ಚಲಿಸುವ ದೇಶದ ಮೊದಲ ಸಂಚಾರ ವ್ಯವಸ್ಥೆ. ಇದನ್ನು ನಿಗದಿತ ಸಮಯದೊಳಕ್ಕೆ ಪೂರ್ಣಗೊಳಿಸಲಾಗುವುದು ಮತ್ತು ಮೊದಲ ಹಂತದ ಸಂಚಾರ ವ್ಯವಸ್ಥೆ 2020ರ ಮಾರ್ಚ್‌ನಲ್ಲಿ ಕಾರ್ಯಾರಂಭ ಮಾಡಲಿದೆ,” ಎಂದು ವಿಜಯನ್ ವಿವರಣೆ ನೀಡಿದ್ದಾರೆ. ಸೋಮವಾರ ಮಹಾರಾಜ ಕಾಲೇಜು-ಟೈಕೂಡಮ್ ಹಾಗೂ ಪೆಟ್ಟ-ಎಸ್‌ಎನ್ ಜಂಕ್ಷನ್ ನಡುವಿನ ಮಾರ್ಗಕ್ಕೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆ ಶಂಕುಸ್ಥಾಪನೆ ನೆರವೇರಿಸಿ ಅವರು ಈ ವಿವರಗಳನ್ನು ನೀಡಿದ್ದಾರೆ. ವಾಟರ್ ಮೆಟ್ರೋ ಕೊಚ್ಚಿ ಹೊರ ಭಾಗದಲ್ಲಿರುವ 10 ದ್ವೀಪಗಳನ್ನು ಸಂಪರ್ಕಿಸಲಿದೆ. 78 ವೇಗದೂತ, ಹವಾನಿಯಂತ್ರಿತ ಬೋಟ್‌ಗಳು ಕೊಚ್ಚಿಯ ಹಿನ್ನೀರಿನಲ್ಲಿ 76 ಕಿಲೋಮೀಟರ್ ವ್ಯಾಪ್ತಿ ಸಂಚರಿಸಲಿವೆ.
from India & World News in Kannada | VK Polls https://ift.tt/2NNrmKd