ಪಾವಗಡದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಯೇ? ನಾರಾಯಣಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸುವುದಾದರೆ, ಕಾಂಗ್ರೆಸ್‌-ಜೆಡಿಎಸ್‌ಗೂ ಕಷ್ಟ

2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಹೆಚ್‌.ವಿ. ವೆಂಕಟೇಶ್‌ 2023ರಲ್ಲಿ ಗೆದ್ದು ಇತಿಹಾಸ ಬರೆಯಲು ಮುಂದಾಗಿದ್ದಾರೆ. ಈ ಬಾರಿ ವೆಂಕಟರಮಣಪ್ಪ ಬದಲಿಗೆ ಅವರ ಪುತ್ರ ವೆಂಕಟೇಶ್‌ ಸ್ಪರ್ಧೆ ಮಾಡಬಹುದು. ಆದರೂ ಸಹ ವೆಂಕಟರಮಣಪ್ಪ ಇಲ್ಲವೇ ವೆಂಕಟೇಶ್‌ ಯಾರು ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ಮತ್ತೊಬ್ಬ ನಾಯಕ ರಾಮಚಂದ್ರಪ್ಪ ಕೂಡ ಕಾಂಗ್ರೆಸ್‌ ಟಿಕೆಟ್‌ನ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದೆಡೆ 2018ರ ಚುನಾವಣೆಯಲ್ಲಿ ಕೇವಲ 400 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಕೆ.ಎಂ. ತಿಮ್ಮರಾಯಪ್ಪ ಸಹ ಈ ಭಾರಿ ಗೆದ್ದೇ ಗೆಲ್ಲುವೆ ಎಂಬ ನಿರೀಕ್ಷೆಯಲ್ಲಿದ್ದಾರೆ.

from India & World News in Kannada | VK Polls https://ift.tt/5cDj4vS

ಚಿಕ್ಕಮಗಳೂರಿನಲ್ಲಿ ಕಾಫಿ ಫಸಲು ಮಣ್ಣಪಾಲು: ಹವಾಮಾನ ವೈಪರಿತ್ಯದಿಂದ ನಷ್ಟ

ಶೀತ ಹಾಗೂ ಮಳೆಯ ವಾತಾವರಣ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅರೇಬಿಕಾ ಕಾಫಿ ಉದುರುತ್ತಿದೆ. ಮೂಡಿಗೆರೆ, ಆಲ್ದೂರು, ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಾಗಿ ಅರೇಬಿಕಾ ಕಾಫಿ ಬೆಳೆಯುತ್ತಿದ್ದು ಈವರೆಗೆ ಅತಿವೃಷ್ಟಿ, ಅಕಾಲಿಕ ಮಳೆಯಿಂದ ಕಂಗೆಟ್ಟಿದ್ದ ಬೆಳೆಗಾರರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಲ ಗ್ರಾಮಗಳ ತೋಟಗಳಲ್ಲಿ ಗಿಡಗಳಿಗೆ ರಾಸಾಯನಿಕ ಸಿಂಪಡಣೆ, ಕಳೆ ತೆಗೆಯುವುದು ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಿವೆ. ಈ ಕೆಲಸಗಳಿಗೆ ಕಾರ್ಮಿಕರ ಕೊರತೆ ಎದುರಾಗಿದ್ದರೆ ಈಗ ಕಾಫಿ ಕಟಾವಿನ ಚಿಂತೆ ಕಾಡುತ್ತಿದೆ. ಭಾನುವಾರದಿಂದ ಮತ್ತೆ ತುಂತುರು ಮಳೆ ಬೀಳಲಾರಂಭಿಸಿದ್ದು, ಹಣ್ಣುಗಳನ್ನು ಒಣಗಿಸಲು ಪರದಾಡುವಂತಾಗಿದೆ.

from India & World News in Kannada | VK Polls https://ift.tt/Uc7PpiN

ಪೊಲೀಸ್‌ ದಂಪತಿಗೆ ಒಂದೇ ಕಡೆ ಕೆಲಸಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ: ಸೂದ್

​​ಈ ಹಿಂದೆ ಗಂಡ-ಹೆಂಡತಿಗೆ ಒಂದೇ ಕಡೆ ಕೆಲಸ ಮಾಡುವ ಅವಕಾಶವಿತ್ತು. ಬಳಿಕ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು. ಹೀಗಾಗಿ, ಮತ್ತೆ ಅನುಮತಿ ಕೋರಿ ದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌

from India & World News in Kannada | VK Polls https://ift.tt/ZleUE1z

Vokkaligara Sangha | ಒಕ್ಕಲಿಗರ ಸಂಘದಲ್ಲಿ ಭುಗಿಲೆದ್ದ ಅಸಮಾಧಾನ: ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ತೀರ್ಮಾನ

Vokkaligara Sangha Fight: ಕೆಂಚಪ್ಪಗೌಡ (B Kenchappagowda) ಬಣದವರು ಎನ್ನಲಾದ 18 ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿರುವ ಪತ್ರವನ್ನು ಈಗಾಗಲೇ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಇದಕ್ಕೆ ಸೆಡ್ಡು ಹೊಡೆದಿರುವ ಹಾಲಿ ಅಧ್ಯಕ್ಷ ಸಿ.ಎನ್‌. ಬಾಲಕೃಷ್ಣ, (CN Balakrishna) ''ನಮಗೆ ಸ್ಪಷ್ಟ ಬಹುಮತ ಇದೆ. ಅವಿಶ್ವಾಸ ಎದುರಿಸಲು ನಾವೂ ಸಿದ್ಧ,'' ಎಂದು ತಿರುಗೇಟು ನೀಡಿದ್ದಾರೆ. ಸದ್ಯದಲ್ಲೇ ಅವಿಶ್ವಾಸ ಮಂಡನೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದ್ದು, ಇದರಲ್ಲಿ ಬಾಲಕೃಷ್ಣ ಮತ್ತು ಕೆಂಚಪ್ಪಗೌಡ ಬಣದ ನಡುವೆ ಮತ್ತೊಮ್ಮೆ ತೀವ್ರ ಹಣಾಹಣಿ ಏರ್ಪಡಲಿದೆ.

from India & World News in Kannada | VK Polls https://ift.tt/h3vuIOS

ಸಿದ್ದರಾಮಯ್ಯಗೆ ರಾತ್ರಿ ಕನಸಲ್ಲೂ ಬಿಜೆಪಿಯೇ ಬರುತ್ತದೆ: ಈಶ್ವರಪ್ಪ ವ್ಯಂಗ್ಯ

ನನ್ನ ಕಂಡರೆ ಬಿಜೆಪಿಗೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯಗೆ ರಾತ್ರಿ ಕನಸಲ್ಲೂ ಬಿಜೆಪಿ ಬರುತ್ತದೆ. ಹಾಗಾಗಿ ಅವರಿಗೇ ಭಯ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಈಶ್ವರಪ್ಪ ಅವರಿಂದಾಗಿ ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆಗಾಗಿ ಯಾರೂ ಮುಂದೆ ಬರುತ್ತಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಹಾಗಿದ್ದರೆ ಕನಕಪುರ ಕ್ಷೇತ್ರಕ್ಕೆ ಅವರು ಎಷ್ಟು ಬಂಡವಾಳ ತಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

from India & World News in Kannada | VK Polls https://ift.tt/Yd3inza

Dewald Brevis: ಟಿ20 ಕ್ರಿಕೆಟ್‌ನ ಅತಿ ವೇಗದ 150 ರನ್‌ ಸಿಡಿಸಿ 'ಬೇಬಿ ಎ.ಬಿ' ಡೆವಾಲ್ಡ್‌ ಬ್ರೆವಿಸ್‌!

Dewald Brevis Fastest 150 In CSA T20 Challenge: ಕ್ರಿಕೆಟ್‌ ಲೋಕದಲ್ಲಿ 'ಬೇಬಿ ಎ.ಬಿ' ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಟೀನೇಜ್‌ ಸೆನ್ಷೇಷನ್‌ ಡೆವಾಲ್ಡ್‌ ಬ್ರೆವಿಸ್‌, ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸಿಎಸ್‌ಎ ಟಿ20 ಚಾಲೆಂಜ್‌ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಯುವ ಬ್ಯಾಟರ್‌ ಕೇವಲ 57 ಎಸೆತಗಳಲ್ಲಿ 162 ರನ್‌ ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ 150 ರನ್‌ ಆಗಿದೆ. ಅಲ್ಲದೆ ಟಿ20 ಕ್ರಿಕೆಟ್‌ನ ಮೂರನೇ ವೈಯಕ್ತಿಕ ಗರಿಷ್ಠ ಸ್ಕೋರ್‌ ಕೂಡ ಆಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/YAHmyGX

Seoul Halloween Tragedy: ಸೋಲ್‌ನ ರಸ್ತೆಗಳಲ್ಲಿ ಬಡಿತ ನಿಲ್ಲಿಸಿದ ಹೃದಯಗಳು...ಸಾಮೂಹಿಕ ಹೃದಯ ಸ್ತಂಭನಕ್ಕೆ ಏನು ಕಾರಣ?

Mass Cardiac Arrest in Seoul: ಹಾಲೋವೀನ್‌ (Halloween) ಪ್ರಯುಕ್ತ ವಿಪರೀತ ಜನರು ಸೇರಿದ್ದರು. ಒಬ್ಬರಿಗೊಬ್ಬರು ಅಂಟಿಕೊಂಡು ನಡೆಯುವಷ್ಟು ತೀವ್ರ ಒತ್ತಡ ಸೃಷ್ಟಿಯಾಗಿತ್ತು. ಇದೇ ಸಮಯದಲ್ಲಿ ನೂಕಾಟವೂ ಉಂಟಾಯಿತು ಹಾಗೂ ಉಸಿರಾಟಕ್ಕೂ (Breathing) ಕಷ್ಟವಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಹಲವು ಮಂದಿಗೆ ಉಸಿರು ಕಟ್ಟಿತು, ಹೃದಯ ಬಡಿತವು ತಟಸ್ಥವಾಗಿ ಇದ್ದಲ್ಲೇ ಕುಸಿದು ಬಿದ್ದರು.

from India & World News in Kannada | VK Polls https://ift.tt/VuPh71F

ಕೋರಮಂಗಲದಲ್ಲಿರುವ ಕೆಂಪೇಗೌಡರ ಸೊಸೆಯ ಸಮಾಧಿ ಸ್ಥಳದಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹ

ದೇವನಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಪೂರಕವಾಗಿ ನಡೆಯುತ್ತಿರುವ ಮೃತ್ತಿಕಾ ಸಂಗ್ರಹ ಅಭಿಯಾನವು ಸೋಮವಾರದಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಸಮಾಧಿ ಬಳಿ ನಡೆಯಿತು. ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಲಕ್ಷ್ಮಿದೇವಿ ಸಮಾಧಿಗೆ ಪೂಜೆ ಸಲ್ಲಿಸಿ, ಮೃತ್ತಿಕೆ ಸಂಗ್ರಹಿಸಲಾಯಿತು.

from India & World News in Kannada | VK Polls https://ift.tt/yJ05YxH

ಜನರ ರಕ್ಷಣೆ ಮರೆತರಾ ಬೆಂಗಳೂರು ಗ್ರಾಮಾಂತರ ಪೊಲೀಸರು? ಸರಣಿ ಅಪರಾಧಗಳು ನಡೆದರೂ ಪೊಲೀಸರ ಮೌನ!

​​ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಗ್ರಾಮಾಂತರ ಪ್ರದೇಶದಲ್ಲಿ ಸರಣಿ ಕಳ್ಳತನಗಳು ವರದಿಯಾಗುತ್ತಿದ್ದು, ಪೊಲೀಸ್‌ ಇಲಾಖೆ ಹಬ್ಬದ ಮೂಡ್‌ನಲ್ಲಿ ಇದ್ದಂತಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಸಿಗುವ ನಿಟ್ಟಿನಲ್ಲಿ ಇಲಾಖೆಯಿಂದ ಯಾವುದೇ ಕ್ರಮಗಳು ನಡೆಯುತ್ತಿಲ್ಲ. ಅಪರಾಧ ತಡೆ ಮಾಸಾಚರಣೆ ಸೇರಿದಂತೆ ಬೀಟ್‌ ಪೊಲೀಸಿಂಗ್‌ ಸಹಾ ನೆಪ ಮಾತ್ರಕ್ಕೆ ಎಂಬಂತಾಗಿದೆ. ಹೀಗಾಗಿ, ಜಿಲ್ಲಾಪೊಲೀಸ್‌ ಇಲಾಖೆ ಎಚ್ಚೆತ್ತು ಗ್ರಾಮಾಂತರದಲ್ಲಿ ಬೀಟ್‌ ಪೊಲೀಸಿಂಗ್‌ ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಕಳ್ಳತನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ.

from India & World News in Kannada | VK Polls https://ift.tt/L1qoaYj

40 ಇಂದಿರಾ ಕ್ಯಾಂಟೀನ್‌ಗೆ ಬೀಗ: ಬಿಬಿಎಂಪಿಯಿಂದ ಸಬ್ಸಿಡಿ ಹಣ ಬಿಡುಗಡೆ ವಿಳಂಬ, 20 ವಾರ್ಡ್‌ಗಳಲ್ಲಿ ಆರಂಭವೇ ಆಗಿಲ್ಲ

ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಅದಮ್ಯ ಚೇತನ, ರಿವಾರ್ಡ್ಸ್ ಹಾಗೂ ಶೆಫ್‌ಟಾಕ್‌ ಸಂಸ್ಥೆಗಳಿಗೆ ತಲಾ 55 ಲಕ್ಷ ರೂ. ಗೆ ಟೆಂಡರ್‌ ನೀಡಲಾಗಿತ್ತು. 2020 ಮತ್ತು 2021ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಇಂದಿರಾ ಕ್ಯಾಂಟೀನಿನತ್ತ ಜನರು ಬರುವುದು ಕಡಿಮೆಯಾಗಿತ್ತು. ಹೀಗಾಗಿ, ಈ ಮೂರು ಸಂಸ್ಥೆಗಳಿಗೆ ಟೆಂಡರ್‌ ವಿಸ್ತರಿಸಲಾಗಿದೆ. ಆಹಾರ ಪೂರೈಸುವ ಗುತ್ತಿಗೆ ಕಂಪನಿಗಳಿಗೆ ಬಿಬಿಎಂಪಿ ವಾರ್ಷಿಕ ನವೀಕರಣ ಪತ್ರ ನೀಡುತ್ತಿಲ್ಲ. ಆರು ತಿಂಗಳಿಂದ ಸಬ್ಸಿಡಿ ಬಿಡುಗಡೆಯಾಗಿಲ್ಲ. ಕೆಲವೆಡೆ ಗ್ರಾಹಕರ ಕೊರತೆ ಉಂಟಾಗಿದೆ.

from India & World News in Kannada | VK Polls https://ift.tt/6LNeKh7

Nandini Milk Price Hike |ನಂದಿನಿ ಹಾಲಿನ ದರ ಶೀಘ್ರ 3 ರೂಪಾಯಿ ಹೆಚ್ಚಳ: ಗ್ರಾಹಕರಿಗೆ ಮತ್ತೊಂದು ಬರೆ

Nandini Milk Price Hike- ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ನಲ್ಲಿ ಹೂಲಿಕಟ್ಟಿ ಶೀಥಲೀಕರಣ ಕೇಂದ್ರಕ್ಕೆ ಶಂಕುಸ್ಥಾನಪನೆ ನೆರವೇರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, 'ನಂದಿನಿ ಹಾಲಿನ ದರ ಪರಿಷ್ಕರಣೆಯ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು, ಕೆಎಂಎಫ್‌ ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಹೈನುಗಾರರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯ. ಹಾಲಿನ ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ' ಎಂದರು.

from India & World News in Kannada | VK Polls https://ift.tt/gmkC8HB

2006ರಿಂದ ಈವರೆಗಿನ ಎಲ್ಲಸರಕಾರಗಳ ಅಕ್ರಮ ತನಿಖೆ ಮಾಡಿ: ಸಿದ್ದರಾಮಯ್ಯ

ಹಿಂದೆ ನಮ್ಮ ಸರಕಾರದ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಹಾಗಾಗಿ 2006ರಿಂದ ಈವರೆಗಿನ ಸರಕಾರಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಗೆ ಪ್ರತ್ಯೇಕ ತನಿಖಾ ಆಯೋಗ ರಚಿಸಲಿ. ಸುಪ್ರೀಂಕೋರ್ಟ್‌ ಹಾಲಿ ನ್ಯಾಯಮೂರ್ತಿಗಳ ನೇತೃತ್ವ ಸಮಿತಿಯಿಂದಲೂ ತನಿಖೆ ನಡೆಯಲಿ,'' ಎಂದು ಸಿದ್ದರಾಮಯ್ಯ ಹೇಳಿದರು.

from India & World News in Kannada | VK Polls https://ift.tt/fDKJwgM

ಕಲ್ಯಾಣ ನೆಲದಿಂದ ಬಿಜೆಪಿ ಒಬಿಸಿ ವಿಜಯ ಕಹಳೆ: ತಾಕತ್ತಿದ್ರೆ ನಮ್ಮ ತಡೀರಿ ಎಂದು ಕಾಂಗ್ರೆಸ್ಸಿಗೆ ಸಿಎಂ ಸವಾಲು

ಮಾತೆತ್ತಿದರೆ ಸಾಕು, ಹಿಂದುಳಿದ ವರ್ಗದ ಮತಗಳು ನಮ್ಮ ಜೇಬಿನಲ್ಲಿವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ ಈಗ ಕಲಬುರಗಿಯಲ್ಲಿಒಬಿಸಿ ಸಮಾವೇಶಕ್ಕೆ ಸಮುದಾಯದವರು ಸಾಗರೋಪಾದಿಯಲ್ಲಿಬಂದಿದ್ದು, ತಾಕತ್‌ ಇದ್ದರೆ, ಧಮ್‌ ಇದ್ದರೆ ಈ ಒಬಿಸಿ ವಿಜಯ ಪಥ ತಡೆಯಲಿ,'' ಎಂದು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

from India & World News in Kannada | VK Polls https://ift.tt/6OBGpxU

JDS Ticket | ಜೆಡಿಎಸ್‌ ಟಿಕೆಟ್‌ ಹಂಚಿಕೆಯಲ್ಲಿ ವೀರಶೈವ ಲಿಂಗಾಯತರಿಗೆ ಹೆಚ್ಚು ಟಿಕೆಟ್‌: ಎಚ್‌.ಡಿ.ಕುಮಾರಸ್ವಾಮಿ

Karnataka Assembly Elections: ವೀರಶೈವ ಲಿಂಗಾಯತ (Veerashaiva lingayat) ಮುಖಂಡರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೂ (HD Deve Gowda) ಭಾಗಿಯಾಗಿದ್ದರು. ಇದೇ ವೇಳೆ ಕುಮಾರಸ್ವಾಮಿ (HD Kumaraswamy) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘‘ಇಡೀ ದೇಶದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಕುಮಾರಸ್ವಾಮಿ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಕೊಟ್ಟ ಮಾತಿನಂತೆ ಎಲ್ಲ ಕೆಲಸ ಮಾಡಿದರು. ರೈತರ ಸಾಲ ಮನ್ನಾ ಮಾಡಿದರು. ನನ್ನ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಬೇಕಾದರೆ ರಾಜ್ಯದಲ್ಲಿ ಜೆಡಿಎಸ್‌ ಪುನಃ ಅಧಿಕಾರಕ್ಕೆ ಬರಬೇಕು,’’ ಎಂದರು.

from India & World News in Kannada | VK Polls https://ift.tt/eD7gGTz

ಹಳದಿ ಮಾರ್ಗದಲ್ಲಿ ಶೀಘ್ರ ಮೆಟ್ರೋ: 8 ತಿಂಗಳಲ್ಲಿ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ 'ನಮ್ಮ ಮೆಟ್ರೋ' ಸಂಚಾರ

ಮೆಟ್ರೋ ಎರಡನೇ ಹಂತದ ಯೋಜನೆಯಡಿ ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ ಉದ್ದದ ಮಾರ್ಗವನ್ನು ನಿರ್ಮಿಸಲಾಗಿದೆ. ಇದಕ್ಕೆ ಹಳದಿ ಬಣ್ಣದ ಮಾರ್ಗವೆಂದು ಹೆಸರಿಡಲಾಗಿದೆ. ಒಟ್ಟು ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಸಿವಿಲ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, 2023ರ ಜೂನ್‌ ವೇಳೆಗೆ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಒಂದನೇ ಪ್ಯಾಕೇಜ್‌ನ ಬೊಮ್ಮಸಂದ್ರ-ಬೆರಟೇನ ಅಗ್ರಹಾರ ನಡುವಿನ 6.38 ಕಿ.ಮೀ ಮಾರ್ಗ, ಎರಡನೇ ಪ್ಯಾಕೇಜ್‌ನ ಬೆರಟೇನ ಅಗ್ರಹಾರ-ಬೊಮ್ಮನಹಳ್ಳಿ ನಡುವಿನ 6.38 ಕಿ.ಮೀ ಮಾರ್ಗದ ಸಿವಿಲ್‌ ಕಾಮಗಾರಿಗಳು ಶೇ. 99ರಷ್ಟು ಪೂರ್ಣಗೊಂಡಿವೆ.

from India & World News in Kannada | VK Polls https://ift.tt/y61YjOl

ಕೇಂದ್ರೀಯ ಪಡೆಗಳ ಪ್ರವೇಶ ಪರೀಕ್ಷೆಯಲ್ಲಿ ಮತ್ತೆ ಕನ್ನಡ ನಿರ್ಲಕ್ಷ್ಯ; ಕನ್ನಡಿಗರ ಆಕ್ರೋಶ

ಬೆಂಗಳೂರು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ಸೇರಿದಂತೆ ಕೇಂದ್ರ ಭದ್ರತಾ ಪಡೆಗಳಲ್ಲಿಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ 'ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌'(ಎಸ್‌ಎಸ್‌ಸಿ) ವತಿಯಿಂದ ಮತ್ತೆ ಪ್ರಾದೇಶಿಕ ಭಾಷೆಗಳ ವಿರೋಧಿ ನೀತಿ. ಹಿಂದಿ, ಇಂಗ್ಲೀಷ್ ನಲ್ಲಷ್ಟೇ ಪರೀಕ್ಷೆ. ಇದರಿಂದ ಅನೇಕ ಪ್ರಾದೇಶಿಕ ಭಾಷಾ ಅಭ್ಯರ್ಥಿಗಳಿಗೆ ಬೇಸರ. ಅಸಮಾಧಾನ ಹೊರಹಾಕಿರುವ ಪ್ರವೇಶ ಆಕಾಂಕ್ಷಿ ಅಭ್ಯರ್ಥಿಗಳು. ಪ್ರತಿಪಕ್ಷಗಳ ನಾಯಕರು ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಿಂದಲೂ ತೀವ್ರ ಅಸಮಾಧಾನ.

from India & World News in Kannada | VK Polls https://ift.tt/fvUgrkW

ಲಾಭವಿದ್ದರೂ ಕಸ ಸಂಗ್ರಹಕ್ಕೆ ನಿರಾಸಕ್ತಿ: ತೀರ್ಥಹಳ್ಳಿ ಗ್ರಾ.ಪಂ.ಗಳಲ್ಲಿ ಆರಂಭವಾಗದ ಕಸ ಸಂಗ್ರಹ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಕಾರ‍್ಯಕ್ರಮದಡಿ ಸಂಘಟಿತಗೊಂಡ ಸ್ವಸಹಾಯ ಮಹಿಳಾ ಗುಂಪುಗಳಿಂದ ರಚಿತವಾದ ಒಕ್ಕೂಟವನ್ನು ಕಸ, ಘನತ್ಯಾಜ್ಯ ಸಂಗ್ರಹ ವಿಲೇವಾರಿ ನಿರ್ವಹಣೆ ಕಾರ‍್ಯಕ್ಕೆ ಗುರುತಿಸಲು ಸರಕಾರ ಸೂಚಿಸಿದೆ. ನಿರ್ವಹಣೆ ಜವಾಬ್ದಾರಿ ಪಡೆದ ಒಕ್ಕೂಟಕ್ಕೆ ಸೂಕ್ತ ತರಬೇತಿ ನೀಡುವುದು ಕಡ್ಡಾಯ. ಗ್ರಾ.ಪಂ., ಒಕ್ಕೂಟದ ನಡುವೆ ಒಪ್ಪಂದ ಅನ್ವಯ ವಿಲೇವಾರಿ ಜವಾಬ್ದಾರಿ ನೀಡಲು ಕ್ರಮ ವಹಿಸಬಹುದಾಗಿದೆ. 2021 ಅಕ್ಟೋಬರ್‌ 2ರೊಳಗೆ ಪ್ರತಿ ಹೋಬಳಿ ವ್ಯಾಪ್ತಿ ಕನಿಷ್ಠ 1 ಘನ ಮತ್ತು ದ್ರವತ್ಯಾಜ್ಯ ನಿರ್ವಹಣಾ ಘಟಕವನ್ನು ಸಂಜೀವಿನಿ ಸ್ವಹಾಯ ಸಂಘ ಗುಂಪು ಒಕ್ಕೂಟ ನಿರ್ವಹಿಸುವುದನ್ನು ಸರಕಾರ ಕಡ್ಡಾಯಗೊಳಿಸಿದೆ.

from India & World News in Kannada | VK Polls https://ift.tt/6h9zZU2

ಬಿಜೆಪಿಯವರ ದೊಂದಿ ಮೆರವಣಿಗೆ ಪಾಕಿಸ್ತಾನಕ್ಕೂ ಸಾಗಲಿ: ರಮಾನಾಥ ರೈ ಸವಾಲು

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪಾಕಿಸ್ತಾನಕ್ಕೆ ಹೋಗಲಿ ಎಂಬ ಬಿಜೆಪಿ ಮುಖಂಡರ ಟೀಕೆಗೆ ಮಾಜಿ ಸಚಿವ ತೀಕ್ಷ್ಣಪ್ರತಿಕ್ರಿಯೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿಂದಿನ ದಿವಸ ಅಖಂಡ ಭಾರತ ಸಂಕಲ್ಪ ಎಂದು ದೊಂದಿ ಮೆರವಣಿಗೆ ಮಾಡುತ್ತಾರೆ. ​​ಅಖಂಡವಾಗಿದ್ದ ಭಾರತದಿಂದ ಅನೇಕ ದೇಶಗಳು ಪ್ರತ್ಯೇಕವಾಗಿವೆ. ಹಾಗಾಗಿ ಭಾರತ್‌ ಜೋಡೋ ಯಾತ್ರೆ ಬಗ್ಗೆ ಅಪವಾದ ಮಾಡುವವರು ತಮ್ಮ ಮೆರವಣಿಗೆಯನ್ನು ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಅಖಂಡವಾಗಿದ್ದ ಇತರ ದೇಶಗಳಿಗೆ ಕೊಂಡೊಯ್ಯಲಿ. ಅವರನ್ನು ಯಾರೂ ತಡೆಯಲಾರರು ಎಂದು ಸವಾಲು ಹಾಕಿದ್ದಾರೆ.

from India & World News in Kannada | VK Polls https://ift.tt/6ZDvx7B

ಸಿದ್ದು ಸ್ಪರ್ಧೆಗೆ ಕ್ಷೇತ್ರವೇ ಸಿಗುತ್ತಿಲ್ಲ! ಖರ್ಗೆ, ಪರಂ ಶಾಪದಿಂದ ಮಾಜಿ ಸಿಎಂಗೆ ಈ ಸ್ಥಿತಿ: ಕಟೀಲ್‌ ಲೇವಡಿ

ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಂದ ಪ್ರತಿಪಕ್ಷದ ಸ್ಥಾನ ಕಿತ್ತುಕೊಂಡು ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದರು. ಡಾ.ಜಿ.ಪರಮೇಶ್ವರ್‌ ಅವರನ್ನು 2013ರಲ್ಲಿ ಸೋಲಿಸಿ ಸಿಎಂ ಆದರು. ಇವರಿಬ್ಬರ ಶಾಪ ಸಿದ್ದರಾಮಯ್ಯ ಅವರ ಮೇಲಿದೆ. ಇವರಿಬ್ಬರ ಶಾಪದಿಂದಾಗಿ ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸೀಟಿಲ್ಲದೇ ಭಾರತ ಐಕ್ಯತಾ ಯಾತ್ರೆಯಲ್ಲಿ ಕ್ಷೇತ್ರ ಹುಡುಕಾಟ ನಡೆಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

from India & World News in Kannada | VK Polls https://ift.tt/B1p79tv

T20 World Cup: ಈ 3 ಕಾರಣಗಳಿಂದ ವಿರಾಟ್‌ ಕೊಹ್ಲಿ ಟಾಪ್‌ ಸ್ಕೋರರ್‌ ಆಗಬಹುದು!

T20 World cup 2022: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅತ್ಯಂತ ಕುತೂಹಲಭರಿತವಾಗಿ ಸಾಗುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಭಾರತ, ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಅಂದಹಾಗೆ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಈ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸುವ ಸಾಧ್ಯತೆ ಇದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/wCOqm7g

Street Dog Scare | ಮಂಚೇನಹಳ್ಳಿಯಲ್ಲಿ ಬೀದಿ ನಾಯಿಗಳಿಗೆ ಬೆಚ್ಚಿದ ಸಾರ್ವಜನಿಕರು: ಶ್ವಾನಗಳಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಸವಾಲು

Street Dog Problem in chikkaballapura- ಮಂಚೇನಹಳ್ಳಿಯ ತೊಂಡೆಬಾವಿ ಸರ್ಕಲ್‌, ಮಹೇಶ್ವರಿ ಸರ್ಕಲ್‌, ಬಸ್‌ ನಿಲ್ದಾಣ ಸೇರಿ ಹಲವಾರು ರಸ್ತೆಗಳಲ್ಲಿ ನಾಯಿಗಳ ಹಿಂಡು ಹಿಂಡಾಗಿ ಓಡಾಡುತ್ತವೆ. ನಾಯಿ ಅಡ್ಡ ಬಂದು ಬಹಳಷ್ಟು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ಇನ್ನು ರಾತ್ರಿ ವೇಳೆ ಒಬ್ಬಂಟಿಯಾಗಿ ಸಾರ್ವಜನಿಕರು ಸಂಚರಿಸುವಾಗ ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಪಾರಾಗುವುದೇ ಒಂದು ಹರಸಾಹಸವಾಗಿದೆ. ವಾರದಲ್ಲಿ ಒಂದು ಕಡೆಯಾದರೂ ನಾಯಿಗಳ ಹಾವಳಿಯಿಂದ ವಾಹನ ಚಾಲಕರು ಬೀಳುವುದು, ಚಿಕ್ಕ ಮಕ್ಕಳು ಹಾಗೂ ಕುರಿಗಳಿಗೆ ನಾಯಿ ಕಚ್ಚಿರುವ ಘಟನೆಗಳು ನಡೆಯುತ್ತಲೇ ಇದೆ.

from India & World News in Kannada | VK Polls https://ift.tt/hGd7AlQ

Aadhaar | 24 ವರ್ಷಗಳ ಹಿಂದೆ ಮನೆ ಬಿಟ್ಟವನ್ನು ಮರಳಿ ಗೂಡು ಸೇರುವಂತೆ ಮಾಡಿದ ಆಧಾರ್‌ ಕಾರ್ಡ್‌!

'ನಾನು ಚಿಕ್ಕವನಿದ್ದಾಗ ನಮ್ಮ ಅಪ್ಪ ಮನೆಬಿಟ್ಟು ಹೋಗಿದ್ದು ನಮಗೆ ನೆನಪು ಇಲ್ಲ. ನನಗೆ ಆಗ 5 ವರ್ಷ ಇದ್ದಿರಬಹುದು. ಈಗ ಅಪ್ಪ ಮನೆಗೆ ವಾಪಸ್‌ ಬಂದಿದ್ದು ಖುಷಿ ತಂದಿದೆ. ಅಪ್ಪನ್ನು ಇನ್ನು ಮುಂದೆ ನಾವೇ ಚೆನ್ನಾಗಿ ಸಾಕುತ್ತೇವೆ' ಎಂದು ಅವರ 28 ವರ್ಷದ ಹಿರಿಯ ಮಗ ಕರಿಯಪ್ಪ ಅದೆಂಥದೋ ಅವ್ಯಕ್ತ ಸಂಭ್ರಮ ಅನುಭವಿಸಿದ. 'ಅಪ್ಪ ಮನೆ ಬಿಟ್ಟಾಗ ನಾನು 3 ತಿಂಗಳು ಮಗು ಆಗಿದ್ದೆನಂತೆ. ಅಪ್ಪ ಮನೆಗೆ ವಾಪಸ್‌ ಬಂದಿದ್ದು, ನಮಗೆ ತುಂಬಾ ಸಂತೋಷವಾಗುತ್ತಿದೆ' ಎಂದು ಕಿರಿಯ ಮಗ ಬಾರೆಪ್ಪ, ಮಗುವಿನಂತೆ ಬಿಕ್ಕಳಿಸಿದ.

from India & World News in Kannada | VK Polls https://ift.tt/GUOxaPX

ದಳದಲ್ಲೇ ಸೆಟ್ಲ್‌ ಆದ ಜಿ.ಟಿ ದೇವೇಗೌಡ, ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಬಲ: ಇದು HDD ರಾಜಕೀಯ ದಾಳದ ಪ್ರತಿಫಲ

GT Deve gowda and HD Deve Gowda - ನಿರ್ಣಾಯಕ ಘಟ್ಟದಲ್ಲೆ ರಾಜಕೀಯ ಪಟ್ಟು ಹಾಕುವುದು ದೇವೇಗೌಡರ ರಣನೀತಿ. ಬಹುತೇಕವಾಗಿ ಗೌಡರು ಕಾಯಿ ನಡೆಸಿದಾಗ ಅದು ತಲುಪಬೇಕಾದ ಗುರಿ ತಲುಪಿರುತ್ತದೆ. ಜಿಟಿಡಿ ವಿಷಯದಲ್ಲೂ ಹಾಗೆಯೇ ಆಗಿದೆ. ಇದರಿಂದ ವೈಯಕ್ತಿಕವಾಗಿ ಜಿಟಿಡಿ ಅವರಿಗೂ ಲಾಭ. ಪಕ್ಷಕ್ಕೂ ಹಳೆ ಮೈಸೂರಿನಲ್ಲಿ ಚಾರ್ಮ್‌ ಕಾಪಾಡಿಕೊಳ್ಳಲು ಈ ಬೆಳವಣಿಗೆ ಪೂರಕವಾಗಲಿದೆ. ಹಾಗಾಗಿ, ಇದು ಮೈಸೂರಿನಲ್ಲಿ ನಡೆದ ಜೆಡಿಎಸ್‌ ಸಂಭಾವ್ಯ ಅಭ್ಯರ್ಥಿಗಳ ತರಬೇತಿ ಶಿಬಿರದ ಫಲಶ್ರುತಿಯಲ್ಲಿ ಕಣ್ಣಿಗೆ ಕಾಣುವ ಅಂಶವಾಗಿದೆ.

from India & World News in Kannada | VK Polls https://ift.tt/DlRn1hc

IndiGo plane | ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ, ಟೇಕಾಫ್‌ಗೂ ಮುನ್ನ ನಿಂತ ವಿಮಾನ: 184 ಜನ ಅಪಾಯದಿಂದ ಪಾರು

Fire in IndiGo Delhi-Bengaluru flight: ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಮಾನ ಎಂಜಿನ್‌ವೊಂದರಲ್ಲಿ ಬೆಂಕಿ ಹೊತ್ತುಕೊಂಡು, ದೊಡ್ಡ ಪ್ರಮಾಣದಲ್ಲಿ ಬೆಂಕಿಯ ಕಿಡಿಗಳು ಚಿಮ್ಮುತ್ತಿರುವುದನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಹಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದಿದ್ದಾರೆ.

from India & World News in Kannada | VK Polls https://ift.tt/ptWymFe

CM Bommai - 5 ಕಡೆ ಕೈಗಾರಿಕಾ ವಿಶೇಷ ಟೌನ್ ಶಿಪ್‌: ಸಿಎಂ ಬೊಮ್ಮಾಯಿ ಘೋಷಣೆ

ಬಿಯಾಂಡ್ರಾ ಬೆಂಗಳೂರು ಯೋಜನೆಯಡಿ ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ವೇಗ ಹೆಚ್ಚಿಸಲು ಚಿತ್ರದುರ್ಗ, ಹಾವೇರಿ, ದಾವಣಗೆರೆ, ಧಾರವಾಡ, ಬೆಳಗಾವಿಯಲ್ಲಿ ಕೈಗಾರಿಕಾ ವಿಶೇಷ ಟೌನ್‌ಶಿಪ್‌ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಮುಂಬೈ- ಚೆನ್ನೈ ಕೈಗಾರಿಕಾ ಕಾರಿಡಾರ್‌ ಸ್ಥಾಪನೆಯಿಂದ ರಾಜ್ಯದಲ್ಲಿಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿವೆ. ಅದಕ್ಕೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಐದು ಕಡೆ 1 ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ಶಿಪ್‌ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/ujimE43

ಭದ್ರಾ ಮೇಲ್ದಂಡೆಗೆ ಶೀಘ್ರ ರಾಷ್ಟ್ರೀಯ ಯೋಜನೆ ಪಟ್ಟ: ಕೇಂದ್ರದ ಮುಂದಿನ ಸಂಪುಟದಲ್ಲಿ ಅಧಿಕೃತ ಘೋಷಣೆ ನಿರೀಕ್ಷೆ

Upper Bhadra project: ವಿಧಾನಸೌಧದಲ್ಲಿ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister Govind Karjol), ‘‘ಯೋಜನೆಗೆ 23,000 ಕೋಟಿ ರೂ. ವೆಚ್ಚವಾಗಲಿದ್ದು, ಸದ್ಯ 16,000 ಕೋಟಿ ರೂ. ವೆಚ್ಚದ ಕೆಲಸ ಬಾಕಿ ಇದೆ. ರಾಷ್ಟ್ರೀಯ ಯೋಜನೆ (national project) ಘೋಷಣೆ ನಂತರ ಯೋಜನೆಯಡಿ ಬಾಕಿಯಿರುವ ಮೊತ್ತದಲ್ಲಿ ಶೇ. 60ರಷ್ಟನ್ನು ಕೇಂದ್ರ ಭರಿಸಲಿದೆ. ಅದರಂತೆ ಕೇಂದ್ರದಿಂದ ಯೋಜನೆಗೆ 5,300 ಕೋಟಿ ರೂ. ಸಿಗುವ ನಿರೀಕ್ಷೆ ಇದೆ,’’ ಎಂದು ತಿಳಿಸಿದರು.

from India & World News in Kannada | VK Polls https://ift.tt/vnowY26

ಮೈಷುಗರ್‌ಗೆ 20 ಕೋಟಿ ರೂ. ಬಾಕಿ ಬಿಡುಗಡೆಗೆ ಆಗ್ರಹ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಬಾಕಿ ಹಣ ಬಿಡುಗಡೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, 'ಬಾಕಿ ಹಣ ಬಿಡುಗಡೆ, ದುಡಿ ಯುವ ಬಂಡವಾಳ ಪಡೆಯಲು ಅನುಮತಿ ಹಾಗೂ ರೈತ-ರೊಂದಿಗೆ ಕಬ್ಬು ಸರಬರಾಜು ಕರಾರು ಕುರಿತಂತೆ ಸಮಗ್ರವಾಗಿ ಚರ್ಚಿಸಿ, ಪರಿಹಾರ ಕಂಡು-ಕೊಳ್ಳಲು ಕೂಡಲೇ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆಯಬೇಕು' ಎಂದು ಮನವಿ ಮಾಡಿದ್ದಾರೆ.

from India & World News in Kannada | VK Polls https://ift.tt/sTyHS9x

IND vs NED: 'ಹೆಚ್ಚಿನ ಸಂತೋಷವಿಲ್ಲ'-ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ರೋಹಿತ್‌ ಶರ್ಮಾ!

Rohit sharma on his Batting: ನೆದರ್ಲೆಂಡ್ಸ್‌ ವಿರುದ್ದ ಗುರುವಾರ ಭಾರತ ತಂಡ 56 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿತು. ಪಾಕಿಸ್ತಾನ ವಿರುದ್ದ ವೈಫಲ್ಯ ಅನುಭವಿಸಿದ್ದ ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ 39 ಎಸೆತಗಳಲ್ಲಿ 53 ರನ್‌ ಸಿಡಿಸಿದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಶರ್ಮಾ, ನಾವು ನಿರೀಕ್ಷೆ ಮಾಡಿದ ಗೆಲುವು ನಮಗೆ ಸಿಕ್ಕಿಲ್ಲ. ನನ್ನ ಅರ್ಧಶತಕದ ಕುರಿತಾಗಿಯೂ ನನಗೆ ಹೆಚ್ಚಿನ ಖುಷಿ ಇಲ್ಲ. ಆದರೆ, ರನ್‌ಗಳನ್ನು ಗಳಿಸಿರುವುದು ಇಲ್ಲಿ ಪ್ರಮುಖ ಸಂಗತಿಯಾಗಿದೆ ಎಂದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/57h018I

ಹೊತಪೇಟ ಕಲುಷಿತ ನೀರು ಸೇವನೆ ಪ್ರಕರಣ: ಇಂಜಿನಿಯರ್‌, ಪಿಡಿಒ ಅಮಾನತು

ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸದೇ ಇರುವುದು ಚರಂಡಿಯನ್ನು ಕ್ರಾಸ್‌ ಮಾಡುವಾಗ ಕಬ್ಬಿಣದ ಪೈಪ್‌ಗಳನ್ನು ಅಳವಡಿಸದೇ ಹಾಗೂ ಅಂದಾಜು ಪ್ರಕ್ರಿಯೆಯಂತೆ ಕಾಮಗಾರಿಗಳನ್ನು ನಿರ್ವಹಿಸದಿರುವುದನ್ನು ಪರಿಶೀಲಿಸಲಾಗಿ, ಕಿರಿಯ ಅಭಿಯಂತರ ಚನ್ನವೀರಯ್ಯಸ್ವಾಮಿ ನೇರ ಹೊಣೆಗಾರಗಿರುತ್ತಾರೆ. ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ. ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಪಿಡಿಒ ಸುನಂದಾ ಅವರನ್ನು ಕೂಡಾ ಅಮಾನತು ಮಾಡಿ ಆದೇಶಿಸಲಾಗಿದೆ.

from India & World News in Kannada | VK Polls https://ift.tt/IVNyuLW

Devaraja Market | ಕೆಡವಬೇಕೆ? ನವೀಕರಿಸಬೇಕೆ? ಮೈಸೂರಿನ ಐತಿಹಾಸಿಕ ದೇವರಾಜ ಮಾರುಕಟ್ಟೆಯ ಭವಿಷ್ಯ ಅತಂತ್ರ!

Devaraja Market Mysuru - ಶತಮಾನದ ಇತಿಹಾಸವುಳ್ಳ ದೇವರಾಜ ಮಾರುಕಟ್ಟೆ ಮೈಸೂರು ನಗರದ ಹೃದಯ ಭಾಗದಲ್ಲಿದೆ. ಸಾಮಾನ್ಯ ದಿನಗಳಲ್ಲಿ ಮಾರುಕಟ್ಟೆ ಜನರಿಂದ ತುಂಬಿರುತ್ತದೆ. ಇನ್ನು ಹಬ್ಬ ಹರಿದಿನದಲ್ಲಿ ಕೇಳುವುದೇ ಬೇಡ. ಇಂತಹ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವೂ ಹೌದು. ಇಲ್ಲಿಯವರೆಗೆ ಎರಡು ಬಾರಿ ಕಟ್ಟಡದ ಚಾವಣಿ ಕುಸಿದಿದೆ. ಆಗಾಗ್ಗೆ ಮಾರುಕಟ್ಟೆಯಲ್ಲಿ ಬೆಂಕಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಮಾರುಕಟ್ಟೆಯೂ ಶಿಥಿಲಗೊಂಡಿರುವುದರಿಂದ ಒಡೆದು ಕಟ್ಟಬೇಕು ಎಂಬುದು ನಗರಪಾಲಿಕೆ ವಾದ. ಬೇಡ ಎನ್ನುವುದು ಕೆಲ ಮಂದಿಯ ವಾದ.

from India & World News in Kannada | VK Polls https://ift.tt/mPLW7Yu

ಮಳೆ ಮುಗಿದೊಡನೆ ರಾಜ್ಯದಲ್ಲಿ ಶುರುವಾಯ್ತು ಮಾಗಿಯ ಚಳಿ

ಇನ್ನೇನು ಮಳೆ ದೂರ ಸರಿಯಿತು ಅನ್ನುವಾಗಲೇ ಮಾಗಿಯ ಚಳಿ ರಾಜ್ಯವನ್ನುಅಪ್ಪಿಕೊಂಡಿದೆ. ಕೇವಲ ವಾರದ ಹಿಂದಷ್ಟೇ ಮಳೆಗೆ ನಲುಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ದಾಖಲೆಯ ಚಳಿ ದಾಖಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಅಧಿಕವಾಗಿದೆ. ಆದರೆ ಕರಾವಳಿ ಭಾಗದಲ್ಲಿ ಮಾತ್ರ ಎಂದಿನಂತ ಸೆಕೆ ಆವರಿಸಿಕೊಂಡಿದೆ.

from India & World News in Kannada | VK Polls https://ift.tt/dfNoshe

​​ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿದವರಿಗೆ ವರ್ಷದೊಳಗೆ ಹಕ್ಕು ಪತ್ರ: ಆರ್.ಅಶೋಕ

ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಒಂದು ವರ್ಷದ ಒಳಗೆ ಎಲ್ಲರಿಗೂ ಸರಕಾರಿ ಜಾಗದ ಹಕ್ಕುಪತ್ರವನ್ನು ನೀಡಲಾಗುವುದು. ಬೆಂಗಳೂರಿನಲ್ಲಿ10 ಸಾವಿರ ಬಡವರಿಗೆ ನಿವೇಶ ನದ ಹಕ್ಕು ಪತ್ರ ನೀಡಲಾಗುವುದು. ಬಗರ್‌ ಹುಕಂ ಅಡಿ ಫಾರಂ ನಂ.57ರಲ್ಲಿಸಾಗುವಳಿ ಮಾಡುತ್ತಿರುವ ಭೂಮಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.

from India & World News in Kannada | VK Polls https://ift.tt/Nba4MUB

ವಿಧವೆ ತಾಯಿಗೆ ಮೃತ ಮಗನ ಆಸ್ತಿಯಲ್ಲೂ ಸಮಾನ ಪಾಲು ಕೇಳುವ ಹಕ್ಕಿದೆ: ಹೈಕೋರ್ಟ್ ಆದೇಶ

ಇದು ಬೀದರ್ ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ನೀಡಲಾಗಿರುವ ತೀರ್ಪು. ಹನುಮಂತ ರೆಡ್ಡಿ ಹಾಗೂ ಈರಮ್ಮ ದಂಪತಿಗೆ, ಪೊರಸರೆಡ್ಡಿ, ಭೀಮರೆಡ್ಡಿ, ರೇವಮ್ಮ ಹಾಗೂ ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದು, ಇವರಲ್ಲಿ ಭೀಮರೆಡ್ಡಿ ಎಂಬುವರು ಮೃತಪಟ್ಟಿದ್ದಾರೆ. ಪತಿ ಹನುಮಂತ ರೆಡ್ಡಿಯೂ ಮೃತಪಟ್ಟಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್, ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅನುಸಾರ ತೀರ್ಪು ನೀಡಿದೆ

from India & World News in Kannada | VK Polls https://ift.tt/F4Tx6nP

Art Of Living: ಬದುಕಿನ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವ ಆಧ್ಯಾತ್ಮಿಕ ಕೇಂದ್ರ-ಮುಖ್ಯಮಂತ್ರಿ ಬೊಮ್ಮಾಯಿ

Art Of Living: ರವಿಶಂಕರ್ ಗುರೂಜಿಯೊಂದಿ ದೀಪಾವಳಿ ಸಂಭ್ರಮದಲ್ಲಿ ಭಾಗಿಯಾದ ಸಿಎಂ ಬಸವರಾಜ ಬೊಮ್ಮಾಯಿ, ಗುಣಮಟ್ಟದ ಜೀವನ ನಡೆಸಲು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಬರಬೇಕು. ಕೆಲವೇ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ ಯುಗಪುರುಷರಾಗುತ್ತಾರೆ. ಅವರಲ್ಲಿ ಒಬ್ಬ ಶ್ರೇಷ್ಟ ಗುರು ಶ್ರೀ ರವಿಶಂಕರ್ ಗುರೂಜಿ ಎಂದರು.

from India & World News in Kannada | VK Polls https://ift.tt/GrAHlkc

Covid cases in Bengaluru: ಬೆಂಗಳೂರಲ್ಲಿ ಇಂದಿಗೂ ಇದ್ದಾರೆ 1687 ಕೋವಿಡ್ ಸೋಂಕಿತರು! ಪ್ರತಿನಿತ್ಯ 50 ಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢ

Covid cases in Bengaluru:ಬೆಂಗಳೂರಲ್ಲಿ ಇಂದಿಗೂ 1687 ಕೋವಿಡ್ ಸೋಂಕಿತ ಸಕ್ರಿಯ ಪ್ರಕರಣಗಳೀವೆ. ಪ್ರತೀ ದಿನ 50ಕ್ಕೂ ಹೆಚ್ಚು ಮೇಲ್ಪಟ್ಟು ಜನರಿಗೆ ಕೋವಿಡ್ ಪಾಸಿಟಿವ್ ದೃಢಪಡುತ್ತಿದೆ. ಈ ಮಧ್ಯೆ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಪತ್ತೆಯಾಗಿದ್ದು, ಎಚ್ಚರದಿಂದಿರುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

from India & World News in Kannada | VK Polls https://ift.tt/MO4rsXN

Hasanamba Utsav | ಜಗನ್ಮಾತೆ ಹಾಸನಾಂಬೆಯ ದರ್ಶನ ಸಂಪನ್ನ: ಅಪ್ಪು ಪುತ್ಥಳಿ ಜೊತೆ ದೇವಿಯ ನಮಿಸಿದ ಅಭಿಮಾನಿಗಳು

ಹಾಸನಾಂಬೆ ದರ್ಶನೋತ್ಸವದ ಕೊನೆಯ ದಿನವಾದ ಬುಧವಾರ ಕರುನಾಡ ರತ್ನ ಪುನೀತ್ ರ ಪುಟ್ಟ ಪುತ್ಥಳಿ ಜೊತೆಗೆ ಆಗಮಿಸಿದ್ದ ಅಭಿಮಾನಿಗಳು ಎಲ್ಲರ ಗಮನಸೆಳೆದರು. ಹಾಸನದ ಗುಡ್ಡೇನಹಳ್ಳಿಯ ನಾಲ್ವರು ಅಭಿಮಾನಿಗಳು ಅಪ್ಪು ಪುತ್ಥಳಿ ಜೊತೆ ದೇವಿಯ ದರ್ಶನ ಪಡೆದ್ರು. ಪುನೀತ್ ರಾಜ್ ಕುಮಾರ್ ರ ಪುಟ್ಟ ಪುತ್ಥಳಿ ತಂದಿದ್ದ ಅಭಿಮಾನಿಗಳಿಗೆ ಪೊಲೀಸರು ವಿಶೇಷ ಕ್ಯೂ ಮೂಲಕ ದರ್ಶನಕ್ಕೆ ಅವಕಾಶ ನೀಡಿದ್ರು. ಕಳೆದ ವರ್ಷ ಅಪ್ಪು ಅಗಲಿಕೆಯ ನೋವಿನಿಂದ ದೇವಿಯ ದರ್ಶನ ಮಾಡಲಿಲ್ಲ. ಈ ಬಾರಿ ಪರಮಾತ್ಮನ ಜೊತೆಗೆ ಅಧಿದೇವತೆಯ ದರ್ಶನ ಮಾಡಿದ್ದಾಗಿ ಸಂತಸ ಹಂಚಿಕೊಂಡ್ರು.

from India & World News in Kannada | VK Polls https://ift.tt/zMWOJ8g

ಮೇಲುಕೋಟೆಯಲ್ಲಿ ತೊಟ್ಟಿಲುಮಡು ಜಾತ್ರೆ ನ. 3ರಂದು

​​ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ರಾಜಮುಡಿ ಕಿರೀಟವನ್ನು ಪೊಲೀಸ್‌ ಭದ್ರತೆಯಲ್ಲಿ ಮೇಲುಕೋಟೆಗೆ ತಂದು ಪಾರ್ವತಿ ಮಂಟಪದ ಬಳಿಯ ಕಾರ್ಯ ಸಿದ್ಧಿ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿರಿಸಿ ಪೂಜೆಮಾಡಿ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದು ಸ್ಥಾನಿಕರು, ಅರ್ಚಕ ಪರಿಚಾರಕರ ಸಮಕ್ಷಮ ಪರಿಶೀಲಿಸಿ ಚೆಲುವನಾರಾಯಣನಿಗೆ ಅಲಂಕರಿಸಿ ಉತ್ಸವ ನೆರವೇರಿಸಲಾಗುತ್ತದೆ

from India & World News in Kannada | VK Polls https://ift.tt/noAd8SI

Deepavali Cracker Injury: ದೀಪಾವಳಿ ಪಟಾಕಿ ಸಿಡಿತದಿಂದ ಹಲವರ ಬಾಳಲ್ಲಿ ಕತ್ತಲೆ: ಹೆಚ್ಚಾಗ್ತಿವೆ ಪಟಾಕಿ ಅವಘಡಗಳು

Deepavali Cracker Injury: ಪಟಾಕಿ ಸಿಡಿತ ಪ್ರಕರಣಗಳು ಮೂರು ದಿನಕ್ಕೆ 66 ದಾಟಿದ್ದು, ನಿಯಮ ಮೀರಿ ಹಸಿರು ಪಟಾಕಿ ಬಳಸದೇ ಇರುವುದರಿಂದ ಚಿಕ್ಕ ಮಕ್ಕಳು ಸೇರಿದಂತೆ ವಯಸ್ಕರ ಬಾಳಿನಲ್ಲೂ ಸಂಪೂರ್ಣ ಕತ್ತಲೆಯಾಗುತ್ತಿದೆ. ಪಟಾಕಿ ಸಿಡಿಸುವ ಮುನ್ನ ಎಚ್ಚರ ಅನುತ್ತಿದ್ದಾರೆ ಕಣ್ಣಿನ ವೈದ್ಯರು

from India & World News in Kannada | VK Polls https://ift.tt/psMLUI2

TRS MLAs | ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಬಿಜೆಪಿ ಗಾಳ?: ಫಾರ್ಮ್‌ಹೌಸ್‌ಗೆ ಸೈಬರಾಬಾದ್‌ ಪೊಲೀಸ್ ದಾಳಿ

TRS MLAs Offered bribe: ಸುಮಾರು 100 ಕೋಟಿ ರೂಪಾಯಿ ಹಣದ ಆಮಿಷವೊಡ್ಡುವ ಮೂಲಕ ಶಾಸಕರನ್ನು ಪಕ್ಷ ತೊರೆಯುವಂತೆ ಮನವೊಲಿಸಲು ಪ್ರಯತ್ನಿಸಿರುವ ಬಗ್ಗೆ ವರದಿಯಾಗಿದೆ. ನಕಲಿ ಐಡಿ ಕಾರ್ಡ್‌ಗಳನ್ನು ಬಳಸಿ ಅವರು ನಗರಕ್ಕೆ ಬಂದಿರುವ ಸುಳಿವು ದೊರೆತಿದೆ. ಆಮಿಷ ಆರೋಪದ ಸಂಬಂಧ ತನಿಖೆ ಕೈಗೊಳ್ಳುವುದಾಗಿ ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ. ಶಾಸಕರಾದ ಪಿ.ರೋಹಿತ್‌ ರೆಡ್ಡಿ, ಭೀರಾಮ್‌ ಹರ್ಷವರ್ಧನ್‌ ರೆಡ್ಡಿ, ಪಿ.ರೇಗಾ ಕಾಂತ ರಾವ್‌, ಗುವ್ವಾಲಾ ಬಾಲರಾಜು ಅವರು ತಮಗೆ ಬಿಜೆಪಿ ಆಮಿಷವೊಡ್ಡುವ ಮೂಲಕ ಸೆಳೆದುಕೊಳ್ಳಲು ಪ್ರಯತ್ನಿಸಿರುವುದಾಗಿ ಆರೋಪಿಸಿದ್ದಾರೆ.

from India & World News in Kannada | VK Polls https://ift.tt/anOYErS

IND vs NED: 'ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ ನೀಡಿ ಈ ಆಟಗಾರನಿಗೆ ಚಾನ್ಸ್‌ ಕೊಡಿ', ಸುನೀಲ್‌ ಗವಾಸ್ಕರ್‌!

Sunil Gavaskar on Hardik pandya: ಪಾಕಿಸ್ತಾನ ವಿರುದ್ದ ಅತ್ಯುತ್ತಮ ಪ್ರದರ್ಶನ ತೋರಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ನೆದರ್ಲೆಂಡ್ಸ್‌ ವಿರುದ್ದದ ಪಂದ್ಯಕ್ಕೆ ವಿಶ್ರಾಂತಿ ನೀಡಬೇಕು ಹಾಗೂ ಅವರ ಬದಲು ಐದನೇ ಕ್ರಮಾಂಕದಲ್ಲಿ ದೀಪಕ್‌ ಹೂಡ ಅವರನ್ನು ಆಡಿಸಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ. ಭಾರತ ಹಾಗೂ ನೆದರ್ಲೆಂಡ್ಸ್‌ ತಂಡಗಳು ಗುರುವಾರ(ಅ.27) ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಹಲವು ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/plTsaLr

T20 World cup:'ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿ': ವಿರಾಟ್‌ ಕೊಹ್ಲಿಗೆ ಶೋಯೆಬ್‌ ಅಖ್ತರ್‌ ಆಗ್ರಹ!

Shoaib Akhtar wants Virat Kohli to retire from T20I: ಪಾಕಿಸ್ತಾನ ವಿರುದ್ದ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಡಿದ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಪಾಕ್‌ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಸಂಪೂರ್ಣ ಶಕ್ತಿಯನ್ನು ಟಿ20 ಕ್ರಿಕೆಟ್‌ಗೆ ಹಾಕುವುದು ಬೇಡ. ಇದೇ ಪ್ರಯತ್ನವನ್ನು ಏಕದಿನ ಕ್ರಿಕೆಟ್‌ನಲ್ಲಿ ಹಾಕಿದರೆ ಅವರು ಮೂರು ಶತಕ ಸಿಡಿಸಬಹುದು ಎಂದು ಶೋಯೆಬ್‌ ಅಖ್ತರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lgnWCtK

ನಾಲ್ಕು 'ಮಹಾ' ಏರ್ಪೋರ್ಟ್ ಗೆ ಸರಕಾರ ಮಾಸ್ಟರ್ ಪ್ಲಾನ್: ಕಲಬುರಗಿ, ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೈಗಾರಿಕಾ ಹೂಡಿಕೆ ಮಾತ್ರವಲ್ಲದೆ, ಕೃಷಿ, ತೋಟಗಾರಿಕೆ ಉತ್ಪನ್ನಗಳ ರಫ್ತು ಚಟುವಟಿಕೆ, ಉನ್ನತ ಶಿಕ್ಷಣದ ಅವಕಾಶಗಳ ವಿಸ್ತರಣೆ ಹಾಗೂ ಮತ್ತಿತರ ಅಭಿವೃದ್ಧಿ ದೃಷ್ಟಿಯಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವನ್ನು ನಿರಾಣಿ ಪ್ರತಿಪಾದಿಸಿದರು. ಈ ಉದ್ದೇಶಕ್ಕೆ ಕಿತ್ತೂರು ಸೂಕ್ತ. ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳನ್ನು ದೇಶೀಯ ವಿಮಾನಯಾನ ಸೇವೆಗೆ ಬಳಸಿಕೊಂಡು ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸುವುದರ ಅನುಕೂಲಗಳ ಕುರಿತು ಅವರು ಸಂವಾದದಲ್ಲಿ ಬೆಳಕು ಚೆಲ್ಲಿದರು.

from India & World News in Kannada | VK Polls https://ift.tt/1h6ZkwK

‘ಕೈ-ತೆನೆ’ ಹಣಾಹಣಿ ಫೈಟ್‌: ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿರುವ ಮುತ್ಯಾಲಮ್ಮ ವಾರ್ಡ್‌ ಚುನಾವಣೆ

ಉಪಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡಿರುವ ಇಬ್ಬರು ನಾಯಕರು ಬೆಳಗ್ಗೆಯಿಂದ ಸಂಜೆವರೆಗೆ ವಾರ್ಡ್‌ ಸಂಚಾರ ಮಾಡುತ್ತಿದ್ದು, ಮನೆ ಮನೆಗೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಕೋರುತ್ತಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಜನಪ್ರಿಯತೆಯನ್ನು ಹೊಂದಿರುವ ಕೊತ್ತೂರು ಮಂಜುನಾಥ್‌ ಅವರು ಈ ಚುನಾವಣೆಯಲ್ಲಿ ಗೆಲ್ಲುವಂತಹವರೇ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಿರುಪಮಾ ಅವರಿಗೆ ಮತ ನೀಡಿದರೆ ನನಗೆ ಮತ ನೀಡಿದಂತೆ ಎನ್ನುವ ಮೂಲಕ ಜನರನ್ನು ಸೆಳೆಯುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ.

from India & World News in Kannada | VK Polls https://ift.tt/ZOgqjds

Bull bullying competition - ಉತ್ತರ ಕರ್ನಾಟಕದ ದೀಪಾವಳಿ ವಿಶೇಷ ನೋಡಾ, ಹೋರಿ ಬೆದರಿಸುವ ಸ್ಪರ್ಧೆಗೆ ರೆಡಿ ಆಖಾಡ !

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದೀಪಾವಳಿ ವೇಳೆ ಹೋರಿ ಬೆದರಿಸುವ ಸ್ಪರ್ಧೆ ಸಂಭ್ರಮದಿಂದ ಆಚರಿಸುತ್ತಾರೆ. ರೈತರು ದೀಪಾವಳಿಯ ಬಲಿಪಾಡ್ಯಮಿ ದಿನದಂದೇ ಇದನ್ನು ಆಚರಿಸುವುದು ವಿಶೇಷವಾಗಿದೆ. ಈ ಸ್ಪರ್ಧೆಗೆ ಎತ್ತುಗಳನ್ನು ಸಿದ್ದಪಡಿಸುವದೂ ಒಂದು ಹಬ್ಬ ದಂತೆ ನಡೆಯುತ್ತದೆ.

from India & World News in Kannada | VK Polls https://ift.tt/kFNreCu

ಡಾ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ವಿರುದ್ಧ ಆರೋಪ: ಸೋಮನಾಥ ನಾಯಕ್‌ ಬಂಧನದ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ 'ಸುಪ್ರೀಂ'

K Somanath Nayak case: ಸೋಮನಾಥ ನಾಯಕ್‌ ಬಂಧನಕ್ಕೆ 2022ರ ಮೇ 5ರಂದು ಹೈ ಕೋರ್ಟ್‌ ಹಸಿರು ನಿಶಾನೆ ನೀಡಿತ್ತು. ಈ ಆದೇಶದ ವಿರುದ್ಧ ಸೋಮನಾಥ್‌ ನಾಯಕ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೋಮನಾಥ ನಾಯಕ್‌ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಎರಡೂ ಕಡೆಯ ವಾದಗಳನ್ನು ಆಲಿಸಿ ಅ.19ರಂದು ಕರ್ನಾಟಕ ಹೈಕೋರ್ಟ್‌ ಹಾಗೂ ಬೆಳ್ತಂಗಡಿ ನ್ಯಾಯಾಲಯಗಳು ನೀಡಿದ ತೀರ್ಪುಗಳಿಗೆ ತಾನು ಮಧ್ಯಪ್ರವೇಶಿಸುವ ಯಾವುದೇ ಕಾರಣ ಕಂಡು ಬರುವುದಿಲ್ಲ ಎಂದು ತಿಳಿಸಿದೆ.

from India & World News in Kannada | VK Polls https://ift.tt/3TdQ4lW

T20 World cup: 'ನಿಮ್ಮನ್ನು ನೋಡಿ ನಗು ಬರುತ್ತಿದೆ' : ಕೊಹ್ಲಿಯನ್ನು ಟೀಕಿಸಿದ್ದವರಿಗೆ ತಿರುಗೇಟು ನೀಡಿದ ಬ್ರೆಟ್‌ ಲೀ!

Brett Lee on Virat Kohli: ಪಾಕಿಸ್ತಾನ ವಿರುದ್ದ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌ 12 ರ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್‌ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಹಿಂದೆ ಸತತ ವೈಫಲ್ಯ ಅನುಭವಿಸುತ್ತಿದ್ದ ವೇಳೆ ವಿರಾಟ್‌ ಕೊಹ್ಲಿಯನ್ನು ಹಲವರು ಟೀಕಿಸಿದ್ದರು. ಆದರೆ, ವಿರಾಟ್‌ ಕೊಹ್ಲಿಯಂಥ ಆಟಗಾರನನ್ನು ಟೀಕಿಸುವಾಗ ಅವರ ದಾಖಲೆಯನ್ನು ಒಮ್ಮೆ ನೋಡಬೇಕಾಗುತ್ತದೆ ಎಂದು ಆಸೀಸ್ ದಿಗ್ಗಜ ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/0CmryMT

ದೀಪಾವಳಿ ಸಡಗರ: ಎರಡೇ ದಿನದಲ್ಲಿ 25,000 ಕೋಟಿ ಚಿನ್ನ ಮಾರಾಟ

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಧನ್ ತೇರಾಸ್ ಸಂದರ್ಭದಲ್ಲಿ ಶೇ. 35ರಷ್ಟು ಹೆಚ್ಚು ಚಿನ್ನ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ನವೆಂಬರ್‌15ರಿಂದ ಡಿಸೆಂಬರ್‌15 ರವರೆಗಿನ ಮದುವೆ ಸೀಸನ್‌ಗಾಗಿಯೂ ಜನರು ಆಭರಣಗಳನ್ನು ಖರೀದಿಸಿದ್ದಾರೆ. ಇದೂ ಮಾರಾಟ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಈ ಬಾರಿ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ಗಳಲ್ಲಿವಹಿವಾಟು ಶೇ.35-40ರಷ್ಟು ಮಾರಾಟ ಹೆಚ್ಚಳವಾಗಿದೆ.. ದೇಶದ ಅತಿದೊಡ್ಡ ಚಿನ್ನದ ಗ್ರಾಹಕ ಪ್ರದೇಶವಾಗಿರುವ ದಕ್ಷಿಣ ಭಾರತದಲ್ಲಿ ಸರಳ ಚಿನ್ನದ ಆಭರಣಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇತ್ತು ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

from India & World News in Kannada | VK Polls https://ift.tt/zePGWX5

ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಲು ಹೊಸ ಪ್ರಯೋಗ: ಬೆಳ್ತಂಗಡಿಯಲ್ಲಿ 'ಮಗುವಿಗೊಂದು ಪುಸ್ತಕ ನೀಡಿ' ಅಭಿಯಾನ

ನವೆಂಬರ್‌ನಲ್ಲಿ ರಾಜ್ಯೋತ್ಸವ ಆಚರಿಸುವ ಸಂದರ್ಭ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ರಾಜ್ಯೋತ್ಸವ ನೆನಪಿನಲ್ಲಿ ಮಕ್ಕಳಿಗೆ ಓದಿಗೆ ಪ್ರೇರಣೆ ನೀಡುವ ಈ ಕಾರ್ಯಕ್ರಮದಲ್ಲಿ ಶಾಲೆಗಳಲ್ಲಿ ಕಥೆ, ಕವನ ರಚಿಸುವ, ಓದುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಇಲ್ಲಿ ಯಾವುದೇ ಸ್ಪರ್ಧೆ ಇರುವುದಿಲ್ಲ. ಓದಿನ ಆಸಕ್ತಿ ಬೆಳೆಸುವುದೇ ಪ್ರಮುಖ ಧ್ಯೇಯವಾಗಿದೆ. ನವೆಂಬರ್‌ ತಿಂಗಳಲ್ಲಿ ಪರೀಕ್ಷೆ ಮೊದಲಾದ ಚಟುವಟಿಕೆಗಳು ಇಲ್ಲದ ಕಾರಣ ಇದು ಮಕ್ಕಳಿಗೂ ಅನುಕೂಲವಾಗಲಿದೆ. ಅ.28ರಂದು ಮಧ್ಯಾಹ್ನ 2.30ಕ್ಕೆ ಶಾಸಕ ಹರೀಶ್‌ ಪೂಂಜ ಬೆಳ್ತಂಗಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಿದ್ದಾರೆ.

from India & World News in Kannada | VK Polls https://ift.tt/5UIQRZH

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ: ಅಭಿನಂದನೆಗಳ ಮಹಾಪೂರ

ಹೆಗ್ಗಡೆಯವರ ಬೀಡಿನಲ್ಲಿ ಊರಿನ ನಾಗರಿಕರು, ನೌಕರರು, ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಭಿಮಾನಿ ಭಕ್ತರು ಡಾ. ವೀರೇಂದ್ರ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಫಲ, ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಆಚರಣೆ ಅಂಗವಾಗಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಬಸದಿಯಲ್ಲಿ ವಿಶೇಷ ಪೂಜೆ ನಡೆಯಿತು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಅಂಗವಾಗಿ ಸಂಜೆ ಮಹೋತ್ಸವ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು. ಹೆಗ್ಗಡೆಯವರ ಬೀಡಿನಿಂದ ಕ್ಷೇತ್ರದ ಸಂಪ್ರದಾಯದಂತೆ ಭವ್ಯ ಮೆರವಣಿಗೆ ಮೂಲಕ ಸಭಾಭವನದವರೆಗೆ ಗಣ್ಯರನ್ನು ಕರೆದೊಯ್ಯಲಾಯಿತು.

from India & World News in Kannada | VK Polls https://ift.tt/a9mUxAS

Hasanamba Temple | ಐದು ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಾಸನಾಂಬ ದರ್ಶನ: ಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ದರ್ಶನ ಇಲ್ಲ

long queues on Hasanamba temple: ಇದುವರೆಗೆ ಐದು ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ವಿಶೇಷ ದರ್ಶನ, ಲಾಡು ಮಾರಾಟದಿಂದ 1.50 ಕೋಟಿ ರೂ.ಗೂ ಹೆಚ್ಚಿನ ಆದಾಯ ಬಂದಿದೆ. ಸಚಿವ ಶ್ರೀರಾಮುಲು ಅವರು ಪತ್ನಿ ಹಾಗೂ ಆಪ್ತರೊಂದಿಗೆ ಆಗಮಿಸಿ ದರ್ಶನ ಪಡೆದು ಇಲ್ಲಿನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್‌, ನ್ಯಾಯಾಧೀಶರು, ಚಿತ್ರನಟ ವಶಿಷ್ಟಸಿಂಹ, ಅರೇಮಾದನಹಳ್ಳಿ ಮಠದ ಶ್ರೀಶಿವಸುಜ್ಞಾನ ಪ್ರಭು ಸ್ವಾಮೀಜಿ ಮತ್ತಿತರರು ಆಗಮಿಸಿ ದರ್ಶನ ಪಡೆದರು.

from India & World News in Kannada | VK Polls https://ift.tt/4gma7Pw

PM Modi Congratulates Rishi Sunak | ಬ್ರಿಟನ್‌ಗೆ ನಾಲ್ಕು ತಿಂಗಳಲ್ಲಿ 3ನೇ ಪ್ರಧಾನಿ: ರಿಷಿ ಸುನಕ್‌ಗೆ ಅಭಿನಂದನೆಗಳ ಮಹಾಪೂರ

UK PM Rishi Sunak: ಬ್ರೆಕ್ಸಿಟ್‌ ನಿರ್ವಹಣೆ ವೈಫ್ಯದಿಂದ ಸ್ವಪಕ್ಷೀಯರ ವಿರೋಧಕ್ಕೆ ಒಳಗಾಗಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಆಯ್ಕೆಯಾದ ಲಿಸ್‌ ಟ್ರಸ್‌ ಸಹ ದೇಶದ ಆರ್ಥಿಕ ಪರಿಸ್ಥಿತಿ ನಿಯಭಾಯಿಸಲಾಗದೆ ರಾಜೀನಾಮೆ ನೀಡಿದರು. ಈಗ ರಿಷಿ ಸುನಕ್‌ ಬ್ರಿಟನ್‌ ಜನತೆಯ ಪಾಲಿಗೆ ಭರವಸೆಯ ಬೆಳಕಾಗಿ ಹೊರಹೊಮ್ಮಿದ್ದಾರೆ.

from India & World News in Kannada | VK Polls https://ift.tt/BVuSHOC

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ

ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪದಗ್ರಹಣ ಸಮಾರಂಭ ​ಅ.26 ರಂದು ದಿಲ್ಲಿಯಲ್ಲಿ ನಡೆಯಲಿದೆ. ಅದಾಗಿ, ಸುಮಾರು 2 ವಾರಗಳ ವಿರಾಮದ ಬಳಿಕ ನ. 2ನೇ ವಾರದಲ್ಲಿಬಸ್‌ ಯಾತ್ರೆ ಹೊರಡಲಿದ್ದಾರೆ. ಪ್ರತಿ ತಂಡದಲ್ಲಿ15 ಮುಂಚೂಣಿ ನಾಯಕರು ಇರಲಿದ್ದಾರೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಯೋಜನೆಯಿದೆ. ಡಿಕೆಶಿ ನೇತೃತ್ವದ ತಂಡ ದಕ್ಷಿಣ ಕರ್ನಾಟಕದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರೆ, ಸಿದ್ದರಾಮಯ್ಯನವರ ತಂಡ ಉತ್ತರ ಕರ್ನಾಟಕ ಕ್ಷೇತ್ರಗಳಲ್ಲಿ ಯಾತ್ರೆ ಮಾಡಲಿದೆ.

from India & World News in Kannada | VK Polls https://ift.tt/YO8WxnA

ಕಾರ್ಮಿಕರ ಬಸ್‌ ಪಾಸ್‌ಗೆ ಭಾರಿ ಬೇಡಿಕೆ: 1 ಲಕ್ಷ ಪಾಸ್‌ ಮಾತ್ರ ಪೂರೈಕೆ, ಫಲಾನುಭವಿಗಳ ಆಕ್ರೋಶ

ರಾಜ್ಯದಲ್ಲಿ ಸುಮಾರು 30 ಲಕ್ಷ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ ಕೇವಲ 1 ಲಕ್ಷ ಮಂದಿಗೆ ಮಾತ್ರ ಪಾಸ್‌ ನೀಡಿರುವುದು ಕಾರ್ಮಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. 2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ನೀಡುವ ಘೋಷಣೆ ಮಾಡಲಾಗಿತ್ತು. ಅರ್ಜಿ ಸ್ವೀಕಾರ ಆರಂಭಗೊಂಡಾಗ ಹುಬ್ಬಳ್ಳಿ ನಗರವೊಂದರಲ್ಲೇ ಅತೀ ಹೆಚ್ಚಿನ 12 ಸಾವಿರ ಕಾರ್ಮಿಕರು ಆನ್‌ಲೈನ್‌ ಅರ್ಜಿ ಸಲ್ಲಿಸಿ ಪಾಸ್‌ ಪಡೆದಿದ್ದಾರೆ.

from India & World News in Kannada | VK Polls https://ift.tt/VRcXzQl

Salman Rushdie attacked - ಒಂದು ಕಣ್ಣಿನ ದೃಷ್ಟಿ, ಒಂದು ಕೈ ಸ್ವಾಧೀನ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ

ಇದೇ ವರ್ಷ ಆಗಸ್ಟ್ 17ರಂದು ರಶ್ದಿಯವರು ನ್ಯೂಯಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮಾರಂಭವೊಂದರಲ್ಲಿ ಮುಂಬೈ ಮೂಲದ ರಶ್ದಿ ಭಾಷಣ ಮಾಡುತ್ತಿದ್ದಾಗ, ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ನುಗ್ಗಿ ಇವರ ಮೇಲೆ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿ ದೀರ್ಘಕಾಲದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಕಣ್ಣು, ಕೈಗಳ ನರಗಳು, ಪಿತ್ತಕೋಶ ಮುಂತಾದ ಭಾಗಗಳ ಮೇಲೆ ಗಾಯಗಳಾಗಿದ್ದರಿಂದ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರು ಒಂದು ಕಣ್ಣು ಹಾಗೂ ಒಂದು ಕೈಯ್ಯಿನ ಸ್ವಾಧೀನ ಕಳೆದುಕೊಂಡಿರುವುದಾಗಿ ಅವರ ವಕ್ತಾರರಾದ ಆ್ಯಂಡ್ರ್ಯೂ ತಿಳಿಸಿದ್ದಾರೆ.

from India & World News in Kannada | VK Polls https://ift.tt/DqX04Ri

ರಾಜ್ಯದಲ್ಲಿ ಡೆಂಗ್ಯೂ ಡಂಗುರ: ಎಂಟು ತಿಂಗಳಲ್ಲಿ ಏಳು ಸಾವಿರಕ್ಕೂ ಹೆಚ್ಚು ಪ್ರಕರಣ, ನಾಲ್ವರು ಸಾವು

ರಾಜ್ಯದಲ್ಲಿ ಮಲೇರಿಯಾ, ಚಿಕನ್‌ಗುನ್ಯಾದಂತಹ ಕಾಯಿಲೆಗಳು ಸಾಮಾನ್ಯವಾಗಿ ಇದ್ದೇ ಇದೆ. ಆದರೆ, ಇದರ ಜಾಗದಲ್ಲಿ ಡೆಂಗ್ಯೂ ಕೂಡ ತನ್ನ ಡಂಗುರ ಬಾರಿಸುವ ಕೆಲಸ ಮಾಡುತ್ತಿದೆ. ಮುಖ್ಯವಾಗಿ ಬೆಂಗಳೂರು ನಗರದಲ್ಲಿ 1,300 ಡೆಂಗ್ಯೂ ಪ್ರಕರಣಗಳು ಇದ್ದರೆ ಮೈಸೂರು-700, ಉಡುಪಿಯಲ್ಲಿ 505, ಚಿತ್ರದುರ್ಗ 356, ದಕ್ಷಿಣ ಕನ್ನಡದಲ್ಲಿ 330 ಪ್ರಕರಣಗಳು ಈಗ ಸದ್ಯಕ್ಕೆ ಇದೆ. ಆದರೆ, ಈ ಪ್ರಕರಣಗಳು ಕಳೆದ ಆರು ವರ್ಷಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಕರಣಗಳು ಎನ್ನುವುದು ಇಲಾಖೆಯ ಮಾತು.

from India & World News in Kannada | VK Polls https://ift.tt/VUSuyBF

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ಗೆ ಪಂಚರತ್ನ ಯಾತ್ರೆ ಬಲ: ಐದೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್‌

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಕೆ.ಪಿ.ಬಚ್ಚೇಗೌಡ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಬಿ.ಎನ್‌.ರವಿಕುಮಾರ್‌, ಚಿಂತಾಮಣಿ ಕ್ಷೇತ್ರಕ್ಕೆ ಹಾಲಿ ಶಾಸಕ ಕೆ.ಎಂ.ಕೃಷ್ಣಾರೆಡ್ಡಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ನರಸಿಂಹಮೂರ್ತಿ, ಬಾಗೇಪಲ್ಲಿಕ್ಷೇತ್ರಕ್ಕೆ ಡಿ.ಜೆ.ನಾಗರಾಜರೆಡ್ಡಿ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಪಂಚರತ್ನ ಯೋಜನೆಗಳ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಮೈಸೂರಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಬಲವಾಗೇ ಇದೆ. ಇದರ ಜತೆಗೆ ಅಭ್ಯರ್ಥಿಗಳ ಹೆಸರೂ ಫೈನಲ್‌ ಆಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಭದ್ರವಾಗಿ ಪಕ್ಷವನ್ನು ಸಂಘಟಿಸಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

from India & World News in Kannada | VK Polls https://ift.tt/q8WhKAr

ಪೋಸ್ಟರ್ ಅಂಟಿಸಿ ವಿರೂಪಗೊಂಡಿದ್ದ ಬಿನ್ನಿಪೇಟೆಯ ಗೋಡೆಗೆ ಮತ್ತೆ ಬಣ್ಣ ಬಳಿದ ವಸಿಷ್ಠ ಸಿಂಹ

ತಮ್ಮ ಅಭಿಮಾನಗಳು ಹುಟ್ಟು ಹಬ್ಬದ ಪೋಷ್ಟರ್ ಅಂಟಿಸುವ ಮೂಲಕ ವಿರೂಪಗೊಳಿಸಿದ್ದ ಬಿನ್ನಿಪೇಟೆಯ ಗೋಡೆಗೆ ಸ್ವತಃ ವಸಿಷ್ಠಸಿಂಹ ಬಣ್ಣ ಬಳಿಯುವ ಮೂಲಕ ಹೊಸ ಮಾದರಿ ಹಾಕಿಕೊಟ್ಟಿದ್ದಾರೆ. ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

from India & World News in Kannada | VK Polls https://ift.tt/OqbX2H1

ಅಧಿಕಾರಕ್ಕೆ ಬಂದರೆ 6000 ಗ್ರಾಪಂಗಳಲ್ಲೂ30 ಹಾಸಿಗೆ ಆಸ್ಪತ್ರೆ ನಿರ್ಮಿಸ್ತೇವೆ: ಎಚ್.ಡಿ.ಕುಮಾರಸ್ವಾಮಿ

ಸರಕಾರದ ಆಡಳಿತ ಜನತೆಯಿಂದ ನಡೆಯಬೇಕು. ವಿಧಾನಸೌಧದಿಂದ ನಡೆಯಬಾರದು. ಗ್ರಾಮೀಣ ಪ್ರದೇಶದಿಂದ ಸರಕಾರ ನಡೆಯುವ ವಿನೂತನ ರೀತಿಯಲ್ಲಿಸಮಸ್ಯೆಗೆ ಪರಿಹಾರ ಕೊಡುವ ನಮ್ಮ ಚಿಂತನೆ ಇದೆ. ನಮ್ಮ ಪಂಚರತ್ನ ಘೋಷಣೆಗಳಲ್ಲಿಸರಕಾರದ ವತಿಯಿಂದ ಪ್ರತಿ ಕುಟುಂಬಕ್ಕೆ ಉಚಿತವಾದ ಶಿಕ್ಷಣವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಇಂಗ್ಲಿಷ್‌ ಮಾಧ್ಯಮದಲ್ಲಿನೀಡುವುದು. ಪ್ರತಿ ಕುಟುಂಬಕ್ಕೆ ಒಂದು ಮನೆ ನಿರ್ಮಿಸಿಕೊಡುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

from India & World News in Kannada | VK Polls https://ift.tt/cE4lSyn

Bharat Jodo Yatra | ಕಾಂಗ್ರೆಸ್ ಪಾದಯಾತ್ರೆ: ಕರ್ನಾಟಕದಲ್ಲಿ ಕೊನೆಯ ದಿನ ರಾಹುಲ್ ನಡಿಗೆ

ರಾಯಚೂರಿನ‌ ಯರಮರಸ್ ನಿಂದ ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ. ಯರಮರಸ್ ನಿಂದ ಅವರು ಕರ್ನಾಟಕ ಗಡಿ ದಾಟಿ ತೆಲಂಗಾಣ ತೆರಳಲಿದ್ದಾರೆ. ರಾಹುಲ್‌ ಗಾಂಧಿ ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಎಸ್. ಆಂಜನೇಯ, ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದಾರೆ. ರಾಯಚೂರಿನಲ್ಲಿ ರಾಹುಲ್ ಪಾದಯಾತ್ರೆಗೆ ಉತ್ತಮ ಸ್ಪಂದನೆ‌ ಸಿಗುತ್ತಿದೆ. ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದಾರೆ. ರಾಜ್ಯ ನಾಯಕರು ಗಡಿ ಭಾಗದವರೆಗೂ ರಾಹುಲ್ ಜೊತೆ ಹೆಜ್ಜೆ ಹಾಕಿ ಬೀಳ್ಗೊಡಲಿದ್ದಾರೆ.

from India & World News in Kannada | VK Polls https://ift.tt/rRNMZ7D

75 ವರ್ಷವಾದರೂ ಡಾಂಬರ್‌ ಕಾಣದ ರಸ್ತೆ: ಜಾಲಿಹಳ್ಳಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

ಜಾಲಿಹಳ್ಳಿ ಗ್ರಾಮದಲ್ಲಿ 45 ಕುಟುಂಬಗಳು ವಾಸವಿದ್ದು, ಅದರಲ್ಲೂ ಶೇ. 90ರಷ್ಟು ಪರಿಶಿಷ್ಟ ಪಂಗಡದವರೇ ವಾಸವಾಗಿದ್ದಾರೆ. ಈ ಗ್ರಾಮದಲ್ಲಿ ಎಸ್ಸಿಪಿಟಿಎಸ್ಪಿ ಯೋಜನೆಯಡಿಯೂ ಯಾವುದೇ ಕಾಮಗಾರಿ ಮಾಡಿಲ್ಲ. ಡಾಂಬರ್‌ ಇರಲಿ ಕನಿಷ್ಠ ಪಕ್ಷ ಜನರು ಸಂಚರಿಸಲು ಇರುವ ರಸ್ತೆಯನ್ನಾದರೂ ಸರಿಪಡಿಸಿ ಎಂದರೂ ಇತ್ತ ಗಮನಹರಿಸುತ್ತಿಲ್ಲ. ಇದೀಗ ಮಳೆಗಾಲ ಗ್ರಾಮದ ಒಂದೆಡೆ ಜಯಮಂಗಲಿ ನದಿ ತುಂಬಿ ಮತ್ತೊಂದೆಡೆ ಸಿಂಗನಹಳ್ಳಿ ಕೆರೆ ಕೋಡಿ ನೀರು ರಸ್ತೆ ಮಧ್ಯೆ ರಭಸವಾಗಿ ಹರಿಯುತ್ತಿದೆ. ಇದರ ನಡುವೆ ಗ್ರಾಮದಿಂದ ಜಾಲಿಹಳ್ಳಿವರೆಗೂ 2 ಕಿಲೋ ಮೀಟರ್‌ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿವೆ.

from India & World News in Kannada | VK Polls https://ift.tt/Ei6DwC5

BBMP Road Repair | 4 ಡಾಂಬರು ಘಟಕ ಬಾಡಿಗೆಗೆ ಪಡೆದ ಪಾಲಿಕೆ: ರಸ್ತೆ ಗುಂಡಿ ದುರಸ್ತಿಗೆ ಸಮರೋಪಾದಿಯ ಕ್ರಮ

Pothole Roads on BBMP: ರಸ್ತೆ ಗುಂಡಿ ದುರಸ್ತಿ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ‘ವಿಜಯ ಕರ್ನಾಟಕ’ದೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ (Tushar Girinath) ಅವರು ಮಾತನಾಡಿದರು. ಬಿಬಿಎಂಪಿಯ ಕಣ್ಣೂರು ಡಾಂಬರು ಮಿಶ್ರಣ ಘಟಕದಲ್ಲಿ ತಯಾರಾಗುತ್ತಿದ್ದ ಡಾಂಬರು ಬಳಸಿ ಗುಂಡಿಗಳನ್ನು ಮುಚ್ಚುತ್ತಿದ್ದೆವು. ಇದೀಗ ಇನ್ನೂ ಬಾಡಿಗೆ ರೂಪದಲ್ಲಿ ನಾಲ್ಕು ಖಾಸಗಿ ಡಾಂಬರು ಘಟಕಗಳನ್ನು ಪಡೆಯಲಾಗಿದೆ.

from India & World News in Kannada | VK Polls https://ift.tt/sMTXemb

ಮಂಡ್ಯ | ಚುನಾವಣೆ ಸಮಯದಲ್ಲಿ ವಿಡಿಯೋ ಬಿಡುಗಡೆ: ಸಂಸದೆ ಸುಮಲತಾಗೆ ಜೆಡಿಎಸ್ ಶಾಸಕನ ತಿರುಗೇಟು‌

MLA Ravindra Srikantaiah challenge: 'ಹೊಟೇಲ್‌ನಲ್ಲಿ ದಿಲೀಪ್ ಬಿಲ್ಡ್ ಕಾನ್‌ನ ಅಧಿಕಾರಿಯ ಕರೆಸಿ ಇವರ ಸ್ವಂತದವರು ಮಾತನಾಡಿರುವ ವಿಡಿಯೊ ಕಳುಹಿಸಿ ಕೊಡಲಿ. ಪೆನ್‌ಡ್ರೈವ್‌ಗೆ ಹಾಕಿ ಕಳುಹಿಸಿ ಕೊಡಲಿ ನಾನು ಆ ವಿಡಿಯೊವನ್ನು ಹಳ್ಳಿಗಳ ಜನರಿಗೂ ಅದು ಗೊತ್ತಾಗಲಿ. ರವೀಂದ್ರ ಏನು ಎಂದು ತೀರ್ಮಾನ ಮಾಡೋರು ಜನ, ಅವರಲ್ಲ. ನನ್ನ ಕ್ಷೇತ್ರದಲ್ಲಿ ಕೆಲಸ ಆಗ್ತಿದಿಯಾ ಇಲ್ಲವಾ ಎಂದು ಸರ್ಟಿಫಿಕೇಟ್ ಕೊಡೊವರು ಜನ. ಇವರು ನನಗೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ' ಎಂದು ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ಹೇಳಿದ್ದಾರೆ.

from India & World News in Kannada | VK Polls https://ift.tt/7Pf1MN3

T20 World Cup: ಶಕಿಬ್ ಅಲ್‌ ಹಸನ್‌ರನ್ನು ಹಿಂದಿಕ್ಕಿ ವಿಶ್ವ ದಾಖಲೆ ಬರೆದ ಟಿಮ್‌ ಸೌಥಿ!

Tim Southee went past Shakib Al Hasan: ಆಸ್ಟ್ರೇಲಿಯಾ ವಿರುದ್ಧ ಮಾರಕ ದಾಳಿ ನಡೆಸುವ ಮೂಲಕ ನ್ಯೂಜಿಲೆಂಡ್‌ ತಂಡದ 89 ರನ್‌ಗಳ ಭರ್ಜರಿ ಗೆಲುವಿಗೆ ಫಾಸ್ಟ್‌ ಬೌಲರ್‌ ಟಿಮ್‌ ಸೌಥಿ ನೆರವಾದರು. ಅಂದಹಾಗೆ ಈ ಪಂದ್ಯದಲ್ಲಿ ಬೌಲ್‌ ಮಾಡಿದ ಕೇವಲ 2.1 ಓವರ್‌ಗಳಿಗೆ ಕೇವಲ 6 ರನ್‌ ನೀಡಿ ಪ್ರಮುಖ 3 ವಿಕೆಟ್‌ ಕಬಳಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎನಿಸಿಕೊಳ್ಳುವ ಮೂಲಕ ಸೌಥಿ ವಿಶ್ವ ದಾಖಲೆ ಬರೆದರು. ಇದರೊಂದಿಗೆ ಬಾಂಗ್ಲಾದೇಶ ನಾಯಕ ಶಕಿಬ್‌ ಅಲ್‌ ಹಸನ್ ಅವರನ್ನು ಹಿಂದಿಕ್ಕಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/VzHMb0r

ಈಡಿಗ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗೆ ಕುದ್ರೋಳಿಯಿಂದ ಬೆಂಗಳೂರಿಗೆ ಪಾದಯಾತ್ರೆ: ಪ್ರಣವಾನಂದ ಶ್ರೀ ಘೋಷಣೆ

​Pranavananda Swamiji- ​ಈಗ ಈಡಿಗ ಸಮುದಾಯ ಪ್ರವರ್ಗ 2ರಲ್ಲಿದೆ. ಮೀಸಲಾತಿ ಹೆಚ್ಚಿಸಿದರೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಹೀಗಾಗಿ ನಮ್ಮನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಇಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈಡಿಗ ಸಮುದಾಯದವರು ಇದ್ದಾರೆ. ಸಮುದಾಯದ ಸಚಿವ ಕೋಟ ಶ್ರೀನಿವಾಸ ಹಾಗೂ ಸುನೀಲ್ ಕುಮಾರ ಸೇರಿದಂತೆ ಹಲವಾರು ಶಾಸಕರು ಸಮುದಾಯದ ಸಮಸ್ಯೆಗಳನ್ನು ಪರಿಹಾರ ಮಾಡುವ ರಾಜಕೀಯ ಇಚ್ಛಾಶಕ್ತಿ ಅವರು ಪ್ರಾಮಾಣಿಕವಾಗಿ ತೋರಿಸುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಪ್ರಣವಾನಂದ ಶ್ರೀಗಳು ಹೇಳಿದರು.

from India & World News in Kannada | VK Polls https://ift.tt/CKH4BLZ

ಚನ್ನಪಟ್ಟಣದಲ್ಲಿ ಡಯಾಲಿಸಿಸ್‌ ಕೇಂದ್ರ ಬಂದ್‌, ರೋಗಿಗಳ ಪರದಾಟ: ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರಗಳು ಸ್ಥಗಿತ

ಡಯಾಲಿಸಿಸ್‌ ಕೇಂದ್ರವನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಆರ್‌ಎಸ್‌ ಎಂಬ ಸಂಸ್ಥೆಯು ಡಯಾಲಿಸಿಸ್‌ ಕೇಂದ್ರದ ನಿರ್ವಹಣೆಯ ಹೊಣೆಯನ್ನು ಹೊತ್ತಿದೆ. ಡಯಾಲಿಸಿಸ್‌ ಕೇಂದ್ರದಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ, ಪಿಎಫ್‌ ಸೇರಿದಂತೆ ಯಾವುದೇ ನ್ಯಾಯೋಚಿತ ಸೌಲಭ್ಯವನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿರುವ ಡಯಾಲಿಸಿಸ್‌ ಕೇಂದ್ರಗಳ ನೌಕರರು, ಕೇಂದ್ರವನ್ನು ಬಂದ್‌ ಮಾಡಿದ್ದಾರೆ. ಡಯಾಲಿಸಿಸ್‌ ಮಾಡಿಸುವ ಉದ್ದೇಶದಿಂದ ಆಸ್ಪತ್ರೆಗೆ ಬಂದ ರೋಗಿಗಳು ಕೇಂದ್ರ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಮುಂದೆ ಮಲಗಿ ಪರದಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

from India & World News in Kannada | VK Polls https://ift.tt/7YuAy2F

Sa Ra Mahesh | 2023ರಲ್ಲಿ ಜನ ಎಂದೂ ನನ್ನ ಪರ ಇದ್ದೇ ಇರುತ್ತಾರೆ, ಕೈಬಿಡುವುದಿಲ್ಲ: ಸಾ.ರಾ.ಮಹೇಶ್‌

Sa Ra Mahesh Speech | ಮೈಸೂರಿನ ಕೃಷ್ಣರಾಜ ಪಟ್ಟಣದ ಸಾಯಿ ಸಭಾಂಗಣದಲ್ಲಿ ನಡೆದ ಜಾತ್ಯಾತೀತ ದಳ ಬೆಂಬಲಿತ ಕುರುಬ ಸಮಾಜದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿನನ್ನ 15 ವರ್ಷದ ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರವಿರಲಿ, ನನ್ನ ವೈಯುಕ್ತಿಕ ಕೊಡುಗೆ ನೀಡುವ ವಿಚಾರವಿರಲಿ ಯಾವುದೆ ಸಂದರ್ಭದಲ್ಲಿ ಜಾತಿ, ರಾಜಕೀಯ ಮಾಡಿಲ್ಲ ಎಂದ ಶಾಸಕರು, ರಾಜಕಾರಣ ಎಂಬುದು ಬೇರೆಯವರ ಬದುಕು ಕಟ್ಟಿಕೊಡಲು ಮಾಡಬೇಕೆ ವಿನಃ ರಾಜಕಾರಣಿಗಳು ತಮ್ಮ ಬದುಕು ಕಟ್ಟಿಕೊಳ್ಳುವುದಲ್ಲ ಎಂದರು.

from India & World News in Kannada | VK Polls https://ift.tt/capiEnx

SL Bhyrappa visits Hasanamba Temple | ಹಾಸನಾಂಬ ದೇವಿ ದರ್ಶನ ಪಡೆದ ಸಾಹಿತಿ ಎಸ್‌.ಎಲ್‌.ಭೈರಪ್ಪ

Hasanamba Temple: ಕಳೆದ ಮೂರು ದಿನದಿಂದ ನಿತ್ಯ 30ರಿಂದ 40 ಸಾವಿರ ಭಕ್ತರು ದೇವಿ ದರ್ಶನಕ್ಕೆ ಬರುತ್ತಿದ್ದು, ರಾಜಕಾರಣಿಗಳು, ಗಣ್ಯರು, ನ್ಯಾಯಾಧೀಶರು, ಮಠಾಧೀಶರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ (SL Bhyrappa), ಶಿವಗಂಗೆ ಬೆಟ್ಟದ ಮಲಯಮುನಿ ಶಾಂತವೀರ ಸ್ವಾಮೀಜಿ, ಬಸವ ಕಲ್ಯಾಣ ಮಠದ ಸದಾಶಿವ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುನಂದಾ ಪಾಲನೇತ್ರ ಮತ್ತಿತರರು ಆಗಮಿಸಿ ದರ್ಶನ ಪಡೆದರು.

from India & World News in Kannada | VK Polls https://ift.tt/XE58QLa

Lokayukta traps Bescom Engineer: ಲೈನ್‌ ಕ್ಲಿಯರೆನ್ಸ್‌ಗಾಗಿ 50 ಸಾವಿರ ರೂ. ಲಂಚ, ಬೆಸ್ಕಾಂ ಎಂಜಿನಿಯರ್‌ ಲೋಕಾ ಬಲೆಗೆ

Lokayukta Raid in Bengaluru: ಒಂದು ತಿಂಗಳ ಹಿಂದೆ ಗುತ್ತಿಗೆದಾರ ಕುಮಾರ್‌ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಾದ ಎಲ್‌ಸಿ ಪಡೆಯಲು ಬೆಸ್ಕಾಂ (Bescom) ಕಚೇರಿಗೆ ಮನವಿ ಸಲ್ಲಿಸಿದ್ದರು. ಎಲ್‌ಸಿ ನೀಡಲು ಸುತಾರಾಂ ಒಪ್ಪದ ಎಇ ನಾಗರಾಜು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇದರಿಂದ ಬೇಸತ್ತ ಕುಮಾರ್‌, ಎಇ ಲಂಚ ಬೇಡಿಕೆ ಆಡಿಯೋ ಸಮೇತ ಅ.20ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

from India & World News in Kannada | VK Polls https://ift.tt/EpwxzgN

ಮೂವರು ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ಕುಟುಂಬ ಸದಸ್ಯರ ಹೆಸರಿನಲ್ಲಿ 11 ಅಕೌಂಟ್‌ಗಳಲ್ಲಿ ಒಟ್ಟು 59 ಲಕ್ಷ ರೂ ಪತ್ತೆ

Lokayukta Raid in Mysuru: ಮಡಿಕೇರಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಕೆಲಸ ಮಾಡುತ್ತಿರುವ ಡಿ. ನಾಗರಾಜ್‌ ಅವರ ಎರಡು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಪೊಲೀಸರು, 1,086 ಗ್ರಾಂ ಚಿನ್ನ, 9,928 ಗ್ರಾಂ, ಬೆಳ್ಳಿ ಪತ್ತೆ ಮಾಡಿದ್ದಾರೆ. ಮನೆಯಲ್ಲಿದ್ದ 23,91,000 ರೂ., ಕುಟುಂಬ ಸದಸ್ಯರ ಹೆಸರಿನಲ್ಲಿ ಬ್ಯಾಂಕಿನ 11 ಅಕೌಂಟ್‌ಗಳಲ್ಲಿ ಒಟ್ಟು 59,36,399 ರೂ., ಒಂದು ಕಿಯಾ, ಸೆಲಾರಿಯೋ ಕಾರು, ಸ್ಕೂಟರ್‌ ವಶಕ್ಕೆ ಪಡೆದಿದ್ದಾರೆ.

from India & World News in Kannada | VK Polls https://ift.tt/LfaDkXF

IAS Officers Transfer | ಆಡಳಿತಕ್ಕೆ ಚುರುಕು: 5 ಡಿಸಿಗಳು ಸೇರಿ 21 ಐಎಎಸ್‌ ಅಧಿಕಾರಿಗಳ ವರ್ಗ

Mysuru DC Bagadi Gautham transfer: ಮೈಸೂರು ಜಿಲ್ಲಾಧಿಕಾರಿ ಡಾ.ಬೋಗಾದಿ ಗೌತಮ್‌ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರಿನ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ನಿರ್ದೇಶಕರಾಗಿ ನೇಮಿಸಲಾಗಿದೆ. ಡಾ.ಕೆ.ವಿ ರಾಜೇಂದ್ರ ಅವರನ್ನು ಮೈಸೂರು ಡಿಸಿಯಾಗಿ ನೇಮಿಸಲಾಗಿದೆ. ಡಿ.ಎಸ್‌.ರಮೇಶ್‌ ಅವರನ್ನು ಚಾಮರಾಜನಗರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.

from India & World News in Kannada | VK Polls https://ift.tt/Ja45TDU

Heavy Rain in Tumakuru | ಧಾರಾಕಾರ ಮಳೆಗೆ ತುಮಕೂರು ತತ್ತರ: ತುಂಬಿ ಹರಿದ ಹೆಬ್ಬಾಕ ಕೆರೆ, ರಾ.ಹೆ ಜಲಾವೃತ

ಹೆಬ್ಬಾಕ ಅಮಾನಿಕೆರೆ ಒಳ ಮತ್ತು ಹೊರ ಅರಿವು ಹೆಚ್ಚಾದ ಪರಿಣಾಮ ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಹಾಗೂ ಅಂಚಿಹಳ್ಳಿ ಗ್ರಾಮ ನೀರಿನಿಂದ ಮುಳುಗಡೆಯಾಗಿ ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿತ್ತು. ಊರುಕೆರೆ ಬಳಿ ರಾ.ಹೆ-48 ಸುಮಾರು 4 ಕಿ.ಮೀ. ನೀರಿನಿಂದ ಆವೃತವಾದ ಪರಿಣಾಮ ಸಂಚಾರ ಕಷ್ಟಸಾಧ್ಯವಾಗಿತ್ತು. ಸುಮಾರು 15 ಕಿ.ಮೀ. ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿ, ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

from India & World News in Kannada | VK Polls https://ift.tt/J1a9thL

ಸರಕಾರಿ ಕಚೇರಿಗಳಲ್ಲಿ ಆನ್‌ಲೈನ್‌ ಪಾವತಿಗೆ ಕೇರಳ ಸರಕಾರಕ್ಕೆ ವಿಜಿಲೆನ್ಸ್‌ ಶಿಫಾರಸು

ಕೇರಳದಲ್ಲಿ ವಿವಿಧ ಇಲಾಖೆಗಳು ಸಾಮಾನ್ಯವಾಗಿ ಎಲ್ಲ ಸೇವೆಗಳಿಗೆ 3ರಿಂದ 15 ದಿನಗಳನ್ನು ನಿಗದಿಪಡಿಸಿವೆ. ಆದರೆ ಕೆಲವು ಕಚೇರಿಗಳು ಸೇವೆ ಒದಗಿಸುವಲ್ಲಿ ವಿಳಂಬ ಮಾಡುತ್ತಿವೆ. ವಿಳಂಬ ಮಾಡುವ ಅಧಿಕಾರಿಗಳಿಂದ ಪ್ರತಿ ದಿನಕ್ಕೆ 500 ರೂ.ನಂತೆ ದಂಡ ವಿಧಿಸಬೇಕು. ಆನ್‌ಲೈನ್‌ ಸೇವೆಗಳು ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು ಎಂದು ಶಿಫಾರಸು ಮಾಡಲಾಗಿದೆ.

from India & World News in Kannada | VK Polls https://ift.tt/DMeaSmx

PFI investigation - ಪಿಎಫ್‌ಐ ಚಟುವಟಿಕೆ ಮೇಲೆ ರಾಜ್ಯಾದ್ಯಂತ ಹದ್ದಿನ ಕಣ್ಣು:ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು ಪೊಲೀಸರು ಬುಧವಾರವಷ್ಟೇ ಮಂಗಳೂರಿನಲ್ಲಿ ಪಿಎಫ್ ನ ಬಂಧಿತ ಆರೋಪಿಗಳ ಬಗ್ಗೆ ಸಾಕ್ಷ್ಯ ಸಂಗ್ರಹ ಮಾಡಿದ್ದರು. ಗುರುವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, 'ಪಿಎಫ್‌ಐ ಸಂಘಟನೆಯವರಿಗೆ ವಿಶೇಷವಾಗಿ ಯಾರೊಂದಿಗೆ ಲಿಂಕ್‌ ಇತ್ತು ಎಂಬುದನ್ನು ಪತ್ತೆ ಮಾಡಬೇಕು. ಇದರ ಜತೆಗೆ ಟ್ರೈನಿಂಗ್‌ ಎಲ್ಲೆಲ್ಲಿಆಗಿದೆ, ಯಾವ್ಯಾವ ರೀತಿ ನಡೆಯುತ್ತಿತ್ತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಪಿಎಫ್‌ಐ ಸಂಘಟನೆ ಜತೆ ಹೊರಗಡೆಯವರು ಯಾರು, ಯಾರು ಇದ್ದಾರೆ ಪತ್ತೆ ಹಚ್ಚಬೇಕಿದೆ. ತನಿಖೆಯ ವಿಚಾರವನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/PC6iZxI

Kumaraswamy In Mysuru - ಮುಂದಿನ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆಯ ಸುಳಿವು ನೀಡಿದ ಕುಮಾರಸ್ವಾಮಿ

ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನ 126 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ನಿಖಿಲ ತಮ್ಮ ಶಕ್ತಿಯನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಿದ್ದಾರೆ. ಈಗ ಸಿದ್ಧವಾಗಿರುವ 126 ಅಭ್ಯರ್ಥಿಗಳ ಪಟ್ಟಿಯಲ್ಲಿಅವರ ಹೆಸರೂ ಇರಬಹುದು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಸ್ಪರ್ಧೆಯ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

from India & World News in Kannada | VK Polls https://ift.tt/v7pc0BA

IND vs BAN: ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ!

India vs Bangladesh Series 2022: ಟೀಮ್ ಇಂಡಿಯಾ ಬರೋಬ್ಬರಿ 7 ವರ್ಷಗಳ ಬಳಿಕ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶಕ್ಕೆ ತೆರಳಲಿದ್ದು, ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಗಳನ್ನು ಆಡಲಿದೆ. ರೋಹಿತ್‌ ಶರ್ಮಾ ಸಾರಥ್ಯದಲ್ಲಿ ಟೀಮ್ ಇಂಡಿಯಾ ಈ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್‌ 4ರಂದು ಈ ಸರಣಿ ಶುರುವಾಗಲಿದ್ದು, ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಅಧಿಕೃತ ಮಾಹಿತಿ ನೀಡಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JzYK0ae

Farmers Protest - ಚನ್ನರಾಯಪಟ್ಟಣದ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಬರೋಬ್ಬರಿ 200 ದಿನ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ದೇವನಹಳ್ಳಿ ನಾಡಕಚೇರಿ ಮುಂಭಾಗದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡುವುದನ್ನು ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ಹೋರಾಟ 200 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿಖಾತೆದಾರರ ಸಮಾವೇಶ ನಡೆಸಲಾಯಿತು. ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ, ​​ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಬೈಯ್ಯಾರೆಡ್ಡಿ ಭಾಗವಹಿಸಿದ್ದರು.

from India & World News in Kannada | VK Polls https://ift.tt/C63sUVA

ಕೋಮು ಗಲಭೆ, ಅರಾಜಕತೆ ಸೃಷ್ಟಿ ಬಿಜೆಪಿ ನಾಯಕರ ಕೆಲಸ: ವೀರಪ್ಪ ಮೊಯ್ಲಿ

ಹಣ ಮಾಡುವುದೇ ಬಿಜೆಪಿ ನಾಯಕರ ಕೆಲಸ . ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಸಹ ಅಪರೇಷನ್ ಕಮಲಕ್ಕೆ ಒಳಗಾಗಿಯೆ ಹಣ ಮಾಡುವುದನ್ನು ಕಲಿತ್ತಿದ್ದಾರೆ. ಅವರಿಗೆಲ್ಲ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ದುಡ್ಡು ಇದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬ ಮಾನೋಭಾವನೆ ಇದೆ. ಇದರಿಂದಲೇ ಶೇ.೪೦ರಷ್ಟು ಕಮಿಷನ್ ಸರಕಾರ ರಾಜ್ಯದಲ್ಲಿ ಮತ್ತು ದೇಶದಲ್ಲಿ ನಡೆಯುತ್ತಿದೆ ಎಂದು ದೂರಿದ್ದಾರೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ

from India & World News in Kannada | VK Polls https://ift.tt/vUH5RpC

Flood free IT corridor - ಬೆಂಗಳೂರಲ್ಲಿ ಪ್ರವಾಹ ಮುಕ್ತ ಐಟಿ ಕಾರಿಡಾರ್‌ಗೆ 329 ಕೋಟಿ ರೂ.

ಬೆಂಗಳೂರಿನ ಮಹದೇವಪುರವನ್ನು ಪ್ರವಾಹ ಮುಕ್ತ ವಲಯವನ್ನಾಗಿಸಲುಎಂ ವಿಶೇಷ ಅನುದಾನದಡಿ 329 ರೂ.ಕೋಟಿ ವೆಚ್ಚದಲ್ಲಿ ನಾನಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. 65 ಕಿ.ಮೀ. ಉದ್ದದ ರಾಜಕಾಲುವೆ ಪುನಶ್ಚೇತನ ಸೇರಿ ನಾನಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಮಾರ್ಗಸೂಚಿಗಳನ್ನು ಅನುಸರಿಸಿ ರಾಜಕಾಲುವೆಗಳನ್ನು ಮರು ಸ್ಥಾಪಿಸಲಾಗುತ್ತಿದೆ. ಇವುಗಳ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗುತ್ತಿದೆ.

from India & World News in Kannada | VK Polls https://ift.tt/irFYAIN

T20 World cup:'ಸೆಮಿಫೈನಲ್‌ ತಲುಪುವುದೂ ಕಷ್ಟ'-ಭಾರತ ತಂಡದ ಬಗ್ಗೆ ಕಪಿಲ್‌ ದೇವ್‌ ಅಚ್ಚರಿ ಹೇಳಿಕೆ!

Kapil Dev prediction on India team: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಈಗಾಗಲೇ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಿದೆ. ಆದರೆ, ಅಕ್ಟೋಬರ್‌ 22 ರಿಂದ ಆರಂಭವಾಗುವ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯಗಳು ತೀವ್ರ ಕುತೂಹಲದಿಂದ ಕೂಡಿರುತ್ತವೆ. ಅಂದಹಾಗೆ ಈ ಬಾರಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಅವಕಾಶದ ಬಗ್ಗೆ ದಿಗ್ಗಜ ಕಪಿಲ್‌ ದೇವ್‌ ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಭಾರತ ತಂಡದಲ್ಲಿ ಆಲ್‌ರೌಂಡರ್‌ಗಳ ಸಮಸ್ಯೆ ಇದೆ. ಹಾಗಾಗಿ ಈ ಬಾರಿ ಭಾರತ ಪ್ರಶಸ್ತಿ ಗೆಲ್ಲುವ ಅವಕಾಶ ಕೇವಲ 30 ರಷ್ಟಿದೆ ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/nj5FJBC

Mallikarjun Kharge | ಒಲ್ಲದ ಮನಸ್ಸಿನಿಂದ ದಿಲ್ಲಿ ವಿಮಾನವೇರಿ ಯಶಸ್ಸು ಕಂಡ ಖರ್ಗೆ

Mallikarjun Kahrge- ​​2008ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದ ಖರ್ಗೆ ಅವರಿಗೆ ಅಧಿಕಾರ ರಾಜಕಾರಣದಲ್ಲಿ ಸಫಲತೆ ಸಿಕ್ಕಿರಲಿಲ್ಲ. ಬಳಿಕ ಪ್ರತಿಪಕ್ಷದ ನಾಯಕರಾದ ಅವರು, ರಾಜ್ಯ ರಾಜಕಾರಣದಲ್ಲೆ ಸೆಟ್ಲ್‌ ಆಗುವುದರಲ್ಲಿದ್ದರು. ಆದರೆ, 2009ರಲ್ಲಿ ಕಲಬುರಗಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್‌ ಸೂಚಿಸಿತು. ಒಮ್ಮೆ ದಿಲ್ಲಿಯತ್ತ ಹೊರಟರೆ ರಾಜ್ಯ ರಾಜಕಾರಣದಲ್ಲಿ ಹಿಡಿತ ತಪ್ಪುತ್ತದೆ, ಮುಖ್ಯಮಂತ್ರಿ ಸ್ಥಾನವೂ ಕನಸಾಗಿಯೇ ಉಳಿಯುತ್ತದೆ ಎನ್ನುವುದು ಖರ್ಗೆ ಅವರಂತಹ ಪಳಗಿದ ನಾಯಕನಿಗೆ ಗೊತ್ತಿತ್ತು. ಆದರೆ ಹೈಕಮಾಂಡ್‌ ಆದೇಶವನ್ನು ಪಾಲಿಸುವ ಪಕ್ಷ ನಿಷ್ಠ ಖರ್ಗೆ ಬೇಸರದಿಂದಲೇ ದಿಲ್ಲಿ ವಿಮಾನವೇರಿದರು.

from India & World News in Kannada | VK Polls https://ift.tt/Xqw2umx

ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಅ. 21 ರಿಂದ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ

Kempegowda Statue in Bengaluru Airport - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅ.21 ರಿಂದ ನ.7 ರವರೆಗೆ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕಾಗಿ ಸಿದ್ಧವಾಗಿರುವ 20 'ನಾಡಪ್ರಭು ಕೆಂಪೇಗೌಡ ರಥ'ಗಳಿಗೆ ಅ.21ರಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದ ಮುಂಭಾಗ ಚಾಲನೆ ನೀಡಲಿದ್ದಾರೆ.

from India & World News in Kannada | VK Polls https://ift.tt/MbsVWZi

Bharat Jodo Yatra | ಪುಸ್ತಕ ರೂಪದಲ್ಲಿ ಹೊರ ಬರಲಿದೆ ಕರ್ನಾಟಕದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ಕ್ಷಣಗಳು

Bharat Jodo Yatra - ಪಾದಯಾತ್ರೆ ದೇಶದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ. ಕರ್ನಾಟಕದಲ್ಲಿ 21 ದಿನ ಸಂಚರಿಸಿದ ಪಾದಯಾತ್ರೆಯ ಚಿತ್ರಣವನ್ನು ಕುರಿತು ಪುಸ್ತಕ ರೂಪದಲ್ಲಿ ತರಲಾಗುವುದು. ಯಾತ್ರೆಯಲ್ಲಿ ಭಾಗವಹಿಸಿದವರ ಸಂದರ್ಶನ, ರಾಹುಲ್‌ ಗಾಂಧಿ ಭಾಷಣ ಸೇರಿದಂತೆ ಅಭೂತಪೂರ್ವ ಕ್ಷಣಗಳ ಚಿತ್ರಣ, ಯಾತ್ರೆ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌ ಹೇಳಿದರು

from India & World News in Kannada | VK Polls https://ift.tt/Nhpb6lG

ಏಸು ಪ್ರತಿಮೆ ವಿವಾದ ಬಳಿಕ ಈಗ ಕನಕಪುರದಲ್ಲಿ ಯೇಸು ಫೋಟೋ ವಿವಾದ

ತಾಲೂಕಿನ ಗೊಲ್ಲರ ಚೆನ್ನಯ್ಯನದೊಡ್ಡಿ ಸಮೀಪದ ಹಾರ್ನ ಗುಡ್ಡೆಯಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪಿಸಿ ವಿವಾದಕ್ಕೆ ಕಾರಣವಾಗಿದ್ದ ಏಸು ಶಿಲುಬೆಯನ್ನು ನ್ಯಾಯಾಲಯದ ಮೆಟ್ಟಿಲೇರಿದ್ದು ಇನ್ನೂ ಬಗೆಹರಿದಿಲ್ಲ, ಅದೇ ಹೋಬಳಿಯಲ್ಲಿಸರಕಾರಿ ಸವಲತ್ತು ವಿತರಣೆ ಮಾಡುವ ಪಡಿತರ ಚೀಟಿಯಲ್ಲಿಏಸು ಭಾವಚಿತ್ರ ಮುದ್ರಿಸಿ ಹಂಚಿಕೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

from India & World News in Kannada | VK Polls https://ift.tt/kIprh72

Bhargavi Found at Goa | ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ ಗೋವಾದಲ್ಲಿ ಪತ್ತೆ

Missing Girl from Bengaluru Found: ಭಾರ್ಗವಿ (Bhargavi) ಪತ್ತೆಗಾಗಿ ರಾಜ್ಯದಾದ್ಯಂತ ಪೊಲೀಸ್‌ ಠಾಣೆಗಳು ಹಾಗೂ ಹೊರ ರಾಜ್ಯದ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನೆಯಾಗಿತ್ತು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಬಾಲಕಿಯ ಪತ್ತೆಗೆ ನೆರವಾಗಲು ಕೋರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಬುಧವಾರ ಭಾರ್ಗವಿ ಗೋವಾದಲ್ಲಿರುವುದು ಖಚಿತವಾಗಿದೆ. ಈ ಬಗ್ಗೆ ಮಂಗಳೂರು (Mangaluru) ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ (Vedavyas Kamath) ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

from India & World News in Kannada | VK Polls https://ift.tt/bsDw8dW

ಹಬ್ಬಕ್ಕೆ ಆಭರಣ ಖರೀದಿ ಭರಾಟೆ ಜೋರು, 25% ವಹಿವಾಟು ಹೆಚ್ಚಳ: ಚಿನ್ನದಂಗಡಿಗಳಿಂದ ಆಫರ್‌ಗಳ ಸುರಿಮಳೆ

Gold Demand Increase in festival Season- ಪ್ರಮುಖ ಮಳಿಗೆಗಳು ಕೊಡುಗೆಗಳ ಮಹಾಪೂರವನ್ನೇ ಘೋಷಿಸಿವೆ. ಚಿನ್ನ ಕೊಂಡವರಿಗೆ ಬೆಳ್ಳಿ ಉಚಿತ, ಲಕ್ಕಿ ಡ್ರಾಗಳ ಜತೆಗೆ ಬುಕಿಂಗ್‌ ದಿನದ ದರದಲ್ಲಿಯೇ ಮಾರಾಟ ಮೊದಲಾದ ಆಫರ್‌ಗಳನ್ನು ಘೋಷಿಸಿವೆ. ಎರಡು ವರ್ಷಗಳಿಂದ ಅದ್ಧೂರಿ ಮದುವೆಗಳು, ಹಬ್ಬದ ಆಚರಣೆಗಳು ನಡೆದಿರಲಿಲ್ಲ. ಹೀಗಾಗಿ, ಜನರು ದುಂದುವೆಚ್ಚ ಮಾಡದೆ ಹಣವನ್ನು ಕೂಡಿಟ್ಟುಕೊಂಡಿದ್ದರು. ಈಗ ಎಲ್ಲಕ್ಷೇತ್ರಗಳೂ ಚೇತರಿಸಿಕೊಂಡಿರುವುದರಿಂದ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಹೀಗಾಗಿ, ಚಿನ್ನ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

from India & World News in Kannada | VK Polls https://ift.tt/NLQsOre

Jana Sankalpa Rally | ಸಿದ್ದು ಕಾಲದ ಹಗರಣದ ದಾಖಲೆಗಳನ್ನು ರಾಹುಲ್‌ ಗಾಂಧಿಗೆ ನೀಡುವೆ: ಸಿಎಂ ಬೊಮ್ಮಾಯಿ

​​Basavaraj Bommai Slams Siddaramaiah - ಸಿದ್ದರಾಮಯ್ಯನವರ ಆಡಳಿತದಲ್ಲಿ ನಡೆದ ಎಲ್ಲ ನೇಮಕಾತಿಗಳ ದಾಖಲಾತಿಗಳಿವೆ. ಅರ್ಜಿ ಹಾಕದವರಿಗೂ ನೌಕರಿ ನೀಡಿದ್ದಾರೆ. ಅಂದರೆ ಎಷ್ಟು ಪರ್ಸೆಂಟ್‌ ಹೊಡೆದಿರಬಹುದು ಎನ್ನುವುದನ್ನು ಊಹಿಸಿ. ಪೊಲೀಸ್‌ ನೇಮಕಾತಿಯಲ್ಲಿ ಹಣ ಪಡೆದು ಪ್ರಶ್ನೆ ಪತ್ರಿಕೆ ಲೀಕ್‌ ಮಾಡಿದ ಪ್ರಕರಣವನ್ನು ಕಾಂಗ್ರೆಸ್‌ನವರು ಮುಚ್ಚಿ ಹಾಕಿದ್ದರು. ಕೆಪಿಎಸ್‌ಸಿನಲ್ಲಿ ಹಣ ಪಡೆದು ಕೆಲಸ ನೀಡಿದ್ದವರಿಗೆ (ಪ್ರಾಸಿಕ್ಯೂಟರ್‌ಗಳಿಗೆ) ಅಮಾನತುಗೊಳಿಸಿ ನಾನು ಮನೆಗೆ ಕಳುಹಿಸಿದೆ. ನಮಗೆ ಹಾಗೂ ಕಾಂಗ್ರೆಸ್‌ನವರಿಗೆ ಇರುವ ವ್ಯತ್ಯಾಸವೇ ಇದಾಗಿದೆ ಎಂದರು.

from India & World News in Kannada | VK Polls https://ift.tt/O9mbefc

Congress Presidential Polls | ಕಾಂಗ್ರೆಸ್‌ ಹೊಸ ಸಾರಥಿ ಇಂದು ಘೋಷಣೆ: ಖರ್ಗೆ ಆಯ್ಕೆ ಬಹುತೇಕ ಖಚಿತ

Mallikarjun Kharge Vs Shashi Tharoor- ಸೋಮವಾರ ನಡೆದ ಚುನಾವಣೆ ಯಲ್ಲಿ9,900 ಮತದಾರರ ಪೈಕಿ 9500 ಮಂದಿ ಅಂದರೆ, ಶೇ.96ರಷ್ಟು ಮತದಾನವಾಗಿದೆ ಎಂದು ಚುನಾವಣಾ ಸಮಿತಿ ಉಸ್ತುವಾರಿ ಮಧುಸೂಧನ್‌ ಮಿಸ್ತ್ರಿ ತಿಳಿಸಿದ್ದಾರೆ. ಮತ ಎಣಿಕೆ ಹಿನ್ನೆಲೆಯಲ್ಲಿಕಾಂಗ್ರೆಸ್‌ನ ಬಹುತೇಕ ಹಿರಿಯ ನಾಯಕರು ದಿಲ್ಲಿಗೆ ಆಗಮಿಸಿದ್ದಾರೆ. ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಾದ ಖರ್ಗೆ, ತರೂರ್‌, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸೇರಿ ಪ್ರಮುಖ ನಾಯಕರು ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ಬುಧವಾರ ಮಧ್ಯಾಹ್ನದೊಳಗೆ ಫಲಿತಾಂಶ ಹೊರ ಬೀಳಲಿದೆ.

from India & World News in Kannada | VK Polls https://ift.tt/Cki7T4n

ಜಾವಗಲ್‌: ಕೆರೆ ನೀರು ಕೊಳವೆ ಪೈಪ್‌ನಲ್ಲಿ ಹರಿದು ಜಮೀನುಗಳು ಆವೃತ

Javagal Doddakere: ಯಾವುದೇ ರೈತರ ಅನುಮತಿ ಇಲ್ಲದೆ ಅವರ ಜಮೀನುಗಳ ಮಧ್ಯಭಾಗದಲ್ಲಿಯೇ ಪೈಪ್‌ ಲೈನ್‌ ಅಳವಡಿಸಿದ್ದು, ಹೆದ್ದಾರಿ 234(73 ಹೊಸದು)ರಲ್ಲಿ ಪ್ರತಿನಿತ್ಯ ಭಾರಿ ಗಾತ್ರದ ಟ್ಯಾಂಕರ್‌, ಗೂಡ್ಸ್‌, ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ನೀರು ಜಮೀನುಗಳಿಗೆ ಹಾಯಿಸುವ ರೀತಿಯಲ್ಲಿ ಕೆರೆಯಿಂದ ರಸ್ತೆ ತಳಭಾಗದಲ್ಲಿ ಸರಾಗವಾಗಿ ಹರಿದು ಜಮೀನುಗಳಲ್ಲಿ ಸಂಗ್ರಹವಾಗುತ್ತಿದೆ. ಇದೇ ರೀತಿ ನೀರು ಹರಿದು ಹೋದಲ್ಲಿ 20 ವರ್ಷಗಳ ನಂತರ ಕೋಡಿ ಬಿದ್ದಿರುವ ಕೆರೆ ನೀರು ಕಡಿಮೆಯಾಗುತ್ತದೆ.

from India & World News in Kannada | VK Polls https://ift.tt/bEAZSke

IND vs PAK: ವಿಶ್ವಕಪ್‌ ಆಡುವುದಿಲ್ಲ, ಬಿಸಿಸಿಐಗೆ ದಮಕಿ ಹಾಕಿದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ!

PCB Threatens BCCI: 2023ರಲ್ಲಿ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಇದಕ್ಕೂ ಮುನ್ನ ಪಾಕಿಸ್ತಾನದ ಆತಿಥ್ಯದಲ್ಲಿ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿ ಆಯೋಜನೆ ಆಗಲಿದ್ದು, ಭಾರತ ತಂಡ ಈ ಸಲುವಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳದೇ ಇದ್ದರೆ, ವಿಶ್ವಕಪ್‌ ಆಡಲು ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬಿಸಿಸಿಐಗೆ ದಮಕಿ ಹಾಕಿದೆ. 2008ರ ಬಳಿಕ ಪಾಕಿಸ್ತಾನದಲ್ಲಿ ಈವರೆಗೆ ಯಾವುದೇ ಬಹುರಾಷ್ಟ್ರೀಯ ಕ್ರಿಕೆಟ್‌ ಟೂರ್ನಿ ಆಯೋಜನೆ ಆಗಿಲ್ಲ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/BXIVc2x

Missing Girl at Mangaluru | ಬೆಂಗಳೂರಿನಿಂದ ನಾಪತ್ತೆಯಾದ ಬಾಲಕಿ ಮಂಗಳೂರಿನಲ್ಲಿ ಸುತ್ತಾಟ

Bengaluru Girl: ಈಕೆ ಸೋಮವಾರ ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಅಲ್ಲಿಂದ ಬಸ್ ಮೂಲಕ ಬೆಳಗಿನ ಜಾವ 3 ಗಂಟೆಗೆ ಮಂಗಳೂರಿನ (Mangaluru) ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಾಳೆ. ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್‌ಗೆ ತೆರಳಿದ್ದಾಳೆ. ಮುಕ್ಕ ಬೀಚ್‌ನಲ್ಲಿ ಸ್ವಲ್ಪ ಹೊತ್ತು ತಿರುಗಾಡಿ ಅದೇ ರಿಕ್ಷಾದಲ್ಲಿ ಕದ್ರಿ ಪಾರ್ಕ್‌ಗೆ ಬಂದಿದ್ದಾಳೆ. ಪಾರ್ಕ್‌ನ ಬಾಲಭವನ ಸಮೀಪದ ಶೌಚಾಲಯಕ್ಕೆ ಹೋಗಿ ಮುಖ ತೊಳೆದು ವಾಪಾಸ್ ಬಂದಿದ್ದಾಳೆ.

from India & World News in Kannada | VK Polls https://ift.tt/rXZMLkY

SHIVAMOGGA Corporation Election - ಕೊನೆಗೂ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಚುನಾವಣೆಗೆ ದಿನಾಂಕ ನಿಗದಿ

ಕೊನೆಗೂ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ 28ರಂದು ಮುಹೂರ್ತ ಫಿಕ್ಸ್ ಆಗಿದೆ. ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪ ಮೇಯರ್‌ ಸ್ಥಾನ ಹಿಂದುಳಿದ ಎ ವರ್ಗದ ಮಹಿಳಾ ಅಭ್ಯರ್ಥಿಗೆ ನಿಗದಿಯಾಗಿದೆ. ಅ.28ರಂದು ಮಧ್ಯಾಹ್ನ 12ರಿಂದ ಮಧ್ಯಾಹ್ನ 1ರ ವರೆಗೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದೆ.

from India & World News in Kannada | VK Polls https://ift.tt/1oUZRvg

ಬೆಳ್ತಂಗಡಿ ತಾಲೂಕಿನಲ್ಲಿ ಹಣ್ಣಡಕೆಗೆ ಕಾಡು ಹಂದಿಗಳ ಕಾಟ: ಬೆಳೆ ನಷ್ಟದಿಂದ ಕಂಗೆಟ್ಟ ರೈತರಿಂದ ರಾತ್ರಿ ಪಹರೆ

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಹಾಗೂ ಕಲ್ಮಂಜ ಗ್ರಾಮಗಳಲ್ಲಿ ನೂರಾರು ಎಕರೆಗಿಂತ ಅಧಿಕ ಅಡಕೆ ತೋಟಗಳಿದ್ದು ಇಲ್ಲಿನ ಕಡಂಬಳ್ಳಿ, ಮೂಲಾರು ಮೊದಲಾದ ಪ್ರದೇಶಗಳಲ್ಲಿ ಹಣ್ಣಡಕೆಗೆ ಕಾಡು ಹಂದಿಗಳ ಕಾಟ ವಿಪರೀತವಾಗುತ್ತಿದೆ. ಕಾಡು ಹಂದಿಗಳ ಗುಂಪು ಅಡಕೆ ತೋಟಗಳನ್ನು ಪ್ರವೇಶಿಸಿ ಬಿದ್ದಿರುವ ಅಡಕೆಯನ್ನು ಜಗಿದು ಹಾಕುತ್ತಿವೆ. ಕಾಡು ಹಂದಿಗಳು ಜಗಿದು ಹಾಕುವ ಅಡಕೆ ಸಂಪೂರ್ಣ ಹುಡಿಯಾಗುವ ಕಾರಣದಿಂದ ಇದನ್ನು ಹೆಕ್ಕಲು ಆಗದ, ಒಣಗಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

from India & World News in Kannada | VK Polls https://ift.tt/WkHNKn0

Supreme Court CJI - ಸುಪ್ರೀಂ ಕೋರ್ಟಿನ 50ನೇ ಸಿಜೆಐ ಆಗಿ ನ್ಯಾ.ಡಿ.ವೈ.ಚಂದ್ರಚೂಡ್ ನೇಮಕ:ನ.9ರಂದು ಪ್ರಮಾಣವಚನ

ನ್ಯಾ ಡಿ.ವೈ.ಚಂದ್ರಚೂಡ್ ಅವರು ಸರ್ವೋಚ್ಚ ನ್ಯಾಯಲಯದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು. ನ.9ರಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

from India & World News in Kannada | VK Polls https://ift.tt/BESxMz5

BCCI: ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್‌ ಬಿನ್ನಿ ಆಯ್ಕೆ!

Roger Binny BCCI's New President: ಅಕ್ಟೋಬರ್‌ 18ರಂದು ಬಿಸಿಸಿಐನ ವಾರ್ಷಿಕ ಮಹಾ ಸಭೆ ನಡೆಯಲಿದ್ದು, ಹೊಸ ಅಧಿಕಾರಿಗಳ ಆಯ್ಕೆ ಆಗಲಿದೆ. ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ಬಿಸಿಸಿಐ ಅಧ್ಯಕ್ಷತೆಯ ಅವಧಿ ಅಂತ್ಯಗೊಳ್ಳಲಿದೆ. ಇದೇ ವೇಳೆ ನೂತನ ಅಧ್ಯಕ್ಷರಾಗಿ ಮಾಜಿ ಆಲ್‌ರೌಂಡರ್‌ ರೋಜರ್‌ ಬಿನ್ನಿ ಆಯ್ಕೆಗೆ ಇನ್ನು ಕೆಲವೇ ಸಮಯ ಬಾಕಿಯಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಹಾಲಿ ಅಧ್ಯಕ್ಷ ರೋಜರ್‌ ಬಿನ್ನಿ, ಬಿಸಿಸಿಐ ಬಾಸ್‌ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gLbCHnF

ಗೌರಿಬಿದನೂರು | 22 ವರ್ಷಗಳ ನಂತರ ಕೋಡಿ ಹರಿದ ಕೆಂಕರೆ ಕೆರೆ: ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ

Kenkere lake flood: 200 ಎಕರೆ ವಿಶಾಲವಾದ ಕೆರೆ 22 ವರ್ಷಗಳ ನಂತರ ಇದೇ ಮೊದಲ ಬಾರಿಗೆ 15 ದಿನಗಳಿಂದ ಮೈದುಂಬಿ ಕೋಡಿ ಹರಿದಿದೆ. ಆದರೆ ತಡರಾತ್ರಿ ಕೆರೆ ಕಟ್ಟೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆರೆ ಏರಿ ಕಟ್ಟೆ ಸಂಪೂರ್ಣವಾಗಿ ಒಡೆದು ಹೋಗಿದೆ. ಕೆರೆಯಿಂದ ಅಪಾರ ಪ್ರಮಾಣದ ನೀರು ರಭಸವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಮೆಕ್ಕೆಜೋಳ, ರೇಷ್ಮೆ, ಟೊಮೇಟೊ, ಕನಕಾಂಬರ, ಸುಗಂಧ ಹೂವಿನ ತೋಟಗಳು ಸೇರಿದಂತೆ 124 ಎಕರೆ ರೈತರ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

from India & World News in Kannada | VK Polls https://ift.tt/RxbC87e

ZIM vs IRE: ಸಿಕಂದರ್‌ ರಾಜಾ ಅಬ್ಬರ, ಐರ್ಲೆಂಡ್‌ ಸದ್ದಡಗಿಸಿದ ಜಿಂಬಾಬ್ವೆ!

Zimbabwe vs Ireland Match Highlights: ಆರಂಭಿಕ ಆಘಾತದಿಂದ ಚೇತರಿಸಿದ ಜಿಂಬಾಬ್ವೆ ತಂಡ, ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಅಪಾಯಕಾರಿ ಐರ್ಲೆಂಡ್‌ ಎದುರು 31 ರನ್‌ಗಳ ಜಯ ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಶುಭಾರಂಭ ಮಾಡಿದೆ. ಅನುಭವಿ ಬ್ಯಾಟರ್‌ ಸಿಕಂದರ್‌ ರಾಜಾ, ಕೇವಲ 48 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿ ಜಿಂಬಾಬ್ವೆ ಗೆಲುವಿನ ರೂವಾರಿ ಎನಿಸಿದರು. ಐರ್ಲೆಂಡ್‌ ಪರ ಜೊಶುವಾ ಲಿಟ್ಲ್‌, ಮೂರು ವಿಕೆಟ್‌ ಪಡೆದು ಗಮನ ಸೆಳೆದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/EYiL7Fm

ಹಿಂದೂಗಳು ಒಬ್ಬಳನ್ನು ಮದುವೆಯಾಗಿ, ಮೂವರನ್ನು ಗೌಪ್ಯವಾಗಿ ಇರಿಸಿಕೊಳ್ಳುತ್ತಾರೆ: AIMIM ನಾಯಕನ ವಿವಾದಾತ್ಮಕ ಭಾಷಣ

Hate speech - ಹಿಂದೂಗಳ ಬಗ್ಗೆ ಅವಳಹೇಳ ಮಾಡಿರುವ ಎಐಂಎಂಐಎಂ ನಾಯಕ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತ ಪಡಿಸಿದೆ. ​​'ಎಲ್ಲ ಹದ್ದುಗಳನ್ನು ಮೀರಿರುವ ಶೌಕತ್‌ ಅಲಿಯಂಥ ವ್ಯಕ್ತಿಗಳಿಂದಾಗಿಯೇ ದೇಶಸೇವೆ ಮಾಡುತ್ತಿರುವ ಮುಸ್ಲಿಮರನ್ನು ಕೂಡ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ 'ಬಿ ಟೀಮ್‌' ಆಗಿರುವ ಎಐಎಂಐಎಂ ದೇಶಾದ್ಯಂತ ಕೋಮುಸಂಘರ್ಷದ ಕಿಡಿ ಹೊತ್ತಿಸಲು ಹರಸಾಹಸಪಡುತ್ತಿದೆ. ಒಂದು ವಾರದಲ್ಲಿ ಅಲಿಯನ್ನು ಬಂಧಿಸದಿದ್ದಲ್ಲಿ, ಶಿವಸೇನೆ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ' ಎಂದು ಉತ್ತರ ಪ್ರದೇಶದ ಶಿವಸೇನಾ ಅಧ್ಯಕ್ಷ ಅನಿಲ್‌ ಸಿಂಗ್‌ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

from India & World News in Kannada | VK Polls https://ift.tt/jO7PLED

ಬರಿದಾಗುತ್ತಿದೆ ಜೋಗ್‌ಫಾಲ್ಸ್‌: ವಿಶ್ವವಿಖ್ಯಾತ ಜಲಧಾರೆಯ ನೆಲೆವೀಡಿಗೆ ಬೇಕಿದೆ ಬೂಸ್ಟರ್‌ ಡೋಸ್‌

ವಿದ್ಯುತ್‌ ಉತ್ಪಾದನಾ ಕೇಂದ್ರಗಳಲ್ಲಿ ಆಧುನಿಕ ತಾಂತ್ರಿಕತೆಯ ಕಾರಣದಿಂದ ಕಾರ್ಮಿಕರ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ಕುಸಿದಿದೆ. ಸರಕಾರಿ ಕಚೇರಿಗಳಲ್ಲಿ ಹೊಸ ನೇಮಕಾತಿಗಳು ನಿಂತು ವರ್ಷಗಳೇ ಕಳೆದು ಹೋಗಿದೆ. ಹಾಗಾಗಿ 2011ರ ಜನಗಣತಿ ಪ್ರಕಾರ ಜೋಗ ಕಾರ್ಗಲ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ 10 ಸಾವಿರಕ್ಕೆ ಕುಸಿದಿತ್ತು. ಇದೀಗ ಮತ್ತಷ್ಟು ಇಳಿಕೆಯಾಗಿದ್ದು, ಏಳು ಸಾವಿರ ಇಲ್ಲವೆ ಅದಕ್ಕಿಂತಲೂ ಕಡಿಮೆ ಜನಸಂಖ್ಯೆ ಇರಬಹುದು ಎಂಬ ಅಂದಾಜಿದೆ. ಇದು ಜೋಗ ಜಲಧಾರೆಯ ಜತೆಗೆ ಜನಸಂಖ್ಯೆಯಲ್ಲೂ ಬರಿದಾಗುತ್ತಿರುವುದನ್ನು ಸ್ಪಷ್ಟವಾಗಿಸುತ್ತಿದೆ.

from India & World News in Kannada | VK Polls https://ift.tt/O01YTE7

ನದಿಗಳಲ್ಲಿ ನಡುಗಡ್ಡೆ ಆಪತ್ತು, ಭವಿಷ್ಯದಲ್ಲಿ ಹರಿವಿಗೆ ಅಪಾಯ: ಕುಂದಾಪುರದಲ್ಲಿ ನೆರೆ ಹಾವಳಿ ಹೆಚ್ಚಳ ಸಾಧ್ಯತೆ

ಪಂಚಗಂಗಾವಳಿ, ಸೌಪರ್ಣಿಕಾ ನದಿಗಳಲ್ಲಿ ನಡುಗಡ್ಡೆಗಳು ದೊಡ್ಡ ಮಟ್ಟದಲ್ಲಿ ಕಾಣಸಿಗುತ್ತಿವೆ. ಪಂಚಗಂಗಾವಳಿಯ ಖಾರ್ವಿಕೇರಿ, ಹೇರಿಕುದ್ರು, ಆನಗಳ್ಳಿ, ಸೌಪರ್ಣಿಕಾ ನದಿಯ ತಲ್ಲೂರು, ರಾಜಾಡಿ, ವಾರಾಹಿ ನದಿಯ ಕಂಡ್ಲೂರಿನಿಂದ ಬಸ್ರೂರು ವ್ಯಾಪ್ತಿಯ ವಿಶಾಲ ನದಿಯ ನಡುವೆ ನಡುಗಡ್ಡೆಗಳು ಬೆಳೆದು ನಿಂತಿವೆ. ಕಾಂಡ್ಲವನದ ಜತೆಯಲ್ಲಿ ಕಾಟು ಮರಗಳನ್ನೊಳಗೊಂಡ ದಿಬ್ಬಗಳು ನದಿಯ ವಿಸ್ತಾರತೆ ನುಂಗಿ ಹಾಕಿದ್ದು, ಭವಿಷ್ಯತ್ತಿನಲ್ಲಿ ನದಿಗಳ ಸಹಜ ಹರಿವಿಗೆ ಇವು ಅಪಾಯಕಾರಿ ಆಗಬಹುದೆಂಬ ಅಭಿಪ್ರಾಯ ಮೂಡಿದೆ.

from India & World News in Kannada | VK Polls https://ift.tt/NHelkSt

Magician O.P Sharma | ಪ್ರಖ್ಯಾತ ಜಾದೂಗಾರ ಓಂ ಪ್ರಕಾಶ್‌ ಶರ್ಮಾ ನಿಧನ, ಅವರ ಮನೆಯೇ 'ಭೂತ ಬಂಗಲೆ'

Jadugar Om Prakash Sharma passes away: ಕಾನ್ಪುರದಲ್ಲಿನ 'ಭೂತ ಬಂಗಲೆ' (Bhoot Bunglaw) ಹೆಸರಿನ ಬಂಗಲೆಯಲ್ಲಿ ಅವರು ವಾಸವಿದ್ದರು. ಮನೆಯ ಮುಂಭಾಗದ ಗೇಟ್‌ನಲ್ಲಿ ವಿಚಿತ್ರವಾದ ಪ್ರತಿಮೆಗಳನ್ನು ರೂಪಿಸಲಾಗಿದ್ದು, ನಿರ್ಮಾಣದ ಶೈಲಿಯೂ ಸಾಮಾನ್ಯ ಮನೆಗಳಿಂತ ಭಿನ್ನವಾಗಿದೆ. ಪ್ರಖ್ಯಾತ ಜಾದೂಗಾರ ಓಂ ಪ್ರಕಾಶ್‌ ಶರ್ಮಾ (ಓ.ಪಿ.ಶರ್ಮಾ / O.P Sharma)ಅವರು ಶನಿವಾರ ರಾತ್ರಿ ನಿಧನರಾದರು. ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದ (Kanpur) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

from India & World News in Kannada | VK Polls https://ift.tt/aA8dtyS

Ola Uber Auto service | ಬಾಗಿದ ಅಗ್ರಿಗೇಟರ್‌ ಸಂಸ್ಥೆಗಳು: ಈಗ ಓಲಾ, ಉಬರ್‌ ಆಟೊ ಪ್ರಯಾಣ ದರ ಎಷ್ಟು?

Auto Rickshaw Service in Bengaluru: ಸರಕಾರ ನಿಗದಿಪಡಿಸಿದ ಮೂಲದರಕ್ಕಿಂತ ಶೇ.10ರಷ್ಟು ಮಾತ್ರ ಹೆಚ್ಚು ದರ ಪಡೆದು ಸೇವೆ ಒದಗಿಸಬಹುದು ಎಂದು ಹೈಕೋರ್ಟ್‌ ಸೂಚನೆ ನೀಡಿತ್ತು. ಅದರಂತೆ ಅಗ್ರಿಗೇಟರ್‌ ಸಂಸ್ಥೆಗಳು ದರ ಇಳಿಕೆ ಮಾಡಿವೆ. ಆದರೆ, ಪೀಕ್‌ ಹವರ್‌ಗಳಲ್ಲಿ ಸರ್ಜ್‌ ದರ ವಿಧಿಸುವುದರಿಂದ ಕನಿಷ್ಠ ದರ ಪಾಲನೆಯಾಗುತ್ತಿಲ್ಲ ಎಂದು ಕೆಲ ಪ್ರಯಾಣಿಕರು ದೂರಿದ್ದಾರೆ. ತನ್ನ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಆಟೊ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಸಾರಿಗೆ ಇಲಾಖೆ ಅಗ್ರಿಗೇಟರ್‌ ಸಂಸ್ಥೆಗಳಿಗೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.

from India & World News in Kannada | VK Polls https://ift.tt/3W6al4O

Tippu Sultan Controversy - ಪ್ರತಾಪ್ ಸಿಂಹ ಸಮಯ ನೀಡಿದರೆ ಟಿಪ್ಪು ಬಗ್ಗೆ ವಿಚಾರ ವಿನಿಮಯಕ್ಕೆ ಸಿದ್ಧ: ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್

ಟಿಪ್ಪು ಮತಾಂಧ, ದೇಶದ್ರೋಹಿ ಎಂದೆಲ್ಲಹೇಳಿರುವ ಸಂಸದ ಪ್ರತಾಪ ಸಿಂಹ ಅವರು ಟಿಪ್ಪು ಕೊಡುಗೆ ಕುರಿತು ಪ್ರಶ್ನಿಸಿದ್ದಾರೆ. ನಾನೂ ಕೂಡ ಒಂದಷ್ಟು ಆಧಾರಗಳನ್ನು ಇಟ್ಟುಕೊಂಡಿದ್ದೇನೆ. ಹಾಗಾಗಿ ಪ್ರತಾಪಸಿಂಹ ಒಪ್ಪಿಕೊಂಡು ಸಮಯ ತಿಳಿಸಿದರೆ ವಿಚಾರ ವಿನಿಮಯ ಮಾಡಿಕೊಳ್ಳೋಣ. ಆದರೆ, ಇದು ಸವಾಲಲ್ಲ ಎಂದಿದ್ದಾರೆ ಕಾಂಗ್ರೆಸ್ ಮುಖಂಡರಾಗಿರುವ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್

from India & World News in Kannada | VK Polls https://ift.tt/J7qd94w

ಮಂಡ್ಯದಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಭೇಟಿ ರದ್ದು

maha kumbh mela in mandya: ಮಹಾಕುಂಭ ಮೇಳದ ಕಡೆಯ ದಿನವಾದ ಅ.16ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೇಟಿ ನಿಗದಿಯಾಗಿತ್ತು. ಮಂಡ್ಯ ಜಿಲ್ಲಾಡಳಿತದ ಪರವಾಗಿ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡರು ಯೋಗಿ ಅದಿತ್ಯನಾಥ್‌ ಅವರನ್ನು ಆಹ್ವಾನಿಸಿದ್ದರು. ಆದರೆ, ಇದೀಗ ತಾವು ಕುಂಭಮೇಳಕ್ಕಾಗಿ ಕರ್ನಾಟಕಕ್ಕೆ ಬರಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಯೋಗಿ ಆದಿತ್ಯನಾಥ್‌ ಪತ್ರ ಬರೆದಿದ್ದಾರೆ. ಶುಕ್ರವಾರವೇ ಯೋಗಿ ಆದಿತ್ಯನಾಥ್‌ ಕುಂಭಮೇಳಕ್ಕೆ ಬರುವುದಿಲ್ಲವೆಂಬ ಸುದ್ದಿ ಹರಿದಾಡಿತ್ತು. ಶನಿವಾರ ಖಚಿತವಾಗಿದೆ.

from India & World News in Kannada | VK Polls https://ift.tt/1kcPWyI

Accident at Banavara - ಬಾಣಾವರ ಬಳಿ ಭೀಕರ ಅಪಘಾತ: ಧರ್ಮಸ್ಥಳ- ಸುಬ್ರಹ್ಮಣ್ಯಕ್ಕೆ ತೆರಳಿದ್ದ 9 ಯಾತ್ರಾರ್ಥಿಗಳ ಸಾವು; ಹಲವರಿಗೆ ಗಾಯ

ಘಟನೆಯಲ್ಲಿ ನಾಲ್ವರು ಮಹಿಳೆಯರು, ಒಬ್ಬ ಪುರುಷ, ಒಂದು ಮಗು ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರೆಲ್ಲಾ ಟೆಂಪೋ ಟ್ರಾವೆಲ್ಸ್ ನಲ್ಲಿ ಪ್ರಯಾಣ ಮಾಡುತ್ತಿದ್ದವರಾಗಿದ್ದು, ಗಾಯಗೊಂಡವರಲ್ಲಿ ಹೆಚ್ಚಿನವರು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರಾಗಿದ್ದಾರೆ. ಅಪಘಾತ ನಡೆದ ಕೂಡಲೇ ಹಾಲಿನ ಟ್ಯಾಂಕರ್ ನ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದಾನೆ.

from India & World News in Kannada | VK Polls https://ift.tt/L0d7MlB

Bharat Jodo Yatra - ಕೈ ಕೈ ಹಿಡಿದು ನಡೆದ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಬಗ್ಗೆ ಬಿಜೆಪಿ ‘ವ್ಯಂಗ್ಯ’

ಕಾಂಗ್ರೆಸ್ ಪಾಲಿನ ಜೋಡೋತ್ತುಗಳಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಹೈಕಮಾಂಡ್ ಪಾಲಿಗೂ ತಲೆನೋವಾಗಿದೆ. ಸಿದ್ದರಾಮೋತ್ಸವ, ಸ್ವಾತಂತ್ರ್ಯದ ನಡಿಗೆ, ಭಾರತ್ ಜೋಡೋ ಸಿದ್ದತೆ ಸಂದರ್ಭದಲ್ಲಿ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಪದೇ ಪದೇ ಬಹಿರಂಗಗೊಂಡಿತ್ತು. ಈ ಮೂಲಕ ಪಕ್ಷಕ್ಕೂ ಮುಜುಗರ ಉಂಟು ಮಾಡಿತ್ತು. ಅಷ್ಟೇ ಅಲ್ಲ, ಕಾರ್ಯಕರ್ತರಲ್ಲೂ ಇದು ಗೊಂದಲ ಮೂಡಿಸಿದೆ. ಇದನ್ನು ನಿವಾರಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ವೇಳೆ ಪ್ರಯತ್ನಿಸಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಕೈ ಹಿಡಿದು ನಡೆದು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

from India & World News in Kannada | VK Polls https://ift.tt/5YzJQMO

ಜಾನುವಾರುಗಳ ಚರ್ಮಗಂಟು ರೋಗ ನಿಯಂತ್ರಣಕ್ಕೆ ನಾಟಿ ಔಷಧಿ ಬಳಕೆ

ಬೆಂಗಳೂರು ಸಹಕಾರ ಹಾಲು ಒಕ್ಕೂಟದ ತಜ್ಞ ವೈದ್ಯರು ಮತ್ತು ಮಾಗಡಿಯ ಸೋಲೂರು ಪಶು ವೈದ್ಯ ಶಿಬಿರದಲ್ಲಿನ ವೈದ್ಯರು ನಾಟಿ ಚಿಕಿತ್ಸೆಯ ಮಾಹಿತಿ ನೀಡಿದರು. ​ಈ ಮೂಲಕ ರೈತರಿಗೆ ತಿಳಿಸುವ ಪ್ರಯತ್ನ ಮಾಡಿ ಹೈನುಗಾರ ಸಂಘಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ. ​ಸ್ವಾಭಾವಿಕವಾಗಿ ಸಿಗುವ ಗಿಡಮೂಲಿಕೆ, ಮನೆಯ ಸಂಬಾರ ಪದಾರ್ಥಗಳಿಂದ ಚರ್ಮದ ಗಂಟನ್ನು ನಿಯಂತ್ರಿಸುವ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ

from India & World News in Kannada | VK Polls https://ift.tt/AeDNuOg

ವಿಶ್ವಕಪ್‌ಗಿಂತಲೂ ಜಸ್‌ಪ್ರೀತ್‌ ಬುಮ್ರಾ ವೃತ್ತಿಬದುಕು ಮುಖ್ಯ ಎಂದ ಕ್ಯಾಪ್ಟನ್‌ ರೋಹಿತ್‌ ಶರ್ಮಾ!

Team India at ICC T20 World Cup 2022: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಸೇವೆ ಇಲ್ಲದೇ ಆಡುವಂತ್ತಾಗಿರುವುದು ತಂಡಕ್ಕೆ ಎದುರಾದ ಬಹುದೊಡ್ಡ ಹಿನ್ನಡೆ ಎಂದು ನಾಯಕ ರೋಹಿತ್‌ ಶರ್ಮಾ ಒಪ್ಪಿಕೊಂಡಿದ್ದಾರೆ. ಬೆನ್ನು ನೋವಿನ ಸಮಸ್ಯೆ ಎದುರಿಸಿರುವ ಬಲಗೈ ವೇಗದ ಬೌಲರ್‌ ಬುಮ್ರಾ, ಕನಿಷ್ಠ 4 ತಿಂಗಳ ವಿಶ್ರಾಂತಿ ಪಡೆಯುವ ಅಗತ್ಯವಿದ್ದು ವಿಶ್ವಕಪ್‌ ಟೂರ್ನಿಯಿಂದ ಹೊರಗುಳಿದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/yI3mbNe

ಚನ್ನಪಟ್ಟಣದಲ್ಲಿ ಕಾಡಾನೆ ದಾಳಿ: ತಪ್ಪಿಸಿಕೊಂಡು ಓಡಿ ಹೋಗಿ ಬಚಾವಾದ ಯುವಕ

ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಯುವಕನೊಬ್ಬ ಕಾಡಾನೆ ದಾಳಿ ವೇಳೆ ತಪ್ಪಿಸಿಕೊಂಡು ಬಚಾವಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಈ ಭಾಗದಲ್ಲಿನಿರಂತರವಾಗಿ ಕಾಡಾನೆ ಹಾವಳಿಯಿಂದ ರೈತರ ಜಮೀನಿನಲ್ಲಿಬೆಳೆದ ಬೆಳೆಗಳು ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

from India & World News in Kannada | VK Polls https://ift.tt/Q4PpXlG

ಕೇರಳದ ಕಣ್ಣೂರು ಕಾರಾಗೃಹದ ತೆಂಗಿನ ಮರದಲ್ಲಿ ಮೊಬೈಲ್‌ ಫೋನ್‌ ಪತ್ತೆ: ಪೊಲೀಸರಿಂದ ತನಿಖೆ

ರಿಮಾಂಡ್‌ನಲ್ಲಿರುವ ಪಾಪ್ಯುಲರ್‌ ಫ್ರಂಟ್‌ ಕಾರ‍್ಯಕರ್ತರನ್ನು ಭೇಟಿಯಾಗಲು ಬಂದಿದ್ದ ಕಣ್ಣೂರು ವಳಪಟ್ಟಣಂ ನಿವಾಸಿ ಅಬ್ದುಲ್‌ ಅಜೀಜ್‌ (40) ಬೀಡಿ ಸಮೇತ ಜೈಲು ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದ. ಈತನನ್ನು ವಿಚಾರಣೆಗೊಳಪಡಿಸಿದಾಗ ರಿಮಾಂಡ್‌ನಲ್ಲಿರುವ ವ್ಯಕ್ತಿ ಮೊಬೈಲ್‌ ಫೋನ್‌ ಕರೆ ಮಾಡಿ ಬೀಡಿ ತರುವಂತೆ ಹೇಳಿದ್ದು, ಅದರಂತೆ ತಾನು ಬಂದಿರುವುದಾಗಿ ಹೇಳಿಕೆ ನೀಡಿದ್ದ. ಇದರೊಂದಿಗೆ ಜೈಲ್‌ನಲ್ಲಿರುವ ಕೈದಿಗಳು ಮೊಬೈಲ್‌ ಫೋನ್‌ ಬಳಕೆ ಮಾಡುವ ಮಾಹಿತಿ ಲಭಿಸಿದೆ. ಇದರಂತೆ ಜೈಲು ಸಿಬ್ಬಂದಿ ಇಡೀ ಬ್ಲಾಕ್‌ ಹುಡುಕಿದರೂ ಕೈದಿಗಳ ದೇಹ ತಪಾಸಣೆ ನಡೆಸಿದರೂ ಫೋನ್‌ ಲಭಿಸಿರಲಿಲ್ಲ.

from India & World News in Kannada | VK Polls https://ift.tt/tSNab0s

Virat Kohli ಬಗ್ಗೆ ಅಪಹಾಸ್ಯ ಮಾಡಿದ ಸ್ನೇಹಿತನನ್ನು ಇರಿದು ಕೊಂದ ಹುಚ್ಚು ಅಭಿಮಾನಿ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡು ದೈತ್ಯ ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇತ್ತಂಡಗಳ ಅಭಿಮಾನಿಗಳು ಒಂದು ರೀತಿ ಎಣ್ಣೆ ಸೀಗೇಕಾಯಿ ಇದ್ದಹಾಗೆ. ಪಂದ್ಯದ ವೇಳೆ ಇತ್ತಂಡಗಳ ಅಭಿಮಾನಿಗಳು ಟ್ವಿಟರ್‌ನಲ್ಲಿ ಟ್ವೀಟ್‌ ಸಮರವನ್ನೇ ನಡೆಸುತ್ತಾರೆ. ಕೆಲ ಸಂದರ್ಭಗಳಲ್ಲಿ ಆಫ್‌ ದಿ ಫೀಲ್ಡ್‌ನಲ್ಲಿ ಹೊಡೆದಾಟಗಳು ನಡೆದದ್ದೂ ಉಂಟು. ಆದರೆ, ಅಚ್ಚರಿಯ ಘಟನೆ ಎಂಬಂತೆ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ಅಭಿಮಾನಿಯ ನಡುವಣ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದ ಇದೀಗ ಬೆಳಕಿಗೆ ಬಂದಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ht0LqwW

ಪುತ್ತೂರು ಬಸ್‌ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು: ನಗರಸಭೆ ನಿರ್ಣಯಕ್ಕೆ ರಾಜ್ಯ ಸರಕಾರದಿಂದ ಅಧಿಕೃತ ಒಪ್ಪಿಗೆ

ಪುತ್ತೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೋಟಿ ಚೆನ್ನಯ ಬಸ್‌ ನಿಲ್ದಾಣ ಎಂದು ಹೆಸರಿಡುವ ಸಂಬಂಧ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಈ ನಿರ್ಣಯದ ಪ್ರತಿಯನ್ನಿಟ್ಟುಕೊಂಡು ಶಾಸಕ ಸಂಜೀವ ಮಠಂದೂರು ತಮ್ಮ ಟಿಪ್ಪಣಿಯನ್ನೂ ಬರೆದು ಕೆಎಸ್ಸಾರ್ಟಿಸಿಗೆ ಸಲ್ಲಿಸಿದ್ದರು. ಕೆಎಸ್ಸಾರ್ಟಿಸಿ ಅಧ್ಯಕ್ಷರ ಜತೆ ಖುದ್ದು ಮಾತನಾಡಿದ್ದ ಶಾಸಕರು ಆವಶ್ಯತೆಯನ್ನು ಮನಗಾಣಿಸಿದ್ದರು. ಇದಾದ ಬಳಿಕ ಕೆಎಸ್ಸಾರ್ಟಿಸಿ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಇದನ್ನು ಅಂಗೀಕರಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಇದಾದ ಬಳಿಕ ಶಾಸಕರು ಸಾರಿಗೆ ಸಚಿವರ ಜತೆ ಮಾತನಾಡಿ ಮನವರಿಕೆ ಮಾಡಿದ್ದರು.

from India & World News in Kannada | VK Polls https://ift.tt/yzJaon6

Dakshina Kannda News | ನಡೀತಿದೆ ರಸ್ತೆ ಕಾಮಗಾರಿ.. ನೋಡ್ಕೊಂಡು ಸಾಗಿ: ಎಚ್ಚರ ತಪ್ಪಿದ್ರೆ ನಿಮ್ಮ ತಲೆ ಮೇಲೆಯೇ ಬೀಳುತ್ತೆ ಕಬ್ಬಿಣ ತುಂಡು

ಬಿ.ಸಿ.ರೋಡ್‌ ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಬಿ.ಸಿ. ರೋಡ್‌ ನಿಂದ ಉಪ್ಪಿನಂಗಡಿವರೆಗಿನ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಭಾಗಗಳಲ್ಲಿ ಅಲ್ಲಲ್ಲಿ ರಸ್ತೆ ಹೊಂಡಗಳು ಕಾಣಿಸಿಕೊಂಡಿವೆ. ಇದರ ಜತೆಗೆ ಸುರಕ್ಷಿತ ವಾಹನ ಸಂಚಾರಕ್ಕೆಂದು ನಿರ್ಮಿಸಲಾದ ಸರ್ವೀಸ್‌ ರಸ್ತೆಯಲ್ಲೂ ಮೆದುವಾದ ಮಣ್ಣಿನ ತೇಪೆ ಹಾಕಲಾಗಿದ್ದು, ದ್ವಿಚಕ್ರ ವಾಹನವಷ್ಟೇ ಅಲ್ಲ, ಇತರ ವಾಹನಗಳೂ ದಿಕ್ಕು ತಪ್ಪುವಂತಾಗಿದ್ದು, ಅಪಘಾತಗಳು ಸಂಭವಿಸಲಾರಂಭಿಸಿವೆ. ಮಳೆ ಬಂದಾಗ ಇವು ಅಂಟಿಕೊಂಡಿರುತ್ತವೆ, ಬಿಸಿಲು ದಟ್ಟವಾಗಿದ್ದಾಗ ಧೂಳು ಹಾರಲಾರಂಭಿಸುತ್ತವೆ.

from India & World News in Kannada | VK Polls https://ift.tt/cPCfMI9

ಕುಸ್ತಿ ಲೋಕದ ದೈತ್ಯ, ಆಂಡ್ರೆ ದಿ ಜಯಂಟ್‌ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಸಂಗತಿಗಳಿವು!

ಬೆಂಗಳೂರು: ದಿವಂಗತ ಆಂಡ್ರೆ ರೆನೆ ರೌಸಿಮೊಫ್, 'ಆಂಡ್ರೆ ದಿ ಜಯಂಟ್ ಎಂದೇ ಫ್ರಖ್ಯಾತಿ ಪಡೆದಿದ್ದ ಫ್ರಾನ್ಸ್‌ ಮೂಲಕದ ಅಮೆರಿಕನ್‌ ಕುಸ್ತಿಪಟು ಅಕ್ಷರಶಃ ದೈತ್ಯ. ಈ ಅಜಾನುಬಾಹು ಬರೋಬ್ಬರಿ 7.4 ಅಡಿ ಎತ್ತರ ಹೊಂದಿದ್ದರು. ದಿ ಕೋಲ್ಡ್ ವೈರ್ ವರದಿ ಮಾಡಿರುವ ಪ್ರಕಾರ, ಆಂಡ್ರೆ ಅವರ ಎತ್ತರ 7.2 ಅಡಿ ಆಗಿರಬಹುದು ಎನ್ನಲಾಗಿದೆ. ಆದರೆ ಬರಿಗಣ್ಣಿನಲ್ಲಿ ನೋಡಲು ಪ್ರಯತ್ನಿಸುತ್ತಿರುವಾಗ ಆಂಡ್ರೆ ಎತ್ತರ ಅಳೆಯುವಷ್ಟರಲ್ಲಿ ಕುತ್ತಿಗೆ ನೋವು ಬರುವುದು ಖಂಡಿತಾ. ಆಂಡ್ರೆ ದಿ ಜಯಂಟ್‌ ಅವರ ದೈತ್ಯ ದೇಹ ಮಿತಿ ಮೀರಿ ಬೆಳೆದಿತ್ತು. ಆದರೆ ಅವರ ವ್ಯಕ್ತಿತ್ವ ಅವರ ದೇಹಕ್ಕಿಂತಲೂ ದೊಡ್ಡದಾಗಿತ್ತು.ಕುಸ್ತಿ ಜಗತ್ತಿನ ಅತ್ಯಂತ ಜನಪ್ರಿಯ ದೈತ್ಯ ವ್ಯಕ್ತಿಯ ಜೀವನವನ್ನು ಹಿಂತಿರುಗಿ ನೋಡಿದಾಗ, ಆಂಡ್ರೆ ಅವರ ಕೆಲವು ಅತಿರೇಕದ ವರ್ತನೆಗಳು ಕಾಣಿಸುತ್ತವೆ. ಜೊತೆಗೆ ಕಾರೊಂದನ್ನು ಆಟಿಕೆಯಂತೆ ಮಗುಚಿಹಾಕಿದ್ದು, ಅವರ ಎದುರಾಳಿಗಳು ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಳ್ಳುತ್ತಿದ್ದನ್ನು ಕಾಣಲು ಬಹಳಾ ತಮಾಷೆಯ ಹಾಗೆ ಕಾಣಿಡುತ್ತದೆ. ಅಂದಹಾಗೆ ಆಡ್ರೆ ಅವರ ಮೇಲೆ ಒಂದು ಕಪ್ಪು ಚುಕ್ಕೆಯೂ ಇದೆ. ಆಂಡ್ರೆ, ತಮ್ಮ 46ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದದ್ದು ದುರಂತ ಅಂತ್ಯವೇ ಸರಿ.ಆಂಡ್ರೆ ಮತ್ತು ಮಾಜಿ ಮಾಡೆಲ್ ಜೀನ್ ಕ್ರಿಸ್ಟೇನ್ಸೆನ್ ಸ್ವಲ್ಪ ಸಮಯದವರೆಗೆ ಒಟ್ಟಿಗೆ ಇದ್ದರು. ಆದರೆ, ಅವರು ಮದುವೆಯಾಗಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವು ಮೂಲಗಳು ಹೇಳುವಂತೆ, ಇಬ್ಬರೂ ತಮ್ಮ ವಿವಾಹ ಸುದ್ದಿಯನ್ನು ಗೌಪ್ಯವಾಗಿ ಇಟ್ಟಿದ್ದರು ಎನ್ನಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lJfuGsV

ಬ್ರಿಟನ್: ಹಣಕಾಸು ಸಚಿವ ಕ್ವಾಸಿಯನ್ನು ಕಿತ್ತೊಗೆದ ಪ್ರಧಾನಿ; ನೂತನ ವಿತ್ತ ಸಚಿವರಾಗಿ ಜೆರೆಮಿ ಹಂಟ್ ನೇಮಕ

ಇತ್ತೀಚೆಗೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಸಭೆಯಲ್ಲಿ ಪಾಲ್ಗೊಳ್ಳಲು ಕ್ವಾಸಿ ಅಮೆರಿಕಕ್ಕೆ ತೆರಳಿದ್ದರು. ಆದರೆ, ಬ್ರಿಟನ್ ಪ್ರಧಾನಿಯಿಂದ ಬುಲಾವ್ ಬಂದಿದ್ದ ಕಾರಣ, ಇದ್ದಕ್ಕಿದ್ದಂತೆ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಹಿಂದಿರುಗಬೇಕಾಯಿತು. ಹಾಗೆ ಬಂದವರು, ಪ್ರಧಾನಿಯವರೊಂದಿಗೆ ತುಂಬಾ ಮಹತ್ವವಾದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ, ಕ್ವಾಸಿ ಅವರ ಸಚಿವರ ಸ್ಥಾನ ಅವರಿಗೆ ಉಳಿಯುವುದು ಅನುಮಾನ ಎನಿಸಿತ್ತು. ಬಲಪಂಥೀಯ ಆರ್ಥಿಕ ತಜ್ಞರೊಬ್ಬರನ್ನು ಹೊಸ ವಿತ್ತ ಸಚಿವರ ಸ್ಥಾನಕ್ಕೆ ನೇಮಿಸುವ ತಮ್ಮ ಇರಾದೆಯಂತೆ ಪ್ರಧಾನಿ ಟ್ರುಝ್ ಹೊಸ ನೇಮಕಾತಿ ಮಾಡಿದ್ದಾರೆನ್ನಲಾಗಿದೆ.

from India & World News in Kannada | VK Polls https://ift.tt/MsZvfjS

Traffic Ban on Roads: ವಾಕಿಂಗ್ - ಸೈಕ್ಲಿಂಗ್‌ಗಾಗಿ ನಗರದ 75 ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ!

ಪ್ರಮುಖ ಪಾರ್ಕ್ ಗಳು, ಶಾಲಾ ಆವರಣ, ಹೆಚ್ಚು ಜನ ಬೆಳಗ್ಗೆ ವಾಕಿಂಗ್ ಮಾಡುವ ರಸ್ತೆಗಳಲ್ಲಿ ಮುಂಜಾನೆ 5 ರಿಂದ 7-30 ರವರೆಗೆ 2 ವರೇ ಗಂಟೆ ಕಾಲ ವಾಹನಗಳ ನಿಷೇಧಕ್ಕೆ ಸಂಚಾರ ಪೊಲೀಸ್ ವಿಭಾಗ ನಿರ್ಧರಿಸಿದೆ. ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಚಾರ ಬೇರೆ ಕಡೆಗೆ ವರ್ಗಾಯಿಸುವ ಬಗ್ಗೆ ಪಾಲಿಕೆ ಇಂಜಿನಿಯರ್ಸ್ ಅಧ್ಯಯನ ನಡೆಸಲಿದ್ದಾರೆ.

from India & World News in Kannada | VK Polls https://ift.tt/D0FhW57

BMRCL: ಟ್ರಾಲಿ ಮೂಲಕ ಮೆಟ್ರೋ ಟ್ರ್ಯಾಕ್‌ ಮತ್ತು ಥರ್ಡ್‌ ರೈಲು ವ್ಯವಸ್ಥೆ ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳು

BMRCL Director Anjum Parvez: ಬೆಳಗ್ಗೆ 11.30ರಿಂದ ಸಂಜೆ 5 ಗಂಟೆವರೆಗೆ ನಡೆದ ಪರಿಶೀಲನೆಯಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಮತ್ತು ರೈಲ್ವೆ ಸಿಸ್ಟಮ್ಸ್‌ ಎಂಜಿನಿಯರಿಂಗ್‌ ವಿಭಾಗದ ನಿರ್ದೇಶಕ ಎನ್‌.ಎಂ ಧೋಕೆ ಮತ್ತು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆ ಅ.25ರಿಂದ ಮೆಟ್ರೊ ರೈಲುಗಳ ಪರೀಕ್ಷಾರ್ಥ ಸಂಚಾರ ಆರಂಭಿಸುವ ಹಿನ್ನೆಲೆಯಲ್ಲಿ ಗುರುವಾರ ಬೈಯಪ್ಪನಹಳ್ಳಿಯಿಂದ ಬೋಗಿಗಳನ್ನು ಟ್ರೈಲರ್‌ ಮುಖಾಂತರ ವೈಟ್‌ಫೀಲ್ಡ್‌ಗೆ ಸಾಗಿಸಲಾಯಿತು.

from India & World News in Kannada | VK Polls https://ift.tt/JXsxpIV

'ಫೇಸ್‌ಬುಕ್‌ ಸುಂದರಿ' ಬಲೆಗೆ ಬಿದ್ದು ನಿವೃತ್ತ ಪ್ರಿನ್ಸಿಪಾಲ್‌ಗೆ 9 ಲಕ್ಷ ಟೋಪಿ: ಮೋಹದ ಬಲೆ ಬೀಸಿದಾತ ಅಂದರ್

ಫೇಸ್‌ಬುಕ್‌ ಸುಂದರಿಯ ರಸವತ್ತಾದ ಚಾಟಿಂಗ್‌ಗೆ ಮರುಳಾಗಿ ಹಣ ಕಳೆದುಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ಪ್ರಿನ್ಸಿಪಾಲ್‌, ಪೊಲೀಸರು ಬಂಧಿಸಿದ್ದು ಅವಳನ್ನಲ್ಲ, ಅವನನ್ನು ಎಂಬ ಸತ್ಯ ಗೊತ್ತಾಗಿ ದಂಗಾಗಿದ್ದಾರೆ. ಜತೆಗೆ, ಬರೋಬ್ಬರಿ ಒಂದು ವರ್ಷ ಮಹಿಳೆ ಎಂದುಕೊಂಡೇ ಯುವಕನ ಜತೆ ಸಂಭಾಷಣೆ ನಡೆಸಿರುವುದನ್ನು ಸಾಕ್ಷ್ಯಾಧಾರಗಳ ಸಮೇತ ಪೊಲೀಸರು ವಿವರಿಸಿದಾಗ ಪ್ರಿನ್ಸಿಪಾಲ್‌ಗೆ ತಾವು ಫೇಕ್‌ 'ಲಲನೆ'ಗಾಗಿ ಹಣ ಕಳೆದುಕೊಂಡಿರುವುದು ಅರಿವಾಗಿದೆ.

from India & World News in Kannada | VK Polls https://ift.tt/u6s9wQy

Kerala Lottery: ಮನೆ ಮುಟ್ಟುಗೋಲು ಹಾಕುವ ವೇಳೆ ಹೊಡೀತು ಬಂಪರ್ ಬಹುಮಾನ!

ಮುಳುಗುತ್ತಿದ್ದಾಗ ಹುಲುಕಡ್ಡಿಯ ಆಸರೆ ಸಿಕ್ಕರೂ ಸಾಕು ಎಂಬ ಮಾತಿದೆ. ಅಂಥದ್ದೇ ಸಂದರ್ಭದಲ್ಲಿ ಸಿಲುಕಿದ್ದ ಕೇರಳದ ಮೈನಾಗಪಳ್ಳಿಯ ಪಾಲಮೂತಿಲ್ ಎಂಬ ಗ್ರಾಮದ ನಿವಾಸಿ ಪೂಕುಂಜಗೆ ಸರಿಯಾದ ಸಮಯಕ್ಕೆ ಲಾಟರಿ ಬಹುಮಾನ ಬಂದಿರುವುದು, ದೇವರೇ ಕೈ ಹಿಡಿದು ಸೋಲಿನ ಸುಳಿಯಿಂದ ಮೇಲೆತ್ತಿದ ಅನುಭವವನ್ನು ತಂದಿದೆ. ತಕ್ಷಣವೇ ಆತ ತನಗೆ ಲಾಟರಿ ಹೊಡೆದಿದ್ದನ್ನು ಬ್ಯಾಂಕಿನ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಅಲ್ಲಿಗೆ, ಟ್ರಾಜಿಡಿ ಆಗಬೇಕಿದ್ದ ಆತನ ಸ್ಟೋರಿ ಸುಖಾಂತ್ಯಕ್ಕೆ ಬದಲಾಗಿದೆ.

from India & World News in Kannada | VK Polls https://ift.tt/hEnviUQ

Aakash Chopra: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ರನ್‌ ಹೊಳೆ ಹರಿಸುವ ಬ್ಯಾಟರ್‌ ಹೆಸರಿಸಿದ ಆಕಾಶ್ ಚೋಪ್ರಾ!

Team India at ICC T20 World Cup 2022: 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿಯಿದೆ. ಟೀಮ್ ಇಂಡಿಯಾ ಈಗಾಗಲೇ ಕಾಂಗರೂ ನಾಡಲ್ಲಿ ಬೀಡುಬಿಟ್ಟಿದ್ದು, ವೆಸ್ಟರ್ನ್‌ ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಭಾರತ ಟೆಸ್ಟ್‌ ತಂಡದ ಮಾಜಿ ಓಪನರ್‌ ಆಕಾಶ್‌ ಚೋಪ್ರಾ, ಈ ಬಾರಿ ವಿಶ್ವಕಪ್‌ನಲ್ಲಿ ಭಾರತದ ಪರ ರನ್‌ ಹೊಳೆ ಹರಿಸುವ ಬ್ಯಾಟರ್‌ ಯಾರೆಂದು ಹೆಸರಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Xu5LUez

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯ ಇಲ್ಲ, ಕುರಾನ್ ನಲ್ಲೂ ಇಲ್ಲ: ಈಶ್ವರಪ್ಪ

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸಬೇಕು ಎಂಬುದು ಇಲ್ಲ ಎಂದು ಸ್ಪಷ್ಟವಾಗಿ ಇದೆ. ಯಾರಾರು ಖುರಾನ್ ಓದಿದ್ದಾರೋ ಅವರೆಲ್ಲರೂ ಇದನ್ನು ಗಮನಿಸಿದ್ದಾರೆ. ಖುರಾನ್ ನಲ್ಲಿ ಇದು ಇಲ್ಲ. ಸಂವಿಧಾನಕ್ಕೆ ಗೌರವ ಕೊಡಬೇಕು ಎನ್ನುವ ಅಂಶ ಬಹಳ ಮುಖ್ಯ. ಇಬ್ಬರೂ ನ್ಯಾಯಮೂರ್ತಿಗಳು ಇಂದು ನೀಡಿರುವ ತೀರ್ಪು ಬೇರೆ ಬೇರೆ ಇವೆ. ಇಬ್ಬರೂ ಬೇರೆ ಬೇರೆ ಯಾಕೆ ತೀರ್ಪು ನೀಡಿದ್ದಾರೆ ಎಂದು ಕೇಳುವ ಹಕ್ಕು ಯಾರಿಗೂ ಇಲ್ಲ. ಆದರೆ, ಇದು ಧಾರ್ಮಿಕ ಆಚರಣೆ ಅಲ್ಲ ಎಂದಿದ್ದಾರೆ.

from India & World News in Kannada | VK Polls https://ift.tt/iOIHC51

Cattle disease - ರೈತರೇ ಎಚ್ಚರ! ಜಾನುವಾರುಗಳಿಗೆ ಬಂದಿದೆ ವಿಚಿತ್ರ ಕಾಯಿಲೆ!

ತುಮಕೂರು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ಎಂಬ ರೋಗ ಕಾಣಿಸಿಕೊಂಡಿದೆ. ಆರಂಭದಲ್ಲಿ ಇದ್ದಕ್ಕಿದ್ದಂತೆ ದನ-ಕರುಗಳ ಮೈ ಮೇಲೆ ಚರ್ಮಗಂಟು ಕಾಣಿಸಿಕೊಳ್ಳುತ್ತದೆ. ಆ ನಂತರ ಗಾಯ. ಗಾಯದಿಂದ ಕೀವು ಉಂಟಾಗಿ ಜ್ವರದ ಮೂಲಕ ನಿತ್ರಾಣಗೊಳ್ಳುತ್ತಿವೆ. ಈ ವಿಚಿತ್ರ ಕಾಯಿಲೆಯಿಂದ ಆತಂಕಗೊಂಡು ಕಂಗಾಲಾಗಿದ್ದಾರೆ ತುಮಕೂರು ಜಿಲ್ಲೆಯ ರೈತರು.

from India & World News in Kannada | VK Polls https://ift.tt/aWvf4nO

ಲಗೇಜಿನಿಂದಾಗಿ ಹ್ಯಾಂಡಲ್ ತಿರುಗಿಸಲಾಗದ್ದಕ್ಕೆ ಕೆರೆಗೆ ಬಿದ್ದ ಬೈಕ್: ಗರ್ಭಿಣಿ ಸಾವು, ಪತಿ ಗಂಭೀರ

ದಂಪತಿ ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಗರ್ಭಿಣಿ ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪ ನಡೆದಿದೆ. ಬಹಳಷ್ಟು ಲಗೇಜ್ ಇದ್ದ ಹಿನ್ನೆಲೆಯಲ್ಲಿ ಹ್ಯಾಂಡಲ್ ತಿರುಗಿಸಲಾಗದೆ ನಿಯಂತ್ರಣ ತಪ್ಪಿದ ಬೈಕ್ ಕೆರೆಗೆ ಬಿದ್ದು ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

from India & World News in Kannada | VK Polls https://ift.tt/TvmOWrH

ENG vs AUS: ವಿಶ್ವಕಪ್‌ಗೂ ಮುನ್ನ ವಿಶ್ವ ಚಾಂಪಿಯನ್ಸ್‌ ಎದುರು ಟಿ20 ಸರಣಿ ಗೆದ್ದ ಇಂಗ್ಲೆಂಡ್‌!

England vs Australia 2nd T20I Highlights: ಪಾಕಿಸ್ತಾನ ಪ್ರವಾಸದಲ್ಲಿ 7 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ಕಾಂಗರೂ ನಾಡಿಗೆ ತೆರಳಿರುವ ಇಂಗ್ಲೆಂಡ್‌ ತಂಡ, ಇದೀಗ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೂ ಮುನ್ನ ಆತಿಥೇಯ ಹಾಗೂ ಹಾಲಿ ಟಿ20 ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಇನ್ನೊಂದು ಪಂದ್ಯಗಳು ಬಾಕಿ ಇರುವಾಗಲೇ ಗೆದ್ದುಕೊಂಡಿದೆ. ಕಾಕತಾಳೀಯ ಎಂಬಂತೆ ಸರಣಿಯ ಎರಡೂ ಪಂದ್ಯಗಳನ್ನು ಇಂಗ್ಲೆಂಡ್‌ 8 ರನ್‌ಗಳಿಂದ ಗೆದ್ದಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/UCus8AK

Cm Bommai-ಮೀಸಲಾತಿ ಹೆಚ್ಚಿಸಿದ್ದಕ್ಕೆ ಸಿಎಂ ಬೊಮ್ಮಾಯಿಗೆ ಹೊಸಪೇಟೆಯಲ್ಲಿ ಸನ್ಮಾನ

ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ವಿಜಯನಗರ ಜಿಲ್ಲೆಯಲ್ಲಿ ಸನ್ಮಾನಿಸಲಾಯಿತು. ಇದೇವೇಳೆ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತೆರೆದ ವಾಹನದಲ್ಲಿ ರೋಡ್ ಶೋ ಮಾಡಲಾಯಿತು.

from India & World News in Kannada | VK Polls https://ift.tt/DsqdmEN

Yashaswini Health Insurance Scheme - ಯಶಸ್ವಿನಿ ಯೋಜನೆಗೆ ಪುನಃ ಜಾರಿ: ಸಿಎಂ ಪ್ರಕಟಣೆ; ನ. 1ರಿಂದ ನೋಂದಾವಣಿ

2003ರಲ್ಲಿ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಯೋಜನೆ 2018ರಲ್ಲಿ ಸ್ಥಗಿತಗೊಂಡಿತ್ತು. ಆದರೆ, ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಆಸಕ್ತಿ ತೋರಿದ್ದರು. 2022ರ ಬಜೆಟ್ ನಲ್ಲೇ ಈ ಯೋಜನೆಯ ಮರುಜಾರಿಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಅದರಂತೆ, ಹಳೆಯ ಯೋಜನೆಯಲ್ಲಿ ಕೆಲವಾರು ಮಾರ್ಪಾಟುಗಳನ್ನು ಮಾಡಿ ಈಗ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ. ಈ ಯೋಜನೆಗೆ 300 ಕೋಟಿ ರೂ. ಮೀಸಲಿಡುವುದಾಗಿ ಸಿಎಂ ಘೋಷಿಸಿದ್ದಾರೆ. ನ. 1ರಿಂದ ಯೋಜನೆಯ ಫಲಾನುಭವಿಗಳ ನೋಂದಾವಣೆ ಆಗಲಿದೆ.

from India & World News in Kannada | VK Polls https://ift.tt/3RWiZxL

Shivamogga | ಲಿಫ್ಟ್‌ನಲ್ಲಿ ಸಿಕ್ಕಿತು 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್‌, ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಎಫ್‌ಡಿಎ

Tumakuru FDA: ಚಿಂತಾಮಣಿಗೆ ತೆರಳುತ್ತಿದ್ದಾಗ ಶಿವಮೊಗ್ಗದ (Shivamogga) ವಿನೋಬಾ ನಗರದ ನಿವಾಸಿ ಅರ್ಪಿತಾ ಚಿನ್ನವಿದ್ದ ಬ್ಯಾಗ್‌ ಕಳೆದುಕೊಂಡಿದ್ದರು. ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ತುಮಕೂರು ನ್ಯಾಯಾಲಯದಲ್ಲಿ ಪ್ರಥಮದರ್ಜೆ ಸಹಾಯಕರಾಗಿರುವ ಗುರುರಾಜ್‌ಗೆ ರೈಲ್ವೆ ನಿಲ್ದಾಣದಲ್ಲಿ ಆ ಬ್ಯಾಗ್‌ ಸಿಕ್ಕಿತ್ತು. ಅವರು ಅದರ ವಾರಸುದಾರರನ್ನು ಹುಡುಕಾಡಿ ಸಿಗದಿದ್ದಾಗ ಮನೆಗೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

from India & World News in Kannada | VK Polls https://ift.tt/0Eu3r4p

ಯಶಸ್ವಿನಿ ಯೋಜನೆ ಮರು ಜಾರಿ: ನವೆಂಬರ್ 1 ರಿಂದ ನೋಂದಣಿ ಪ್ರಾರಂಭ

ಯಶಸ್ವಿನಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬ ಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೊಂದಾಯಿಸಬಹುದು. ನವೆಂಬರ್ 1 ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಲಿದೆ.

from India & World News in Kannada | VK Polls https://ift.tt/agB2eLN

Channapatna | ಚನ್ನಪಟ್ಟಣ: ವಿದ್ಯುತ್‌ ಕಂಬದ ಬಳಿ ಹುಲ್ಲು ಮೇಯಲು ಹೋದ ಕುದುರೆಗೆ ಕರೆಂಟ್‌ ಶಾಕ್‌, ಸಾವು

Electric Shock to Horse: ಚನ್ನಪಟ್ಟಣದ (Channapatna) ಚಾನಲ್‌ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್‌ ಕಂಬಗಳು ಶಿಥಿಲಗೊಂಡಿವೆ. ಬೆಸ್ಕಾಂ ಸಿಬ್ಬಂದಿ ಉದಾಸೀನದಿಂದಾಗಿ ವಿದ್ಯುತ್‌ ಕಂಬದಿಂದ ಮನೆಗಳಿಗೆ ಸಂಪರ್ಕ ಅಳವಡಿಸಲು ಬಳಸಿರುವ ವೈರುಗಳು ತೆರೆದು ಅಪಾಯಕ್ಕೆ ಕಾರಣವಾಗಿದೆ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರು ಬೆಸ್ಕಾಂ ಅಧಿಕಾರಿಗಳು ಗಮನಹರಿಸುತ್ತಿಲ್ಲಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

from India & World News in Kannada | VK Polls https://ift.tt/SaIwUED

ಕನ್ನಡ ವಿಧೇಯಕ ಸಮಗ್ರವಾಗಲಿ: ದೊಡ್ಡರಂಗೇಗೌಡ, ಕಂಬಾರ, ಭೈರಪ್ಪ ಸೇರಿ ಅನೇಕ ಗಣ್ಯರ ಆಗ್ರಹ

ಸದನದಲ್ಲಿ ಮಂಡನೆಯಾಗಿರುವ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022'ರಲ್ಲಿದ್ದ ದಂಡ ವಿಚಾರ, ಜಾರಿ ನಿರ್ದೇಶನ ವ್ಯವಸ್ಥೆ ಅಂಶಗಳಲ್ಲಿ ಲೋಪವಿದೆ. ಹೀಗಾಗಿ, ಇದನ್ನು ಮರುಪರಿಶೀಲಿಸಿ, ನಂತರ ಕಾನೂನಾಗಿ ಜಾರಿಗೊಳಿಸಬೇಕು. ಜತೆಗೆ, ಈ ವಿಧೇಯಕದ ಅನುಮೋದನೆಯಲ್ಲಿಕನ್ನಡ ಸಾಹಿತ್ಯ ಪರಿಷತ್ತಿನ ಸಲಹೆ, ನಿರ್ಣಯಗಳಿಗೆ ಆದ್ಯತೆ ನೀಡಬೇಕು,''ಎಂದು ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ, ಡಾ.ದೊಡ್ಡರಂಗೇಗೌಡ ಸೇರಿದಂತೆ ಹಲವು ಸಾಹಿತಿಗಳು, ಮಠಾಧಿಪತಿಗಳು, ಅನೇಕ ಕ್ಷೇತ್ರಗಳ ಗಣ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

from India & World News in Kannada | VK Polls https://ift.tt/xR3EHAc

ENG vs PAK: ಪಾಕ್‌ ವಿರುದ್ಧದ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ, ಸ್ಟಾರ್‌ ಆಲ್‌ರೌಂಡರ್‌ಗೆ ಅವಕಾಶ!

England Tour of Pakistan 2022-23: ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್ ಭಾಗವಾಗಿ ಇದೇ ವರ್ಷ ಡಿಸೆಂಬರ್‌ನಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ಸಲುವಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ, ಬುಧವಾರ ತನ್ನ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಸಾರಥ್ಯದ ಹೊಂದಿರುವ ಇಂಗ್ಲೆಂಡ್‌ ತಂಡದಲ್ಲಿ ಪ್ರತಿಭಾನ್ವಿತ ಆಟಗಾರ ಲಿಯಾಮ್‌ ಲಿವಿಂಗ್‌ಸ್ಟೋನ್ ಕಾಣಿಸಿಕೊಂಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4lMw6LH

ದಳಪತಿ ವಿರುದ್ಧ ಅಖಾಡಕ್ಕಿಳಿದ ಸೈನಿಕನಿಗೆ ಅಸಹಕಾರ: ಸಿ.ಪಿ. ಯೋಗೇಶ್ವರ್‌ ವಿರುದ್ಧವಿದೆಯೇ ಬಿಜೆಪಿ ಬಣ..?

ಜೆಡಿಎಸ್‌ ಅಧಿಪತಿ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಚನ್ನಪಟ್ಟಣದಲ್ಲಿ ಬಿಜೆಪಿ ವಿಧಾನಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಜಿದ್ದಾಜಿದ್ದಿನ ರಾಜಕಾರಣ ಮಾಡುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ್ ನಾರಾಯಣ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರ ನಡುವೆ ಸದನದಲ್ಲಿ ನಡೆದ ವಾಗ್ಯುದ್ಧ ಜಗಜ್ಜಾಹೀರವಾಗಿರುವ ಸಂಗತಿ. ಈ ಎಲ್ಲಾ ಘಟನೆಗಳ ನಡುವೆ ಕೆಲವು ಬಿಜೆಪಿ ಮುಖಂಡರು ಕುಮಾರಸ್ವಾಮಿ ಅವರ ಜತೆಗೆ ಸಖ್ಯ ಬೆಳೆಸಿರುವುದು ಜಿಲ್ಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

from India & World News in Kannada | VK Polls https://ift.tt/0VK1F8g

ಚನ್ನಪಟ್ಟಣದಲ್ಲಿ ಮತ್ತೆ ಕಾಡಾನೆ ಹಾವಳಿ; ಏಳು ಆನೆಗಳ ಹಿಂಡಿನಿಂದ ದಾಂಧಲೆ

ಚನ್ನಪಟ್ಟಣ ತಾಲೂಕಿನ ಎನ್‌.ಆರ್‌. ಕಾಲೋನಿ ಸಮೀಪದ ಅರಣ್ಯ ಪ್ರದೇಶದಲ್ಲಿ7 ಕಾಡಾನೆಗಳು ಒಟ್ಟಾಗಿ ಸಂಚರಿಸುತ್ತಿರುವ ದೃಶ್ಯ ಡ್ರೋಣ್‌ ಕ್ಯಾಮೆರಾದಲ್ಲಿಸೆರೆಯಾಗಿದೆ. ಸ್ಥಳೀಯರೊಬ್ಬರು ಡ್ರೋಣ್‌ ಕ್ಯಾಮೆರಾ ಬಳಸಿ ಖಾಸಗಿ ಕಾರ‍್ಯಕ್ರಮ ಚಿತ್ರಿಸುತ್ತಿದ್ದ ವೇಳೆ ಆನೆಗಳು ಚಲಿಸುತ್ತಿರುವ ದೃಶ್ಯ ಸೆರೆಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದ್ದು, ಆ ಭಾಗದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

from India & World News in Kannada | VK Polls https://ift.tt/KJNf8gS

3 ಇಲಾಖೆಗಳ ವಿಲೀನ, 2,000 ಹುದ್ದೆ ರದ್ದು: ಸಂಪುಟ ಉಪ ಸಮಿತಿ ಮಹತ್ವದ ನಿರ್ಧಾರ

Karnataka Cabinet sub committee: ಕೃಷಿ ಇಲಾಖೆಯ (Agriculture department) ಮೂರು ನಿಗಮಗಳನ್ನು ರದ್ದು ಪಡಿಸುವುದು; ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆ ಇಲಾಖೆಯ ವಿಲೀನ; ಏಳು ಅಭಿವೃದ್ಧಿ ಪ್ರಾಧಿಕಾರಗಳನ್ನು ರದ್ದು ಪಡಿಸುವ ಪ್ರಮುಖ ನಿರ್ಧಾರಗಳನ್ನು ಇದೇ ಸಂಪುಟ ಉಪಸಮಿತಿ ಕೈಗೊಂಡಿದೆ. ಮುಂದಿನ ಸಭೆಯಲ್ಲಿ ಅರಣ್ಯ ಇಲಾಖೆಯಲ್ಲಿನ (Forest department) ಅನಗತ್ಯ ಉನ್ನತ ಶ್ರೇಣಿ ಹುದ್ದೆಗಳಿಗೆ ಕತ್ತರಿ ಪ್ರಯೋಗ ನಡೆಸಲು ತೀರ್ಮಾನಿಸಿರುವುದು ಕುತೂಹಲ ಮೂಡಿಸಿದೆ.

from India & World News in Kannada | VK Polls https://ift.tt/QE6yTam

ಯುವಿಸಿಇ ಆಡಳಿತ ಮಂಡಳಿಗೆ ಸದಸ್ಯರ ನೇಮಕ; ಸಡಗೋಪನ್, ಬಿ.ವಿ.ಜಗದೀಶ್ ಗೆ ಸ್ಥಾನ

ಯೂನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ)ನ ಪ್ರಥಮ ಆಡಳಿತ ಮಂಡಳಿಗೆ ಸರಕಾರವು ಬೆಂಗಳೂರು ಐಐಐಟಿಯ ನಿವೃತ್ತ ನಿರ್ದೇಶಕ ಪ್ರೊ.ಎಸ್.ಸಡಗೋಪನ್ ಮತ್ತು ಉದ್ಯಮಿ ಬಿ.ವಿ.ಜಗದೀಶ್ ಸೇರಿದಂತೆ ಹಲವರನ್ನು ಸದಸ್ಯರನ್ನಾಗಿ ನೇಮಿಸಿದೆ.

from India & World News in Kannada | VK Polls https://ift.tt/PlRm8H0

Datta Mala Abhiyan | ಚಿಕ್ಕಮಗಳೂರು: ನ.7ರಿಂದ ಶ್ರೀರಾಮಸೇನೆ ದತ್ತಮಾಲಾ ಅಭಿಯಾನ

Sri Rama Sene: ನ.10ಕ್ಕೆ ಇಡೀ ರಾಜ್ಯದಲ್ಲಿ ದತ್ತದೀಪೋತ್ಸವ, 12ಕ್ಕೆ ಪಡಿಸಂಗ್ರಹ, ಭಿಕ್ಷಾಟನೆ ನಡೆಯಲಿದೆ. ನ.13ಕ್ಕೆ ನಗರದಲ್ಲಿ ಶೋಭಾಯಾತ್ರೆ, ಧರ್ಮಸಭೆ, ನಂತರ ದತ್ತಪೀಠಕ್ಕೆ (datta peeta) ತೆರಳಿ ದತ್ತಪಾದುಕೆ ದರ್ಶನ, ಹೋಮ, ಪೂಜೆ, ಹಾಗೂ ಸಾಧು ಸಂತರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಹಿಂದೂರಾಷ್ಟ್ರ ಸಂಘಟನೆ ಮಹಾರಾಷ್ಟ್ರದ ಧನಂಜಯ ದೇಸಾಯಿ, ಸಾವರ್ಕರ್‌ ಮೊಮ್ಮಗ ಸಾತ್ಯಾಕಿ ಸಾವರ್ಕರ್‌ ಭಾಗವಹಿಸುವ ನಿರೀಕ್ಷೆ ಇದೆ ಗಂಗಾಧರ ಕುಲಕರ್ಣಿ ಹೇಳಿದರು.

from India & World News in Kannada | VK Polls https://ift.tt/oUXuj6J

ಐನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ಟಿ20 ವಿಶ್ವಕಪ್ ನ ಭಾರತ ಪಂದ್ಯಗಳ ನೇರಪ್ರಸಾರ!

T20 World Cup 2022 - ಭಾರತದಾದ್ಯಂತ ಇರುವ 25 ಐನಾಕ್ಸ್ ಥಿಯೇಟರ್ ಗಳಲ್ಲಿ ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ ಎಂದು ಐನಾಕ್ಸ್ ತಿಳಿಸಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿರುವ ಐನಾಕ್ಸ್ ಲೀಷರ್ ಸಂಸ್ಥೆಯ (INOX) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ವಿಶಾಲ್, “ಭಾರತೀಯರು ಅತಿ ಹೆಚ್ಚಾಗಿ ಪ್ರೀತಿಸುವ ಕ್ರಿಕೆಟನ್ನು ದೊಡ್ಡ ಪರದೆಯ ಮೇಲೆ ನೋಡುವ ಹಾಗೂ ಅದರ ಸೌಂಡ್ ಎಫೆಕ್ಟ್ ಗಳನ್ನು ದೊಡ್ಡಮಟ್ಟದಲ್ಲಿ ಅನುಭವಿಸುವ ಮಜಾವನ್ನು ಐನಾಕ್ಸ್ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ನೀಡಲು ನಿರ್ಧರಿಸಿದೆ’’ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/xuc6DJ9

Infosys | ಇನ್ಫೋಸಿಸ್‌ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್‌ ರಾಜೀನಾಮೆ

Ravi Kumar resigns: ರವಿ ಕುಮಾರ್‌ ಅವರು ಕಂಪನಿಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆಯನ್ನು ಆಡಳಿತ ಮಂಡಳಿ ಸ್ಮರಿಸಿದೆ. ತಂತ್ರಜ್ಞಾನ, ಮೂಲಸೌಕರ್ಯ, ಎಂಜಿನಿಯರಿಂಗ್‌ ಎಲ್ಲವನ್ನೂ ನಿಭಾಯಿಸಿದ್ದ ಅವರು, ಡಿಜಿಟಲ್‌ ಮಾರ್ಕೆಟಿಂಗ್‌ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 2002ರಲ್ಲಿ ರವಿಕುಮಾರ್‌ ಅವರು ಇನ್ಫೋಸಿಸ್‌ಗೆ (Infosys) ಸೇರಿದ್ದರು. 2016ರಲ್ಲಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಅವರು, ವಿಮೆ ಮತ್ತು ಪಾವತಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.

from India & World News in Kannada | VK Polls https://ift.tt/L7vXwPt

ಐನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ಟಿ20 ವಿಶ್ವಕಪ್ ನ ಭಾರತ ಪಂದ್ಯಗಳ ನೇರಪ್ರಸಾರ!

T20 World Cup 2022 - ಭಾರತದಾದ್ಯಂತ ಇರುವ 25 ಐನಾಕ್ಸ್ ಥಿಯೇಟರ್ ಗಳಲ್ಲಿ ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ ಎಂದು ಐನಾಕ್ಸ್ ತಿಳಿಸಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿರುವ ಐನಾಕ್ಸ್ ಲೀಷರ್ ಸಂಸ್ಥೆಯ (INOX) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ವಿಶಾಲ್, “ಭಾರತೀಯರು ಅತಿ ಹೆಚ್ಚಾಗಿ ಪ್ರೀತಿಸುವ ಕ್ರಿಕೆಟನ್ನು ದೊಡ್ಡ ಪರದೆಯ ಮೇಲೆ ನೋಡುವ ಹಾಗೂ ಅದರ ಸೌಂಡ್ ಎಫೆಕ್ಟ್ ಗಳನ್ನು ದೊಡ್ಡಮಟ್ಟದಲ್ಲಿ ಅನುಭವಿಸುವ ಮಜಾವನ್ನು ಐನಾಕ್ಸ್ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ನೀಡಲು ನಿರ್ಧರಿಸಿದೆ’’ ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/xuc6DJ9

Magadi | ಮಾಗಡಿಯಲ್ಲಿ ಗಾರ್ಮೆಂಟ್ಸ್‌ ಶೀಘ್ರ ಆರಂಭ: ಶಾಸಕ ಎ.ಮಂಜುನಾಥ್‌

Garments in Magadi: ಪಟ್ಟಣದ ಪಣಕನಕಲ್ಲು ಬಳಿ ಹತ್ತು ಕೋಟಿ ವೆಚ್ಚದಲ್ಲಿ ಶ್ರೀರಂಗ ಅಣೆಕಟ್ಟನ್ನು ಕಟ್ಟಿಸಲಾಗುತ್ತಿದೆ. ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು. 400 ಕೋಟಿ ವೆಚ್ಚದಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆ ಈಗಾಗಲೇ ಪೂರ್ಣಗೊಂಡಿದ್ದು, ಡಿಸೆಂಬರ್‌ ಒಳಗೆ 82 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

from India & World News in Kannada | VK Polls https://ift.tt/iRTQKnV

Bharat Jodo Yatra - ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ: ರಾಹುಲ್ ಗಾಂಧಿ ಆರೋಪ

ಭಾರತ್ ಜೋಡೋ ಯಾತ್ರೆ ಸೋಮವಾರ (ಅ. 10ರಂದು) ಹಿರಿಯೂರಿಗೆ ಆಗಮಿಸಿದೆ. ಹಿರಿಯೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ‘’ಬಿಜೆಪಿಯ ಶಾಸಕರೊಬ್ಬರು ಇತ್ತೀಚೆಗೆ ಆರೋಪಿಸಿದ್ದೇನೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು 2,500 ಕೋಟಿ ರೂ. ಕೊಟ್ಟು ಖರೀದಿಸಲಾಗಿದೆ ಎಂದು. ಹಾಗೆ ನೋಡಿದರೆ, ರಾಜ್ಯದಲ್ಲಿ ಎಲ್ಲಾ ಹುದ್ದೆಗಳೂ ಮಾರಾಟಕ್ಕಿವೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ 80 ಲಕ್ಷ ರೂ. ನಿಗದಿಪಡಿಸಿ ಮಾರಾಟ ಮಾಡಲಾಗಿದೆ. ಹಾಗೆಯೇ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳೂ ಮಾರಾಟವಾಗಿವೆ. ಇಂಜಿನಿಯರ್ ಹುದ್ದೆಗಳು ಮಾರಾಟವಾಗಿವೆ’’ ಎಂದು ಆರೋಪಿಸಿದ್ದಾರೆ.

from India & World News in Kannada | VK Polls https://ift.tt/mkdM8K7

Smriti Mandhana: ವಿರಾಟ್‌ ಕೊಹ್ಲಿ-ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದ ಸ್ಮೃತಿ ಮಂಧಾನಾ!

Smriti Mandhana completes 100 T20I matches: ಭಾರತ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಟೀಮ್‌ ಇಂಡಿಯಾ ದಿಗ್ಗಜರಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಸ್ಮೃತಿ, ಈ ವಿಶೇಷ ಮೈಲುಗಲ್ಲು ಸೃಷ್ಟಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/J2WlQ5D

ಒತ್ತಡ ನಿವಾರಣೆಗೆ 'ಇನ್‌ಸ್ಟಾಗ್ರಾಂ' ತರಗತಿ, 3.15 ಲಕ್ಷ ರೂ. ವಂಚನೆ: ನಕಲಿ ಥೆರಪಿಸ್ಟ್‌ಗಳ ನಿಯಂತ್ರಣ ಕ್ರಮಕ್ಕೆ ಹೈಕೋರ್ಟ್‌ ಆದೇಶ

Fake Therapists: ಸಾಮಾಜಿಕ ಜಾಲತಾಣಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನಕಲಿ ಥೆರಪಿಸ್ಟ್‌ಗಳ ನಿಯಂತ್ರಣಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದೆ. ಅರ್ಹತೆ ಹೊಂದಿರದಿದ್ದರೂ ವ್ಯಕ್ತಿಯೊಬ್ಬರಿಗೆ ಇನ್‌ಸ್ಟಾಗ್ರಾಂ ಮೂಲಕ ಮಾನಸಿಕ ಒತ್ತಡ ನಿವಾರಣೆಗೆ ಥೆರಪಿ ತರಗತಿ ನಡೆಸಿ 3.15 ಲಕ್ಷ ರೂ. ಪಡೆದು ವಂಚಿಸಿದ ಸಂಬಂಧ ಮಹಿಳೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಕೇಸ್‌ ರದ್ದು ಮಾಡಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ಮಾಡಿದೆ.

from India & World News in Kannada | VK Polls https://ift.tt/zpYIGA1

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ರಿಗೆ ಮಾತೃ ವಿಯೋಗ

ಶ್ರೀ ಕ್ಷೇತ್ರ ಪೊಳಲಿಯ ಮಾಜಿ ಮೋಕ್ತೇಸರರಾಗಿದ್ದ ದಿ.ರಮೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಪತ್ನಿ ಸರೋಜಿನಿ ಆರ್. ನಾಯ್ಕ್ ಅವರು ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ದಾನ ಧರ್ಮಗಳಿಂದ ಗಮನ ಸೆಳೆದಿದ್ದರು. ಇವರಿಗೆ ಪುತ್ರ ಉಳಿಪ್ಪಾಡಿ ಗುತ್ತು ರಾಜೇಶ್ ಮತ್ತು ಪುತ್ರಿ ರಜನಿ ಶೆಟ್ಟಿ ಇದ್ದಾರೆ.

from India & World News in Kannada | VK Polls https://ift.tt/eyqETwD

ಪುಲ್ವಾಮಾ ದಾಳಿ ವೇಳೆ ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರು?: ಖಾದರ್

ಮುಂಬೈ ಬಾಂಬ್ ಸ್ಫೋಟವಾದಾಗ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಕೇಳುವ ಬಿಜೆಪಿಗರು ಪುಲ್ವಾಮಾ ದಾಳಿಯಾದಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್. ಯಾಕೆ ಇನ್ನೂ ಇದರ ತನಿಖೆ ನಡೆದಿಲ್ಲ? ಗುಪ್ತಚರ ಇಲಾಖೆ ಕೇಂದ್ರದ ಕೈಯಲ್ಲಿತ್ತಲ್ಲ? ಆಗ ಕೇಂದ್ರದ ಗೃಹಸಚಿವರು ಏನು ಮಾಡುತ್ತಿದ್ದರು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

from India & World News in Kannada | VK Polls https://ift.tt/os59mYc

Shiv Sena | ಠಾಕ್ರೆ ಬಣಕ್ಕೆ 'ಉರಿಯುವ ಜ್ಯೋತಿ', ಶಿಂಧೆ ಬಣ ಗುರುತಿಸಿದ್ದ ಚಿಹ್ನೆಗಳಿಗೆ ಸಿಗದ ಒಪ್ಪಿಗೆ: ಎರಡೂ ಶಿವಸೇನಾಗಳಿಗೆ ಹೊಸ ಹೆಸರು

Uddhav Thackeray and Eknath Shinde: ಉದಯಿಸುತ್ತಿರುವ ಸೂರ್ಯ ಈಗಾಗಲೇ ಡಿಎಂಕೆ ಪಕ್ಷದ ಚಿಹ್ನೆಯಾಗಿದ್ದು, ಬೆಳಗುತ್ತಿರುವ ಪಂಜು ಈ ಹಿಂದೆ ಸಮತ ಪಕ್ಷಕ್ಕೆ ನೀಡಲಾಗಿದ್ದರೂ, ಈಗ ಆ ಪಕ್ಷ ಮಾನ್ಯತೆ ಕಳೆದುಕೊಂಡಿರುವ ಕಾರಣ ಉದ್ಧವ್‌ ಬಣಕ್ಕೆ ನೀಡಲಾಗಿದೆ. ಈ ನಡುವೆ ಸಿಎಂ ಏಕನಾಥ್‌ ಶಿಂಧೆ ಬಣಕ್ಕೆ 'ಬಾಳಾ ಸಾಹೇಬ್‌ ಶಿವಸೇನಾ' (Shiv Sena) ಹೆಸರನ್ನು ನೀಡಿರುವ ಆಯೋಗವು ಹೊಸದಾಗಿ ಮೂರು ಚಿಹ್ನೆಗಳನ್ನು ಆಯ್ಕೆ ಮಾಡಿಕೊಂಡು ಮತ್ತೆ ಸಲ್ಲಿಸುವಂತೆ ಸೂಚಿಸಿದೆ.

from India & World News in Kannada | VK Polls https://ift.tt/dqopj4I

World Mental Health Day: ಯುವಜನರಲ್ಲಿ ಹೆಚ್ಚಿದ ಖಿನ್ನತೆ: ಆತ್ಮಹತ್ಯೆ ಪಟ್ಟಿಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ!

ಯುವಜನರ ಮಾನಸಿಕ ಆರೋಗ್ಯ ಕುಸಿಯುತ್ತಿದ್ದು, ಆತ್ಮಹತ್ಯೆಗಳ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ. ಕಳೆದ ವರ್ಷ ದೇಶಾದ್ಯಂತ 1.64 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ 13089 ವಿದ್ಯಾರ್ಥಿ ಗಳು ಮೃತಪಟ್ಟಿದ್ದಾರೆ. ಹೆಚ್ಚು ಆತ್ಮಹತ್ಯೆಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ, ತಮಿಳು ನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮೊದಲ 4 ಸ್ಥಾನದಲ್ಲಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತನ್ನ ವರದಿಯಲ್ಲಿ ಪ್ರಕಟಿಸಿದೆ. ರಾಜ್ಯದಲ್ಲಿ ಕಳೆದ ವರ್ಷ 13056 ಆತ್ಮಹತ್ಯೆಗಳು ವರದಿಯಾಗಿವೆ.

from India & World News in Kannada | VK Polls https://ift.tt/7sd3qZb

Gold Rate Today: ಆಭರಣ ಖರೀದಿಗೆ ನಿರ್ಧರಿಸಿದ್ದೀರಾ? ಹಾಗಿದ್ದರೆ ಈದಿನ ಚಿನ್ನದ ದರ ಹೇಗಿದೆ? ಇಲ್ಲಿದೆ ವಿವರ

Gold Price in Bengaluru: ಬಂಗಾರ ಯಾರಿಗಿಷ್ಟ ಇಲ್ಲ ಹೇಳಿ? ಚಿನ್ನ ಖರೀದಿಸುವವರು ಮಾತ್ರವಲ್ಲ ಎಲ್ಲರಿಗೂ ಕೂಡ ದಿನದ ಚಿನ್ನದ ಧಾರಣೆ ಎಷ್ಟಿದೆ ಎನ್ನುವ ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಪ್ರತಿ ದಿನ ಚಿನ್ನದ ಬೆಲೆ ವ್ಯತ್ಯಯವಾಗುತ್ತದೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿಯ ದರ ಎಷ್ಟಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.

from India & World News in Kannada | VK Polls https://ift.tt/rJKcVka

ತಂಬಾಕು ಬೆಳೆಗೆ ವರುಣಾಘಾತ: ಉತ್ಪಾದನೆಯಲ್ಲಿ ಶೇ.50 ಕುಸಿತ, ಸಂಕಷ್ಟದಲ್ಲಿ ಮೈಸೂರು ಜಿಲ್ಲೆಯ ಬೆಳೆಗಾರರು

ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ. ಕೋಟೆ ತಾಲೂಕುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಗೂ ಸಾಲಿಗ್ರಾಮ, ಅರಕಲಗೂಡು, ನಂಜನಗೂಡು ತಾಲೂಕಿನ ಕೆಲ ಭಾಗದಲ್ಲಿ ಅಲ್ಪ ಪ್ರಮಾಣದ ಬೆಳೆ ಸೇರಿದಂತೆ ಒಟ್ಟು 68,731 ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗಿತ್ತು. ಈ ಪೈಕಿ ಸುಮಾರು 10 ಸಾವಿರ ಹೆಕ್ಟೇರ್‌ ನೀರಾವರಿ ಪ್ರದೇಶ ಸೇರಿದೆ. ತಂಬಾಕು ಬೆಳೆಗಾಗಿ ಶೇ.100ರಷ್ಟು ರೈತರು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಹಾಗೂ ಕೈಸಾಲ ಸಹ ಮಾಡಿದ್ದಾರೆ. ಆದರೆ ಇಳುವರಿ ಕುಂಠಿತ ಬೆಳೆಗಾರರಿಗೆ ಕಷ್ಟ ತಂದೊಡ್ಡಿದೆ.

from India & World News in Kannada | VK Polls https://ift.tt/6XfyHs8

ಕಾಸರಗೋಡು ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ನಿರಕ್ಷರರು: ಅಧಿಕಾರಿಗಳಿಗೆ ಸವಾಲಾದ ಗಣತಿ

1991ರ ಏ.18ರಂದು ಸಂಪೂರ್ಣ ಸಾಕ್ಷರತಾ ಘೋಷಣೆ ನಡೆದಿತ್ತು. ಹೆಸರು ಬರೆಯಲು, ಸಹಿ ಹಾಕಲು ತಿಳಿದವರನ್ನು ಸಾಕ್ಷರರ ಪಟ್ಟಿಯಲ್ಲಿ ಸೇರಿಸಿ ಅಂದು ಈ ಘೋಷಣೆ ನಡೆದಿತ್ತು. ಇವರಲ್ಲಿ ಹೆಚ್ಚಿನವರು ಹೆಸರು ಬರೆಯುವುದನ್ನು ನಿಲ್ಲಿಸಿದ್ದಾರೆ. ಕಲಿತದ್ದನ್ನೆಲ್ಲ ಮರೆತಿದ್ದಾರೆ ಎಂದು ಇವರು ಸರ್ವೆ ನಡೆಸಲು ಬಂದವರೊಡನೆ ತಿಳಿಸುತ್ತಾರೆ. ಬಳಿಕ ಸಾಕ್ಷರತಾ ಯೋಜನೆಯಲ್ಲಿ, ತತ್ಸಮ ಪರೀಕ್ಷೆ ಮೊದಲಾದುವುಗಳನ್ನು ನಡೆಸುವಾಗ ನಿರಕ್ಷರರ ಗಣತಿ ಅಧಿಕಾರಿಗಳಿಗೆ ಬಹು ದೊಡ್ಡ ಸವಾಲಾಗಿದೆ.

from India & World News in Kannada | VK Polls https://ift.tt/FvNzKjE

Vegetable Price | ಕೊತ್ತಂಬರಿ ಸೊಪ್ಪು ದರ ಇಳಿಕೆ, ಟೊಮೆಟೊ ತುಟ್ಟಿ: ಏರುಗತಿಯಲ್ಲೇ ಇದೆ ತರಕಾರಿ ಬೆಲೆ

Bengaluru Tomato price: ಎರಡು ತಿಂಗಳು ರಾಜ್ಯಾದ್ಯಂತ ಸಾಕಷ್ಟು ಮಳೆ ಬಿದ್ದ ಪರಿಣಾಮ ತರಕಾರಿ (Vegetables) ಬೆಳೆಗಳು ಹಾಳಾಗಿದ್ದು, ಹೆಚ್ಚಿನ ತರಕಾರಿ ಬೆಲೆ ಏರುಗತಿಯಲ್ಲೇ ಇದೆ. ಸದಾ 30-40ರ ಆಸುಪಾಸಿನಲ್ಲಿರುತ್ತಿದ್ದ ಬೀಟ್‌ರೂಟ್‌ ದರ ಇದೀಗ 60 ರೂ.ಗೆ ಏರಿಕೆಯಾಗಿದೆ. ಕ್ಯಾರಟ್‌ ದರ ಎರಡು ತಿಂಗಳಿಂದ ಕೆ.ಜಿ.ಗೆ 100 ರೂ. ಇದೆ. ಹಾಗಲಕಾಯಿ 53 ರೂ., ಸೋರೆಕಾಯಿ 56 ರೂ. ಇದೆ. ಮೂಲಂಗಿ, ಬದನೆಕಾಯಿ ಮತ್ತಿತರ ತರಕಾರಿಗಳ ದರವೂ ಏರಿಕೆಯಾಗಿದೆ.

from India & World News in Kannada | VK Polls https://ift.tt/sQ7M9mo

Karnataka Rains | ಮೂರು ದಿನ ರಾಜ್ಯದಲ್ಲಿ ಭಾರಿ ಮಳೆ: ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

Yellow alert in Bengaluru: ಸೋಮವಾರ ಬೆಂಗಳೂರು ನಗರ ಸೇರಿದಂತೆ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊಅಲರ್ಟ್‌ ಸೂಚನೆ ನೀಡಿದೆ. ಅ.10 ರಂದು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ನೀಡಲಾಗಿದೆ. ಆ.11 ಮತ್ತು 12ರಂದು ಕರಾವಳಿ ಹೊರತುಪಡಿಸಿ ಉಳಿದ ಕಡೆ ವ್ಯಾಪಕ ಮಳೆಯಾಗಲಿದೆ.

from India & World News in Kannada | VK Polls https://ift.tt/lwFayNo

Autorickshaw | ಬಂದ್‌ ಆಗಿಲ್ಲ ಓಲಾ, ಉಬರ್‌ ಆಟೋರಿಕ್ಷಾ ಸೇವೆ: ಅಲ್ಪ ದರ ಇಳಿಕೆ, ಸಾರಿಗೆ ಇಲಾಖೆ ಆದೇಶಕ್ಕಿಲ್ಲ ಕಿಮ್ಮತ್ತು

Ola and Uber app: ಈ ಹಿಂದಿನ ದರವನ್ನು ತುಸು ಕಡಿಮೆ ಮಾಡಿದ ಆ್ಯಪ್‌ ಆಧಾರಿತ ಆಟೋ ಸೇವೆ (autorickshaw services) ಭಾನುವಾರ ಬೆಂಗಳೂರು (Bengaluru) ನಗರದಾದ್ಯಂತ ಲಭ್ಯವಿತ್ತು. ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕಂಪೆನಿಗಳಿಗೆ ಪರವಾನಗಿ ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ನೋಟಿಸ್‌ ನೀಡಿದ ಬಳಿಕವೂ ಸೇವೆ ಮುಂದುವರಿಸಿದ್ದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದರಾದರೂ ಯಾವುದೇ ಪ್ರಯೋಜವಾಗಲಿಲ್ಲ.

from India & World News in Kannada | VK Polls https://ift.tt/2yhtLcW

ಸರ್ಕಾರ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಿಸಿ ಮುಸ್ಲಿಂ ವಿರೋಧಿ ಕೆಲಸ ಮಾಡುತ್ತಿದೆ: ಎಚ್‌ಡಿ ರೇವಣ್ಣ ಕಿಡಿ

ಐಐಟಿ ಸ್ಥಾಪನೆಗೆ ಗುರುತಿಸಲಾಗಿರುವ ಸಾವಿರ ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು 20 ಕೋಟಿ ರೂ. ಪಡೆಯಲಾಗಿದೆ ಎಂದು ಗುತ್ತಿಗೆದಾರರೇ ನಮಗೆ ತಿಳಿಸಿದ್ದಾರೆ. ಈ ಹಣದಲ್ಲಿ ಬಿಜೆಪಿ ಮುಖಂಡರು ಹಾಗೂ ಇತರರಿಗೆ ಸಂದಾಯ ಮಾಡಿರುವ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿದ ಎಚ್‌ಡಿ ರೇವಣ್ಣ, ಐಐಟಿ ಜಾಗವನ್ನು ಯಾವುದೇ ಕಾರಣಕ್ಕೂ ಕೈಗಾರಿಕಾ ಅಭಿವೃದ್ಧಿ ಉದ್ದೇಶಕ್ಕೆ ಬಳಸಬಾರದು ಎಂದು ಮಾನವ ಸಂಪನ್ಮೂಲ ಸಚಿವರು, ಸಿಎಂಗೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಪತ್ರ ಬರೆದಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

from India & World News in Kannada | VK Polls https://ift.tt/AzN6eRv

ತವರಿನ ನೆರವಿಲ್ಲದೇ ಹೊರನಾಡ ಕನ್ನಡ ಸಂಘಗಳು ಅನಾಥ: ಆಕಾಶವಾಣಿಯಲ್ಲೂ ಕನ್ನಡ ಮೂಲೆಗುಂಪು!

ನಾನಾ ರಾಜ್ಯಗಳಲ್ಲಿ ಹೊರನಾಡ ಕನ್ನಡ ಸಂಘಟನೆಗಳು ಆರ್ಥಿಕ ಸಂಕಷ್ಟ ಸೇರಿದಂತೆ ನಾನಾ ಸಮಸ್ಯೆಗಳೊಂದಿಗೆ ನಿಷ್ಕ್ರೀಯಗೊಳ್ಳುತ್ತಿವೆ. ಸಂಘಟನೆಗಳು ಸಕ್ರಿಯವಾಗಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸುವಂತೆ ನಿಗಾ ವಹಿಸಬೇಕಿದ್ದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ 'ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅನುದಾನ'- ಎಂಬ ಮಂತ್ರದೊಂದಿಗೆ ಬೆಂಗಳೂರಿಗೆ ಸೀಮಿತವಾಗಿದ್ದು, ಹೊರನಾಡಿನ ಕನ್ನಡ ಸಂಘಟನೆಗಳ ದುಸ್ಥಿತಿ ಕೇಳೋರಿಲ್ಲ ಎಂಬಂತಾಗಿದೆ.

from India & World News in Kannada | VK Polls https://ift.tt/OMQ2yhK

Sudha Murty | ಕನ್ನಡವೇ ನಮ್ಮ ತಾಯಿ, ಇಂಗ್ಲಿಷ್‌ ವ್ಯವಹಾರಿಕ ಭಾಷೆ: ಸುಧಾಮೂರ್ತಿ

kannada and English: ಸಿದ್ದೇಶ್ವರ ಸಭಾ ಭವನದಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಉತ್ತಮ ವ್ಯಕಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಮಯ ಶಿಸ್ತು ಪಾಲನೆ ಅತ್ಯಂತ ಮಹತ್ವವಾಗಿದೆ. ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಕಾಣಬಹುದಾಗಿದೆ.

from India & World News in Kannada | VK Polls https://ift.tt/A8skwLe

ಅನುದಾನಿತ ಶಾಲಾ ಶಿಕ್ಷಕರಿಂದ ಪಾದಯಾತ್ರೆ; ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ಬೃಹತ್‌ ಪ್ರತಿಭಟನೆ

​ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರು ಪಾದಯಾತ್ರೆಯಲ್ಲಿರುವ ಶಿಕ್ಷಕರನ್ನು ಭೇಟಿ ಮಾಡಿ, ಹೋರಾಟಕ್ಕೆ ಸಾಥ್‌ ನೀಡಿದರು. ''ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು, ನೌಕರರಿಗೆ ಸರಕಾರ ಹಳೇ ಪಿಂಚಣಿಯಾಗಲಿ ಅಥವಾ ಹೊಸ ಪಿಂಚಣಿ ವ್ಯವಸ್ಥೆಯನ್ನಾಗಲಿ ಜಾರಿಗೊಳಿಸುತ್ತಿಲ್ಲ. ಪಿಂಚಣಿ ಸೌಲಭ್ಯದಿಂದ ವಂಚಿತರಾಗಿ ನಿವೃತ್ತರಾಗಿರುವ ಸುಮಾರು 3 ಸಾವಿರ ಶಿಕ್ಷಕರ ಸಂಕಷ್ಟ ಹೇಳತೀರದಾಗಿದೆ. ಇದರಿಂದಾಗಿ ನಾನು ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ,'' ಎಂದು ಭರವಸೆ ನೀಡಿದರು.

from India & World News in Kannada | VK Polls https://ift.tt/19bBY3V

Bengaluru News - ಕೋರ್ಟ್‌ ಸಮಯ ಹಾಳು; ಎರಡು ದಂತ ಕಾಲೇಜುಗಳಿಗಳಿಗೆ ತಲಾ ಲಕ್ಷ ರೂ. ದಂಡ

ಸದ್ಯದ ಈ ಅರ್ಜಿಯನ್ನು ಬಳಸಿಕೊಂಡು ಪರೋಕ್ಷವಾಗಿ ಕೆಲ ಭರ್ತಿಯಾಗದ ಸೀಟುಗಳನ್ನು ತುಂಬಲು ಮಾತ್ರ ಅವರು ಈ ವಿದ್ಯಾರ್ಥಿಗಳನ್ನು ಬಳಸಿ-ಕೊಂಡಿದ್ದಾರೆ. ಕಾಲೇಜುಗಳು ನ್ಯಾಯಾಲಯದ ಮತ್ತು ಅರ್ಜಿದಾರ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದಲ್ಲದೆ, ಅನಗತ್ಯವಾಗಿ ಕೆಇಎ ಮತ್ತು ಇತರ ಶಾಸನಬದ್ಧ ಅಧಿಕಾರಿಗಳನ್ನು ನ್ಯಾಯಾಲಯ-ಗಳಿಗೆ ಕರೆಯಿಸಿ ಅನಗತ್ಯ ದಾವೆಗಳ ಮೇಲೆ ಖರ್ಚು ಮಾಡುವಂತೆ ಮಾಡಿರುವುದು ಸರಿಯಲ್ಲಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

from India & World News in Kannada | VK Polls https://ift.tt/eoUjOrE

Kannada Rajyotsava | ವಿಮಾನಗಳಲ್ಲೂ ಕನ್ನಡ ಡಿಂಡಿಮ: ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪತ್ರ

Kannada Sahitya Parishat: ದೇಶ-ವಿದೇಶಗಳಿಂದ ಕರ್ನಾಟಕಕ್ಕೆ (karnataka) ಬರುವ ಹಾಗೂ ಕರುನಾಡಿನಿಂದ ಹೊರ ರಾಜ್ಯ, ಹೊರ ದೇಶಗಳಿಗೆ ತೆರಳುವ ಎಲ್ಲಾ ವಿಮಾನಗಳಲ್ಲೂ ಕನ್ನಡದ ಧ್ವನಿ ಮೊಳಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರದ ಮೂಲಕ ಒತ್ತಾಯಿಸಿದೆ. ಜತೆಗೆ ವೈಯಕ್ತಿಕವಾಗಿಯೂ ಪರಿಷತ್ತಿನ ಅಧ್ಯಕ್ಷರು ದೂರವಾಣಿ ಕರೆ ಮೂಲಕವೂ ಚರ್ಚಿಸಿದ್ದಾರೆ.

from India & World News in Kannada | VK Polls https://ift.tt/zisHK50

ಅಂಚೆ ಇಲಾಖೆಯ ಸೇವೆಗಳಿಗೆ 'ಸ್ಮಾರ್ಟ್' ಸ್ಪರ್ಶ

​ಡಿಜಿಟಲ್‌ ಸ್ಪರ್ಶದೊಂದಿಗೆ ಹೊರ ದೇಶಗಳೊಂದಿಗೆ ಸಂಬಂಧ ಬೆಸೆಯುತ್ತಿರುವ ಭಾರತೀಯ ಅಂಚೆ ಇಲಾಖೆ ಒಟ್ಟು 100ಕ್ಕೂ ಅಧಿಕ ದೇಶಗಳಿಗೆ ಸ್ಪೀಡ್‌ಪೋಸ್ಟ್‌ ಸೌಕರ್ಯ ಕಲ್ಪಿಸಿದೆ. ಜತೆಗೆ, ಇರಾಕ್‌, ನೈಜೀರಿಯಾ ಸೇರಿದಂತೆ 6 ದೇಶಗಳಿಗೆ ದಾಖಲೆ ಪತ್ರಗಳ ರವಾನೆಯ ಸೀಮಿತ ಸೇವೆಯನ್ನು ನೀಡುತ್ತಿದೆ. ಜತೆಗೆ, ದೇಶಾದ್ಯಂತ 115 ರಾತ್ರಿ ಅಂಚೆ ಕಚೇರಿಗಳು, ಎಲ್ಲಾಸೇವೆ ಒದಗಿಸಲು 67,506, ಮನೆ ಬಾಗಿಲಿಗೆ ಸೇವೆ ನೀಡಲೆಂದು 1,14,941, ಪಂಚಾಯ್ತಿಗಳಲ್ಲಿಅಂಚೆ ಸೇವಾ ಕೇಂದ್ರಕ್ಕೆಂದು 1076 ಅಂಚೆ ಕಚೇರಿಗಳನ್ನು ಮೀಸಲಿಡಲಾಗಿರು ವುದು ವಿಶ್ವದಲ್ಲೇ ಮೊದಲು.

from India & World News in Kannada | VK Polls https://ift.tt/mZsfABV

Shiv Sena | ಶಿವಸೇನೆ 'ಬಿಲ್ಲುಬಾಣ' ಮುಟ್ಟುಗೋಲು ಹಾಕಿಕೊಂಡ ಚುನಾವಣಾ ಆಯೋಗ: ಠಾಕ್ರೆ-ಶಿಂಧೆ ಬಣ ಸಂಘರ್ಷ ಅಂತ್ಯ!

Bow and Arrow Symbol: ಮಾಜಿ ಸಿಎಂ ಉದ್ಧವ್‌ ಠಾಕ್ರೆ (Uddhav Thackeray) ಮತ್ತು ಹಾಲಿ ಸಿಎಂ ಏಕನಾಥ್‌ ಶಿಂಧೆ (Eknath Shinde) ಬಣಗಳ ನಡುವೆ ಪಕ್ಷದ ಚಿಹ್ನೆಗಾಗಿ ಪ್ರತಿಷ್ಠೆಯ ಸಂಘರ್ಷ ನಡೆದಿತ್ತು. ತಮ್ಮದೇ ನೈಜ ಶಿವಸೇನೆ (Shiv Sena) ಎಂದು ಎರಡೂ ಬಣಗಳು ಪ್ರತಿಪಾದಿಸಿದ್ದವು. ಪಕ್ಷದ ಚಿಹ್ನೆಯಾದ ಬಿಲ್ಲು ಹಾಗೂ ಬಾಣದ ಗುರುತಿಗೆ ಪಟ್ಟು ಹಿಡಿದಿದ್ದವು. ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಚುನಾವಣಾ ಆಯೋಗಕ್ಕೆ (ECI) ವರ್ಗಗೊಂಡಿತ್ತು. ಶುಕ್ರವಾರ ಚುನಾವಣಾ ಆಯೋಗದ ಮುಂದೆ ಪಕ್ಷದ ಚಿಹ್ನೆ ನಮ್ಮ ಬಣಕ್ಕೆ ನೀಡಬೇಕು ಎಂದು ಸಿಎಂ ಶಿಂಧೆ ಬಣ ಪ್ರಬಲ ವಾದ ಮಂಡಿಸಿತ್ತು.

from India & World News in Kannada | VK Polls https://ift.tt/muBzO1n

ಅಭಿಮನ್ಯು ಗಜಪಡೆಯ ಎಕೆ-47: ಹಂತ-ಹಂತವಾಗಿ ಅಂಬಾರಿ ಆನೆ ಪಟ್ಟಕ್ಕೇರಿದ್ದಕ್ಕೆ ಮಾವುತ ಆನಂದಭಾಷ್ಪ

''ಅಭಿಮನ್ಯುವಿಗೆ ಛತ್ರಿ ಹಿಡಿದ ನೌಪತ್‌ ಆನೆ, ಬಾವುಟದ ಆನೆ ಹಾಗೂ ಸಂಗೀತ ಗಾಡಿ ಆನೆ ಎಂಬೆಲ್ಲಾ ಬಿರುದುಗಳಿವೆ. ಆದರೆ, ಈ ಬಾರಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ ಹಿನ್ನೆಲೆಯಲ್ಲಿ ಅಂಬಾರಿ ಆನೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾನೆ. 23 ವರ್ಷ ನಾನು ಅಭಿಮನ್ಯು ದಸರೆಯಲ್ಲಿ ಭಾಗವಹಿಸಿದ್ದೇವೆ. ಆದರೆ, ಈ ವರ್ಷ ಜಂಬೂಸವಾರಿಯಲ್ಲಿ ಕಂಡಷ್ಟು ಜನರನ್ನು ಮತ್ಯಾವ ವರ್ಷವೂ ಕಂಡಿಲ್ಲ. ಸಾವಿರಾರು ಜನರ ಮಧ್ಯದಲ್ಲೇ ಸ್ವಲ್ಪವೂ ಅಳುಕಿಲ್ಲದೆ ಗಜಗಾಂಭೀರ್ಯವಾಗಿ ಅಭಿಮನ್ಯು ಹೆಜ್ಜೆ ಹಾಕಿದನು" ಎಂದು ಮಾವುತ ಭಾವುಕರಾದ್ರು.

from India & World News in Kannada | VK Polls https://ift.tt/1OTkiK0

Mysuru Dasara | ಮರುಕಳಿಸದಿರಲಿ ಅಧ್ವಾನ: ಸೂಕ್ತ ಪ್ರಚಾರದ ಕೊರತೆಯಿಂದ ನಲುಗಿದ ನಾಡಹಬ್ಬ

ಎರಡು ವರ್ಷದ ಕೋವಿಡ್‌ ಹಿನ್ನೆಲೆಯಲ್ಲಿ ಜನರಿಗೊಂದು ಬ್ರೇಕ್‌ ಬೇಕಿತ್ತು. ಕೊರೋನಾ ಏಕತಾನತೆಯಿಂದ ಹೊರಬರಲು ಹಬ್ಬದಂತಹ ಸಂಭ್ರಮದ ಅವಶ್ಯಕತೆ ಇತ್ತು. ಅದೇ ಸಮಯಕ್ಕೆ ದಸರಾ ಮಹೋತ್ಸವ ಜನರಿಗೆ ಟಾನಿಕ್‌ನಂತೆ ಕೆಲಸ ಮಾಡಿತು. ಹಾಗಾಗಿ ಈ ಬಾರಿ 15 ಲಕ್ಷಕ್ಕೂ ಹೆಚ್ಚು ಜನರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡರು. 20ಕ್ಕೂ ಹೆಚ್ಚು ವೇದಿಕೆಗಳಲ್ಲಿ ನಡೆದ ನಾನಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್‌, ಹೋಟೆಲ್‌, ಲಾಡ್ಜ್‌, ಅಂಗಡಿ ಮುಂಗಟ್ಟು, ಸಿನಿಮಾ ಮಂದಿರ, ಮಾಲ್‌, ಬಟ್ಟೆ ಅಂಗಡಿ, ಬೀದಿಬದಿ ವ್ಯಾಪಾರಿಗಳಿಗೆ ದಸರಾ ಚೈತನ್ಯ ತಂದುಕೊಟ್ಟಿತು.

from India & World News in Kannada | VK Polls https://ift.tt/RCmKaUV

ಹಾರಂಗಿ ಆನೆ ಶಿಬಿರ: ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆ, ಇಂದು ಲೋಕಾರ್ಪಣೆ

ದುಬಾರೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಒತ್ತಡ ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೊಸ ಶಿಬಿರ ಆರಂಭಿಸಲಾಗಿದೆ. ಹಾರಂಗಿ ಜಲಾಶಯದ ಬಲ ಭಾಗದಲ್ಲಿರುವ ಅರಣ್ಯ ಇಲಾಖೆಯ 40 ಎಕರೆ ಟ್ರೀ ಪಾರ್ಕ್ಗೆ ಹೊಂದಿಕೊಂಡಂತೆ ಹಿನ್ನೀರು ಪ್ರದೇಶದಲ್ಲಿ ನೂತನ ಸಾಕಾನೆ ಶಿಬಿರ ನಿರ್ಮಿಸಲು ಸರಕಾರ 50 ಲಕ್ಷ ರೂ. ಅನುದಾನ ಒದಗಿಸಿತ್ತು. ಸಾಕಾನೆ ಶಿಬಿರದ ಜೊತೆಗೆ ಟ್ರೀಪಾರ್ಕ್ ಕೂಡ ಲೋಕಾರ್ಪಣೆಗೊಳಿಸಲಾಗುತ್ತಿದೆ.

from India & World News in Kannada | VK Polls https://ift.tt/wbBJPV7

ಬಿಟ್ಟು ಬರುತ್ತಿರುವ ಮಳೆಯಿಂದ ಹೆಚ್ಚಾಗುತ್ತಿದೆ ಜ್ವರ: ದಕ್ಷಿಣ ಕನ್ನಡದಲ್ಲಿ ವೈರಲ್‌ ಫಿವರ್‌ಗೆ ಹೆಲ್ತ್‌ ಸರ್ವೆ

ಮಳೆಗಾಲದಲ್ಲಿ ಹೆಚ್ಚಾಗಿ ಆರೋಗ್ಯ ಇಲಾಖೆ ಫಿವರ್‌ ಸರ್ವೆ ಮಾಡುತ್ತಿದೆ. ಆದರೆ ಈ ಬಾರಿ ಮಳೆ ಬೇಕಾಬಿಟ್ಟಿ ಬರುತ್ತಿರುವುದರಿಂದ ವೈರಲ್‌ ಫಿವರ್‌ಗಳು ಕೂಡ ಕಾಣಿಸಿಕೊಳ್ಳುತ್ತಿವೆ. ಇದು ಮುಂದೆ ಡೆಂಗ್ಯೂ, ಮಲೇರಿಯಾ, ಚಿಕೂನ್‌ ಗುನ್ಯಾ, ಕೋವಿಡ್‌ನಂತಹ ಜ್ವರಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಯಿದೆ ಎನ್ನುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತಷ್ಟು ಮುತುವರ್ಜಿಯಿಂದ ಫೀಲ್ಡ್‌ಗೆ ಇಳಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 66 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 12 ನಗರ ಆರೋಗ್ಯ ಕೇಂದ್ರಗಳು ಇವೆ. ಈ ಕೇಂದ್ರಗಳ ಮೂಲಕವೇ ತಂಡಗಳು ಕಾರ್ಯ ನಿರ್ವಹಣೆಗೆ ಇಳಿದಿವೆ.

from India & World News in Kannada | VK Polls https://ift.tt/yzGQPq5

ಈ ಬಾರಿ ಚುನಾವಣೆಯೋ, ಬಹಿಷ್ಕಾರವೋ?: ಘೋಷಣೆಯಾಗದ ತ್ಯಾಮಗೊಂಡ್ಲು ಪಟ್ಟಣ ಪಂಚಾಯಿತಿ

ಈಗಾಗಲೇ ಕಳೆದ ಐದಾರು ಚುನಾವಣೆಗಳನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಗ್ರಾಮದ ಎಲ್ಲಾ ಪಕ್ಷದ ಮುಖಂಡರು ಮತ್ತು ಯುವಕರು ಕಳೆದ 2020 ಡಿಸೆಂಬರ್‌, 2021 ಮಾರ್ಚ್, 2021 ಡಿಸೆಂಬರ್‌ ಮತ್ತು 2022ರ ಮಾರ್ಚ್ ತಿಂಗಳಲ್ಲಿ ಘೋಷಣೆಯಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಗೆ ಒಂದೇ ಒಂದು ನಾಮಪತ್ರವನ್ನು ಸಲ್ಲಿಸದೇ ಒಗ್ಗಟ್ಟಿನಿಂದ ಬಹಿಷ್ಕಾರ ಮಾಡಿದ್ದರು. ಈ ಬಾರಿಯೂ ಘೋಷಣೆಯಾದ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಾರೋ? ಇಲ್ಲ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮುಂದಾಗುತ್ತಾರೋ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ.

from India & World News in Kannada | VK Polls https://ift.tt/zOeD9KX

ಉತ್ತರ ಕನ್ನಡ: ಎಂಜಿನಿಯರಿಂಗ್‌ ಕಾಲೇಜು ಹಾಸ್ಟೆಲ್‌ನಲ್ಲಿ ಸೇನಾ ತರಬೇತಿ, 125 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣ

Henja Naik Army selection training school: ಶಿರಸಿಯಲ್ಲಿ (Sirsi) ನಡೆದ ದೈಹಿಕ ಪರೀಕ್ಷೆಯಲ್ಲಿ ಉತ್ತರ ಕನ್ನಡ (Uttara kannda) ಜಿಲ್ಲೆಯ 38 ಅಭ್ಯರ್ಥಿಗಳು ಸೇರಿ ಒಟ್ಟು 125 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಅಂತಿಮವಾಗಿ ಒಟ್ಟು 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಸ್ಥಳೀಯರಿಗೆ ಶೇ.30 ರಷ್ಟು ಮೀಸಲಾತಿಯಂತೆ ತರಬೇತಿಗೆ ಅವಕಾಶ ಸಿಗಲಿದೆ. ತರಬೇತಿ ಆರಂಭಕ್ಕಾಗಿ ಇಬ್ಬರು ಮಾಜಿ ಸೈನಿಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

from India & World News in Kannada | VK Polls https://ift.tt/urNCeGZ

ಬೆಂಗಳೂರು | ಮಕ್ಕಳ ಕಳ್ಳನೆಂದು ಭಾವಿಸಿ ಕಾರ್ಮಿಕನ ಕೊಂದ ಜನರ ಗುಂಪು: ಲಾಕಪ್‌ ಡೆತ್‌ ಆರೋಪ

Labour beaten to death: ಸೆ.24ರಂದು ಐಟಿಐ ಕಾಲೊನಿಯ ಫುಟ್‌ಪಾತ್‌ ಮೇಲೆ ಸಂಜಯ್‌ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕೆ.ಆರ್‌. ಪುರ ಪೊಲೀಸರು ತನಿಖೆ ನಡೆಸುತ್ತಿದ್ದರು. ತನಿಖೆಯಲ್ಲಿ ಸಂಜಯ್‌ ಸಾವಿಗೆ ಸೆ.23ರಂದು ರಾತ್ರಿ ರಾಮಮೂರ್ತಿನಗರದಲ್ಲಿ ಮಕ್ಕಳ ಕಳ್ಳ ಎಂದು ಭಾವಿಸಿ ನಡೆದಿದ್ದ ಗುಂಪು ಹಲ್ಲೆಯೇ ಕಾರಣ ಎಂಬುದು ಬಯಲಾಗಿದೆ. ಹೀಗಾಗಿ, ಹಲ್ಲೆ ನಡೆಸಿದ್ದ ಪಾರ್ಥಿಬನ್‌, ಫಯಾಜ್‌ ಪಾಷಾ, ಸೈಯದ್‌ ಖಾಜಾ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

from India & World News in Kannada | VK Polls https://ift.tt/Sw8HRcr

ಕೊರಟಗೆರೆಯಲ್ಲಿ ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್‌, ಆಸ್ಪತ್ರೆಯಲ್ಲಿ ಸಿಗದ ಡಾಕ್ಟರ್: ನಿರ್ಲಕ್ಷ್ಯಕ್ಕೆ ಗಾಯಾಳುಗಳು ಸಾವು ಆರೋಪ

ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರೆ ಅಲ್ಲಿ ರಾತ್ರಿ ಪಾಳಿ ವೈದ್ಯ ನವೀನ್‌ ಕೆ. ಅರ್ಧಗಂಟೆಯಾದರೂ ಕೊಠಡಿಯಿಂದ ಹೊರಗೆ ಬರಲಿಲ್ಲ. ಇದರಿಂದಾಗಿ ಶಶಿಕುಮಾರ್‌ ತಾಲೂಕು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಗಾಯಾಳು ಸಂತೋಷ್‌ಗೆ ನವೀನ್‌ ತುರ್ತು ಚಿಕಿತ್ಸೆ ನೀಡದೆ ತುಮಕೂರಿಗೆ ಸಾಗಹಾಕಿದ ಪರಿಣಾಮ ಮಾರ್ಗಮಧ್ಯೆ ಆತನ ಸಾವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

from India & World News in Kannada | VK Polls https://ift.tt/E7LrRkD

ಮಧುಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಕಣ್ಣೀರು, ಶಾಸಕರೂ ಭಾವುಕ: ವೀರಭದ್ರಯ್ಯ ಅವರೇ ಸ್ಪರ್ಧಿಸಬೇಕೆಂದು ಪಟ್ಟು

ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದ 50 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರ್ಯಕರ್ತರ ಒತ್ತಾಯಕ್ಕೆ ಶಾಸಕರೂ ಸಹ ಕಣ್ಣೀರು ಹಾಕಿದರು. ಕಾಮಗಾರಿ ಲೋಕಾರ್ಪಣೆ ಮಾಡಿ ಹೊರಬರುತ್ತಿದ್ದಂತೆ ಅಡ್ಡಲಾಗಿ ಕೂತ ಸಾವಿರಾರು ಕಾರ್ಯಕರ್ತರು ನೀವೆ ಮುಂದೆಯೂ ಸ್ಪರ್ಧಿಸಿದರೆ ಗೆಲ್ಲುತ್ತೀರಿ. ನಮ್ಮಿಂದ ತಪ್ಪುಗಳಾಗಿದ್ದರೆ ಕ್ಷಮಿಸಿ, ಕ್ಷೇತ್ರ ತೊರೆಯುವ ಮಾತನ್ನು ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು.

from India & World News in Kannada | VK Polls https://ift.tt/5oiTOyd

ರಾಮನಗರದ ಹಾಸ್ಟೆಲ್‌ಗಳಲ್ಲಿ ಮೆನು ಮೀರಿದ ಊಟ: ಸೌಲಭ್ಯವೂ ಮರೀಚಿಕೆ, ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ

ರಾಮನಗರದ ರಾಮದೇವರ ಬೆಟ್ಟದ ರಸ್ತೆಯಲ್ಲಿನ ಮೆಟ್ರಿಕ್‌ ನಂತರ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಗೋಳು ಕೇಳುವವರೇ ಇಲ್ಲವಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದು ತಮ್ಮ ಹಕ್ಕುಳಿಗೆ ಹೋರಾಟ ನಡೆಸಿದ ನಂತರ ಎರಡು ದಿನ ಮಾತ್ರ ಸರಕಾರಿ ಮೆನು ಪ್ರಕಾರ ಊಟೋಪಚಾರ ನೀಡಲಾಗುತ್ತಿದೆ. ಬಳಿಕ ಶುಚಿ ಹಾಗೂ ರುಚಿ ಇಲ್ಲದ ಅಡುಗೆಯನ್ನು ನೀಡಲಾಗುತ್ತಿದೆ. ಅಡುಗೆ ತಯಾರಿಸಲು ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನು ನೀಡುತ್ತಿಲ್ಲ. ಸ್ವಲ್ಪ ಪ್ರಮಾಣ ಮಾತ್ರ ವಿತರಿಸಲಾಗುತ್ತಿದೆ.

from India & World News in Kannada | VK Polls https://ift.tt/FGPXwzC

ಐದೇ ತಿಂಗಳಲ್ಲಿ ಡಾಮಾರು ಬಣ್ಣ ಬಯಲು: ಎಕ್ಕುಟ್ಟಿ ಹೋದ ಕುಂಡಡ್ಕ-ಚೆನ್ನಾವರ ರಸ್ತೆಯ ಹೊಸ ಡಾಮಾರು

ಜಿ.ಪಂ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ವ್ಯಾಪ್ತಿಯ ಕುಂಡಡ್ಕದಿಂದ ಚೆನ್ನಾವರ ಮೂಲಕ ಪಾಲ್ತಾಡಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪ್ರಯತ್ನದ ಫಲವಾಗಿ 2020-21ನೇ ಸಾಲಿನ ಪ್ರಾಕೃತಿಕ ವಿಕೋಪ ಮಳೆ ಹಾನಿಯಡಿ 20 ಲಕ್ಷ ರೂ. ಮಂಜೂರು ಮಾಡಿ, ಕಳೆದ ಏಪ್ರಿಲ್‌ನಲ್ಲಿ 1 ಕಿ.ಮೀ. ಉದ್ದಕ್ಕೆ ಡಾಮರೀಕರಣ ಮಾಡಲಾಗಿತ್ತು. ಈಗ ಚೆನ್ನಾವರ ಸೇತುವೆ ಬಳಿಯಿಂದ ಆರಂಭಿಸಿ ಅಲ್ಲಲ್ಲಿ ಡಾಮಾರು ಏಳುತ್ತಿದೆ. ಇಲ್ಲಿ ದ್ವಿಚಕ್ರ ವಾಹನಗಳು ಸಂಚರಿಸುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.

from India & World News in Kannada | VK Polls https://ift.tt/ueBP0c9

Tumakuru | ಜೆಡಿಎಸ್‌ ಮತ್ತೊಂದು ವಿಕೆಟ್‌ ಪತನ: ಚುನಾವಣೆ ಕಣದಿಂದ ಹಿಂದೆ ಸರಿದ ಶಾಸಕ ಎಂ.ವಿ. ವೀರಭದ್ರಯ್ಯ

ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಈಗಾಗಲೇ ತೆನೆ ಇಳಿಸಿದ್ದರು. ಈಗ ಎರಡನೇ ವಿಕೆಟ್‌ ರೂಪದಲ್ಲಿ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಚುನಾವಣೆ ಅಂಗಳದಿಂದ ಪೆವಿಲಿಯನ್‌ಗೆ ವಾಪಸಾಗಿದ್ದಾರೆ. ಹೀಗೆ ಜಿಲ್ಲೆಯಲ್ಲಿ ಬೇರೆ ರೀತಿಯಲ್ಲಿ ಎರಡು ವಿಕೆಟ್‌ ಅನ್ನು ಜೆಡಿಎಸ್‌ ಕಳೆದುಕೊಂಡಿದ್ದು, ಆ ಎರಡೂ ಸ್ಥಾನಕ್ಕೆ ಹೊಸ ಮುಖಗಳಿಗೇ ಮಣೆ ಹಾಕಬೇಕಾಗಿದೆ. ಗುಬ್ಬಿಯಲ್ಲಿ ಈಗಾಗಲೇ ಬಿ.ಎಸ್‌.ನಾಗರಾಜು ತೆನೆ ಅಭ್ಯರ್ಥಿ ಎಂಬುದು ಖಚಿತವಾಗಿದೆ. ಮಧುಗಿರಿಯಲ್ಲಿ ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

from India & World News in Kannada | VK Polls https://ift.tt/sanZdp9

ವರ್ಷಾಂತ್ಯಕ್ಕೆ ಫುಟ್ಬಾಲ್ ವೃತ್ತಿಜೀವನಕ್ಕೆ ಗುಡ್ ಬೈ: ಲಿಯೊನೆಲ್ ಮೆಸ್ಸಿ

ಖಾಸಗಿ ಕ್ರೀಡಾ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಈ ವರ್ಷಾಂತ್ಯಕ್ಕೆ ಫಿಫಾ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಅದೇ ಪಂದ್ಯಾವಳಿ ನನ್ನ ವೃತ್ತಿಜೀವನದ ಕಡೆಯ ಪಂದ್ಯಾವಳಿಯಾಗಲಿದೆ. ಪಂದ್ಯಾವಳಿ ಮುಗಿದ ಕೂಡಲೇ ನಾನು ನಮ್ಮ ಫುಟ್ಬಾಲ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಲಿದ್ದೇನೆ ಎಂದು ಹೇಳಿದ್ದಾರೆ. ಫುಟ್ಬಾಲ್ ವಿಶ್ವಕಪ್ ಈ ಬಾರಿ ಕತಾರ್ ನಲ್ಲಿ ನ. 20ರಿಂದ ಡಿ. 18ರವರೆಗೆ ಜರುಗಲಿದೆ. ಇನ್ನು, ಡಿ. 25ರಂದು ಕ್ರಿಸ್ ಮಸ್ ಹಬ್ಬ ಇರುತ್ತದೆ. ಹಾಗಾಗಿ, ಕ್ರಿಸ್ಮಸ್ ಗೂ ಮುನ್ನವೇ ತಮ್ಮ ನಿವೃತ್ತಿಯ ನಿರ್ಧಾರವನ್ನು ಮೆಸ್ಸಿಯವರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.

from India & World News in Kannada | VK Polls https://ift.tt/42HgQtT

ಬೀದರ್: ಮದರಸಾದೊಳಗೆ ನುಗ್ಗಿದ ಯುವಕರ ತಂಡದಿಂದ ಪೂಜೆ; ಪರಿಸ್ಥಿತಿ ಉದ್ವಿಗ್ನ

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮುಸ್ಲಿಂ ಸಂಘಟನೆಗಳು, ಯಾರನ್ನೂ ಬಂಧಿಸದೇ ಇದ್ದಲ್ಲಿ, ಶುಕ್ರವಾರದಂದು ಬೀದರ್ ನಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ಲ ಮುಸ್ಲಿಮೀನ್ ಸಂಘಟನೆಯ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಮುಸ್ಲಿಮರನ್ನು ಕೀಳಾಗಿ ನೋಡುವಂಥ ಸಂಸ್ಕೃತಿಯನ್ನು ಜನರಲ್ಲಿ ಬಿತ್ತುತ್ತಿದೆ ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/Xv8cO4V

ಶಾಲಾ -ಕಾಲೇಜು ನೌಕರರ ಬೃಹತ್‌ ಪಾದಯಾತ್ರೆ: ಅ.7ರಂದು ತುಮಕೂರಿಂದ ಬೆಂಗಳೂರಿಗೆ ಹೆಜ್ಜೆ!

ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ(ರಿ) ನೇತೃತ್ವದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಪ್ರತಿಭಟನೆ ದಾರಿ ತುಳಿದಿದ್ದಾರೆ. ಅ.7ರಂದು ಶುಕ್ರವಾರ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಿಂದ ಪ್ರತಿಭಟನಾಕಾರರು ಪಾದಯಾತ್ರೆ ಆರಂಭಿಸುವರು. ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಿಂದ ನೌಕರರು ಆಗಮಿಸುವರು. ಒಟ್ಟಾರೆ ಸುಮಾರು 48,000 ಶಿಕ್ಷಕರು, ಉಪನ್ಯಾಸಕರು ಅನುದಾನಿತ ಶಾಲಾ-ಕಾಲೇಜುಗಳಲ್ಲಿದ್ದು, ಸುಮಾರು 10,000 ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

from India & World News in Kannada | VK Polls https://ift.tt/PqOerda

Mangaluru Dasara | ಮಧ್ಯರಾತ್ರಿಯಲ್ಲೂ ಮಂಗಳೂರಿನಲ್ಲಿ 'ಪಿಲಿ ನಲಿಕೆ' ಘರ್ಜನೆ: ಗೋರಕ್ಷನಾಥ ತಂಡ ಚಾಂಪಿಯನ್‌

ಮೈಸೂರಿನ ದಸರಾದ ಅಂಬಾರಿ, ರಥಬೀದಿ ವೆಂಕಟರಮಣ ದೇವಸ್ಥಾನ ಹಾಗೂ ಶತಮಾನೋತ್ಸವ ಶಾರದೆ ಸೇರಿದಂತೆ ನಾನಾ ವೈವಿಧ್ಯತೆಗಳು ಕಂಡು ಬಂದವು. ವೇದಿಕೆಯೇರಿದ ಬಳಿಕ ಗಾಂಭೀರ್ಯ ನಡಿಗೆಯಲ್ಲಿ ಹೆಜ್ಜೆ ಹಾಕುತ್ತಾ ಬರುವ ಹುಲಿವೇಷಧಾರಿಗಳ ಹಿಂಡು ಪ್ರೇಕ್ಷಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿತ್ತು. ತುಳುನಾಡಿನ ಸಾಂಸ್ಕೃತಿಕ ವೈಭವದ ಎಸಳೊಂದನ್ನು ಜಗಜ್ಜಾಹೀರುಗೊಳಿಸುವ ಕೆಲಸ ಪಿಲಿನಲಿಕೆಯಲ್ಲಿ ಕಂಡು ಬಂತು. ಹುಲಿವೇಷ ಕುಣಿತದ ಮೂಲ ರೂಪಕ್ಕೆ ಧಕ್ಕೆಯಾಗದಂತೆ ಎಲ್ಲ ತಂಡಗಳು ಪ್ರದರ್ಶನ ನೀಡಿದರು.

from India & World News in Kannada | VK Polls https://ift.tt/1jTX6p8

ನಂದಿ ಪ್ರವಾಸ ಬಲು ದುಬಾರಿ: ನಂದಿಬೆಟ್ಟದ ಮೇಲೆ ಕಾಸ್ಟ್ಲಿ ದುನಿಯಾ, ಜನಸಾಮಾನ್ಯರ ಜೇಬಿಗೆ ಕತ್ತರಿ

ನಂದಿಬೆಟ್ಟವೆಂಬುದು ಬೆಂಗಳೂರಿಗರ ವಾರಾಂತ್ಯದ ಫೇವರೆಟ್‌ ಸ್ಪಾಟ್‌ ಆಗಿ ಬದಲಾಗಿದ್ದು, ಸಾಮಾನ್ಯ ದಿನಗಳಲ್ಲೂ ಸಾವಿರಾರು ಮಂದಿ ಬೆಟ್ಟಕ್ಕೆ ಭೇಟಿ ಕೊಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಬೆಟ್ಟದ ಮೇಲಿನ ಸೂಟ್‌ ರೂಂ, ನೆಹರು ನಿಲಯ, ಮಯೂರ ಹೋಟೆಲ್‌ನ ರೂಂಗಳು, ಹಿಲ್‌ ವ್ಯೂ ರೂಂಗಳ ದಿನದ ಬಾಡಿಗೆಗಳನ್ನು ಪರಿಷ್ಕೃತ ಮಾಡಲಾಗಿದ್ದು, ಸಾಮಾನ್ಯ ದರಕ್ಕಿಂತ 3ರಿಂದ 4ಪಟ್ಟು ಹೆಚ್ಚಿಸಲಾಗಿದೆ. ಜತೆಗೆ, ಇಲ್ಲಿನ ತಿನಿಸುಗಳ ದರಗಳನ್ನು ಹೆಚ್ಚಿಸಲಾಗಿದೆ.

from India & World News in Kannada | VK Polls https://ift.tt/9JiwOq8

ಶಿಡ್ಲಘಟ್ಟ: ಅನ್ಯಜಾತಿಯ ಯುವಕನೊಂದಿಗೆ ಮಗಳು ಪರಾರಿ, ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Sidlaghatta Suicide case: ಶ್ರೀರಾಮಪ್ಪನ ಹಿರಿಯ ಪುತ್ರಿ ಅರ್ಚನಾ ಎಂಎಸ್ಸಿ ಪದವೀಧರೆಯಾಗಿದ್ದು, ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಅದೇ ಗ್ರಾಮದ ಅನ್ಯಜಾತಿಯ ನಾರಾಯಣಸ್ವಾಮಿ ಎಂಬವರನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಕುಟುಂಬದ ವಿರೋಧವಿತ್ತು. ಮಗಳಿಗೆ ತಿಳಿ ಹೇಳಿದ್ದ ಶ್ರೀರಾಮಪ್ಪ, ಪೆರೇಸಂದ್ರ ಮೂಲದ ಬೆಂಗಳೂರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಮದುವೆ ನಿಶ್ಚಯಿಸಿ, ಬುಧವಾರ ನಿಶ್ಚಿತಾರ್ಥದ ಸಿದ್ಧತೆ ನಡೆದಿತ್ತು.

from India & World News in Kannada | VK Polls https://ift.tt/15b0txA

IND vs SA:'ಆರ್‌ಸಿಬಿ ಪರ ಆಡಿದ್ದು ನನ್ನ ವೃತ್ತಿ ಜೀವನಕ್ಕೆ ಟರ್ನಿಂಗ್‌ ಪಾಯಿಂಟ್‌', ರಜತ್‌ ಪಾಟಿದಾರ್‌!

Rajat Patidar on team India selection: ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಪರ ಆಡಿದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಒಂದೇ ಒಂದು ದೊಡ್ಡ ಇನಿಂಗ್ಸ್‌ ನನ್ನ ವೃತ್ತಿ ಜೀವನವನ್ನು ಬದಲಾಯಿಸಿತು ಎಂದು ರಜತ್‌ ಪಾಟಿದಾರ್‌ ಹೇಳಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದುಕೊಂಡಿರುವ ರಜತ್‌ ಪಾಟಿದಾರ್‌, ಗುರುವಾರ ಮೊದಲನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ರಜತ್‌ ಪಾಟಿದಾರ್‌ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/WpOM3tY

Bharat Jodo Yatra | ಗುರುವಾರ ನಾಗಮಂಗಲಕ್ಕೆ ಐಕ್ಯತಾ ಯಾತ್ರೆ: ಪಾದಯಾತ್ರೆಗೆ ಸೋನಿಯಾ ಗಾಂಧಿ ಸಾಥ್‌

Sonia Gandhi: ಜಕ್ಕನಹಳ್ಳಿ-ನಾಗಮಂಗಲ ಮಾರ್ಗ ಮಧ್ಯೆ ಸೋನಿಯಾ ಗಾಂಧಿ ಯಾತ್ರೆಗೆ (Bharat Jodo Yatra) ಸಾಥ್‌ ನೀಡಲಿದ್ದಾರೆ. ಈ ಐಕ್ಯತಾ ಯಾತ್ರೆ ಪ್ರಾರಂಭಗೊಂಡ ಬಳಿಕ ಸೋನಿಯಾ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು ಎನ್ನುವುದು ವೈಶಿಷ್ಟ್ಯ. ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಾಂಕೇತಿಕವಾಗಿ ಹೆಜ್ಜೆ ಹಾಕುವ ಮೂಲಕ ರಾಹುಲ್‌ ಗಾಂಧಿ (Rahul Gandhi) ಮತ್ತು ಸಹವರ್ತಿಗಳಿಗೆ ಧೈರ್ಯ ತುಂಬಲಿದ್ದಾರೆ. ಬಳಿಕ ಮಧ್ಯಾಹ್ನ ಮೈಸೂರು ವಿಮಾನ ನಿಲ್ದಾಣದ ಮೂಲಕ ದಿಲ್ಲಿಗೆ ಮರಳಲಿದ್ದಾರೆ.

from India & World News in Kannada | VK Polls https://ift.tt/i3Y80a7

Uttarakhand Accident: ಕಣಿವೆಗೆ ಉರುಳಿದ ಮದುವೆ ದಿಬ್ಬಣದ ಬಸ್: ಕನಿಷ್ಠ 32 ಮಂದಿ ದಾರುಣ ಸಾವು

Uttarakhand Accident: ಉತ್ತರಾಖಂಡದ ಕೊಟದ್ವಾರ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುಮಾರು 500 ಮೀಟರ್ ಆಳದ ಕಣಿವೆಗೆ ಬಸ್ ಉರುಳಿದ ಪರಿಣಾಮ, ಕನಿಷ್ಠ 32 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.

from India & World News in Kannada | VK Polls https://ift.tt/yG3B9gH

Russia-Ukraine Crisis: ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಗೆ ಪ್ರಧಾನಿ ಮೋದಿ ಕರೆ: ರಷ್ಯಾ ಬೆದರಿಕೆ ಬಗ್ಗೆ ಮಹತ್ವದ ಮಾತುಕತೆ

Russia-Ukraine Crisis President: ರಷ್ಯಾದಿಂದ ಮುಂದುವರಿದಿರುವ ದಾಳಿಯ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿಯ ಬೆಂಬಲಕ್ಕೆ ಜೆಲೆನ್ಸ್ಕಿ ಧನ್ಯವಾದ ಸಲ್ಲಿಸಿದ್ದಾರೆ.

from India & World News in Kannada | VK Polls https://ift.tt/uabRBjg

T20 World Cup: ಸಿರಾಜ್‌, ಶಮಿ ಅಥವಾ ಚಹರ್‌? ಬುಮ್ರಾ ಸ್ಥಾನಕ್ಕೆ ಯಾರು ಸೂಕ್ತ? ರೋಹಿತ್‌ ಉತ್ತರ ನೋಡಿ!

Rohit Sharma drops big update on Bumrah's replacement: ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಭಾರತ ತಂಡದ ಕೀ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್‌ ಟೂರ್ನಿಗೆ ಬುಮ್ರಾ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದೆಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಪಂದ್ಯದ ಬಳಿಕ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಬುಮ್ರಾ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದೆಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/oS9w7De

ಧಾರವಾಡ | ಸರಕಾರಿ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ: 'ಬಣ್ಣ ನಮ್ಮದು, ಸಹಾಯ ನಿಮ್ಮದು'-ಪ್ರಲ್ಹಾದ್ ಜೋಶಿ

Pralhad Joshi: ಅಭಿಯಾನಕ್ಕೆ ಕೈಜೋಡಿಸುವಂತೆ, ಸ್ಥಳೀಯ ಸಂಘ ಸಂಸ್ಥೆಗಳಿಗೂ ಪತ್ರ ಬರೆದು ಅವರು ಮನವಿ ಮಾಡಿದ್ದಾರೆ. ಸಾಹಿತ್ಯ, ಸಂಗೀತ, ಕ್ರೀಡೆ, ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಷಮತಾ ಸೇವಾ ಸಂಸ್ಥೆ (Kshamata Seva samsthe) ಇದೀಗ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಳಪು ತರಲು ಪ್ರಲ್ಹಾದ್ ಜೋಶಿ ಮುಂದಾಗಿದ್ದಾರೆ. ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ, ಬಣ್ಣದರ್ಪಣೆ ಅಭಿಯಾನ ಆರಂಭಿಸಿದ್ದಾರೆ.

from India & World News in Kannada | VK Polls https://ift.tt/RKa10lv

IND vs SA: ಡಕ್‌ಔಟ್‌ ಆಗುವ ಮೂಲಕ ಅನಗತ್ಯ ದಾಖಲೆ ಬರೆದ ರೋಹಿತ್‌ ಶರ್ಮಾ!

Rohit Sharma sets unwanted record: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅನಗತ್ಯ ದಾಖಲೆಯೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ನೀಡಿದ 228 ರನ್‌ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ರೋಹಿತ್‌ ಶರ್ಮಾ ಪಂದ್ಯದ ಎರಡನೇ ಎಸೆತದಲ್ಲಿ ಕಗಿಸೊ ರಬಾಡ ಅವರ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆದರು. ಅಂತಿಮವಾಗಿ ಭಾರತ ತಂಡ 18.3 ಓವರ್‌ಗಳಿಗೆ 178 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 49 ರನ್‌ಗಳಿಗೆ ಆಲ್‌ಔಟ್‌ ಆಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/9RO4aQ3

IND vs SA: 'ಮಂಕಡಿಂಗ್‌ ಮಾಡಬಹುದಿತ್ತು', ದಕ್ಷಿಣ ಆಫ್ರಿಕಾದ ಬ್ಯಾಟರ್‌ ಎದುರು ಔದಾರ್ಯ ಮೆರೆದ ದೀಪಕ್ ಚಹರ್‌!

India vs South Africa 3rd T20I Highlights: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮಂಕಡಿಂಗ್ ರನ್‌ಔಟ್‌ ಅವಕಾಶ ಇದ್ದರೂ ಟೀಮ್ ಇಂಡಿಯಾ ವೇಗಿ ದೀಪಕ್ ಚಹರ್‌ ಔದಾರ್ಯ ಮೆರೆದಿದ್ದಾರೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಹರಿಣ ಪಡೆಯ ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ದೀಪಕ್ ಚಹರ್ ಬೌಲ್ ಮಾಡಲು ಬಂದಾಗ, ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಹೊರಗಿದ್ದರು. ಆದರೆ, ಮಂಕಡಿಂಗ್‌ ಈಗ ಅಧಿಕೃತ ಎಂಬುದನ್ನು ದೀಪಕ್‌ ಎದುರಾಳಿಗೆ ತೋರಿಸಿಕೊಟ್ಟರಷ್ಟೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ikHgwGS

Hemant Kumar Lohia: ಜಮ್ಮು ಕಾಶ್ಮೀರದ ಕಾರಾಗೃಹ ಅಧಿಕಾರಿ ಭೀಕರ ಹತ್ಯೆ: ಅಮಿತ್ ಶಾ ಭೇಟಿ ವೇಳೆಯೇ ಕೃತ್ಯ

DGP Hemant Kumar Lohia: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ವಿಭಾಗದ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಅವರ ನಿವಾಸದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಅವರ ಮನೆ ಸಹಾಯಕನೇ ಈ ಕೃತ್ಯ ಎಸಗಿರುವ ಶಂಕೆ ಇದ್ದು, ಪಿಎಎಫ್ಎಫ್ ಸಂಘಟನೆ ಹೊಣೆ ಹೊತ್ತುಕೊಂಡಿದೆ.

from India & World News in Kannada | VK Polls https://ift.tt/PsTorDI

Mangaluru Dasara | ಪುತ್ತೂರಿನಲ್ಲಿ ನವರಾತ್ರಿ ವೈಭವದ ಉತ್ತುಂಗ: ಇಂದು ಮಹಾನವಮಿ, ನಾಳೆ ವಿಜಯದಶಮಿ ಸಂಭ್ರಮ

ಆದಿಶಕ್ತಿಯ 9 ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿಯವರ ಆರಾಧನೆ ಈಗಾಗಲೇ 8 ರಾತ್ರಿಗಳಲ್ಲಿ ನಡೆದಿದೆ. 9ನೇ ರಾತ್ರಿಯಾದ ಮಂಗಳವಾರ 9ನೇ ರೂಪವಾದ ಸಿದ್ಧಿಧಾತ್ರಿಯ ಉಪಾಸನೆ ನಡೆಯಲಿದೆ. ಇದರೊಂದಿಗೆ ಮಂಗಳವಾರ ರಾತ್ರಿ ಮಹಾನವಮಿ ಪೂಜೆ ನಡೆದು ಗದ್ದಿಗೆ ಇಳಿಯುವ ವಿಧಿ ನಡೆಯಲಿದೆ. ವಿಶೇಷವಾಗಿ ದಸರಾ ಉತ್ಸವದ ಕ್ಷೇತ್ರಗಳಲ್ಲಿ ಬುಧವಾರ ವಿಜಯ ದಶಮಿಯ ದಿನ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.

from India & World News in Kannada | VK Polls https://ift.tt/oPksEht

Dasara | ಅದ್ಧೂರಿ ಆಯುಧಪೂಜೆ, ವಿಜಯದಶಮಿಗೆ ಬೆಂಗಳೂರಿಗರು ಸಜ್ಜು: ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು

ನಾಡಹಬ್ಬ ದಸರಾಗೆ ಖರೀದಿಯ ಭರಾಟೆಯೂ ಜೋರಾಗಿದೆ. ಕೆ.ಆರ್‌. ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿ ಬಜಾರ್‌, ಯಶವಂತಪುರ, ಮಾಗಡಿ ರಸ್ತೆ, ವಿಜಯನಗರ ಸೇರಿದಂತೆ ನಗರದ ನಾನಾ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೂದುಗುಂಬಳ, ನಿಂಬೆಹಣ್ಣು ಹೇರಳವಾಗಿ ಬಂದಿದೆ. ಖರೀದಿದಾರರು ಕೂಡ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಹೂವು, ಹಣ್ಣುಗಳ ಬೆಲೆ ಸಗಟು ಮಾರುಕಟ್ಟೆಯಲ್ಲಿ ತೀರಾ ದುಬಾರಿಯಲ್ಲದಿದ್ದರೂ ಚಿಲ್ಲರೆ ಮಾರಾಟಗಾರರು ಸ್ವಲ್ಪ ದರ ಏರಿಸಿಯೇ ಮಾರುತ್ತಿದ್ದಾರೆ.

from India & World News in Kannada | VK Polls https://ift.tt/zLJQ5R4

ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ: ರಾಮನಗರದಲ್ಲಿ ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ

ಕಳೆದ ತಿಂಗಳು ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಹೂ, ಹಣ್ಣು, ಸೊಪ್ಪು ಸೇರಿದಂತೆ ಅಗತ್ಯ ಪದಾರ್ಥಗಳು ಹಾಳಾಗಿವೆ. ಇದರ ಪರಿಣಾಮ ಅಗತ್ಯ ಪದಾರ್ಥಗಳ ಬೆಲೆಯು ದಿಢೀರನೆ ಏರಿಕೆಯಾಗಿದೆ. ನವರಾತ್ರಿಯ ಹಬ್ಬದ ಸಮಯದಲ್ಲಿ ಜಿಲ್ಲೆಯ ಪದಾರ್ಥಗಳೇ ಮಾರುಕಟ್ಟೆಯಲ್ಲಿ ಕಂಡು ಬರುತ್ತಿತ್ತು. ಆದರೆ, ಈ ಬಾರಿ ಪಕ್ಕದ ಆಂಧ್ರಪ್ರದೇಶ, ತಮಿಳುನಾಡಿನ ಪದಾರ್ಥಗಳನ್ನು ಮಾರುಕಟ್ಟೆಯನ್ನು ಆವರಿಸಿದೆ. ಇದರ ನಡುವೆ ಬೆಲೆ ಏರಿಕೆಯು ಗ್ರಾಹಕರ ಜೇಬು ಸುಡುವಂತೆ ಮಾಡಿದೆ.

from India & World News in Kannada | VK Polls https://ift.tt/Qn2Gi7x

AB de Villiers: ಆರ್‌ಸಿಬಿ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್‌, ಎಬಿ ಡಿ'ವಿಲಿಯರ್ಸ್‌ ಕಮ್‌ಬ್ಯಾಕ್‌ ಸಾಧ್ಯವಿಲ್ಲ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 16ನೇ ಆವೃತ್ತಿ, ಅಂದರೆ ಐಪಿಎಲ್‌ 2023 ಟೂರ್ನಿಯು ಭಾರತದಲ್ಲೇ ಆಯೋಜನೆ ಆಗಲಿದೆ. ಹಿಂದಿನಂತೆ ಆಯಾ ಫ್ರಾಂಚೈಸಿಗಳ ತವರಿನಂಗಣದಲ್ಲಿ ಈ ಬಾರಿ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಬಾಸ್‌ ಸೌರವ್ ಗಂಗೂಲಿ ಕೆಲ ದಿನಗಳ ಹಿಂದೆ ಪ್ರಕಟ ಮಾಡಿದ್ದರು. ಇದರ ಬೆನ್ನಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿ'ವಿಲಿಯರ್ಸ್‌, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮರಳಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೀಗ ಇದು ಸಾಧ್ಯವಿಲ್ಲ ಎಂಬಂತ್ತಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ZlHfW0s

Paresh Mesta | ಸಿಬಿಐ ನೀಡಿದ ವರದಿ ಬಗ್ಗೆ ನನಗೆ ಅಸಮಾಧಾನವಿದೆ: ಪರೇಶ್ ಮೇಸ್ತಾ ತಂದೆ ಕಮಲಾಕರ

Paresh Mesta murder case: ನನ್ನ ಮಗನ ಸಾವಿನ ಬಗ್ಗೆ ಸಿಬಿಐ 'ಬಿ' ರಿಪೋರ್ಟ್ (CBI B Report) ಸಲ್ಲಿಸಿರುವ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಪರೇಶ್ ಮೇಸ್ತಾ (Paresh Mesta) ತಂದೆ ಕಮಲಾಕರ ಮೆಸ್ತಾ ತಿಳಿಸಿದ್ದಾರೆ. ಸಿಬಿಐನವರು ನನ್ನ ಮಗನ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಸಲು ನನಗೆ ಕುಮಟಾದ ಐಬಿಗೆ ಕರೆಸಿ ಮಾಹಿತಿ ನೀಡಿದ್ದು, ತಮ್ಮ ವರದಿಗೆ ನನಗೆ ಸಹಿ ಹಾಕಲು ತಿಳಿಸಿದಾಗ ನಾನು ಒಪ್ಪಲಿಲ್ಲ. ಅದಕ್ಕಾಗಿ ನನ್ನ ಮನೆಗೆ ಪೋಸ್ಟ್ ಮೂಲಕ ವರದಿಯನ್ನು ಕಳುಹಿಸಿದ್ದಾರೆ ಎಂದಿದ್ದಾರೆ.

from India & World News in Kannada | VK Polls https://ift.tt/NLiXTZ1

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಾಲ್ಕು ಆಫ್ರಿಕನ್‌ ಹೆಬ್ಬಾವು ಸಾಗಾಟ: ತಲಾ 500 ರೂ. ದಂಡ

ವಸಾಯಿ ರೋಡ್‌ ನಿಲ್ದಾಣದಿಂದ ಕಣ್ಣೂರಿಗೆ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎ-2 (12432) ಎ.ಸಿ.ಕೋಚ್‌ನಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ನಾಲ್ಕು ಹಾವಿನ ಮರಿಗಳನ್ನು ತರಲಾಗಿತ್ತು. ರೈಲಿನ ಬೆಡ್‌ರೋಲ್‌ ಉದ್ಯೋಗಿ ಕಮಲ್ಕಾಂತ್‌ ಶರ್ಮಾ ಅವರು ಎಂ. ಮುಹಮ್ಮದ್‌ ಇಶಾಮ್‌ ಪರವಾಗಿ ದಂಡ ಪಾವತಿಸಿದ ಹಿನ್ನೆಲೆಯಲ್ಲಿ ಹಾವಿನ ಮರಿಗಳನ್ನು ಮಹಮ್ಮದ್‌ ಇಶಾಮ್‌ಗೆ ಬಿಟ್ಟು ಕೊಡಲಾಗಿದೆ.

from India & World News in Kannada | VK Polls https://ift.tt/CtU8NqP

Dasara | ಉಚ್ಚಿಲ ದಸರಾ ಉತ್ಸವಕ್ಕೆ ಸಚಿವ ಸುನಿಲ್‌ ಕುಮಾರ್‌ ಭೇಟಿ: ಸರಕಾರದಿಂದ 25 ಲಕ್ಷ ರೂ. ಘೋಷಣೆ

ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಉಚ್ಚಿಲ ದಸರಾ ಉತ್ಸವ-2022ಕ್ಕೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 25 ಲಕ್ಷ ರೂ. ಅನುದಾನವನ್ನು ಸಚಿವ ಸುನಿಲ್‌ ಕುಮಾರ್‌ ದೇವಳದಲ್ಲಿ ಘೋಷಣೆ ಮಾಡಿದರು. ಸಂಘದ ಮನವಿಗೆ ಸ್ಪಂದಿಸಿ 25 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌, ಸಿಎಂ ಬಸವರಾಜ ಬೊಮ್ಮಾಯಿಗೆ ಸಮಸ್ತ ಮೊಗವೀರ ಸಮಾಜದ ಪರವಾಗಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಕೃತಜ್ಞತೆಗಳನ್ನು ಸಲ್ಲಿಸಿದರು.

from India & World News in Kannada | VK Polls https://ift.tt/IDFGym7

ಕನ್ನಡ ಭಾಷಾ ವಿಧೇಯಕ ಡಿಸೆಂಬರ್‌ ಅಧಿವೇಶನದಲ್ಲಿ ಮಂಡನೆ: ಸಚಿವ ಸುನಿಲ್‌ ಕುಮಾರ್‌

V Sunil Kumar: ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆದಿ ಉಡುಪಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉಡುಪಿ ಜಿಲ್ಲಾರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಸಚಿವ ಸುನಿಲ್‌ ಕುಮಾರ್‌ ಅವರು ಮಾತನಾಡಿದರು. ಕನ್ನಡಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೂಪಿಸಿದ ವಿಧೇಯಕವನ್ನು (Kannada Language Comprehensive Development Bill) ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಿದ್ದು, ಎರಡು ತಿಂಗಳ ಕಾಲ ಜನರಿಂದ ಆಕ್ಷೇಪ, ಸಲಹೆ, ಸೂಚನೆ ಆಹ್ವಾನಿಸಿ ಚರ್ಚಿಸಲಾಗುವುದು ಎಂದರು.

from India & World News in Kannada | VK Polls https://ift.tt/1nDAHLI

Devanahalli | ದೇವನಹಳ್ಳಿ ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿ: ಶಾಸಕ ನಿಸರ್ಗ ನಾರಾಯಣಸ್ವಾಮಿ

Nisarga Narayanaswamy: ದೇವನಹಳ್ಳಿ (Devanahalli) ತಾಲೂಕು ಗಂಗವಾರ ಜಯರಾಮೇಗೌಡ ನಿವಾಸದಲ್ಲಿ ಚನ್ನರಾಯಪಟ್ಟಣ ಹೋಬಳಿ ಮಟ್ಟದ ಜೆಡಿಎಸ್‌ (JDS) ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಹೊಸದಾಗಿ ದೇವನಹಳ್ಳಿ ತಾಲೂಕಿಗೆ ಬಂದಾಗ ನನಗೆ ರಾಜಕೀಯ ಅನುಭವ ಕೊರತೆಯಿತ್ತು. ತಾಲೂಕಿನ ಜನತೆ 17 ಸಾವಿರಕ್ಕೂ ಹೆಚ್ಚು ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಿ ತಾಲೂಕಿನ ಅಭಿವೃದ್ಧಿ ಮಾಡುವುದಕ್ಕೆ ಆಯ್ಕೆ ಮಾಡಿದ್ದಾರೆ. ನಾವೆಲ್ಲಾ ಜೆಡಿಎಸ್‌ ಕುಟುಂಬದ ಅಣ್ಣತಮ್ಮಂದಿರಂತೆ, ಗೊಂದಲಗಳಿದ್ದರೆ ನಿವಾರಣೆ ಮಾಡಿಕೊಳ್ಳಬೇಕು.

from India & World News in Kannada | VK Polls https://ift.tt/lEyPCh6

Vijayanagara | ನನಗೆ ಶಕ್ತಿ ಇರುವವರೆಗೆ ವಿಜಯನಗರದ ರಕ್ಷಕನಾಗಿ ಸೇವೆ: ಆನಂದ್‌ ಸಿಂಗ್‌ ಘೋಷಣೆ

Minister Anand singh: ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ನಗರಸಭೆ ಹೊಸಪೇಟೆ ಆಶ್ರಯದಲ್ಲಿ ವಿಜಯ ನಗರ ಜಿಲ್ಲೆ ರಚನೆಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಸಂಡೂರು ರಸ್ತೆಯ ನಂದಿನಿ ಕಲ್ಯಾಣ ಮಂಟಪದಲ್ಲಿ ನಡೆದ 'ವಿಜಯನಗರ ಅಭ್ಯುದಯ ಕಾರ್ಯಕ್ರಮ' ಉದ್ಘಾಟಿಸಿ ಭಾನುವಾರ ಸಂಜೆ ಆನಂದ್‌ ಸಿಂಗ್‌ ಮಾತನಾಡಿದರು. ವಿಜಯನಗರ ಕ್ಷೇತ್ರದ ಜನರ ಗೌರವಕ್ಕೆ ಧಕ್ಕೆ ಬರುವಂತೆ ಎಂದಿಗೂ ನಡೆದುಕೊಂಡಿಲ್ಲ. ನನ್ನಿಂದ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ಬರಲ್ಲ. ನನ್ನಿಂದ ಕೆಲಸ ಆಗಿದೆ ಎನ್ನುವ ಹೆಮ್ಮೆ ಇದೆ.

from India & World News in Kannada | VK Polls https://ift.tt/0mvsHEc

ಸಂಚಾರಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಯುವಕರನ್ನು ಆರೋಪ ಮುಕ್ತಗೊಳಿಸಿದ ಹೈಕೋರ್ಟ್‌

ಪ್ರಕರಣದ ಆರೋಪ ಪಟ್ಟಿಯ ಪ್ರಕಾರ, ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪಿಗಳನ್ನು ತಡೆದು ಪ್ರಶ್ನಿಸಿದಾಗ ಅವರು ತಮ್ಮ ಮೇಲೆ ಹಲ್ಲೆ ನಡೆಸಿದರು. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಆರೋಪಿಗಳನ್ನು ವಶಕ್ಕೆ ಪಡೆಯಲು ಸಹಾಯ ಮಾಡಿದರೆಂದು ಎಚ್‌ಎಎಲ್‌ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ದೂರಿನಲ್ಲಿ ಹೇಳಲಾಗಿದೆ. ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಆದರೆ, ಸ್ಥಳದಲ್ಲಿದ್ದ ಸಾರ್ವಜನಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

from India & World News in Kannada | VK Polls https://ift.tt/cPfTEgD

ಬಿಬಿಎಂಪಿ ಎಲೆಕ್ಷನ್‌ ಡಿಸೆಂಬರ್‌ನೊಳಗೆ ನಡೆಸಲು ಹೈಕೋರ್ಟ್‌ ಆದೇಶ: ಚುನಾವಣೆ ಮುಂದೂಡಲು ಸರ್ಕಾರದ ತಂತ್ರ

ಚುನಾವಣಾ ವಿವಾದದ ಚೆಂಡು ಸುಪ್ರೀಂಕೋರ್ಟ್‌ ಅಂಗಳದಿಂದ ಹೈಕೋರ್ಟ್‌ನಲ್ಲಿ ಬಿದ್ದಿತ್ತು. ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿಯಲ್ಲಿ ತಾರತಮ್ಯವಾಗಿದೆ ಎಂದು ಆಕ್ಷೇಪಿಸಿ ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್‌, ದೊಡ್ಡಬಾಣಸವಾಡಿಯ ವಿ.ಶ್ರೀನಿವಾಸ್‌, ನಾಗನಾಥಪುರದ ಕೆ.ಚಂದ್ರಶೇಖರ್‌ ಸೇರಿ 8 ಮಂದಿ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿ ವಿಲೇವಾರಿ ಮಾಡಿತು.

from India & World News in Kannada | VK Polls https://ift.tt/uhl3HTE

IND vs SA: 'ಹರ್ಷಲ್‌ ಪಟೇಲ್‌ ಮಾನಸಿಕ ಬಲಿಷ್ಠ ಕ್ರಿಕೆಟಿಗ': ಆರ್‌ಸಿಬಿ ವೇಗಿಗೆ ರಾಹುಲ್‌ ದ್ರಾವಿಡ್‌ ಬೆಂಬಲ!

Rahul Dravid backs Harshal Patel: ಹರ್ಷಲ್‌ ಪಟೇಲ್‌ ಈಗಷ್ಟೇ ಗಾಯದಿಂದ ಕಮ್‌ಬ್ಯಾಕ್‌ ಮಾಡಿದ್ದಾರೆ. ಹಾಗಾಗಿ ಅವರು ಪೂರ್ಣ ಪ್ರಮಾಣದಲ್ಲಿ ತಮ್ಮ ಕೌಶಲವನ್ನು ಅಳವಡಿಸಿಕೊಳ್ಳಲು ಇನ್ನಷ್ಟು ದಿನಗಳು ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಟೀಮ್ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಆರ್‌ಸಿಬಿ ವೇಗಿಯನ್ನು ಬೆಂಬಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ ಟಿ20 ಪಂದ್ಯದಲ್ಲಿ ಹಾಗೂ ತಿರುವನಂತಪುರಂನಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಹರ್ಷಲ್‌ ಉತ್ತಮ ಪ್ರದರ್ಶನ ತೋರಿದ್ದಾರೆಂದು ಗುಣಗಾನ ಮಾಡಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/E9WPyNm

Railway Station: ಬೆಂಗಳೂರಿನಲ್ಲಿ ರೈಲ್ವೆ ನಿಲ್ದಾಣಗಳಿಗೆ ಹೊಸ ಲುಕ್‌

ರೈಲು ನಿಲ್ದಾಣಗಳು ನಗರಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದ್ದು, ದೇಶಾದ್ಯಂತ ಪ್ರಮುಖ ನಗರಗಳ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಬೆಂಗಳೂರು ನಗರದ ಹಾಗೆ ಬೇರೆ ನಗರಗಳ ರೈಲ್ವೆ ನಿಲ್ದಾಣಗಳನ್ನೂ ಅಭಿವೃದ್ಧಿ ಮಾಡಲಾಗುತ್ತಿದ್ದು, ಗುರುವಾರ (ಸೆ.29) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದಿಲ್ಲಿ, ಅಹಮದಾಬಾದ್‌ ಮತ್ತು ಮುಂಬಯಿನ ಶಿವಾಜಿ ಮಹಾರಾಜ್‌ ಟರ್ಮಿನಲ್‌ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ.

from India & World News in Kannada | VK Polls https://ift.tt/PUuYbCB

ಪಡಿತರಕ್ಕೆ ಗ್ರಾಹಕರ ಪರದಾಟ: ಒಂದರ ಬದಲು ಎರಡು ಒಟಿಪಿ; ಒನ್ ನೇಷನ್ ಒನ್ ರೇಷನ್ ಕಾರ್ಡ್‌ ಯೋಜನೆ ಪರಿಣಾಮ

ಹಿಂದೆ ಪಡಿತರ ಅಂಗಡಿಗಳಲ್ಲಿ ನಿಮಿಷಕ್ಕೆ ಒಂದು ಕಾರ್ಡ್‌, ಗಂಟೆಗೆ 40 ಕಾರ್ಡ್‌ ನಿರ್ವಹಣೆ ಆಗುತ್ತಿತ್ತು. ಈಗ ಒಂದು ಕಾರ್ಡ್‌ಗೆ 10ರಿಂದ 20 ನಿಮಿಷ ಬೇಕಾಗುತ್ತದೆ. ಸರ್ವರ್‌ ವಿಳಂಬ ಜತೆಗೆ ಕೆಲವು ಸಲ ಸರ್ವರ್‌ ಕೈಕೊಡುತ್ತಿರುವುದರಿಂದ ದಿನಕ್ಕೆ 40 ಕಾರ್ಡ್‌ ಕೂಡ ನಿರ್ವಹಣೆ ಆಗದ ದಿನಗಳಿವೆ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸೆಪ್ಟೆಂಬರ್‌ವರೆಗೆ ಒಂದು ಬಾರಿ ಪಡಿತರ ಪಡೆಯಲು ಒಂದು ಸಲ ಮಾತ್ರ ಒಟಿಪಿ ನೀಡಬೇಕಾಗಿತ್ತು. ಈಗ ಕೇಂದ್ರದ ಪಾಲಿನ ಅಕ್ಕಿಗೆ, ರಾಜ್ಯದ ಪಾಲಿನ ಅಕ್ಕಿಗೆ ಎರಡು ಪ್ರತ್ಯೇಕ ಒಟಿಪಿ ಪಡೆಯಬೇಕಾಗಿದೆ.

from India & World News in Kannada | VK Polls https://ift.tt/aUTGego

ಗಾಂಧಿ ಜಯಂತಿ: ಬದನವಾಳು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ

ನಂಜನಗೂಡಿನ ಬದನವಾಳು ಗ್ರಾಮೋದ್ಯಮ ಕೇಂದ್ರಕ್ಕೆ ರಾಹುಲ್ ಗಾಂಧಿ (Rahul Gandhi) ಭಾನುವಾರ ಭೇಟಿ ನೀಡಲಿದ್ದಾರೆ. ಬಳಿಕ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡವರ ಜೊತೆಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3:30 ರಿಂದ 3:45 ರವರೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಸಂಜೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ‌.

from India & World News in Kannada | VK Polls https://ift.tt/KBLG9UQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...