Vokkaligara Sangha Fight: ಕೆಂಚಪ್ಪಗೌಡ (B Kenchappagowda) ಬಣದವರು ಎನ್ನಲಾದ 18 ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿರುವ ಪತ್ರವನ್ನು ಈಗಾಗಲೇ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಇದಕ್ಕೆ ಸೆಡ್ಡು ಹೊಡೆದಿರುವ ಹಾಲಿ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, (CN Balakrishna) ''ನಮಗೆ ಸ್ಪಷ್ಟ ಬಹುಮತ ಇದೆ. ಅವಿಶ್ವಾಸ ಎದುರಿಸಲು ನಾವೂ ಸಿದ್ಧ,'' ಎಂದು ತಿರುಗೇಟು ನೀಡಿದ್ದಾರೆ. ಸದ್ಯದಲ್ಲೇ ಅವಿಶ್ವಾಸ ಮಂಡನೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದ್ದು, ಇದರಲ್ಲಿ ಬಾಲಕೃಷ್ಣ ಮತ್ತು ಕೆಂಚಪ್ಪಗೌಡ ಬಣದ ನಡುವೆ ಮತ್ತೊಮ್ಮೆ ತೀವ್ರ ಹಣಾಹಣಿ ಏರ್ಪಡಲಿದೆ.
from India & World News in Kannada | VK Polls https://ift.tt/h3vuIOS