Zimbabwe vs Ireland Match Highlights: ಆರಂಭಿಕ ಆಘಾತದಿಂದ ಚೇತರಿಸಿದ ಜಿಂಬಾಬ್ವೆ ತಂಡ, ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಅಪಾಯಕಾರಿ ಐರ್ಲೆಂಡ್ ಎದುರು 31 ರನ್‌ಗಳ ಜಯ ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಶುಭಾರಂಭ ಮಾಡಿದೆ. ಅನುಭವಿ ಬ್ಯಾಟರ್ ಸಿಕಂದರ್ ರಾಜಾ, ಕೇವಲ 48 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿ ಜಿಂಬಾಬ್ವೆ ಗೆಲುವಿನ ರೂವಾರಿ ಎನಿಸಿದರು. ಐರ್ಲೆಂಡ್ ಪರ ಜೊಶುವಾ ಲಿಟ್ಲ್, ಮೂರು ವಿಕೆಟ್ ಪಡೆದು ಗಮನ ಸೆಳೆದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/EYiL7Fm