Kapil Dev prediction on India team: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಈಗಾಗಲೇ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಿದೆ. ಆದರೆ, ಅಕ್ಟೋಬರ್ 22 ರಿಂದ ಆರಂಭವಾಗುವ ಟೂರ್ನಿಯ ಸೂಪರ್ 12ರ ಹಂತದ ಪಂದ್ಯಗಳು ತೀವ್ರ ಕುತೂಹಲದಿಂದ ಕೂಡಿರುತ್ತವೆ. ಅಂದಹಾಗೆ ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಅವಕಾಶದ ಬಗ್ಗೆ ದಿಗ್ಗಜ ಕಪಿಲ್ ದೇವ್ ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಭಾರತ ತಂಡದಲ್ಲಿ ಆಲ್‌ರೌಂಡರ್‌ಗಳ ಸಮಸ್ಯೆ ಇದೆ. ಹಾಗಾಗಿ ಈ ಬಾರಿ ಭಾರತ ಪ್ರಶಸ್ತಿ ಗೆಲ್ಲುವ ಅವಕಾಶ ಕೇವಲ 30 ರಷ್ಟಿದೆ ಎಂದು ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/nj5FJBC