ಬೆಂಗಳೂರು ಪೊಲೀಸರು ಬುಧವಾರವಷ್ಟೇ ಮಂಗಳೂರಿನಲ್ಲಿ ಪಿಎಫ್ ನ ಬಂಧಿತ ಆರೋಪಿಗಳ ಬಗ್ಗೆ ಸಾಕ್ಷ್ಯ ಸಂಗ್ರಹ ಮಾಡಿದ್ದರು. ಗುರುವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, 'ಪಿಎಫ್‌ಐ ಸಂಘಟನೆಯವರಿಗೆ ವಿಶೇಷವಾಗಿ ಯಾರೊಂದಿಗೆ ಲಿಂಕ್ ಇತ್ತು ಎಂಬುದನ್ನು ಪತ್ತೆ ಮಾಡಬೇಕು. ಇದರ ಜತೆಗೆ ಟ್ರೈನಿಂಗ್ ಎಲ್ಲೆಲ್ಲಿಆಗಿದೆ, ಯಾವ್ಯಾವ ರೀತಿ ನಡೆಯುತ್ತಿತ್ತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಪಿಎಫ್‌ಐ ಸಂಘಟನೆ ಜತೆ ಹೊರಗಡೆಯವರು ಯಾರು, ಯಾರು ಇದ್ದಾರೆ ಪತ್ತೆ ಹಚ್ಚಬೇಕಿದೆ. ತನಿಖೆಯ ವಿಚಾರವನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/PC6iZxI