ಶಹಜಹಾನಪುರ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ವಿಶೇಷ ತನಿಖಾ ದಳ () ಅಧಿಕಾರಿಗಳು ಬಂಧಿಸಿದ್ದಾರೆ. ವಿದ್ಯಾರ್ಥಿನಿಗೆ ಚಪ್ಪಲಿ ಕೂಡ ಧರಿಸಲು ಬಿಡದೆ, ಆಕೆಯ ನಿವಾಸದಿಂದ ಎಸ್‌ಐಟಿ ಅಧಿಕಾರಿಗಳು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ಯಾಚಾರ ಆರೋಪದ ಮೂಲಕ ತನ್ನ ಸ್ನೇಹಿತರ ಜತೆ ಸೇರಿ ಚಿನ್ಮಯಾನಂದ್ ಅವರಿಂದ 5 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ್ದಾರೆಂಬ ಆರೋಪದ ಮೇಲೆ ಎಸ್‌ಐಟಿ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆಂದು ಹೇಳಲಾಗುತ್ತಿದೆ. ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜೈಲು ಪಾಲಾಗಿರುವ ಚಿನ್ಮಯಾನಂದ್ ಅವರ ಜಾಮೀನು ಅರ್ಜಿಯನ್ನು ಶಹಜಹಾನಪುರ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಪ್ರೇಟ್ ಕೋರ್ಟ್ ತಿರಸ್ಕರಿಸಿದೆ. ಚಿನ್ಮಯಾನಂದ ಅವರನ್ನು ಸುಲಿಗೆ ಮಾಡಿದ ಆರೋಪದಲ್ಲಿಜೈಲು ಪಾಲಾಗಿರುವ ಸಂಜಯ್, ಸಚಿನ್ ಹಾಗೂ ವಿಕ್ರಂ ಎಂಬ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನೂ ಮ್ಯಾಜಿಸ್ಪ್ರೇಟ್ ಕೋರ್ಟ್ ವಜಾಗೊಳಿಸಿದೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಎಸ್‌ಐಟಿ ಕಳೆದ ಶುಕ್ರವಾರ ಚಿನ್ಮಯಾನಂದ ಅವರನ್ನು ಬಂಧಿಸಿದೆ. ಚಿನ್ಮಯಾನಂದ್ ಮತ್ತು ವಿದ್ಯಾರ್ಥಿನಿ ನಡುವೆ 200 ಬಾರಿ ಫೋನ್ ಸಂಭಾಷಣೆ ಪ್ರಸಕ್ತ ಸಾಲಿನ ಜನವರಿ-ಆಗಸ್ಟ್‌ವರೆಗೂ ವಿದ್ಯಾರ್ಥಿನಿ ಹಾಗೂ ಚಿನ್ಮಯಾನಂದ ನಡುವೆ 200ಕ್ಕೂ ಹೆಚ್ಚು ಬಾರಿ ಫೋನ್ ಸಂಭಾಷಣೆ ನಡೆದಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಸಂಜಯ್ ನಡುವೆ 4200 ಕ್ಕೂ ಹೆಚ್ಚು ಬಾರಿ ಫೋನ್ ಸಂಭಾಷಣೆ ನಡೆದಿದೆ ಎಂದು ಎಸ್‌ಐಟಿ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ.
from India & World News in Kannada | VK Polls https://ift.tt/2lobdzl