ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಉಂಟಾಗಿರುವುದು ನಿನ್ನೆ ಮೊನ್ನೆಯ ವಿಚಾರವೇನಲ್ಲ. ಈಗಾಗಲೇ ಮೂರು ಬಾರಿ ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆದಿದ್ದು, ಎಲ್ಲ ಯುದ್ಧಗಳಲ್ಲು ಸೋತು ಮುಖಭಂಗ ಅನುಭವಿಸಿದೆ. ಆದರೂ ಪಾಕಿಸ್ತಾನದ ಯುದ್ಧೋತ್ಸಾಹ ಅಳಿದಂತಿಲ್ಲ. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದ್ದಾಗಲೇ ಮತ್ತೊಮ್ಮೆ ಯುದ್ಧ ನಡೆಯಬಹುದಾದ ಎಲ್ಲ ಲಕ್ಷಣಗಳು ಕಂಡು ಬಂದಿದ್ದವು. ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸದಿದ್ದರೆ ಪರಿಣಾಮ ಎದುರಿಸಬೇಕಾದೀತು ಎಂದು ಭಾರತ ಕಟುವಾಗಿ ಎಚ್ಚರಿಕೆ ನೀಡಿತ್ತು. ಅಭಿನಂದನ್ ಬಿಡುಗಡೆ ಬಳಿಕ ತಿಳಿಯಾಗಿದ್ದ ಯುದ್ಧ ಭೀತಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಿಂಪಡೆದುಕೊಂಡಾಗ ಮತ್ತೆ ಗರಿಗೆದರಿತ್ತು. ಕಾಶ್ಮೀರ ವಿಚಾರವಾಗಿ ಆಗಾಗ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಇರುವುದಾಗಿ ಹೆದರಿಸುತ್ತಿದೆ. ಆದರೆ ಭಾರತ ಒಂದು ಹೆಜ್ಜೆ ಮುಂದೆ ಹೋಗಿ 'ಮೊದಲು ಅಣುಬಾಂಬ್ ಪ್ರಯೋಗ ಮಾಡೆವು' ಎಂಬ ನೀತಿಯ ಬದಲಾವಣೆಗೂ ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಟುವಾಗಿ ನುಡಿದ್ದಾರೆ.
from India & World News in Kannada | VK Polls https://ift.tt/2lSzYU5